Mysore
ಖಜಾನೆ ಖಾಲಿ ಮಾಡಿ, ಚೊಂಬು ಹಿಡಿದು ಬೀದಿ ಬದಿ ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ ಪಕ್ಷ : ಮಾಜಿ ಸಿ. ಎಂ. ಕುಮಾರಸ್ವಾಮಿ

ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ : ರಾಜ್ಯದ ಖಜಾನೆಯನ್ನು ಖಾಲಿ ಮಾಡಿರುವ ಕಾಂಗ್ರೆಸ್ ಪಕ್ಷದವರು ಚೊಂಬು ಹಿಡಿದು ಬೀದಿ ಬದಿಯಲ್ಲಿ ಬೊಬ್ಬೆ ಹೊಡೆಯುತ್ತಿರುವುದು ಎಷ್ಟು ಸರಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯು ಆದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಸಾಲಿಗ್ರಾಮ ಪಟ್ಟಣದ ಆವರಣದಲ್ಲಿ ನಡೆದ ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಪಂಚ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಜನತೆಯ ಮೇಲೆ ಸಾಲದ ಹೊರೆ ಹೇರುತ್ತಿದ್ದು, ಇದು ಭವಿಷ್ಯದಲ್ಲಿ ಭಾರಿ ಪರಿಣಾಮ ಬೀರಲಿದೆ ಎಂದರು. ಜನತೆಗೆ ಅಗತ್ಯವಾಗಿ ಬೇಕಿರುವುದು ಉಚಿತ ಆರೋಗ್ಯ, ಶಿಕ್ಷಣ, ಉದ್ಯೋಗ, ಮತ್ತು ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ,ಹಾಗಾಗಿ ಆಳುವ ಸರ್ಕಾರಗಳು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕೆ ಹೊರತು ಇತರೆ ವಿಷಯ ಗಳ ಬಗ್ಗೆ ಅಲ್ಲ ಎಂದು ತಿಳಿಸಿದರು.
ನಾನು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಸಾರಾಯಿ ಮತ್ತು ಲಾಟರಿ ನಿಷೇಧ ಮಾಡುವುದರ ಜೊತೆಗೆ ರೈತರ ಸಾಲವನ್ನು ಮನ್ನಾ ಮಾಡಿ ಅವರ ಬೆನ್ನೆಲುಬಾಗಿ ನಿಂತಿದೆ.ಆದರೆ ಈಗಿನ ಸರ್ಕಾರ ಅಂತಹ ಯಾವ ಜನಪರ ಸೇವೆ ಮಾಡಿದೆ ಎಂದು ತಿಳಿಸಬೇಕೆಂದರು. ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಮಹಾ ಜನತೆ ನನಗೆ ಲೋಕಸಭಾ ಚುನಾವಣೆಯಲ್ಲಿ ಮತ ನೀಡಿ ಬೆಂಬಲಿಸಿದರೆ ಅದು ಮಾಜಿ ಸಚಿವ ಸಾ.ರಾ. ಮಹೇಶ್ ಅವರಿಗೆ ಕೊಟ್ಟ ಬೆಂಬಲವಾಗುತ್ತದೆ.