Hassan
ಹಾಸನ: ಚಲಿಸುತ್ತಿದ್ದ ರೈಲಿನ ಬೋಗಿಯ ಕೆಳಗೆ ಕಾಣಿಸಿಕೊಂಡ ಸ್ಪಾರ್ಕ್
ಹಾಸನ: ಹಾಸನ ಜಂಕ್ಷನ್‌ನ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನ ಬೋಗಿಯ ಕೆಳಗೆ ಬೆಂಕಿ ಕಾಣಿಸಿಕೊಂಡಿದೆ.
ಚಲಿಸುತ್ತಿದ್ದ ರೈಲಿನ ಬೋಗಿಯ ಕೆಳಗೆ ಸ್ಪಾರ್ಕ್ ಕಾಣಿಸಿಕೊಂಡ ತಕ್ಷಣ ಎಚ್ಚೆತ್ತುಕೊಂಡ ಹಾಸನ ರೈಲ್ವೆ ನಿಲ್ದಾಣದ ಸಿಬ್ಬಂದಿಗಳು ಬೆಂಕಿ ನಂದಿಸುವ ಮೂಲಕ ಅಪಾಯ ತಪ್ಪಿಸಿದ್ದಾರೆ.

ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಾಸನ ರೈಲು ನಿಲ್ದಾಣ ಪ್ಲಾಟ್ ಸಂಖ್ಯೆ ಎರಡರಲ್ಲಿ ನಿಂತಿದ್ದಾಗ ಬೋಗಿವೊಂದರ ಕೆಳ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಪ್ರಯಾಣಿಕರು, ರೈಲ್ವೆ ನಿಲ್ದಾಣದಲ್ಲಿದ್ದ ಕೊಂಚ ಗಾಬರಿಗೊಂಡಿದ್ದಾರೆ. ಅಲ್ಲದೇ ರೈಲು ಸರಿಪಡಿಸಿದನ್ನು ಖಾತರಿ ಮಾಡಿಕೊಂಡ ಮೇಲೆ ತಡವಾಗಿ ಹೊರಟಿದೆ.
Hassan
ಆ.13ರಂದು ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರ ಪ್ರತಿಭಟನೆ
ಹಾಸನ: ರಾಜ್ಯ ಕಾರ್ಮಿಕ ಇಲಾಖೆ ಪರಿಷ್ಕೃತ ಕನಿಷ್ಠ ವೇತನವನ್ನು ನಿಗದಿಪಡಿಸಿ ಆದೇಶ ಹೊರಡಿಸಿದ್ದರೂ ಇದುವರೆಗೆ ಜಾರಿಗೊಳಿಸದಿರುವುದನ್ನು ಖಂಡಿಸಿ, ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳ ಹೊರಗುತ್ತಿಗೆ ನೌಕರರು ಆಗಸ್ಟ್ 13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಆಗ್ರಹ ಸಮಾವೇಶ ಹಾಗೂ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಇಲಾಖೆಗಳ ಹೊರಗುತ್ತಿಗೆ ನೌಕರರ ಸಂಘದ ಎಂ.ಬಿ ನಾಗಣ್ಣ ಗೌಡ ಅವರು ತಿಳಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೇ 22ರಂದು ರಾಜ್ಯ ಕಾರ್ಮಿಕ ಇಲಾಖೆ ವಿವಿಧ ಉದ್ಯೋಗಗಳಿಗೆ ಪರಿಷ್ಕೃತ ಕನಿಷ್ಠ ವೇತನ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ್ದರೂ, ಈವರೆಗೆ ಯಾವುದೇ ಇಲಾಖೆಯಲ್ಲಿ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು.

