Connect with us

Crime

ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್‌ಗೆ ನುಗ್ಗಿ ಯುವಕನ ಮಚ್ಚಿನಿಂದ ಹಲ್ಲೆ

Published

on

ಹಾಸನ : ಕ್ಷುಲ್ಲಕ ಕಾರಣಕ್ಕೆ ಪೆಟ್ರೋಲ್ ಬಂಕ್‌ಗೆ ನುಗ್ಗಿ ಯುವಕನ ಮಚ್ಚಿನಿಂದ ಹಲ್ಲೆ

ಪ್ರಜ್ವಲ್ ಹಲ್ಲೆಗೊಳಗಾದ ಯುವಕ

ಹಾಸನ ಜಿಲ್ಲೆ, ಬೇಲೂರು ಪಟ್ಟಣದ, ನೆಹರು ನಗರದಲ್ಲಿ ಘಟನೆ

ಜೀತನ್, ರಫೀಸ್ ಹಲ್ಲೆ ಮಾಡಿದ ಆರೋಪಿಗಳು

ಕುಡಿದ ಮತ್ತಿನಲ್ಲಿ ಪೆಟ್ರೋಲ್ ಬಂಕ್‌ಗೆ ಬಂದಿದ್ದ ಇಬ್ಬರು

ಪೆಟ್ರೋಲ್ ಹಾಕುವ ವಿಚಾರಕ್ಕೆ ಪ್ರಜ್ವಲ್ ಜೊತೆ ಶುರುವಾದ ಜಗಳ

ನಂತರ ಪೆಟ್ರೋಲ್ ಬಂಕ್‌ಗೆ ನುಗ್ಗಿ ಮಚ್ಚಿನಿಂದ ಹಲ್ಲೆ ಮಾಡಿರುವ ಇಬ್ಬರು ಆರೋಪಿಗಳು

ಇಬ್ಬರನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಗಂಭೀರವಾಗಿ ಗಾಯಗೊಂಡಿರುವ ಪ್ರಜ್ವಲ್‌ಗೆ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Continue Reading
Click to comment

Leave a Reply

Your email address will not be published. Required fields are marked *

Crime

ಯಾವ ತಪ್ಫಿಗಾಗಿ ಈ ಕೃತ್ಯ, ಬಿಜೆಪಿ ಮಾಧ್ಯಮ ವಕ್ತಾರ ವಿಜಯ್ ಕುಮಾರ್ ಮೇಲಿನ ಹಲ್ಲೆಗೆ ಕಳವಳ ವ್ಯಕ್ತಪಡಿಸಿದ ಮಾಜಿ ಪ್ರದಾನಿ ದೇವೇಗೌಡರು

Published

on

ಹಾಸನ: ಯಾವ ತಪ್ಫಿಗಾಗಿ ಈ ಕೃತ್ಯ, ಬಿಜೆಪಿ ಮಾಧ್ಯಮ ವಕ್ತಾರ ವಿಜಯ್ ಕುಮಾರ್ ಮೇಲಿನ ಹಲ್ಲೆಗೆ ಕಳವಳ ವ್ಯಕ್ತಪಡಿಸಿದ ಮಾಜಿ ಪ್ರದಾನಿ ದೇವೇಗೌಡರು
ಆರ್ ಎಎಸ್ ಎಸ್ ನವರು ನಿಸ್ವಾರ್ಥವಾಗಿ ಕೆಲಸ ಮಾಡೋರು, ದೇಶದ ತುರ್ತು ಪರಿಸ್ಥಿತಿ ವೇಳೆಯಲ್ಲೂ ಕೂಡ ದೇಶಕ್ಕಾಗಿ ಕೆಲಸ ಮಾಡಿದವರು, ನನಗೆ ಎಲ್ಲವೂ ಗೊತ್ತಿದೆ ತಿಳಿದು ಕೊಂಡಿದ್ದೇನೆ.
ನೀವು ಏನು ಮಾತಾಡಿದ್ರಿ ನಂದೂ ಒಂದು ಮತ ಅವರದು ಒಂದು ಮತ ಎಂದಿದ್ದೀರಿ,
ನೀವು ಜನರಲ್ ಆಗಿ ಮಾತಾಡಿದ್ರಿ ಅದ್ರಲ್ಲಿ ಏನು ತಪ್ಪಿದೆ, ಪ್ರೀತಂಗೌಡ ಹೆಸರು ಹೇಳದೆ ಘಟನೆ ಖಂಡಿಸಿದ ದೇವೇಗೌಡರು.
ನಾನು ಈ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳೋದಿಲ್ಲ. ಈಗ ಏನೂ ಮಾತನಾಡಲ್ಲ
ನೀವೆಲ್ಲಾ ವಾಸ್ತವಾಂಶವನ್ನು ವರದಿ ಮಾಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ ದೇವೇಗೌಡರು.
ಹಿಮ್ಸ್ ನಲ್ಲಿ ಗಾಯಾಳು ವಿಜಯಕುಮಾರ್ ಅರೋಗ್ಯ ವಿಚಾರಿಸಿ ನಂತರ ಮಾತನಾಡಿದ ಮಾಜಿ ಪ್ರಧಾನಿ

