Connect with us

Politics

ಸಲಹೆದಾರರಿಗೆ ಸಂಪುಟ ದರ್ಜೆ ಭಾಗ್ಯ ಕರುಣಿಸಿದ ಮುಖ್ಯಮಂತ್ರಿ ಕ್ರಮಕ್ಕೆ ಹೆಚ್‌ಡಿಕೆ ಲೇವಡಿ

Published

on

ಸಲಹೆಗಾರರನ್ನು ನೇಮಕ ಮಾಡಿಕೊಂಡ ಮುಖ್ಯಮಂತ್ರಿಗೆ ಹ್ಯಾಟ್ಸಾಫ್‌ ಎಂದ ಹೆಚ್.ಡಿ.ಕುಮಾರಸ್ವಾಮಿ

ರೈತರಿಗೆ ಬರ ಪರಿಹಾರ ಕೊಡಲು ದುಡ್ಡಿಲ್ಲ, ರಾಜಕೀಯ ಗಂಜಿ ಕೇಂದ್ರ ಸೃಷ್ಟಿಗೆ ದುಡ್ಡಿದೆ ಎಂದು ತರಾಟೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ರೈತರಿಗೆ ಬರ ಪರಿಹಾರ ನೀಡುವಲ್ಲಿ ಮೀನಾಮೇಷ ಎಣಿಸುತ್ತಿದೆ. ಆದರೆ ʼರಾಜಕೀಯ ಗಂಜಿ ಕೇಂದ್ರʼಗಳನ್ನು ಯಥೇಚ್ಚವಾಗಿ ಸೃಷ್ಟಿ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬರದ ನಡುವೆಯೂ ಮೂವರು ಹಿರಿಯ ಶಾಸಕರಿಗೆ ಸಂಪುಟ ದರ್ಜೆ ಭಾಗ್ಯ ಕರುಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಈ ಸರಕಾರ ರೈತರನ್ನು ಬಹಳ ಕೇವಲವಾಗಿ ನಡೆಸಿಕೊಳ್ಳುತ್ತಿದೆ. ಆದರೆ, ಅಧಿಕಾರನ್ನು ಭರ್ಜರಿಯಾಗಿ ಅನುಭವಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಸಲಹೆಗಾರರನ್ನು ನೇಮಕ ಮಾಡಿಕೊಂಡಿರುವ ಸಿಎಂಗೆ ಹ್ಯಾಟ್ಸಾಫ್ ಎಂದ ಹೆಚ್ಡಿಕೆ ಅವರು; ಸಿಎಂ ಅವರು ಬಿ.ಆರ್.ಪಾಟೀಲ್ ಅವರನ್ನು ಸಲಹೆಗಾರರನ್ನಾಗಿ ನೆಮಕ ಮಾಡಿಕೊಂಡಿದ್ದಾರೆ. ಬಸವರಾಜ ರಾಯರೆಡ್ಡಿ ಅವರಿಗೆ ಆರ್ಥಿಕ ಸಲಹೆಗಾರರು ಎಂದು ಮಾಡಿ ಸಂಪುಟ ದರ್ಜೆ ನೀಡಿದ್ದಾರೆ. ಹಾಗೆಯೇ, ರಾಜ್ಯದ 3ನೇ ಆಡಳಿತ ಸುಧಾರಣಾ ಆಯೋಗಕ್ಕೆ ಆರ್.ವಿ.ದೇಶಪಾಂಡೆ ಅವರಿಗೆ ಅವಕಾಶ ನೀಡಿ ಅವರಿಗೂ ಸಂಪುಟ ದರ್ಜೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಆತನ್ಯಾರೋ ಚುನಾವಣೆ ಮತ್ತು ಗ್ಯಾರಂಟಿ ತಂತ್ರಗಾರಿಕೆ ಮಾಡಿದ ಎಂದು ಆತನಿಗೂ ಸಲಹೆಗಾರ ಹುದ್ದೆ ಕೊಟ್ಟು ಸಂಪುಟ ದರ್ಜೆ ಕರುಣಿಸಿದ್ದಾರೆ. ಇನ್ನೊಬ್ಬರನ್ನು ಮಾಧ್ಯಮ ಸಲಹೆಗಾರ ಅಂತ ಮಾಡಿಕೊಂಡು ಅವರಿಗೂ ಸಂಪುಟ ದರ್ಜೆ ನೀಡಿದ್ದಾರೆ. ಹೀಗೆ ಸುತ್ತಲೂ ಸಲಹೆಗಾರರು, ಕಾರ್ಯದರ್ಶಿಗಳನ್ನು ಇಟ್ಟುಕೊಟಂಡು ಜನರ ತೆರಿಗೆ ದುಡ್ಡಿನಲ್ಲಿ ಗೂಟದ ಕಾರು, ಸರಕಾರಿ ಕಚೇರಿ, ಸಿಬ್ಬಂದಿ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.

