Hassan
ಬಿ.ಶಿವರಾಂ ಅವರಿಗೆ ಬಿಜೆಪಿ ಸಂಬಂಧ ಇರುವ ಹಿನ್ನೆಲೆಯಲ್ಲೆ ಜಿಲ್ಲಾ ಮಂತ್ರಿಗಳನ್ನು ಬ್ಲಾಕ್ ಮೇಲ್ ಮಾಡಿ ಹಿಡಿತದಲ್ಲಿ ಇಟ್ಟುಕೊಳ್ಳುವ ಹುನ್ನಾರ ಮಾಡಿದ್ದಾರೆ : ಎಚ್.ಕೆ. ಮಹೇಶ್
ಹಾಸನ: ಬಿ.ಶಿವರಾಂ ಅವರಿಗೆ ಬಿಜೆಪಿ ಸಂಬಂಧ ಇರುವ ಹಿನ್ನೆಲೆಯಲ್ಲೆ ಜಿಲ್ಲಾ ಮಂತ್ರಿಗಳನ್ನು ಬ್ಲಾಕ್ ಮೇಲ್ ಮಾಡಿ ಹಿಡಿತದಲ್ಲಿ ಇಟ್ಟುಕೊಳ್ಳುವ ಹುನ್ನಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜೊತೆಗಿನ ಸ್ನೇಹ ಶಿವರಾಂ ಬಾಯಲ್ಲಿ ಕಾಂಗ್ರೆಸ್ ವಿರುದ್ದ ಮಾತಿಗೆ ಕಾರಣ ಇರಬಹುದು ಎಂಬ ಅನುಮಾನ ಮೂಡುತ್ತಿದೆ
ನನ್ನದು ಕಾಂಗ್ರೆಸ್ ಬಣ, ಶಿವರಾಂ ಸಾಮಾನ್ಯ ಕಾರ್ಯಕರ್ತ ಅಲ್ಲ, ಹಿರಿಯರು, ಅವರ ಬಗ್ಗೆ ಗೌರವ ಇದೆ. ನಾಲ್ಕು ಬಾರಿ ಶಾಸಕರು, ಒಮ್ಮೆ ಮಂತ್ರಿಯಾಗಿದ್ದರು. ಇಂತವರು ಲೋಕಸಭೆ ಚುನಾವಣೆ ಹತ್ತಿರದಲ್ಲಿದ್ದರೂ, ಅದನ್ನು ಗೆಲ್ಲಲು ಪಕ್ಷ ತಯಾರಾಗಬೇಕೇ ಹೊರತು,ಹೀಗೆಲ್ಲಾ ಮಾತನಾಡುವುದು ಬೇಕಿರಲಿಲ್ಲ ಎಂದರು.
ಅವರೆಂದೂ ಹಿಂದೆ ಮಾಧ್ಯಮಗಳ ಮುಂದೆ ಹೆಚ್ಚು ಬಂದವರಲ್ಲ, ಅಂಥವರೀಗ ಸಚಿವರು, ಶಾಸಕರ ಬಗ್ಗೆ ಮಾತನಾಡುತ್ತಿರುವುದು ಅನುಮಾನ ಹುಟ್ಟಿದೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಉಸ್ತುವಾರಿ ಮಂತ್ರಿ ಅವರನ್ನು ಬ್ಲಾಕ್ ಮೇಲ್ ಮಾಡಿ ಹಿಡಿದಿಟ್ಟುಕೊಳ್ಳಲೋ, ನನಗೆ ಟಿಕೆಟ್ ಸಿಗಲ್ಲ ಅಂತಾನೋ, ರಾತ್ರಿಯೆಲ್ಲಾ ನೀತಿ ಹೇಳಿ ಬೆಳಗ್ಗೆ ಏನೋ ಮಾಡಿದ್ರು ಅನ್ನೋ ಹಾಗೆ, ಹೀಗೆಲ್ಲಾ ಮಾತನಾಡುತ್ತಿದ್ದಾರೆ ಅನಿಸುತ್ತಿದೆ ಎಂದು ಲೇವಡಿ ಮಾಡಿದರು.

