Connect with us

Hassan

ಹಾಸನ : ದೇವಸ್ಥಾನದ ಕಾಂಪೌಂಡ್‌ಗೆ ಕಾರು ಡಿಕ್ಕಿ

Published

on

ಹಾಸನ : ದೇವಸ್ಥಾನದ ಕಾಂಪೌಂಡ್‌ಗೆ ಕಾರು ಡಿಕ್ಕಿ

ಓರ್ವ ಬಾಲಕ ಸಾವು, ಇನ್ನೋರ್ವನಿಗೆ ಗಂಭೀರ ಗಾಯ

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ನಾಗಸಮುದ್ರ ಗ್ರಾಮದಲ್ಲಿ ಘಟನೆ

ನಾಗಸಮುದ್ರ ಗ್ರಾಮದಲ್ಲಿ ನಿಂತಿದ್ದ KA-41 M-6622 ನಂಬರ್‌ನ ಹುಂಡೈ ಕಾರು

ಈ ಕಾರಿನಲ್ಲಿ ಕುಳಿತು ಆಟವಾಡುತ್ತಿದ್ದ ಉಮೇಶ್ ಹಾಗೂ ಆಕಾಶ್

ದಿಢೀರ್ ಸ್ಟಾರ್ಟ್ ಆದ ಕಾರು

ಗಾಬರಿಯಿಂದ ಬ್ರೇಕ್ ತುಣಿಯುವ ಬದಲು ಎಕ್ಸ‌ಲೇಟರ್ ತುಣಿದ ಅಪ್ರಾಪ್ತ

ವೇಗವಾಗಿ ಹೋಗಿ ಗ್ರಾಮದ ದೇವಸ್ಥಾನಕ್ಕೆ ಗುದ್ದಿದ ಕಾರು

ಡಿಕ್ಕಿ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಅಪ್ರಾಪ್ತರು

ಆಸ್ಪತ್ರೆಗೆ ಸಾಗಿಸುವಾಗ ಉಮೇಶ್ (17) ಸಾವು

ಪ್ರಜ್ವಲ್‌‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಡಿಕ್ಕಿ ವೇಗಕ್ಕೆ ನೆಲಕ್ಕುರುಳಿದ ದೇವಾಲಯದ ಕಾಂಪೌಂಡ್

ಅಪಘಾತದ ನಂತರ ಕಾರು ಸಮೇತ ಮಾಲೀಕ ಎಸ್ಕೇಪ್

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Continue Reading
Click to comment

Leave a Reply

Your email address will not be published. Required fields are marked *

Hassan

ಕ್ಯಾಮನಹಳ್ಳಿ ಗ್ರಾಮ ಪಂಚಾಂಯ್ತಿ ಬಿಜೆಪಿ ತಕ್ಕೆಗೆ

Published

on

ಸಕಲೇಶಪುರ : ಹಾನುಬಾಳು ಹೋಬಳಿಯ ಕ್ಯಾಮನಹಳ್ಳಿ ಗ್ರಾಮ ಪಂಚಾಂತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕ್ಯಾಮನಹಳ್ಳಿ ಗ್ರಾಮ ಪಂಚಾಯ್ತಿಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಇಂದು ಕ್ಯಾಮನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಚುನಾವನಣಾಧಿಕಾರಿ ಆದಿತ್ಯ ಅವರ ನೇತೃತ್ವದಲ್ಲಿ ಚುನಾವಣೆ ನೆಡೆದಿದಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋದವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಏನ್. ಜಿ ಸಚ್ಚಿನ್, ಉಪಾಧ್ಯಕ್ಷರಾಗಿ ಹೆಚ್. ಸಿ ಪೂರ್ಣಿಮಾ ಹರೀಶ್ ಜಂಬರಡಿ ಇವರು ಆಯ್ಕೆಯಾಗಿದ್ದಾರೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ಸಚ್ಚಿನ್ ಕ್ಯಾಮನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗು ಮೂಲ ಸೌಕರ್ಯಗಳಿಗೆ ಮೊದಲ ಅಧ್ಯತೆ ಕೊಟ್ಟು ಗ್ರಾಮಗಳ ಅಭಿರುದ್ದಿಗೆ ಪ್ರಾಮಾಣಿಕವಾಗಿ ನನ್ನ ಸೇವೆ ಸಲ್ಲಿಸುತ್ತೇನೆ ಎಂದರು.