ಆದ್ದರಿಂದ ಈ ವಿಚಾರವನ್ನು ಅರಿತು ನನಗೆ ಹೆಚ್ಚಿನ ಬಲ ತುಂಬಬೇಕೆಂದು ಮನವಿ ಮಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮಾಜಿ ಪ್ರಧಾನಿಗಳಾದ ಎಚ್. ಡಿ. ದೇವೇಗೌಡರು ಮತ್ತು ನನ್ನನ್ನು ಕಂಡರೆ ವಿಶೇಷವಾದ ಪ್ರೀತಿ ಇದ್ದು,ನಾನು ಈ ಚುನಾವಣೆಯಲ್ಲಿ ಜಯಶಾಲಿಯಾದರೆ ಆನಂತರ ಕೇಂದ್ರ ಸರ್ಕಾರದಿಂದ ರಾಜ್ಯ ಮತ್ತು ಕ್ಷೇತ್ರಕ್ಕೆ ಅಗತ್ಯ ಇರುವಷ್ಟು ಅನುದಾನ ತಂದು ಉತ್ತಮ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮಾತನಾಡಿ ಕಾಂಗ್ರೆಸ್ ಪಕ್ಷದವರು ಮನೆ ಮನೆಗೆ ತೆರಳಿ ಸುಳ್ಳಿನ ಗ್ಯಾರಂಟಿ ಕಾರ್ಡ್ ಗಳನ್ನು ವಿತರಣೆ ಮಾಡುತ್ತಿದ್ದು, ಆಸ್ಪತ್ರೆಯಿಂದ ಬಂದ ಹುಚ್ಚರಂತೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದು,ಇದನ್ನು ಯಾರು ನಂಬಬೇಡಿ ಎಂದರು. ಹೆಚ್.ಡಿ. ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಜಯಗಳಿಸಿದರೆ ಆನಂತರ ಕೇಂದ್ರ ಸಂಪುಟದಲ್ಲಿ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ ಗಳ ಅನುದಾನ ತರುವ ಸಾಮರ್ಥ್ಯ ಪಡೆಯಲಿದ್ದಾರೆ ಹಾಗಾಗಿ ಇದನ್ನು ಅರಿತು ಎಲ್ಲರೂ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಇವರ ಬದಲು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವೆಂಕಟರಮಣಗೌಡ ಆಯ್ಕೆಯಾದರೆ ಆತ ಈಗ ಗುತ್ತಿಗೆದಾರನಾಗಿದ್ದು ಮುಂದೆ ಮತ್ತಷ್ಟು ದೊಡ್ಡ ಗುತ್ತಿಗೆ ಕೆಲಸ ಮಾಡುತ್ತಾನೆ ಹಾಗಾಗಿ ಇವರಿಬ್ಬರಲ್ಲಿ ನಿಮಗೆ ಯಾರು ಬೇಕು ಎಂದು ಆಯ್ಕೆ ಮಾಡಿಕೊಳ್ಳಿ ಎಂದು ಕೋರಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ ವಿರೇಂದ್ರ ಪಾಟೀಲರ ಸಂಪುಟದಲ್ಲಿ ನೀರಾವರಿ ಸಚಿವರಾಗಿದ್ದ ಮಾಜಿ ಪ್ರಧಾನಮಂತ್ರಿಗಳಾದ ಎಚ್ ಡಿ ದೇವೇಗೌಡರು ಹಾರಂಗಿ ಅಣೆಕಟ್ಟು ನಿರ್ಮಾಣ ಮಾಡುವ ಮೂಲಕ ಈ ಭಾಗದ ರೈತ ಸಮುದಾಯದವರಿಗೆ ಆಸರೆಯಾಗಿದ್ದು, ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಉತ್ತಮ ಜನಪರ ಕೆಲಸ ಮಾಡಿರುವುದರಿಂದ ಎಲ್ಲರೂ ಎನ್ ಡಿ ಎ ಅಭ್ಯರ್ಥಿಯನ್ನು ಚುನಾಯಿಸಬೇಕೆಂದು ಹೇಳಿದರು.
ಸಾಲಿಗ್ರಾಮವನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಈ ಚುನಾವಣೆಯಲ್ಲಿ ಕೆ ಆರ್ ನಗರ ವಿಧಾನಸಭಾ ಕ್ಷೇತ್ರವು ಸೇರಿದಂತೆ, ಸ್ಪರ್ಧೆ ಮಾಡಿರುವುದು ನಮ್ಮೆಲ್ಲರ ಸೌಭಾಗ್ಯ ವಾಗಿದ್ದು ಸರ್ವರೂ ಅವರಿಗೆ ಬಹುಮತ ನೀಡಬೇಕೆಂದು ಕೋರಿದರು.
