Connect with us

Politics

ರಾಜ್ಯಪಾಲರಿಂದ ರಾಷ್ಟ್ರಗೀತೆಗೆ ಅಪಮಾನ: ಕ್ಷಮೆಯಾಚಿಸುವಂತೆ ಎಚ್.ಕೆ.ಪಾಟೀಲ್ ಒತ್ತಾಯ

Published

on

ಬೆಂಗಳೂರು: ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಕಾನೂನು ಸಚಿವ ಎಚ್.ಕೆ ಪಾಟೀಲ್ ಒತ್ತಾಯಿಸಿದ್ದಾರೆ.

ಗುರುವಾರ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಭಾಷಣ ಮಾಡದೇ ಹೊರಟು ಹೋದ ವಿಚಾರ ಇಂದು ವಿಧಾನಮಂಡಲ ಉಭಯ ಸದನದಲ್ಲಿ ಸದ್ದು ಮಾಡುತ್ತಿದ್ದು ಆಡಳಿತ ಹಾಗೂ ವಿಪಕ್ಷಗಳು ಆರೋಪ ಪ್ರತ್ಯಾರೋಪ ನಡೆಸುತ್ತಿವೆ.

ವಿಧಾನಸಭೆಯಲ್ಲಿ ಇಂದು ಮಾತನಾಡಿದ ಅವರು, ಸಚಿವ ಎಚ್.ಕೆ ಪಾಟೀಲ್, ರಾಜ್ಯಪಾಲರು  ಹೇಗೆ ಸಂವಿಧಾನ ಉಲ್ಲಂಘಿಸಿದರೂ ಹೇಳುತ್ತೇನೆ.  ರಾಜ್ಯಪಾಲರ ಕಚೇರಿಗೆ ಹೇಗೆ ಕೇಂದ್ರ ಸರ್ಕಾರದಿಂದ ಕರೆ ಬರುತ್ತದೆ. ಆ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಸುರೇಶ್ ಕುಮಾರ್, ಹಂಸರಾಜ್ ಭಾರಧ್ವಜ್ ಗೆ ಕರೆ ಬಂದಿದ್ದನ್ನು ಹೇಳಿ ಎಂದು ಟಾಂಗ್  ನೀಡಿದರು. ಹಾಗೆಯೇ ಸ್ಪೀಕರ್ ಗೆ ಎಷ್ಟು ಕರೆ ಮಾಡಿದರೂ  ಅದನ್ನೂ ಹೇಳಿ ಎಂದು ಶಾಸಕ ಅರವಿಂದ ಬೆಲ್ಲದ್  ಎಂದಿದ್ದಾರೆ.

ಈ ವೇಳೆ ಮಾತು ಮುಂದುವರಿಸಿದ ಸಚಿವ ಎಚ್.ಕೆ ಪಾಟೀಲ್, ಸಂವಿಧಾನ ಪ್ರಕಾರ ರಾಜ್ಯಪಾಲರು ಭಾಷಣ ಮಾಡಬೇಕಿತ್ತು.  ಈ ಬಗ್ಗೆ ಕೋರ್ಟ್ ನಲ್ಲಿ ಆಗಿರುವ ನಿರ್ಣಯದಲ್ಲಿ ಉಲ್ಲೇಖವಾಗಿದೆ ಸಂವಿಧಾನ ಉಲ್ಲಂಘನೆ ಸದನ ಮನ್ನಿಸಲು ಸಾಧ್ಯವಿಲ್ಲ. ನಿಯಮಗಳಿಂದ ರಾಜ್ಯಪಾಲರು ಎಸ್ಕೇಪ್ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯಪಾಲರು ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ. ಸಾಕ್ಷಿಗಳು ಆಡಿಯೋ, ವಿಡಿಯೋ ಇದೆ. ರಾಜ್ಯಪಾಲರು ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಗವರ್ನರ್ ವಿರುದ್ದ ಆಗ್ರಹಿಸಿದ್ದಾರೆ.

