Hassan
ಜೆಡಿಎಸ್ ಮುಖಂಡರಿಗೆ, ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಲು ಶೀಘ್ರದಲ್ಲಿಯೇ ಹೆಚ್.ಡಿ. ರೇವಣ್ಣ ನೇತೃತ್ವದಲ್ಲಿ ಬೃಹತ್ ಸಮಾವೇಶ: ಹೆಚ್.ಡಿ ಕುಮಾರಸ್ವಾಮಿ
ಹಾಸನ: ಲೋಕಸಭೆ ಚುನಾವಣೆ ವೇಳೆ ಮತ್ತು ನಂತರ ಅದ ಬೆಳವಣಿಗೆ ಬಗ್ಗೆ ಕಾರ್ಯಕರ್ತರಲ್ಲಿ ನಿರಾಸೆ ಮೂಡಿದ್ದು, ಜಿಲ್ಲೆಯ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ನೈತಿಕ ಸ್ಥೆರ್ಯ ತುಂಬಲು ಹೆಚ್.ಡಿ. ರೇವಣ್ಣ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನಗರದ ರಿಂಗ್ ರಸ್ತೆ ಬಳಿ ಇರುವ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುಮಾರಣ್ಣ ಹಾಸನ ಜಿಲ್ಲೆಗೆ ಬರಬೇಕೆಂದು ಕಾರ್ಯಕರ್ತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಲಾಪ ಮುಗಿದ ನಂತರ ಹಾಸನದಲ್ಲಿ ರೇವಣ್ಣ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಲು ಯೋಚಿಸಿದ್ದೇನೆ. ಕಳೆದ ಲೋಕಸಭಾ ಚುನಾವಣೆ ನಂತರ ಪ್ರಥಮ ಬಾರಿಗೆ ಹಾಸನ ಜಿಲ್ಲೆಯಲ್ಲಿ ಆಗಿರುವ ಅನಾಹುತ ನೋಡಲು ಬಂದಿದ್ದೇನೆ. ಚುನಾವಣೆ ಫಲಿತಾಂಶ ನಂತರ, ಚುನಾವಣೆ ಆಸುಪಾಸಿನಲ್ಲಿ ಕೆಲವು ಅಹಿತರಕರ ಘಟನೆಗಳು ಪಕ್ಷದ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ನಿರಾಸೆ ಮೂಡಿಸಿವೆ ಎಂದು ಬೇಸರವ್ಯಕ್ತಪಡಿಸಿದರು. ಮುಂದೆ ಹಾಸನ ಜಿಲ್ಲೆಯ ಕಾರ್ಯಕರ್ತರಿಗೆ ನೈತಿಕ ಸ್ಥೆರ್ಯ ತುಂಬಲು ಬರುತ್ತೇನೆ. ಹಾಸನದಲ್ಲಿ ಬೃಹತ್
ಸಮಾವೇಶ ಮಾಡುವಂತೆ ಶಾಸಕರ ಒತ್ತಾಯ ಇದೆ. ರೇವಣ್ಣ ಅವರ ನೇತೃತ್ವದಲ್ಲಿ ಶಾಸಕರುಗಳನ್ನೊಳಗೊಂಡು ನಾನು ಸೇರಿ ಪಕ್ಷ ಸಂಘಟನೆ ಮಾಡುತ್ತೇವೆ. ಈ ಜಿಲ್ಲೆಯ ಜನರ ಋಣವನ್ನು ತೀರಿಸುತ್ತೇವೆ. ಈಗ ರೇವಣ್ಣ ಅವರ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿವೆ. ಆದರೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಯಾರೂ ಮರೆಯುವಂತಿಲ್ಲ. ಎಲ್ಲರಿಗಿಂತ ಒಂದು ಹೆಜ್ಜೆ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ. ಬೆಂಗಳೂರಿನ ಮದರ್ ಡೇರಿ ಮೀರಿಸುವ ರೀತಿಯಲ್ಲಿ ಹಾಸನದಲ್ಲಿ ಮೆಗಾ ಡೇರಿ ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿನ ರೈತರಿಗೆ ಆರ್ಥಿಕ ಶಕ್ತಿ ತುಂಬಲು ಅದನ್ನು ಮಾಡುತ್ತಿದ್ದಾರೆ ಎಂದರು. ನಾಳೆಯಿಂದ ಅಧಿವೇಶನ ಪ್ರಾರಂಭ ಆಗುತ್ತಿದ್ದು, ಮುಂದಿನ ದಿನ ಜಿಲ್ಲೆಯಲ್ಲಿ ರೇವಣ್ಣನವರ ನೇತೃತ್ವದಲ್ಲೇ ಒಂದು ದೊಡ್ಡ ಸಮಾವೇಶ ಮಾಡುತ್ತೇವೆ. ರೇವಣ್ಣನವರು ಜಿಲ್ಲೆಗೆ ನಮ್ಮೆಲ್ಲರಿಗಿಂತಲೂ ಹೆಚ್ಚು ಶ್ರಮ ಹಾಕಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಮದರ್ ಡೈರಿಯನ್ನೂ ಮೀರಿಸುವ ನಿಟ್ಟಿನಲ್ಲಿ ಹಾಸನದ ಡೈರಿ ಅಭಿವೃದ್ಧಿ ಮಾಡಿದ್ದು, ರೇವಣ್ಣನವರ ನೇತೃತ್ವದಲ್ಲೇ ಮುಂದಿನ ಹೋರಾಟ ಮಾಡುತ್ತೇವೆ. ನಾನೂ ಕೂಡ ಈ ಜಿಲ್ಲೆಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತೇನೆ. ನಮ್ಮ ತಾಯಿ ಮತ್ತು ತಂದೆಯವರು ಶಿವನ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದಾರೆ. ಅವರ ಆಶೀರ್ವಾದಿಂದ ನಾವು
ಬೆಳೆದಿದ್ದೇವೆ. ನಮ್ಮ ಕುಟುಂಬವನ್ನು ಮುಗಿಸಲೇ ಬೇಕು ಎಂದು ಹೋದರು. ಆದ್ರೆ ಅವರ ಆಶೀರ್ವಾದ ನಮ್ಮನ್ನ ಕಾಪಾಡಿದೆ ಎಂದು ನೆನಪಿಸಿಕೊಂಡರು. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಲವಾರು ಯೋಜನೆಗಳನ್ನ ತರುವ ವ್ಯವಸ್ಥೆ ಆಗುತ್ತಿದೆ. ಕೇಂದ್ರದಲ್ಲಿ ನನಗೂ ಎರಡು ಜವಾಬ್ದಾರಿ ನೀಡಿದ್ದಾರೆ. ಆರ್ಥಿಕ ಸಮಿತಿ, ನೀತಿ ಆಯೋಗದ ಸದಸ್ಯನಾಗಿ ನೇಮಿಸಿದ್ದಾರೆ. ಇದೆಲ್ಲದರ ಜೊತೆ ನಾನು ಪ್ರಾಮಾಣಿಕವಾಗಿ ಜನರಿಗೆ ಕೆಲಸ ಮಾಡುತ್ತೇನೆ. ದೇವೇಗೌಡರ ಮೇಲಿನ ವಿಶ್ವಾಸ ಮತ್ತು ನಾನು ಮುಖ್ಯಮಂತ್ರಿ ಆಗಿ ಮಾಡಿದ ಕೆಲಸ ಗಮನಿಸಿ ಅಧಿಕಾರ ನೀಡಿದ್ದಾರೆ. ದೇವೇಗೌಡರ ನಿರೀಕ್ಷೆ ಮತ್ತು ರಾಜ್ಯದ ಜನರ ಒಳಿತಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ದೊಡ್ಡ ಮಟ್ಟದ ಮಳೆ ಹಿನ್ನಲೆ ಜಿಲ್ಲೆಯಲ್ಲಿ ಅನೇಕ ರೀತಿ ಅನಾಹುತ ಆಗಿದ್ದು, ಶಿರಾಡಿ ಘಾಟ್ ರಸ್ತೆಯಲ್ಲಿ ಅವೈಜ್ಞಾನಿಕ ಕಳಪೆ ಕಾಮಗಾರಿಯನ್ನ ಗಮನಿಸಿದ್ದೇನೆ. ಲೋಕಸಭೆ ಚುನಾವಣೆ ನಂತರ ಮೊದಲ ಬಾರಿಗೆ ಜಿಲ್ಲೆಗೆ ಬಂದಿದ್ದೇನೆ. ಚುನಾವಣೆ ಫಲಿತಾಂಶ ಮತ್ತು ನಂತರ ನಡೆದ ಅಹಿತಕರ ಘಟನೆಯಿಂದ ಜಿಲ್ಲೆಯ ಕಾರ್ಯಕರ್ತೆಲ್ಲಿ ಮತ್ತು ಜನರಲ್ಲಿ ನಿರಾಸೆ ಉಂಟಾಗಿದೆ. ದೇವೇಗೌಡರ ರಾಜಕೀಯದಲ್ಲಿ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಕೆಂಪು ಕೋಟೆ ಮೇಲೆ ಬಾವುಟ ಹಾರಿಸುವ ಶಕ್ತಿ ಕೊಟ್ಟವರು ಹಾಸನದ ಜನತೆ. ನಮ್ಮ ಬದುಕು ಇರುವವರೆಗೂ ಅದನ್ನ ಮರೆಯೋದಕ್ಕೆ ಸಾಧ್ಯವಿಲ್ಲ. ಈಗ ಈ ಬೆಳವಣಿಗೆ ಏನು ಆಗಿದೆ, ಆದ ನಂತರ ಕುಮಾರಣ್ಣ ಜಿಲ್ಲೆಗೆ ಬರಬೇಕು ಎಂಬ ನಿರೀಕ್ಷೆ ಜನರು ಇಟ್ಟುಕೊಂಡಿದ್ದಾರೆ. ಇಂದು ನಾನು ಜಿಲ್ಲೆಯಲ್ಲಿ ಆಗಿರುವ ಅನಾಹುತಗಳ ವೀಕ್ಷಣೆಗೆ ಮಾತ್ರ ಬಂದಿದ್ದೇನೆ. ಕೇಂದ್ರ ಸಾರಿಗೆ ಸಚಿವರ ಜೊತೆಗೂಡಿ ಹಾಸನಕ್ಕೆ ಬರಬೇಕು ಎಂಬ ಉದ್ದೇಶ ಕೂಡ ಹೊಂದಿದ್ದೇನೆ. ಈ ರಸ್ತೆಯನ್ನ ಸುರಂಗ ಮಾರ್ಗದ ಮುಖಾಂತರ ಆಗಬೇಕು ಎಂಬ ಪ್ರಸ್ತಾಪ ಇತ್ತು. ಅರಣ್ಯ ಇಲಾಖೆಯ ತೊಡಕುಗಳು ಇವೆ ಅದರ ಬಗ್ಗೆಯೂ ಚರ್ಚಿಸುತ್ತೇನೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ಅವರು, ಪಾಪ ಕನಕಪುರದವರು ಬ್ರಾಂಡ್ ಬೆಂಗಳೂರು ಮಾಡುವವರು ಹೇಳ್ತಾರೆ, ಕುಮಾರಸ್ವಾಮಿ ೩೯ ಸೀಟ್ ಗೆದ್ದರು ಮುಖ್ಯಮಂತ್ರಿ ಮಾಡಿದ್ವಿ. ದೇವೇಗೌಡರು ೧೬ ಸೀಟ್ ಗೆದ್ದರು ಪ್ರಧಾನಮಂತ್ರಿ ಮಾಡಲಾಯಿತು ಅಂತ ಹೇಳವ್ರೆ. ಆದರೆ ಸರ್ಕಾರವನ್ನು ತೆಗೆದವರು ಯಾರು ಎಂದು ಹೇಳಬೇಕಲ್ವಾ? ನಿಮ್ಮ ಮನೆ ಬಾಗಿಲಿಗೆ ನಾನು, ದೇವೇಗೌಡರು ಬಂದಿದ್ವಾ! ದೇವೇಗೌಡರನ್ನು ಪ್ರಧಾನಮಂತ್ರಿ ಮಾಡಿದ್ದು ಕಮ್ಯೂನಿಸ್ಟ್ ಹಾಗೂ ಇತರರು. ಒಬ್ಬ ಕನ್ನಡಿಗನನ್ನು ತೆಗೆದವರು ಯಾರು? ನಾನು ಏನು ತಪ್ಪು ಮಾಡಿದೆ ಅಂತ ಸರ್ಕಾರ ತೆಗೆದರು. ದಲಿತರು ಅಂತ ಕರೆಯಬೇಡಿ ಎಂದು ಚರ್ಚೆ ನಡೆದಿದೆ. ಅಹಿಂದ ಅಂತಾ ಎಷ್ಟು ವರ್ಷದಿಂದ ಹೆಸರು ಇಟ್ಟುಕೊಂಡಿದ್ದೀರಾ! ಅಹಿಂದ ಹೆಸರು ಇಟ್ಟುಕೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅವಮಾನ ಮಾಡುತ್ತಿದ್ದೀರಾ, ಅವರಿಗೆ ಮೀಸಲಿಟ್ಟಿದ್ದ ಹಣ ಉಪಯೋಗಿಸಿಕೊಂಡಿದ್ದೀರಿ. ದಾನ-ಧರ್ಮ ಮಾಡಿ ಬಂದವರಂತೆ ಇವರು ಬಹಳ ನೀತಿವಂತರು. ಕುಮಾರಸ್ವಾಮಿ ಇಲ್ಲಿ ಏಕೆ ಬರ್ತಾನೆ ಉಪಮುಖ್ಯಮಂತ್ರಿ ಅಂತಾರೆ. ಮಿಲಿಟರಿ ಕರ್ಕಂಡು ಬಂದವ್ರಾ ಅಂತಾರೆ, ಇಲ್ಲಿಗೆ ಮಿಲಿಟರಿ ಬರುವ ಕಾಲನೂ ಬರುತ್ತೆ.ಆವರು ಏಕೆ ಆ ರೀತಿ ಹೇಳಿಕೆ ಕೊಟ್ಟರು ಅಂತ ಯೋಚನೆ ಮಾಡಿದ್ದು, ದರೋಡೆ ಮಾಡುವುದನ್ನು ನಿಲ್ಲಿಸಲು ಮಿಲಿಟರಿ ಕರೆದುಕೊಂಡು ಬನ್ನಿ ಎಂದಿದ್ದಾರೆ. ಮಿಲಿಟರಿ ಬರುವ ಕಾಲ ಬರುತ್ತೆ, ಆಗ ಕರೆದುಕೊಂಡು ಬರೋಣ ಎಂದು ಟಾಂಗ್ ನೀಡಿದರು.
ಇದೆ ವೇಳೆ ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ, ಎ. ಮಂಜು, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಲಕ್ಷ್ಮಣ್, ಮಾಧ್ಯಮ ವಕ್ತಾರ ಹೊಂಗೆರೆ ರಘು, ಸ್ವಾಮಿಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
Hassan
ವಿವಿಧ ಹಗರಣಗಳಿಂದಲೇ ಕಾಂಗ್ರೆಸ್ ಸರಕಾರ ಶೀಘ್ರದಲ್ಲೆ ಪಥನ ಕೇಂದ್ರದ ಮಂತ್ರಿಗಳಿಂದ ಬೀಳಿಸುವ ಅವಶ್ಯಕತೆ ಇಲ್ಲ: ಆರ್. ಅಶೋಕ್
ಹಾಸನ : ರಾಜ್ಯ ಸರಕಾರವನ್ನು ಬೀಳಿಸಲು ಕೇಂದ್ರದಿಂದ ಐದು ಜನ ಮಂತ್ರಿಗಳು ಬಂದಿದ್ದಾರೆ ಎಂದು ಹೇಳಲಾಗುತ್ತಿದು, ಆದರೇ ಎಲ್ಲಾ ಹಗರಣಗಳಿಂದಲೇ ಕಾಂಗ್ರೆಸ್ ಸರಕಾರವು ಬಿದ್ದು ಹೋಗುವಾಗ ಕೇಂದ್ರದ ಸಚಿವರು ಬೀಳಿಸುವ ಅವಶ್ಯಕತೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಭಾನುವಾರದಂದು ಮಾಧ್ಯಮದೊಂದಿಗೆ ಮಾತನಾಡಿ, ಸಕಲೇಶಪುರ ಭಾಗದಲ್ಲಿ ಹೆಚ್ಚಾಗಿ ಭೂಕುಸಿತವಾಗಿದ್ದು, ಮನೆ ಬಿದ್ದ ಕಡೆ ಭೇಟಿ ಮಾಡಿದ್ದೀನಿ. ಕಾಫಿ ಕೊಳೆಯುತ್ತಿರುವುದನ್ನು ನೋಡಿದ್ದೀನಿ. ಹಾನಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಭೇಟಿ ಮಾಡಿ ಪರಿಹಾರ ಕೊಟ್ಟಿರಿವುದು ಕಂಡಿಲ್ಲ. ಮುಖ್ಯಮಂತ್ರಗಳಂತೂ ಹೋಗಿಲ್ಲ, ಇವತ್ತು ಹೋಗಿದ್ದಾರೆ. ನಾನು ಕಂದಾಯ ಮಂತ್ರಿಯಾಗಿದ್ದಾಗ ೨೪ ಗಂಟೆಯೊಳಗೆ ಪರಿಹಾರ ಕೊಟ್ಟಿದ್ದೇವೆ. ಮನೆಗೆ ಒಳಗೆ ನೀರು ನುಗ್ಗಿದವರಿಗೆ ಸ್ಥಳದಲ್ಲೆ ಹತ್ತು ಸಾವಿರ ಪರಿಹಾರ ಕೊಟ್ಟಿದ್ದೇವೆ. ನಾಲ್ಕು ವರ್ಷವೂ ಬಾರಿ ಮಳೆಯಾಗಿದ್ದು, ಆದರೆ ಇವರು ಐದು ಸಾವಿರ ಮಾತ್ರ ಕೊಡುತ್ತಿದ್ದಾರೆ. ಎನ್‌ಡಿಆರ್‌ಎಫ್ ಹಣ ಮಾತ್ರ ಕೊಡುತ್ತಿದ್ದಾರೆ. ಹತ್ತು ಸಾವಿರ ರೂ ಕೊಡಲೇಬೇಕು. ಮನೆ ಬಿದ್ದವರಿಗೆ
ಎನ್‌ಡಿಆರ್‌ಎಫ್ ಗೈಡ್‌ಲೈನ್ಸ್ ಪ್ರಕಾರ ೯೫ ಸಾವಿರ ಕೊಡುತ್ತಾರೆ. ನಾವು ೯೫ ಸಾವಿರಕ್ಕೆ ಸೇರಿಸಿ ಐದು ಲಕ್ಷ ಕೊಟ್ಟಿದ್ದೇವೆ. ಈ ಸರ್ಕಾರದಲ್ಲಿ ಇದುವರೆಗೂ ಯಾವ ಪರಿಹಾರ ಕೊಟ್ಟಿಲ್ಲ. ಈ ಸರ್ಕಾರ ಐದು ಲಕ್ಷ ರೂ ಪರಿಹಾರ ಕೊಡಬೇಕು. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಅಸಮಧಾನವ್ಯಕ್ತಪಡಿಸಿದರು. ಈಗ ವಾಲ್ಮೀಕಿ ನಿಗಮದಲ್ಲಿ ೧೮೭ ಕೋಟಿ ಹಗರಣ ಪ್ರಸ್ತಾಪ ಮಾಡಿದ್ದೇವೆ. ಈಗ ಏಕಾಏಕಿ ಮಳೆ ವಿಚಾರ ಪ್ರಸ್ತಾಪ ಬಂದಿದೆ. ಸೋಮವಾರ ಮನೆಹಾನಿ ಬಗ್ಗೆ ನಿಲುವಳಿ ಸೂಚನೆ ತರುತ್ತೇವೆ. ಸರ್ಕಾರ ಮಳೆ ಹಾನಿ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಆಗುತ್ತಿಲ್ಲ. ಸರ್ಕಾರ ಪಾಪರ್ ಆಗಿದೆ, ಹಾಲಿನ ಸಬ್ಸಿಡಿ ಇನ್ನು ಕೊಟ್ಟಿರುವುದಿಲ್ಲ. ಸಂಬಳ ಕೊಡಲು ಯೋಚನೆ ಮಾಡುತ್ತಿದ್ದಾರೆ. ಹುಡುಕಿ, ಹುಡುಕಿ ಟ್ಯಾಕ್ಸ್ ಹಾಕುತ್ತಿದ್ದಾರೆ. ಓಟಿಟಿಯಲ್ಲಿ ಸಿನಿಮಾ ನೋಡುವವರ ಮೇಲೂ ಟ್ಯಾಕ್ಸ್ ಹಾಕಲು ಹೊರಟಿದ್ದಾರೆ. ಎಕರೆಗೆ ಹದಿಮೂರು ಸಾವಿರದಿಂದ ಮೂವತ್ತು ಸಾವಿರದವರೆಗೂ ನಾವು ಪರಿಹಾರ ಕೊಟ್ಟಿದ್ದೇವು. ಈ ಸರ್ಕಾರ ಇನ್ನೂ ಏನು ನಿರ್ಧಾರ ಮಾಡಿಲ್ಲ. ಬೆಳೆ ಪರಿಹಾರ ತುರ್ತಾಗಿ ಕೊಡಬೇಕು. ನಾನು, ಕುಮಾರಸ್ವಾಮಿ ಒಟ್ಟಿಗೆ ಭೇಟಿ ನೀಡಿದ್ದು, ವಿಜಯೇಂದ್ರ ಎಲ್ಲರೂ ಪ್ರವಾಸ ಮಾಡುತ್ತಿದ್ದಾರೆ ಎಂದರು.
