Hassan
ಮಾಜಿ ಸೈನಿಕರಿಂದ ಸಶಸ್ತ್ರ ಪಡೆಗಳ ವೆಟರನ್ಸ್ ಡೇ ಆಚರಣೆ ಎಲ್ಲಾ ಕ್ಷೇತ್ರಗಳಲ್ಲು ಮೀಸಲಾತಿಗೆ ಆಗ್ರಹ
ಹಾಸನ: ನಗರದ ಹೌಸಿಂಗ್ ಬೋರ್ಡ್, ರಿಂಗ್ ರಸ್ತೆ ಬಳಿ ಇರುವ ಮಾಜಿ ಸೈನಿಕರ ಸಂಘದ ಸೈನಿಕ ಭವನದಲ್ಲಿ ಭಾನುವಾರ ಬೆಳಿಗ್ಗೆ ಸಶಸ್ತ್ರ ಪಡೆಗಳ ವೆಟರನ್ಸ್ ಡೇಯನ್ನು ಆಚರಿಸಲಾಯಿತು. ಇದೆ ವೇಳೆ ರಾಜಕೀಯ, ಸರಕಾರಿ ಹುದ್ದೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮೀಸಲಾತಿ ನೀಡುವಂತೆ ಆಗ್ರಹಿಸಿದರು.
ಇದೆ ವೇಳೆ ಕಮೆಂಡರ್ ಚಂದ್ರಶೇಖರ್ ಉದ್ದೇಶಿಸಿ ಮಾತನಾಡುತ್ತಾ, ಈ ದಿವಸ ಮೂರು ಪಡೆಗಳು ಸುಸರ್ಜಿತವಾಗಿ, ಬಹಳ ಶಕ್ತಿ ಶಾಲಿಯಾಗಿ ಮುಂದುವರೆಯಲು ಕಾರಣ ನಮ್ಮ, ನಿಮ್ಮೆಲ್ಲರ ಪ್ರತಿಯೊಬ್ಬರು ವಿವಿಧ ರೀತಿಯಲ್ಲಿ ಸಲ್ಲಿಸಿರುವ ಸೇವೆಯಂತಹ ಒಳ್ಳೆ ಕೆಲಸಗಳಿಂದ ಆಗಿದೆ. ನಾವುಗಳು ಸೇನೆಗಳಿಗೆ ಸೇರಿದಾಗ ಅಲ್ಲಿನ ತರಬೇತಿ, ಶಿಸ್ತು, ಕೌಶಲ್ಯ ಕಲಿತು ನಂತರದಲ್ಲಿ ಸೇವೆಯಲ್ಲಿದ್ದಾಗ ಮರಳುಗಾಡಿನಲ್ಲಾಗಲಿ, ಬೆಟ್ಟ ಗುಡ್ಡಗಳ ಬಳಿ, ಕಣಿವೆಗಳಲ್ಲಿ ಹಾಗೂ ಆಕಾಶ ಮಾರ್ಗದಲ್ಲಾಗಲಿ ಇಲ್ಲವೇ ಸಮುದ್ರದಲ್ಲಾಗಲಿ ಮಾಡಿದಂತಹ ಅದ್ಭುತ ಕರ್ತವ್ಯಗಳಾಗಿವೆ. ಸೇವೆ ನಂತರ ನಿವೃತ್ತರಾಗಿ ಈಗ ಆದರ್ಶನ ನಾಗರೀಕರಾಗಿ ಜೀವಿಸುತ್ತಿದ್ದೇವೆ ಎಂದರು. ಸೇನಾನಿಗಳಾದ ನಾವು ಮಾಡುವ ಕಾರ್ಯದಲ್ಲಿ ನಾಗರೀಕರಿಗೆ ಆದರ್ಶಗಳಾಗಳಾಗಿ ಮಾಧರಿಯಾಗಿರಬೇಕು. ನಮ್ಮ ಮೊದಲ ಫೀಲ್ಡ್ ಮಾರ್ಷಲ್ ಕರಿಯಪ್ಪ ಅವರ ಸ್ಮರಣೆಯಲ್ಲಿ ಜನವರಿ ೧೪ ರಂದು ಪೂರ್ವ ಸೈನಿಕರ ದಿನಗಳನ್ನಾಗಿ ಆಚರಿಸಲಾಗುತ್ತಿದೆ. ದೆಹಲಿಯ ಆದೇಶದಂತೆ ಪ್ರತಿ ಜಿಲ್ಲೆಯಲ್ಲೂ ಅದ್ದೂರಿಯಾಗಿ ಈ ದಿನವನ್ನು ಆಚರಿಸಬೇಕೆಂದು ಹೇಳಲಾಗಿದೆ. ಮುಂದಿನ ವರ್ಷದಲ್ಲಿ ಜಿಲ್ಲಾಡಳಿತವನ್ನು ಸಂಪರ್ಕಿಸಿ, ಸೈನಿಕ್ ಬೋರ್ಡ್ ಸಹಕಾರದಿಂದ ಹೆಚ್ಚು ಜನರನ್ನು