Mysore
ಪಿರಿಯಾಪಟ್ಟಣ ತಾಲೂಕಿನ ಚೌತಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಬಾರಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿ ಸಾರ್ವಜನಿಕ ಜೀವನ ಅಸ್ತವ್ಯಸ್ತವಾಗಿದೆ.
ಪಿರಿಯಾಪಟ್ಟಣ ನಗರದಿಂದ ಲಕ್ಷ್ಮಿಪುರ ಮಾರ್ಗವಾಗಿ ಚೌತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಬಳಿ ಇರುವ ಮೊಗೆಕೆರೆ ಬಾರಿ ಮಳೆಗೆ ತುಂಬಿ ಕೋಡಿ ಬಿದ್ದ ಪರಿಣಾಮ ಅಕ್ಕಪಕ್ಕದ ರಸ್ತೆ ಮತ್ತು ಜಮೀನು ಜಲಾವೃತವಾಗಿದೆ,
ಕೆರೆ ರಸ್ತೆ ಪಕ್ಕದಲ್ಲಿದ್ದ ಪಾಲ ಕುಸಿದು ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ಹರಿದಿದ್ದರಿಂದ ವಾಹನಗಳು ಸಂಚರಿಸಲು ಹರ ಸಾಹಸ ಪಡಬೇಕಾಯಿತು.

ಚೌತಿ ಗ್ರಾಮ ಪಂಚಾಯಿತಿ ಮುಂಭಾಗದ ರಸ್ತೆ ಅಕ್ಕಪಕ್ಕದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ ಹರಿದಿದೆ, ಧಾರಾಕಾರ ಮಳೆಗೆ ರೈತರ ಬೆಳೆ ನಾಶವಾಗಿದೆ ಒಟ್ಟಾರೆ ಭಾನುವಾರ ಮದ್ಯಾಹ್ನ ಸುರಿದ ಬಾರಿ ಮಳೆಗೆ ಚೌತಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನರ ಜೀವನ ಅಸ್ತವ್ಯಸ್ತವಾಗಿದೆ.

Mysore
ನಕಲಿ ದಾಖಲೆ ಸೃಷ್ಟಿಸಿ ಮೈಸೂರಿನ ಐಸಿಐಸಿಐ ಬ್ಯಾಂಕ್‌ಗೆ 2.33 ಕೋಟಿ ರೂ. ವಂಚನೆ
ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ಮೈಸೂರಿನ ಐಸಿಐಸಿಐ ಬ್ಯಾಂಕ್‌ಗೆ 2.33 ಕೋಟಿ ರೂ. ವಂಚಿಸಲಾಗಿದೆ.
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಧ್ಯವರ್ತಿಗಳು ಸೇರಿದಂತೆ 8 ಮಂದಿ ವಿರುದ್ಧ ನಗರದ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ವಿವಿ ಮೊಹಲ್ಲಾ ಶಾಖೆಯ ವ್ಯವಸ್ಥಾಪಕ ವಸಂತ್ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ 1: ಸಾಲಗಾರ ಚಂದ್ರಶೇಖರ್, ಸಹ ಸಾಲಗಾರ ಸಂದೀಪ್ ಹಾಗೂ ಮಧ್ಯವರ್ತಿ ಪ್ರತಾಪ್ ಆರೋಪಿಗಳು. ಇವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಗೆ 45 ಲಕ್ಷ ರೂ. ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ 2: ಸಾಲಗಾರ ರವಿಕೀರ್ತಿ, ಸಹ ಸಾಲಗಾರ ರಂಜನ್ ಹಾಗೂ ಮಧ್ಯವರ್ತಿ ರೋಷನ್ ಆರೋಪಿಗಳು. ಬ್ಯಾಂಕ್ ಗೆ ನಕಲಿ ದಾಖಲೆ ಸಲ್ಲಿಸಿ 65,55,187 ರೂ. ವಂಚಿಸಿದ್ದಾರೆಂದು ಉಲ್ಲೇಖಿಸಲಾಗಿದೆ.
ಪ್ರಕರಣ 3: ಸಾಲಗಾರ ರೋಷನ್ ಹಾಗೂ ಸಹ ಸಾಲಗಾರರಾದ ಸುಹಾನಾ ಎಂಬುವರು ನಕಲಿ ದಾಖಲೆ ನೀಡಿ 1,22,10,470 ರೂ. ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಸದರಿ ಆರೋಪಿಗಳು 2022ರಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದಿದ್ದಾರೆ. ಆದರೆ ಹಣ ಮರು ಪಾವತಿ ಮಾಡಿಲ್ಲ. ಪರಿಶೀಲನೆ ನಡೆಸಿದಾಗ ನಕಲಿ ದಾಖಲೆ ನೀಡಿರುವುದು ಗೊತ್ತಾಗಿದೆ ಎಂದು ವಿವರಿಸಲಾಗಿದೆ.
Mysore
ನಿರ್ಧಾರ ಕೈ ಬಿಡುವಂತೆ ಅಗ್ರಹ
ತಿ.ನರಸೀಪುರ: ಪ್ರಸಿದ್ಧ ರಾಜ ಬೊಪ್ಪೇಗೌಡನ ಪುರದ ಮಂಟೇಸ್ವಾಮಿ ಗದ್ದುಗೆ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿರುವ ಇತರೆ ಮಂಟೇಸ್ವಾಮಿ,ರಾಚಪ್ಪಾಜಿ ಮತ್ತು ಸಿದ್ದಪ್ಪಾಜಿ ಗದ್ದುಗೆಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚನೆ ನಿರ್ಧಾರವನ್ನು ಸರ್ಕಾರ ಕೈ ಬಿಡಬೇಕು ಎಂದು ಹಲವು ಸಂಘಟಗಳ ಮುಖಂಡರು ಒತ್ತಾಯಿಸಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಕರೆದಿದ್ದ ಸುದ್ದಿ ಘೋಷ್ಠಿಯಲ್ಲಿ ತಾಲೂಕು ರೈತ ಸಂಘ, ಬಹುಜನ ಸಮಾಜವಾದಿ ಪಕ್ಷ ಮತ್ತುತಾಲೂಕು ಮಾದಿಗ ಸಂಘಟನೆಗಳು ಸರ್ಕಾರ ಪ್ರಾಧಿಕಾರ ರಚನೆಯ ನಿರ್ಧಾರವನ್ನು ಖಂಡಿಸಿದವು.
ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ, ಕೆಲವು ರಾಜಕೀಯ ನಾಯಕರು ತಮ್ಮ ವೈಯುಕ್ತಿಕ ಹಿತಾಸಕ್ತಿಗೋಸ್ಕರ ಬೋಪ್ಪೆಗೌಡನಪುರ,ಕಪ್ಪಡಿ, ಕುರುಬನಕಟ್ಟೆ, ಚಿಕ್ಕಲ್ಲೂರು ಮತ್ತು ಹೊನ್ನನಾಯಕಹಳ್ಳಿ ಗಳಲ್ಲಿರುವ ಸಿದ್ದಪ್ಪಾಜಿ, ರಾಚಪ್ಪಾಜಿ ಮತ್ತು ಮಂಟೇ ಸ್ವಾಮಿ ಗದ್ದುಗೆಗಳಿಗೆ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚನೆ ಚಿಂತನೆ ನಡೆಸಿದ್ದು, ಈ ನಿರ್ಧಾರದಿಂದ ಈ ಎಲ್ಲ ಶ್ರೀ ಕ್ಷೇತ್ರಗಳಲ್ಲಿ ಮಂಟೇಸ್ವಾಮಿ,ಸಿದ್ದಪ್ಪಾಜಿ ಮತ್ತು ರಾಚಪ್ಪಾಜಿ ಪರಂಪರೆ ನಶಿಸಿ ಹೋಗಲಿದೆ. ಹಾಗಾಗಿ ಸರ್ಕಾರ ಪ್ರಾಧಿಕಾರ ರಚನೆಯ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಅಗ್ರಹಿಸಿದರು.