ನಾನು ನಿಮ್ಮ ಜೊತೆ ಇರ್ತೇನೆ ಎಂದು ವಿಜಯಕುಮಾರ್ಗೆ ಭರವಸೆ, ನಾಳೆ ಸಂಜೆ ಮತ್ತೆ ಬರ್ತೇನೆ ಪೊಲೀಸರು ಏನು ಕ್ರಮ ಕೈಗೊಳ್ತಾರೆ ತಿಳಿದುಕೊಳ್ತೇನೆ. ಕೆಲವರಿಗೆ ಜೀವ ಬೆದರಿಕೆ ಇದೆ ಎಂದು ದೇವೇಗೌಡ ರಿಗೆ ಮಾಹಿತಿ ನೀಡಿದ ಬಿಜೆಪಿ ಕಾರ್ಯಕರ್ತರು
ಇದಕ್ಕೆ ನಾನು ನಿಮ್ಮ ಜೊತೆ ಇದ್ದೇನೆ ಎಂದ ಗೌಡರು.

Continue Reading

Crime

ತಂದೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಪಾಪಿ ಮಗ

Published

on

ಮಂಡ್ಯ: ಆಸ್ತಿಯನ್ನು ಮಗಳ ಹೆಸರಿಗೆ ಬರೆದುಕೊಟ್ಟಿದ್ದರಿಂದ ತಂದೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಗ್ರಾಮದ ನಂಜಪ್ಪ(70) ಅವರನ್ನ ಆತನ ಮಗ ಮಹದೇವ್ ಹತ್ಯೆಗೈದು ಪರಾರಿಯಾಗಿದ್ದಾನೆ. ಹೆತ್ತ ಮಗನೇ ತಂದೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ದಾರುಣ ಘಟೆನಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಅಪ್ಪ ಮಗನ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಬಂದ ತಾಯಿ ಮೇಲು ಸಹ ಮಾರಣಾಂತಿಕ ಹಲ್ಲೆ ನಡೆಸಿರುವ ಮಹದೇವ್‌ ಕೋಪ ತಂದೆಯ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.

ನಂಜಪ್ಪ ತನ್ನ ಆಸ್ತಿಯನ್ನು ಮಗಳಿಗೆ ಬರೆದು ಕೊಟ್ಟಿದ್ದನು ಇದರಿಂದ ಮಗ ಮಹದೇವ್ ಹಾಗಾಗ್ಗೆ ಜಗಳ ತೆಗೆಯುತ್ತಿದ್ದನು, ಮಂಗಳವಾರ ಬೆಳಗಿನ ಜಾವ ಜಗಳ ವಿಕೋಪಕ್ಕೆ ತಿರುಗಿದ್ದು ತಂದೆ ನಂಜಪ್ಪನನ್ನು ರಸ್ತೆಯಲ್ಲಿ ಅಟ್ಟಾಡಿಸಿದ ಮಗ ಹಲ್ಲೆ ಮಾಡಿದ್ದು ತಡೆಯಲು ಬಂದ ತಾಯಿ ಮೇಲೆಯೂ ಹಲ್ಲೆ ಮಾಡಿದ್ದಾನೆ, ರಸ್ತೆಯಲ್ಲಿಯೇ ಕೆಳಕ್ಕೆ ಬಿದ್ದ ನಂಜಪ್ಪನ ಮೇಲೆ ಕಲ್ಲು ಎತ್ತಿ ಹಾಕಿದ್ದು, ಇದರಿಂದ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ನಂಜಪ್ಪ ಅವರು ರಾಮನಗರದ ಜಿಲ್ಲೆ, ಅರ್ಚಕರಹಳ್ಳಿ ಗ್ರಾಮದವರಾಗಿದ್ದು, ತನ್ನ ಮಗಳನ್ನು ತಾಲ್ಲೂಕಿನ ಸುಂಡಹಳ್ಳಿ ಗ್ರಾಮದ ಯುವಕನಿಗೆ ಕೊಟ್ಟು ವಿವಾಹ ಮಾಡಿಕೊಟ್ಟಿದ್ದರು. ನಂತರದ ದಿನಗಳಲ್ಲಿ ಮಗಳು ಅಳಿಯ ಇದ್ದ ಸುಂಡಹಳ್ಳಿ ಗ್ರಾಮಕ್ಕೆ ಬಂದು ಬೇರೆ ನೆಲೆಸಿದ್ದ ಇವರು, ಗ್ರಾಮದಲ್ಲಿ ಸ್ವಂತ ಮನೆ ಮತ್ತು ಜಮೀನು ಮಾಡಿಕೊಂಡು ಬದುಕು ನಡೆಸುತ್ತಿದ್ದರು.

