Connect with us

Hassan

ಹಾಸನ- ಜಿದ್ದಾ ಜಿದ್ದಿನ ಹಾಸನ‌ ಲೋಕಸಭಾ ಅಖಾಡಕ್ಕೆ ಇಂದು ಸಿದ್ದು ಡಿಕೆ ಎಂಟ್ರಿ

Published

on

  • ಹಾಸನ- ಜಿದ್ದಾ ಜಿದ್ದಿನ ಹಾಸನ‌ ಲೋಕಸಭಾ ಅಖಾಡಕ್ಕೆ ಇಂದು ಸಿದ್ದು ಡಿಕೆ ಎಂಟ್ರಿ

ಇಂದು ತಮ್ಮ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರವಾಗಿ ಚುನಾವಣಾ ಪ್ರಚಾರ ನಡೆಸಲಿರೊ ಸಿಎಂ ಹಾಗು ಡಿಸಿಎಂ

ಬೆಳಿಗ್ಗೆ 11 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೇಲೂರಿಗೆ ಆಗಮಿಸಲಿರೊ ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್

ಬೇಲೂರಿನಲ್ಲಿ ರೋಡ್ ಶೋ ನಡೆಸಲಿರೊ ಉಬಯ ನಾಯಕರು..

ಬಳಿಕ ಸಕಲೇಶಪುರ ದಲ್ಲಿ ಮಧ್ಯಾಹ್ನ 1 ಗಂಟೆ ಅರಕಲಗೂಡಿನಲ್ಲಿ 3-25 ಕ್ಕೆ ರೋಡ್ ಶೋ ನಲ್ಲಿ ಭಾಗಿಯಾಗಲಿರೊ ಸಿಎಂ ಹಾಗು ಡಿಸಿಎಂ

ನಂತರ ಸಂಜೆ 5-15 ಕ್ಕೆ ಹೊಳೆನರಸೀಪುರ ದಲ್ಲಿ ಸಾರ್ವಜನಿಕ ಸಭೆ ಹಾಗು ಸಂಜೆ 6-45 ಕ್ಕೆ ಚನ್ನರಾಯಪಟ್ಟಣ ದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿರೊ ನಾಯಕರು

ಪ್ರಜಾದ್ವನಿ- 2. ಹೆಸರಿನಲ್ಲಿ ಅಬ್ಬರದ ಪ್ರಚಾರ ನಡೆಸಲಿರೊ ಸಿಎಂ ಹಾಗು ಡಿಸಿಎಂ

ಮೊದಲ‌ಬಾರಿಗೆ ಜೆಡಿಎಸ್ ನಾಯಕ ಮಾಜಿ ಸಚಿವ ಎಚ್ಡಿ ರೇವಣ್ಣ ಕ್ಷೇತ್ರದಲ್ಲೂ ಪ್ರಚಾರ ನಡೆಸಲಿರೊ ಸಿಎಂ

ಈ ಹಿಂದಿನ ಹಲವು ಚುನಾವಣೆಗಳಲ್ಲಿ ರೇವಣ್ಣ ಕ್ಷೇತ್ರದಲ್ಲಿ ಪ್ರಚಾರ ನಡೆಸದೆ ಅಂತರ ಕಾಯ್ದುಕೊಂಡಿದ್ದ ಸಿದ್ದು

ಇಂದು‌ ರೇವಣ್ಣ ಪುತ್ರ ಪ್ರಜ್ವಲ್ ವಿರುದ್ದ ತಮ್ಮ ಅಭ್ಯರ್ಥಿ ಪರ ಪ್ರಚಾರ ‌ನಡೆಸಲಿರೊ ಸಿಎಂ‌ ಸಿದ್ದು

ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ಹೆ ಸಾಥ್ ನೀಡಲಿರೊ‌ ಲೋಕಸಭಾ ಕ್ಷೇತ್ರದ ಶಾಸಕರಾದ ಶಿವಲಿಂಗೇಗೌಡ ಹಾಗು ಆನಂದ್