ದಾಖಲೆ 14 ಬಜೆಟ್‌ ಮಂಡಿಸಿದವರಿಗೆ ಸಲಹೆಗಾರರಾ!?

ನಾಡು ಕೊಳ್ಳೆ ಹೋಗುತ್ತಿದ್ದರೂ ಈ ಸರಕಾರದಲ್ಲಿ ಅಧಿಕಾರ ಲಾಲಸೆಗೇನೂ ಕೊರತೆ ಇಲ್ಲ. 14 ಬಜೆಟ್ʼಗಳನ್ನು ಮಂಡಿಸಿ ದಾಖಲೆ ಮಾಡಿದವರು ತಮಗೆ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಸಿಎಂ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿರುವ ಕ್ರಮವನ್ನು ಕಠಿಣ ಶಬ್ದಗಳಲ್ಲಿ ಟೀಕಿಸಿದರು ಕುಮಾರಸ್ವಾಮಿ ಅವರು.

ಅವರೇ ವಿಶ್ವ ವಿಖ್ಯಾತ ಆರ್ಥಿಕ ತಜ್ಞರು. ಹಣಕಾಸು ಸಚಿವರಾಗಿ ಅನೇಕ ಸಿಎಂಗಳ ಜತೆ ಕೆಲಸ ಮಾಡಿದವರು. ಡಿಸಿಎಂ, ಸಿಎಂ ಹಾಗೂ ಪ್ರತಿಪಕ್ಷ ನಾಯಕರಾಗಿದ್ದವರು. ಅವರು ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದರೆ ಅಚ್ಚರಿ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಟಾಂಗ್ ನೀಡಿದರು.

ಇನ್ನು, ಆರ್.ವಿ.ದೇಶಪಾಂಡೆ ಅವರು 25 ವರ್ಷಗಳ ಕಾಲ ಮಂತ್ರಿ ಆಗಿದ್ದವರು. ವಿವಿಧ ಸಿಎಂಗಳ ಜತೆ ಹತ್ತಾರು ಇಲಾಖೆಗಳಲ್ಲಿ ಕೆಲಸ ಮಾಡಿದ್ದವರು. ಬಹಳ ಹಿರಿಯರು. ಈಗ ಅವರನ್ನು ಮೂರನೇ ಆಡಳತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಹಿಂದೆ ಹಾರನಹಳ್ಳಿ ರಾಮಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ವಿಜಯಭಾಸ್ಕರ್ ಅವರುಗಳು ಇದೇ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿ ಆಡಳಿತ ಸುಧಾರಣೆಗೆ ತಲಾ ಒಂದೊಂದು ವರದಿ ನೀಡಿದ್ದಾರೆ. ಆ ವರದಿಗಳು ಏನಾಗಿವೆ? ಆ ವರದಿಗಳ ಸಲಹೆಗಳನ್ನ ಸ್ವೀಕಾರ ಮಾಡಿ ಎಷ್ಟು ಆಡಳಿತ ಸುಧಾರಣೆ ಮಾಡಿದ್ದೀರಾ? ಎಂಬುದನ್ನು ಜನರಿಗೆ ತಿಳಿಸಲಿ ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.