Continue Reading

Politics

ರಾಜ್ಯಪಾಲರು v/s ಸರ್ಕಾರ ಮತ್ತೆ ಸಂಘರ್ಷ: ಸಹಿ ಹಾಕದೇ ರಾಷ್ಟ್ರಪತಿ ಅಂಗಳಕ್ಕೆ ದ್ವೇಷ ಭಾಷಣ ಬಿಲ್

Published

on

ಬೆಂಗಳೂರು: ರಾಜ್ಯಪಾಲರು v/s ಸರ್ಕಾರ ನಡುವೆ ಸಂಘರ್ಷ ಪುನಃ ಶುರುವಾಗಿದ್ದು, ಸರ್ಕಾರದ ದ್ವೇಷ ಭಾಷಣ ಬಿಲ್ ಗೆ ರಾಜ್ಯಪಾಲರು ಕೊಕ್ಕೆ ಹಾಕಿದ್ದು, ಸಹಿ ಹಾಕದೇ ಮಸೂದೆಯನ್ನು  ರಾಷ್ಟ್ರಪತಿ ದ್ರೌಪದಿ ಮುರ್ಮ ಅವರಿಗೆ ಅಂಗಳಕ್ಕೆ ಕಳಿಸಿದ್ದಾರೆ. ಈ ಮೂಲಕ ಮತ್ತೆ ಸರ್ಕಾರ- ರಾಜ್ಯಪಾಲರ ಮಧ್ಯೆ ವಾರ್ ಶುರುವಾಗಿದೆ.

ಬೆಳಗಾವಿ ಅಧಿವೇಶನದಲ್ಲಿ  ಪಾಸ್ ಆಗಿದ್ದ ದ್ವೇಷ ಭಾಷಣ ಬಿಲ್‌ಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಕೊಕ್ಕೆ ಹಾಕಿದ್ದಾರೆ. ಬಿಲ್‌ಗೆ ಸಹಿ ಹಾಕದೇ ರಾಷ್ಟ್ರಪತಿಗಳ ಅಂಗಳಕ್ಕೆ ಮಸೂದೆ ರವಾನೆ ಮಾಡಿದ್ದಾರೆ. ದ್ವೇಷ ಭಾಷಣದ ವ್ಯಾಖ್ಯಾನವೇ ಮಸೂದೆಯಲ್ಲಿ ಅಸ್ಪಷ್ಟವಾಗಿದೆ. ಮಸೂದೆಗೆ ಒಪ್ಪಿಗೆ ಕೊಡದಂತೆ 40ಕ್ಕೂ ಹೆಚ್ಚು ಮನವಿ ಬಂದಿರೋ ಬಗ್ಗೆ ರಾಜ್ಯಪಾಲರು ಉಲ್ಲೇಖ ಮಾಡಿ ರಾಷ್ಟ್ರಪತಿ ಅಂಗಳಕ್ಕೆ ರವಾನಿಸಿದ್ದಾರೆ.

