Mandya
ಕುಮಾರಸ್ವಾಮಿ ಬೆಂಬಲಿಸಿ – ಮಾಜಿ ಸಚಿವ ಹಾಲ್ಕೋಡ್ ಹನುಮಂತಪ್ಪ
ಮಂಡ್ಯ: ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಮಾಜಿ ಸಚಿವ ಹಾಲ್ಕೋಡ್ ಹನುಮಂತಪ್ಪ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ. ಶೈಕ್ಷಣಿಕವಾಗಿ ಹಲವಾರು ಕೊಡುಗೆ ನೀಡಿದ್ದಾರೆ .ಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಹೊಸ ಪರಂಪರೆ ಹುಟ್ಟು ಹಾಕಿದ್ದಾರೆ ಎಂದರು .

ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ,ರೈತರ ಸಾಲ ಮನ್ನಾ, ಶಾಲಾ ಕಾಲೇಜು ಸ್ಥಾಪನೆ ಮತ್ತು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.
ಅನುಭವಿ ರಾಜಕಾರಣಿಯನ್ನು ಲೋಕಸಭೆಗೆ ಕಳುಹಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಇಂತಹ ಸುವರ್ಣ ಅವಕಾಶವನ್ನು ಕಳೆದುಕೊಳ್ಳದೆ ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರಲ್ಲದೆ,ಸೂರ್ಯ ಹುಟ್ಟುವಷ್ಟೇ ಕುಮಾರಸ್ವಾಮಿ ಅವರ ಗೆಲುವು ಸತ್ಯ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತರ ಸಿಟಿ ಮಂಜುನಾಥ್ ಜೆಡಿಎಸ್ ಮುಖಂಡ ಸಿ ಕೆ ಪಾಪಯ್ಯ ,ಅನಿಲ್ ಕುಮಾರ್ ,ಸಂತೋಷ್, ಪುಟ್ಟರಾಜು, ಸಿದ್ದರಾಜು ಉಪಸ್ಥಿತರಿದ್ದರು.
Mandya
1.89 ಕೋಟಿ ರೂ.ವೆಚ್ಚದಲ್ಲಿ ಪೀಡರ್ ನಷ್ಟ ಕಡಿಮೆಗೊಳಿಸಿ ಪರಿವರ್ತಕ ಅಳವಡಿಸುವ ಯೋಜನೆಗೆ ರಮೇಶ್ ಬಂಡಿಸಿದ್ದೇಗೌಡ ಚಾಲನೆ
ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕಿನ ಕೊತ್ತತ್ತಿ ಹೋಬಳಿಯ ಉರಮಾರ ಕಸಲಗೆರೆ ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 1.89 ಕೋಟಿ ರೂ.ವೆಚ್ಚದಲ್ಲಿ ಪೀಡರ್ ನಷ್ಟ ಕಡಿಮೆಗೊಳಿಸಿ ಪರಿವರ್ತಕ ಅಳವಡಿಸಿ ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುವ ಯೋಜನೆಗೆ ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ರೈತರು ಆರ್ ಆರ್ ನಂಬರ್ ಗೆ ದುಡ್ಡು ಕಟ್ಟಿದರೆ ರೈತರ ಎರಡು ಬೋರ್ ವೆಲ್ ಗಳಿಗೆ ಒಂದು ಟಿಸಿ ಹಾಕುವುದಕ್ಕೂ ಚಾಲನೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ರೈತರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಕೊಡಲು ಕೆಲಸ ಮಾಡಿದ್ದೇವೆ.ರೈತರು ಜಮೀನುಗಳಲ್ಲಿ ಬಿಳಿ ವೈರುಗಳು ನೇತಾಡುತ್ತಿ ರುವುದನ್ನು ತೆರವುಗೊಳಿಸಿ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿದೆ ಎಂದು ದೂರುಗಳು ಕೇಳಿ ಬರುತ್ತಿದ್ದು, ತಕ್ಷಣ ತೆರವುಗೊಳಿಸಿ ಎಂದು ತಿಳಿಸಿದರು.