ವಿಧಾನಸೌಧದಲ್ಲಿ ವರ್ಗಾವಣೆ ದಂಧೆ ಮಾಡಿಕೊಂಡು ಏನು ಆಡಳಿತ ಸುಧಾರಣೆ ಮಾಡುತ್ತಾರೆ ಇವರು? ಮೇಯುವುದಕ್ಕೆ ಎಲ್ಲರಿಗೂ ಮುಕ್ತ ಅವಕಾಶ ಕೊಟ್ಟಿದ್ದಾರೆ. ಬಿ.ಆರ್‌‌.ಪಾಟೀಲ್ ಅವರನ್ನು ಸಿಎಂ ತಮ್ಮ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಸಿಎಂಗಿಂತ ಸಲಹೆಗಾರ ಬೇಕಾ? ಅಹಿಂದ ಐಕಾನ್ ಅವರು. ಖರ್ಗೆಯರನ್ನೇ ದೆಹಲಿಗೆ ಎತ್ತಿಹಾಕಿದ ರಾಜಕೀಯ ಅನುಭವ ಅವರದ್ದು. ಅಂಥವರಿಗಿಂತ ಹೆಚ್ಚು ಅನುಭವ ಬಿ.ಆರ್.ಪಾಟೀಲ್ ಅವರಿಗೆ ಇದೆಯಾ? ಎಂದು ಲೇವಡಿ ಮಾಡಿದರು.

2009ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿಯೂ ಸೋತಿತ್ತು. ಅಂತಹ ಹೀನಾಯ ಸೋಲಿಗೆ ಕಾರಣರಾದ ನಾಯಕನಿಗೆ ಸಲಹೆಗಾರರ ಅಗತ್ಯ ಇದೆಯಾ? ದೇವರಾಜು ಅರಸು ನಂತರ ಎರಡು ಬಾರಿ ಸಿಎಂ, ವಿರೋಧ ಪಕ್ಷದ ನಾಯಕರಾಗಿ, ಡಿಸಿಎಂ ಆಗಿ ಅನುಭವ ಪಡೆದಿರುವ ಸಿದ್ದರಾಮಯ್ಯ ಅವರೇ ಬಿ.ಆರ್.ಪಾಟೀಲ್ ಅವರರಿಂದ ಪಡೆಯುವ ಸಲಹೆಯಾದರೂ ಇರುತ್ತದಾ? ಇದೆಂಥಾ ವಿಪರ್ಯಾಸ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

2 ಸಾವಿರ ರೂಪಾಯಿ ಪರಿಹಾರ ಕೊಡಲು ಮೀನಾಮೇಷ

ಈ ಸರಕಾರ ಏನು ಮಾಡುತ್ತಿದೆ? ಕೆಲ ಸಚಿವರು ರೈತರ ಬಗ್ಗೆ ಏನೆಲ್ಲಾ ಮಾತನಾಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅನ್ನ ಬೆಳೆದುಕೊಡುವ ರೈತರ ಬಗ್ಗೆ ಇಷ್ಟು ನಿರ್ದಯವಾಗಿ ಸರಕಾರ ವರ್ತಿಸಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಫ್ರೂಟ್ ತಂತ್ರಾಂಶದ ಮೂಲಕ ರೈತರಿಗೆ 2 ಸಾವಿರ ರೂಪಾಯಿ ಪರಿಹಾರ ಕೊಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಅದರೆ ಇಲ್ಲಿಯವರೆಗೆ ರೈತರಿಗೆ ಬಿಡಿಗಾಸನ್ನೂ ಕೊಟ್ಟಿಲ್ಲ. ಇದು ಸರ್ಕಾರದ ಏಳು ತಿಂಗಳ ಸಾಧನೆ. ನುಡಿದಂತೆ ನಡೆಯುತ್ತೇವೆ ಎಂದು ಬಡಾಯಿ ಕೊಚ್ಚಿಕೊಂಡವರು ಇವರು. ನುಡಿದಂತೆ ನಡೆಯುವುದು ಎಂದರೆ ಹೀಗೆನಾ ಎಂದು ಅವರು ಸರಕಾರದ ಮೇಲೆ ತೀವ್ರ ಪ್ರಹಾರ ನಡೆಸಿದರು.