ಶಿವರಾಂ ಅವರ ಬಗ್ಗೆ ಜನ ಬೇರೆ ಬೇರೆ ರೀತಿ ಮಾತನಾಡುತ್ತಿದ್ದಾರೆ.
ಏಕಂದರೆ ರಾಜಣ್ಣ ಇವರ ವಿರುದ್ಧ ಮಾತನಾಡಿಲ್ಲ, ಪ್ರೆಸ್ ಮೀಟ್ ಮಾಡಿಲ್ಲ, ಇವರೇಕೆ ಅರಸೀಕೆರೆಗೆ ಹೋಗಿ, ಶಿವಲಿಂಗೇಗೌಡರೇ ಅಭ್ಯರ್ಥಿಯಾಗಲಿ ಎಂದರು ಎಂದು ಪ್ರಶ್ನೆ ಮಾಡಿದರು.
ಶಿವಲಿಂಗೇಗೌಡರು ಅರ್ಜಿ ಹಾಕಿದ್ರಾ ಎಂದು ಪ್ರಶ್ನಿಸಿದರು.
ಹಿರಿಯರಾಗಿ ಜಿಲ್ಲೆಯಲ್ಲಿ ಪಕ್ಷ ಸಂಘಟ£ ಆಗುತ್ತಿಲ್ಲ, ಮಂತ್ರಿಗಳು ನೀತಿ ಗೆಟ್ಟವರು ಅಂದಿದ್ದು ಸರಿಯೇ, ಗೊಂದಲ, ಆರೋಪ ಶುರುವಾಗಿದ್ದು ಶಿವರಾಂ ಅವರಿಂದಲೇ, ಇದೆಲ್ಲಾ ಬೇಕಿತ್ತಾ ಎಂದು ಬೊಟ್ಟು ಮಾಡಿದರು. ಇನ್ನೂ ಕಾಲ ಮಿಂಚಿಲ್ಲ, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಿ, ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವುದು ಬೇಡ ಎಂದು ಮಹೇಶ್ ಮನವಿ ಮಾಡಿದರು.

ಅವರಿಗೆ ಬಿಜೆಪಿ ನೆಂಟು ಜಾಸ್ತಿ ಇದೆ, ಯಡಿಯೂರಪ್ಪ ಕರೆದಿದ್ದರು ಎಂದು ಅವರೇ ಹೇಳಿದ್ದರು. ಹಾಗಾಗಿ ಶಿವರಾಂ ನಡೆಯ ಬಗ್ಗೆ ಜನರಂತೆ ನನಗೂ ಸಂಶಯ ಬಂದಿದೆ ಎಂದು ತಿಳಿಸಿದರು. ನಾವೇ ಮೀಟಿಂಗ್ ಕರೆಯದೆ, ಸಚಿವರ ಮೇಲೆ ಆಪಾದನೆ ಮಾಡೋದು ಸಲ್ಲದು ಎಂದ ಮಹೇಶ್, ಶಿವರಾಂ ಅವರಿಗೆ ಬೇಗ ಒಳ್ಳೇ ಬುದ್ಧಿ ಬರಲಿದೆ ಎಂದು ಆಶಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಡಾಕಡಿ ಪೀರ್ ಸಾಬ್, ಚಂದು, ನಯಾಜ್ ಇತರರು ಇದ್ದರು.
