Mysore
ಜೀವಧಾರೆ ಗಿರೀಶ್‌ಗೆ ಆರೋಗ್ಯ ರಕ್ಷಕ ಸೇವಾ ಪ್ರಶಸ್ತಿ ಪ್ರದಾನ
ಮೈಸೂರು: ಬ್ಲಡ್ ಆನ್ ಕಾಲ್ ಕ್ಲಬ್ ವತಿಯಿಂದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರೆ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಆಯೋಗಿಸಿದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಆರೋಗ್ಯ ರಕ್ಷಕ ಸೇವಾ ಪ್ರಶಸ್ತಿ 2026 ಪ್ರದಾನ ಕಾರ್ಯಕ್ರಮದಲ್ಲಿ 35ಕ್ಕೂ ಹೆಚ್ಚು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.
ನಂತರ 20 ವರುಷ ನಿರಂತರ ಸಾಮಾಜಿಕ ಸೇವೆ ಹಾಗೂ ಸಂಘಟನೆಯಿಂದ ಸೇವೆ ಸಲ್ಲಿಸುತ್ತಿರುವ ಜೀವಧಾರೆ ರಕ್ತ ನಿಧಿ ಕೇಂದ್ರದ ನಿರ್ದೇಶಕ ಎಸ್. ಇ.ಗಿರೀಶ್ ಅವರಿಗೆ ಆರೋಗ್ಯ ರಕ್ಷಕ ಸೇವಾ ಪ್ರಶಸ್ತಿ 2026 ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಸೇವೆಯನ್ನು ಆತ್ಮ ತೃಪ್ತಿ ಮತ್ತು ಸಂತೋಷಕ್ಕಾಗಿ ಮಾಡುತ್ತೇವೆ. ಜೀವಧಾರೆ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸೇವೆಯ ಜತೆಗೆ ಬಡ ವಿದ್ಯಾರ್ಥಿ ಹಾಗೂ ರೋಗಿಗಳ ಸಹಾಯ ಮಾಡುವ ಮೂಲಕ ನಿಸ್ವಾರ್ಥ ದೃಷ್ಟಿಯಿಂದ ಸೇವೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ನಂತರ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು, ರಕ್ತದಾನಕ್ಕಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ. ಅಪಘಾತ ಮತ್ತಿತರರ ಘಟನೆ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ರೋಗಿಗಳಿಗೆ ರಕ್ತದಾನ ಮಾಡುವವರೇ ಎರಡನೇ ದೇವರಾಗುತ್ತಾರೆ ಅಂತಹ ಕೆಲಸದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರ 20 ವರ್ಷದಿಂದ ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ ಎಂದು ಹೇಳಿದರು.

ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್ ಗೌಡ, ಕೆಪಿಸಿಸಿ ಸದಸ್ಯರಾದ ನಜರ್‌ಬಾದ್ ನಟರಾಜ್ ಇನ್ನಿತರರು ಹಾಜರಿದ್ದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಜೋಗಿ ಮಂಜು, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ನಿರೂಪಕ ಅಜಯ್ ಶಾಸ್ತ್ರಿ, ಬ್ಲಡ್ ಆನ್ ಕಾಲ್ ಕ್ಲಬ್ ಆನಂದ್, ದೇವೇಂದ್ರ ಪರಿಹಾ ರಿಯ, ಜಿ ರಾಘವೇಂದ್ರ, ಕೃಷ್ಣಪ್ಪ (ಗಂಟಯ್ಯ), ಎಸ್ ಎನ್ ರಾಜೇಶ್, ಸುರೇಶ್ ಗೋಲ್ಡ್, ಕೇಬಲ್ ವಿಜಿ, ರಂಗನಾಥ್, ಸದಾಶಿವ್ ಮುಂತಾದವರಿದ್ದರು.
Mysore
ಫೆ.7ಕ್ಕೆ ಎಂ.ಕೆ.ಸೋಮಶೇಖರ್ ಜನ್ಮದಿನ ಪ್ರಯುಕ್ತ ಸಾಮಾಜಿಕ ಕಾರ್ಯ: ರವಿಶಂಕರ್
ಮೈಸೂರು: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹುಟ್ಟುಹಬ್ಬದ ಅಂಗವಾಗಿ ಫೆ.೭ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ, ಎಂ.ಕೆ. ಸೋಮಶೇಖರ್ ಅಭಿಮಾನಿ ಬಳಗದ ರವಿಶಂಕರ್ ತಿಳಿಸಿದರು.
ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಸಂಜೆ 6.30ಕ್ಕೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಕೆ.ಆರ್. ಕ್ಷೇತ್ರದ ಹಲವೆಡೆ ಅಭಿಮಾನಿಗಳಿಂದ ಬಡಮಕ್ಕಳಿಗೆ ಪುಸ್ತಕ, ಬಡರೋಗಿಗಳಿಗೆ ಹಣಕಾಸು ನೆರವು ನೀಡಲಿದ್ದಾರೆ. ಜತೆಗೆ ಕೆಲವು ಅನಾಥಾಶ್ರಮಗಳಿಗೆ ಊಟ, ಉಪಹಾರ ವ್ಯವಸ್ಥೆ ಇರಲಿದೆ. ಸಂಜೆ ಶತಮಾನೋತ್ಸವ ಭವನದಲ್ಲಿನ ಕಾರ್ಯಕ್ರಮದಲ್ಲಿ ಸುಧೀರ್ ಕುಮಾರ್ ಮತದಾನ ಪ್ರಜಾಪ್ರಭುತ್ವಕ್ಕೆ ಎಷ್ಟು ಪೂರಕ ಎಂಬ ವಿಷಯ ಕುರಿತು ಮಾತನಾಡುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಗೋಪಿ, ಸುನೀಲ್, ಮುಖಂಡರಾದ ಜಿ.ಸೋಮಶೇಖರ್, ವಿನಯ್ ಕುಮಾರ್, ವಿಜಯಕುಮಾರ್ ಹಾಜರಿದ್ದರು.
Mysore
ಮೈಸೂರಲ್ಲಿ ಮರಗಳ ಗಣತಿ: ತ್ರಿಷಿಕಾ ಒಡೆಯರ್ ನೇತೃತ್ವ
ಮೈಸೂರು: ರಾಜವಂಶಸ್ಥೆ ತ್ರಿಷಿಕಾ ಕುಮಾರ್ ಒಡೆಯರ್ ಅವರ ನೇತೃತ್ವದಲ್ಲಿ ಮೈಸೂರು ನಗರದಲ್ಲಿ ಮರಗಳ ಗಣತಿಗೆ ಗುರುವಾರ ಚಾಲನೆ ನೀಡಲಾಯಿತು.
ಸಾಂಸ್ಕೃತಿಕ ನಗರಿಯ ಹಸಿರು ವಲಯ ಮತ್ತು ಮರಗಳ ಸಂರಕ್ಷಣೆಗಾಗಿ ತ್ರಿಷಿಕಾ ಕುಮಾರ್ ಒಡೆಯರ್ ಅವರ ನೇತೃತ್ವದ ಭೇರುಂಡ ಫೌಂಡೇಷನ್ ಹಾಗೂ ಮಂಗಳೂರಿನ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ ನೇತೃತ್ವದಲ್ಲಿ ಮರಗಳ ಗಣತಿ(ಟ್ರೀ ಆಡಿಟ್) ಕೈಗೊಳ್ಳಲಾಗಿದೆ.

ಈಗಾಗಲೇ ಮಂಗಳೂರು ನಗರದಲ್ಲಿ ಮರಗಳ ಗಣತಿಯನ್ನು ಯಶಸ್ವಿಯಾಗಿ ಪೂರೈಸಿರುವ ಸಂಘಟನೆ, ಅದೇ ಮಾದರಿಯಲ್ಲಿ ಮೈಸೂರಿನಲ್ಲೂ ಗಣತಿ ಕೈಗೊಂಡಿದೆ.
ಮೈಸೂರು ಮಹಾನಗರ ಪಾಲಿಕೆಯ ಒಟ್ಟು 65 ವಾರ್ಡ್ಗಳಲ್ಲಿ ಮರಗಳ ಸಮೀಕ್ಷೆ ನಡೆಸುವ ಗುರಿ ಹೊಂದಲಾಗಿದೆ. ಈ ಗಣತಿ ಕಾರ್ಯವನ್ನು ಮಾರ್ಚ್ 31ರೊಳಗೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. ಈ ಯೋಜನೆಯ ಮೂಲಕ ನಗರದ ಪ್ರತಿಯೊಂದು ಮರದ ಮಾಹಿತಿ ಸಂಗ್ರಹಿಸಿ, ವೈಜ್ಞಾನಿಕವಾಗಿ ಹಸಿರು ವಲಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತ್ರಿಷಿಕಾ ಕುಮಾರಿ ಒಡೆಯರ್ ತಿಳಿಸಿದ್ದಾರೆ.
Mysore
500 ಮಕ್ಕಳಿಗೆ ನೋಟ್ ಬುಕ್ ವಿತರಣೆ
ಮೈಸೂರು: ಶ್ರೀ ಶೃಂಗೇರಿ ಶಾರದಾ ಪೀಠ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಶ್ರೀ ಬಾಲ ಮಂಜುನಾಥಸ್ವಾಮಿ ಅವರಿಗೆ ಶ್ರೀ ವಿದ್ಯಾನಂದ ಸ್ವಾಮೀಜಿ ಎಂದು ನಾಮಕರಣ ಮಾಡಿದ ಹಿನ್ನೆಲೆಯಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ವಿವಿಧ ಸಾಮಾಜಿಕ ಸೇವಾ ಕಾರ್ಯಗಳು ನಡೆಸಿತು.

