Connect with us

Mandya

60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್‌ ನೀರಾವರಿಗೆ ಬಿಡಿಗಾಸು ನೀಡಲಿಲ್ಲ: ಎಚ್‌ಡಿಕೆ

Published

on

ಮಂಡ್ಯ: ಕರ್ನಾಟಕ ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಕೇಂದ್ರದಲ್ಲಿ 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಒಂದು ಬಿಡಿಗಾಸನ್ನೂ ಕೊಟ್ಟಿಲ್ಲ, ಮೇಕೆದಾಟು ಅಣೆಕಟ್ಟೆ ಯೋಜನೆ ನಾಟಕವಾಡಿದ ರಾಜ್ಯದ ಕಾಂಗ್ರೆಸ್‌ ನಾಯಕರು ಕೈಚೆಲ್ಲಿ ಕುಳಿತಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಂಡ್ಯ ವಿಶ್ವವಿದ್ಯಾಲಯದ ಮೈದಾನದಲ್ಲಿ ಗುರುವಾರ ನಡೆದ ಜೆಡಿಎಸ್‌-ಬಿಜೆಪಿ ಮೈತ್ರಿಕೂಟದ ಸಮನ್ವಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

1972ರ ವರೆಗೂ ರಾಜ್ಯದಿಂದ 28ಕ್ಕೆ 28 ಸ್ಥಾನಗಳಲ್ಲೂ ಕಾಂಗ್ರೆಸ್ ಸಂಸದರನ್ನು ಕಳುಹಿಸಿದರೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿಲ್ಲ. ಹೋಗಲಿ ಕಾವೇರಿ ಸಮಸ್ಯೆಯನ್ನಾದರೂ ಬಗೆಹರಿಸಿದರಾ? ಅದೂ ಇಲ್ಲ, ನಾನು ಮೊದಲು ಮುಖ್ಯಮಂತ್ರಿಯಾದಾಗ ಮಂಡ್ಯ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ₹60 ಕೋಟಿ ನೀಡಿದೆ. ಲೋಕೋಪಯೋಗಿ, ಕಾವೇರಿ ನೀರಾವರಿ ನಿಗಮ ಕಚೇರಿ, ವಿದ್ಯುತ್ ಸಬ್‌ಸ್ಟೇಷನ್‌ಗಳು, ಪ್ರೌಢಶಾಲೆ, ಕೆಪಿಎಸ್ ಶಾಲೆಗಳು, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳನ್ನು ನೀಡಿದ್ದೇನೆ. ಇದು ಕಣ್ಣ ಮುಂದೆ ಇದ್ದರೂ ಇಂದು ನಮ್ಮಿಂದ ದೂರ ಹೋಗಿರುವ ಮಹಾನ್ ನಾಯಕರು ಈ ರಾಜ್ಯಕ್ಕೆ, ಮಂಡ್ಯ ಜಿಲ್ಲೆಗೆ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಕೊಡುಗೆ ಏನೆಂದು ಪ್ರಶ್ನೆ ಮಾಡುತ್ತಿದ್ದಾರೆ ವ್ಯಂಗ್ಯವಾಡಿದರು.

ನಾನು ಅಧಿಕಾರದಲ್ಲಿ ಇರದಿದ್ದರೂ ಮಂಡ್ಯ ಜಿಲ್ಲೆಯಲ್ಲಿ 200 ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪ್ರತಿಯೊಬ್ಬರ ಮನೆಗೆ ಭೇಟಿ, ವೈಯಕ್ತಿಕವಾಗಿ ಸಹಾಯ ಮಾಡಿ ಅವರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. 2018 ರಲ್ಲಿ ಪೂರ್ಣ ಬಹುಮತ ಇಲ್ಲದಿದ್ದರೂ ರೈತರಿಗೆ ಭರವಸೆ ನೀಡಿದಂತೆ ₹25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ, ದೆಹಲಿಯ ಕಾಂಗ್ರೆಸ್ ನಾಯಕರು ನೀವೇ ಮುಖ್ಯಮಂತ್ರಿ ಆಗಬೇಕೆಂದು ಒತ್ತಡ ಹಾಕಿದಾಗ ಅದಕ್ಕೆ ನಾನು ಒಪ್ಪಿದೆ. ರೈತರಿಗೆ ನಾನು ಭರವಸೆ ನೀಡಿದಂತೆ ಸಾಲ ಮನ್ನಾ ಮಾಡಲು ಹೋದಾಗ, ಅದು ಕಾಂಗ್ರೆಸ್‌ನ ಅಜೆಂಡಾ ಅಲ್ಲ, ಮೊದಲು ನಮ್ಮ ಭಾಗ್ಯಗಳನ್ನು ಈಡೇರಿಸಿ ಎಂದು ಸಾಲ ಮನ್ನಾ ಮಾಡಲು ಅಡ್ಡಿಪಡಿಸಿದರು. ಅದನ್ನು ಲೆಕ್ಕಿಸದೆ ಅವರ ಭಾಗ್ಯಗಳಿಗೂ ಹಣ ನೀಡಿ ಮಾತುಕೊಟ್ಟಂತೆ ರೈತರ ಸಾಲ ಮನ್ನಾ ಮಾಡಿದೆ ಎಂದು ತಿಳಿಸಿದರು.

ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡರ ಕೊಡುಗೆ ಏನು ಎಂದು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕರು ನೀರಾವರಿ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆಯಾದರೂ ಏನು? ಹೇಮಾವತಿ ದೇವೇಗೌಡರ ಹೋರಾಟದ ಫಲ, ಇದರಿಂದ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರದ ಕೆಲ ಪ್ರದೇಶ ಹಾಗೂ ಬಸರಾಳು ಪ್ರದೇಶದ ಜನಕ್ಕೆ ನೀರಾವರಿ ಸೌಲಭ್ಯ ದೊರೆತಿದೆ ತಿರುಗೇಟು ನೀಡಿದರು.

ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಮಾಡಿರುವುದಾದರೇನೆ ಎಂದರೆ, ಡ್ಯಾಂಗಳಲ್ಲಿರುವ ನೀರನ್ನೆಲ್ಲಾ ತಮಿಳುನಾಡಿಗೆ ಹರಿಸಿ ರೈತರ ಜಮೀನುಗಳಲ್ಲಿ ಇದ್ದ ಬೆಳೆ ಒಣಗಿಸಿದ್ದೀರಿ, ಮಳವಳ್ಳಿ, ಮದ್ದೂರು ಕೊನೆ ಭಾಗಕ್ಕೆ ನೀರು ಕೊಡುವ ಯೋಗ್ಯತೆ ನಿಮಗಿಲ್ಲ, ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆದಾಟಿನಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ನಡೆಸಿದ ಕಾಂಗ್ರೆಸ್‌ನ ಮಹಾನುಭಾವರು ಈಗ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಏತಕ್ಕಾಗಿ ಪಾದಯಾತ್ರೆ ಮಾಡಬೇಕಾಯಿತು ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಮೇಕೆದಾಟು ಯೋಜನೆಯನ್ನು ಮರೆತರು. ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸಿ ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶವನ್ನು ಬರಪೀಡಿತವಾಗಿ ಮಾಡಿದ್ದಾರೆ. ಇದೇನಾ ನಿಮ್ಮ ಕೊಡುಗೆ ಸಿದ್ದರಾಮಯ್ಯನವರೇ, ಕೆಆರ್‌ಎಸ್‌ನಲ್ಲಿ 85 ಅಡಿ ನೀರಿದ್ದರೂ ಒಣಗುತ್ತಿರುವ ಕಬ್ಬಿಗೆ ನೀರು ಕೊಡುತ್ತಿಲ್ಲ. ಕೃಷಿ ಸಚಿವರು ಭತ್ತ ನಾಟಿ ಮಾಡಬೇಡಿ ಎನ್ನುತ್ತಾರೆ. ಇಂತಹವರಿಂದ ರೈತರ ಉದ್ಧಾರ ಸಾಧ್ಯವೇ ಎಂದು ಹರಿಯಾಯ್ದರು.

ಭೀಕರ ಬರ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಮುಂದಾಗಿಲ್ಲ, ಪ್ರತಿ ಎಕರೆಗೆ ₹2 ಸಾವಿರ ಪರಿಹಾರ ನೀಡಲಾಗಿದೆ. ರೈತರೇನು ಭಿಕ್ಷುಕರಲ್ಲ. ಆದರೆ ಸರ್ಕಾರ ಮಾತ್ರ ಬರ ಪರಿಹಾರ ನೀಡಿದ್ದೇವೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದೆ, ರಾಜಕಾರಣದಲ್ಲಿ ಇಷ್ಟೊಂದು ಎತ್ತರಕ್ಕೆ ಬೆಳೆಸಿದ ಜನತೆಗೆ ದ್ರೋಹ ಮಾಡುವುದಿಲ್ಲ, ನಿಮಗೆ ದ್ರೋಹ ಮಾಡಿದರೆ ದೇವರಿಗೆ ದ್ರೋಹ ಮಾಡಿದಂತೆ ಎಂದೆಂದಿಗೂ ನಾನು ದ್ರೋಹ ಮಾಡುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಗೆ ದಲಿತರು ಬಲಿಯಾಗಬಾರದು, ಮುಸ್ಲಿಂ ಸಮುದಾಯಕ್ಕೆ ಸೂಕ್ತ ರಕ್ಷಣೆ ಅಗತ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಸುರಕ್ಷಿತ ರಕ್ಷಣೆ ದೊರಕಲಿದೆ. ದಲಿತರು ಮತ್ತು ಮುಸ್ಲಿಮರು ನಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು.