ರೈತ ಸಂಘದ ಜಿಲ್ಲಾ ಮುಖಂಡರಾದ ಚಿದರಹಳ್ಳಿ ನಾಗೇಂದ್ರ,
ಈ.ರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಜ್ಜಲೂರು ಚಂದ್ರಶೇಖರ್, ತಾಲೂಕು ಸಂಘಟನಾ ಕಾರ್ಯದರ್ಶಿ ಶಾಂತಮೂರ್ತಿ,
ಬಿಎಸ್ ಪಿ ರಾಜ್ಯ ಕಾರ್ಯದರ್ಶಿ ಪುಟ್ಟಸ್ವಾಮಿ, ತಾಲೂಕು ಬಾಬು ಜಗಜೀವನ್ ರಾಂ ಸಂಘದ ಮಾಜಿ ಅಧ್ಯಕ್ಷ ಪುಟ್ಟಯ್ಯ, ಕೊತ್ತೆಗಾಲ ಕುಮಾರ್, ರಾಮಸ್ವಾಮಿ, ಕಳ್ಳಿಪುರ ನಾರಾಯಣ್, ಕೆಇಬಿ ನಾರಾಯಣ್ (ಕಂಟ್ರಾಕ್ಟರ್ ), ಹೇಳವರಹುಂಡಿ ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.
Mysore
ಬಿಸಿಯೂಟ ಅನುದಾನ ದುರುಪಯೋಗ
ತಿ.ನರಸೀಪುರ: ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ಬಿಸಿಯೂಟ ಯೋಜನೆ ಹೆಸರಿನಲ್ಲಿ ಅನುದಾನ ದುರ್ಬಳಕೆ, ಅನುದಾನ ಹೊಂದಾಣಿಕೆ ಮಾಡಲು ನಕಲಿ ಬಿಲ್‌ಗಳ ಸೃಷ್ಟಿ ಮತ್ತು ಲೆಕ್ಕಪತ್ರಗಳಲ್ಲಿ ಗೊಂದಲವಿದ್ದು, ವಿದ್ಯೋದಯ ಸಂಸ್ಥೆ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಬಣ) ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ್ ಅಗ್ರಹಿಸಿದರು.
ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಕ್ಷರ ದಾಸೋಹ ಖಾತೆಯಿಂದ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿಕೊಂಡು ಹಣವನ್ನು ಸಂಸ್ಥೆಯ ಎರಡು ಶಾಲೆಗಳ ಮುಖ್ಯ ಶಿಕ್ಷಕರು ದುರುಪಯೋಗ ಮಾಡಿಕೊಂಡಿರುವುದು ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗಗೊಂಡಿದೆ.
ಹೆಚ್ಚುವರಿ ಹಣ ಬಿಡುಗಡೆ ಮಾಡಿ ಆದನ್ನು ಹೊಂದಾಣಿಕೆ ಮಾಡಲು ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇದ್ದಕ್ಕಾಗಿ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಅಸಮಾನತೆ, ಹಾಜರಿಲ್ಲದ ಮಕ್ಕಳಿಗೂ ಹಾಜರಾತಿ ನೀಡಲಾಗಿದೆ.ಅಲ್ಲದೆ ಡ್ರಾ ಮಾಡಿರುವ ಹಣಕ್ಕೆ ಹಣಕಾಸು ವಹಿಯನ್ನು ಸಮರ್ಪಕವಾಗಿ ನಿರ್ವಹಿಸದಿಲ್ಲದಿರುವುದು ಕೂಡ ಕಂಡು ಬಂದಿದೆ.