ಈ ಸರ್ಕಾರದಲ್ಲಿ ಬರೀ ಹಗರಣಗಳು ಬೆಳಕಿಗೆ ಬರುತ್ತಿದೆ. ಎಲ್ಲಾ ಹಗರಣಗಳು ದಲಿತರಿಗೆ ಸೇರಬೇಕಿದ್ದ ಹಣ ಆಗಿದೆ. ವಾಲ್ಮೀಕಿ, ಎಸ್‌ಟಿಪಿ, ಟಿಎಸ್‌ಪಿ ಹಣ ಉಪಯೋಗ, ಮುಡಾ ಹಗರಣ ಸೇರಿ ಎಲ್ಲಾ ಹಗರಣಗಳು ದಲಿತರಿಗೆ ಮಾಡಿರುವ ಮೋಸಗಳೇ ಆಗಿದ್ದು, ಹಗರಣಗಳು ಹೊರ ಬಂದ ಮೇಲೆ ಸಿದ್ದರಾಮಯ್ಯ ಅವರು ಮೌನವಾಗಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಶಾಪ ತಟ್ಟಿದೆ! ಈ ಸರ್ಕಾರ ದಲಿತ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ಈ ಸರ್ಕಾರವು ಕೋಮಾ ಸ್ಟೇಜ್‌ನಲ್ಲಿದೆ. ಕೆಲಸನೂ ಮಾಡುತ್ತಿಲ್ಲ, ಸುಮ್ಮನೇನೂ ಇರುತ್ತಿಲ್ಲ. ವಾಲ್ಮೀಕ ಅಭಿವೃದ್ಧಿ ನಿಗಮದ ಹಣ ತೆಲಂಗಾಣ ಎಲೆಕ್ಷನ್ ಹೋಗಿದೆ. ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಸುಳ್ಳು ಜಾಹೀರಾತು ಕೊಟ್ಟಿದ್ದಕ್ಕೆ ನಾವು ಕೇಸ್ ಹಾಕಿದ್ವಿ. ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಡಿ.ಕೆ.
ಶಿವಕುಮಾರ್ ಮೂರು ಜನ ಬೇಲ್‌ನಲ್ಲಿದ್ದಾರೆ. ಸರ್ಕಾರ ಇನ್ನಷ್ಟು ದಿನ ಇರುತ್ತದೆ. ಈ ಹಗರಣಗಳೆಲ್ಲ ನೋಡಿದರೆ ಸರ್ಕಾರ ಇರುವುದಿಲ್ಲ ಎಂದು ಅವರ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಕೇಂದ್ರದಿಂದ ಐದು ಮಂತ್ರಿಗಳು ಸರ್ಕಾರ ಬೀಳಿಸಲು ಬಂದಿದ್ದಾರೆ ಅಂತಾರೆ. ಮುಂದೆ ಆಗುವುದಕ್ಕೆ ಮೊದಲೇ ಕೇವಿಯಟ್ ಹಾಕಿದ್ದಾರೆ. ಈ ಎಲ್ಲಾ ಹಗರಣಗಳಿಂದ ಸರ್ಕಾರ ಹೋಗುತ್ತದೆ. ಕೇಂದ್ರ ಮಂತ್ರಿಗಳು ಬೀಳಿಸಬೇಕಿಲ್ಲ. ಹದಿನೈದು ತಿಂಗಳಾಯ್ತು ಅವರು ಮಾಡಿರುವ ಆರೋಪಗಳ ಬಗ್ಗೆ ಏಕೆ ತನಿಖೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್‌ನವರದ್ದು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದು, ಐವತ್ತು ವರ್ಷ ಕಾಂಗ್ರೆಸ್‌ನವರು ದೇಶದಲ್ಲಿ ಲೂಟಿ ಹೊಡೆದಿದ್ದಾರೆ. ಕಾಂಗ್ರೆಸ್‌ನವರೇ ಭ್ರಷ್ಟಾಚಾರದ ಪಿತಾಮಹ ಎಂದ ಅವರು, ೧೮೭ ಕೋಟಿ ಹಗರಣ ನುಂಗಲಾರದ ತುತ್ತಾಗಿದ್ದು, ಅದರಿಂದ