Continue Reading
Click to comment

Leave a Reply

Your email address will not be published. Required fields are marked *

Mandya

ಬಿದರಹಳ್ಳಿಹುಂಡಿ ಗ್ರಾಮದಲ್ಲಿ ಮಾನವ ಸರಪಳಿ ನಿರ್ಮಿಸಿ, ಡೆಂಗ್ಯೂ ಜಾಗೃತಿ

Published

on

ಶ್ರೀರಂಗಪಟ್ಟಣ : ಸ್ವಚ್ಚತೆ ಕಾಪಾಡಿ ಡೆಂಗ್ಯೂದಿಂದ ದೂರವಿರಿ.
ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಎಲ್ಲಿಯೂ ನೀರಿಲ್ಲದಂತೆ ನೋಡಿಕೊಂಡು ಜಾಗೃತಿ ವಹಿಸಿ,ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿದರೆ ಡೆಂಗ್ಯೂ ಜ್ವರವನ್ನು ನಿಯಂತ್ರಣ ಮಾಡಬಹುದಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರು ಹೇಳಿದರು.

ಅವರು ತಾಲೂಕಿನ ಮಹದೇವಪುರ ಆಯುಷ್ಮಾನ್ ಆರೋಗ್ಯ ಮಂದಿರ ವತಿಯಿಂದ ಬಿದರಹಳ್ಳಿಹುಂಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ನಡೆಸಿದ “ಡೆಂಗ್ಯೂ ನಿಯಂತ್ರಣ” ಕುರಿತಾಗಿ ಜಾಗೃತಿ ಜಾಥಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಡೆಂಗ್ಯೂ ವೈರಸ್ ಹೊತ್ತೊಯ್ಯುವ ಈಡಿಸ್ ಹೆಣ್ಣು ಸೊಳ್ಳೆ ಕಡಿತದಿಂದ ಡೆಂಗ್ಯೂ ಜ್ವರ ಕಾಣಿಸುತ್ತದೆ. ಈ ಸೊಳ್ಳೆ ಶುದ್ಧ ನೀರಿನಲ್ಲಿ ಉತ್ಪತ್ತಿ ಆಗುತ್ತಿದ್ದು, ಆದ ಕಾರಣ ಪರಿಕರಗಳನ್ನು ಮುಚ್ಚಿಟ್ಟು ಸೊಳ್ಳೆಗೆ ಶುದ್ಧ ನೀರು ಸಿಗದಂತೆ ನೋಡಿಕೊಂಡು ಹಾಗೆ ಮಲಗುವಾಗ ಸೊಳ್ಳೆ ಪರದೆ ಕಡ್ಡಾಯವಾಗಿ ಬಳಸಿಕೊಂಡು ಈ ಎಲ್ಲಾ ನಿಯಂತ್ರಣ ಕ್ರಮಗಳನ್ನು ಪಾಲಿಸಿ ಡೆಂಗ್ಯೂ ಕಾಯಿಲೆ ಓಡಿಸಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ನಂತರ ಆರೋಗ್ಯ ನೀರಿಕ್ಷಣಾಧಿಕಾರಿ ಎಂ.ಎನ್.ಕೃಷ್ಣೇಗೌಡ ಮಕ್ಕಳೊಂದಿಗೆ ಮಕ್ಕಳಾಗಿ “ಓಡಿಸಿ ಓಡಿಸಿ, ಸೊಳ್ಳೆ ಓಡಿಸಿ”, “ಓಡಿಸಿ ಓಡಿಸಿ,ಡೆಂಗ್ಯೂ ಜ್ವರ, ಓಡಿಸಿ” “ನಿಂತ ನೀರು ಸೊಳ್ಳೆಗಳ ತವರು” “ಕೀಟ ಚಿಕ್ಕದು,ಕಾಟ ದೊಡ್ಡದು” ಎಂಬ ಘೋಷಣೆಯೊಂದಿಗೆ ಸಾರ್ವಜನಿಕರಿಗೆ ಶಾಲಾ ಮಕ್ಕಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು.

