Uncategorized
ಹಿರಿಯ ನಾಗರಿಕರೊಬ್ಬರಿಗೆ 1.60 ಕೋಟಿ ರೂ ಸೈಬರ್ ವಂಚನೆ

ಮಂಗಳೂರು: ನಗರದ ಹಿರಿಯ ನಾಗರಿಕರೊಬ್ಬರು ಥಾಯ್ಲೆಂಡಿಗೆ ಕಳುಹಿಸಿದ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆಯೆಂದು ಹೇಳಿ ಬಳಿಕ ಮುಂಬಯಿ ಕ್ರೈಂ ಬ್ರಾಂಚ್ ಅಧಿಕಾರಿಗಳೆಂದು ಹೇಳಿ 1.60 ಕೋಟಿ ರೂ. ವಂಚಿಸಿದ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಡಗಿನಲ್ಲಿ ಎಂಜಿನಿಯರ್ ಆಗಿ ನಿವೃತ್ತಿಯಾಗಿರುವ 72 ವರ್ಷದ ವ್ಯಕ್ತಿಯೊಬ್ಬರಿಗೆ ರಾಜೇಶ್ ಎಂಬ ಹೆಸರಿನ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ನೀವು ಮುಂಬಯಿನಿಂದ ಥಾಯ್ಲೆಂಡ್‌ಗೆ ಒಂದು ಪಾರ್ಸೆಲ್ ಕಳುಹಿಸಿದ್ದು, ಅದನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆ ಪಾರ್ಸೆಲ್‌ನಲ್ಲಿ ಅಫ್ಘಾನ್ ಮತ್ತು ಕೀನ್ಯಾ ದೇಶದ ಪಾಸ್‌ಪೋರ್ಟ್‌ಗಳು, ಕ್ರೆಡಿಟ್ ಕಾರ್ಡ್‌ಗಳು, 140 ಗ್ರಾಂ ಎಂಡಿಎಂಎ ಡ್ರಗ್ಸ್ 4 ಕೆ.ಜಿ. ಬಟ್ಟೆ ಹಾಗೂ ಒಂದು ಲ್ಯಾಪ್‌ಟಾಪ್ ಇದೆ. ಈ ಬಗ್ಗೆ ಮುಂಬಯಿ ಕೈಂ ಬ್ರಾಂಚ್‌ನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾನೆ.
ಕೆಲ ಹೊತ್ತಿನ ಬಳಿಕ ಇನ್ನೊಬ್ಬ ಕರೆ ಮಾಡಿ ತಾನು ಕ್ರೈಂ ಬ್ರಾಂಚ್ ಅಧಿಕಾರಿಯೆಂದು ಹೇಳಿ ‘ವಂಚನೆಯ ಬಗ್ಗೆ ರುದ್ರ ರಾಥೋಡ್ ಹೆಚ್ಚುವರಿ ಮಾಹಿತಿ ನೀಡುತ್ತಾರೆ’ ಎಂದು ಹೇಳಿದ್ದಾರೆ. ಅವರನ್ನು ಇಮೇಲ್ ಮೂಲಕ ಸಂಪರ್ಕಿಸುವಂತೆ ಹೇಳಿದ್ದರು. ಅದೇ ದಿನ ರುದ್ರ ರಾಥೋಡ್ ಎಂಬಾತ ಕರೆ ಮಾಡಿದ್ದು, ಈ ಪ್ರಕರಣದಲ್ಲಿ ಹಲವಾರು ಮಕ್ಕಳನ್ನು ಕೊಲೆ ನಡೆಸಿದ ತಂಡ ಶಾಮೀಲಾಗಿದೆ. ನೀವು ನಮಗೆ ಸಹಕಾರ ನೀಡದಿದ್ದಲ್ಲಿ ವಿದೇಶದಲ್ಲಿರುವ ಇಂಟರ್ ಪೋಲ್ ಮೂಲಕ ನಿಮ್ಮ ಮಗ ಮತ್ತು ಮಗಳನ್ನು ಬಂಧಿಸಬೇಕಾಗುತ್ತಾನೆ ಎಂದು ಭಯಹುಟ್ಟಿಸಿದ್ದಾನೆ.
