Connect with us

Location

ಎಚ್‌ಡಿಕೆ ಕ್ಷಮೆ ಕೇಳುವಂತೆ ಕಾಂಗ್ರೆಸ್‌ ಮಹಿಳಾ ಘಟಕ ಆಗ್ರಹ

Published

on

ಎಚ್‌ಡಿಕೆ ಕ್ಷಮೆ ಕೇಳುವಂತೆ ಕಾಂಗ್ರೆಸ್‌ ಮಹಿಳಾ ಘಟಕ ಆಗ್ರಹ

ಮಂಡ್ಯ: ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾದ ಎಚ್.ಡಿ.ಕುಮಾರಸ್ವಾಮಿ ಅವರು ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಕ್ಷಮೆ ಕೇಳಬೇಕು ಇಲ್ಲವಾದರೆ ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗುವುದು ಎಂದು ಕಾಂಗ್ರೆಸ್‌ ಮಹಿಳಾ ಘಟಕದ ಕಾರ್ಯಕರ್ತರು ಎಚ್ಚರಿಕೆ ನೀಡಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

‘ಗೋ ಬ್ಯಾಕ್‌’ ಎಂಬ ಘೋಷಣೆಯೊಂದಿಗೆ ನಗರದ ಜೆ.ಸಿ.ವೃತ್ತದಲ್ಲಿ ಬಳಿ ಜಮಾಯಿಸಿದ ಕಾರ್ಯಕರ್ತರು ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್ ಗ್ಯಾರಂಟಿಯ ಬಗ್ಗೆ ಟೀಕಿಸುವ ನೆಪದಲ್ಲಿ ತುಮಕೂರಿನಲ್ಲಿ ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಹಾಗಾಗಿ ಗೋಬ್ಯಾಕ್‌ ಕುಮಾರಸ್ವಾಮಿ ಎಂಬ ಘೋಷಣೆ ಹಮ್ಮಿಕೊಂಡಿದ್ದೇವೆ, ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡ ಅವರ ಮಗನಾಗಿ ಮಹಿಳೆಯರ ವಿರುದ್ಧದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಅಂಜನಾ ಶ್ರೀಕಾಂತ್‌ ಅವರು, ನಮ್ಮ ಕಾಂಗ್ರೆಸ್‌ ಪಕ್ಷದಿಂದ ನೀಡುತ್ತಿರುವ ಗ್ಯಾರಂಟಿಗಳು ಹೆಣ್ಣುಮಕ್ಕಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗಿದೆ, ಗ್ಯಾರಂಟಿ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದ ಮೇಲೆ ಹತಾಷೆಯಾಗಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದವರು ಮಾತನಾಡಿದ್ದಾರೆ, ಮೈತ್ರಿ ಅಭ್ಯರ್ಥಿ ಎಚ್‌ಡಿಕೆ ಅವರ ಸೋಲು ಅವರಿಗೆ ಗೊತ್ತಾಗಿದೆ, ಮುಂದಿನ ದಿನಗಳಲ್ಲಿ ಮಂಡ್ಯಕ್ಕೆ ಬರುವುದನ್ನೇ ಅವರು ಬಿಟ್ಟಿಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.