ಈ ವೇಳೆ ಗ್ರಾಮ ಪಂಚಾಯತಿ ಸದಸ್ಯ ಅಣ್ಣಪ್ಪ ,ಮುಖ್ಯ ಶಿಕ್ಷಕಿ ಶುಭಾಂಗಿಣಿ, ಸಹ ಶಿಕ್ಷಕರಾದ ಸಂತೋಷ್, ಯಶೋಧ, ಅನುಷ,ಸಮುದಾಯ ಆರೋಗ್ಯ ಅಧಿಕಾರಿ ಶರತ್ ಕುಮಾರ,ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಶಿಕಲಾ, ಆಶಾ ಕಾರ್ಯಕರ್ತೆ ಸುಮಾ,ರತ್ನಮ್ಮ, ನೇತ್ರಾವತಿ,ಜ್ಯೋತಿ,ನೀರು ಗಂಟೆ ಸತೀಶ್ ಹಾಗೂ ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಸಾರ್ವಜನಿಕರು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Continue Reading

Mandya

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ ಮೂವರು ಆರೋಪಿಗಳ ಬಂದನ

Published

on

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪ ಕುಂದೂರು ಗ್ರಾಮದ ರಸ್ತೆಯಲ್ಲಿ ದಿನಾಂಕ 30-6-2024 ರಂದು ರಾತ್ರಿ ಸುಮಾರು 9.30 ಸಮಯದಲ್ಲಿ ದೊಡ್ಡ ಸೋಮನಹಳ್ಳಿ ಗ್ರಾಮದ ಕುಮಾರ್ ಮತ್ತು ಆತನ ಬಾಮೈದ ಬೋರಲಿಂಗಯ್ಯ ಬೈಕ್ ನಲ್ಲಿ ಹೋಗುವ ಸಂಧರ್ಭದಲ್ಲಿ ಮೂತ್ರ ವಿಸರ್ಜನೆ ಮಾಡಲೆಂದು ಬೈಕ್ ನಿಲ್ಲಿಸಿದ್ದಾರೆ ಅಲ್ಲಯೇ ರಸ್ತೆ ಬದಿಯಲ್ಲೇ ಮದ್ಯಾಪಾನ ಮಾಡುತ್ತಾ ಕುಳಿತಿದ್ದ ಮೂವರು ಅನಾಮಿಕ ಆಸಾಮಿಗಳು ಮದ್ಯಪಾನದ ನಿಶೆಯಲ್ಲಿ ವಿನಾ ಕಾರಣ ಗಲಾಟೆ ಮುಂದಾಗಿದ್ದಾರೆ ಅಲ್ಲಿಯೇ ಇದ್ದ ಬಿಯರ್

ಬಾಟೇಲ್ ನಲ್ಲಿ ಬೋರಲಿಂಗಯ್ಯನ ಮತ್ತು ಕುಮಾರ್ ಎಂಬುವವರ ಮೇಲೆ ಮಾರಣಂತಿಕ ಹಲ್ಲೆ ನೆಡೆಸಿದ್ದು ಈ ವಿಚಾರವಾಗಿ ಕಿಕ್ಕೇರಿ ಪೋಲೀಸರು ದೂರು ಧಾಖಲಾಗಿತ್ತು‌. ಯಾವುದೇ ಪರಿಚನೇ ಇಲ್ಲದೆ ರಸ್ತೆಯಲ್ಲಿ ಹೋಗುತ್ತಿರುವರ ಮೇಲೆ ಕುಡಿದ ಮತ್ತಿನಲ್ಲಿ ಹಲ್ಲೆ ನೆಡಿಸಿರುವ ಹಲ್ಲೆ ಕೋರರನ್ನು ಯಾರೆಂದು ಪತ್ತೆ ಹಚ್ಚಿ ಬಂದಿಸುವಲ್ಲಿ ಯಶಸ್ವಿಯಾಗಿಗಿದ್ದಾರೆ..