ಕರೆತರಿಸಿ ಸಂಭ್ರಮದಿಂದ ಆಚರಿಸಬೇಕೆಂದು ತಮ್ಮ ಅಭಿಪ್ರಾಯ ತಿಳಿಸಿದರು. ದೆಹಲಿಯಲ್ಲಿ ಪೂರ್ವ ಸೈನಿಕರಿಗಾಗಿ ನಿರೂಪಿಸಿರುವ ಕೆಲವೊಂದು ಯೋಜನೆಯನ್ನು ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡಿದ್ದು, ನಾವುಗಳು ಅರಿತುಕೊಂಡು ಉಳಿದ ಸೈನಿಕರಿಗೂ ಉಪಯೋಗವಾಗುವಂತೆ ನೀಡಬೇಕೆಂದು ಹೇಳಿದರು.

ಜಿಲ್ಲಾ ಮಾಜಿ ಸೈನಿಕ ಸಂಘದ ಉಪಾಧ್ಯಕ್ಷ ಗೋವಿಂದೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಎ.ಎಸ್. ಪ್ರದೀಪ್ ಸಾಗರ್ ಮಾತನಾಡಿ, ಕಾನೂನಿನಲ್ಲಿ ತಿದ್ದುಪಡಿಮಾಡಿಕೊಂಡು ಕೇಳಿಕೊಳ್ಳುತ್ತೇವೆ ಹೊರತು ಕಾನೂನಿನಲ್ಲಿ ಏನನ್ನು ತೆಗೆದುಕೊಂಡಿಲ್ಲ. ಸ್ವಾತಂತ್ರ ಕೊಟ್ಟಿದ್ದಾರೆ ಆದರೇ ಸೈನಿಕರಿಗೆ ಸ್ವಾತಂತ್ರ ಸಿಕ್ಕಿಲ್ಲ. ಈ ದೇಶದ ಗಡಿಗಳಲ್ಲಿ ದೇಶ ಕಾಯುತ್ತಿರುವ ಹಾಗೂ ನಿವೃತ್ತಿ ಹೊಂದಿರುವ ಎಲ್ಲಾ ಸೈನಿಕರ ಪರವಾಗಿ ಮನವಿ ಏನೇಂದರೇ ಇಡೀ ಭಾರತ ದೇಶದ ಏಳಿಗೆಗಾಗಿ ಶ್ರಮಿಸುತ್ತಿರುವ ಸೈನಿಕರು ಚನ್ನಾಗಿದ್ದರೇ ಮಾತ್ರ ದೇಶದ ಏಳಿಗೆ ಸಾದ್ಯ. ಈ ನಿಟ್ಟಿನಲ್ಲಿ ಸರಕಾರವು ರಾಜಕೀಯವಾಗಿ ನಮಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದರು. ಸೈನಿಕರಿಗೆ ರಾಜಕೀಯದಲ್ಲೂ ಮೀಸಲಾತಿ ಕೊಡಬೇಕು. ಸರಕಾರಿ ಹುದ್ದೆಗಳಲ್ಲಿ ಮಾಜಿ ಸೈನಿಕರಿಗೆ ಶೇಕಡ ೧೦ ರಷ್ಟು ಮೀಸಲಾತಿಯನ್ನು ನಿಡಿದ್ದು, ಕೆಲವೊಂದು ಇಲಾಖೆಗಳು ನೇಮಕಾತಿಯ ಸುತ್ತೋಲೆಯನ್ನು ಹೊರಡಿಸುವಾಗ ಇದನ್ನ ಪರಿಗಣಿಸುತ್ತಿಲ್ಲ. ಮಾಜಿ ಸೈನಿಕರಿಗೆ ಸೇವೆಯ ನಂತರ ಸರಕಾರಿ ಹುದ್ದೆಗಳಲ್ಲಿ ಅವಕಾಶ ದೊರೆಯುತ್ತಿಲ್ಲ. ಮಾಜಿ ಸೈನಿಕರಿಗೆ ಸರಕಾರಿ ಜಮೀನುಗಳನ್ನು ಮಂಜೂರು ಮಾಡಲು ಬಹಳ ವಿಳಂಭ ಮಾಡಲಾಗುತ್ತಿದ್ದು,ನಮ್ಮ ಬೇಡಿಕೆಯನ್ನು ಶೀಘ್ರವಾಗಿ ಪರಿಶೀಲಿಸಬೇಕೆಂದು ಇದೆ ವೇಳೆ ಮನವಿ ಮಾಡಿದರು.