….
ಹಿರಿಯ ನಾಗರಿಕರಾದ ದೂರುದಾರರು ಸಿಬಿಐ ಅಧಿಕಾರಿಗಳ ಹೆಸರಲ್ಲಿ ಮಾಡಿದ್ದ ಮೋಸದ ಕರೆಯನ್ನು ತಿಳಿಯದೆ ಭಯಗೊಂಡಿದ್ದರು. ದೂರುದಾರ ಹಿರಿಯ ನಾಗರಿಕರಿಗೆ ಸ್ಕೈಪ್ ಆ್ಯಪ್ ಮೂಲಕ ಖಾತೆ ತೆರೆಯುವಂತೆ ಒತ್ತಾಯಪಡಿಸಿ ವಿಡಿಯೊ ಕರೆಯಲ್ಲಿ ಹೆದರಿಸಿದ್ದರು. ಸ್ಕೈಪ್ ಏಪ್‌ನಲ್ಲಿ ಸಿಬಿಐನವರೆಂದು ಹೇಳಿ ಹಲವಾರು ನೋಟಿಸ್ ನೀಡಿದ್ದು, ಬಂಧನದಿಂದ ತಪ್ಪಿಸಿಕೊಳ್ಳಬೇಕಾದರೆ ಬಾಂಡ್ ರೂಪದಲ್ಲಿ ಹಣವನ್ನು ಪಾವತಿ ಮಾಡಬೇಕೆಂದು ತಾಕೀತು ಮಾಡಿದ್ದರು. ಇದರಿಂದ ಹೆದರಿದ ದೂರುದಾರರು ತನ್ನ ಕುಟುಂಬಕ್ಕೆ ತೊಂದರೆಯಾಗದಿರಲೆಂದು ಬ್ಯಾಂಕ್ ಖಾತೆಯಿಂದ ಮೇ 2ರಂದು 1.10 ಕೋಟಿ ರೂ. ಪಾವತಿ ಮಾಡಿದ್ದಾರೆ. ಮೇ 6ರಂದು ಮತ್ತೆ ಕೈಂ ಬ್ರಾಂಚ್ ಹೆಸರಲ್ಲಿ ಬೆದರಿಕೆ ಬಂದಿದ್ದು, ಆ ಸಂದರ್ಭವೂ 50 ಲಕ್ಷ ರೂ. ಪಾವತಿ ಮಾಡಿದ್ದಾರೆ. ಆ ಬಳಿಕ ಅಪರಿಚಿತರ ಕಡೆಯಿಂದ ಯಾವುದೇ ಸ್ಪಂದನೆ ಸಿಗದಿದ್ದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kodagu
ದುರ್ಗಾ ಭಗವತಿ ದೇವಾಲಯದ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ

ಮಡಿಕೇರಿ : ತಾಳತ್ತಮನೆಯ ಶ್ರೀ ದುರ್ಗಾ ಭಗವತಿ ಕ್ಷೇತ್ರದಲ್ಲಿ ಶ್ರೀ ದುರ್ಗಾ ಭಗವತಿ, ಮಹಾಗಣಪತಿ ಹಾಗೂ ನಾಗ ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ದೇವಾಲಯದಲ್ಲಿ ಎರಡು ದಿನಗಳ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿತು.
ಫೆ.೧೧ರ ಸಂಜೆಯಿಂದಲೇ ಹಸಿರು ಹೊರೆಕಾಣಿಕೆ, ಉಗ್ರಾಣ ಪೂಜೆ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿAದ ಭಜನಾ ಕಾರ್ಯಕ್ರಮ ನೆರವೇರಿತು. ರಾತ್ರಿ ದೀಪಾರಾಧನೆ, ಮಹಾಪೂಜೆ ನಂತರ ನೆರೆದಿದ್ದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು.