ಕೆಲ ದಿನಗಳ ಹಿಂದೆ ಹೋಗಿ ಪ್ರಧಾನಿಗಳು ಸೇರಿದಂತೆ ಕೇಂದ್ರದ ವಿವಿಧ ನಾಯಕರನ್ನು ಸಿಎಂ, ಡಿಸಿಎಂ ಮತ್ತು ಸಚಿವರು ಭೇಟಿ ಮಾಡಿದ್ದರು. ಕೇಂದ್ರವೂ ಕೂಡ ವರದಿಯನ್ನು ಸಿದ್ಧ ಮಾಡಿಕೊಂಡಿದೆ. NDRF ಅಡಿ ಹಣ ಶೀಘ್ರವೇ ಬಿಡುಗಡೆ ಆಗಬಹುದು. ಆದರೆ, ರಾಜ್ಯದಲ್ಲಿಯೂ ಸರಕಾರ ಎನ್ನುವುದು ಇದೆಯಲ್ಲ. ಕೇಂದ್ರದಿಂದ ಹಣ ಬರುವುದರೊಳಗೆ ರೈತರಿಗೆ ತಾನೇ ಹೇಳಿದಂತೆ 2 ಸಾವಿರ ರೂಪಾಯಿ ಕೊಡಬಹುದಿತ್ತು. ಯಾಕೆ ಈ ಹಣವನ್ನು ಕೊಡಲಿಲ್ಲ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.

ರೈತರು ಕಷ್ಟದಲ್ಲಿದ್ದರೆ, ಇವರು ಮೂವರು ಡಿಸಿಎಂಗಳ ಗುಂಗಿನಲ್ಲಿ ಇದ್ದಾರೆ!

ರಾಜ್ಯದಲ್ಲಿ ಇಂಥ ಭೀಕರ ಬರದ ಪರಿಸ್ಥಿತಿ ಇದ್ದರೂ ಇವರ ಮೋಜು ಮಸ್ತಿ ಏನು ಕಡಿಮೆ ಆಗಿಲ್ಲ. ಈಗಾಗಲೇ ರೈತರ ಆತ್ಮಹತ್ಯೆಗಳು ಆರಂಭವಾಗಿದೆ. ಬೆಳೆ ಉಳಿಸಿಕೊಳ್ಳಲು ನಾರಾಯಣಪುರ ಡ್ಯಾಮ್ ಬಳಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈ ಸರಕಾರಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯದ ಚಿಂತೆ. ಇವರು ಮೂವರು ಡಿಸಿಎಂಗಳನ್ನು ಮಾಡುವ ಗುಂಗಿನಲ್ಲಿ ಇದ್ದಾರೆ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್‌ ಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಹಿರಿಯ ಮುಖಂಡ ಕೆ.ಟಿ.ಶಾಂತಕುಮಾರ್‌ ಉಪಸ್ಥಿರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Politics

ರಾಜ್ಯಪಾಲರು v/s ಸರ್ಕಾರ ಮತ್ತೆ ಸಂಘರ್ಷ: ಸಹಿ ಹಾಕದೇ ರಾಷ್ಟ್ರಪತಿ ಅಂಗಳಕ್ಕೆ ದ್ವೇಷ ಭಾಷಣ ಬಿಲ್

Published

on

ಬೆಂಗಳೂರು: ರಾಜ್ಯಪಾಲರು v/s ಸರ್ಕಾರ ನಡುವೆ ಸಂಘರ್ಷ ಪುನಃ ಶುರುವಾಗಿದ್ದು, ಸರ್ಕಾರದ ದ್ವೇಷ ಭಾಷಣ ಬಿಲ್ ಗೆ ರಾಜ್ಯಪಾಲರು ಕೊಕ್ಕೆ ಹಾಕಿದ್ದು, ಸಹಿ ಹಾಕದೇ ಮಸೂದೆಯನ್ನು  ರಾಷ್ಟ್ರಪತಿ ದ್ರೌಪದಿ ಮುರ್ಮ ಅವರಿಗೆ ಅಂಗಳಕ್ಕೆ ಕಳಿಸಿದ್ದಾರೆ. ಈ ಮೂಲಕ ಮತ್ತೆ ಸರ್ಕಾರ- ರಾಜ್ಯಪಾಲರ ಮಧ್ಯೆ ವಾರ್ ಶುರುವಾಗಿದೆ.

