Connect with us

Mandya

ಎಚ್ಡಿಕೆ ಗೆಲುವಿಗೆ ಹರಕೆ ಹೊತ್ತು ಉರುಳು ಸೇವೆ ಮಾಡಿದ ಅಭಿಮಾನಿಗಳು

Published

on

ಶ್ರೀರಂಗಪಟ್ಟಣ: ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲುವಿಗಾಗಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಉರುಳು ಸೇವೆ ನಡೆಸಿ ಪ್ರಾರ್ಥನೆ ಸಲ್ಲಿಸಿದರು.

ಎಚ್.ಡಿ.ಕುಮಾರ ಸ್ವಾಮಿ ರವರ ಗೆಲುವು ಜಿಲ್ಲೆಯ ಗೆಲುವಾಗಿದ್ದು,‌ ಮತದಾರರು ಯಾವುದೇ ಆಮಿಷಕ್ಕೆ ಬಲಿಯಾಗದೆ ಕುಮಾರಸ್ವಾಮಿ ರವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

Continue Reading
Click to comment

Leave a Reply

Your email address will not be published. Required fields are marked *

Mandya

ಯುವಜನತೆಯ ಜೀವನೋಪಾಯಕ್ಕೆ ಕೌಶಲ್ಯಾಭಿವೃದ್ಧಿ ತರಬೇತಿಗಳು ಅತಿ ಮುಖ್ಯ: ಡಾ.ಕುಮಾರ

Published

on

ಮಂಡ್ಯ : ಯುವಜನತೆ ವಿದ್ಯಾಭ್ಯಾಸ ಮುಗಿಸಿದ ನಂತರ ಉದ್ಯೋಗಗಳಿಸಿ ಉತ್ತಮ ಜೀವನ ನಡೆಸಲು ಕೌಶಲ್ಯಾಭಿವೃದ್ಧಿ ತರಬೇತಿ ಅತಿ ಮುಖ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪಿ.ಎಂ ವಿಶ್ವಕರ್ಮ ಯೋಜನೆಯಡಿ 128 ಬ್ಯಾಚ್ ಗಳಲ್ಲಿ 3917 ಜನರಿಗೆ ವೃತ್ತಿಪರ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು

ಕೈಗಾರಿಕೆಗಳ ಬೇಡಿಕೆಗಳಿಗೆ ಅನುಗುಣವಾಗಿ ಕೈಗಾರಿಕೆಗಳ ಆವರಣದಲ್ಲಿಯೇ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗವನ್ನು ಕಲ್ಪಿಸಿ ಕೊಡುವ ವಿನೂತನ ಕಾರ್ಯಕ್ರಮವಾದ “ಇಂಡಸ್ಟ್ರೀಸ್ ಲಿಂಕೇಜ್ ಸೆಲ್ಸ್” ಅನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಜಾರಿಗೊಳಿಸಿ, ಪ್ರಸ್ತುತ ಈ ಯೋಜನೆ ಅಡಿ ಗೆಜ್ಜಲಗೆರೆ ಕೈಗಾರಿಕಾ ವಲಯದಲ್ಲಿ ಸ್ಥಾಪಿತವಾಗಿರುವ ಶ್ರೀ ಬಾಲಾಜಿ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಅಪೆರಲ್ಸ್ ನಲ್ಲಿ ಸ್ಯಾಂಪಿಂಗ್ ಟೈಲರ್ ಮತ್ತು ಸಿವಿಂಗ್ ಮಷೀನ್ ಆಪರೇಟರ್ ವೃತ್ತಿಗೆ 60 ಜನ ಫಲಾನುಭವಿಗಳಿಗೆ ತರಬೇತಿ ನೀಡಲಾಗುತ್ತಿದೆ.

ನಲ್ ಜಲ್ ಯೋಜನೆಯು NRLM ಅಡಿ ರೂಪಿಸಿರುವ ಮಹಿಳಾ ಸ್ವ ಸಹಾಯ ಗುಂಪುಗಳ ಆಯ್ದ ಸದಸ್ಯರಿಗೆ ಬಹು ಕೌಶಲ್ಯ ತರಬೇತಿಯಡಿ ಪ್ಲಂಬಿಂಗ್, ವಿದ್ಯುತ್ ಕೆಲಸ, ಕಲ್ಲು ಮಟ್ಟು ಕೆಲಸ, ಉಪಕರಣ ಮತ್ತು ಯಂತ್ರೋಪಕರಣಗಳ ರಿಪೇರಿ ಕೆಲಸಗಳ ಬಗ್ಗೆ ಬಹು ಕೌಶಲ್ಯ ತರಬೇತಿ ನೀಡಿ ವೃತ್ತಿಪರ ಶಿಕ್ಷಣ ಮತ್ತು ರಾಷ್ಟ್ರೀಯ ತರಬೇತಿ ಮಂಡಳಿ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು ಈ ಯೋಜನೆಯಲ್ಲಿ 49 ಜನರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

