Hassan
ಹಾಸನದಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ
HASSAN-BREAKING
ಹಾಸನ : ಹಾಸನ ಜಿಲ್ಲೆಯ ವಿವಿಧೆಡೆ ನಿನ್ನೆ ಸಂಜೆ ಹಾಗೂ ರಾತ್ರಿ ಸುರಿದ ಧಾರಾಕಾರ ಮಳೆ
ಬಿರುಗಾಳಿ, ಗುಡುಗು, ಸಿಡಿಲು ಸಹಿತ ಸುರಿದ ವರ್ಷಧಾರೆ
ಬಾರಿ ಮಳೆಗೆ ಅಪಾರ ಪ್ರಮಾಣದ ಹಾನಿ
ನೆಲಕಚ್ಚಿದ ಸುಮಾರು ಒಂದುವರೆ ಸಾವಿರ ಗೊನೆ ಬಿಟ್ಟಿದ್ದ ಬಾಳೆ ಗಿಡಗಳು
ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಅತ್ತಿಚೋಡೆನಹಳ್ಳಿ ಗ್ರಾಮದಲ್ಲಿ ಘಟನೆ
ಗ್ರಾಮದ ಲಿಂಗರಾಜು ಎಂಬುವವರಿಗೆ ಸೇರಿದ ಬಾಳೆ ತೋಟ

ನಿನ್ನೆ ಸುರಿದ ಗಾಳಿ ಮಳೆಗೆ ಗೊನೆ ಸಮೇತ ನೆಲಕ್ಕುರುಳಿದ ಸಾವಿರಾರು ಬಾಳೆ ಗಿಡಗಳು
ಬಾಳೆ ಹಣ್ಣಿಗೆ ಮಾರುಕಟ್ಟೆಯಲ್ಲಿದೆ ಉತ್ತಮವಾದ ಬೆಲೆ
ಉತ್ತಮ ಆದಾಯದ ನಿರೀಕ್ಷಿಯಲ್ಲಿದ್ದ ರೈತ ಲಿಂಗರಾಜು
ಮೊದಲ ಮಳೆಯಿಂದ ಅಪಾರ ಪ್ರಮಾಣದ ಹಾನಿ
ಅಂದಾಜು ಏಳು ಲಕ್ಷ ರೂ ನಷ್ಟ ಅನುಭವಿಸಿದ ಲಿಂಗರಾಜು
ಫಸಲಿಗೆ ಬಂದಿದ್ದ ಬೆಳೆ ಕಳೆದುಕೊಂಡು ಕಂಗಾಲಾದ ರೈತ ಲಿಂಗರಾಜು
ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯ

Hassan
ಎ.ಪಿ.ಜೆ ಪಿಯು ಕಾಲೇಜಿನ 2026–27ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿಜ್ಞಾನ ಕೋರ್ಸ್ ವಿದ್ಯಾರ್ಥಿಗಳಿಗೆ: ಪ್ರತಿಭಾ ಶೋಧ-2026
ಪತ್ರಿಕಾ ಪ್ರಕಟಣೆ
ಹಾಸನ: ಹಾಸನದ ಪ್ರತಿಷ್ಠಿತ ಉನ್ನತಿ ಶಿಕ್ಷಣ ಟ್ರಸ್ಟ್ ನ ಎ.ಪಿ.ಜೆ ಪಿಯು ಕಾಲೇಜಿನಲ್ಲಿ 2026–27ನೇ ಶೈಕ್ಷಣಿಕ ಸಾಲಿನಲ್ಲಿ
ಪ್ರಥಮ ಪಿಯುಸಿ ವಿಜ್ಞಾನ ಕೋರ್ಸ್ ಗೆ ಸೇರ್ಪಡೆಯಾಗಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗಾಗಿ “ಪ್ರತಿಭಾ ಶೋಧ-2026” ಎಂಬ ಬಹು ಆಯ್ಕೆಗಳಿರುವ ಪ್ರಶ್ನೆಗಳ ಸ್ಪರ್ಧಾತ್ಮಕ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಇದರ ವಿವರಗಳು ಕೆಳಗಿನಂತಿವೆ:
*ದಿನಾಂಕ:* 14-12-2025
*ವಾರ:* ಭಾನುವಾರ
*ಸಮಯ:* ಬೆಳಿಗ್ಗೆ 10:30 ರಿಂದ 11:30 ರವರೆಗೆ
*ಪರೀಕ್ಷಾ ಮಾದರಿ:* 60 MCQ ಪ್ರಶ್ನೆಗಳು [ಗಣಿತ–25, ವಿಜ್ಞಾನ–25, ಸಾಮಾನ್ಯ ಇಂಗ್ಲಿಷ್–10]