ಇದೆ ವೇಳೆ ಕ್ಯಾಪ್ಟನ್ ಎಂ.ಜಿ. ಶೆಟ್ಟಿ, ದೊರೆರಾಜು, ಜಿಲ್ಲಾ ಮಾಜಿ ಸೈನಿಕ ಸಂಘದ ಗೌರವಾಧ್ಯಕ್ಷ ನಟೇಶ್, ಅಧ್ಯಕ್ಷ ಎನ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಾಗರ್, ಖಜಾಂಚಿ ಬಾಲಕೃಷ್ಣ, ಚಂದ್ರಗೌಡ, ಬಸವರಾಜ್, ಮಾಜಿ ಅಧ್ಯಕ್ಷ ಪ್ರಭಾಕರ್ ಇತರರು ಉಪಸ್ಥಿತರಿದ್ದರು.
Hassan
ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮವಹಿಸಲು ಸೂಚನೆ ನೀಡಿದ ಡಿಸಿ ಲತಾಕುಮಾರಿ
ಹಾಸನ: ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕಾರವಾಗಿರುವ 1069 ಅರ್ಜಿಗಳನ್ನು ವಿಲೇವಾರಿ ಮಾಡಿರುವ ಕುರಿತು ವರದಿ ನೀಡುವುದರ ಜೊತೆಗೆ ಇಂದು ಸ್ವೀಕಾರ ಮಾಡಿರುವ 135 ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜನ ಸ್ಪಂದನ ಸಭೆಯಲ್ಲಿ ಅಹವಾಲು ಸ್ವೀಕಾರ ಮಾಡಿ ಮಾತನಾಡಿದ ಅವರು ಸಾರ್ವಜನಿಕರ ಸ್ವಂತ ಜಮೀನು ಒತ್ತುವರಿ ಆಗಿದ್ದಲ್ಲಿ ನ್ಯಾಯಾಲಯದ ನಿರ್ದೇಶನವಿದ್ದರೆ ಮಾತ್ರ ಬಿಡಿಸಲು ಅವಕಾಶ ಇರುತ್ತದೆ ಎಂದು ತಿಳಿಸಿದರು.

ಕಳೆದ 20 ವರ್ಷದಿಂದ ಪಡಿತರ ಕಾರ್ಡ್ ಹೊಂದಿದ್ದು, ಆದಾಯ ಹೆಚ್ಚಳವಾಗಿದೆ ಎಂದು ಕಂಪ್ಯೂಟರ್‌ನಲ್ಲಿ ತೋರಿಸುತ್ತಿರುವುದರಿಂದ ೫ ವರ್ಷದಿಂದ ಪಡಿತರ ಕಾರ್ಡ್ ರದ್ದಾಗಿರುವುದನ್ನು ಸರಿಪಡಿಸಲು ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಅರಕಲಗೂಡು ತಾಲೂಕಿನ ಮಾದಿಹಳ್ಳಿಯಲ್ಲಿ ಏತನೀರಾವರಿಗೆ ಭೂಸ್ವಾಧೀನವಾಗಿದ್ದು, ಪರಿಹಾರ ಕೋರಿ ಬಂದ ಮನವಿಗೆ ಖುದ್ದು ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.
