Connect with us

Hassan

ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಬಾರಿ ಏರಿಕೆ

Published

on

ಹಾಸನ : ಹಾಸನ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಬಾರಿ ಮಳೆ‌ ಹಿನ್ನಲೆ

ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಬಾರಿ ಏರಿಕೆ

ಒಂದೇ ದಿನಕ್ಕೆ ಜಲಾಶಯ ಕ್ಕೆ ಹರಿದು ಬಂದ ಮೂರು ಟಿಎಂಸಿ ನೀರು

ನೆನ್ನೆ 28 ಟಿಎಂಸಿ ನೀರಿದ್ದ ಜಲಾಶಯದಲ್ಲಿ ಇಂದು 31 ಟಿಎಂಸಿ ನೀರು ಸಂಗ್ರಹ

ಭಾರಿ ಮಳೆಯಿಂದ ಬಹುತೇಕ ಭರ್ತಿ ಹಂತಕ್ಕೆ ಬಂದ ಜಲಾಶಯ

ಜಲಾಶಯಕ್ಕೆ ಒಂದೇ ದಿನಕ್ಕೆ ನಾಲ್ಕು ಅಡಿಗಳಷ್ಟು ನೀರು ಸಂಗ್ರಹ

ಹೇಮಾವತಿ ಜಲಾಶಯ ಭರ್ತಿಗೆ ಇನ್ನು ಆರೇ ಅಡಿ ಬಾಕಿ

ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯ

ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ

ಸದ್ಯ ಜಲಾಶಯದಲ್ಲಿರುವ ನೀರಿನ ಪ್ರಮಾಣ – 31.626 ಟಿಎಂಸಿ

ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ – 2922.00 ಅಡಿ

ಇಂದಿನ ನೀರಿನ ಮಟ್ಟ – 2916.10 ಅಡಿ

ಒಳಹರಿವು – 35871 ಕ್ಯೂಸೆಕ್

ಹೊರಹರಿವು – 1500 ಕ್ಯೂಸೆಕ್

Continue Reading

Hassan

ಆ.3, 4 ರಂದು ರಾಜ್ಯ ಮಟ್ಟದ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್

Published

on


ಹಾಸನ: ಹಾಸನ: ನಗರದ ಅಂಬೇಡ್ಕರ್ ಭವನದಲ್ಲಿ ಆಗಸ್ಟ್ ೩ ಮತ್ತು ೪ ರಂದು ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಸೀನಿಯರ್ ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ಹಮ್ಮಿಕೊಂಡಿರುವುದಾಗಿ ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಶಿಕ್ಷಕ ಹನುಮಂತೇಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕರ್ನಾಟಕ ಪವರ್ ಲಿಪ್ಟಿಂಗ್ ಅಸೋಸಿಯೇಷನ್, ಜಿಲ್ಲಾ ಪವರ್ ಲಿಪ್ಟಿಂಗ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಮೊದಲ ಬಾರಿಗೆ ಹಾಸನ ಜಿಲ್ಲೆಯಲ್ಲಿ ಸೀನಿಯರ್ ಪುರುಷ ಹಾಗೂ ಮಹಿಳೆಯರ ರಾಜ್ಯಮಟ್ಟದ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್ – ೨೦೨೪-೨೫ ನಡೆಯಲಿದೆ. ಎಂಟು ವಿಭಾಗದಲ್ಲಿ ತೂಕದ ಮೂಲಕ ಸ್ಪರ್ದೆ ಆಯೋಜಿಸಲಾಗಿದೆ. ಈ ವೇಳೆ ರಾಷ್ಟ್ರಮಟ್ಟಕ್ಕೆ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು. ರಾಜ್ಯದ ಸ್ಟ್ರಾಂಗ್ ಮೆನ್ ಮತ್ತು ವುಮೆನ್ ಹಾಗೂ ಆಕರ್ಷಕ ಟ್ರೋಫಿ ಪದಕಗಳ ವಿತರಣೆ ಮಾಡಲಾಗುವುದು ಎಂದರು. ಆಗಸ್ಟ್ ೩ ಮತ್ತು ೪ ರಂದು ಎರಡು ದಿನಗಳ ಕಾಲ ನಡೆಯುವ ಸ್ಪರ್ದೆಗೆ ರಾಜ್ಯದ ಮೂಲೆ ಮೂಲೆಯಿಂದ ಸುಮಾರು ೩೦೦ ಕ್ರೀಡಾ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ತೀರ್ಪುಗಾರರಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಿಂದ ೧೫ ಜನರು ಬರಲಿದ್ದಾರೆ. ಮುಖ್ಯವಾಗಿ ಮಂಗಳೂರಿನ ಪವರ್ ಲಿಪ್ಟಿಂಗ್ ಇಂಡಿಯಾ ಅಧ್ಯಕ್ಷರಾದ ಸತೀಶ್ ಕುಮಾರ್ ಕುದ್ರೋಳಿ ಪಾಲ್ಗೊಳ್ಳುವರು. ಭಾಗವಹಿಸುವರು ಹೆಚ್ಚಿನ ಮಾಹಿತಿಗಾಗಿ