ನೋಂದಣಿ ಸಮಯ:** ಬೆಳಿಗ್ಗೆ 10:15 ರಿಂದ 10:25 ರವರೆಗೆ
ಪಾಲಕರಿಗೆ ಬೋಧಕ ವೃಂದ ಹಾಗೂ ಆಡಳಿತ ಮಂಡಳಿಯೊಂದಿಗೆ ಸಂವಾದ: ಬೆಳಿಗ್ಗೆ 10:30 ರಿಂದ 11:30 ರವರೆಗೆ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಈ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಕರ್ಷಕ ಶುಲ್ಕ ರಿಯಾಯಿತಿಗಳನ್ನು ವಿದ್ಯಾರ್ಥಿವೇತನವಾಗಿ ನೀಡಲಾಗುತ್ತದೆ.ಎಂದು ಈ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಡಿ ಮುರಳಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಗಳನ್ನು ಸಂಪರ್ಕಿಸಲು ಕೋರಿದ್ದಾರೆ.
9972728970
94491 33022
Hassan
ಅರೇಹಳ್ಳಿಯಲ್ಲಿ ಮರುಕಳಿಸಿದ ಕಾಫಿ ಕಳ್ಳತನ!
ಅರೆಹಳ್ಳಿ: ಭಾನುವಾರ ಮಧ್ಯರಾತ್ರಿ ಸುಮಾರು 3ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಖದೀಮರ* ಗುಂಪು ಸುಮಾರು 2* ಲಕ್ಷ ಮೌಲ್ಯದ ಕಾಫಿಯನ್ನು ಕಳುವು ಮಾಡಿದ್ದರು ಈ ಬಗ್ಗೆ ಸ್ಥಳೀಯ ಕಾಫಿ ಬೆಳೆಗಾರ ಸಂಘದ ಸಹಕಾರದೊಂದಿಗೆ ಪೊಲೀಸ್ ಠಾಣೆಗೆ ಮಾಲೀಕರು ತೆರಳಿ ದೂರು ಸಲ್ಲಿಸಿ ತ್ವರಿತವಾಗಿ ಖದೀಮರನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದರು.

ಇದಾದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ರಾತ್ರಿ ಸಮಯದಲ್ಲಿ ಗಸ್ತು ಚುರುಕುಗೊಳಿಸಿದ್ದರು* ಇವುಗಳ ನಡುವೆ ಇಂದು ಮುಂಜಾನೆ ಸುಮಾರು 4.30ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಅದೇ? ಖದೀಮರ ಗುಂಪು ಪುನಃ ಕಾಫಿ ದೋಚಲು ಯತ್ನಿಸಿದ್ದು ಆ ವೇಳೆಗಾಗಲೇ ಎಚ್ಚೆತ್ತ ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿ ಎಂಬುವವರು ಕಾರಿನಿಂದ ಹೊರಗೆ ಇಳಿದು ಬರಲು ಯತ್ನಿಸಿದ್ದಾರೆ ಆಗ ಅಲ್ಲಿದ್ದ ಗುಂಪು ಮಚ್ಚಿನಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಅಲ್ಲಿಂದ ಸುಮಾರು100* ಕೆಜಿ ಗಳಷ್ಟು ಕಾಫಿಯನ್ನು ದೋಚಿ ಪರಾರಿಯಾಗಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ!

ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ, ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಮಾಜಿ ಉಪಾಧ್ಯಕ್ಷ ಬಿ.ಪಿ ಬಸವರಾಜ್ , ಗ್ರಾಮದ ಮುಖಂಡ ಅಮಿತ್ ಶೆಟ್ಟಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪೋಲೀಸ್ ಇಲಾಖೆ ತಪ್ಪಿತಸ್ಥರನ್ನು ಅದಷ್ಟು ಬೇಗ ಪತ್ತೆ ಹಚ್ಚಿ ಅಂತವರ ವಿರುದ್ಧ ಕಠಿಣ ಶಿಕ್ಷೆ ಜರುಗಿಸುವ ಮೂಲಕ ಇಂತಹ ಪ್ರಕರಣಗಳು ನಮ್ಮ ಬಾಗದಲ್ಲಿ ಮತ್ತೆಂದಿಗೂ ಮರುಕಳಿಸಬಾರದು, ಮೂರ್ನಾಲ್ಕು ದಿನಗಳ ಹಿಂದೆ ಅದೇ ಸ್ಥಳದಲ್ಲಿ ಕಾಫಿ ಕಳವು ನಡೆದು ಪೊಲೀಸರಿಗೆ ಮಾಹಿತಿ ನೀಡಿ ಪ್ರಕರ*ಣ ದಾಖಲಿಸಿ? ಮತ್ತೆ ಅದಕ್ಕಿಂತಲೂ ಕ್ರೌರ್ಯ ಮನಸ್ಸಿನಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಿದೆ ಎಂದರೆ ಅದು ಯಾರ ವೈಫಲ್ಯ? ಎಂದು ಪ್ರಶ್ನಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಬೇಟಿ ನೀಡಿ ಅಧಿಕಾರಿಗಳೊಂದಿಗೆ ಪ್ರಕರಣ ಕುರಿತ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.ಹಾಗು ಶ್ವಾನ ದಳ ವಿಶೇಷ ತನಿಖಾ ತಂಡದಿಂದ ತನಿಖೆ ಮುಂದುವರೆದಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ
Hassan
ಸುತ್ತೂರು ಜಾತ್ರಾ ಮಹೋತ್ಸವ
ಹಾಸನ: ಜ15-20ರ ವರೆಗೂ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಸಂಚರಿಸುತ್ತಿರುವ ಪ್ರಚಾರದ ರಥ ಇಂದು ನಗರಕ್ಕೆ ಆಗಮಿಸಿದಾಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಸ್ವಾಗತಿಸಿ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು.
ಮೊದಲು ತಣ್ಣೀರುಹಳ್ಳ ಮಠ, ಶ್ರೀ ಬಸವೇಶ್ವವರ ಕಲ್ಯಾಣ ಮಂಟಪ ಹಾಗೂ ಶ್ರೀ ಜವೇನಹಳ್ಳಿ ಮಠಕ್ಕೆ ಸುತ್ತೂರು ಜಾತ್ರಾ ಮಹೋತ್ಸವದ ರಥ ಬಂದಾಗ ಆಡಳಿತ ಮಂಡಳಿಯವರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಠದ ಭಕ್ತರು ಪೂಜೆ ಸಲ್ಲಿಸಿ ಸ್ವಾಗತಿಸಿದರು.

ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ರಾಜ್ಯದ ಹಲವು ಜಿಲ್ಲೆಯಲ್ಲಿ ಪ್ರಚಾರ ರಥಯಾತ್ರೆ ಸಂಚರಿಸಿ ಜಾತ್ರೋತ್ಸವ ಹಾಗೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಗುತ್ತಿದೆ.

ಈ ವೇಳೆ ಲಿಂಗಾಯತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಬಿ.ಪಿ. ಐಸಾಮಿಗೌಡ, ಉಪಾಧ್ಯಕ್ಷ ಬಿ.ಎಂ. ಭುವನಾಕ್ಷ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಕಿರಣ್ ಕುಮಾರ್ ಹೊಸಮನಿ, ತಣ್ಣೀರು ಹಳ್ಳ ಮಠದ ಮ್ಯಾನೇಜರ್ ಶಂಕರ್ ಜಗದೀಶ್, ಬಾಳ ನಾಗೇಶ್, ಶೋಭನ್ ಬಾಬು, ಯು.ಎಸ್. ಬಸವರಾಜ್, ಸೋಮಶೇಖರ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ್, ಪಾಲಾಕ್ಷ, ಧನಲಕ್ಷ್ಮಿ, ಇಂದ್ರಮ್ಮ, ಸಾವಿತ್ರಮ್ಮ, ಇಂಜಿನಿಯರ್ ಉಪಸ್ಥಿತರಿದ್ದರು.
-
Kodagu17 hours agoಜಿಲ್ಲೆಯಾದ್ಯಂತ ಡಿ.21 ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ
-
Chamarajanagar18 hours agoಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
-
Mysore15 hours agoಬಿಸಿಯೂಟ ಅನುದಾನ ದುರುಪಯೋಗ
-
Kodagu15 hours agoಕರಾಟೆ ಸ್ಪರ್ಧೆಯಲ್ಲಿ ಸಿ.ಐ.ಪಿ.ಯು.ಸಿ ವಿದ್ಯಾರ್ಥಿನಿ ಎಂ.ಎಸ್.ನಿಶಿತಾ ನೀಲಮ್ಮ ಸಾಧನೆ
-
Kodagu18 hours agoಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ- ಲವ ಚಿಣ್ಣಪ್ಪ
-
Chamarajanagar17 hours agoಡಿ.21ರಂದು ಪಲ್ಸ್ ಪೋಲಿಯೋ : ಸಕಲ ವ್ಯವಸ್ಥೆಗೆ ಡಿಸಿ ಶಿಲ್ಪಾ ನಾಗ್ ಸೂಚನೆ
-
Kodagu17 hours agoಡಿ.15 ರಂದು ಮೂರ್ನಾಡು ಗ್ರಾಮದಲ್ಲಿ ಅರೆಭಾಷೆ ದಿನಾಚರಣೆ
-
Kodagu17 hours agoಪ್ರಧಾನಿ ಕುರಿತು ಅವಹೇಳನ – ನಾಲ್ವರ ಬಂಧನ