ಸಂಸದೆ ಸುಮಲತಾ ಅಂಬರೀಷ್‌ ಅವರಿಗೆ ಕೆಆರ್‌ಎಸ್‌ ಅಣೆಕಟ್ಟೆಗೆ ಅಡ್ಡಲಾಗಿ ಮಲಗಿಸಿ ಎನ್ನುವುದು, ಗದಗ ಜಿಲ್ಲೆಯ ಹೊರಾಟಗಾರ್ತಿಯರನ್ನ ಎಲ್ಲಿ ಮಲಿಗಿದ್ದಿಯಮ್ಮಾ ಎನ್ನುವ ಎಚ್‌ಡಿಕೆ ಅವರನ್ನು ನೋಡಿದರೆ ತಿಳಿಯುತ್ತದೆ ಜೆಡಿಎಸ್‌ ಪಕ್ಷದವರು ಹೆಣ್ಣು ಮಕ್ಕಳಿಗೆ ಎಷ್ಟು ಬೆಲೆ ಕೊಡುತ್ತಾರೆ ಎನ್ನುವುದು ತಿಳಿಯುತ್ತದೆ. ಇವರ ಸಂಸ್ಕೃತಿ ಇದೆನಾ? ನಮ್ಮ ಮನೆಯಲ್ಲಿ ಉತ್ತಮ ಸಂಸ್ಕೃತಿಯನ್ನೇ ಕಲಿಸಿದ್ದಾರೆ, ಕಾಂಗ್ರೆಸ್‌ ಪಕ್ಷವನ್ನೇ ಟಾರ್ಗೆಟ್‌ ಮಾಡಿಕೊಂಡು ಮಾತನಾಡುವುದು ಸರಿಯಿಲ್ಲ ತಕ್ಷಣ ಎಲ್ಲರ ಕ್ಷಮೆ ಕೇಳದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷೆ ಪುಷ್ಪ ಅಮರ್‌ನಾಥ್‌, ಮುಖಂಡರಾದ ಪಲ್ಲವಿ, ಶುಭದಾಯಿನಿ, ಸುಜಾತಾ ಸಿದ್ದಯ್ಯ, ಶಕುಂತಲಾ, ಜಯಮ್ಮ ಮಳವಳ್ಳಿ, ಶಾಂಭವಿ, ಗೀತಾ ದಾಸೇಗೌಡ, ಲಕ್ಷ್ಮಿ, ಅನುರಾಧ, ವೀಣಾ ಭಾಗವಹಿಸಿದ್ದರು.

……….

Continue Reading
Click to comment

Leave a Reply

Your email address will not be published. Required fields are marked *

Kodagu

ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿ ಮೃ*ತ

Published

on

ವರದಿ: ಸಿಂಗಿ ಸತೀಶ್

ಗೋಣಿಕೊಪ್ಪ: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಅತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗೋಲ್ಲಿ ಸಮೀಪ ಭಾನುವಾರ ನಡೆದಿದೆ.

ಚೆನ್ನಂಗೋಲ್ಲಿ ಸಮೀಪ ಕೆ.ಕೆ ತಿಮ್ಮಯ್ಯ ಅವರ ಕೆರೆಗೆ ನಾಲ್ಕನೇ ತರಗತಿ ವಿದ್ಯಾರ್ಥಿನಿ ಬಿದ್ದು ಸಾವನ್ನಪ್ಪಿದ್ದಾಳೆ.

ತಿಮ್ಮಯ್ಯ ಅವರ ಕಾಫಿ ತೋಟದ ಕಾರ್ಮಿಕರಾದ ಭವಾನಿ ಅವರ ಮಗಳು ಲಾವಣ್ಯ ಮೃತಪಟ್ಟ ದುರ್ದೈವಿಯಾಗಿದ್ದಾಳೆ.

ಭಾನುವಾರ ಕೆರೆಯ ದಡದಲ್ಲಿ ಆರು ವಿದ್ಯಾರ್ಥಿಗಳು ಆಟವಾಡುತ್ತಿದ್ದರು. ಮೃತಪಟ್ಟ ಲಾವಣ್ಯ, ಮತ್ತು ಉಷಾ, ಶೋಭಿತಾ ಈ ಮೂವರು ವಿದ್ಯಾರ್ಥಿಗಳು ಆಟವಾಡುವ ಉತ್ಸಾಹದಲ್ಲಿ ಕೆರೆಗೆ ಹಾರಿದ್ದಾರೆ. ತೋಟಕ್ಕೆ ನೀರು ಹಾಯಿಸಿದ್ದರಿಂದ ಕೆರೆಯಲ್ಲಿ ನೀರು ಬತ್ತಿ ಹೋಗಿದ್ದು, ಕೇವಲ ಕೆಸರಿನಿಂದ ತುಂಬಿತ್ತು. ಇದಲ್ಲಿ ಮೂವರು ಮಕ್ಕಳು ಕೆಸರಿನಲ್ಲಿ ಸಿಲುಕಿಕೊಂಡು ಕಿರುಚಾಡಿದ್ದಾರೆ.