ಬಚಾವ್ ಆಗಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿ ಸಿಡಿಮಿಡಿಗೊಂಡರು. ಇನ್ನು ನಡೆಯುತ್ತಿರುವ ಅದಿವೇಶದ ಮುಂದುವರೆದ ಭಾಗದಲ್ಲಿ ನಾವುಗಳು ಕಾಂಗ್ರೆಸ್ ನ ಎಲ್ಲಾ ಭ್ರಷ್ಟಾಚಾರ ಹಾಗೂ ಮಳೆಯಿಂದ ನಷ್ಟವಾಗಿರುವ ಬಗ್ಗೆ ಧ್ವನಿ ಎತ್ತಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದೇಶ್ ನಾಗೇಂದ್ರ, ಶಾಸಕ ಸಿಮೆಂಟ್ ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಹರ್ಷಿತ್, ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Hassan
ದಿವಂಗತ ಅಪರ್ಣಾರಿಗೆ ಶ್ರದ್ಧಾಂಜಲಿ
ಹಾಸನ: ನಗರದ ಸಿಟಿ ಬಸ್ ನಿಲ್ದಾಣ ಹಿಂಬಾಗದ ಕಟ್ಟಡವೊಂದರಲ್ಲಿ ಎ ಅಂಡ್ ಕೆ ಮ್ಯೂಸಿಕಲ್ ವತಿಯಿಂದ ಗಾನಕೋಗಿಲೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಭಿಮಾನಿ ಬಳಗ ಇವರ ಸಂಯುಕ್ತಾಕ್ಷರದಲ್ಲಿ ಅಪ್ಪಟ ಕನ್ನಡತಿ ಹಾಗೂ ಚಿತ್ರನಟಿ ಖ್ಯಾತ ನಿರುಪಕಿಯಾದಂತಹ ಶ್ರೀಮತಿ ಅಪರ್ಣಾ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಕಲಾವಿದರ ಸಂಘದ ಜಿಲ್ಲಾಧ್ಯಕ್ಷರಾದ ಕುಮಾರ್ ನೇತೃತ್ವದಲ್ಲಿ ಭಾನುವಾರದಂದು ಕಾರ್ಯಕ್ರಮ ಆಯೋಜಿಸಲಾಗಿತ್ತು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕುಮಾರ್ ಮಾತನಾಡಿ ಅಪ್ಪಟ ಕನ್ನಡತಿ ಅಪರ್ಣಾ ರವರ ಸಾಧನೆ ಬಗ್ಗೆ ಮಾತನಾಡಿ, ಸಾಹಿತಿ ಕುವೆಂಪು, ಕಲಾವಿದ ಡಾ. ರಾಜಕುಮಾರ್, ಪುನಿತ್ ರಾಜಕುಮಾರ್ ನಂತರ ಅತ್ಯುತ್ತಮವಾಗಿ ನಿರ್ಗಳವಾಗಿ ಮಾತನಾಡುವ ಏಕೈಕ ಮಹಿಳೆ ಎಂದರೆ ಅದು ಅಪರ್ಣ ಎಂದು ನಾಡಿನ ಜನ ಮಾತನಾಡುತ್ತಾರೆ ಎಂದರು. ಮೆಟ್ರೋ ಯಾವುದಾದರೂ ನಿಲ್ದಾಣಕ್ಕೆ ಶ್ರೀಮತಿ ಅಪೂರ್ಣ ರವರ ಹೆಸರನ್ನು ನಾಮಕರಣ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜೈ ಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷರಾದ ರಾಜೇಶ್, ಹಣ್ಣಿನ ವ್ಯಾಪಾರಿಗಳಾದ ಮೈಲಾರಣ್ಣ, ಅಲ್ಪಸಂಖ್ಯಾತ ಮುಖಂಡರಾದ ಸೈಯದ್, ಸಮಾಜ ಸೇವಕರಾದ ವಿಜಯಕುಮಾರ್, ಮಾಜಿ ನಗರಸಭಾ ಸದಸ್ಯರಾದ ಅರುಣ್ ಕುಮಾರ್, ಗಾಯಕಿ ಅಂಜಲಿ ಸೇರಿದಂತೆ ಹಲವಾರು ಕಲಾವಿದರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