ಮೂವರು ಆರೋಪಿಗಳು ಸ್ನೇಹಿತರಾಗಿದ್ದು ತಾಲ್ಲೂಕಿನ ಅಣೇಚಾಕನಹಳ್ಳಿ ಗ್ರಾಮದ ಸುದೀಪ, ಅಲೀಯಾಸ್ ಸುದಿ, ಗಂಗನಹಳ್ಳಿ ಗ್ರಾಮದ ನಾಗರಾಜು, ಕುಂದೂರು ಗ್ರಾಮದ ಲಕ್ಷ್ಮಣ್ ಅಲಿಯಾಸ್ ಬೀರ ಇವರು ಅಂದು ಕುಡಿತ ಮತ್ತಿನಲ್ಲಿ ಹಲ್ಲೆ ನೆಡೆಸಿ ಬೆಂಗಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು ಕಳೆದ ಒಂದುವಾರದಿಂದ ಇವರ ಪತ್ತೆಗಾಗಿ ಕಿಕ್ಕೇರಿ ಪೋಲೀಸ್ ಠಾಣೆಯ ಇನ್ ಇನ್ಸ್ಪೆಕ್ಟರ್ ರೇವತಿ, ಸಿಬ್ಬಂದಿಗಳಾದ ವಿನೋಧ್, ಕುಮಾರ್, ಬಂದಿಸಿ ನ್ಯಾಯಾಲಯದ ಬಂದನಕ್ಕೆ ಒಪ್ಪಿಸಿದ್ದಾರೆ…

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

Continue Reading

Mandya

ಮದ್ದೂರು ತಾಲೂಕಿನ ಸೋಮನಹಳ್ಳಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮೋ ಪ್ರವೇಶ ಆರಂಭ*

Published

on

*ಮದ್ದೂರು ತಾಲೂಕಿನ ಸೋಮನಹಳ್ಳಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿnnnnn

ಮಂಡ್ಯ : ಮದ್ದೂರು ತಾಲೂಕಿನ ಸೋಮನಹಳ್ಳಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮೋ ಪ್ರವೇಶ ಆರಂಭವಾಗಿದೆ ಎಂದು ತರಬೇತಿ ಕೇಂದ್ರದ ಉಪನ್ಯಾಸಕ ಶಾಂತರಾಜ ಅರಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ಡೆನ್ಮಾರ್ಕ್ ಸರಕಾರದಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ಸ್ಥಾಪನೆಗೊಂಡಿರುವ ಈ ಕೇಂದ್ರ ಪ್ರಸ್ತುತ 33 ಶಾಖೆಗಳನ್ನು ರಾಜ್ಯಾದ್ಯಂತ ಹೊಂದಿದೆ ಎಂದು ತಿಳಿಸಿದರು .

ಈಗಾಗಲೇ 800 ವಿದ್ಯಾರ್ಥಿಗಳು ತರಬೇತಿ ಪಡೆದು ಉನ್ನತ ಹುದ್ದೆಗಳಲ್ಲಿ ನೇಮಕಗೊಂಡು ಸ್ವಂತ ಉದ್ಯಮವನ್ನು ಕೂಡ ಆರಂಭಿಸಿದ್ದಾರೆ ಎಂದು ತಿಳಿಸಿದರು.

2024 25ನೇ ಸಾಲಿನಲ್ಲಿ ಪ್ರವೇಶ ಆರಂಭಿಸಲಾಗಿದ್ದು ಎಸ್ ಎಸ್ ಎಲ್ ಸಿ ಮತ್ತು ಐಟಿಐ ಹಾಗೂ ಪಿಯುಸಿ ತೇರ್ಗಡೆಯಾದವರು ಪ್ರವೇಶ ಪಡೆಯಬಹುದಾಗಿದೆ ಎಂದರು .

ಮತ್ತೊಬ್ಬ ಉಪನ್ಯಾಸಕ ನರೇಂದ್ರಬಾಬು ಮಾತನಾಡಿ, ಡಿಪ್ಲೋಮೋ ಇನ್ ಟೂಲ್ ಮತ್ತು ಡೈ ಮೇಕಿಂಗ್ ಕೋರ್ಸ್ಗೆ ನೇರ ಪ್ರವೇಶಾತಿ ಲಭ್ಯವಿದ್ದು ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಗೋಷ್ಠಿಯಲ್ಲಿ ತರಬೇತಿ ಕೇಂದ್ರದ ಪ್ರಾಂಶುಪಾಲ ಶಿವಕುಮಾರ್, ಉಪನ್ಯಾಸಕ ಸಿದ್ದಾರ್ಥ ಉಪಸ್ಥಿತರಿದ್ದರು.

Continue Reading

Trending

error: Content is protected !!