ಕಾರ್ಯಕ್ರಮ ಆರಂಭಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕ ಎ.ಮಂಜು ಅವರನ್ನು ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಯೋಗ ನರಸಿಂಹ ಸ್ವಾಮಿ ದೇವಾಲಯದ ಬಳಿಯಿಂದ ವೇದಿಕೆಯ ವರೆಗೆ ನೂರಾರು ಮಹಿಳೆಯರು ಮತ್ತು ಸಾವಿರಾರು ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು.
ಅರಕಲಗೂಡು ಶಾಸಕ ಎ. ಮಂಜು, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜಿ.ಪಂ. ಮಾಜಿ ಅಧ್ಯಕ್ಷರಾದ ಸಾ.ರಾ.ನಂದೀಶ್, ಸಿಜೆ.ದ್ವಾರಕೀಶ್, ಮಾಜಿ ಸದಸ್ಯರಾದ ಅಮಿತ್ ವೊ.ದೇವರಹಟ್ಟಿ, ಎಂ. ಟಿ. ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ.ಸೋಮಣ್ಣ, , ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಮೈಸೂರು ಕೆ.ಆರ್.ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಅಮ್ಮಸಂತೋಷ್, ಮುಖಂಡರಾದ ಎಸ್. ಪಿ. ಆನಂದ, ಹಳಿಯೂರು ಎಚ್. ಕೆ. ಮಧುಚಂದ್ರ, ಬಂಡಹಳ್ಳಿ ಬಿ. ಆರ್. ಕುಚೇಲ ಅಂಕನಹಳ್ಳಿ ತಿಮ್ಮಪ್ಪ, ಎಸ್.ಟಿ.ಕೀರ್ತಿ, .ನಟರಾಜು, ಆಯಾಜ್, ಲಾಲು ಸಾಹೇಬ್, ಹೆಚ್.ಆರ್
ಮದುಚಂದ್ರ ಮತ್ತಿತರರು ಇದ್ದರು.
Mysore
ಜಾತಿ ಮತಗಳನ್ನ ಮೀರಿದಂತ ಸತ್ವಪೂರ್ಣ ಕವಿ ಅಕ್ಬರ್ ಅಲಿ: ಡಾ. ಸಿ.ಪಿ ಕೃಷ್ಣಕುಮಾರ್

ಮೈಸೂರು: ಅಕಬರ್ ಅಲಿಯವರ ಸಾಹಿತ್ಯಗಳು ಅಂದಿನ ಸಮಾಜದಲ್ಲಿನ ಜಾತಿ ಧರ್ಮ ವ್ಯವಸ್ತೆಗೆ ವಿರುದ್ದವಾಗಿ. ಎಲ್ಲರಿಗು ಸಮಾನತೆಯನ್ನು ನೀಡುವ ಕಲ್ಪನೆ ಹೊಂದಿದ್ದ, ಜಾತಿ ಮತಗಳನ್ನ ಮೀರಿದಂತ ಸತ್ವಪೂರ್ಣ ಕವಿ ಎಂದು ಎಂದು ಹಿರಿಯ ಸಾಹಿತಿ ಡಾ. ಸಿ.ಪಿ ಕೃಷ್ಣಕುಮಾರ್ ಹೇಳಿದರು.
ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಚುಟುಕು ರತ್ನ ಡಾ.ಎಂ ಅಕಬರ್ ಅಲಿ ಅವರ ಶತಮಾನೋತ್ಸವ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಕಬರ್ ಅಲಿಯವರು ಸಾಹಿತ್ಯ ಎಲ್ಲರಿಗೂ ಸಲ್ಲುತ್ತದೆ ಎಂದರೂ ತಪ್ಪಾಗಲಾರದು. ಆಧುನಿಕ ಕನ್ನಡ ಸಾಹಿತ್ಯದ ಆದ್ಯರು. ಮನನೀಯ ಕವಿ ಅಕಬರ್ ಅಲಿ ಎಂದು ಶ್ಲಾಘಿಸಿದರು.