ಸಾಮಾಜಿಕ ಹೋರಾಟಗಾರ ಬಿ.ಎಂ.ನವೀನ್ ಮಾತನಾಡಿ,ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರಿಗೆ ಗೈರು ಹಾಜರಾತಿಯಾಗಿದ್ದ ಮಕ್ಕಳ ಹೆಸರಿನಲ್ಲಿ ಸುಳ್ಳು ಹಾಜರಾತಿ ದಾಖಲಿಸಲು ಒತ್ತಡ ಹಾಕಿದ್ದು, ನಕಲಿ ಬಿಲ್‌ಗಳಿಗೆ ಸಹಿ ಮಾಡಿಸಲು ಒತ್ತಾಯ ಮಾಡಿದ್ದಾರೆ. ಕೆಲ ಶಿಕ್ಷಕರ ಮೇಲೆ ಜಾತಿ ಆಧಾರಿತ ಪ್ರಕರಣ ದಾಖಲಿಸಲು ಸೂಚನೆ ನೀಡಿರುವುದು ವರದಿಯಲ್ಲಿ ಉಲ್ಲೇಖವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕದಸಂಸ ತಾಲೂಕು ಸಂಚಾಲಕ
ಕುಂತನಹಳ್ಳಿ ಪುರುಷೋತ್ತಮ್, ಕೋಣಗಳ್ಳಿ ಮಹೇಶ್, ಅತ್ತಹಳ್ಳಿ ರವಿ, ಸದಸ್ಯರಾದ ಸೋಸ್ಲೆ ನಾರಾಯಣ್, ಬಿ.ಎಂ.ನವೀನ್, ಕುಂತನಹಳ್ಳಿ ಗೋಪಿ ಹಾಜರಿದ್ದರು.
ಮಾನ್ಯತೆ ನವೀಕರಣ ರದ್ದತಿಗೆ ಅಗ್ರಹ:
ಕರ್ನಾಟಕ ಶಿಕ್ಷಣ ಕಾಯಿದೆ 1983ರ ಕಲಂ 53ರಡಿ ಮೂವರು ಶಿಕ್ಷಕರನ್ನು ಅಮಾನತು ಮಾಡಲು ಶಿಫಾರಸು ಮಾಡಿದ್ದರೂ, ಆಡಳಿತ ಮಂಡಳಿ ಕ್ರಮ ಕೈಗೊಂಡಿಲ್ಲ. “ರಾಜಕೀಯ ಒತ್ತಡದಿಂದ ವಿಚಾರಣೆ ನಿಲ್ಲಿಸಲಾಗಿದೆ.ವಿದ್ಯೋದಯ ಶಾಲೆಗೆ ಅಕ್ಷರ ದಾಸೋಹ ಅನುದಾನವನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು. ಶಾಲೆಯ ಮಾನ್ಯತೆ ನವೀಕರಣ ರದ್ದುಪಡಿಸಬೇಕು.ಆರೋಪಿತ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸಮಿತಿ ಮನವಿ ಸಲ್ಲಿಸಿದೆ. ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಮಾಡಲಾಗುವುದು ಎಂದು ಸೋಸಲೆ ರಾಜಶೇಖರ್ ಎಚ್ಚರಿಸಿದ್ದಾರೆ.
-
Kodagu20 hours agoಆಮೆಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ: ಎಸ್ಟಿ ಮೋರ್ಚಾ ಅಸಮಾಧಾನ
-
Kodagu12 hours agoಜಿಲ್ಲೆಯಾದ್ಯಂತ ಡಿ.21 ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ
-
Mysore10 hours agoಬಿಸಿಯೂಟ ಅನುದಾನ ದುರುಪಯೋಗ
-
Chamarajanagar12 hours agoಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
-
Kodagu12 hours agoಪ್ರಧಾನಿ ಕುರಿತು ಅವಹೇಳನ – ನಾಲ್ವರ ಬಂಧನ
-
Mandya14 hours agoಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1066 ನೇ ಜಯಂತಿ ಮಹೋತ್ಸವದ ಪೂರ್ವ ಸಿದ್ದತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು
-
Mysore13 hours agoನಂಜನಗೂಡು ಪತ್ರ ಬರಹಗಾರ ಸಂಘದಿಂದ ಡಿ. 15 ಮತ್ತು 16 ರಂದು ಪ್ರತಿಭಟನೆ
-
Mysore13 hours agoವರುಣ ಹೋಬಳಿಯ ಮೇಗಳಾಪುರ ಗ್ರಾಮದಲ್ಲಿ ಇ-ಪೌತಿ ಆಂದೋಲನ: ಹೆಚ್ಚುವರಿ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