ದಡದ ಮೇಲಿದ್ದ ಮೂರು ಮಕ್ಕಳು ಸಮೀಪದ ಪೋಷಕರಿಗೆ ಮಾಹಿತಿ ಮುಟ್ಟಿಸಲು ಹೋದಾಗ, ಈ ಮಾರ್ಗದ ಮೂಲಕ ಹಾದು ಹೋಗುತ್ತಿದ್ದ ಕಾರ್ಮಿಕರು ಮಕ್ಕಳನ್ನು ರಕ್ಷಿಸಲು ಮುಂದಾಗಿದ್ದಾರೆ.

ಕೆಸರಿನಲ್ಲಿ ಸಿಲುಕಿದ ಇಬ್ಬರು ಮಕ್ಕಳನ್ನ ರಕ್ಷಿಸಿದರೇ, ಲಾವಣ್ಯಳ ಜೀವ ಉಳಿಸಲು ಸಾಧ್ಯವಾಗಿಲ್ಲ.

ಶಾಲೆಯಲ್ಲಿ ಐದನೇ ತರಗತಿ ಓದುತ್ತಿರುವ ಪವನ್, 3ನೇ ತರಗತಿ ಓದುತ್ತಿರುವ ಲೋಹಿತ್, ಶರಣ್, ಶೋಭಿತಾ ಹಾಗೂ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಉಷಾ ಮತ್ತು ಮೃತಪಟ್ಟ ಲಾವಣ್ಯ ಕಣ್ಣಮುಚ್ಚಾಲೆ ಆಟವಾಡುತ್ತಿದ್ದರು.

ಈ ಮಕ್ಕಳು ಚೆನ್ನಂಗೋಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದು ಸೋಮವಾರ ವಾರ್ಷಿಕ ಪರೀಕ್ಷೆಯನ್ನು ಬರೆಯಬೇಕಾಗಿತ್ತು. ವಿದ್ಯಾರ್ಥಿ ಮೃತಪಟ್ಟ ಹಿನ್ನೆಲೆ ಸೋಮವಾರ ಶಾಲೆಗೆ ರಜೆ ನೀಡಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಗಿರಿಜಾ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Chamarajanagar

ತಲೆಯಲ್ಲಿ ಕೂದಲಿಲ್ಲ ಎಂದು ನಿಂದಿಸಿದ ಪತ್ನಿ: ಮನನೊಂದ ಪತಿ ಆತ್ಮ*ಹತ್ಯೆ

Published

on

ಚಾಮರಾಜನಗರ: ತಲೆಯಲ್ಲಿ ಕೂದಲು ಇಲ್ಲದ ಕಾರಣಕ್ಕೆ ಪತ್ನಿ ಕಿರುಕುಳ ನೀಡಿದ್ದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಉಡಿಗಾಲ ಗ್ರಾಮದ ನಿವಾಸಿ ಪರಶಿವಮೂರ್ತಿ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಪರಶಿವಮೂರ್ತಿಗೆ ತಲೆಯಲ್ಲಿ ಕೂದಲು ಕಡಿಮೆ ಇದ್ದು, ಕೂದಲು ನಾಟಿ ಮಾಡಿಸಿಕೊಳ್ಳುವಂತೆ ಪತ್ನಿ ಒತ್ತಾಯಿಸುತ್ತಿದ್ದಳು ಬೋಳು ತಲೆ ಎಂದು ಪದೇಪದೇ ನಿಂದಿಸುತ್ತಿದ್ದಳು. ಇದರಿಂದ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಮಾಹಿತಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Hassan

ಸಂಭ್ರಮದಿಂದ ನಡೆದ ವೀರಭದ್ರೇಶ್ವರ ಸ್ವಾಮಿಯ 46ನೇ ಜಾತ್ರಾ ಮಹೋತ್ಸವ

Published

on

ಆಲೂರು: ತಾಲ್ಲೂಕಿನ ಅಡವಿ ಬಂಟೆನಹಳ್ಳಿ ಗ್ರಾಮದಲ್ಲಿ ಶ್ರೀ ದೇವೀರಮ್ಮ ಶ್ರೀ ವೀರಭದ್ರೇಶ್ವರ ಸ್ವಾಮಿಯವರ 46ನೇ ವರ್ಷದ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ನಡುವೆ ಸಂಭ್ರಮದಿಂದ ನಡೆಯಿತು.