ಸ್ತ್ರೀಯರಿಗೆ ಕಾನೂನಿನ ಅನುಕೂಲಗಳಿದ್ದರು ಅವರನ್ನು, ಅಗೌರವವಾಗಿ ಕಾಣಲಾಗುತ್ತದೆ. ಅಂತಹದರಲ್ಲಿ ಅಕಬರ್ ಅವರಿಗೆ ಸ್ತ್ರೀಯರ ಮೇಲೆ ಆದರ, ಗೌರವ ಇಟ್ಟುಕೊಂಡಿದ್ದ ಸ್ತ್ರೀ ಸಂವೇದಿಗಳು ಎಂದು ತಿಳಿಸಿದರು.
ನನ್ನ ಸಹದ್ಯೋಗಿಗಳು ಹಾಗೂ ಅವರ ಸರಳತೆ, ಸಜ್ಜನಿಕೆಯನ್ನು ನಾನು ಕಂಡುಂಡವನು. ಒಂದು ಮಾತಿನಲ್ಲಿ ಹೇಳುವುದಾದರೆ ಅವರು ಸಮತೋಲನ, ಸಂಪನ್ನನಾದಂತಹ ಸಮನ್ವಯ ಸಾಹಿತಿ ಎಂಬುದನ್ನ ಒಪ್ಪಬೇಕು. ಚುಟುಕು ಸಾಹಿತ್ಯದ ಎರಡು ಕಣ್ಣುಗಳು ದಿನಕರ ದೇಸಾಯಿ ಹಾಗೂ ಅಕಬರ್ ಅಲಿಯವರು. ಇವರ ಸಾಹಿತ್ಯದಲ್ಲಿ ಮತ ಧರ್ಮಗಳು ಗೌಣ. ಅವರಲ್ಲಿ ಮುಖ್ಯವಾದದ್ದು ಕವಿಧಾಮ, ಕವಿ ಮನೋಧರ್ಮ ಎಂದು ಹೆಮ್ಮೆಪಟ್ಟರು.
Mysore
ಯೋಗ ವೈದ್ಯರತ್ನ ಪ್ರಶಸ್ತಿ ಪ್ರದಾನ

ಮೈಸೂರು: ಯೋಗ ಒಕ್ಕೂಟವು ರಾಮಕೃಷ್ಣನಗರದ ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಭಾನುವಾರ ಡಾ.ಎ.ಎಸ್. ಚಂದ್ರಶೇಖರ್ ಹಾಗೂ ಡಾ.ಜಯಶ್ರೀ ದಂಪತಿಗೆ ಯೋಗ ವೈದ್ಯರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚಂದ್ರಶೇಖರ್ ಅವರಿಗೆ 70ನೇ ಹಾಗೂ ಜಯಶ್ರೀ ಅವರಿಗೆ 60ನೇ ಜನ್ಮದಿನವಾಗಿದ್ದು, ಈ ದಂಪತಿಯೂ ಆಯುರ್ವೇದ ವೈದ್ಯರಾಗಿದ್ದುಕೊಂಡು ಕಳೆದ ಮೂರ್ನಾಲ್ಕು ದಶಕಗಳಿಂದ ಸಮಾಜಮುಖಿ ಮಾಡುತ್ತಿರುವ ಸೇವೆ ಹಾಗೂ ಯೋಗ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು.
ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ವಿ. ಲಕ್ಷ್ಮೀನಾರಾಯಣ ಶೆಣೈ, ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯ ನಿವೃತ್ತ ಪ್ರಾಧ್ಯಾಪಕ ಡಾ. ಸದಾನಂದ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ಎಂಐಟಿ ಅಧ್ಯಕ್ಷ ಡಾ.ಎಸ್. ಮುರಳಿ, ಹಿಮಾಲಯ ಪ್ರತಿಷ್ಠಾನ ಅಧ್ಯಕ್ಷ ಎನ್. ಅನಂತ ಮುಖ್ಯ ಅತಿಥಿಯಾಗಿದ್ದರು.