ಪೌತಿಖಾತೆ, ಹದ್ದುಬಸ್ತು, ವಿದ್ಯುತ್ ಸಂಪರ್ಕ ಕಲ್ಪಿಸುವುದು, ಸಾಗುವಳಿ ಚೀಟಿ, ಕಂದಾಯ ಗ್ರಾಮ, ಖಾತೆ ಮಾಡುವ ಬಗ್ಗೆ, ಪೋಡಿ ದುರಸ್ತಿ, ಪಹಣಿ ತಿದ್ದುಪಡಿ, ಹೊಲಕ್ಕೆ ದಾರಿ ಬಿಡಿಸಿಕೊಡುವ ಬಗ್ಗೆ, ಶ್ರವಣಬೆಳಗೊಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ, ಇನಾಮು ರದ್ದು ಪಡಿಸುವ ಕುರಿತು, ಕೊಣನೂರು ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕರಿಗೆ ಹಕ್ಕು ಪತ್ರ ನೀಡಲು ಮನವಿ, ಆಕಾರ ಬಂದು ತಿದ್ದುಪಡಿ ಮಾಡಿರುವವರ ಮೇಲೆ ಎಫ್.ಐ.ಆರ್ ದಾಖಲಿಸುವಂತೆ ಸೂಚಿಸಿದರಲ್ಲದೆ, ವಿದ್ಯುತ್ ಲೈನ್ ಹಾದು ಹೋಗಿರುವ ಸ್ಥಳಕ್ಕೆ ಪರಿಹಾರ ನೀಡಲು ಒಂದು ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಟ್ಟಾಯ ಗ್ರಾಮದಲ್ಲಿ ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸಲು, ವಸತಿ ಯೋಜನೆಯಡಿ ಮಂಜೂರಾದ ಮನೆಗೆ ಅಂತಿಮ ಬಿಲ್ ಹಣ ಪಾವತಿ ಮಾಡುವಂತೆ ಸೂಚಿಸಿದರಲ್ಲದೆ, ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶೇಡ್ ಹಾಕಿರುವುದನ್ನು ನಿರ್ದಾಕ್ಷಿಣ್ಯವಾಗಿ ತೆರೆವುಗೊಳಿಸಲು ನಿರ್ದೇಶನ ನೀಡಿದರು.
ಬೊಮ್ಮನಹಳ್ಳಿ ಏತನೀರಾವರಿ ಯೋಜನೆಗೆ ಭೂಸ್ವಾಧೀನವಾಗಿರುವ ಜಾಗಕ್ಕೆ ಹಾಗೂ ಬೆಳೆ ಪರಿಹಾರ, ಖಾತೆ ಬದಲಾವಣೆ, ಹೊಳೆನರಸೀಪುರ ತಾಲ್ಲೂಕಿನ ಕಾಮಸಮುದ್ರದಲ್ಲಿ ಗೋಮಾಳದಲ್ಲಿ ಎರಡು ಗುಂಟೆ ಜಾಗ ಕಲ್ಪಿಸುವಂತೆ ಅಹವಾಲು ಅರ್ಜಿಗಳು ಸ್ವೀಕಾರವಾಯಿತು.

ಸಾರ್ವಜನಿಕರಿಗೆ ಕಾನೂನು ಸೇವೆಗಳ ಸಹಾಯಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಂದು ಕೋಶ ತೆರೆಯಲಾಗಿದೆ ಯಾರ ಸಹಾಯವಿಲ್ಲದವರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
Hassan
ಹಾಸನದ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಶಾಲಾ ವಾರ್ಷಿಕೋತ್ಸವದ ಸಂಭ್ರಮ.
ಹಾಸನ ನಗರದ ಪ್ರತಿಷ್ಠಿತ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಶಾಲಾ ವಾರ್ಷಿಕೋತ್ಸವ ದಿನಾಂಕ 19 .12. 2025 ರಂದು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಶಾಲಾ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಕೆ ಎಸ್ ಲತಾ ಕುಮಾರಿ, ಐಎಎಸ್ ಭಾಗವಹಿಸಿದ್ದರು. ವಿಶಿಷ್ಟ ಅತಿಥಿಯಾಗಿ ರಾಜೀವ ಶಿಕ್ಷಕ ಪ್ರಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಡಾ।। ಮಿನಿ ವರ್ಗೀಸ್ ರವರು ಭಾಗವಹಿಸಿದ್ದರು. ಜಿಲ್ಲಾಧಿಕಾರಿಯವರು ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಮಕ್ಕಳು ಬಾಲ್ಯದಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು, ಪಂಚತಂತ್ರ, ಚಂದಮಾಮ, ನೈತಿಕ ಮೌಲ್ಯವನ್ನು ಬೆಳಗಿಸುವ ಹಾಗೂ ಜ್ಞಾನ ವಿಜ್ಞಾನದ ಪುಸ್ತಕಗಳ ಅರಿವಿನಿಂದ ಜ್ಞಾನ ಸಂಪಾದಿಸಬೇಕು,ಒಳ್ಳೆಯ ಸುಸಂಸ್ಕೃತ ಹಾಗೂ ದೇಶ ಕಟ್ಟುವ ನಾಗರಿಕರನ್ನಾಗಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರು ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಶುಭ ಹಾರೈಸಿದರು. ವರಿಷ್ಠ ವಿದ್ಯಾರ್ಥಿಗಳು ನೀಡಿದ 12 ಸೋಲಾರ್ ವಿದ್ಯುತ್ ಬೀದಿ ದೀಪಗಳನ್ನು ಉದ್ಘಾಟಿಸಿದರು.