ಬೆಳಗಾವಿ ಅಧಿವೇಶನದಲ್ಲಿ  ಪಾಸ್ ಆಗಿದ್ದ ದ್ವೇಷ ಭಾಷಣ ಬಿಲ್‌ಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಕೊಕ್ಕೆ ಹಾಕಿದ್ದಾರೆ. ಬಿಲ್‌ಗೆ ಸಹಿ ಹಾಕದೇ ರಾಷ್ಟ್ರಪತಿಗಳ ಅಂಗಳಕ್ಕೆ ಮಸೂದೆ ರವಾನೆ ಮಾಡಿದ್ದಾರೆ. ದ್ವೇಷ ಭಾಷಣದ ವ್ಯಾಖ್ಯಾನವೇ ಮಸೂದೆಯಲ್ಲಿ ಅಸ್ಪಷ್ಟವಾಗಿದೆ. ಮಸೂದೆಗೆ ಒಪ್ಪಿಗೆ ಕೊಡದಂತೆ 40ಕ್ಕೂ ಹೆಚ್ಚು ಮನವಿ ಬಂದಿರೋ ಬಗ್ಗೆ ರಾಜ್ಯಪಾಲರು ಉಲ್ಲೇಖ ಮಾಡಿ ರಾಷ್ಟ್ರಪತಿ ಅಂಗಳಕ್ಕೆ ರವಾನಿಸಿದ್ದಾರೆ.

ರಾಷ್ಟ್ರಪತಿಗಳಿಗೆ ಬಿಲ್ ವರ್ಗಾವಣೆ ಮಾಡೋದಕ್ಕೆ ರಾಜ್ಯಪಾಲರು 29 ಕಾರಣಗಳನ್ನು ನೀಡಿದ್ದಾರೆ. ಈ ಬಿಲ್ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆ ಎಂದು ಉಲ್ಲೇಖಿಸಿದ್ದಾರೆ.
ಬಿಲ್ ವಾಪಸ್‌ಗೆ ರಾಜ್ಯಪಾಲರು ನೀಡಿದ ಮುಖ್ಯ ಕಾರಣಗಳೇನು? 
1. ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ.
2. ಅರ್ಥಪೂರ್ಣ ಸಮಾಲೋಚನೆ ಮಾಡದೇ ಅಂಗೀಕಾರ.
3. ಮಸೂದೆ ಸಂಬಂಧ ಕೆಲವು ಕಾನೂನು ತೊಡಕುಗಳಿವೆ.
4. ಮಿತಿಮೀರಿದ ಮತ್ತು ಭಯಾನಕ ಪರಿಣಾಮಗಳನ್ನು ಬೀರಲಿವೆ.
5. ಅಭಿವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಹಕ್ಕನ್ನು ಕಸಿಯುವ ಮುನ್ಸೂಚನೆ.
6. ಈ ಮಸೂದೆಯು ಉದ್ದೇಶಕ್ಕಿಂತ ಪರಿಣಾಮಕ್ಕೆ ಆದ್ಯತೆ ನೀಡಿರುತ್ತದೆ.
7. ಸತ್ಯವನ್ನು ಮಾತಾಡಿದ್ರೂ, ಬೌದ್ಧಿಕ ಟೀಕೆ ಮಾಡಿದ್ರೂ ಬಂಧಿಸಬಹುದಾಗಿದೆ.
8. ಅಭಿವ್ಯಕ್ತಿ ಸ್ವಾತಂತ್ರ‍್ಯದ ರಕ್ಷಣೆ ಒಬ್ಬ ವ್ಯಕ್ತಿ, ಸಮುದಾಯಕ್ಕೆ ಸೀಮಿತವಾಗಿರಬಾರದು.
9. ಇಡೀ ಸಮಾಜದ ಸಾಮೂಹಿಕ ಹಕ್ಕಾಗಿರಬೇಕು.
10. ಅಧಿಕಾರಿಗಳು ತೀರ್ಮಾನಿಸಿದರೆ ಯಾವುದೇ ಕಾರ್ಯಕ್ರಮ ನಿಷೇಧಿಸಬಹುದು.
11. ಮಸೂದೆಯಲ್ಲಿರುವ ಈ ಕ್ರಮ ಸರಿಯಲ್ಲ ಎಂದು ಕಾರಣವನ್ನು ಉಲ್ಲೇಖಿಸಿದ ರಾಜ್ಯಪಾಲರು ದ್ವೇಷ ಭಾಷಣ ಬಿಲ್ ಅನ್ನು ಸಹಿ ಮಾಡದೇ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರಿಗೆ ರವಾನೆ ಮಾಡಿದ್ದಾರೆ.
ರಾಜ್ಯಪಾಲ ನಡೆಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರು ರಾಜ್ಯಪಾಲರ ನಡೆ ವಿರೋಧ ಮಾಡಿದರೆ, ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ. ದ್ವೇಷ ಭಾಷಣ ನಾವು ಮಾಡೋದು ತಪ್ಪೇ ನೀವು ಮಾಡೋದು ತಪ್ಪೇ, ಅದಕ್ಕೆ ಬಿಲ್ ತಂದ್ದೀವಿ. ದ್ವೇಷ ಭಾಷಣ ಪಿತಾಮಹರು ರಾಜ್ಯದಲ್ಲಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಕುಟುಕಿದರೆ, ನೇರವಾಗಿ ಒಂದು ವರ್ಗವನ್ನು ಕಾನೂನಿನಲ್ಲಿ ಸಿಲುಕಿಸಲು ಬಿಲ್ ತಂದಿದ್ದರು. ಇದಕ್ಕೆ ನಾವು ವಿರೋಧಿಸಿದ್ದೀವಿ. ಹೀಗಾಗಿ ರಾಜ್ಯಪಾಲರು ದ್ವೇಷ ಭಾಷಣ ಬಿಲ್ ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ, ವಿಮರ್ಶೆ ಮಾಡಿ ಎಂದು ಹೇಳಿದ್ದಾರೆಂದು ಬಿಜೆಪಿ ಹೇಳುತ್ತಿದೆ. ದ್ವೇಷ ಭಾಷಣ ಬಿಲ್ ಬಗ್ಗೆ ಅನೇಕ ಗೊಂದಲ ಇದೆ ಎಂದು ಕಾರಣ ನೀಡಿ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಬಿಲ್ ರವಾನಿಸಿದ್ದಾರೆ.
Continue Reading

