Connect with us

Chamarajanagar

ಕೊಳ್ಳೇಗಾಲ ಸಂಸ್ಥೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚನೆ

Published

on

ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮತ್ತು ಪಿಎಂಎಸ್ಆರ್, ಕೊಳ್ಳೇಗಾಲ ಸಂಸ್ಥೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚನೆ ಮಾಡುವ ಕುರಿತು ಹಾಗೂ ಬಾಲ್ಯ ವಿವಾಹಗಳನ್ನು ತಡೆಯುವ ಸಂಬಂಧ ಸಭೆಯನ್ನು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹೊನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪುಟ್ಟ ಬಸವಯ್ಯ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚನೆ ಮಾಡುವ ಜೊತೆಗೆ ಬಾಲ್ಯ ವಿವಾಹವನ್ನು ಮಾಡದಿರುವ ಬಗ್ಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಮರಳಿ ಸೇರಿಸುವ ಕುರಿತು ಚರ್ಚಿಸಿದರು. ಇದರ ಜೊತೆಗೆ ಮಕ್ಕಳು ಎದರಿಸುತ್ತಿರುವ ಲಿಂಗ ತಾರತಮ್ಯ ಮತ್ತು ಮಕ್ಕಳ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಗ್ರಾಮ ಪಂಚಾಯತಿ ಸದಸ್ಯರಾದ ಕುಮಾರ್, ನೇತ್ರಾವತಿ,ಪಿಡಿಒ ನಿರಂಜನ್ ಕುಮಾರ್,
ಎಂ ಎಲ್ ಎಚ್ ಪಿ ಮಹದೇವ ಶಂಕರ್, ಭೀಮರಾವ್ ರಾಮ್ ಜಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಮೋದ್ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ರವಿಕುಮಾರ್ ,ನಂಜುಂಡಸ್ವಾಮಿ, ಶಿಶು ಅಭಿವೃದ್ಧಿ ಇಲಾಖೆಯ ಸರಸ್ವತಿ ಪಿಎಂಎಸ್ಆರ್ ಸಂಸ್ಥೆಯ ಕಾರ್ಯದರ್ಶಿ ಅರ್ನಾಲ್ಡ್ ಸಂಯೋಜಕ ಸಿದ್ದರಾಜು ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Continue Reading

Chamarajanagar

ಡಿ.21 ರಂದು ಪಲ್ಸ್ ಪೋಲಿಯೋ : ನಗರದ ವಿವಿಧ ಸ್ಥಳಗಳಲ್ಲಿ ಬೂತ್ ಗಳ ಸ್ಥಾಪನೆ

Published

on

ಚಾಮರಾಜನಗರ:  ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಡಿ.21 ರಿಂದ 24 ರವರೆಗೆ ತಾಲ್ಲೂಕಿನಾದ್ಯಾಂತ ಹಮ್ಮಿಕೊಳ್ಳಲಾಗಿದ್ದು (ಗ್ರಾಮಾಂತರ 3 ದಿನ, ನಗರ 4 ದಿನ) ನಾಳೆ (ಡಿ. 21)ರಂದು ಬೆಳ್ಳಿಗೆ 8 ರಿಂದ ಸಂಜೆ 5 ಗಂಟೆವರೆಗೆ ಬೂತ್ ಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ.

ಈಗತಾನೇ ಹುಟ್ಟಿದ ಮಗುವಿನಿಂದ 5 ವರ್ಷದ ಎಲ್ಲಾ ಮಕ್ಕಳಿಗೆ ಎರಡು ಪೋಲಿಯೋ ಹನಿ ಹಾಕಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ ಆಯಾ ಗ್ರಾಮದಲ್ಲಿರುವ ಶಾಲೆ, ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರಗಳಲ್ಲಿ ಪೋಲಿಯೋ ಹನಿ ಹಾಕಲಾಗುವುದು.