ವಿದ್ಯುತ್ ಇಲಾಖೆಗೆ ಸಂಬಂಧಪಟ್ಟ ಸಣ್ಣ-ಪುಟ್ಟ ಕೆಲಸಗಳು ಇದ್ದರೆ ಹೇಳಿ ರೈತರಿಗೆ ತೊಂದರೆ ಆಗದ ರೀತಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಉರಮಾರ ಕಸಲಗೆರೆಗೆ ಸಪರೇಟ್ ಪೀಡರ್ ಮಾಡಿಕೊಡುತ್ತಿದ್ದೇವೆ. ತಕ್ಷಣ ರೈತರು ದುಡ್ಡು ಕಟ್ಟಿ ತಮ್ಮ ಬೋರ್ವೆಲ್ ಗಳನ್ನು ಆರ್ ಆರ್ ಮಾಡಿಸಿಕೊಳ್ಳಿ.ಈ ಭಾಗದಲ್ಲಿ ಕೆರೆಗಳಿಗೆ ನೀರು ಕೊಟ್ಟ ಮೇಲೆ ರೈತರು ಬೋರ್ವೆಲ್ ಗಳ ಮೂಲಕ ತಮ್ಮ ಕೃಷಿ ಚಟುವಟಿಕೆ ಹಮ್ಮಿಕೊಂಡು ಜೀವನ ರೂಪಿಸುತ್ತಿದ್ದಾರೆ.ರೈತರ ಪಂಪ್ ಸೆಟ್ ಗಳಿಗೆ ಸಮಸ್ಯೆಯಾದಾಗ ಟಿಸಿ ಬದಲಾವಣೆ ಮಾಡಲು ತಡ ಆಗುತ್ತಿತ್ತು. ಅದಕ್ಕಾಗಿ ಉರಮಾರ ಕಸಲಗೆರೆ ಗ್ರಾಮ ವ್ಯಾಪ್ತಿಯ ರೈತರ ಪಂಪ್ಸೆಟ್ಟುಗಳಿಗೆ ಪೀಡರ್ ನಷ್ಟ ಕಡಿಮೆಗೊಳಿಸಿ ಪರಿವರ್ತಕ ಅಳವಡಿಸಿ ಉತ್ತಮ ಗುಣಮಟ್ಟದ ವಿದ್ಯುತ್ ಕೊಡ ಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚೆಸ್ಕಾಂ ಎಇಇ ಚಂದ್ರಮೌಳಿ, ಜೆಇ ಲೋಕೇಶ್ ಚವ್ಹಾಣ್, ಗುತ್ತಿಗೆದಾರ ಸತೀಶ್ ರೆಡ್ಡಿ, ಮುಖಂಡರಾದ ನಾಗರಾಜು, ಕಾಳೇನಹಳ್ಳಿ ಮಂಜುನಾಥ್, ಎಂ.ಯಶಸ್, ಚಿಕ್ಕೇಗೌಡ, ಸಿದ್ದೇಗೌಡ, ರಾಜೇಗೌಡ, ನಿಂಗೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Mandya
ಫೆ.28ಕ್ಕೆ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆ : ಸಿ.ಡಿ.ಗಂಗಾಧರ್
ಮಂಡ್ಯ: ದಿ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಫೆ.18 ರಂದು ಮೈಶುಗರ್ ಕಾರ್ಖಾನೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20214-15ನೇ ಸಾಲಿನಲ್ಲಿ ಅಂದಿನ ಅಧ್ಯಕ್ಷ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಆಯೋಜಿಸಿದ್ದರು. ಅಂದಿನಿಂದ ಹತ್ತು ವರ್ಷಗಳು ಯಾವುದೇ ಸಭೆ ಮಾಡಿರಲಿಲ್ಲ. ಇದೀಗ 2015-16ನೇ ಸಾಲಿನ ಸಭೆಯನ್ನು ಅಂದು ಬೆಳಿಗ್ಗೆ10 ಗಂಟೆಗೆ, 2016-17ನೇ ಸಾಲಿನ ಸಭೆಯನ್ನು ಮಧ್ಯಾಹ್ನ12ಗಂಟೆಗೆ ಆಯೋಜಿಸಲಾಗಿದೆ ಎಂದರು.

