Mandya
ಮುಖ್ಯಮಂತ್ರಿ ಆಗಲು ನನ್ನ ಬಳಿ ಕೈ ಕಟ್ಟಿ ನಿಂತಿದ್ದ ಎಚ್‌ಡಿಕೆ
ಸಚಿವ ಸ್ಥಾನಕ್ಕೆ ದುಂಬಾಲು ಎಂಬ ಎಚ್‌ಡಿಕೆ ಹೇಳಿಕೆಗೆ ಸಿಆರ್‌ಎಸ್ ತಿರುಗೇಟು
ಜಿಲ್ಲೆ ಅಭಿವೃದ್ಧಿಯಾದರೆ ಜೆಡಿಎಸ್ ಹಿಡಿತ ತಪ್ಪುವ ಭೀತಿ: ಆರೋಪ
ಜೆಡಿಎಸ್‌ಗೆ ತನ್ನ ಚಿಹ್ನೆಯ ಮೇಲೆ ವಿಶ್ವಾಸವೇ ಇಲ್ಲ
ಮಂಡ್ಯ: ಮುಖ್ಯಮಂತ್ರಿ ಆಗಬೇಕೆಂದು ಎಚ್.ಡಿ.ಕುಮಾರಸ್ವಾಮಿ ಅವರೇ ನನ್ನ ಬಳಿ ಕೈಕಟ್ಟಿಕೊಂಡು ನಿಂತಿದ್ದರು, ಅಂದು ಜನ ಗೆಲ್ಲಿಸಿದ್ದಕ್ಕೆ ನಾನು ಸಚಿವನಾಗಿ ಕೆಲಸ ಮಾಡಿದ್ದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಚಿವಸ್ಥಾನಕ್ಕೆ ದುಂಬಾಲು ಬಿದ್ದದ್ದರು ಎಂಬ ಎಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು.
ನಗರದಲ್ಲಿ ₹43 ಕೋಟಿ ವೆಚ್ಚದಲ್ಲಿ ಇಲ್ಲಿನ ಫ್ಯಾಕ್ಟರಿ ಸರ್ಕಲ್ ಹಾಗೂ ಜೆ.ಸಿ.ವೃತ್ತದಲ್ಲಿ ಹೈಟೆಕ್ ಮಾದರಿ ವೃತ್ತ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಾವಿರ ಕೋಟಿ ಅನುದಾನ ತಂದಿದ್ದೀನಿ ಎಂದು ಬರಿ ಬಾಯಲ್ಲಿ ಹೇಳುವುದಿಲ್ಲ ನಿಮಗೆ ಗೊತ್ತಿದೆ ಅಭಿವೃದ್ಧಿ ಬಗ್ಗೆಯಷ್ಟೇ ನಾವು ಮಾತನಾಡಿ ಅನುದಾನ ತಂದು ಕೆಲಸ ಮಾಡುತ್ತಿದ್ದೇವೆ, ಸಚಿವ ಸ್ಥಾನಕ್ಕಾಗಿ ಚಲುವರಾಯಸ್ವಾಮಿ ದುಂಬಾಲು ಬಿದ್ದಿದ್ದರು ಎಂದು ಹೇಳಿಕೆ ನೀಡುವ ಇವರು, ಸಿಎಂ ಆಗಲು ನನ್ನ ಬಳಿ ಕೈ ಕಟ್ಟಿ ನಿಂತಿದ್ದರು, ಅವರಪ್ಪ, ಅವರ ಭಾವ ಬೇಡ ಎಂದಾಗ. 39 ಜನ ಶಾಸರ ಬಳಿ ಅವರು ಹೇಗೆ ನಿಂತಿದ್ದರು, ಕೇಳಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನನ್ನನ್ನು ಜನ ಗೆಲ್ಲಿಸಿದ್ದಕ್ಕೆ ಮಂತ್ರಿ ಮಾಡಿದ್ದರು, ಈಗಲೂ ಜನ ಗೆಲ್ಲಿಸಿರುವುದಕ್ಕೆ ಮಂತ್ರಿ ಮಾಡಿದ್ದಾರೆ ಇದರಲ್ಲಿ ದುಂಬಾಲು ಬೀಳುವುದೇನಿದೆ? ಜೆಡಿಎಸ್‌ನವರು ಹಳೇ ಭಾಷಣ ಹೊಡೆಯುತ್ತಿದ್ದಾರೆ. ಭಾಷಣದಲ್ಲಿ ಅವರು ಮುಂದೆ ಇದ್ದಾರೆ, ನಾವು ಅಭಿವೃದ್ಧಿಯಲ್ಲಿ ಮುಂದಿದ್ದೇವೆ. ನಾವು ಬರೀ ಬಾಯಲ್ಲಿ ಹೇಳಲ್ಲ, ಕೆಲಸ ಮಾಡಿ ತೋರಿಸುತ್ತೇವೆ. ಕೆಲವರಿಗೆ ಮಂಡ್ಯ ಅಭಿವೃದ್ಧಿ ಬೇಕಿಲ್ಲ. ಹೊಸ ಫ್ಯಾಕ್ಟರಿ ಬೇಡ, ಕೃಷಿ ವಿವಿಯೂ ಬೇಡ ಅವರಿಗೆ, ಇವರು ಮೆಡಿಕಲ್ ಕಾಲೇಜನ್ನು ಶಿಫ್ಟ್ ಮಾಡಲು ಹೇಳುತ್ತಾರೆ, ಅಭಿವೃದ್ಧಿ ಆದರೆ ಜಿಲ್ಲೆ ಇವರ ಹಿಡಿತಕ್ಕೆ ಸಿಗಲ್ಲವಲ್ಲ ಎಂದು ಡಿ.ಸಿ.ತಮ್ಮಣ್ಣ ಅವರ ವಿರೋಧಕ್ಕೆ ಟಾಂಗ್ ನೀಡಿದರು.

ಯಾರನ್ನೂ ಕೇಳಿ ನಾನು ತೀರ್ಮಾನ ಮಾಡಬೇಕಾಗಿಲ್ಲ, ಜನರ ಅಗತ್ಯಗಳಿಗೆ ಅಭಿವೃದ್ಧಿ ಮಾಡುತ್ತಿದ್ದೇವೆ, ಕಾಂಗ್ರೆಸ್ ಒಕ್ಕಲಿಗರ ನಾಯಕತ್ವ ತುಳಿಯುತ್ತಿದೆ ಎಂಬ ಮಾತನ್ನು ಎಚ್‌ಡಿಕೆ ಅವರು ಹೇಳುತ್ತಾರೆ ಆಗಾದರೆ ಕಾಂಗ್ರೆಸ್‌ನಲ್ಲಿ ಒಕ್ಕಲಿಗರಿಲ್ಲವೇ ನಾವು ಒಕ್ಕಲಿಗರಲ್ಲವಾ, ಜಾತಿ ರಾಜಕಾರಣವನ್ನ ಜನ ಈಗ ಒಪ್ಪಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಟ್ಟೆಪಾಡಿಗಾಗಿ ಜೆಡಿಎಸ್‌ನವರು ಬಿಜೆಪಿ ಜೊತೆ ಹೋಗಿದ್ದಾರೆ ಎಂಬುದನ್ನು ಎಲ್ಲಿಯೂ ಹೇಳಿಲ್ಲ, ಆ ಮಾತನ್ನು ನಾನು ಹೇಳಿದ್ದರೆ ಬೇರೆ ರೀತಿ ಹೇಳಿರುತ್ತೇನೆ ಅಷ್ಟೇ, ಬೆಂಗಳೂರು ಗ್ರಾಮಾಂತರ ಇವರ ಹಿಡಿತದಲ್ಲಿದ್ದ ಕ್ಷೇತ್ರದಲ್ಲಿ ಜೆಡಿಎಸ್ ಚಿಹ್ನೆ ಬಳಸದೇ ಬಿಜೆಪಿ ಚಿಹ್ನೆ ಬಳಸಿ ಡಾ.ಮಂಜುನಾಥ್ ಅವರನ್ನು ನಿಲ್ಲಿಸಿರುವುದು ಏಕೆ? ಮಂಜುನಾಥ್ ಅವರ ಬಗ್ಗೆ ಅಪಾರ ಗೌರವವಿದೆ, ಇವರ ಪಕ್ಷದ ಚಿಹ್ನೆ ಮೇಲೆ ವಿಶ್ವಾಸವಿಲ್ಲವೇ ಎಂದು ಪ್ರಶ್ನಿಸಿದರು.