“ನನ್ನ ವೃತ್ತಿ ನನ್ನ ಆಯ್ಕೆ” ಕಾರ್ಯಕ್ರಮವನ್ನು ರಾಜ್ಯದಾದ್ಯಂತ 500 ಶಾಲೆ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲಾಗಿದೆ, ಈ ಯೋಜನೆಯಲ್ಲಿ 8 ರಿಂದ 12ನೇ ತರಗತಿಯ ಮಕ್ಕಳಿಗೆ ಅವರ ಆಸಕ್ತಿ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಮಾರ್ಗದರ್ಶನ ನೀಡಲಾಗುವುದು, ಮಂಡ್ಯ ಜಿಲ್ಲೆಯ ಐದು ತಾಲೂಕುಗಳಲ್ಲಿ ಒಂದೊಂದು ಶಾಲೆಯನ್ನು ಆಯ್ದುಕೊಂಡು ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯವರ ಸಹಯೋಗದೊಂದಿಗೆ ತರಬೇತಿ ನೀಡಲಾಗುವುದು.

ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆ 4.0 ಅಡಿ ಆಧುನಿಕ ಕೋಷ್ಟಕದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬ್ಲಾಕ್ ಚೈನ್ 3 ಡಿ ಪ್ರಿಂಟಿಂಗ್, ಡ್ರೋನ್ ಬಳಸುವಿಕೆ ಇತ್ಯಾದಿ ವೃತ್ತಿಗಳಿಗೆ ತರಬೇತಿ ನೀಡಲಾಗುವುದು, ಈ ಕಾರ್ಯಕ್ರಮದಲ್ಲಿ 210 ಗಂಟೆಗಳ ಕಾಲ ತರಬೇತಿ ನೀಡಲಾಗುವುದು, ಜಿಲ್ಲೆಯ ಜಿ ಮಾದೇಗೌಡ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಈ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುವುದು. ಈಗಾಗಲೇ 308 ಫಲಾನುಭವಿಗಳು ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದರು.

ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ 222 ಜನರಿಗೆ ಅವಕಾಶ ಕಲ್ಪಿಸಲಾಗಿದೆ, ಈ ಯೋಜನೆಯ ಮೂಲ ಉದ್ದೇಶ ನಗರ ಪ್ರದೇಶದ ಬಿಪಿಎಲ್ ಕುಟುಂಬಗಳ ಸಮುದಾಯಕ್ಕೆ ಸವಲತ್ತುಗಳನ್ನು ದೊರಕಿಸಿ ಬಡತನದ ರೇಖೆಯಿಂದ ಮೇಲೆ ತರುವುದಾಗಿದೆ‌ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್, ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗನಂದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ಮಂದಗೆರೆ ಕೃಷಿ‌ ಪತ್ತಿನ‌ ಸಹಕಾರ ಸಂಘದ ಚುನಾವಣೆಗೆಯಲ್ಲಿ ಜೆ.ಡಿ.ಎಸ್ ಪಕ್ಷದ ವಷಕ್ಕೆ

Published

on

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಮಂದಗರೆ ಕೃಷಿ ಪತ್ತಿನ ಸಹಕಾರ ಸಂಘದ ಐದು ವರ್ಷದ ಅವದಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆಗೆ ನಿಗದಿಯಾಗಿತ್ತು

ಸಾಲಗಾರ ಕೇತ್ರಕ್ಕೆ 20 ಜನ ಸ್ಪರ್ದೆ ಮಾಡಿದ್ದು ಅದರಲ್ಲಿ ಗದ್ದೇಹೊಸೂರು ಜಿ.ಎನ್ ದೀಪಕ್, ಜಿ.ಬಿ ಮನು, ಚಿಕ್ಕಮಂದಗರೆ ಗ್ರಾಮದ ರಮೇಶ್ ಕೆ.ಎನ್, ವಸಂತ, ಆಲೇನಹಳ್ಳಿ ಗ್ರಾಮದ ಆಶೋಕ, ಸಾವಿತ್ರಮ್ಮ, ಮಂದಗರೆ ಗ್ರಾಮದ ಮಂಜುನಾಥ್, ಮೂಡನಹಳ್ಳಿ ಗ್ರಾಮದ ನಿಂಗೇಗೌಡ, ತಿಮ್ಮನಾಯಕ, ಹೊನ್ನೇನಹಳ್ಳಿ ಗ್ರಾಮದ ಮಂಜೇಗೌಡ, ಶ್ರವಣಹಳ್ಳಿ ಗ್ರಾಮದ ಬೋಜಯ್ಯ, ಗೆಲುವು ಸಾದಿಸಿದ್ರೆ ಸಾಸಲಗಾರರಲ್ಲದ ಕ್ಷೇತ್ರದಿಂದ ಅಲೇನಹಳ್ಳಿ ಮಹೇಶ್ ರವರು ಗೆಲುವು ಸಾದಿಸಿದ್ರು