ಮೈಶುಗರ್ ಕಂಪನಿಯ82 ಹಾಗೂ83ನೇ ಸಾಲಿನ ವಾರ್ಷಿಕ ವರದಿಯನ್ನು ವಿತರಣೆ ಮಾಡಲಾಗುತ್ತಿದೆ. ಆಡಿಟ್ ವರದಿಯನ್ನು ಸದಸ್ಯರು ಕಂಪನಿಯಿಂದ ಪಡೆಯಬಹುದಾಗಿರುತ್ತದೆ. ಸದಸ್ಯರು ಯಾವುದೇ ಪ್ರಶ್ನೆ ಕೇಳುವುದಿದ್ದರೆ ಫೆ.12ನೇ ತಾರೀಖಿನೊಳಗೆ ಲಿಖಿತ ರೂಪದಲ್ಲಿ ನೀಡುವಂತೆ ಮನವಿ ಮಾಡಿದರು.
ಮೈಶುಗರ್ ಕಂಪನಿಗೆ ಸಂಬಂಧಿಸಿದಂತೆ 2017ರಿಂದ 2025ರವರೆಗಿನ ವಾಷಿರ್ಕ ವರದಿಯೂ ಸಿದ್ದವಾಗಿದೆ. ಅದನ್ನೂ ಸಂಪೂರ್ಣವಾಗಿ ಐಟಿ ಫೈಲ್ ಮಾಡಿಸಿ ಅಂತಿಮ ಮಾಡಲಾಗುವುದು. ಈ ಮೂಲಕ ಕಂಪನಿಯ ಶೇರುದಾರರಿಗೆ ಮಾಹಿತಿ ಒದಗಿಸಲಾಗುವುದು. ಕಳೆದ ಎರಡು ವರ್ಷಗಳಿಂದ ಕಾರ್ಖಾನೆಯನ್ನು ಸಬಲೀಕರಣಗೊಳಿಸು300 ಕೋಟಿ ಗೂ ಹೆಚ್ಚು ಆರ್ಥಿಕ ಶಕ್ತಿ ತುಂಬಿರುವ ಸಲುವಾಗಿ ಸಭೆಯಲ್ಲಿ ಮಾಹಿತಿ ನೀಡಲಾಗುವುದು. ಸಭೆಗೆ ಕಾರ್ಖಾನೆಯ ಸಂಸ್ಥಾಪಕ ಕೋಲ್ಮನ್ ಅವರ ಕುಟುಂಬದಿಂದ ಯಾರನ್ನಾದರೂ ಓರ್ವ ಸದಸ್ಯರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸರಕಾರದಿಂದ113.5 ಕೋಟಿ ಸರಕಾರದಿಂದ ಆರ್ಥಿಕ ಶಕ್ತಿ ನೀಡಲಾಗಿದೆ. ಸರಕಾರೇತರವಾಗಿ2024ರ ಜುಲೈನಲ್ಲಿ ಐಟಿ ಮುಕ್ತವಾಗಿದ್ದೇವೆ. 127 ಕೋಟಿ ಜಿಓಗೆ ಸರಕಾರಿ ಆದೇಶವಾಗಿದೆ. 300 ಕೋಟಿ ಬೆಲೆ ಬಾಳುವ 27ಎಕರೆ ಭೂಮಿಯ ವಶಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಹಂಗಾಮಿಗೆ5.70 ಲಕ್ಷ ಟನ್ ಒಪ್ಪಿಗೆ ಮಾಡಿಕೊಂಡಿದ್ದು, ಎಲ್ಲವನ್ನು ನುರಿಸುವ ಪ್ರಯತ್ನ ಮಾಡಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೌಡ್ಲೆ ಚನ್ನಪ್ಪ, ಸ್ವಾಮೀಗೌಡ, ಸುಂಡಹಳ್ಳಿ ಮಂಜುನಾಥ ಇತರರಿದ್ದರು.