ಹೂಟಗಳ್ಳಿಯಲ್ಲಿರುವ ಕನ್ನಡಾಂಬೆ ರಕ್ಷಣಾ ವೇದಿಕೆ ಕಚೇರಿ ಎದುರು ಅಧ್ಯಕ್ಷ ಬಿ.ಬಿ.ರಾಜಶೇಖರ್ ನೇತೃತ್ವದಲ್ಲಿ ವಿವಿಧ ಸರ್ಕಾರಿ ಶಾಲೆಗಳ 500ಕ್ಕೂ ಹೆಚ್ಚು ಮಕ್ಕಳಿಗೆ ನೋಟ್‌ಬುಕ್ ವಿತರಣೆ ಮಾಡಲಾಯಿತು. ಎರಡು ವೃದ್ಧಾಶ್ರಮಗಳಿಗೆ ಆಹಾರ, ದಿನಸಿ ಕಿಟ್‌ಗಳ ವಿತರಣೆ, ಆರೋಗ್ಯ ಮತ್ತು ಕಣ್ಣು ತಪಾಸಣಾ ಶಿಬಿರಗಳು ಮತ್ತು ಅನ್ನಸಂತರ್ಪಣೆ ನಡೆಯಿತು.
ಸಾಹಿತಿ ಜಯಪ್ಪ ಹೊನ್ನಾಳಿ, ಸಮಾಜ ಸೇವಕ ರಘುರಾಮ್ ವಾಜಿಪೇಯಿ, ಪೊಲೀಸ್ ಸೊಸೈಟಿ ಅಧ್ಯಕ್ಷ ಎಸ್.ರವಿ, ಹೂಟಗಳ್ಳಿ ಚಿಕ್ಕಣ್ಣ, ಲಲಿತಾ ನಾಗೇಶ್, ರವಿಗೌಡ, ಹರೀಶ್ ಯಾದವ್, ಕರೀಗೌಡ, ಮಹಿಳಾ ಘಟಕದ ಅಧ್ಯಕ್ಷೆ ತಾರಾ, ಸಿಂಧುವಳ್ಳಿ ಶಿವಕುಮಾರ್, ಕಿಕ್ಕೇರಿ ಕಿರಣ, ಮಂಜು ತೇಜೂರ್, ಹುಣಸೂರು ಪರಮೇಶ್, ಲೂಯೀಸ್, ಹೊನ್ನೇಗೌಡ, ರಶ್ಮಿ ಸಿಂಗ್, ಸೌಭಾಗ್ಯ, ವಿಷ್ಣು, ಶಿವಲಿಂಗಯ್ಯ, ಪುಟ್ಟಸ್ವಾಮಿ, ಜಯಲಕ್ಷ್ಮೀ, ಹರೀಶ್, ವತ್ಸಲ, ಮುಖ್ಯ ಶಿಕ್ಷಕರಾದ ಶಿವಪ್ಪ, ಸತೀಶ್, ಮಧು ಮುಂತಾದವರು ಇದ್ದರು.
-
Special9 hours agoBSNL Recruitment 2026: ಬಿಎಸ್ಎನ್ಎಲ್ನಲ್ಲಿ ಭರ್ಜರಿ ನೇಮಕಾತಿ;ತಿಂಗಳಿಗೆ ₹90,000 ವರೆಗೆ ವೇತನ
-
Hassan23 hours agoಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
-
Kodagu4 hours agoಫೆ. 7ಕ್ಕೆ ಕೆಎಸ್ಆರ್ಟಿಸಿ ನೂತನ ಬಸ್ಸು ನಿಲ್ದಾಣ ಉದ್ಘಾಟನೆ
-
National7 hours agoಕೆ.ಆರ್. ನಗರ ಮಹಿಳೆಯ ಅಪಹರಣ ಕೇಸ್ – ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಬಿಗ್ ಶಾಕ್
-
Mysore5 hours agoಪಾರಂಪರಿಕ ತಾಣದಲ್ಲಿ ಧೂಮಪಾನ: ಬಿಗ್ಬಾಸ್ ಸ್ಪರ್ಧಿ ರಜತ್ ವಿರುದ್ಧ ದೂರು
-
National3 hours agoಮಂಡ್ಯ, ಮದ್ದೂರಿನಲ್ಲಿ ಮುರುಡೇಶ್ವರ ರೈಲು ನಿಲುಗಡೆಗೆ ಎಚ್ಡಿಕೆ ಮನವಿ: ಅಶ್ವಿನಿ ವೈಷ್ಣವ್ರಿಂದ ಸಕರಾತ್ಮಕ ಪ್ರತಿಕ್ರಿಯೆ
-
Chikmagalur9 hours agoವಿವಾಹಿತ ಹಿಂದೂ ಮಹಿಳೆಯ ಜೊತೆ : ಸಿಕ್ಕಿ ಬಿದ್ದ ಕಾಂಗ್ರೆಸ್ ಮುಖಂಡ
-
Mysore9 hours agoಫುಟ್ಪಾತ್ ವ್ಯಾಪಾರಿಗಳಿಗೆ ನಂಜನಗೂಡು ನಗರಸಭೆ ಆಯುಕ್ತ ಎಂ. ಬಸವರಾಜು ಎಚ್ಚರಿಕೆ