Politics

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಚೊಂಬು ನೀಡಲಾಗಿದೆ: ಸಿಎಂ ಸಿದ್ದರಾಮಯ್ಯ

Published

on

ಕಲಬುರಗಿ: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತಕ್ಕೆ ಬಜೆಟ್‌ನಲ್ಲಿ ಏನೂ ನೀಡಿಲ್ಲ. ಕರ್ನಾಟಕಕ್ಕೆ ಒಂದು ಚೊಂಬು ನೀಡಿದ್ದಾರೆ ಎಂದು ಕೇಂದ್ರ ಬಜೆಟ್ ವಿರುದ್ಧ ಸಿಎಂ ಸಿದ್ದರಾಮಯ್ಯ  ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡೆರಡು ಬೆಂಗಳೂರು-ಹೈದರಾಬಾದ್ ಹಾಗೂ ಬೆಂಗಳೂರು-ಚೆನ್ನೈ ಹೈಸ್ಪಿಡ್ ರೈಲು ನೀಡಿದ್ದಾರೆ. ಅದು ಕೂಡ 5 ವರ್ಷ ಸಮಯ ತೆಗೆದುಕೊಂಡಿದ್ದಾರೆ. ನಮಗೆ ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ರೈಲು ಬೇಕಾಗಿತ್ತು. ನೀರಾವರಿ ಯೋಜನೆಗೆ ಹಣ ಕೇಳಿದ್ದೇವೆ. ಆದರೆ, ನೀರಾವರಿ ಯೋಜನೆಗೆ ಒಂದೇ ಒಂದು ಶಬ್ದ ಇಲ್ಲ. ಅಪರ್ ಕೃಷ್ಣಾ ಹಾಗೂ ಅಪರ್ ಭದ್ರಾ ಯೋಜನೆಗೆ ಸಹಾಯ ಕೇಳಿದ್ರೂ ಏನು ನೀಡಿಲ್ಲ. ಈ ಹಿಂದೆ ಬಜೆಟ್‌ನಲ್ಲಿ ಯೋಜನೆಗೆ 5,200 ಕೋಟಿ ಹಣ ನೀಡುತ್ತೇವೆ ಎಂದಿದ್ದರು. ಆದರೆ, ಒಂದು ರೂಪಾಯಿ ಸಹ ಕೊಟ್ಟಿಲ್ಲ. ಮೇಕೆದಾಟು ಯೋಜನೆ ಪ್ರಕರಣ ಸಂಬಂಧ ತಮಿಳನಾಡು ಅರ್ಜಿ ವಜಾ ಆಗಿದೆ. ಆದರೂ ಸಹ ಆ ಯೋಜನೆಗೆ ಬಜೆಟ್‌ನಲ್ಲಿ ಹಣ ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.

ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಪರಿಸರ ಇಲಾಖೆ ಅನುಮತಿ ನೀಡಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಾವು ಕ್ಲಿಯರ್ ಮಾಡುವುದಾಗಿ ಯಡಿಯೂರಪ್ಪ ರಕ್ತದಲ್ಲಿ ಬರೆದು ಕೊಡುವುದಾಗಿ ಹೇಳಿದ್ದರು. ಆದರೆ, ಕೇಂದ್ರ ಪರಿಸರ ಇಲಾಖೆ ಬಜೆಟ್‌ನಲ್ಲಿ ಈ ಬಾರಿ ಸಹ ಅನುಮತಿ ಕೊಟ್ಟಿಲ್ಲ. ಈ ಮೂಲಕ ಕರ್ನಾಟಕದ ಜನತೆಗೆ ಕೇಂದ್ರ ಅನ್ಯಾಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೇಳೆಕಾಳುಗಳಿಗೆ ಸಹಾಯ ಮಾಡಿ ಎಂದು ಕೇಳಿದರೂ ಅದು ಸಹ ಮಾಡಿಲ್ಲ. 15ನೇ ಹಣಕಾಸು ಆಯೋಗ ಆರಂಭವಾಗಿದೆ. ನಾವು ಕನಿಷ್ಟ ಶೇ. 50% ಕೊಡಿ ಎಂದು ಕೇಳಿದ್ದೇವು. ಆದರೆ, ಶೇ.41% ಮಾತ್ರ ಕೊಟ್ಟಿದ್ದಾರೆ. 14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಶೇ.4.71% ಮಾತ್ರ. 14ನೇ ಹಣಕಾಸಿಗಿಂತ ಜಾಸ್ತಿ ಮಾಡಿ ಕೊಡಿ ಅಂದರೆ 4.131 ಮಾತ್ರ ಕೊಟ್ಟಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ 14ನೇ ಹಣಕಾಸಿನಷ್ಟು ಕೂಡ ಹಣ ನೀಡಿಲ್ಲ. ಉತ್ತರ ಪ್ರದೇಶಕ್ಕೆ ಹಾಗೂ ಕರ್ನಾಟಕಕ್ಕೆ ಹಣಕಾಸಿನ ಹಂಚಿಕೆಯಲ್ಲಿ ಭಾರಿ ತಾರತಮ್ಯವಾಗಿ ನಮಗೆ ಅನ್ಯಾಯವಾಗಿದೆ ಎಂದಿದ್ದಾರೆ.
ರಾಜ್ಯವಾರು ಹಣ ಹಂಚಿಕೆ ನೋಡಿದರೆ ಬಿಹಾರ 9.948, ಯುಪಿ-17.691, ಗುಜರಾತ್ 3.755, ಕರ್ನಾಟಕಕ್ಕೆ 4.131, ಆಂಧ್ರ- 4.271 ಇದೆ. ನಾವು ತಲಾ ಆದಾಯದಲ್ಲಿ ನಂಬರ್ 1, ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನ ಪಡೆದಿದ್ದೇವೆ. ಹೀಗಿದ್ರು ನಮಗೆ ಅನುದಾನ ಬಂದಿಲ್ಲ. ಬಜೆಟ್‌ಗೂ ಮುನ್ನ ನಮ್ಮ ರಾಜ್ಯದ ನೀರಾವರಿ, ಮೆಟ್ರೋ ಯೋಜನೆ, ಏಮ್ಸ್ ನೀಡಬೇಕು. ಕೆಕೆಆರ್ ಡಿಬಿಗೆ ಮ್ಯಾಚಿಂಗ್ ಗ್ರ‍್ಯಾಂಟ್ ಕೊಡಲು ಸಹ ಹೇಳಿದ್ದೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಕಲ್ಯಾಣ ಕರ್ನಾಟಕ ಭಾಗಕ್ಕೆ 13 ಸಾವಿರ ಕೋಟಿ ಅನುದಾನ ನೀಡಿದ್ದೇವೆ. ನಾವು 100 ತೆರಿಗೆ ಕೊಟ್ಟರೆ 14 ರೂಪಾಯಿ ವಾಪಸ್ ಬರುತ್ತದೆ. ಉಳಿದ ಹಣ ಕೇಂದ್ರ ಸರ್ಕಾರ ಬಳಸುತ್ತದೆ. ಸೆಸ್ ಸಬ್‌ಚಾಜ್9 ಸಹ ಕೇಂದ್ರ ಕಲೆಕ್ಟ್ ಮಾಡಿ ರಾಜ್ಯಗಳಿಗೆ ಕೊಡುವುದಿಲ್ಲ. ಹೀಗಾಗಿ, 2026-27 ಬಜೆಟ್ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
Continue Reading