ಕಳೆದ ಹತ್ತು ವರ್ಷಗಳಿಂದ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ಪರಿಷ್ಕರಣೆ ಆಗಬೇಕಿತ್ತು. ಈ ಕುರಿತು ಕಾರ್ಮಿಕ ಸಂಘಟನೆಗಳು ನಿರಂತರ ಹೋರಾಟ ನಡೆಸಿದ ಪರಿಣಾಮ ಹಾಗೂ ನ್ಯಾಯಾಲಯದ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಶೇ.40ರಷ್ಟು ವೇತನ ಹೆಚ್ಚಳದ ಅಧಿಸೂಚನೆ ಹೊರಡಿಸಲಾಗಿದೆ. ಆದರೂ ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ಜಾರಿಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಖಾಸಗಿ ಉದ್ಯಮಿಗಳು ವೇತನ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿರುವುದನ್ನು ನೆಪವಾಗಿಸಿಕೊಂಡು ಸರ್ಕಾರ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಇಚ್ಛಾಶಕ್ತಿ ತೋರುತ್ತಿಲ್ಲ. ಇಲಾಖೆಗಳ ಮುಖ್ಯಸ್ಥರು ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸುವುದಕ್ಕೆ ಮಾತ್ರ ಸೀಮಿತವಾಗಿದ್ದು, ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಸರ್ಕಾರಿ ಇಲಾಖೆಗಳ ಹೊರಗುತ್ತಿಗೆ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಲು ಯಾವುದೇ ಕಾನೂನು ಅಡ್ಡಿಯಿಲ್ಲ. ಆದರೂ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದು ಕಾರ್ಮಿಕ ವಿರೋಧಿ ನಿಲುವಾಗಿದೆ ಎಂದು ಟೀಕಿಸಿದರು.
ಆಗಸ್ಟ್ 13ರಂದು ನಡೆಯಲಿರುವ ಆಗ್ರಹ ಸಮಾವೇಶವು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಉದ್ದೇಶ ಹೊಂದಿದ್ದು, ತಕ್ಷಣವೇ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಎಂ.ಬಿ. ನಾಗಣ್ಣಗೌಡ, ಸರೋಜಮ್ಮ, ವೆಂಕಟಲಕ್ಷ್ಮೀ, ಮನು ಹಾಗೂ ರಾಜೇಂದ್ರ ಉಪಸ್ಥಿತರಿದ್ದರು.
Hassan
ಆ. 8ರಂದು ಬೇಲೂರಲ್ಲಿ ಅರ್ಥಪೂರ್ಣ ಪತ್ರಕರ್ತರ ದಿನಾಚರಣೆ
ಬೇಲೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೇಲೂರು ತಾಲೂಕು ಘಟಕದ ವತಿಯಿಂದ ಆಗಸ್ಟ್ 8 ರಂದು ಪತ್ರಕರ್ತರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಬಿ.ಬಿ. ಶಿವರಾಜು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಸಮಾಜದಲ್ಲಿ ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿದ್ದು ಜನರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತರುವುದರ ಜತೆಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಪತ್ರಕರ್ತರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ಮಾಧ್ಯಮ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಬಾರಿಯ ಕಾರ್ಯಕ್ರಮವನ್ನು ಸಹ ಅರ್ಥಪೂರ್ಣವಾಗಿ ಆಯೋಜಿಸಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಎಚ್.ಕೆ.