ಇಂದು ಜಿಲ್ಲೆಯಲ್ಲಿ ಇಡೀ ದಿನ ಪ್ರಚಾರದಲ್ಲಿ ಬಾಗಿಯಾಗಲಿರೊ‌ ಸಿದ್ದರಾಮಯ್ಯ

Continue Reading
Click to comment

Leave a Reply

Your email address will not be published. Required fields are marked *

Hassan

ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಪೋದಾರ್ ಪರಿಸರ ಸ್ನೇಹಿಗಳು

Published

on

ಹಾಸನ: ಬಿ. ಕಾಟಿಹಳ್ಳಿ ದೂರವಾಣಿ ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಪಂಚಮುಖಿ ಪಾರ್ಕ್ ಉದ್ಯಾನದಲ್ಲಿ “ವಿಶ್ವ ಪರಿಸರ ದಿನಾಚರಣೆ”ಯ ಅಂಗವಾಗಿ ಪೋದಾರ್ ಪರಿಸರ ಸ್ನೇಹಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಗಣ್ಯರು ಭಾಗಿಯಾಗಿ ಗಿಡ ನೆಟ್ಟು ಸಸ್ಯೋತ್ಸವ ಆಚರಣೆ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

Continue Reading

Hassan

ಬಿರುಗಾಳಿ ಸಹಿತ ಮಳೆಗೆ ಭಾರೀ ಪ್ರಮಾಣದಲ್ಲಿ ಭೂಕುಸಿತ

Published

on

ಹಾಸನ : ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಭಾರೀ  ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ.

ಈ ಘಟನೆ ಸಕಲೇಶಪುರ ತಾಲ್ಲೂಕಿನ, ಹೆಗ್ಗದ್ದೆ ಗ್ರಾಮದ ಬಳಿ ಶಿರಾಡಿಘಾಟ್ ರಸ್ತೆ ಎನ್‌ಎಚ್‌- 75 ರಲ್ಲಿ ನಡೆದಿದೆ. ಮೊದಲೇ ಭೂಕುಸಿತವಾಗಿದ್ದರಿಂದ ಒಂದು ಬದಿ ರಸ್ತೆ ಸಂಚಾರ ಬಂದ್ ಮಾಡಿದ್ದ ಅಧಿಕಾರಿಗಳು ಇಟಾಚಿ ಮೂಲಕ ನಡೆಯುತ್ತಿದ್ದ ಮಣ್ಣು ತೆರವು ಕಾರ್ಯಾಚರಣೆ ಮಾಡುತ್ತಿದ್ದರು. ಹೀಗಾಗಿ  ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು.

ಈ ವೇಳೆ ಮತ್ತೆ ದೊಡ್ಡ ಪ್ರಮಾಣದಲ್ಲಿ ಕುಸಿದ ಭೂಮಿ ಮರಗಳ ಸಮೇತ ಕುಸಿದು ರಸ್ತೆ ಪೂರ್ತಿ ಜಖಂಗೊಂಡಿದೆ. ಇನ್ನೂ ವಾಹನಗಳ ಸಂಚಾರವನ್ನು ಬಂದ್  ಮಾಡಿದ್ದರಿಂದ  ದೊಡ್ಡ ಅನಾಹುತ ತಪ್ಪಿದೆ.

Continue Reading

Hassan

ಮರಿ ಸತ್ತು ಮೂರು ದಿನವಾದರೂ ಸ್ಥಳ ಬಿಟ್ಟು ಕದಲದ ತಾಯಿಯಾನೆ

Published

on

ಅರೇಹಳ್ಳಿ: ತನ್ನ ಮರಿ ಸತ್ತು ಮೂರು ದಿನ ಕಳೆದರೂ ತಾಯಿಯಾನೆ ತಾನು ಹೋದಲೆಲ್ಲಾ ಮೃತ ಮರಿಯಾನೆಯನ್ನು ತನ್ನೊಂದಿಗೆ ಎಳೆದುಕೊಂಡು ಹೋಗುತ್ತಿರುವ ಮನಕಲಕುವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ ಜಾಕ್‌ನಳ್ಳಿ ಎಸ್ಟೇಟ್ ಬಳಿ ನಡೆದಿದೆ.