Hassan
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮನೆ ಹಾನಿ ಪ್ರದೇಶಕ್ಕೆ ಭೇಟಿ
ಹಾಸನ : *ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮನೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರೆ ಏನು ಪ್ರಯೋಜನ ಆಗಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರ*
ಡಿ.ಕೆ.ಶಿವಕುಮಾರ್ ಹೇಳಿಕೆಗೆ ಆರ್.ಅಶೋಕ್ ತಿರುಗೇಟು
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಕೊಲ್ಲಹಳ್ಳಿಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ
*ಡಿ.ಕೆ.ಶಿವಕುಮಾರ್ ಬಂದರೆ ಪ್ರಯೋಜನ ಆಗುತ್ತೆ ಅಂದರೆ ಅವರು ಮನೆ ಬಿಟ್ಟು ಬರಬೇಕು*
*ಅವರು ಬರಲ್ಲ, ಕೇಂದ್ರ ಸಚಿವರು ಬಂದರೆ ಪರಿಹಾರ ಸಿಗಲ್ಲ ಅಂತಿರಾ, ನೀವಾದರೂ ಬನ್ನಿ*
*ನಿಮಗೆ ಬರುವ ಯೋಗ್ಯತೆ ಇಲ್ಲವಾ, ನೀವು ಬಂದು ಬೇರೆಯವರಿಗೆ ಬುದ್ದಿವಾದ ಹೇಳಿ*
ನೀವು ಕೊಡುತ್ತಿರುವುದು ಎನ್‌ಡಿಆರ್‌ಎಫ್ ಹಣ, ನೀವು ನಯಾಪೈಸೆ ಕೊಟ್ಟಿಲ್ಲ
*ಕುಮಾರಸ್ವಾಮಿ ಬರಲು ರೈಟ್ಸ್ ಇದೆ, ಕೇಳಲು ರೈಟ್ಸ್ ಇದೆ*
ಕುಮಾರಸ್ವಾಮಿ ಕೇಂದ್ರ ಮಂತ್ರಿ ಇದ್ದಾರೆ ರಾಷ್ಟ್ರೀಯ ಹೆದ್ದಾರಿ ಕೇಂದ್ರಕ್ಕೆ ಸೇರುತ್ತೆ
ಎಲ್ಲರೂ ಒಕ್ಕೂಟದ ವ್ಯವಸ್ಥೆಯಲ್ಲಿದ್ದೀರಿ
ಕುಮಾರಸ್ವಾಮಿ ಅವರಿಗೆ ಕೈಯಲ್ಲಿ ಆಗಲ್ಲ ಅಂದರೆ ನೀವು ಬಂದು ಕೆಲಸ ಮಾಡಿ
*ಕುಮಾರಸ್ವಾಮಿ ದೇಶ ಎಲ್ಲಾ ಸುತ್ತಬೇಕು, ಅದರ ನಡುವೆ ಕರ್ನಾಟಕಕ್ಕೆ ಆದ್ಯತೆ ಕೊಟ್ಟು ಬರುತ್ತಿದ್ದಾರೆ*
ನಿಮಗೆ ಏಕೆ ಬರಲು ಆಗುತ್ತಿಲ್ಲ
*ಸರ್ಕಾರ ಸತ್ತು ಹೋಗಿದೆ, ಸರ್ಕಾರ ಬದುಕಿದ್ದರೆ ತಾನೇ ಏನಾದರೂ ಕೇಳೋದು*
ಸರ್ಕಾರ ಸ್ಕ್ಯಾಂಡಲ್‌ಗಳಿಗೆ ಮುಳುಗಿ ಉತ್ತರ ಕೊಡಲು ಆಗುತ್ತಿಲ್ಲ
*ಸರ್ಕಾರ ಬದುಕಿದೆ ಅಂತ ಮೊದಲು ತೋರಿಸಲಿ*
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.