Connect with us

Hassan

ಎಸ್‌ಐಟಿ ಸೇರಿದ ಹಾಸನ ಪೊಲೀಸ್

Published

on

ಹಾಸನ: ಹೊಳೆನರಸೀಪುರ ನಗರಠಾಣೆಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಿಐಡಿಯ ಎಸ್‌ಐಟಿ ತಂಡಕ್ಕೆ ಜಿಲ್ಲೆಯಿಂದ ಡಿವೈಎಸ್ಪಿ, ಇನ್ಸ್‌ಪೆಕ್ಟರ‍್ಸ್, ಪಿಎಸ್‌ಐ ಹಾಗೂ ಇತರೆ ಸಿಬ್ಬಂದಿಗಳನ್ನು ಓಓಡಿ ಆಧಾರದ ಮೇಲೆ ನಿಯೋಜನೆ ಮಾಡಲಾಗಿದೆ.
ಸದರಿ ಪ್ರಕರಣದ ತನಿಖೆಯಲ್ಲಿ ಸಹಾಯಕರಾಗಿ ಪೂರಕ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸಿಐಡಿ ವಿಭಾಗದ ಪೊಲೀಸ್ ಮಹಾ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದು ಕೋರಿದ್ದರು.


ಅದರಂತೆ ವಿಶೇಷ ತನಿಖಾ ತಂಡಕ್ಕೆ ಮುಂದಿನ ಆದೇಶದ ವರೆಗೆ ಎಎಸ್ಪಿ ಎಂ.ಕೆ.ತಮ್ಮಯ್ಯ, ಸೆನ್ ಠಾಣೆ ಇನ್ಸ್‌ಪೆಕ್ಟರ್ ಜಗದೀಶ್ ಬಿ.ಸಿ. ಯಸಳೂರು ಠಾಣೆ ಪಿಎಸ್‌ಐ ಶ್ರೀನಿವಾಸ್, ಶ್ರವಣಬೆಳಗೊಳ ಠಾಣೆ ಪಿಎಸ್‌ಐ ಶಿವಶಂಕರ್, ಸೆನ್ ಠಾಣೆ ಎಪಿಸಿ-೧೨ ಪ್ರತಾಪ್ ಮತ್ತು ಸಕಲೇಶಪುರ ಠಾಣೆಯ ರವಿ ಸಿಪಿಸಿ-೪೧೦ ಇವರನ್ನು ನಿಯೋಜಿಸಲಾಗಿದೆ. ಈಗಾಗಲೇ ಇಷ್ಟೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇ ೮ ರಂದೇ ವರದಿ ಮಾಡಿಕೊಂಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Hassan

ಸನ್ಯಾಸ ದೀಕ್ಷೆ, ಶಿಷ್ಯತ್ವ ಸ್ವೀಕಾರ ಸಮಾರಂಭದ ಪೂರ್ವಭಾವಿ ಸಭೆಗೆ ಭಾಗವಹಿಸುವಂತೆ ಮನವಿ: ಹೆಚ್. ಎಸ್. ಆನಂದ್

Published

on

ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠದ ಪೂಜ್ಯರ ಉತ್ತರಾಧಿಕಾರಿಗಳ ಸನ್ಯಾಸ ದೀಕ್ಷೆ ಹಾಗೂ ಶಿಷ್ಯತ್ವ ಸ್ವೀಕಾರ ಸಮಾರಂಭದ ಪ್ರಯುಕ್ತ ಫೆ.16 ರಂದು ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಹೀಗಾಗಿ ಈ ಸಭೆಯಲ್ಲಿ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಹಾಸನ ತಾಲೂಕು ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಹೆಚ್. ಎಸ್. ಆನಂದ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ಈ ಸಮಾರಂಭ ಶ್ರೀ ಮಠದಲ್ಲಿ ಫೆ. 25 ಮತ್ತು 26 ರಂದು ಜರುಗಲಿದೆ. ಹಾಗಾಗಿ ಫೆ.16 ರಂದು ಸಂಜೆ 05-00 ಗಂಟೆಗೆ  ಹಾಸನ ನಗರದ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದ ವಿಶ್ವಕರ್ಮ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದ್ದಾರೆ.