ಘಟನೆ ಹಿನ್ನೆಲೆ:

ಕಳೆದ ಶನಿವಾರ ಗರ್ಭಿಣಿ ಹೆಣ್ಣಾನೆ ಮರಿಯಾನೆಗೆ ಜನ್ಮ ನೀಡಿದೆ. ಆದರೆ ಹುಟ್ಟುವ ವೇಳೆ ಮರಿಯು ಸ್ಥಳದಲ್ಲೆ ಮೃತಪಟ್ಟಿದೆ. ತಾಯಿ ಆನೆ ತನ್ನ ಮರಿ ಜೀವಂತವಾಗಿದೆ ಎಂದು ತಿಳಿದು ಕಾಲಿನಿಂದ ಒದ್ದು ಬದುಕಿಸುವ ಪ್ರಯತ್ನ ಮಾಡಿದರೂ ಸಹ ಮೃತ ಮರಿ ಮೇಲೇಳದಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ.

ಜೋರು ಮಳೆ ಸುರಿಯುತ್ತಿರುವುದರ ಜೊತೆಗೆ ಸತ್ತ ಮರಿಯನ್ನು ಎಳೆದುಕೊಂಡು ಹೋಗುತ್ತಿರುವುದು ಎಂಥ ಕಲ್ಲು ಮನಸ್ಸಿನವರಿಗೂ ಕರುಳು ಚುರುಕ್ ಎನ್ನುವಂತಿದೆ ಈ ದೃಶ್ಯಾವಳಿ. ತನ್ನ ಕರುಳ ಕುಡಿ ಇನ್ನೂ ಬದುಕಿದೆ ಎಂಬ ಭ್ರಮೆಯಲ್ಲಿರುವ ಮಾತೃ ಹೃದಯ ಯಾರನ್ನೂ ಕೂಡ ಹತ್ತಿರ ಹೋಗಲು ಬಿಡುತ್ತಿಲ್ಲ. ಭಾನುವಾರವಷ್ಟೆ ಅರೇಹಳ್ಳಿ ಸಮೀಪದ ಕೆಸಗುಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮರಿಯೊಂದಿಗೆ ತಾಯಿಯಾನೆಯೂ ಸಹ ಮೃತಪಟ್ಟಿತ್ತು. ಈ ಘಟನೆ ಜನಮಾನಸದಲ್ಲಿ ಮಾಸುವ ಮುನ್ನವೇ ಮತ್ತೊಂದು ಮರಿ ಮೃತಪಟ್ಟಿರುವುದು ಪ್ರಾಣಿ ಪ್ರಿಯರಿಗೆ ಅತೀವ ನೋವನ್ನುಂಟುಮಾಡಿದೆ.

“ಕಳೆದೆರಡು ದಿನಗಳ ಹಿಂದೆ ಮೃತಪಟ್ಟ ಮರಿಯೊಂದಿಗೆ ತಾಯಿಯಾನೆ ತೆರಳುತ್ತಿರುವುದು ಬೇಸರ ತಂದಿದೆ. ಹೀಗಾಗಿ ಸಿಬ್ಬಂದಿಗಳನ್ನು ಹತ್ತಿರ ಹೋಗಲು ಬಿಡುತ್ತಿಲ್ಲ. ಮರಿ ವಾಸನೆ ಬಂದರೆ ತಾಯಿಯಾನೆ ತನ್ನಿಂತಾನೆ ಬೇರೆಯಾಗುತ್ತದೆ” ಎಂದು
ಬೇಲೂರಿನ ಆರ್‌ಎಫ್‌ಒ ಅಧಿಕಾರಿ ಯತೀಶ್ ತಿಳಿಸಿದ್ದಾರೆ.

Continue Reading

Trending

error: Content is protected !!