ಸುರೇಶ್, ನೆರವೇರಿಸಲಿದ್ದು, ಆಶಯ ನುಡಿಗಳನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀ ಹೆಚ್.ಬಿ. ಮದನಗೌಡರು ಮಾತನಾಡಲಿದ್ದು, ಪ್ರತಿಭಾ ಪುರಸ್ಕಾರ ಪ್ರಧಾನವನ್ನು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜೆ.ಆರ್.ಕೆಂಚೇಗೌಡ ನೆರವೇರಿಸಲಿದ್ದು, ಗೌರವ ಸಮರ್ಪಣೆಯನ್ನು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಬೇಲೂರು ಉಸ್ತುವಾರಿ ಕೆ.ಪಿ.ಎಸ್ ಪ್ರಮೋದ್ ನೆರವೇರಿಸಲಿದ್ದು, ಕ್ರೀಡಾಪಟುಗಳಿಗೆ ಸನ್ಮಾನವನ್ನು ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಬಿ.ಶಿವರಾಂ ನೆರವೇರಿಸಲಿದ್ದು, ಪತ್ರಕರ್ತರಿಗೆ ಸನ್ಮಾನವನ್ನು ಎಚ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹಾಗೂ ಜೆಡಿಎಸ್ ಮುಖಂಡ ಎಂ.ಎ. ನಾಗರಾಜ್ ನೆರವೇರಿಸಲಿದ್ದು, ರಾಷ್ಟ್ರೀಯ ಸಮಿತಿ ಸದಸ್ಯರಿಗೆ ಸನ್ಮಾನವನ್ನು ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ನೆರವೇರಿಸಲಿದ್ದು ಮುಖ್ಯ ಅತಿಥಿಗಳಾಗಿ ಪುರಸಭೆ ಅದ್ಯಕ್ಷ ಅಕ್ರಂ ಶರೀಫ್, ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಸತೀಶ್, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾವಿ, ಪೊಲೀಸ್ ಇನ್ಸೆಕ್ಟರ್ ರೇವಣ್ಣ, ಆರ್ವಿ ಕನ್ವೆನ್ಸನ್ ಹಾಲ್ ಮಾಲೀಕರಾದ ಡಿ.ರವೀಂದ್ರ, ವೃತ್ತ ನಿರೀಕ್ಷಕ ಜಗದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ಉದ್ಯಮಿ ಕಾಂಗ್ರೆಸ್ ಮುಖಂಡ ಬಿ.ಎಂ. ಸಂತೋಷ್, ಶ್ರೀ.ಕ್ಷೇ.ಧ.ಗ್ರಾಮ ಯೋಜನಾಧಿಕಾರಿ ಮಂಜುಳ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಬಿ. ಶಿವರಾಜು ವಹಿಸಲಿದ್ದು ತಾಲೂಕಿನ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಹಿರಿಯ ಹಾಗೂ ಕಿರಿಯ ಪತ್ರಕರ್ತರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಜತೆಗೆ ಪತ್ರಕರ್ತರ ವೃತ್ತಿಯ ಮಹತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ಮಾಧ್ಯಮ ಕ್ಷೇತ್ರದ ಸವಾಲುಗಳ ಕುರಿತು ವಿಚಾರ ವಿನಿಮಯ ನಡೆಯಲಿದ್ದು ತಾಲೂಕಿನ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
Hassan
ಹಾಕಿ ವಿಶ್ವ ಕಪ್ ಹಿರಿಯ ವಿಭಾಗದ ತಂಡಕ್ಕೆ ಗ್ರಾಮೀಣ ಪ್ರತಿಭೆ ಮೋಹಿತ್ ಆಯ್ಕೆ
ಚನ್ನರಾಯಪಟ್ಟಣ : ಆ.15 ರಿಂದ 30 ರ ವರೆಗೆ ನೆದರ್ಲ್ಯಾಂಡ್ ಹಾಗೂ ಬೆಲ್ಜಿಯಂನಲ್ಲಿ ನಡೆಯಲಿರುವ 16.ನೇ ಆವೃತ್ತಿಯ ಎಫ್.ಐ.ಹೆಚ್ (ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಹಾಕಿ) ವಿಶ್ವಕಪ್‌ನ ಭಾರತೀಯ ಪುರುಷರ ತಂಡಕ್ಕೆ ತಾಲೂಕಿನ ಹಿರೀಸಾವೆ ಹೋಬಳಿ ಹೊನ್ನೇನಹಳ್ಳಿ ಗ್ರಾಮದ ಎಚ್.ಎಸ್.ಮೋಹಿತ್ ಆಯ್ಕೆಯಾಗಿರುವುದು ರಾಜ್ಯವೇ ಹೆಮ್ಮೆ ಪಡುವ ವಿಷಯವಾಗಿದೆ ಎಂದು ಕ್ರೀಡಾ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಾಮಸುಂದರ್ ತಿಳಿಸಿದರು.