Politics

ರಾಜ್ಯ ಸರ್ಕಾರದ ಜಾಹೀರಾತು ಸಮರ್ಥಿಸಿಕೊಂಡ ಡಿಸಿಎಂ ಡಿ.ಕೆ.ಶಿವಕುಮಾರ್‌

Published

on

ಶಿವಮೊಗ್ಗ: ಕೇಂದ್ರ ಸರ್ಕಾರ, ಮನರೇಗಾ ಯೋಜನೆ ಹೆಸರು ಬದಲಿಸಿರುವ ನಡೆಗೆ ಕಾಂಗ್ರೆಸ್  ವಿರೋಧ ವ್ಯಕ್ತಪಡಿಸಿದ್ದು, ಈ ಮಧ್ಯೆ ರಾಜ್ಯ ಸರ್ಕಾರ  ಈ ಬಗ್ಗೆ ಜಾಹೀರಾತು ನೀಡಿತ್ತು. ಇದನ್ನು ಡಿಸಿಎಂ ಡಿ.ಕೆ.ಶಿವಕುಮಾರ್  ಸಮರ್ಥಿಸಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಯ್ದೆ ಹಿಂಪಡೆದು ಹೊಸ ಯೋಜನೆ ಜಾರಿಗೊಳಿಸಿ ಕೇಂದ್ರ ಸರ್ಕಾರ ಗ್ರಾಮೀಣರಿಗೆ ಯಾವ ರೀತಿ ಅನ್ಯಾಯ ಮಾಡಿದೆ ಎಂಬುದನ್ನು ಜಾಹೀರಾತು ಮೂಲಕ ನಮ್ಮದೇ ಶೈಲಿಯಲ್ಲಿ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅದರಲ್ಲಿ ತಪ್ಪೇನಿದೆ ಪ್ರಶ್ನಿಸಿದ್ದಾರೆ.

ದೆಹಲಿಯಲ್ಲಿ ನಡೆದ ರೈತರ ಹೋರಾಟದ ಮಾದರಿಯಲ್ಲೇ ಮನರೇಗಾ ಯೋಜನೆ ಮರು ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ದೇಶದಾದ್ಯಂತ ಕೇಂದ್ರದ ವಿರುದ್ಧ ಹೋರಾಟ ಮಾಡಲಿದೆ.  ಕೇಂದ್ರದ ತೀರ್ಮಾನದಿಂದ  ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕು ಕಿತ್ತುಕೊಂಡಂತಾಗಿದೆ. ಇದನ್ನೇ ಜಾಹೀರಾತಿನಲ್ಲಿ ಮನವರಿಕೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

Continue Reading

Trending

error: Content is protected !!