ಅಭಿನಂದನೆ ಸ್ವೀಕರಿಸಿದ ಸಂದರ್ಭದಲ್ಲಿ ಬಿಜೆಪಿ ತಾಲೋಕು ಅಧ್ಯಕ್ಷರಾದ ಅಶ್ವಥ್ ವಳಲಳ್ಳಿ, ಬಿಜೆಪಿ ಮಾಜಿ ತಾ, ಅಧ್ಯಕ್ಷ ರಾಜ್ ಕುಮಾರ್, ಕೌಶಿಕ್ ಹೆನ್ನೆಲ್ಲಿ, ರಘು ಸಕಲೇಶಪುರ, ಜೆ. ಏನ್ ಚಂದ್ರಶೇಖರ್, ಜಯರಾಜ್, ಜೆ. ಪಿ ಪುನೀತ್, ಧನಂಜಯ್, ಗ್ರಾಮ ಪಂಚಾಂಯ್ತಿ ಸದಸ್ಯರುಗಳಾದ ಆಕಾಶ್ ಹಾದಿಗೆ ಶೋಭಾ, ಪ್ರಿಯ, ಭಾಸ್ಕರ್,ಭವ್ಯ ಸುರೇಂದ್ರ, ಮಣಿಕಂಠ ಹಾಜರಿದ್ದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

ವರದಿ
ಸಿ. ಎಲ್ ಪೂರ್ಣೇಶ್ ಚಕ್ಕುಡಿಗೆ

Continue Reading

Hassan

ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಿಳೆಯರಿಗೆ ಆಟೋಟ ಸ್ಪರ್ದೆ

Published

on

ಹಾಸನ: ನಗರದ ಜಿಲ್ಲಾ ಕುರುಹಿನಶೆಟ್ಟಿ ಭವನದಲ್ಲಿ ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಮಹಿಳಾ ಸಂಘ ಮತ್ತು ಜಿಲ್ಲಾ ನೇಕಾರ ಸಮುದಾಯಗಳ ಮಹಿಳಾ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಶ್ರೀ ಸತ್ಯನಾರಾಯಣ ಪ್ರಜೆ ಮತ್ತು ಕ್ರೀಡಾ ಚಟುವಟಿಕೆಗಳು ಯಶಸ್ವಿಯಾಗಿ ಜರುಗಿತು.

ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷೆ ಪೇಮಮ್ಮ ಮಾಧ್ಯಮದೊಂದಿಗೆ ಮಾತನಾಡಿ, ಪ್ರತಿ ವರ್ಷ ಜಿಲ್ಲಾ ಕುರುಹಿನಶೆಟ್ಟಿ ಭವನದಲ್ಲಿ ಶ್ರೀ ಸತ್ಯನಾರಾಯಣ ಪ್ರಜೆ ಮತ್ತು ಕ್ರೀಡಾ ಚಟುವಟಿಕೆಗಳು, ವಾರ್ಷಿಕೋತ್ಸವ ಸಮಾರಂಭ, ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾಮೂಹಿಕವಾಗಿ ಶನಿವಾರ ಸತ್ಯನಾರಾಯಣ ಪೂಜೆಯನ್ನು ನಡೆಸಲಾಗಿದೆ. ಇಡೀ ಜನತೆಗೆ

ಒಳಿತನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ. ಮಹಿಳೆಯರಿಗಾಗಿ ರಂಗೋಲಿ ಸ್ಪರ್ದೆ ಸೇರಿದಂತೆ ಮಕ್ಕಳಿಗೂ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಾಗಿದೆ ಎಂದರು. ಭಾನುವಾರದಂದು ಬೆಳಿಗ್ಗೆ ವೇದಿಕೆ ಕಾರ್ಯಕ್ರಮವು ಜರುಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ನೆರವೇರಿಸಲಿದ್ದಾರೆ. ಕುರುಹಿನ ಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷ ಕಾಮಮೂರ್ತಿ