ಚಾಮರಾಜನಗರ ಪಟ್ಟಣ ವ್ಯಾಪ್ತಿಯಲ್ಲಿ ಅಹಮದ್ ನಗರ ಅಂಗನವಾಡಿ ಕೇಂದ್ರ-1 ಮತ್ತು 2 ಗಾಳಿಪುರ ಅಂಗನವಾಡಿ ಕೇಂದ್ರ-1 ಹಾಗೂ ಅಂಗನವಾಡಿ ಕೇಂದ್ರ-2, ವರದರಾಜಪುರ ಅಂಗನವಾಡಿ ಕೇಂದ್ರ-2, ರಹಮತ್ ನಗರ ಅಂಗನವಾಡಿ ಕೇಂದ್ರ, ಸೋಮವಾರಪೇಟೆ ಅಂಗನವಾಡಿ ಕೇಂದ್ರ, ಗಾಡಿಖಾನೆ ಮೊಹಲಾ, ಭಂಜಗೇಶ್ವರ ಬಡಾವಣೆ, ಬೀಡಿ ಕಾಲೋನಿ ಅಂಗನವಾಡಿ ಕೇಂದ್ರ, ಮೇಗಲ ನಾಯಕರ ಬೀದಿ, ಉಪ್ಪಾರ ಬೀದಿ, ಮಹದೇಶ್ವರ ಬಡಾವಣೆ ಶಾಲೆ, ಗುಂಡ್ಲುಪೇಟೆ ರೋಡ್ ಕೊಳದ ಬೀದಿ ಅಂಗನವಾಡಿ ಕೇಂದ್ರ, ಬೀಡಿ ಕಾಲೋನಿ ಉಪ್ಪಾರ ಶಾಲೆ, 16ನೇ ವಾರ್ಡ್ ಉಪ್ಪಾರ ಶಾಲೆ, 17ನೇ ವಾರ್ಡ್ ಉಪ್ಪಾರ ಬೀದಿ ಅಂಗನವಾಡಿ ಕೇಂದ್ರ, 18ನೇ ವಾರ್ಡ್ ಉಪ್ಪಾರ ಬೀದಿ ಅಂಗನವಾಡಿ ಕೇಂದ್ರ, 19ನೇ ವಾರ್ಡ್ ಉಪ್ಪಾರ ಬೀದಿ ಅಂಗನವಾಡಿ ಕೇಂದ್ರ, 21ನೇ ವಾರ್ಡ್ ಜಾಮೀಯಾ ಮಸೀದಿ ಶಾಲೆ, 23ನೇ ವಾರ್ಡ್ ಶಂಕರಪುರ ಅಂಗನವಾಡಿ ಕೇಂದ್ರ, 24ನೇ ವಾರ್ಡ್ ಚೆನ್ನಿಪುರ ಮೋಳೆ ಅಂಗನವಾಡಿ ಕೇಂದ್ರಗಳಲ್ಲಿ ಬೂತ್ ಗಳನ್ನು ತೆರೆಯಲಾಗಿದೆ.