ರಾಷ್ಟ್ರಪತಿಗಳಿಗೆ ಬಿಲ್ ವರ್ಗಾವಣೆ ಮಾಡೋದಕ್ಕೆ ರಾಜ್ಯಪಾಲರು 29 ಕಾರಣಗಳನ್ನು ನೀಡಿದ್ದಾರೆ. ಈ ಬಿಲ್ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆ ಎಂದು ಉಲ್ಲೇಖಿಸಿದ್ದಾರೆ.
ಬಿಲ್ ವಾಪಸ್‌ಗೆ ರಾಜ್ಯಪಾಲರು ನೀಡಿದ ಮುಖ್ಯ ಕಾರಣಗಳೇನು? 
1. ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ.
2. ಅರ್ಥಪೂರ್ಣ ಸಮಾಲೋಚನೆ ಮಾಡದೇ ಅಂಗೀಕಾರ.
3. ಮಸೂದೆ ಸಂಬಂಧ ಕೆಲವು ಕಾನೂನು ತೊಡಕುಗಳಿವೆ.
4. ಮಿತಿಮೀರಿದ ಮತ್ತು ಭಯಾನಕ ಪರಿಣಾಮಗಳನ್ನು ಬೀರಲಿವೆ.
5. ಅಭಿವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಹಕ್ಕನ್ನು ಕಸಿಯುವ ಮುನ್ಸೂಚನೆ.
6. ಈ ಮಸೂದೆಯು ಉದ್ದೇಶಕ್ಕಿಂತ ಪರಿಣಾಮಕ್ಕೆ ಆದ್ಯತೆ ನೀಡಿರುತ್ತದೆ.
7. ಸತ್ಯವನ್ನು ಮಾತಾಡಿದ್ರೂ, ಬೌದ್ಧಿಕ ಟೀಕೆ ಮಾಡಿದ್ರೂ ಬಂಧಿಸಬಹುದಾಗಿದೆ.
8. ಅಭಿವ್ಯಕ್ತಿ ಸ್ವಾತಂತ್ರ‍್ಯದ ರಕ್ಷಣೆ ಒಬ್ಬ ವ್ಯಕ್ತಿ, ಸಮುದಾಯಕ್ಕೆ ಸೀಮಿತವಾಗಿರಬಾರದು.
9. ಇಡೀ ಸಮಾಜದ ಸಾಮೂಹಿಕ ಹಕ್ಕಾಗಿರಬೇಕು.
10. ಅಧಿಕಾರಿಗಳು ತೀರ್ಮಾನಿಸಿದರೆ ಯಾವುದೇ ಕಾರ್ಯಕ್ರಮ ನಿಷೇಧಿಸಬಹುದು.
11. ಮಸೂದೆಯಲ್ಲಿರುವ ಈ ಕ್ರಮ ಸರಿಯಲ್ಲ ಎಂದು ಕಾರಣವನ್ನು ಉಲ್ಲೇಖಿಸಿದ ರಾಜ್ಯಪಾಲರು ದ್ವೇಷ ಭಾಷಣ ಬಿಲ್ ಅನ್ನು ಸಹಿ ಮಾಡದೇ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರಿಗೆ ರವಾನೆ ಮಾಡಿದ್ದಾರೆ.
ರಾಜ್ಯಪಾಲ ನಡೆಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರು ರಾಜ್ಯಪಾಲರ ನಡೆ ವಿರೋಧ ಮಾಡಿದರೆ, ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ. ದ್ವೇಷ ಭಾಷಣ ನಾವು ಮಾಡೋದು ತಪ್ಪೇ ನೀವು ಮಾಡೋದು ತಪ್ಪೇ, ಅದಕ್ಕೆ ಬಿಲ್ ತಂದ್ದೀವಿ. ದ್ವೇಷ ಭಾಷಣ ಪಿತಾಮಹರು ರಾಜ್ಯದಲ್ಲಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಕುಟುಕಿದರೆ, ನೇರವಾಗಿ ಒಂದು ವರ್ಗವನ್ನು ಕಾನೂನಿನಲ್ಲಿ ಸಿಲುಕಿಸಲು ಬಿಲ್ ತಂದಿದ್ದರು. ಇದಕ್ಕೆ ನಾವು ವಿರೋಧಿಸಿದ್ದೀವಿ. ಹೀಗಾಗಿ ರಾಜ್ಯಪಾಲರು ದ್ವೇಷ ಭಾಷಣ ಬಿಲ್ ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ, ವಿಮರ್ಶೆ ಮಾಡಿ ಎಂದು ಹೇಳಿದ್ದಾರೆಂದು ಬಿಜೆಪಿ ಹೇಳುತ್ತಿದೆ. ದ್ವೇಷ ಭಾಷಣ ಬಿಲ್ ಬಗ್ಗೆ ಅನೇಕ ಗೊಂದಲ ಇದೆ ಎಂದು ಕಾರಣ ನೀಡಿ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಬಿಲ್ ರವಾನಿಸಿದ್ದಾರೆ.
Continue Reading

Politics

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಚೊಂಬು ನೀಡಲಾಗಿದೆ: ಸಿಎಂ ಸಿದ್ದರಾಮಯ್ಯ