ಸುಂಡಹಳ್ಳಿ ಗ್ರಾಮದ ಬಳಿ ಇದ್ದ ಜಮೀನು ಮಾರಾಟ ಮಾಡಲು ಮುಂದಾಗಿದ್ದರು. ಈ ವೇಳೆ ಮಗಳು ತಕರಾರು ತೆಗೆದಿದ್ದಳು. ನಂತರ ಸಮಾಧಾನಪಡಿಸಿ ಸ್ವಲ್ಪ ಹಣಕಾಸಿನ ಸಹಾಯ ಮಾಡಿದ್ದರು. ಇದರಿಂದ ಕುಪಿತಗೊಂಡಿದ್ದ ಮಗ ಮಹದೇವ ಆಗಾಗ್ಗೆ ಜಗಳ ಮಾಡುತ್ತಿದ್ದ, ಜಮೀನು ಮಾರಾಟ ಮಾಡಿ ಅದರಲ್ಲೂ ಮಗಳಿಗೆ ಹಂಚಿಕೆ ಮಾಡಿದ್ದರಿಂದ ಕುಪಿತಗೊಂಡ ಮಗ ಆಗಾಗ್ಗೆ ಜಗಳ ತೆಗೆಯುತ್ತಿದ್ದ, ಈಗ ಆ ಜಗಳ ವಿಕೋಪಕ್ಕೆ ತಿರುಗೆ ತಂದೆಯನ್ನೇ ಹತ್ಯೆ ಮಾಡಿದ್ದಾನೆ.

ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Crime

ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ

Published

on

ಬೇಲೂರು- ಅಣ್ಣನಿಂದಲೇ ತಮ್ಮನ ಬರ್ಬರ ಹತ್ಯೆ

ಜಮೀನು ವಿವಾದ ಹಿನ್ನೆಲೆಯಲ್ಲಿ ಸಹೋದರನನ್ನು ಕೊಚ್ಚಿ ಕೊಂದ ಅಣ್ಣ

ಅರೆಹಳ್ಳಿ ಗ್ರಾಮದ ಕೇಶವ ನಗರ ದ ನಿವಾಸಿ ಸಂಗಯ್ಯ (58) ಕೊಲೆಯಾದ ಸಹೋದರ

ಸಂಗಯ್ಯ ಸಹೋದರ ಈರಯ್ಯನಿಂದ ಕೃತ್ಯ ಆರೋಪ

ಹಾಸನ ‌ಜಿಲ್ಲೆ‌ ಬೇಲೂರು ತಾಲ್ಲೂಕಿನ ಅರೆಹಳ್ಳಿಯಲ್ಲಿ ಘಟನೆ

ಅರೆಹಳ್ಳಿಯ ಗೂರ್ಗಿಹಳ್ಳಿ‌ ಕಾಫಿ ತೋಟದಲ್ಲಿ ಘಟನೆ

ಕೊಲೆ ಆರೋಪಿ ಈರಯ್ಯನನ್ನು ವಶಕ್ಕೆ ಪಡೆದ‌ ಪೊಲೀಸರು

ಜಮೀನು ವಿವಾದ ಮಚ್ಚಿನಲ್ಲಿ ಹಲ್ಲೆ ಮಾಡಿ ಹತ್ಯೆ

ಅರೆಹಳ್ಳಿ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Continue Reading

Trending

error: Content is protected !!