Hassan
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ: ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಹಾಸನ: ಕೇಂದ್ರ ಸರ್ಕಾರದ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ದೇಶವ್ಯಾಪಿ ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಹಾಸನ ನಗರದಲ್ಲಿ ವಿವಿಧ ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ನಗರದ ಪ್ರಧಾನ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೇಮಾವತಿ ಪ್ರತಿಮೆಯ ಮುಂಭಾಗದಿಂದ ಆರಂಭವಾದ ಮೆರವಣಿಗೆ ಮಹಾವೀರ ವೃತ್ತ, ಕಸ್ತೂರಬಾ ರಸ್ತೆ, ಎನ್.ಆರ್. ವೃತ್ತ ಹಾಗೂ ಸಿಟಿ ಬಸ್ ನಿಲ್ದಾಣದ ರಸ್ತೆ ಮೂಲಕ ಸಾಗಿತು. ಮಾರ್ಗಮಧ್ಯೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.

ಕೇಂದ್ರದ ಹೊಸ ಕಾರ್ಮಿಕ ಕಾನೂನುಗಳು ಕಾರ್ಮಿಕರ ಹಕ್ಕುಗಳನ್ನು ಹಿಂಸಿಸುತ್ತಿವೆ, ರೈತಪರ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಬೆಲೆ ಏರಿಕೆ ನಿಯಂತ್ರಣ, ಕನಿಷ್ಠ ವೇತನ ಹೆಚ್ಚಳ, ಸಾರ್ವಜನಿಕ ವಲಯದ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಅವರು ಮುಂದಿಟ್ಟರು.
ಪ್ರಧಾನ ಅಂಚೆ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿ ಸರ್ಕಾರ ತಮ್ಮ ಬೇಡಿಕೆಗಳನ್ನು ಪರಿಗಣಿಸಬೇಕೆಂದು ಆಗ್ರಹಿಸಿದರು.
Hassan
ಗುತ್ತಿಗೆ-ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಚೇರು ಎದುರು ಪ್ರತಿಭಟನೆ
ಹಾಸನ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರಿತ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಖಾಯಂಯೇತರ ನೌಕರರ ಒಕ್ಕೂಟದ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಉದಾರೀಕರಣ ನೀತಿಗಳ ಪರಿಣಾಮವಾಗಿ ಖಾಯಂ ನೇಮಕಾತಿಗಳನ್ನು ಕಡಿತಗೊಳಿಸಿ, ಗುತ್ತಿಗೆ, ದಿನಗೂಲಿ, ಫಿಕ್ಸ್ಡ್ ಟರ್ಮ್ ಸೇರಿದಂತೆ ವಿವಿಧ ಹೆಸರಿನಲ್ಲಿ ವಿದ್ಯಾವಂತರನ್ನು ನೇಮಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸರಾಸರಿ ಶೇ.75ರಷ್ಟು ಸರ್ಕಾರಿ ಕಾರ್ಯಭಾರವನ್ನು ಖಾಯಂಯೇತರ ನೌಕರರೇ ನಿರ್ವಹಿಸುತ್ತಿದ್ದರೂ, ಸಮರ್ಪಕ ವೇತನ, ಸೇವಾ ಭದ್ರತೆ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನವೆಂಬರ್ 21, 2025ರಿಂದ ಜಾರಿಯಾದ ಕಾರ್ಮಿಕ ಸಂಹಿತೆಗಳು ಸಮಾನ ಕೆಲಸಕ್ಕೆ ಸಮಾನ ವೇತನ ಖಾತ್ರಿ ಪಡಿಸದೇ ತಳಮಟ್ಟದ ಕೂಲಿ ನಿಗದಿ ಮಾಡಿರುವುದರಿಂದ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದರು. ಖಾಯಂಮೇತರ ನೌಕರರನ್ನು ಅನುಭವದ ಆಧಾರದಲ್ಲಿ ಖಾಯಂ ಮಾಡಬೇಕು, ಕನಿಷ್ಠ ವೇತನ ಅಧಿಸೂಚನೆಯನ್ನು ಜಾರಿಗೆ ತರಬೇಕು, ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ ನೇರಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು ಹಾಗೂ ಸೇವಾ ಜೇಷ್ಠತೆ ಆಧಾರದಲ್ಲಿ ಮೀಸಲು ನೀಡಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಒತ್ತಾಯಿಸಿದರು.