ಅಂಬಾದಾಸ್, ಅಖಿಲ ಭಾರತ ಕುರುಹಿನಶೆಟ್ಟಿ ಸಂಘದ ಅಧ್ಯಕ್ಷೆ ಡಾ|| ಜಯಲಕ್ಷ್ಮಿ, ಮಾಜಿ ಅಧ್ಯಕ್ಷೆ ದೇವಿಕಾ ಭೂಷಣ್, ನೇಕಾರರ ಸಮುದಾಯಗಳ ಮಹಿಳಾ ಒಕ್ಕೂಟದ ಅಧ್ಯಕ್ಷೆ ನಾಗವೇಣಿ ಇತರರು ಭಾಗವಹಿಸಲಿದ್ದಾರೆ ಎಚಿದರು. ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಉದ್ಘಾಟನೆಚಿiನ್ನು ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ್ ನೆರವೇರಿಸುವರು. ಕರ್ನಾಟಕ ರಾಜ್ಯ ನೇಕಾರರ ಒಕ್ಕೂಟದ ಅಧ್ಯಕ್ಷ ಸೋಮೇಶೇಖರ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ಉಮಾ ಜಗದೀಶ್, ಸಾಮಾಜಿಕ ಹಾಗೂ ರಾಜಕೀಯ ಹಕ್ಕುಗಳ ಹೋರಾಟಗಾರ್ತಿ ಡಾ|| ಅಕೈ ಪದ್ಮಸಾಲಿ ಭಾಗವಹಿಸುವರು ಎಂದು ಹೇಳಿದರು.

ಇದೆ ವೇಳೆ ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಮಹಿಳಾ ಸಂಘದ ಗೌರವಾಧ್ಯಕ್ಷೆ ಶೃತಿ, ಉಪಾಧ್ಯಕ್ಷೆ ರುಕ್ಮಿಣಿ ರಾಮಣ್ಣ, ಪ್ರಧಾನ ಕಾರ್ಯದರ್ಶಿ ಸುನೀತ ಮನೋಜ್ ಕುಮಾರ್, ಸ್ವ-ಸಹಾಯ ಸಂಘದ ಅಧ್ಯಕ್ಷೆ ನಮಿತ ಪ್ರಸಾದ್, ಕಾರ್ಯದರ್ಶಿ ಕೆ.ಹೆಚ್. ಪ್ರೇಮ, ಸಹ ಕಾರ್ಯದರ್ಶಿ ತ್ರಿವೇಣಿ, ಖಜಾಂಚಿ ಇಂದ್ರ ಮಂಜುನಾಥ್, ವೀಣಾ, ಕುಮಾರಿ, ತುಳಸಿ, ಜಯಮ್ಮ ಇತರರು ಉಪಸ್ಥಿತರಿದ್ದರು.

Continue Reading

Hassan

ಲಯನ್ಸ್ ಕ್ಲಬ್ ಹಾಸನ್ ಹೇಮಾವತಿ ಪದಗ್ರಹಣ ನೂತನ ಅಧ್ಯಕ್ಷರಾಗಿ ಚಿಕ್ಕೇಗೌಡ ಅಧಿಕಾರಿ ಸ್ವೀಕಾರ

Published

on

ಹಾಸನ: ನಗರದ ಕುವೆಂಪು ರಸ್ತೆ ಬಳಿ ಇರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಹಾಸನ್ ಹೇಮಾವತಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಹಿಂದಿನ ಅಧ್ಯಕ್ಷರಾಗಿದ್ದ ಡಿ.ಎನ್. ತಿಲಕ್ ಗೌಡರ ಅವಧಿ ಮುಗಿದ ಹಿನ್ನಲೆಯಲ್ಲಿ ೨೦೨೪-೨೫ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಚಿಕ್ಕೇಗೌಡ, ಕಾರ್ಯದರ್ಶಿ ಶಿವೇಗೌಡ ಹಾಗೂ ಖಜಾಂಚಿ ಮಧು ಕೆ.ಆರ್. ಗೌಡ ಅವರು ಆಯ್ಕೆಗೊಂಡಿದ್ದು, ಅಧಿಕಾರ ಸ್ವೀಕಾರವನ್ನು ಪದಗ್ರಹಣಾಧಿಕಾರಿ ಜಗದೀಶ್ ಯಡೋಪಾಡಿತ್ಯ ನಡೆಸಿಕೊಟ್ಟರು.

ನಂತರ ಜಗದೀಶ್ ಉದ್ದೇಶಿಸಿ ಮಾತನಾಡಿ, ಐದು ಬೆರಳು ಸೇರಿದರೇ ಚಪ್ಪಾಳೆಯ ಶಭ್ಧ ಹೇಗೆ ಬರುತ್ತದೆ ಆಗೇ ಒಬ್ಬರಿಂದ ಯಾವ ಕೆಲಸ ಆಗುವುದಿಲ್ಲ ಎಲ್ಲಾರು ಸೇರಿದರೇ ಮಾತ್ರ ಸೇವಾ ಚಟುವಟಿಕೆ ಕಾರ್ಯ ನಡೆಯುವುದು. ಲಯನ್ಸ್ ಸೇವಾ ಸಂಸ್ಥೆಯ ಸದಸ್ಯರಿಂದಲೇ ಈ ಹಂತಕ್ಕೆ ತಲುಪಿದೆ. ಮದರ್ ತೆರಿಸಾ ಹೇಳಿದಂತೆ ಸೇವೆ ಎಂಬುದು ಸ್ವಾರ್ಥ ಇರಬಾರದು. ನಿಶ್ವಾರ್ಥ ಸೇವೆ