Published

on

ಕಲಬುರಗಿ: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತಕ್ಕೆ ಬಜೆಟ್‌ನಲ್ಲಿ ಏನೂ ನೀಡಿಲ್ಲ. ಕರ್ನಾಟಕಕ್ಕೆ ಒಂದು ಚೊಂಬು ನೀಡಿದ್ದಾರೆ ಎಂದು ಕೇಂದ್ರ ಬಜೆಟ್ ವಿರುದ್ಧ ಸಿಎಂ ಸಿದ್ದರಾಮಯ್ಯ  ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡೆರಡು ಬೆಂಗಳೂರು-ಹೈದರಾಬಾದ್ ಹಾಗೂ ಬೆಂಗಳೂರು-ಚೆನ್ನೈ ಹೈಸ್ಪಿಡ್ ರೈಲು ನೀಡಿದ್ದಾರೆ. ಅದು ಕೂಡ 5 ವರ್ಷ ಸಮಯ ತೆಗೆದುಕೊಂಡಿದ್ದಾರೆ. ನಮಗೆ ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ರೈಲು ಬೇಕಾಗಿತ್ತು. ನೀರಾವರಿ ಯೋಜನೆಗೆ ಹಣ ಕೇಳಿದ್ದೇವೆ. ಆದರೆ, ನೀರಾವರಿ ಯೋಜನೆಗೆ ಒಂದೇ ಒಂದು ಶಬ್ದ ಇಲ್ಲ. ಅಪರ್ ಕೃಷ್ಣಾ ಹಾಗೂ ಅಪರ್ ಭದ್ರಾ ಯೋಜನೆಗೆ ಸಹಾಯ ಕೇಳಿದ್ರೂ ಏನು ನೀಡಿಲ್ಲ. ಈ ಹಿಂದೆ ಬಜೆಟ್‌ನಲ್ಲಿ ಯೋಜನೆಗೆ 5,200 ಕೋಟಿ ಹಣ ನೀಡುತ್ತೇವೆ ಎಂದಿದ್ದರು. ಆದರೆ, ಒಂದು ರೂಪಾಯಿ ಸಹ ಕೊಟ್ಟಿಲ್ಲ. ಮೇಕೆದಾಟು ಯೋಜನೆ ಪ್ರಕರಣ ಸಂಬಂಧ ತಮಿಳನಾಡು ಅರ್ಜಿ ವಜಾ ಆಗಿದೆ. ಆದರೂ ಸಹ ಆ ಯೋಜನೆಗೆ ಬಜೆಟ್‌ನಲ್ಲಿ ಹಣ ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.

ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಪರಿಸರ ಇಲಾಖೆ ಅನುಮತಿ ನೀಡಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಾವು ಕ್ಲಿಯರ್ ಮಾಡುವುದಾಗಿ ಯಡಿಯೂರಪ್ಪ ರಕ್ತದಲ್ಲಿ ಬರೆದು ಕೊಡುವುದಾಗಿ ಹೇಳಿದ್ದರು. ಆದರೆ, ಕೇಂದ್ರ ಪರಿಸರ ಇಲಾಖೆ ಬಜೆಟ್‌ನಲ್ಲಿ ಈ ಬಾರಿ ಸಹ ಅನುಮತಿ ಕೊಟ್ಟಿಲ್ಲ. ಈ ಮೂಲಕ ಕರ್ನಾಟಕದ ಜನತೆಗೆ ಕೇಂದ್ರ ಅನ್ಯಾಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೇಳೆಕಾಳುಗಳಿಗೆ ಸಹಾಯ ಮಾಡಿ ಎಂದು ಕೇಳಿದರೂ ಅದು ಸಹ ಮಾಡಿಲ್ಲ. 15ನೇ ಹಣಕಾಸು ಆಯೋಗ ಆರಂಭವಾಗಿದೆ. ನಾವು ಕನಿಷ್ಟ ಶೇ. 50% ಕೊಡಿ ಎಂದು ಕೇಳಿದ್ದೇವು. ಆದರೆ, ಶೇ.41% ಮಾತ್ರ ಕೊಟ್ಟಿದ್ದಾರೆ. 14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಶೇ.4.71% ಮಾತ್ರ. 14ನೇ ಹಣಕಾಸಿಗಿಂತ ಜಾಸ್ತಿ ಮಾಡಿ ಕೊಡಿ ಅಂದರೆ 4.131 ಮಾತ್ರ ಕೊಟ್ಟಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ 14ನೇ ಹಣಕಾಸಿನಷ್ಟು ಕೂಡ ಹಣ ನೀಡಿಲ್ಲ. ಉತ್ತರ ಪ್ರದೇಶಕ್ಕೆ ಹಾಗೂ ಕರ್ನಾಟಕಕ್ಕೆ ಹಣಕಾಸಿನ ಹಂಚಿಕೆಯಲ್ಲಿ ಭಾರಿ ತಾರತಮ್ಯವಾಗಿ ನಮಗೆ ಅನ್ಯಾಯವಾಗಿದೆ ಎಂದಿದ್ದಾರೆ.
ರಾಜ್ಯವಾರು ಹಣ ಹಂಚಿಕೆ ನೋಡಿದರೆ ಬಿಹಾರ 9.948, ಯುಪಿ-17.691, ಗುಜರಾತ್ 3.755, ಕರ್ನಾಟಕಕ್ಕೆ 4.131, ಆಂಧ್ರ- 4.271 ಇದೆ. ನಾವು ತಲಾ ಆದಾಯದಲ್ಲಿ ನಂಬರ್ 1, ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನ ಪಡೆದಿದ್ದೇವೆ. ಹೀಗಿದ್ರು ನಮಗೆ ಅನುದಾನ ಬಂದಿಲ್ಲ. ಬಜೆಟ್‌ಗೂ ಮುನ್ನ ನಮ್ಮ ರಾಜ್ಯದ ನೀರಾವರಿ, ಮೆಟ್ರೋ ಯೋಜನೆ, ಏಮ್ಸ್ ನೀಡಬೇಕು. ಕೆಕೆಆರ್ ಡಿಬಿಗೆ ಮ್ಯಾಚಿಂಗ್ ಗ್ರ‍್ಯಾಂಟ್ ಕೊಡಲು ಸಹ ಹೇಳಿದ್ದೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಕಲ್ಯಾಣ ಕರ್ನಾಟಕ ಭಾಗಕ್ಕೆ 13 ಸಾವಿರ ಕೋಟಿ ಅನುದಾನ ನೀಡಿದ್ದೇವೆ. ನಾವು 100 ತೆರಿಗೆ ಕೊಟ್ಟರೆ 14 ರೂಪಾಯಿ ವಾಪಸ್ ಬರುತ್ತದೆ. ಉಳಿದ ಹಣ ಕೇಂದ್ರ ಸರ್ಕಾರ ಬಳಸುತ್ತದೆ. ಸೆಸ್ ಸಬ್‌ಚಾಜ್9 ಸಹ ಕೇಂದ್ರ ಕಲೆಕ್ಟ್ ಮಾಡಿ ರಾಜ್ಯಗಳಿಗೆ ಕೊಡುವುದಿಲ್ಲ. ಹೀಗಾಗಿ, 2026-27 ಬಜೆಟ್ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
Continue Reading