ಸುಮನಾ ಹಾಗೂ ಆಶಾದೇವಿ ಪ್ರಾರ್ಥಿಸಿದರು. ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಗೌರವಾಧ್ಯಕ್ಷ ಟಿ. ಜಲೇಂದ್ರಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಶಸ್ತಿ ಪುರಸ್ಕೃತರನ್ನು ಪ್ರಧಾನ ಕಾರ್ಯದರ್ಶಿ ಯೋಗಕುಮಾರ್ ಹಾಗೂ ಆಶಾದೇವಿ ಪರಿಚಯಿಸಿದರು. ಅಧ್ಯಕ್ಷ ಕೆ.ಜಿ. ದೇವರಾಜು, ಕಾರ್ಯಾಧ್ಯಕ್ಷ ಬಿ.ಪಿ. ಮೂರ್ತಿ, ಖಜಾಂಚಿ ನರಸಿಂಹ, ಜಿಎಸ್ಎಸ್ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್, ಬಿ. ಶಾಂತಾರಾಂ, ಶಶಿಕುಮಾರ್ ಸೇರಿದಂತೆ ಮೈಸೂರು ಯೋಗ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ನಗರದ ವಿವಿಧ ಯೋಗ ಒಕ್ಕೂಟದ ಪದಾಧಿರಾಗಿಗಳು, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಮತ್ತಿತರರು ಪಾಲ್ಗೊಂಡಿದ್ದರು
Mysore
ಕ್ಷೇತ್ರಗಳ ಪುನರ್ ವಿಂಗಡಣೆ ವಿಚಾರ: ಕೇಂದ್ರದ ವಿರುದ್ಧ ಮನು ಸಿಂಗ್ವಿ ಕಿಡಿ

ಮೈಸೂರು :
ಎಐಸಿಸಿ ರಾಷ್ಟ್ರೀಯ ವಕ್ತಾರ, ರಾಜ್ಯಸಭಾ ಸದಸ್ಯ ಹಾಗು ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಗ್ವಿ ಮೈಸೂರಿನಲ್ಲಿ ಸುದ್ದಿಗೋಷ್ಠಿ.
ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ ಜೆ ವಿಜಯ್ ಕುಮಾರ್, ನಗರಾಧ್ಯಕ್ಷ ಆರ್ ಮೂರ್ತಿ ಸೇರಿದಂತೆ ಹಲವರು ಉಪಸ್ಥಿತಿ.
ಕೇಂದ್ರ ಸರ್ಕಾರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗೆ ಮುಂದಾಗುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ.*
ಎಐಸಿಸಿ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಮೈಸೂರಿನಲ್ಲಿ ಹೇಳಿಕೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಅರ್ಧ ಸತ್ಯವನ್ನಷ್ಟೇ ಹೇಳುತ್ತಿದ್ದಾರೆ.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಲ್ಲಿನ ಕ್ಷೇತ್ರಗಳು ಕಡಿಮೆಯಾಗುವುದಿಲ್ಲ ಎನ್ನುತ್ತಾರೆ.
ಆದರೆ ಉತ್ತರದ ರಾಜ್ಯಗಳಲ್ಲಿ ಕ್ಷೇತ್ರಗಳು ಹೆಚ್ಚಾಗುವ ಬಗ್ಗೆ ಮೌನವಾಗಿದ್ದಾರೆ.
ಎಸ್ ಆರ್ ಬೊಮ್ಮಾಯಿ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಒಕ್ಕೂಟ ವ್ಯವಸ್ಥೆಯ ತೀರ್ಪಿಗೆ ವ್ಯತಿರಿಕ್ತವಾಗಿ ಕ್ಷೇತ್ರ ಪುನರ್ ವಿಂಗಡಣೆಯಾಗುತ್ತಿದೆ ಎಂದು ಪ್ರತಿಪಾದಿಸಿದ ಅಭಿಷೇಕ್ ಮನು ಸಿಂಗ್ವಿ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ತನಿಖಾ ವರದಿಯಲ್ಲಿ ಕ್ಲೀನ್ ಚಿಟ್ ನೀಡಿದ ವಿಚಾರ.