ಮರುದಿನ ಪುಣ್ಯಾಹವಾಚನ, ಗಣಪತಿ ಹೋಮ, ಕಲಶ ಪೂಜೆ, ನಾಗತಂಬಿಲ, ಗುಳಿಗ, ಚಾಮುಂಡಿ ತಂಬಿಲ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಸಂಜೆ ಮಡಿಕೇರಿ ವಿಜಯ ವಿನಾಯಕ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಂಗಪೂಜೆ, ದೇವರ ಬಲಿ ಉತ್ಸವ, ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನೆರವೇರಿತು. ಗ್ರಾಮದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
Hassan
ಹೃದಯಘಾತಕ್ಕೆ ಸಂಬಂಧಿಸಿದ ಟ್ರಿಪಲ್ ಓಪನ್ ಸರ್ಜರಿ ಯಶಸ್ವಿ: ಅಶೋಕ್ ಕುಮಾರ್

ಹಾಸನ: ಮಂಗಳ ಆಸ್ಪತ್ರೆಯಲ್ಲಿ ಸಂಕ್ರಾಂತಿ ಹಬ್ಬದ ಹಿಂದಿನ ದಿವಸ ಟ್ರಿಪಲ್ ಓಪನ್ ಸರ್ಜರಿಯನ್ನು ಡಾ. ಶ್ರೀನಿವಾಸ್ ಮತ್ತು ಟೀಮ್ ಯಶಸ್ವಿಯಾಗಿ ನಡೆಸಿರುವುದಾಗಿ ಆಸ್ಪತ್ರೆ ಮುಖ್ಯಸ್ಥರಾದ ಅಶೋಕ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ತಾಲೂಕಿನ ಬೈರಾಪುರ ಗ್ರಾಮದ 66 ವರ್ಷದ ಹುಚ್ಚೆಗೌಡರು ಈ ಸದುಪಯೋಗ ಪಡೆದ ಅದೃಷ್ಟವಂತರು. ಆಸ್ಪತ್ರೆಗೆ ಸೇರಿದ ಹುಚ್ಚೇಗೌಡರಿಗೆ ಸೂಕ್ತ ಪರಿಕ್ಷೆಗಳ ನಂತರ ಡಾ. ಆಶೀತ್ ಶ್ರೀಧರ್ ಹೃದಯ ತಜ್ಞರು ಕೊರೊನರಿ ಅಂಜಿಯೋಗ್ರಾಮ್ ಮೂಲಕ ಕ್ರೆಟಿಕಲ್ ಶೇಕಡ 95 ರಷ್ಟು ಲೆಫ್ಟ್ ಮೇನ್ ಬೈಫಾರಿಕೆಶನ್ ಅನ್ನು ಕಂಡುಹಿಡಿದರು. ಇದು ಜೀವಕ್ಕೆ ತುಂಬಾ ಅಪಾಯಕಾರಿ ಬ್ಲಾಕ್ ಆಗಿದ್ದು, ಡಾ. ಶ್ರೀನಿವಾಸ್ ಅಂಡ್ ಟೀಂ ಹೃದಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಆರೇರಿಯಲ್ ಗ್ರಾಪ್ಸ್ (ಎದೆಯ ಒಳ ಬಾಗದ ರಕ್ತ ನಾಳ) ಮತ್ತು ವೆನುಸ್ (ಬಲಗಾಲಿನ ಗ್ರೇಟ್ ಸಫೀನಸ್ ವೈನ್) ಒಟ್ಟು 3 ಬೈಪಾಸ್ ಅನ್ನು ತುಂಬ ಯಶಸ್ವಿಯಾಗಿ ನಿರ್ವಹಿಸಿ, ಸಂಕ್ರಾಂತಿ ಹಬ್ಬದ ದಿನ ಹುಚ್ಚೆಗೌಡರ ಕುಟುಂಬಕ್ಕೆ ನಿಜವಾದ ಹಬ್ಬದ ಸಂತಸವನ್ನು ತಂದು ಕೊಟ್ಟಿದ್ದಾರೆ ಎಂದು ಹೇಳಿದರು.