ರಾಮಸಮುದ್ರ ಕುರುಬರ ಬೀದಿ ಅಂಗನವಾಡಿ ಕೇಂದ್ರ, ರಾಮಸಮುದ್ರ ನಾಯಕರ ಬೀದಿ ಅಂಗನವಾಡಿ ಕೇಂದ್ರ, ರಾಮಸಮುದ್ರ ದೊಡ್ಡ ಹರಿಜನ ಅಂಗನವಾಡಿ ಕೇಂದ್ರ, ರಾಮಸಮುದ್ರ ಉರ್ದು ಶಾಲೆ, ರಾಮಸಮುದ್ರ ಚಿಕ್ಕ ಹರಿಜನ ಬೀದಿ ಅಂಗನವಾಡಿ ಕೇಂದ್ರ, ರಾಮಸಮುದ್ರ ಎ.ಜೆ. ಬೀದಿ ಅಂಗನವಾಡಿ ಕೇಂದ್ರ, ದೇವಾಂಗ ಬೀದಿ ಅಂಗನವಾಡಿ ಕೇಂದ್ರ, ಕೆ.ಪಿ.ಮೊಹಲ್ಲಾ ಅಂಗನವಾಡಿ ಕೇಂದ್ರ-1 ಹಾಗೂ ಅಂಗನವಾಡಿ ಕೇಂದ್ರ-2, ಕೆ.ಎನ್. ಮೊಹಲ್ಲಾ ಉರ್ದು ಶಾಲೆ, ಅಂಬೇಡ್ಕರ್ ಬೀದಿ ರಾಮಸಮುದ್ರ, ಎ.ಜೆ ಬೀದಿ ಅಂಗನವಾಡಿ ಕೇಂದ್ರ, ಕರಿನಂಜನಪುರ ಅಂಗನವಾಡಿ ಕೇಂದ್ರ, ಪಿ.ಡಬ್ಲೂಡಿ ಕಾಲೋನಿ ಶಾಲೆ, ಭಗೀರಥ ನಗರ ಅಂಗನವಾಡಿ ಕೇಂದ್ರ, ರೋಟರಿ ಶಾಲೆ, ನಮ್ಮ ಕ್ಲಿನಿಕ್ ಕರಿನಂಜನಪುರ, ಭ್ರಮರಾಂಭ ಬಡಾವಣೆ, ಕೆ.ಎಸ್.ಆರ್.ಟಿ. ಬಸ್ ನಿಲ್ದಾಣ, ಪ್ರೈವೇಟ್ ಶಾಲೆ, ರೈಲ್ವೆ ನಿಲ್ದಾಣ, ಚಾಮರಾಜೇಶ್ವರ ದೇವಸ್ಥಾನ, ಸಂತೇಮರಹಳ್ಳಿ ಸರ್ಕಲ್, ಜಿಲ್ಲಾ ಆಸ್ಪತ್ರೆ ಈ ಎಲ್ಲಾ ಸ್ಥಳಗಳಲ್ಲಿ ಪೋಲಿಯೋ ಲಸಿಕೆ ಹಾಕಲು ಬೂತ್ ಗಳನ್ನು ತೆರೆಯಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Chamarajanagar

ಗ್ಯಾರಂಟಿ ಯೋಜನೆಗಳನ್ನು ತಲುಪಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ: ಹೆಚ್.ವಿ.ಚಂದ್ರು

Published

on

ಚಾಮರಾಜನಗರ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ಚಂದ್ರು ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತ್ ಹಳೇ ಕೆ.ಡಿ.ಪಿ. ಸಭಾಂಗಣದಲ್ಲಿ ಐದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರ ಗೃಹಲಕ್ಷ್ಮಿ, ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಫಲಾನುಭವಿಗಳಿಗೆ ಯಾವುದೇ ತೊಡಕಾಗದಂತೆ ಯೋಜನೆಗಳನ್ನು ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಈ ಕಾರ್ಯವನ್ನು ನಿರಂತರವಾಗಿ ಮುತುವರ್ಜಿಯಿಂದ ಗಮನಿಸಬೇಕು ಎಂದರು.

ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಕಳೆದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳ ಮೇಲೆ ತೆಗೆದುಕೊಂಡ ಕ್ರಮಗಳ ಅನುಪಾಲನಾ ವರದಿ ಹಾಗೂ ನವೆಂಬರ್ ಮಾಹೆಯ ಅಂತ್ಯಕ್ಕೆ ಪ್ರಗತಿ ಪರಿಶೀಲಿಸಿದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸರ್ಕಾರದ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನವಾಗುತ್ತಿದೆ. ಸೌಲಭ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಿ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ನವೆಂಬರ್ ತಿಂಗಳು ಶೇ 91.25ರಷ್ಟು ಆಹಾರಧಾನ್ಯ ಹಂಚಿಕೆ ಮಾಡಲಾಗಿದೆ. ಕಳೆದ ಫೆಬ್ರವರಿಯಿಂದ ನವೆಂಬರ್ 2025ರವರೆಗೆ ಡಿಬಿಟಿ ಮೊತ್ತದ ಬದಲಾಗಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ವಿತರಣೆ ಮಾಡಲಾಗಿದೆ ಎಂದು ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ವಸುಂಧರ ಮಾಹಿತಿ ನೀಡಿದರು.