Mandya
14 ಮಂದಿ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಿದ ಎಂ.ಎ.ಹಾಲಪ್ಪ
ಮದ್ದೂರು: ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ 14 ಮಂದಿ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು ಎಂದು ಯೋಜನಾಧಿಕಾರಿ ಎಂ.ಎ.ಹಾಲಪ್ಪ ತಿಳಿಸಿದರು.
ತಾಲೂಕಿನ ಆತಗೂರು ಹೋಬಳಿಯ ಯರಗನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ಗಳನ್ನು ವಿತರಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರಹೆಗ್ಗಡೆ ದಂಪತಿ ಆಶಯದಂತೆ ಆಸಹಾಯಕ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 1 ಸಾವಿರದಿಂದ 3 ಸಾವಿರದವರೆಗೆ ಮಾಶಾಸನ ನೀಡಲಾಗುತ್ತಿದೆ ಎಂದರು.
ಇದೇ ರೀತಿ ಮೂಲ ಸೌಕರ್ಯಗಳಿಂದ ವಂಚಿತರಾದ ಕುಟುಂಬಗಳಿಗೆ ವಾತ್ಸಲ್ಯ ಮನೆ, ಶೌಚಾಗೃಹ, ಸ್ನಾನಗೃಹ, ಮನೆ ರಿಪೇರಿ, ಸೋಲಾರ್ ವ್ಯವಸ್ಥೆ ಇತ್ಯಾದಿ ವ್ಯವಸ್ಥೆಗಳನ್ನು ಶ್ರೀ ಕ್ಷೇತ್ರದ ವತಿಯಿಂದ ಒದಗಿಸಿಕೊಡಲಾಗುತ್ತಿದೆ. ತಾಲೂಕಿನಲ್ಲಿ 81 ಫಲಾನುಭವಿಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡಲಾಗುತ್ತಿದೆ ಎಂದ ಅವರು, ರಾಜ್ಯದಾದ್ಯಂತ ಒಂದೇ ದಿನ ವಾತ್ಸಲ್ಯ ಕಿಟ್ ವಿತರಣೆ ನಡೆಯಿತು ಎಂದು ಹೇಳಿದರು.

ಮುಖಂಡರಾದ ರಾಮಕೃಷ್ಣ ಯರಗನಹಳ್ಳಿ, ಸಚಿನ್ ಯರಗನಹಳ್ಳಿ, ಪ್ರೀತಂ ಕದಲೂರು, ಮಂಜು ತಗ್ಗಳ್ಳಿ, ಸುಕನ್ಯಾ ಹೊಸಳ್ಳಿ, ಕೃಷ್ಣ ಕಿಳಘಟ್ಟ, ನಾಗರಾಜ್ ದೊಡ್ಡರಸಿನಕೆರೆ, ಚಿಕ್ಕೋನು ದೊಡ್ಡರಸಿನಕೆರೆ, ವೆಂಕಟೇಶ್ ಇದ್ದರು.
-
Chikmagalur22 hours agoವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
-
Hassan18 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Hassan20 hours agoರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
-
Kodagu18 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
State22 hours agoಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
-
Mandya19 hours agoಫೆ.28ಕ್ಕೆ ಮೈಸೂರು ಷುಗರ್ ಕಂಪನಿಯ ಸರ್ವ ಸದಸ್ಯರ ಸಾಮಾನ್ಯ ಸಭೆ : ಸಿ.ಡಿ.ಗಂಗಾಧರ್
-
Hassan1 hour agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
-
Hassan19 hours agoಮನೆಗಳ್ಳನ ಬಂಧನ : 140 ಗ್ರಾಂ.ಚಿನ್ನ ವಶ