ಸಾಮಾನ್ಯವಾಗಿ ಹೃದಯದ ಶಸ್ತ್ರ ಚಿಕಿತ್ಸೆ ಎಂದರೆ ಭಯ ಇರುವುದು ಸಹಜ. ಆದರೆ ತಂತ್ರಜ್ಞಾನ ಮುಂದುವರೆದಿದೆ, ಬೀಟಿಂಗ್ ಹಾರ್ಟ್ ಸರ್ಜರಿ ಮತ್ತು ನವವಿನ್ಯಾಸಗಳಿಂದ ಈಗ ಹೃದಯ ಚಿಕಿತ್ಸೆ ನಡೆಯುತ್ತಿದೆ. ಇದಕ್ಕೆ ನಿಪುಣರ ಜೊತೆ ನಿಶ್ಚಿಂತೆಯಿಂದ ಚರ್ಚಿಸಿ ಅದಕ್ಕೆ ಡಾ. ಶ್ರೀನಿವಾಸ್ ನಮ್ಮೊಂದಿಗೆ ನಮ್ಮ ನಗರದ ಮಂಗಳ ಹಾಸ್ಪಿಟಲ್‌ನಲ್ಲಿ ಸದಾ ಸಿಗುತ್ತಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವೈದ್ಯರಾದ ಸೀಮಾ, ಆಸೀಸ್, ಶ್ರೀನಿವಾಸ್, ಹೃದಯ ಚಿಕಿತ್ಸೆ ಪಡೆದ ಹುಚ್ಚೇಗೌಡ ಇತರರು ಉಪಸ್ಥಿತರಿದ್ದರು.
Uncategorized
ಸರ್ಕಾರಿ ಐಟಿಐ ಕಾಲೇಜಿಗೆ 46 ಲಕ್ಷ ವೆಚ್ಚದಲ್ಲಿ ಸಿ.ಎನ್.ಸಿ. ಲ್ಯಾಬ್ ಸ್ಥಾಪನೆ: ಮಂಜುನಾಥ್ ಹಂಜಳಿಗೆ

ಹಾಸನ: ಸರ್ಕಾರಿ ಐಟಿಐ ಕಾಲೇಜಿನಲ್ಲಿ 46 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಸಿ.ಎನ್.ಸಿ. ಲ್ಯಾಬ್ ಸ್ಥಾಪನೆ ಮಾಡುತ್ತಿರುವುದಾಗಿ ಹಂಜಳಿಗೆ ಕಾಳಿಂಗಪ್ಪ ವೆಲ್ವೇರ್ ಅಸೋಸಿಯೇಷನ್ ಸಂಸ್ಥಾಪಕ ಮಂಜುನಾಥ್ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತರಬೇತಿ ಪಡೆಯಬೇಕೆಂಬುದು ನಮ್ಮ ಆಶಯವಾಗಿತ್ತು. ಇದಕ್ಕಾಗಿ ನಾವು ಫಂಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ವತಿಯಿಂದ ಹಾಸನದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಇದೇ ತಿಂಗಳ ಅಂತ್ಯದಲ್ಲಿ ಲ್ಯಾಬ್ ಪ್ರಾರಂಭಿಸುತ್ತಿದ್ದು, ಈ ಲ್ಯಾಬ್ ನಲ್ಲಿ 27 ಲಕ್ಷದ ಸಿ.ಎನ್.ಸಿ. ಮಿಷನ್ ಅದಕ್ಕೆ ಬೇಕಾದ 16 ಸಾಫ್ಟ್ ವೇರ್ ಲೈಸೆನ್ಸ್ ಗಳು, 16 ಕಂಪ್ಯೂಟರ್‌ಗಳು, ಸಿಸಿಟಿವಿ ಕ್ಯಾಮೆರಾ, ಯುಪಿಎಸ್ ಮತ್ತು ಪ್ರಿಂಟರ್ಸ್, ಟಾಬ್ಲಾಸ್, ಬೆಂಚಸ್, ಛೇರ್ಸ್ ಕೂಡ ಒಳಗೊಂಡಿರುತ್ತವೆ ಎಂದರು.