ಈ ವೇಳೆ ಅನ್ನಭಾಗ್ಯ ಅಕ್ಕಿ ತೂಕದ ಪ್ರಮಾಣದಲ್ಲಿ ಗ್ರಾಹಕರಿಗೆ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ಚೀಲಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಹಿಂದಿರುಗಿಸಬೇಕು. ನಿರಂತರವಾಗಿ ಅಧಿಕಾರಿಗಳು ಗಮನಿಸಿ ಎಲ್ಲಿಯೂ ದೂರುಗಳು ಬಾರದಂತೆ ಅಕ್ಕಿ ವಿತರಣೆ ಮಾಡಬೇಕು ಎಂದು ತಿಳಿಸಿದರು.

ವಿದ್ಯಾವಂತ ಅಭ್ಯರ್ಥಿಗಳಿಗೆ ಕೌಶಲ ತರಬೇತಿಯನ್ನು ಹೆಚ್ಚು ಹಮ್ಮಿಕೊಂಡು ಉದ್ಯೋಗ ಪಡೆಯಲು ನೆರವಾಗಬೇಕು. ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬೇಕು. ಉದ್ಯೋಗಕ್ಕೆ ಪೂರಕವಾಗಿರುವ ಕೌಶಲ, ಅಪ್ರೆಂಟಿಸ್ ತರಬೇತಿ ಪಡೆಯಲು ಕೌಶಾಲ್ಯಾಭಿವೃದ್ದಿ ಇಲಾಖೆ ಕ್ರಮವಹಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಬಿ.ಪಿ. ನಾಗರಾಜಮೂರ್ತಿ, ರವಿ, ಸಿದ್ದರಾಜು, ಸದಸ್ಯರಾದ ಸೋಮೇಶ್ವರ, ಎಸ್. ಪ್ರಭು ಪ್ರಸಾದ್, ಕೆ.ಬಿ. ಚಿನ್ನಸ್ವಾಮಿ, ಉಮಾಪತಿ, ಎಂ. ಪ್ರದೀಪ್, ಭಾಗ್ಯ, ರಾಚಯ್ಯ, ಆರ್. ರಾಜೇಂದ್ರ, ಹೆಚ್.ಎನ್. ಜಯರಾಜು, ಎಂ. ದೇವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಹೆಚ್.ಆರ್. ಸುರೇಶ್, ಕೆಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್, ಜಿಲ್ಲಾ ಉದ್ಯೋಗಾಧಿಕಾರಿ ಮಹಮ್ಮದ್ ಅಕ್ಬರ್, ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Continue Reading

Chamarajanagar

ಚಾ.ನಗರದಲ್ಲಿ ಪಲ್ಸ್ ಪೋಲಿಯೋ ಜಾಗೃತಿ ಜಾಥಾ ಯಶಸ್ವಿ

Published

on

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಜಾಥಾ ನಗರದಲ್ಲಿ ಯಶಸ್ವಿಯಾಗಿ ನಡೆಯಿತು.