ಸರ್ಕಾರ ಸ್ಪಂದಿಸದಿದ್ದರೆ ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಒಕ್ಕೂಟ ಎಚ್ಚರಿಕೆ ನೀಡಿತು.
Hassan
ಪ್ರೀತಮ್ ಗೌಡ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ: ನಾರಾಯಣಗೌಡ ಸ್ಪಷ್ಟನೆ
ಹಾಸನ: ಮಾಜಿ ಶಾಸಕ ಪ್ರೀತಮ್ ಗೌಡ ಅವರು ಪಕ್ಷ ಸಂಘಟನೆಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ತೊರೆದು ಬೇರೆ ಪಕ್ಷ ಸೇರ್ಪಡೆಗೊಳ್ಳುವುದಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣಗೌಡ ಸ್ಪಷ್ಟಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾಜಿ ಶಾಸಕರಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕೆ.ಎಸ್. ಲಿಂಗೇಶ್ ಅವರು ವಿನಾಕಾರಣ ಪ್ರೀತಮ್ ಗೌಡರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಗಳನ್ನು ನಡೆಸಲಾಗಿದೆ. ಆ ಸಭೆಗಳಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಮುಂಬರುವ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಬೇಡವೆಂದು ಒತ್ತಾಯ ವ್ಯಕ್ತಪಡಿಸಿದ್ದಾರೆ ಹೊರತು ಅದು ಪ್ರೀತಮ್ ಗೌಡರ ವೈಯಕ್ತಿಕ ತೀರ್ಮಾನವಲ್ಲ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಬಿಜೆಪಿಗೆ ಬಲವಿಲ್ಲ ಎಂದು ಲಿಂಗೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ನಾರಾಯಣಗೌಡ, “2023ರ ವಿಧಾನಸಭಾ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ ನೀವು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದೀರಿ. ಸಕಲೇಶಪುರದಲ್ಲಿ ಬಿಜೆಪಿ ಶಾಸಕ ಇದ್ದಾರೆ. ಇದಕ್ಕೆ ಏನು ಉತ್ತರ?” ಎಂದು ಪ್ರಶ್ನಿಸಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಪ್ರೀತಮ್ ಗೌಡರು ಮೈತ್ರಿಯ ವಿರುದ್ಧ ಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗೆ ನೆರವಾದರು ಎಂಬ ಆರೋಪಗಳನ್ನೂ ಅವರು ತಳ್ಳಿಹಾಕಿದರು. “ಜೆಡಿಎಸ್ ಶಾಸಕರೇ ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು ಬಂದಿವೆ. ಹೊಳೆನರಸೀಪುರದಲ್ಲಿ 17 ಸಾವಿರ, ಹಾಸನದಲ್ಲಿ 20 ಸಾವಿರ ಹಾಗೂ ಅರಕಲಗೂಡುನಲ್ಲಿ 19 ಸಾವಿರ ಮತಗಳ ಲೀಡ್ ಕಾಂಗ್ರೆಸ್‌ಗೆ ಬಂದಿದೆ. ಹಾಗಾದರೆ ಅದನ್ನು ಹೇಗೆ ವಿವೇಚಿಸಬೇಕು?” ಎಂದು ಪ್ರಶ್ನಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರೀತಮ್ ಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ಹೇಳಿಕೆಗಳನ್ನೂ ಅವರು ಖಂಡಿಸಿದರು. “ಯಾವ ಜ್ಯೋತಿಷಿ ನಿಮಗೆ ಇದನ್ನು ಹೇಳಿದ್ದಾರೆ? ಪ್ರೀತಮ್ ಗೌಡರು ಸ್ವತಃ ಏನಾದರೂ ಹೇಳಿದ್ದಾರೆಯೇ? ಸುಳ್ಳು ಪ್ರಚಾರದಿಂದ ರಾಜಕೀಯ ಲಾಭ ಪಡೆಯಲು ಯತ್ನಿಸುವುದು ಸರಿಯಲ್ಲ,” ಎಂದು ಹೇಳಿದರು.