ಮಾ.13ರ ಗುರುವಾರ ರಾಮೇಶ್ವರ ಹಳ್ಳದಲ್ಲಿ ಶ್ರೀ ದೇವೀರಮ್ಮ ಶ್ರೀ ವೀರಭದ್ರೇಶ್ವರ ಸ್ವಾಮಿಯವರಿಗೆ ಗಂಗಾಸ್ನಾನ ಏರ್ಪಡಿಸಲಾಗಿತ್ತು. ಶ್ರೀ ಕ್ರೋಧಿನಾಮ ಸಂವತ್ಸರೇ ಉತ್ತರಾಯಣೇ ಶಿಶಿರ ಋತು ಫಾಲ್ಗುಣ ಶುಕ್ಲ ಪಕ್ಷ 1927 ಗತಕಲಿ 5101 ದಿನಾನಿ14 ಪೂರ್ವ ಭಾದ್ರಪದ ಉತ್ತರ ಪಲ್ಗುಣಿ ನಕ್ಷತ್ರ ಪೂರ್ಣಿಮೆಯ ಮಾ. 14 ರ ಶುಕ್ರವಾರ ಬೆಳಿಗ್ಗೆ 8-00 ಗಂಟೆಗೆ ಗ್ರಾಮದ ದೇವಸ್ಥಾನದಲ್ಲಿ ಶ್ರೀ ದೇವೀರಮ್ಮನವರ ಮೂಲಸ್ಥಾನದಲ್ಲಿ ಅಂಕುರಾರ್ಪಣ ರುದ್ರಾಭಿಷೇಕ ಮತ್ತು ಮಹಾಮಂಗಳಾರತಿಯನ್ನು ಏರ್ಪಡಿಸಿ ಮತ್ತು ಸಂಜೆ 3-00 ಗಂಟೆಗೆ ಶ್ರೀ ಮಳೆಮಲ್ಲೇಶ್ವರ ಸ್ವಾಮಿಯವರ ಬೆಟ್ಟದಲ್ಲಿ ಶ್ರೀ ದೇವೀರಮ್ಮ- ಶ್ರೀ ವೀರಭದ್ರೇಶ್ವರ ಸ್ವಾಮಿಯವರಿಗೆ ರುದ್ರಾಭಿಷೇಕ ನಡೆಯಿತು, ಸಂಜೆ 7-30 ಗಂಟೆಗೆ ಸರಿಯಾಗಿ ಶ್ರೀ ಮಳೆಮಲ್ಲೇಶ್ವರ ಸ್ವಾಮಿಯವರ ಬೆಟ್ಟದಿಂದ ಶ್ರೀ ದೇವೀರಮ್ಮ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಮುತ್ತಿನ ಮಂಟಪ ಉತ್ಸವ ನಂದಿಧ್ವಜ, ವೀರಭದ್ರ ಕುಣಿತ, ಕೋಲಾಟ, ಡೊಳ್ಳು ಕುಣಿತ ಹಾಗೂ ವಿವಿಧ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಗ್ರಾಮಕ್ಕೆ ಆಗಮನ ರಾತ್ರಿ 8-30 ರಿಂದ 10-30ರವರೆಗೆ ಅರ್ಚನೆ ಮಹಾಮಂಗಳಾರತಿ ಕಾರ್ಯಕ್ರಮ ನಡೆದವು.
ರಾತ್ರಿ 10-30 ಗಂಟೆಯಿಂದ ನಂದಿಧ್ವಜದೊಂದಿಗೆ ಶ್ರೀ ದೇವೀರಮ್ಮ ಸ್ವಾಮಿಯವರ ಉತ್ಸವ ಜರುಗಿದವು.

ಮಾ.15ರ ಶನಿವಾರ ಬೆಳಗ್ಗೆ 5-30 ಗಂಟೆಯಿಂದ ಕಳಸ ಶ್ರೀ ದೇವೀರಮ್ಮ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಮೆರವಣಿಗೆಯೊಂದಿಗೆ ಕೆಂಡೋತ್ಸವ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಹೊತ್ತ ಭಕ್ತರು ಕೆಂಡ ಹಾಯ್ದರು. ಹರಕೆ ಹೊತ್ತ ಭಕ್ತರು ಕೆಂಡ ತುಳಿದು ತಮ್ಮ ಭಕ್ತಿ ಸಮರ್ಪಿಸಿದರು.