ನಗರದ ಆರೋಗ್ಯ ಕೇಂದ್ರದ ಬಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್. ಚಿದಂಬರ ಹಸಿರು ನಿಶಾನೆ ತೋರುವ ಮೂಲಕ ಜಾಥಾಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಡಾ. ಎಸ್. ಚಿದಂಬರ ಅವರು ಪೋಲಿಯೋ ಒಂದು ವೈರಸ್‌ನಿಂದ ಬರುವ ಖಾಯಿಲೆಯಾಗಿದ್ದು, ಇದನ್ನು ಪೋಲಿಯೋ ಮೈಲೈಟಿಸ್ ಎಂದು ಕರೆಯಲಾಗುವುದು. ಪೋಲಿಯೋ ಲಸಿಕೆಯನ್ನು ಹಾಕಿಸುವುದರಿಂದ ಅಂಗವಿಕಲತೆಯನ್ನು ತಡೆಗಟ್ಟಬಹುದು, ಪೋಲಿಯೋ ಖಾಯಿಲೆಯು ಸಾಮಾನ್ಯವಾಗಿ ಕಲುಷಿತ ನೀರು ಮತ್ತು ಆಹಾರದಿಂದ ಹರಡುತ್ತದೆ. ವೈಲ್ಡ್ ಪೋಲಿಯೋ ವೈರಸ್ ಮಲದ ಮೂಲಕ ಹರಡುತ್ತದೆ ಎಂದರು.

ನಮ್ಮ ದೇಶದಲ್ಲಿ 2011ರಲ್ಲಿ ಕೊನೆಯ ಪೋಲಿಯೋ ಪ್ರಕರಣ ವರದಿಯಾಗಿತ್ತು. ತದನಂತರ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದ ಕಾರಣ 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು “ಪೋಲಿಯೋ ಮುಕ್ತ ದೇಶ”ವೆಂದು ಘೋಷಿಸಿತು. ಆದರೂ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನದಲ್ಲಿ ಕೆಲವು ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ನಮ್ಮ ದೇಶದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪೋಲಿಯೋ ನಿರ್ಮೂಲನೆ ಮಾಡಲು ತಾವೆಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ರಾಜೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಪಲ್ಸ್ ಪೋಲಿಯೋ ಕಾರ್ಯಕ್ರಮವು ಡಿಸೆಂಬರ್ 21 ರಿಂದ 24ರವರೆಗೆ ನಡೆಯಲಿದ್ದು ಮೂರು ದಿನ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಾಲ್ಕು ದಿನ ಪಟ್ಟಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಈಗತಾನೇ ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಒಟ್ಟು 61161 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದರು.

 

ಪೊಲೀಯೋ ಲಸಿಕೆ ನೀಡಲು ಜಿಲ್ಲಾ ವ್ಯಾಪ್ತಿಯಲ್ಲಿ 641 ಬೂತ್‌ಗಳನ್ನು ತೆರೆಯಲಾಗಿದೆ. ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಒಟ್ಟು 2528 ವ್ಯಾಕ್ಸಿನೇಟರ್‌ಗಳು ಹಾಗೂ 130 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಡಾ. ರಾಜೇಶ್ ಕುಮಾರ್ ತಿಳಿಸಿದರು.

ರೋಟರಿ ಸಂಸ್ಥೆಯ ಅಧ್ಯಕ್ಷರಾದ ಕಾಗಲವಾಡಿ ಚಂದ್ರಶೇಖರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲೋಕೇಶ್, ರೋಟರಿ ಸಂಸ್ಥೆಯ ರೋಟೆರಿಯನ್ ಚಂದ್ರಪ್ರಭ ಜೈನ್, ಜಿ.ಎಸ್.ಎಸ್ ನರ್ಸಿಂಗ್ ಶಾಲೆಯ ಬೋಧಕರಾದ ಮಧು, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ವೆಂಕಟೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯ್ಕ, ಜಿಲ್ಲಾ ಶುಶ್ರೂಷಣಾಧಿಕಾರಿ ಮಣಿಯಮ್ಮ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ದುಶ್ಯಂತ್ ಕುಮಾರ್, ಇತರರು ಭಾಗವಹಿಸಿದ್ದರು.

Continue Reading

Trending

error: Content is protected !!