ಈ ಸಂಭ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದ ಡಾ. ಮಿನಿ ವರ್ಗೀಸ್ ರವರು ಮಕ್ಕಳು ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಇಂದಿನ ಜಗತ್ತು ಮೊಬೈಲ್ ಯುಗವಾಗಿದೆ. ಸಾಧ್ಯವಾದಷ್ಟು ಮೊಬೈಲನ್ನು ಅತಿಯಾಗಿ ಬಳಸದೆ ಒಳ್ಳೆಯದಕ್ಕೆ ಮಾತ್ರ ಉಪಯೋಗಿಸಿ ನಿಮ್ಮ ಬದುಕು ಸಾರ್ಥಕಗೊಳಿಸಬೇಕು. ಶಿಕ್ಷಕರು ಮತ್ತು ಪೋಷಕರನ್ನು ಗೌರವಿಸುತ್ತಾ ಅವರ ಮಾರ್ಗದರ್ಶನದಲ್ಲಿ ನಡೆದರೆ ನಿಮ್ಮ ಭವಿಷ್ಯ ಉಜ್ವಲವಾಗುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದು ಹಿತ ನುಡಿದರು. ಇದೇ ಸಂದರ್ಭದಲ್ಲಿ ಮುಂದಿನ ವರ್ಷ ನಿವೃ ತ್ತಿಯಾಗಲಿರುವ ಶಾಲೆಯ ಪ್ರಾಂಶುಪಾಲರಾದ ಶ್ರೀ ಎಂ ಜಯಶೀಲನ್ ಮತ್ತು ಸಮಾಜ ವಿಜ್ಞಾನದ ಶಿಕ್ಷಕರಾದ
ಬಿ ಸತ್ಯನಾರಾಯಣ್ ರವರನ್ನು ಸನ್ಮಾನಿಸಲಾಯಿತು.
ಶಾಲೆಯ ಪ್ರಾಂಶುಪಾಲರಾದ
ಶ್ರೀ ಜಯಶೀಲನ್ ರವರು ವಿದ್ಯಾಲಯದ ವಾರ್ಷಿಕ ಪ್ರಗತಿಯ ಬಗ್ಗೆ ವರದಿ ಓದಿದರು. ವರಿಷ್ಠ ಶಿಕ್ಷಕರಾದ ಶ್ರೀ ಸತ್ಯನಾರಾಯಣರವರು ಸ್ವಾಗತಿಸಿದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ರಶ್ಮಿಯವರು ಧನ್ಯವಾದ ಅರ್ಪಿಸಿದರು. ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಇದಕ್ಕೆ ಸಾಕ್ಷಿಯಾದರು.
Hassan
ನಗರದಲ್ಲಿ ಗಮನಸೆಳೆದ ಕ್ರಿಸ್ಮಸ್-2025 ಭರವಸೆಯ ಜಾಥಾ
ಹಾಸನ: ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಹಾಸನ ಘಟಕದ ವೇದಿಕೆಯಡಿ, ಹಾಸನ ಜಿಲ್ಲೆಯ ಸಮಸ್ತ ಕ್ರೈಸ್ತ ಸಮುದಾಯದ ವತಿಯಿಂದ ಶನಿವಾರ ಸಂಜೆ ಆಯೋಜಿಸಲಾದ ಕ್ರಿಸ್ಮಸ್-೨೦೨೫ ಭರವಸೆಯ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆಯಿತು.