ರಾಜ್ಯದಲ್ಲಿ ದೇವೇಗೌಡರ ಕುಟುಂಬ ಬಿಟ್ಟು ಬೇರೆ ಒಕ್ಕಲಿಗ ನಾಯಕರು ಬೆಳೆಯಬಾರದು ಎಂಬ ರಾಜಕೀಯ ತಂತ್ರದ ಭಾಗವಾಗಿಯೇ ಈ ರೀತಿಯ ಆರೋಪಗಳು ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಚನ್ನಪಟ್ಟಣ ಉಪಚುನಾವಣೆಯ ಉದಾಹರಣೆ ನೀಡಿದರು. “ಅಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಳುಹಿಸಿ ನಿಮ್ಮ ಪಕ್ಷದವರಿಗೆ ಟಿಕೆಟ್ ನೀಡಿದ ತಂತ್ರ ಹಾಸನದಲ್ಲಿ ನಡೆಯುವುದಿಲ್ಲ. ಯಾವುದೇ ಕಾರಣಕ್ಕೂ ಪ್ರೀತಮ್ ಗೌಡರು ಬಿಜೆಪಿ ತೊರೆಯುವುದಿಲ್ಲ,” ಎಂದು ನಾರಾಯಣಗೌಡ ಪುನರುಚ್ಚರಿಸಿದರು.
ಬಿಜೆಪಿ ಮುಖಂಡರಾದ ಮೋಹನ್, ಲಕ್ಷ್ಮೀಶ್, ವೇದಾವತಿ ಮತ್ತಿತರರು ಹಾಜರಿದ್ದರು.
-
Mandya24 hours agoನದಿಯ ಪಾವಿತ್ರ್ಯತೆ ಮತ್ತು ಪರಿಸರ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ : ಅಸ್ಥಿ ವಿಸರ್ಜನೆಯ ಜೊತೆಗೆ ಬಟ್ಟೆ ಮತ್ತು ಪೂಜಾ ಸಾಮಗ್ರಿ ಬಿಡುವುದು ಸಂಪೂರ್ಣ ನಿಷೇಧ – ಡಿಸಿ
-
Special16 hours agoಉಚಿತ PSI ಕೋಚಿಂಗ್: ಪರೀಕ್ಷೆ ಇಲ್ಲದೆ ಆಯ್ಕೆ!!
-
State17 hours agoಲೈಂಗಿಕ ದೌರ್ಜನ್ಯ ಕೇಸ್: ಮಂಡ್ಯ ರಮೇಶ್, ಸಾಧು ಕೋಕಿಲ ವಿರುದ್ದದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್
-
Kodagu3 hours agoಮಡಿಕೇರಿ ಪೊಲೀಸ್ ಕಾನ್ಸ್ಟೇಬಲ್ ಸಂದೀಪ್ ನಿಧನ
-
Hassan18 hours agoಗೋಮಾತೆ ಎಂದಿಗೂ ಕೈ ಬಿಡುವುದಿಲ್ಲ: ಸದಾಶಿವ ಶಿವಾಚಾರ್ಯ ಸ್ವಾಮೀಜಿ
-
Hassan2 hours agoರಾಜ್ಯದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ
-
Mandya18 hours agoಮೂಲ ಸೌಕಾರ್ಯಗಳನ್ನು ಕಲ್ಪಿಸುವಂತೆ ಕೆ.ಎಂ.ಉದಯ್ಗೆ ಮನವಿ ಸಲ್ಲಿಸಿದ ಮಹಿಳೆಯರು
-
Mandya19 hours agoಫೆ.15ಕ್ಕೆ ಭೈರವೈಕ್ಯ ಶ್ರೀಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿಯವರ ಅಭಿನಂದನಾ ಗ್ರಂಥ ಲೋಕಾರ್ಪಣೆ : ಬಸವರಾಜ್