ಜಾತ್ರಾ ಮಹೋತ್ಸವ ಅಂಗವಾಗಿ ರಾತ್ರಿ “ರಾಜಾ ಸತ್ಯವ್ರತ ಅಥವಾ ಶನಿಪ್ರಭಾವ ” ಎಂಬ ಸುಂದರ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿತ್ತು. ಮಾ.16 ನೇ ಭಾನುವಾರ ಬೆಳಿಗ್ಗೆ 9-00 ಗಂಟೆಯಿಂದ ಭೂತಪ್ಪನವರ ಸೇವಾ ಕಾರ್ಯಗಳು ನಡೆದವು.

ಮಾ.14 ರ ಶುಕ್ರವಾರ ರಾತ್ರಿಯಿಂದ ಮಾ.15ರ ಶನಿವಾರ ರಾತ್ರಿವರೆಗೆ ಎಲ್ಲಾ ಭಕ್ತಾದಿಗಳಿಗೂ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಬೇಲೂರು: ಟಿ.ವಿ.ಮಾಧ್ಯಮಗಳ ಹೊಡೆತಕ್ಕೆ ಸಿಲುಕಿ ನಲುಗಿರುವ ನಾಟಕ ಕಲೆ ಇಂದಿಗೂ ಜೀವಂತವಾಗಿದೆ ಎಂದರೆ, ಇದಕ್ಕೆ ಗ್ರಾಮೀಣ ಪ್ರದೇಶದ ಜನರ ಪ್ರೋತ್ಸಾಹ ಹಾಗೂ ಆಸಕ್ತಿಯೇ ಕಾರಣವಾಗಿದೆ ಎಂದು ಶಾಸಕ ಹೆಚ್.ಕೆ ಸುರೇಶ್ ತಿಳಿಸಿದರು.

ತಾಲೂಕಿನ ಹಗರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇರಿದ ಅಡವಿ ಬಂಟೆನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ 46ನೇ ವರ್ಷದ ಶ್ರೀ ದೇವೀರಮ್ಮ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ರಾಜಾ ಸತ್ಯವ್ರತ ಅಥವಾ ಶನಿಪ್ರಭಾವ ” ಎಂಬ ಸುಂದರ ಪೌರಾಣಿಕ ನಾಟಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಇಂದಿನ ದಿನಮಾನಗಳಲ್ಲಿ ಟಿವಿ, ಮೊಬೈಲ್‌ ಹಾವಳಿಯಿಂದ ಪೌರಾಣಿಕ ನಾಟಕಗಳು ನಶಿಸುತ್ತಿವೆ. ಗ್ರಾಮೀಣ ಭಾಗದ ಕಲಾಭಿಮಾನಿಗಳು ಪೌರಾಣಿಕ ನಾಟಕಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಕರೆ ನೀಡಿದರು. ಬಂಟೆನಹಳ್ಳಿಯ ಗ್ರಾಮಕ್ಕೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ಸಮಸ್ಯೆಯನ್ನು ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಈ ಬಗ್ಗೆ ಸದನದಲ್ಲೂ ಕೂಡ ಸರ್ಕಾರವನ್ನ ಗಮನ ಸೆಳೆಯುವಂತಹ ಕೆಲಸ ಮಾಡುತ್ತೇನೆ ಎಂದರು.

ವೇದಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ನವೀನ್, ಬಿಜೆಪಿ ಮುಖಂಡ ಡಿಶಾಂತ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಮುತ್ತಣ್ಣ, ಪೃಥ್ವಿರಾಜ್, ವಕೀಲರಾದ ವೀರಭದ್ರೇಗೌಡ, ಗ್ರಾಮದ ಮುಖಂಡರಾದ ಸಿದ್ದಮಲ್ಲೇಗೌಡ, ಬಸವರಾಜ್, ವಿರುಪಾಕ್ಷ, ಜಯಣ್ಣ ಗ್ರಾಮಸ್ಥರು ಹಾಗೂ ಭಕ್ತರು ಹಾಜರಿದ್ದರು.

Continue Reading

Trending

error: Content is protected !!