೯೪೮೩೪೬೭೦೮೪ ಹಾಗೂ ೯೯೬೪೧೮೨೬೫೪ ಸಂಪರ್ಕಿಸಬಹುದು ಎಂದು ಹೇಳಿದರು. ನಾನು ಕೂಡ ಆಕಸ್ಮಿಕವಾಗಿ ಪವರ್ ಲಿಪ್ಟಿಂಗ್ ಕ್ರೀಡೆಗೆ ಬಂದಿದ್ದೇನೆ. ಈಗ ಸಂಸ್ಥೆಯನ್ನು ಸದೃಢವಾಗಿ ಕಟ್ಟಲಾಗಿದೆ. ನಾನು ಕಳೆದ ಎರಡು ವರ್ಷಗಳಿಂದ ಉಚಿತವಾಗಿ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಮಕ್ಕಳಿಗೆ ತರಬೇತಿ ಕೊಡಲಾಗುತ್ತಿದೆ. ಈ ಹಿಂದೆ ನಾನು ಕೂಡ ಗೋಲ್ಟ್ ಮೆಡಲ್ ಪಡೆದಿದ್ದು, ರಾಷ್ಟ್ರಮಟ್ಟದ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ಸ್ಪರ್ದೆಗೆ ಶುಕ್ರವಾರದಂದು ರಾತ್ರಿ ಮದ್ಯಪ್ರದೇಶಕ್ಕೆ ನಾವು ಕೂಡ ಪ್ರಯಣ ಬೆಳೆಸಲಾಗುತ್ತಿದ್ದು, ಜುಲೈ ೨೧ ರಿಂದ ಕ್ರೀಡೆ ಆರಂಭವಾಗಲಿದೆ. ಹಿಂದೆ ಬೆಂಗಳೂರಿನಲ್ಲಿ ನಡೆದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಶಿವಣ್ಣ ರವರು ಕೂಡ ಗೋಲ್ಟ್ ಮೆಡಲ್ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. ಕಳೆದ ವರ್ಷ ನಮಗೆ ಬೇಕಾದ ಪವರ್ ಲಿಪ್ಟಿಂಗ್ ಪರಿಕರವನ್ನು ಮಾಜಿ ಶಾಸಕರಾದ ಪ್ರೀತಂ ಗೌಡರು ಕೊಡಿಸಿದ್ದು, ಆ ಮೂಲಕ ಪ್ರಾರಂಭ ಮಾಡಲಾಗಿದೆ. ಇದಾದ ನಂತರ ಹಾಲಿ ಶಾಸಕರಾದ ಹೆಚ್.ಪಿ. ಸ್ವರೂಪ್ ಅವರು ಕೂಡ ಹಾಸನಾಂಬ ಒಳಾಂಗಣ ಕ್ರೀಡಾಂಣದಲ್ಲಿ ಜಾಗವನ್ನು ಕೊಡಿಸಿದ್ದಾರೆ. ಉಚಿತವಾಗಿ ತರಬೇತಿಯನ್ನು ಕೊಡಲಾಗುತ್ತಿದೆ ಎಂದರು. ಯಾವುದೇ ಸ್ಪರ್ದೆ ನಡೆಸಬೇಕಾದರೇ ಹಣಕಾಸಿನ ಅವಶ್ಯಕತೆ ಹೆಚ್ಚು ಇರುತ್ತದೆ. ಪ್ರಯೋಜಕರು ಸಿಗುವುದು ನಮಗೆ ಕಷ್ಟವಿದ್ದು, ಉದಾರ ಮನಸಸು ಇರುವವರು ಸಹಕಾರ ನೀಡಿ ಕ್ರೀಡೆಯನ್ನು ಬೆಳೆಸುವಂತೆ ಮನವಿ ಮಾಡಿದರು.

ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಮಾತನಾಡಿ, ಆಗಸ್ಟ್ ೩ ರಿಂದ ಎರಡು ದಿನಗಳ ಕಾಲ ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಟ್ಟದ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ಸ್ಪರ್ದೆ ಏರ್ಪಡಿಸಲಾಗಿದೆ. ಇದೊಂದು ಉತ್ತಮ ಕ್ರೀಡೆಯಾಗಿದ್ದು, ರಾಜ್ಯ ಮಟ್ಟದಿಂದ ಸ್ಪರ್ದಾಳುಗಳು ಆಗಮಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪವರ್ ಲಿಪ್ಟಿಂಗ್ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಮೋಹನ್ ಕುಮಾರ್, ಸದಸ್ಯ ನಿರಂಜನ್, ನಿರ್ದೇಶಕ ವೇಣುಗೋಪಾಲ್, ಧರ್ಮ, ಕೆ.ಎಸ್.ಆರ್.ಟಿ.ಸಿ‌. ಶಿವಸ್ವಾಮಿ ಇತರರು ಉಪಸ್ಥಿತರಿದ್ದರು.

 

Continue Reading

Hassan

ಹಾಸನದಲ್ಲಿ‌ ಡೆಂಘೀಗೆ ಮತ್ತೊಬ್ಬ ಯುವಕ ಬಲಿ

Published

on


ಹಾಸನದಲ್ಲಿ‌ ಡೆಂಘೀಗೆ ಮತ್ತೊಬ್ಬ ಯುವಕ ಬಲಿ

ಎಂಬಿಬಿಎಸ್ ವಿದ್ಯಾರ್ಥಿ ಡೇಂಘಿಯಿಂದ ಸಾವು

ಕುಶಾಲ್ (22) ಡೆಂಘೀಗೆ ಬಲಿಯಾದ ವಿದ್ಯಾರ್ಥಿ

ಹೊಳೆನರಸೀಪುರ ‌ತಾ. ಹಳ್ಳೀ ಮೈಸೂರು ಹೋ.ಯ ಗೋಹಳ್ಳಿ ಗ್ರಾಮದ ಯುವಕ

ಒಂದು ವಾರದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಶಾಲ್

ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ರಾತ್ರಿ ಸಾವನ್ನಪ್ಪಿದ ಯುವಕ

ಪ್ರತಿಭಾನ್ವಿತ, ಬಡ ವಿದ್ಯಾರ್ಥಿಯಾಗಿದ್ದ ಕುಶಾಲ್

ಹಾಸನದ ಹಿಮ್ಸ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ಕುಶಾಲ್

ಕುಶಾಲ್ ಸಾವನ್ನಪ್ಪಿದ ಆಸ್ಪತ್ರೆಯಲ್ಲೇ ಡೆಂಘೀಗೆ ಚಿಕಿತ್ಸೆ ಪಡೆಯುತ್ತಿರೋ ತಾಯಿ ರೇಖಾ

ಮಗನ ಎಂಬಿಬಿಎಸ್ ಕನಸು ಹೊತ್ತಿದ್ದ ತಾಯಿ ರೇಖಾ ಮತ್ತು ತಂದೆ ಮಂಜುನಾಥ್

ಟೈಲರ್ ವೃತ್ತಿ ಮಾಡುತ್ತಿದ್ದ ರೇಖಾ ಶಿಕ್ಷಕ ವೃತ್ತಿಯಲ್ಲಿದ್ದ ತಂದೆ ಮಂಜುನಾಥ್

Continue Reading

Hassan

ಇಂದಿನಿಂದ ನಾಲೆಗೆ ನೀರು

Published

on

ಹಾಸನ: ಉತ್ತಮ ಮಳೆ ಹಾಗೂ ಹೇಮಾವತಿ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯ ಏರಿಕೆಯಾಗುತ್ತಿರುವುದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆಕಟ್ಟೆ ತುಂಬಿಸಲು ನದಿ ಮತ್ತು ಯೋಜನಾ ವ್ಯಾಪ್ತಿಯ ಎಲ್ಲಾ ನಾಲೆಗಳಿಗೆ ಜು.೧೯ ರಿಂದ ನೀರು ಹರಿಸಲಾಗುವುದು ಎಂದು ಜಲಾಶಯ ಯೋಜನೆ ಸೂಪರಿಂಟೆಂಡೆಂಟ್ ಇಂಜಿನಿಯರ್ ತಿಳಿಸಿದ್ದಾರೆ.

Continue Reading

Trending

error: Content is protected !!