ಈ ಸಭೆಯ ದಿವ್ಯ ಸಾನಿಧ್ಯವನ್ನು ಶ್ರೀಮಠದ ಯತಿಶ್ರೇಷ್ಠರಾದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನಮೂರ್ತಿಸ್ವಾಮಿಗಳವರು ವಹಿಸಲಿದ್ದು ಹಾಸನ ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್. ಬಿ. ಕುಮಾರಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್. ವಿ. ಹರೀಶ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ದೇವಾಲಯದ ಪೂಜಾ ಸಮಿತಿ ಅಧ್ಯಕ್ಷ ಹೆಚ್. ಕೆ. ಆನಂದ್, ತಾಲೂಕು ವಿಶ್ವಕರ್ಮ ಯುವಕ ಸಂಘದ ಅಧ್ಯಕ್ಷ ಹೆಚ್. ಕೆ. ಸತೀಶ್, ಗಾಯತ್ರಿ ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಅನಿಲ ಪದ್ಮನಾಭ, ಶ್ರೀಮಠದ ಮತ್ತು ಸಮಾಜದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದು ಹೆಚ್. ಎಸ್. ಆನಂದ್ ತಿಳಿಸಿದ್ದಾರೆ.

Continue Reading

Hassan

ಮೈತ್ರಿ ಕುರಿತು ಹೈಕಮಾಂಡ್ ತೀರ್ಮಾನವೇ ಅಂತಿಮ: ಛಲವಾದಿ ನಾರಾಯಣಸ್ವಾಮಿ

Published

on

ಹಾಸನ: ಮುಂದಿನ ಚುನಾವಣೆಗಳ ಮೈತ್ರಿ ಕುರಿತ ಅಂತಿಮ ತೀರ್ಮಾನವನ್ನು ಕೇಂದ್ರ ನಾಯಕತ್ವವೇ ಕೈಗೊಳ್ಳಲಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಬಗ್ಗೆ ಅನಾವಶ್ಯಕ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು. “ನಾವು ಅವರನ್ನು ಗೌರವಿಸುವಷ್ಟೇ ಅವರು ನಮ್ಮನ್ನು ಗೌರವಿಸಬೇಕು. ಟಿಕೆಟ್ ನೀಡುವ ಅಧಿಕಾರ ಸ್ಥಳೀಯ ಮಟ್ಟದಲ್ಲಿ ಯಾರಿಗೂ ಇಲ್ಲ. ಅದು ಮೇಲ್ಮಟ್ಟದಲ್ಲಿ, ಹೈಕಮಾಂಡ್ ನಿರ್ಧಾರದಂತೆ ನಡೆಯುತ್ತದೆ. ಯಾವುದೇ ಸಣ್ಣ ಕಾರಣಗಳನ್ನು ಇಟ್ಟುಕೊಂಡು ಹೇಳಿಕೆ ನೀಡುವುದು ಸೂಕ್ತವಲ್ಲ,” ಎಂದು ಸ್ಪಷ್ಟಪಡಿಸಿದರು.

“ಯಾರೇ ಹೇಳಿಕೆ ನೀಡಲಿ, ಟಿಕೆಟ್ ಕೊಡುವುದು ಬಿಜೆಪಿ ಹೈಕಮಾಂಡ್. ಎಲ್ಲ ತೀರ್ಮಾನಗಳು ರಾಷ್ಟ್ರಮಟ್ಟದಲ್ಲಿ ಆಗುತ್ತವೆ. ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಜನತಾದಳ ಪ್ರಭಾವ ಇರುವುದರಿಂದ ಅಪಸ್ವರಗಳು ಸಹಜ. ಅಂತಿಮವಾಗಿ ವರಿಷ್ಠರು ಕೂತು ತೀರ್ಮಾನ ಮಾಡುತ್ತಾರೆ,” ಎಂದರು.

2028ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, “ಜನತಾದಳ 113 ಸ್ಥಾನ ಗೆದ್ದರೆ ಯಾರು ಬೇಕಾದರೂ ಸಿಎಂ ಆಗಬಹುದು. ಅದನ್ನು ತಡೆಯಲು ನಾವು ಯಾರು? ಅದೇ ರೀತಿ ನಾವು 113 ಗೆದ್ದರೆ ನಮ್ಮವರೇ ಸಿಎಂ ಆಗುತ್ತಾರೆ ಎಂದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ದೇಶದಲ್ಲಿ ಕಾಂಗ್ರೆಸ್ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ ಎಂದು ಆರೋಪಿಸಿದ ಅವರು, ಕರ್ನಾಟಕವನ್ನು ‘ಎಟಿಎಂ’ ಮಾಡಿಕೊಂಡು ಇತರೆ ರಾಜ್ಯಗಳ ಚುನಾವಣೆಗೆ ಹಣ ಹರಿಸಲಾಗುತ್ತಿದೆ ಎಂದು ಟೀಕಿಸಿದರು. ಅಬಕಾರಿ ಇಲಾಖೆಯಲ್ಲಿ 6000 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿ, ಈ ವಿಚಾರದಲ್ಲಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ ಎಂದರು.