ಚರ್ಚಿನ ಫಾದರ್ ಮಾಧ್ಯಮದೊಂದಿಗೆ ಮಾತನಾಡಿ, ಕ್ರಿಸ್ಮಸ್ ಹಬ್ಬದ ಅಂಗವಾಗಿ ಈ ಭರವಸೆಯ ಜಾಥಾವನ್ನು ಹಾಸನದ ಸಂತ ಅಂತೋಣಿಯವರ ದೇವಾಲಯದಿಂದ ಆರಂಭಿಸಿ, ಎನ್.ಆರ್. ಸರ್ಕಲ್‌ನ ಹೇಮಾವತಿ ಪ್ರತಿಮೆ, ಮಹಾವೀರ ವೃತ್ತ, ಸಹ್ಯಾದ್ರಿ ಸರ್ಕಲ್, ಮಹಾರಾಜ ಪಾರ್ಕ್ ರಸ್ತೆ, ಸೈಟರ್ಸ್ ಮೆಮೋರಿಯಲ್ ಹಾಲ್ ವೃತ್ತ ಹಾಗೂ ಆರ್.ಸಿ. ರಸ್ತೆ ಮೂಲಕ ಸಂಚರಿಸಿ, ಪುನಃ ಜಿಲ್ಲಾ ಪಂಚಾಯತ್ ಸರ್ಕಲ್ ಮೂಲಕ ಸಂತ ಅಂತೋಣಿಯವರ ದೇವಾಲಯಕ್ಕೆ ವಾಪಸ್ಸು ತಲುಪಿಸಲಾಯಿತು. ನಂತರ ಚರ್ಚ್ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು..

ಜಾಥಾದ ವೇಳೆ ಸ್ತಬ್ಧಚಿತ್ರಗಳು, ಕ್ರಿಸ್ಮಸ್ ನೃತ್ಯ ರೂಪಕಗಳು, ಕೋಲಾಟ, ಕ್ರಿಸ್ಮಸ್ ಹಾಡುಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು. ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಮಾಜದಲ್ಲಿ ಶಾಂತಿ, ಭರವಸೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಫಾದರ್ ಪ್ಯಾಟ್ರಿಕ್, ಫಾದರ್‌ಗಳಾದ ಸುದರ್ಶನ್ ಕುಮಾರ್, ಸಿ.ಎಸ್. ಯೂಸೇಫ್, ಸಿಲ್ವರ್ ಸ್ಟಾರ್, ಪಾಸ್ಟರ್ ಜೋಸೇಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
-
Special23 hours agoಕರ್ನಾಟಕ ಸರ್ಕಾರದಿಂದ SSP ವಿದ್ಯಾರ್ಥಿವೇತನ 2025–26: ಶಾಲೆ, ಪಿಯುಸಿ, ಡಿಗ್ರಿ ಹಾಗೂ ಪಿಜಿ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ
-
National - International14 hours agoವಿಶ್ವಸಂಸ್ಥೆಯಲ್ಲಿ ವಿಶ್ವ ಧ್ಯಾನ ದಿನದ ಅಂಗವಾಗಿ ವಿಶ್ವಕ್ಕೆ ಧ್ಯಾನದ ಮಹತ್ವ ಸಾರಿದ ರವಿಶಂಕರ್ ಗುರೂಜಿ
-
Mysore13 hours agoಎಎಸ್ಜಿ ಆಸ್ಪತ್ರೆಯಲ್ಲಿ ನಗದುರಹಿತ ಕಣ್ಣಿನ ಆರೈಕೆ ಯೋಜನೆ ಆರಂಭ
-
Chikmagalur20 hours agoಅಪ್ರಾಪ್ತ ಮಗನಿಗೆ ಬೈಕ್ ಚಾಲನೆ ಮಾಡಲು ನೀಡಿದ್ದ ವ್ಯಕ್ತಿಗೆ ಕೋರ್ಟ್ 25 ಸಾವಿರ ರೂ. ದಂಡ
-
Chamarajanagar16 hours agoಜಾನಪದ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದ ಎಚ್.ಜನಾರ್ಧನ್
-
Mysore13 hours agoಜಿಲ್ಲಾ ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್ ಕ್ರಿಕೆಟ್: ರಾಯಲ್ ಚಾಲೆಂಜರ್ಸ್ ಚಾಂಪಿಯನ್
-
Mandya16 hours agoಕಣ್ಮನ ಸೆಳೆದ 1066ನೇ ಸುತ್ತೂರು ಜಯಂತಿ ಪ್ರಯುಕ್ತ ನಡೆದ ಭಾವೈಕ್ಯತಾ ರಥಯಾತ್ರೆ
-
Chikmagalur17 hours agoಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ
