Mandya
ಎಚ್ಡಿಕೆ ಯಿಂದ ಶ್ರೀರಾಮ ದೇಗುಲದಲ್ಲಿ ವಿಶೇಷ ಪೂಜೆ
ಮಂಡ್ಯ: ಶ್ರೀರಾಮನವಮಿ ಅಂಗವಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಗರದ ಸಮೀಪವಿರುವ ಮರಲಿಂಗದೊಡ್ಡಿ ಗ್ರಾಮದ ಶ್ರೀರಾಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಕೆರಗೋಡು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಅವರು, ನಾಡಿನ ಜನರ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದಾಗಿ ತಿಳಿಸಿದರು.
Mandya
ಬೈಕ್ ಅಪಘಾತ : ಇಂಜಿನಿಯರ್, ಮಧುಮಗಳ ದಾರುಣ ಸಾ*ವು
ಮಂಡ್ಯ : ಸ್ಕೂಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಹಸೆಮಣೆ ಏರಬೇಕಿದ್ದ ನವ ವಧುವೊಬ್ಬಳು ಮಸಣ ಸೇರಿದ ಧಾರುಣ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೆಚ್ ಬಸಾಪುರ ಗೇಟ್ ಬಳಿ ಜರುಗಿದೆ.
ಬಾಳೆಹೊನ್ನಿಗ ಗ್ರಾಮದ ವಾಸಿ ಕೃಷ್ಣೇಗೌಡ ಎಂಬುವರ ಮಗಳಾದ 26 ವರ್ಷದ ಶರಣ್ಯ ಎಂಬಾಕೆಯೇ ಮೃತಪಟ್ಟ ದುರ್ದೈವಿಯಾಗಿದ್ದು, ಈಕೆ ಕನಕಪುರ ತಾಲ್ಲೂಕು ಕಾಡನಹಳ್ಳಿ ಗ್ರಾ.ಪಂ ಯಲ್ಲಿ ನರೇಗಾ ಯೋಜನೆಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇನ್ನು 20 ದಿನಗಳಲ್ಲಿ ಈಕೆಗೆ ಮದುವೆ ನಿಶ್ಚಯವಾಗಿದ್ದು, ನಿಶ್ಚಿತಾರ್ಥ ಸಹ ಆಗಿತ್ತು.
ಶನಿವಾರ ಬೆಳಿಗ್ಗೆ 10.30 ರ ಸಮಯದಲ್ಲಿ ಕಾರ್ಯನಿಮಿತ್ತ ಬಾಳೆಹೊನ್ನಿಗ ಗ್ರಾಮದಿಂದ ಹಲಗೂರು ಕಡೆಗೆ ತಮ್ಮ ಹೊಂಡಾ ಡಿಯೋದಲ್ಲಿ ಬರುತ್ತಿದ್ದ ಇವರಿಗೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.
ತಲೆಗೆ ತೀವ್ರ ಪೆಟ್ಟು ಬಿದ್ದು ಶರಣ್ಯ ಸ್ಥಳದಲ್ಲೇ ಸಾವನ್ನಪ್ಪಿ ದ್ದಾರೆ ಎಂದು ತಿಳಿದುಬಂದಿದ್ದು,
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Mandya
ರಾಜ್ಯದಲ್ಲಿ ದೇವಲಯಗಳ ವಾಸ್ತುಶಿಲ್ಪ ಕಲೆ ಕಾಲೇಜಿನ ಅವಶ್ಯಕತೆ ಇದೆ : ಶಿಲ್ಪಿ ಅರುಣ್ ಯೋಗಿರಾಜ್
ಮಂಡ್ಯ : ಶಿಲ್ಪಿಗಳು ಸರ್ಕಾರಿ ದೇವಸ್ಥಾನಗಳ ಅಥವಾ ಪುನರ್ ಸ್ಥಾಪನೆ ಕೆಲಸ ಮಾಡಬೇಕೆಂದರೆ ದೇವಾಲಯ ವಸ್ತು ಶಿಲ್ಪ ಕಲೆಯಲ್ಲಿ ಪದವಿ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ನಾವು ಕೆಲಸದಲ್ಲಿ ಏಷ್ಟೇ ಪರಿಣಿತರಾದರು ಪದವಿ ಪ್ರಮಾಣ ಪತ್ರವಿಲ್ಲದಿದ್ದರೆ ಕೆಲಸ ಮಾಡಲು ಅರ್ಹತೆ ಇರುವುದಿಲ್ಲ. ಈ ಹಿನ್ನಲೆಯಲ್ಲಿ
ಕರ್ನಾಟಕದಲ್ಲಿ ದೇವಾಲಯದ ಶಿಲ್ಪಕಲೆ ಪದವಿ ಕಾಲೇಜಿನ ಅಗತ್ಯವಿದೆ ಎಂದು ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ರವರು ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಗೆ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಲ್ಪಕಲೆಯ ನಾಡು ಕಲೆಗಳ ಬೀಡು ಎಂದು ನಮ್ಮ ರಾಜ್ಯವನ್ನು ಕರೆಯುತ್ತೇವೆ, ನಮ್ಮಲ್ಲಿ ದೇವಾಲಯ ವಾಸ್ತುಶಿಲ್ಪಕಲೆ ಕಾಲೇಜು ತೆರೆದು ಪದವಿ ನೀಡಿದರೆ ಅನೇಕ ಕೆಲಸಗಳು ನಮ್ಮ ಕರ್ನಾಟಕ ಜನಕ್ಕೆ ದೊರೆಯುತ್ತದೆ ಎಂದರು.
ಶಿಲ್ಪಿಗಳು ಶತಮಾನಗಳಿಂದ ದೇಶಕ್ಕೆ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದೇವೆ ಅದರಲ್ಲಿ ಅಗ್ರಗಣ್ಯರು ಅಮರಶಿಲ್ಪಿ ಜಕಣಾಚಾರ್ಯರು ಅವರು ನಿರ್ಮಿಸಿರುವ ದೇವಾಲಯಗಳು ಇವತ್ತಿಗೂ ತನ್ನ ಕಲೆ ಮಾಸಿ ಹೋಗದಂತೆ ತನ್ನ ಅಸ್ತಿತ್ವ ಕಾಪಾಡಿಕೊಂಡಿವೆ, ಶಿಲ್ಪಿಗಳು ನಿರ್ಮಿಸುವ ವಿಗ್ರಹ ಅವರು ಸತ್ತ ನಂತರವೂ ಪೂಜೆಗೊಳಪಡುತ್ತದೆ, ನನಗೆ ಬೆಲೆ ಕೊಡುತ್ತಿರುವುದು ನಾನೊಬ್ಬ ಶಿಲ್ಪಿ ಎಂದೆಲ್ಲಾ ನಾನು ಮಾಡಿದ ಕೆಲಸಕ್ಕೆ ಅದರ ಹಿಂದೆ ಇರುವ ಕಲೆ ಶ್ರಮಕ್ಕೆ ಮತ್ತು ಅದರ ಇತಿಹಾಸಕ್ಕೆ ಎಂದರು.
ಶ್ರಮದ ಜೀವನಕ್ಕೆ ಸಾರ್ಥಕತೆ ಇದೆ ಅದಕ್ಕೆ ನಾನೇ ಉದಾಹರಣೆ, ಇವತ್ತಿನ ಆಧುನಿಕತೆ ವೈಜ್ಞಾನಿಕವಾಗಿ ಏಷ್ಟೇ ಮುಂದುವರಿದಿದ್ದರು ಮಾಡಲು ಅಸಾಧ್ಯವಾದ ಕೆಲಸಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಮಾಡಿದ್ದಾರೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ ಅವರು ಮಾತನಾಡಿ,
ಅರುಣ್ ಯೋಗಿರಾಜ ತುಂಬಾ ಪರಿಶ್ರಮ ಪಟ್ಟು ಅಯೋಧ್ಯೆಯಲ್ಲಿ ಸುಂದರವಾದ ರಾಮ ಮೂರ್ತಿಯನ್ನು ಕೆತ್ತಿ ಇಡೀ ವಿಶ್ವದಲ್ಲೇ ಹೆಸರು ಮಾಡಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ರೈತರ ಕುಡುಗೋಲು ತಟ್ಟಿಸುವುದರಿಂದ ಹಿಡಿದು ಸಾಮಾನ್ಯ ವ್ಯಕ್ತಿಗಳು ಮನೆ ನಿರ್ಮಾಣ ಮಾಡುವುದಕ್ಕೂ ನಿಮ್ಮ ಕಸುಬುಗಳ ಅಗತ್ಯವಿದೆ ಇಂತಹ ಉತ್ತಮ ಸೇವೆಯನ್ನು ಸಾಮಾಜಕ್ಕೆ ಸಲ್ಲಿಸುತ್ತಿರುವ ವಿಶ್ವಕರ್ಮ ಜನಾಂಗದ ಬಗ್ಗೆ ಗೌರವ ಇದೆ ಎಂದರು.
ಕಾರ್ಯಕ್ರಮದಲ್ಲಿ ನಗರರಸಭೆ ಅಧ್ಯಕ್ಷ ಎಂ .ಪಿ.ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ ವಿ ನಂದೀಶ್, ಸಾಹಿತಿ ಕೆ.ಪಿ ಸ್ವಾಮಿ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
Mandya
ಡಾ.ಬಿ.ಆರ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ಅನುಸರಿಸಿ ಉಳಿಸಿಕೊಳ್ಳಬೇಕಾಗಿದೆ: ನಿ.ನ್ಯಾನಾಗಮೋಹನ ದಾಸ್
ಮಂಡ್ಯ : ಡಾ.ಬಿ.ಆರ್.ಅಂಬೇಡ್ಕರ್ ರವರು ಹಾಗೂ ಹಿರಿಯರು ದೇಶದ ಬೆಳವಣಿಗೆಗೆ ನೀಡಿದ ಸಂವಿಧಾನವನ್ನು ಅನುಸರಿಸಿ ಉಳಿಸಿಕೊಳ್ಳುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರು ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಓದು ಅಧ್ಯಯನ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಸಂವಿಧಾನವು ಜಗತ್ತಿನ ಅತಿ ದೊಡ್ಡ ಸಂವಿಧಾನವಾಗಿದ್ದು, ಸಂವಿಧಾನ ರಚನೆಯಾಗಿ ಹಲವಾರು ವರ್ಷಗಳಾದರೂ ಅನೇಕರಿಗೆ ಸಂವಿಧಾನದ ರಚನೆ ಮತ್ತು ಅದರ ಮೂಲ ತತ್ವಗಳ ಬಗ್ಗೆ ತಿಳಿದೇ ಇಲ್ಲ ಎಂಬುದು ಯೋಚಿಸುವ ವಿಷಯವಾಗಿದೆ ಎಂದರು.
ಸಾರ್ವಜನಿಕರಿಗೆ ಉಪಯುಕ್ತವಾಗಲೆಂದು 2018 ರಲ್ಲಿ ನಾನು ‘ಸಂವಿಧಾನ ಓದು’ ಎಂಬ ಪುಸ್ತಕ ರಚಿಸಿದ್ದೇನೆ, ಕಳೆದ 6 ವರ್ಷದಲ್ಲಿ 2000 ಕ್ಕೂ ಹೆಚ್ಚು ಉಪನ್ಯಾಸವನ್ನು ಸಂವಿಧಾನದ ಬಗ್ಗೆ ನೀಡಿದ್ದೇನೆ. ಇಷ್ಟಾದರೂ ರಾಜ್ಯದ ಒಂದಿಷ್ಟು ಜನರನ್ನು ತಲುಪಲು ವಿಫಲರಾಗಿದ್ದೇವೆ. ಜಿಲ್ಲೆಯ ಯುವ ಜನರಿಗೆ ಸಂವಿಧಾನದ ಮಹತ್ವ ಮೂಲ ತತ್ವಗಳನ್ನು ತಿಳಿಸುವುದೇ ಈ ಶಿಬಿರದಲ್ಲಿ ಮೂಲ ಉದ್ದೇಶ. ಜೊತೆಗೆ ನಾವು ಅಭಿವೃದ್ಧಿಯತ್ತ ಸಾಗಲು ಇರುವ ಒಂದೇ ದಾರಿ ಎಂದರೆ ಅದು ಹಿರಿಯರು ಕೊಟ್ಟ ನಮ್ಮ ಸಂವಿಧಾನ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಮಾತನಾಡಿ, ನಾನು ಯು.ಪಿ.ಎಸ್.ಸಿ. ಪರೀಕ್ಷೆ ಬರೆಯುವ ಸಮಯದಲ್ಲಿ ಮೊಟ್ಟ ಮೊದಲು ನಾನು ಓದಿದ್ದು ಸಂವಿಧಾನದ ಪುಸ್ತಕ. ಮೊದಲು ಓದುವಾಗ ಕಾನೂನಿನ ಭಾಷೆ ಅರ್ಥ ಮಾಡಿಕೊಳ್ಳಲು ಕಷ್ಟವಾಯಿತು. ಆದರೆ ಅದನ್ನು ಅರ್ಥ ಮಾಡಿಕೊಂಡಾಗ ಸಮಾಜದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ಸಂಗತಿಯನ್ನು ಅರಿತುಕೊಂಡೆ ಎಂದರು.
ನಮಗೆ ಕಷ್ಟ ಬಂದಾಗ ಯಾರೂ ನಮ್ಮ ಜೋತೆ ನಿಲ್ಲುವುದಿಲ್ಲ. ನಮ್ಮ ಬದುಕಿನ ಹೋರಾಟವನ್ನು ನಾವೇ ಮಾಡಬೇಕು. ಅದು ಜೀವನದ ತತ್ವ. ನಮ್ಮನ್ನು ಹೊರತು ಪಡಿಸಿ ನಮ್ಮನ್ನು ಕಾಪಾಡುವ ಶಕ್ತಿ ಯಾರಿಗಾದರೂ ಇದೆ ಎಂದರೆ ಅದು ಕೇವಲ ಭಾರತೀಯ ಸಂವಿಧಾನಕ್ಕೆ ಮಾತ್ರ ಎಂದು ಹೇಳಿದರು.
ಸಭೆಯಲ್ಲಿ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾಧು, ನಗರಸಭೆ ಮಾಜಿ ಅಧ್ಯಕ್ಷ ಸಿದ್ಧರಾಜು,ಮಹಿಳಾ ರೈತ ಮುಖಂಡರಾದ ಸುನಂದ ಜೈರಾಮ್, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ಕೃಷ್ಣ.ಆರ್, ಕಾರ್ಮಿಕ ಮುಖಂಡರಾದ ಸಿ.ಕುಮಾರಿ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
-
Kodagu22 hours ago
ಅಖಿಲ ಕೊಡವ ಸಮಾಜದ ಹೇಳಿಕೆಗೆ ನಮ್ಮ ವಿರೋಧವಿದೆ, ಹೋರಾಟ ಮುಂದುವರಿಯಲಿದೆ – ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಸ್ಪಷ್ಟನೆ
-
Kodagu21 hours ago
ಕಿಡಿಗೇಡಿಗಳನ್ನು ಬಂಧಿಸದೇ ನಡೆಸುವ ಶಾಂತಿ ಮಾತುಕತೆಗೆ ನಮ್ಮ ಬೆಂಬಲವಿಲ್ಲ: ಯುಕೊ ಸ್ಪಷ್ಟನೆ
-
Tech18 hours ago
ಮೊಬೈಲ್ ಬಳಕೆದಾರರಿಗೆ ದೂರ ಸಂಪರ್ಕ ಇಲಾಖೆಯಿಂದ ಗೂಡ್ ನ್ಯೂಸ್ : ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಮಾಹಿತಿ
-
Sports23 hours ago
Champions Trophy 2025ಕ್ಕೆ ಟೀಂ ಇಂಡಿಯಾ ಪ್ರಕಟ: ಗಿಲ್ಗೆ ಉಪನಾಯಕ ಪಟ್ಟ
-
Mysore22 hours ago
ಮೈಸೂರು ವಿವಿ ಗೌರವ ಡಾಕ್ಟರೇಟ್ ತಂದ ಖುಷಿ
-
Mysore20 hours ago
ಮೈಸೂರಿನ ಮಾರುಕಟ್ಟೆಗೆ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು
-
Hassan23 hours ago
ನ್ಯಾಯಾಲಯದ ತಡೆ ಆಜ್ಞೆ ಇದ್ರೂ ವಿಮಾನ ನಿಲ್ದಾಣದ ಸುತ್ತ ಕಾಂಪೌಂಡ್ ನಿರ್ಮಾಣ
-
Kodagu19 hours ago
ಕನೆಕ್ಟಿಂಗ್ ಕೊಡವಾಸ್ ಹೋರಾಟಕ್ಕೆ ನಮ್ಮ ಬೆಂಬಲ