ವಿಶೇಷ ಅಧಿವೇಶನ ಕರೆದಿದ್ದು 30 ರಿಂದ 40 ಕೋಟಿ ರೂ. ವೆಚ್ಚವಾಗಿದೆ. ಆ ಹಣವನ್ನು ಬಡವರಿಗೆ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟ ಅವರು, ಅಧಿವೇಶನಕ್ಕೆ ರಾಜ್ಯಪಾಲರನ್ನು ಕರೆದು ಅವಮಾನಿಸಲಾಗಿದೆ ಎಂದು ದೂರಿದರು.

“1982ರಿಂದ ಸಿದ್ದರಾಮಯ್ಯ ಅವರನ್ನು ನೋಡುತ್ತಿದ್ದೇನೆ. ಆಗಿನ ಸಿದ್ದರಾಮಯ್ಯ ಮತ್ತು ಈಗಿನ ಸಿದ್ದರಾಮಯ್ಯ ನಡುವೆ ವ್ಯತ್ಯಾಸ ಇದೆ. ಕಾಂಗ್ರೆಸ್ ನೆಲಕಚ್ಚುತ್ತಿದೆ. ಈಗ ಚುನಾವಣೆ ನಡೆದರೂ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ,” ಎಂದು ಹೇಳಿದರು. ಕೆಲವು ಎಡಪಂಥೀಯ ಸಂಘಟನೆಗಳೊಂದಿಗೆ ಒಪ್ಪಂದ ಮಾಡಿಕೊಂಡು ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು.

“ಓಟ್ ಚೋರಿ ಮಾಡಿ ಆಡಳಿತ ನಡೆಸಬಾರದು; ಜನಮನ ಗೆದ್ದು ಆಡಳಿತ ನಡೆಸಬೇಕು. ಕಾಂಗ್ರೆಸ್ ಇದೇ ರೀತಿ ಮುಂದುವರಿದರೆ ಜನರು ತಕ್ಕ ಶಿಕ್ಷೆ ನೀಡುತ್ತಾರೆ,” ಎಂದು ಹೇಳಿದರು.

Continue Reading

Hassan

ಶಾಸಕ ಬಾಲಕೃಷ್ಣ ಅವರಿಂದ ಮುಖ್ಯಮಂತ್ರಿಗಳಿಗೆ ಮನವಿ

Published

on

ವರದಿ :  ದಯಾನಂದ ಶೆಟ್ಟಿಹಳ್ಳಿ

ಚನ್ನರಾಯಪಟ್ಟಣ: ಬೆಂಗಳೂರು ವಿಧಾನ ಸೌಧದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಭೇಟಿ ಮಾಡಿ, ಈ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಚನ್ನರಾಯಪಟ್ಟಣ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಎಂ‌.ಸಿ.ಎಚ್ ಘೋಷಣೆ ಮಾಡಬೇಕೆಂದು ಮನವಿ ಸಲ್ಲಿಸಿದ್ದು, ಸಿಎಂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಶಾಸಕ ಸಿ.ಎನ್.ಬಾಲಕೃಷ್ಣ ಅವರು ಮಾತನಾಡಿ, ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಎಂ.ಸಿ.ಹೆಚ್ ಮಂಜೂರಾತಿ ನೀಡಿ ಆಯ-ವ್ಯಯದಲ್ಲಿ ಘೋಷಣೆ ಮಾಡಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಚನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆಯು ತಾಲ್ಲೂಕಿನಾದ್ಯಂತ 1.30 ಲಕ್ಷ ಜನಸಂಖ್ಯೆಗೆ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದ್ದು ಈ ಆಸ್ಪತ್ರೆಗೆ ಗಡಿಭಾಗದ ಮಂಡ್ಯ, ತುಮಕೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಸಹ ಆಗಮಿಸುತ್ತಿರುವುದು ವಿಶೇಷ ಎಂದು ತಿಳಿಸಿದರು.