ಪಟ್ಟಣದ ನಾಗಸಮುದ್ರ ರಸ್ತೆಯಲ್ಲಿನ ಮೋಹಿತ್ ಮನೆಯಲ್ಲಿ ಕ್ರೀಡಾಭಾರತಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಜೀಜಾಮಾತೆ ಪುರಸ್ಕೃತೆ ಮೋಹಿತ್ ತಾಯಿ ಆಶಾರಾಣಿ ಅವರನ್ನು ಗೌರವಿಸಿ ಅವರು ಮಾತನಾಡಿದರು, ಹಾಕಿ ಪಂಡ್ಯಾವಳಿಯ 2022ರಲ್ಲಿ ಕಿರಿಯ ಹಾಕಿ ವಿಭಾಗದಲ್ಲಿ ಮೋಹಿತ್ ಆಯ್ಕೆಯಾಗಿದ್ದಾಗ ಕ್ರೀಡಾ ಭಾರತಿಯಿಂದ ಆಶಾರಾಣಿಗೆ ಜೀಜಾಮಾತಾ ಪುರಸ್ಕಾರ ನೀಡಲಾಗಿತ್ತು ಎಂದು ಶ್ಲಾಘಿಸಿದರು.

ಗೋಲ್ ಕೀಪರ್ ಕ್ರೀಡಾಪಟುವಿಗೆ ಹೆಚ್ಚು ಒತ್ತು ನೀಡಿದ್ದ ಎಚ್.ಎಸ್.ಮೋಹಿತ್ ಇದೀಗ ರಾಷ್ಟ್ರೀಯ ತಂಡದ ಗೋಲ್ ಕೀಪರ್ ಆಗಿ ವಿಶ್ವಕಪ್ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ, ವಿಶ್ವಕಪ್ ಗೆ ಆಯ್ಕೆಯಾಗಿರುವ ಆಟಗಾರರ ಪೈಕಿ ಇವರು ಕರ್ನಾಟಕದ ಏಕೈಕ ಆಟಗಾರರಾಗಿದ್ದಾರೆ, ಅದರಲ್ಲೂ ಹಾಸನ ಜಿಲ್ಲೆಯ ಚನ್ನರಾಯಟಪ್ಟಣ ತಾಲೂಕಿನ ಗ್ರಾಮೀಣ ಭಾಗದ ಪ್ರತಿಭೆ ಎನ್ನುವುದು ಅತ್ಯಂತ ಸಂಭ್ರಮ ಪಡುವ ವಿಷಯ ಎಂದು ಸಂತಸ ವ್ಯಕ್ತ ಪಡಿಸಿದರು.
1971ರಲ್ಲಿ ಪ್ರಾರಂಭಗೊಂಡ ಹಾಕಿ ವಿಶ್ವಕಪ್ ಪಂದ್ಯಾವಳಿ ಮೂರನೇ ಆವೃತ್ತಿ 1975ರಲ್ಲಿ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು, ಇದಾದ ಬಳಿಕ ಕಳೆದ ಐದು ದಶಕಗಳಾದರೂ ವಿಶ್ವಕಪ್ ಪಡೆಯುವಲ್ಲಿ ಯಶಸ್ವಿಯಾಗಿಲ್ಲ, 2023 ರಲ್ಲಿ ಕಳೆದ ಆವೃತ್ತಿಯು ಭಾರತದಲ್ಲಿ ನಡೆದರೂ ದೇಶದ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು, 2020 ಹಾಗೂ 2024ರಲ್ಲಿ ನಡೆದ ಒಲಂಪಿಕ್ ನಲ್ಲಿ ಕಂಚು ಪದಕ ಹಾಗೂ 2025 ರಲ್ಲಿ ಭಾರತ ಏಷ್ಯಾಕಪ್ ಜ್ಯೂನಿಯರ್ ಚಾಂಪಿಯನ್ ಆಗಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತ್ತು, ಹಾಗಾಗಿ ಇದೇ ತಿಂಗಳು ನಡೆಯುವ ರಾಷ್ಟ್ರಿಯ ಹಾಕಿ ಪಂದ್ಯದಲ್ಲಿ ದೇಶದ ತಂಡ ಗಣನೀಯ ಸಾಧನೆ ಮಾಡಿ ಕಪ್ ಮುಡಿಗೇರಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಕ್ರಿಡಾ ಭಾರತಿ ಪ್ರಾಂತೀಯ ಸಹಕಾರ್ಯದರ್ಶಿ ಮೋಹನ್ ಮಾತನಾಡಿ, ಎಚ್.ಎಸ್.ಮೋಹಿತ್ ಈಗಾಗಲೆ ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ, ಗೋಲ್ ಕೀಪರ್ ಆಗಿ ಅವರ ಚುರುಕುತನ, ಪೆನಾಲ್ಟಿ ಶೂಟ್ ಔಟ್‌ಗಳಲ್ಲಿ ತೋರಿದ ಸ್ಥೈರ್ಯ ಹಾಗೂ ಪರಿಣಾಮಕಾರಿ ಪ್ರದರ್ಶನದಿಂದ ಭಾರತೀಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎನ್ನುವುದು ತಿಳಿದಿರುವ ಸಂಗತಿ ಎಂದು ಹೇಳಿದರು.