ಯಾರು ಯಾರ ಮನೆಯನ್ನೂ ಹೊಡೆದಿಲ್ಲ, ಯಾವಾಗ ಮನೆ ಒಡೆದಿದ್ದಾರೆ ಎಂಬುದನ್ನು ಜನರಿಗೆ ತಿಳಿದಿದೆ, ಅವರ ತರಹ ಅಭ್ಯರ್ಥಿಯನ್ನು ಒಂದು ತಿಂಗಳ ನಂತರ ಕಾಂಗ್ರೆಸ್ ಹಾಕಿಲ್ಲ, ನಾವು ಮೊದಲೇ ಘೋಷಣೆ ಮಾಡಿದ್ದೇವೆ ಅವರು ಇನ್ನೂ ಘೋಷಣೆ ಮಾಡಿಲ್ಲ, ಏಕೆಂದರೆ ಜನರ ನಂಬಿಕೆ ಕಳೆದುಕೊಂಡಿದ್ದಾರೆ, ಅದಕ್ಕೆ ಡಾ.ಮಂಜುನಾಥ್ ಅವರನ್ನ ಬಿಜೆಪಿ ಅಭ್ಯರ್ಥಿ ಮಾಡಿದ್ದಾರೆ. ರಾಜಕೀಯವಾಗಿ ಯಾರು ಯಾರನ್ನ ತುಳಿದರು ಎಂಬ ಇತಿಹಾಸ ಇದೆ. ಈಗ ನಾನು ಯಾಕೆ ಮಾತನಾಡುವುದು. ಜನಕ್ಕೆ ಅದೆಲ್ಲಾ ತಿಳಿದೆ ನಮ್ಮ ಪರ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಟ್ಟೆ ನೋವು ತಡೆಯಲಾರದೆ ಏನೇನೋ ಮಾತನಾಡುತ್ತಾರೆ. ಅದಕ್ಕೆ ವೈದ್ಯರೆ ಮೆಡಿಷನ್ ಕೊಡಬೇಕು. ಚುನಾವಣೆಯೆ ಷಡ್ಯಂತ್ರ, ಸ್ಟಾಟರ್ಜಿ, ಜನರು ನಮ್ಮನ್ನ ನಂಬಬೇಕು. ಜನ ಅವರನ್ನ ನಂಬಲಿಲ್ಲ, ನಮ್ಮ ಗ್ಯಾರಂಟಿ ನಂಬಿದರು.
ಅವರ ಆಡಳಿತವನ್ನ ಜನ ಒಪ್ಪಲಿಲ್ಲ. ಮಲಗಿದ್ದರು, ಎದ್ದರೂ ಚಲುವರಾಯಸ್ವಾಮಿ ಜಪ ಮಾಡುತ್ತಿದ್ದಾರೆ, ನನ್ನ ಬಗ್ಗೆ ಟೀಕೆ ಮಾಡಿದರೆ ಅದನ್ನು ಸಂತೋಷವಾಗಿ ಸ್ವೀಕರಿಸುತ್ತೇನೆ, ಸುರೇಶ್‌ಗೌಡನ ಬಗ್ಗೆ ಮಾತನಾಡಲ್ಲ, ಎಲ್ಲರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ತಟಸ್ಥ ಆಗಿದ್ದೆ. ನಾನು ಯಾರಿಗೂ ಚುನಾವಣೆ ಮಾಡಲಿಲ್ಲ.
ಆಗ ಮೈತ್ರಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಒಪ್ಪಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈಗಲೂ ಜೆಡಿಎಸ್ ಬಿಜೆಪಿ ಮೈತ್ರಿ ಈ ಭಾಗದಲ್ಲಿ ಜನ ಒಪ್ಪಲ್ಲ. ಎದುರಾಳಿ ನೋಡಿ ನಾವು ಚುನಾವಣೆ ಮಾಡಲ್ಲ. ಯಾರೆ ಅಭ್ಯರ್ಥಿ ಆದರೂ ನಾವು ತಲೆ ಕೆಡಿಸಿಕೊಳ್ಳಲ್ಲ. ನಮ್ಮ ಜನರ ಮೇಲೆ ನಂಬಿಕೆ ಇದೆ. ಬಿಜೆಪಿ-ಜೆಡಿಎಸ್ ಹೊಡೆದ ಮಡಿಕೆಯಾಗಿದೆ. ಮೈತ್ರಿ ಧಿಕ್ಕರಿಸಿ ಜನ ನಮ್ಮನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು), ನಗರಸಭೆ ಸದಸ್ಯರಾದ ನಹೀಂ, ರಾಮಲಿಂಗಯ್ಯ, ಶ್ರೀಧರ್ ಮುಖಂಡರಾದ ಚಿದಂಬರ್, ರವಿಬೋಜೇಗೌಡ, ಗೀತಾ, ಪೂರ್ಣಿಮಾ ಭಾಗವಹಿಸಿದ್ದರು.