ಆಗಿರಬೇಕು ಎಂದರು. ಮದರ್ ತೆರಿಸವರಂತೆ ದೊಡ್ಡ ಸರ್ವೀಸ್ ಮಾಡಲು ಸಾಧ್ಯವಾಗದಿದ್ದರೂ ಸಣ್ಣ ಸೇವೆಯಾದರೂ ಕೊಡಬಹುದು. ಯಾವ ಸೇವಾ ಕೆಲಸ ಮಾಡಿದರೂ ಅದನ್ನು ಪ್ರೀತಿಯಿಂದ ಮಾಡಿದರೇ ಅದು ನಿಜವಾದ ಸೇವೆ ಎಂದು ಕಿವಿಮಾತು ಹೇಳಿದರು. ದೊಡ್ಡ ಕ್ಲಬ್ ನಂತೆ ಸಣ್ಣ ಕ್ಲಬ್ ನವರು ಮಾಡಲು ಆಗುವುದಿಲ್ಲ. ಆದರೇ ಮಾಡುವ ಸೇವೆಯಲ್ಲಿ ಪ್ರೀತಿ ಇದ್ದರೇ ಅಂತಹ ಸಂಸ್ಥೆ ಬಹಳಷ್ಟು ಮುಂದುವರೆಯುತ್ತದೆ ಎಂದು ಸಲಹೆ ನೀಡಿದರು. ಸೇವೆಗಳಲ್ಲಿ ಬಹಳಷ್ಟು ಇದ್ದು, ೧೦೭ ವರ್ಷಗಳಿಂದ ಲಯನ್ಸ್ ಉಳಿದಿದೆ ಎಂದರೇ ಸೇವಾ ಮನೋಭಾವ ಇರುವುದಕ್ಕೆ ಎಂದು ಹೇಳಿದರು.

ಇದೆ ವೇಳೆ ಲಯನ್ಸ್ ಕ್ಲಬ್ ಹಾಸನ್ ಹೇಮಾವತಿಯ ಹೊಸ ಸದಸ್ಯರ ಪರಿಚಯ ಮಾಡಲಾಯಿತು. ಆರೋಗ್ಯ ಇಲಾಖೆಯಲ್ಲಿ ಪ್ರಶಸ್ತಿ ಪಡೆದ ಡಾ|| ಚೇತನ್ ಮತ್ತು ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನಗಳಿಸಿದ ಅಭಿನವ, ಭುವನ್, ಹೆಚ್.ಡಿ. ಪುರುಷೋತ್ತಮ್, ಪ್ರೋ. ಪುಟ್ಟಸ್ವಾಮಿ ಅವರನ್ನು ಹಾಗೂ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಲಯನ್ಸ್ ವಲಯ ಅಧ್ಯಕ್ಷೆ ರೂಪ ಆನಂದ್, ಪ್ರಾಂತೀಯ ಅಧಿಕಾರಿ ಕೆ.ಜೆ. ನಾಗರಾಜು, ಹೆಚ್.ಆರ್. ಚಂದ್ರೇಗೌಡ, ಡಾ. ಗಿರೀಶ್, ೨೦೨೩-೨೪ನೇ ಸಾಲಿನ ಲಯನ್ಸ್ ಕ್ಲಬ್ ಹಾಸನ್ ಹೇಮಾವತಿ ಅಧ್ಯಕ್ಷರಾದ ತಿಲಕ್ ಗೌಡ, ಕಾರ್ಯದರ್ಶಿ ದಯಾನಂದ್, ಖಜಾಂಚಿ ವಿಜಯಕುಮಾರ್, ವೆಂಕಟೇಶ್, ಸಿಎಂ ಶಿವಸ್ವಾಮಿ, ಶಿವೇಗೌಡ ಇತರರು ಉಪಸ್ಥಿತರಿದ್ದರು. ಇದೆ ವೇಳೆ ಜವೇನಹಳ್ಳಿ ಕೆರೆ ಅಭಿವೃದ್ಧಿ ಅಧ್ಯಕ್ಷ ತಿಮ್ಮರಾಯಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Continue Reading

Trending

error: Content is protected !!