ಈ ಆಯ್ಕೆಯೊಂದಿಗೆ 12 ವರ್ಷಗಳ ನಂತರ ಕರ್ನಾಟಕದ ಆಟಗಾರನೊಬ್ಬ ಪುರುಷರ ಹಾಕಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ, ಈ ಹಿಂದೆ 2014 ರ ವಿಶ್ವಕಪ್‌ನಲ್ಲಿ ಎಸ್.ವಿ. ಸುನೀಲ್ ಹಾಗೂ ವಿ.ಆರ್.ರಘುನಾಥ ರಾಜ್ಯವನ್ನು ಪ್ರತಿನಿಧಿಸಿದ್ದರು, ಈಗ ಹಾಸನ ಜಿಲ್ಲೆಯು ಯುವಕ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ಸಂದ ಗೌರವ ಇದಾಗಿದೆ ಎಂದು ಬಣ್ಣಿಸಿದರು.

ಇತ್ತೀಚೆಗೆ ನಡೆದ ಎಫ್‌ಐಎಚ್ ಪ್ರೊಲೀಗ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೋಹಿತ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದರು, ಜೂನಿಯರ್ ಏಷ್ಯಾಕಪ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದಾಗ ಟೂರ್ನಿಯ ಅತ್ಯುತ್ತಮ ಗೋಲ್‌ಕೀಪರ್ ಗೌರವಕ್ಕೂ ಭಾಜನರಾಗಿದ್ದರು, ಇಂತಹ ಸಾಧನೆ ಮಾಡಿರುವ ಮೋಹಿತ್ ತಾಯಿಯನ್ನು ಗೌರವಿಸುವುದು ಕ್ರೀಡಾಭಾರತಿ ಕರ್ತವ್ಯವಾಗಿದೆ ಎಂದು ಹೇಳಿದರು.
ನೆದರ್ಲ್ಯಾಂಡ್ ಹಾಗೂ ಬೆಲ್ಜಿಯಂನಲ್ಲಿ ನಡೆಯಲಿರುವ 2026 ರ ಎಫ್ ಐಎಚ್ ಹಾಕಿ ವಿಶ್ವಕಪ್‌ನಲ್ಲಿ ಮೋಹಿತ್ ಭಾರತದ ಗೋಲ್ ಕೀಪರ್ ಆಗಿ ಕಣಕ್ಕಿಳಿಯಲಿದ್ದು, ಕರ್ನಾಟಕದ ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ, ಮೋಹಿತ್ ಆಯ್ಕೆಗೆ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ, ಹಾಸನ ಹಾಕಿ ಅಸೋಸಿಯೇಷನ್ ಹಾಗೂ ಕ್ರೀಡಾಭಾರತಿಯು ರಾಜ್ಯದ ಸಮಸ್ತ ಕ್ರೀಡಾಭಿಮಾನಿಗಳ ಪರವಾಗಿ ಶುಭ ಕೋರಿದೆ ಎಂದರು.