Politics

ರಾಜ್ಯ ಸರ್ಕಾರದ ಜಾಹೀರಾತು ಸಮರ್ಥಿಸಿಕೊಂಡ ಡಿಸಿಎಂ ಡಿ.ಕೆ.ಶಿವಕುಮಾರ್‌

Published

on

ಶಿವಮೊಗ್ಗ: ಕೇಂದ್ರ ಸರ್ಕಾರ, ಮನರೇಗಾ ಯೋಜನೆ ಹೆಸರು ಬದಲಿಸಿರುವ ನಡೆಗೆ ಕಾಂಗ್ರೆಸ್  ವಿರೋಧ ವ್ಯಕ್ತಪಡಿಸಿದ್ದು, ಈ ಮಧ್ಯೆ ರಾಜ್ಯ ಸರ್ಕಾರ  ಈ ಬಗ್ಗೆ ಜಾಹೀರಾತು ನೀಡಿತ್ತು. ಇದನ್ನು ಡಿಸಿಎಂ ಡಿ.ಕೆ.ಶಿವಕುಮಾರ್  ಸಮರ್ಥಿಸಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಯ್ದೆ ಹಿಂಪಡೆದು ಹೊಸ ಯೋಜನೆ ಜಾರಿಗೊಳಿಸಿ ಕೇಂದ್ರ ಸರ್ಕಾರ ಗ್ರಾಮೀಣರಿಗೆ ಯಾವ ರೀತಿ ಅನ್ಯಾಯ ಮಾಡಿದೆ ಎಂಬುದನ್ನು ಜಾಹೀರಾತು ಮೂಲಕ ನಮ್ಮದೇ ಶೈಲಿಯಲ್ಲಿ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅದರಲ್ಲಿ ತಪ್ಪೇನಿದೆ ಪ್ರಶ್ನಿಸಿದ್ದಾರೆ.

ದೆಹಲಿಯಲ್ಲಿ ನಡೆದ ರೈತರ ಹೋರಾಟದ ಮಾದರಿಯಲ್ಲೇ ಮನರೇಗಾ ಯೋಜನೆ ಮರು ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ದೇಶದಾದ್ಯಂತ ಕೇಂದ್ರದ ವಿರುದ್ಧ ಹೋರಾಟ ಮಾಡಲಿದೆ.  ಕೇಂದ್ರದ ತೀರ್ಮಾನದಿಂದ  ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕು ಕಿತ್ತುಕೊಂಡಂತಾಗಿದೆ. ಇದನ್ನೇ ಜಾಹೀರಾತಿನಲ್ಲಿ ಮನವರಿಕೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

Continue Reading

Trending

error: Content is protected !!