ಬಿಜೆಪಿಯಿಂದ ಸಿಎಂ ಸಿದ್ದರಾಮಯ್ಯ ರಾಜಕೀಯ ಜೀವನದ ಮೇಲೆ ಕಪ್ಪುಚುಕ್ಕೆ ತರುವ ಪ್ರಯತ್ನ ನಡೆಯಿತು.
ಸಿದ್ದರಾಮಯ್ಯ ತಪ್ಪು ಇಲ್ಲದಿದ್ದರೂ ವಿವಾದಕ್ಕೆ ಎಳೆದರು.
ಬಿಜೆಪಿಯ ಈ ಪ್ರಯತ್ನಗಳು ವಿಫಲವಾದವು.
ಇದೀಗ ಲೋಕಾಯುಕ್ತವೂ ಕ್ಲೀನ್ ಚಿಟ್ ಕೊಟ್ಟಿದೆ ಎಂದ ಅಭಿಷೇಕ್ ಮನು ಸಿಂಗ್ವಿ.
ಇವಿಎಂ ಬಗ್ಗೆ ನಮಗೆ ತಕರಾರು ಇಲ್ಲ.
ಬದಲಿಗೆ ಕೆಲವು ಅನುಮಾನಗಳು ಇವೆ.
ಚುನಾವಣೆ ಪ್ರಕ್ರಿಯೆಗಳ ಬಗ್ಗೆಯೇ ನಮಗೆ ಅನುಮಾನವಿದೆ.
ಈ ಬಗ್ಗೆ ನಾವು ಉತ್ತರ ಬಯಸಿದ್ದೇವೆ.
ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ.
ಇದ್ದಕ್ಕಿದ್ದಂತೆ ಹೆಚ್ಚಾಗಿರುವುದರ ಬಗ್ಗೆ ನಮಗೆ ಅನುಮಾನವಿದೆ.
ಚುನಾವಣೆಗೆ ಬಿಜೆಪಿ ಬಳಿ ಹಣವಿದೆ.
ಸಿಬಿಐ, ಇಡಿ ಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಕಾಂಗ್ರೆಸ್ ರಾಷ್ಟೀಯ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಮೈಸೂರಿನಲ್ಲಿ ಹೇಳಿಕೆ.
-
State20 hours ago
ಬೆಂಗಳೂರು ನಮ್ಮ ಮೆಟ್ರೋ ನೇಮಕಾತಿ : ಟ್ರೈನ್ ಆಪರೇಟರ್ ಹುದ್ದೆಗಳ ಭರ್ತಿ
-
Kodagu19 hours ago
ಬಲ್ಲಮಾವಟಿ ಪೇರೂರು ಗ್ರಾಮದ ಲೈನ್ ಮನೆಯಲ್ಲಿ ಮಗುವಿಗೆ ಜನ್ಮ ನೀಡಿ ಮಹಿಳೆ ನಾಪತ್ತೆ – 112ಪೊಲೀಸರಿಂದ ಮಗುವಿನ ರಕ್ಷಣೆ
-
National - International21 hours ago
ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅಧಿಕಾರ ಸ್ವೀಕಾರ
-
Kodagu22 hours ago
ಮಾನವ-ವನ್ಯಜೀವಿ ಸಂಘರ್ಷ ತಡೆಯಿರಿ: ಡಾ.ಮಂತರ್ ಗೌಡ
-
State22 hours ago
ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ: ಬಸವರಾಜ ಬೊಮ್ಮಾಯಿ
-
Hassan23 hours ago
ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು
-
Chikmagalur7 hours ago
ಹತ್ತು ಲಕ್ಷ ಮೌಲ್ಯದ 11 ಬೈಕ್ ಕದ್ದಿದ್ದ ಕಳ್ಳನ ಬಂಧನ
-
Chamarajanagar5 hours ago
ಕಾರು ಅಪಘಾತ ಇಬ್ಬರು ಸ್ಥಳದಲ್ಲೇ ಮೃತ