ಕ್ರೀಡಾ ಭಾರತಿ ಮುಖ್ಯಸ್ಥರಾರ ಅಶ್ವಿನಿವೇಣುಗೋಪಾಲ್, ಸ್ನೇಹ ಅಕಂ, ಜ್ಯೋತಿನಂದಿಶ್, ರೂಪಾ ಸಂತೋಷ್, ರಾಜೇಶ್ವರಿ, ದೀಪಾ, ರೇಖಾ, ನವ್ಯಾ, ನಾಗೇಂದ್ರ, ಪುಟ್ಟರಾಜು, ಲಿಂಗರಾಜು, ಮನೋಹರ್, ಮೋಹತ್ ತಾಯಿ ಆಶಾರಾಣಿ ಇತರರು ಉಪಸ್ಥಿತರಿದ್ದರು.
ಚನ್ನರಾಯಪಟ್ಟಣ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಮೋಹಿತ್ ಹಾಕಿ ವಿಶ್ವಕಪ್‌ನ ಭಾರತೀಯ ಪುರುಷರ ತಂಡಕ್ಕೆ ಆಯ್ಕೆಯಾಗಿರುವುದರಿಂದ ಮೋಹತ್ ತಾಯಿ ಆಶಾರಾಣಿಯನ್ನು ಕ್ರೀಡಾ ಭಾರತಿ ಹಾಸನ ಜಿಲ್ಲಾ ಘಟಕದಿಂದ ಗೌರವಿಸಲಾಯಿತು.
-
State5 hours agoಮೇಕೆದಾಟು ಕುರಿತು ಸರ್ವಪಕ್ಷ ಸಭೆಯ ಅಗತ್ಯವಿಲ್ಲ, ಕೀಳುಮಟ್ಟದ ರಾಜಕೀಯ ಬೇಡ: ಉದಯನಿಧಿಗೆ ತ.ನಾಡು ಸಿಎಂ ತರಾಟೆ
-
State9 hours agoಬೈಕ್ ಟ್ಯಾಕ್ಸಿ ವಿರುದ್ಧ RTO ಕಾರ್ಯಾಚರಣೆ ಮುಂದುವರಿಕೆ: 2ನೇ ದಿನ 70 ವಾಹನ ಸೀಜ್, ಸ್ಪಷ್ಟ ನೀತಿಗೆ ಚಾಲಕರ ಆಗ್ರಹ
-
Politics20 hours agoವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಸರ್ಕಾರ; ಕೃಷಿ ಅಧಿಕಾರಿ ಪರೀಕ್ಷೆ ಮುಂದೂಡಿಕೆ
-
Chikmagalur4 hours agoಶಿವನಿ ನಾಡ ಕಚೇರಿ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳ್ಳತನ: ಅಜ್ಜಂಪುರ ಠಾಣೆಯಲ್ಲಿ ಪ್ರಕರಣ
-
Chikmagalur6 hours agoಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾರೆ ಕೆಲಸಗಾರ ನಿಗೂಢ ನಾಪತ್ತೆ; ಪತ್ನಿಯಿಂದ ದೂರು ದಾಖಲು
-
Chamarajanagar5 hours agoಆ.11 ರಿಂದ ಮಕ್ಕಳ ಸಹಾಯವಾಣಿ ನೌಕರರ ಪ್ರತಿಭಟನೆ
-
Chikmagalur4 hours ago57 ಗ್ರಾಂ ಚಿನ್ನದ ಮಾಂಗಲ್ಯ ಸರ ಹಾಗೂ ₹50 ಸಾವಿರ ಪಡೆದು ವಂಚನೆ: ಜ್ಯುವೆಲರಿ ಮಾಲೀಕ ದಂಪತಿ ವಿರುದ್ಧ ಪ್ರಕರಣ
-
Chamarajanagar21 hours agoರಾಘವಾಪುರ ಬಳಿ ರಸ್ತೆ ವಿಭಜಕಕ್ಕೆ ಲಾರಿ ಡಿಕ್ಕಿ: ತಪ್ಪಿದ ಭಾರಿ ಅನಾಹುತ