Mandya
ವಿವಿಧ ಗಣ್ಯರ ಪುತ್ಥಳಿ, ಸರ್ಕಲ್ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ ಶಾಸಕ ಕೆ.ಎಂ.ಉದಯ್
ಮದ್ದೂರು: ತಾಲೂಕಿನ ನಗರ ವ್ಯಾಪ್ತಿಯ ವಿವಿಧ ಗಣ್ಯರ ಪುತ್ಥಳಿ ಹಾಗೂ ಸರ್ಕಲ್ ನಿರ್ಮಾಣಕ್ಕೆ ಶಾಸಕ ಕೆ. ಎಂ .ಉದಯ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮದ್ದೂರು ನಗರದ ಟಿ.ಬಿ. ಸರ್ಕಲ್‌ನಿಂದ ಪೇಟೆಬೀದಿ, ಕೊಲ್ಲಿ ಸರ್ಕಲ್‌ವರೆಗೆ 80 ಅಡಿ ರಸ್ತೆ ಮತ್ತು ಶಿವಪುರದ ಕೊಪ್ಪ ಸರ್ಕಲ್ ಸೇರಿದಂತೆ ನಗರದ ವಿವಿಧ ಪ್ರಮುಖ ಸರ್ಕಲ್‌ಗಳಲ್ಲಿ ಗಣ್ಯರ ಪುತ್ಥಳಿ ಹಾಗೂ ಸರ್ಕಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ಸ್ಥಳ ಪರಿಶೀಲನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ, ಶಿವಪುರದ ಕೊಪ್ಪ ಸರ್ಕಲ್ – ಭಕ್ತ ಕನಕದಾಸರು, ಕೊಲ್ಲಿ ಸರ್ಕಲ್ – ವಿಶ್ವಗುರು ಜಗಜ್ಯೋತಿ ಶ್ರೀ ಬಸವಣ್ಣ, ಹೂವಿನ ಸರ್ಕಲ್ – ಅಮರ ಶಿಲ್ಪಿ ಶ್ರೀ ಜಕಣಚಾರಿ, ಕೆಮ್ಮಣ್ಣು ನಾಲೆ ಸರ್ಕಲ್ – ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಸ್ಟೇಡಿಯಂ ಸರ್ಕಲ್ – ಶ್ರೀ ಶ್ರೀ ಶ್ರೀ ಬಾಲ ಗಂಗಾಧರನಾಥ ಸ್ವಾಮಿಜೀ ಹಾಗೂ ಟಿ.ಬಿ. ಸರ್ಕಲ್ – ನಾಡಪ್ರಭು ಶ್ರೀ ಕೆಂಪೇಗೌಡರು ರವರುಗಳ ಪುತ್ಥಳಿ ಹಾಗೂ ಸರ್ಕಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಅಯೋಧ್ಯೆಯ ಬಾಲರಾಮನ ಕೆತ್ತನೆಯ ಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ರವರ ಜೊತೆಗೂಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆಯ ಮೂಲಕ ಯೋಜನೆಯ ವಿನ್ಯಾಸ, ಸ್ಥಳದ ಸೂಕ್ತತೆ, ಸಂಚಾರ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಚರ್ಚಿಸಿ, ಮುಂದಿನ ಕ್ರಮಗಳಿಗೆ ಅಗತ್ಯ ಮಾರ್ಗದರ್ಶನ ಪಡೆದಿದ್ದಾರೆ.
Mandya
ವಿಕಲಚೇತನ ಯುವತಿ ಮೇಲೆ ಅತ್ಯಾಚಾರ ಆರೋಪ : ದೂರು ದಾಖಲು
ವರದಿ : ಅಲ್ಲಾಪಟ್ಟಣ ಸತೀಶ್
ಮಂಡ್ಯ : ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ವಿಕಲಚೇತನ ಯುವತಿ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಗೊಂಡಿದೆ.
ಕೆ.ಆರ್.ಪೇಟೆ ತಾಲೂಕಿನ ಪುರ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಗ್ರಾಮದ ರಮ್ಯಾ(26) ದೂರು ನೀಡಿರುವ ಯುವತಿಯಾಗಿದ್ದಾಳೆ. ಅದೇ ಗ್ರಾಮದ ಪಕ್ಕದ ಮನೆಯ ಪೃಥ್ವಿ(27) ಎಂಬಾತ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದ್ದು,ಅತ್ಯಾಚಾರದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಮನೆಯಲ್ಲಿ ರಮ್ಯಾ ಒಬ್ಬಳೇ ಇರುವಾಗ ಅತ್ಯಾಚಾರವೆಸಗಿರುವುದಾಗಿ ಹೇಳಲಾಗಿದ್ದು, ಆಕೆ ಗರ್ಭಿಣಿಯಾದ ಬಳಿಕ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎನ್ನಲಾಗಿದೆ.
ಯಾರಿಗಾದರೂ ಹೇಳಿದರೆ ನಿಮ್ಮ ಅಪ್ಪ, ಅಮ್ಮನನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಗಿ ಯುವತಿ ತಿಳಿಸಿದ್ದಾಳೆ.
ಅಕ್ಟೋಬರ್ ತಿಂಗಳಲ್ಲಿ ರಮ್ಯಾಗೆ ವಾಂತಿ ಶುರುವಾಗಿದ್ದ ಹಿನ್ನೆಲೆಯಲ್ಲಿ ವೈದ್ಯರ ಬಳಿ ತಪಾಸಣೆ ಮಾಡಲಾಗಿ ವೈದ್ಯರ ಸಲಹೆಯಂತೆ ಸ್ಕ್ಯಾನಿಂಗ್ ಮಾಡಿಸಿದಾಗ ಗರ್ಭಿಣಿಯಾಗಿರುವುದು ದೃಢ ಪಟ್ಡಿದೆ ಎನ್ನಲಾಗಿದೆ.

ಬಳಿಕ ಮದುವೆ ಮಾಡುವಂತೆ ಪೃಥ್ವಿ ಮನೆಯವರೊಂದಿಗೆ ಮಾತುಕತೆ ನಡೆದಿದ್ದು, ಮದುವೆಗೆ ಒಪ್ಪಿ ಇದೀಗ ಮದುವೆಯಾಗದೆ ಮೋಸ ಮಾಡಿರುವುದಾಗಿ ಸಂತ್ರಸ್ತೆ ಠಾಣೆಗೆ ದೂರು ನೀಡಿದ್ದಾಳೆ.
ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Mandya
ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಭವಿಷ್ಯದ ರೂವಾರಿಗಬೇಕು : ರಮೇಶ ರಾಜು
ಮಂಡ್ಯ : ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಭವಿಷ್ಯದ ರೂವಾರಿಗಳಾದ ಮಕ್ಕಳಿಗೆ ಜ್ಞಾನದ ಜೊತೆಗೆ ಮೌಲ್ಯಗಳು, ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಕಲಿಸಿಕೊಡಬೇಕೆಂದು ಎಇಟಿ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾದ ಶಾರದ ರಮೇಶ ರಾಜು ಹೇಳಿದರು.
ನಗರದ ಎಇಟಿ ಮಹಾಶಿಕ್ಷಣ ವಿದ್ಯಾಲಯದ ಕೆಂಪಮ್ಮ ಜೆ.ದೇವಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬಿಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೋಷಕರು ಮಕ್ಕಳಿಗೆ ಜೀವನ ನೀಡಿದರೆ, ಶಿಕ್ಷಕರು ಆ ಜೀವನಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಅವರ ಜೀವನವನ್ನು ರೂಪಿಸಿ ಸಮಾಜದಲ್ಲಿ ಗೌರವಯುತ ಮೌಲ್ಯಯುತವಾದ ಜೀವನ ನಡೆಸುವಂತೆ ದಾರಿ ತೋರುವ ರೂವಾರಿಗಳು ಎಂದು ಅಭಿಪ್ರಾಯಪಟ್ಟರು.
ಶಿಕ್ಷಕ ವೃತ್ತಿ ತರಬೇತಿ ಪಡೆದು ಸಮಾಜಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿರುವ ಭವಿಷ್ಯದ ಶಿಕ್ಷಕರುಗಳಿಗೆ ಶುಭ ಕೋರಿದ ಅವರು, ತಾವು ಎಂದಿಗೂ ತಮಗೆ ಜೀವ ನೀಡಿದ ತಂದೆ ತಾಯಿಗಳಿಗೆ ಕೃತಜ್ಞತೆಯಿಂದ ಇರುವ ಮೂಲಕ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆಯನ್ನ ನೀಡಬೇಕು ಎಂದು ಕಿವಿಮಾತು ಹೇಳಿದರು.

ಮಾಜಿ ರಾಷ್ಟ್ರಪತಿಗಳು ಹೇಳಿರುವ ಹಾಗೆ ಜೀವನ ಮತ್ತು ಸಮಯ ವಿಶ್ವದ ಬಹುದೊಡ್ಡ ಶಿಕ್ಷಕರಾಗಿದ್ದು, ನೂತನ ಶಿಕ್ಷಕ ಮಿತ್ರರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ತಮ್ಮ ಜೀವನದಲ್ಲಿ ಎಂದೂ ದಾರಿ ತಪ್ಪದೆ ಸಮಯವನ್ನು ಸದುಪಯೋಗಪಡಿಸಿಕೊಂಡು ತಾವು ಅಭಿವೃದ್ಧಿ ಹೊಂದುವ ಜೊತೆಗೆ ಮುಂದಿನ ತಲೆಮಾರಿನ ಮಕ್ಕಳನ್ನು ಸರಿದಾರಿ ತೋರುವ ಜವಾಬ್ದಾರಿ ಇದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಪ್ರಾಂಶುಪಾಲ ಡಾ. ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ವೇಳೆ ಸಹಾಯಕ ಪ್ರಾಧ್ಯಾಪಕರುಗಳಾದ ಎಚ್. ಪಿ.ಧರ್ಮೇಶ್, ಮೋಹನ್ ದಾಸ್, ಸುಕೇಶ್ ದಯಾನಂದ್, ರಕ್ಷಿತಾ, ಶ್ರೀದೇವಿ, ಶಿವ ನಾಗೇಂದ್ರ ಪ್ರಸಾದ್, ವಾಣಿ ಸೇರಿದಂತೆ ಇತರರು ಹಾಜರಿದ್ದರು.
-
Hassan21 minutes agoಬೈರಾಪುರ-ಚನ್ನಪುರ- ಮಗ್ಗೆ ರಸ್ತೆ ತಾತ್ಕಾಲಿಕ ಬಂದ್: ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸೂಚನೆ
-
Special2 hours agoಕರ್ನಾಟಕ ಕುಕ್ಕುಟ ಸಂಜೀವಿನಿ ಯೋಜನೆ: ಮಹಿಳೆಯರಿಗೆ ಉಚಿತ ಕೋಳಿ ಮರಿ, ಶೆಡ್ ನಿರ್ಮಾಣಕ್ಕೆ ಭರ್ಜರಿ ಸಹಾಯಧನ
-
Hassan20 hours agoಒಳ್ಳೆಯ ಕೆಲಸ ಬ್ಯಾಂಕ್ ಠೇವಣಿಯಂತೆ; ಸಮಯ ಬಂದಾಗ ಫಲ ನೀಡುತ್ತದೆ: ರವಿಕುಮಾರ್ ಬಲ್ಲೇನಹಳ್ಳಿ
-
Hassan18 hours agoರೋಟರಿ ಬೆಂಗಳೂರು ದಕ್ಷಿಣದಿಂದ MCE ಕಾಲೇಜಿನ 51 ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ
-
Mandya18 hours agoವಿಕಲಚೇತನ ಯುವತಿ ಮೇಲೆ ಅತ್ಯಾಚಾರ ಆರೋಪ : ದೂರು ದಾಖಲು
-
Kodagu19 hours agoಅನಧಿಕೃತ ಹೋಸ್ಟೇಗಳಿಗೆ ಕಡಿವಾಣ ನಿಟ್ಟಿನಲ್ಲಿ ವಾರ್ಡ್ವಾರ್ ಸಮಿತಿ ರಚನೆ: 15 ದಿನಗಳೊಳಗೆ ಪೊಲೀಸರಿಂದ ದಲ್ಲಾಳಿಗಳ ವಿರುದ್ದ ಕ್ರಮ
-
State20 hours agoಡಾ.ಜಿ.ಪರಮೇಶ್ವರ್ ಈ ರಾಜ್ಯದ ಸಿಎಂ ಆಗಲಿ ಎಂಬುದು ನನ್ನ ವೈಯಕ್ತಿಕ ಆಸೆ: ವಿ.ಸೋಮಣ್ಣ
-
State15 hours agoರಾಹುಲ್, ಖರ್ಗೆ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ ಹೈಕಮಾಂಡೇ: ಬಿ.ವೈ.ವಿಜಯೇಂದ್ರ