ಐಟಿಐ ಕಾಲೇಜು ಪ್ರಾಂಶುಪಾಲ ಹೆಚ್.ಪಿ. ಮಂಜುನಾಥ್ ಮಾತನಾಡಿ, ಕಾಳಿಂಗಪ್ಪ ಅವರು ನಮ್ಮ ಕಾಲೇಜಿಗೆ ಸ್ವತಃ ಭೇಟಿ ನೀಡಿದ ಸಂದರ್ಭದಲ್ಲಿ ನಾವು ಅವರೊಂದಿಗೆ ಚರ್ಚಿಸಿ ಈ ಸಂಸ್ಥೆಗೆ ಅತ್ಯಾಧುನಿಕ ತಂತ್ರಜ್ಞಾನದ ತರಬೇತಿಯ ಅವಶ್ಯಕತೆ ಇದೆ ಎಂದು ಅವರಿಗೆ ತಿಳಿಸಿದ ಕಾರಣಕ್ಕೆ ಅವರು ಅದನ್ನು ಮನಗಂಡು ಫಾಂಕ್ ಸಂಸ್ಥೆಯೊಂದಿಗೆ ಮಾತನಾಡಿ, ಈ ಅವಕಾಶವನ್ನು ಮಾಡಿಕೊಡುತ್ತಿರುವುದು ನಮ್ಮ ಅದೃಷ್ಟ ಹಾಗೂ ಪ್ರತಿ ವರ್ಷ ಸಾವಿರಾರು ಮಕ್ಕಳಿಗೆ ಹೊಸ ತಂತ್ರಜ್ಞಾನದ ತರಬೇತಿ ಪಡೆಯುವ ಅವಕಾಶ ಸಿಕ್ಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಐಟಿಐ ತರಬೇತಿ ಅಧಿಕಾರಿ ಉಮ್ಮೆ ಅಸ್ಮಾ, ಆಡಳಿತಾಧಿಕಾರಿ ನವೀನ್ ಚಂದ್ರ, ಕೆ.ಎಂ. ಶ್ರೀನಿವಾಸ್, ಪ್ರದೀಪ್, ಚಂದ್ರಪ್ಪ, ಹಾಗೂ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳು ಹಾಜರಿದ್ದರು.
-
Mysore19 hours ago
ಲೋಕಾಯುಕ್ತ ಬಲೆಗೆ ಬಿದ್ದ ಬೆಟ್ಟದಪುರ ಸಬ್ ಇನ್ಸ್ಪೆಕ್ಟರ್ ಶಿವಶಂಕರ್
-
Kodagu19 hours ago
ಸುಗ್ರಿವಾಜ್ಞೆ ಅನುಷ್ಠಾನಕ್ಕೂ ಮೊದಲು ಬಡವರ ಸಾಲಮನ್ನಾ ಮಾಡಲಿ: ಯುವ ಜೆಡಿಎಸ್ ಆಗ್ರಹ
-
Kodagu22 hours ago
ಯುವ ಕಾಂಗ್ರೆಸ್ಗೆ ನೀಡಿದ್ದ ರಾಜೀನಾಮೆ ಹಿಂಪಡೆದ ಅನೂಪ್ ಕುಮಾರ್
-
Mysore19 hours ago
ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಆಡಳಿತದಲ್ಲಿ ಬಳಕೆ ಮಾಡಬೇಕು: ಪುರುಷೋತ್ತಮ ಬಿಳಿಮಲೆ
-
Mandya19 hours ago
ಮತ್ತತ್ತಿ: ಕಾವೇರಿ ನದಿಯಲ್ಲಿ ಮುಳುಗಿ ಯುವತಿಯರು ಸಾ**ವು
-
Mandya21 hours ago
ಸಕ್ಕರೆ ಕಾರ್ಖಾನೆಗಳು ರೈತರಿಗೆ 14 ದಿನದೊಳಗಾಗಿ ಹಣ ಪಾವತಿ ಮಾಡಿ: ಡಾ.ಕುಮಾರ
-
Tech12 hours ago
ಅತ್ಯಂತ ಶಕ್ತಿಶಾಲಿ ಕ್ಯಾಮೆರಾ ಹೊಂದಿರುವ ಮಧ್ಯಮ ಬೆಲೆಯ ವಿವೋ ಕಂಪನಿಯ Vivo V50 ಹೊಸ ಫೋನ್ ಬಿಡುಗಡೆ : ಬೆಲೆ ಎಷ್ಟು?
-
Hassan17 hours ago
ಹಾಸನ ವಿಮಾನ ನಿಲ್ದಾಣದ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ: ಎಚ್ಡಿ ಕುಮಾರಸ್ವಾಮಿ