ಇಲ್ಲಿ ಪ್ರತಿನಿತ್ಯ 1000 ದಿಂದ 1200 ರವರೆಗೆ ಹೊರ ರೋಗಿಗಳು ಹಾಗೂ 70 ರಿಂದ 80 ಒಳರೋಗಿಗಳು ಚಿಕಿತ್ಸೆಯನ್ನು ಪಡೆಯುತ್ತಿರುತ್ತಾರೆ. ಈ ಆಸ್ಪತ್ರೆಯಲ್ಲಿ ತಿಂಗಳಿಗೆ ಸರಾಸರಿ 80 ರಿಂದ 90 ಸಾಮಾನ್ಯ ಪ್ರಸೂತಿಗಳು ಹಾಗೂ 20 ರಿಂದ 30 ಶಸ್ತ್ರ ಚಿಕಿತ್ಸೆ ಮೂಲಕ ಪ್ರಸೂತಿಗಳನ್ನು ನಡೆಸಲಾಗುತ್ತಿರುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ತಾಲೂಕು ಕೇಂದ್ರ ಚನ್ನರಾಯಪಟ್ಟಣವು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು 2,93,723 ಜನಸಂಖ್ಯೆ ಹೊಂದಿರುತ್ತದೆ. 93 ಉಪ ಕೇಂದ್ರಗಳು, 25 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 4 ಸಮುದಾಯ ಆರೋಗ್ಯ ಕೇಂದ್ರಗಳಿಗೆ ಒಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಂದ ಪ್ರಸೂತಿಗಾಗಿ ಈ ಆಸ್ಪತ್ರೆಗೆ ಕಳುಯಿಸಿ ಕೊಡಲಾಗುತ್ತದೆ. ಆದರೆ ಎಂ.ಸಿ.ಹೆಚ್. ಆಸ್ಪತ್ರೆ ಇಲ್ಲದೇ ಇರುವುದರಿಂದ ಜತೆಗೆ ಒಬ್ಬರೇ ಪ್ರಸೂತಿ ತಜ್ಞರು ಇರುವುದರಿಂದ ಕೆಲಸದ ಒತ್ತಡದಿಂದಾಗಿ ಮತ್ತು ಸ್ಥಳಾವಕಾಶದ ಕೊರತೆಯಿಂದಾಗಿ ಬಹುತೇಕ ಪ್ರಸೂತಿ ಫಲಾನುಭವಿಗಳನ್ನು ಹಾಸನದ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದ್ದರಿಂದ ತಾಲೂಕಿನ ಎಲ್ಲಾ ಗರ್ಭಿಣೀಯರಿಗೆ ಸೇವೆಗಳನ್ನು ಒದಗಿಸಲು ಅನುಕೂಲವಾಗುವಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಗೆ ಎಂ.ಸಿ.ಹೆಚ್ ಆಸ್ಪತ್ರೆಯನ್ನು ಮಂಜೂರು ಮಾಡಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ನಿಮ್ಮ ಬೇಡಿಕೆ ಸಾರ್ವಜನಿಕರ ಪರವಾಗಿದ್ದು ಒಳ್ಳೆಯ ಅಭಿಪ್ರಾಯವಾಗಿದೆ. ಈ ಸಾಲಿನ ಬಜೆಟ್ ನಲ್ಲಿ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಏನಯ್ಯ ಬಾಲಕೃಷ್ಣ, ಎಲ್ಲಿ ಸಿಕ್ಕಿದರು ಸಹ ತನ್ನ ತಾಲೂಕಿಗೆ ಅಗತ್ಯವಿರುವ ಸೌಲಭ್ಯಗಳ ಪಟ್ಟಿ ಸಿದ್ಧಪಡಿಸಿಕೊಂಡು ಮನವಿ ಮಾಡಲು ಮೊದಲೇ ರೆಡಿಯಾಗಿದ್ದೀಯಾ. ಒಳ್ಳೆ ಕೆಲಸಗಾರ ಕಣ್ಣಯ್ಯ ನೀನು ಎಂದು ಸಿಎಂ ನಗೆಯ ಚಟಾಕಿ ಹಾರಿಸಿದರು.

ನಾನು ಸಲ್ಲಿಸಿರುವ ಮನವಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ ಎಂದು ಶಾಸಕರು ತಿಳಿಸಿದ್ದಾರೆ.

Continue Reading

Trending

error: Content is protected !!