ನೂತನ ನಿರ್ದೇಶಕರಿಗೆ ಜೆ.ಡಿ.ಎಸ್ ಪಕ್ಷದ ಯುವ ನಾಯಕ ಗದ್ದೇಹೊಸೂರು ಜಗದೀಶ್ ಸಿಹಿ ತಿನ್ನಿಸಿ ಎಲ್ಲಾ ನಿರ್ದೇಶಕರಿಗೆ ಶುಭ ಕೋರಿ ಮಾತನಾಡಿ ಜೆ.ಡಿ.ಎಸ್ ಅಭ್ಯರ್ಥಿ 8 ಸ್ಥಾನ ಗೆಲುವು ಸಾದಿಸಿ ಅದಿಕಾರದ ಚುಕ್ಕಾಣೆ ಹಿಡಿಯಲಿದ್ದು ಎಲ್ಲಾ ನಿರ್ದೇಶಕರು ಪಕ್ಷಬೇದ ಮರೆತು ಸಂಘದ ಅಭಿವೃದ್ಧಿ ಶ್ರಮಿಸುವಂತೆ ಸಲಹೆ ನೀಡಿದ್ರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

Continue Reading

Mandya

ಕಡು ಬಡವರಿಗೂ ಗ್ಯಾರಂಟಿಗಳು ತಲುಪಿದಾಗ ಮಾತ್ರ ಯೋಜನೆಗಳು ಯಶಸ್ವಿಯಾದಂತೆ: ಚಿಕ್ಕಲಿಂಗಯ್ಯ

Published

on

ಮಂಡ್ಯ : ಸರ್ಕಾರದ ಕನಸಿನ ಕೂಸಾದ ಗ್ಯಾರಂಟಿ ಯೋಜನೆಗಳು ರಾಜ್ಯದ ಕಡು ಬಡವರ ಮನೆಯನ್ನು ತಲುಪಿದಾಗ ಮಾತ್ರ ಯೋಜನೆ ಯಶಸ್ವಿಯಾದಂತೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಿಕ್ಕಲಿಂಗಯ್ಯ ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಲು ಪ್ರಾಧಿಕಾರವು ಸಹ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಗ್ಯಾರಂಟಿ ಯೋಜನೆಯ ಪ್ರಮುಖ ಯೋಜನೆ ಗೃಹಲಕ್ಷಿ ಯೋಜನೆ, ಈ ಯೋಜನೆಯಿಂದ ರಾಜ್ಯದ ಅನೇಕ ಕುಟುಂಬಗಳು ಸಬಲವಾಗಿವೆ, ಜಿಲ್ಲೆಯಲ್ಲಿ ಶೇ 100 ರಷ್ಟು ಅರ್ಹ ಮಹಿಳೆಯರಿಗೆ ಯೋಜನೆಗಳನ್ನು ತಲುಪಿಸುವುದು ಅತಿ ಮುಖ್ಯ, ಈಗಾಗಲೇ ಡಿಸೆಂಬರ್ ಮಾಹೆಯವರೆಗೂ ಗೃಹ ಲಕ್ಷ್ಮಿ ಯೋಜನೆಯಡಿ ಅನುದಾನ ಮಂಜೂರು ಮಾಡಲಾಗಿದೆ ಹಾಗೂ ಡಿ ಬಿ ಟಿ ಯ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರೊಂದಿಗೆ ಚರ್ಚಿಸಿ ಕಾಲ ಕಾಲಕ್ಕೆ ಗೃಹಲಕ್ಷಿ ಹಣವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಹಾಗೂ ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗದಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಅನ್ನ ಭಾಗ್ಯ ಯೋಜನೆಯಡಿ 7 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದೂ ಡಿಸೆಂಬರ್ ಮಾಹೆಯವರೆಗೆ ಒಟ್ಟು ರೂ. 402 ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ, ಡಿಸೆಂಬರ್ ಮಾಹೆಗೆ ಸಂಬಂಧಿಸಿದಂತೆ ರೂ. 23.06 ಕೋಟಿ ಹಣವನ್ನು ಪಡಿತರ ಚೀಟಿಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ, ಸರ್ಕಾರದ ನಿರ್ದೇಶನದಂತೆ ಫೆಬ್ರವರಿ ಮಾಹೆಯಿಂದ ಹಣದ ಬದಲು 15 ಕೆ.ಜಿ ಅಕ್ಕಿಯನ್ನೇ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲೆಡೆ ಈಗಾಗಲೇ ಫೆಬ್ರವರಿ ಮಾಹೆಯ ಹೆಚ್ಚುವರಿ ಅಕ್ಕಿಯನ್ನು ವಿತರಿಸಲಾಗುತ್ತಿದೆ, ಪ್ರತಿ ಎರಡು ವರ್ಷಕ್ಕೊಮ್ಮೆ ತೂಕ ಮೌಲ್ಯ ಮಾಪನ ನಡೆಸಲಾಗುವುದು, ತೂಕದಲ್ಲಿ ವ್ಯತ್ಯಾಸ ಕಂಡು ಬಂದ ಅಂಗಡಿಯ ಮಾಲೀಕನ ಮೇಲೆ ಕ್ರಮ ಜರುಗಿಸಲಾಗುವುದು, ಜಿಲ್ಲೆಯಲ್ಲಿ ಅನೇಕ ಕಡೆ ನ್ಯಾಯಬೆಲೆ ಅಂಗಡಿ ಮಾಲೀಕರು ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ, ಅಧಿಕಾರಿಗಳು ಈಗಾಗಲೇ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಹಣ ವಸೂಲಿ ಮಾಡದಂತೆ ಸೂಚನೆ ನೀಡಿದ್ದಾರೆ, ಅದನ್ನು ಮೀರಿ ಹಣ ವಸೂಲಿ ಮಾಡಿದರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶಾಲಾ ಕಾಲೇಜು ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಮಕ್ಕಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸಿ,
ಶಕ್ತಿ ಯೋಜನೆಯಡಿ ಫೆಬ್ರವರಿ ಮಾಹೆಯಲ್ಲಿ ಪ್ರತಿದಿನದ ಸರಾಸರಿಯಂತೆ 29 ಸಾವಿರಕ್ಕೂ ಹೆಚ್ಚು ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರ ವಿತರಿಸಲಾಗಿದೆ, ಫೆಬ್ರವರಿ ಮಾಹೆಯಲ್ಲಿ 59.13 ಲಕ್ಷಕ್ಕೂ ಹೆಚ್ಚು ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆಯಡಿ ನೀಡಲಾಗಿದೆ ಎಂದು ತಿಳಿಸಿದರು.

ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 5 ಲಕ್ಷದ 49 ಸಾವಿರಕ್ಕೂ ಹೆಚ್ಚಿನ ಫಲಾನುಭವಿಗಳು ಇದ್ದು, ಈವರೆಗೂ ಜಿಲ್ಲೆಗೆ 314 ಕೋಟಿ ಅನುದಾನ ನೀಡಲಾಗಿದೆ, ಜಿಲ್ಲೆಯಲ್ಲಿ ಶೇ 97 ರಷ್ಟು ಪ್ರಮಾಣದಲ್ಲಿ ಗೃಹ ಜ್ಯೋತಿ ಅನ್ನು ಎಲ್ಲಾ ಮನೆಗಳಿಗೂ ತಲುಪಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ 7 ತಾಲ್ಲೂಕಿನ ಎಲ್ಲಾ ಪದವಿ ಹಾಗೂ ಡಿಪ್ಲೋಮೋ ಕಾಲೇಜುಗಳಲ್ಲಿ ಯುವ ನಿಧಿ ಯೋಜನೆಯ ಕುರಿತು ಜಾಗೃತಿ ಮೂಡಿಸಲಾಗಿದೆ, 4702 ಅರ್ಹ ಫಲಾನುಭವಿಗಳು ಪ್ರಸ್ತುತ ಜಿಲ್ಲೆಯಲ್ಲಿದ್ದು ಎಲ್ಲರಿಗೂ ಡಿ.ಬಿ.ಟಿ ಯ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ, ಯುವನಿಧಿ ಯೋಜನೆಯಡಿ 7 ಕೋಟಿ 12 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಧನುಷ್, ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷ ಪ್ರಶಾಂತ್ ಬಾಬು ಕೆ.ಸಿ. ಗ್ಯಾರಂಟಿ ಯೋಜನೆಯ ಪ್ರಾಧಿಕಾರದ ಸದಸ್ಯರಾದ ವೀಣಾ ಶಂಕರ್, ರುದ್ರಪ್ಪ, ಮಹೇಶ್, ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣ ಕುಮಾರ್, ಕೆ.ಎಸ್. ಆರ್. ಟಿ.ಸಿ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Trending

error: Content is protected !!