Connect with us

Hassan

ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಂದಲೇ ಜಾಗೃತಿ ಮೂಡಿಸಬೇಕು : ಬಿ.ಕೆ. ರವಿಕಾಂತ್

Published

on

ಹಾಸನ : ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಂದಲೇ ಜಾಗೃತಿ ಮೂಡಿಸುವ ಮೂಲಕ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್ ತಿಳಿಸಿದರು.

ನಗರದ ಸಮೀಪ ಚಿಪ್ಪಿನಕಟ್ಟೆ ನಗರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಹಾಸನ ಘಟಕ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ನಿಯಂತ್ರಣ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹಾಗೂ ಚಿಪ್ಪಿನ ಕಟ್ಟೆ ಸುತ್ತಮುತ್ತಲಿನ ನಿವಾಸಿಗಳಿಗೆ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳಿಗೆ ಕಾನೂನಿನಲ್ಲಿರುವ act 1930 1985 ರಲ್ಲಿ ಬರುವ ಕಠಿಣ ಶಿಕ್ಷೆಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಹಿಮ್ಸ್ ಕಾಲೇಜಿನ ವೈದ್ಯರು ಹಾಗೂ ಮನೋವಿಜ್ಞಾನಿಯಾದ ಡಾಕ್ಟರ್ ಹೇಮಂತರಾಜು ಮಾತನಾಡಿ, ದೇಹಕ್ಕೆ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದ್ದರು.
ಚಿಪ್ಪಿನ ಕಟ್ಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಟೇಶ್ ರವರು ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ವಿದ್ಯಾರ್ಥಿಗಳು ದೇಶದ ಆಸ್ತಿಯಾಗಿ ಭವಿಷ್ಯದಲ್ಲಿ ಯಾವುದೇ ಮಾದಕ ವಸ್ತುಗಳಿಗೆ ಬಲಿಯಾಗಬಾರದು. ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು ಎಂದು ವಿದ್ಯಾರ್ಥಿ ಜೀವನದ ಬಗ್ಗೆ ಮೆಲುಕು ಹಾಕಿದ್ರು.
ಚಿಪ್ಪಿನ ಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಅನ್ಸರ್ ಅಹಮದ್ ರವರು ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ತುಂಬಾ ಮಾದಕ ವಸ್ತುಗಳಿಗೆ ಮಾರುಹೋಗಿರುವ ಯುವಕರು ಹಾಗೂ ಪೋಷಕರಿಗೆ ನಿಯಂತ್ರಣ ಮಾಡುವುದಕ್ಕಾಗಿ ಆರಕ್ಷಕರಿಂದ ವ್ಯವಸ್ತೆ ಮಾಡಿಕೊಡಬೇಕು ಹಾಗೂ ಕಾಲೇಜಿಗೆ ಬೇಕಾಗುವ ಸವಲತ್ತುಗಳ ಬಗ್ಗೆ ವಿವರಿಸಿದ್ರುಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಗೌರವಾಧ್ಯಕ್ಷರಾದ ಎಸ್.ಎಸ್. ಪಾಷಾ ರವರು ಮಾತನಾಡಿ,
ಜೀವನದಲ್ಲಿ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಮಾದಕ ವಸ್ತುಗಳಿಗೆ ಬಲಿಯಾಗದೆ ಮುಂಬರುವ ಜೀವನದಲ್ಲಿ ವಿದ್ಯಾರ್ಥಿಗಳ ಜೀವನ ಉಜ್ವಲವಾಗಿರಲಿ ಎಂದು ಪ್ರಾಸ್ತಾವಿಕ ನುಡಿಗಳ ನಾಡಿದ್ರು.
ಇದೇ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರು ಹಾಗೂ ನಮ್ಮ ಹಾಸನ ಟಿವಿ ಮುಖ್ಯಸ್ಥರಾದ ಥೌಪಿಕ್ ಅಹಮದ್ ರವರು ಮಾತನಾಡಿ, ಜೀವನದಲ್ಲಿ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನ ಪಾಲಿಸಿದ್ದೆ ಆದರೆ ತುಂಬಾ ಉಪಕಾರಿಯಾಗುತ್ತದೆ, ನಮ್ಮ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ವಿದ್ಯಾರ್ಥಿಗಳ ಏಳಿಗೆಗಾಗಿ ಕಾಲೇಜಿಗೆ ಬೇಕಾಗುವ ಸೌಲಭ್ಯಗಳನ್ನ ಕೊಡಿಸುವುದಾಗಿ ಭರವಸೆಯನ್ನ ನೀಡಿದರು. ಮಕ್ಕಳಿಗೆ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.


ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಹೆಚ್.ಆರ್. ನಾಗೇಶ್ ನಿರೂಪಿಸಿದ್ರು. ಸೀನಿಯರ್ ಮಲ್ಲಿಕಾರ್ಜುನ್ ರವರು ವಂದನಾರ್ಪಣೆಯನ್ನು ನೆರೆವೇರಿಸಿದರು.
ಇದೆ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಶ್ರೀಮತಿ ಶೈಲ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸದಸ್ಯರುಗಳಾದ ಸೀನಿಯರ್ ರಮೇಶ್, ಸೀನಿಯರ್ ಮಲ್ಲಿಕಾರ್ಜುನ್ ಸೀನಿಯರ್, ಸೀನಿಯರ್ ಶಬ್ಬೀರ್, ಸೇರಿದಂತೆ ಕಾಲೇಜಿನ ಶಿಕ್ಷಕ ಶಿಕ್ಷಕಿಯರು, ವಿಧ್ಯಾರ್ಥಿವಿದ್ಯಾರ್ಥಿನಿಯರು, ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೊದಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಶೋಭಾ ರಾಣಿಯವರು ಪ್ರಾರ್ಥನೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶಬ್ಬೀರ್ ಅಹಮದ್ ಅವರು ಗಣ್ಯರನ್ನ ಸ್ವಾಗತಿಸಿದ್ರು.

Continue Reading
Click to comment

Leave a Reply

Your email address will not be published. Required fields are marked *

Hassan

ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

Published

on

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಸುಖ ಶಾಂತಿ ಸಿಗುವ ಸ್ಥಳವೇ ದೇವಸ್ಥಾನ.ಆ ಭಾವವೇ ದೇವರು. ಶುದ್ಧ ಮನಸ್ಸು, ಅತ್ಯುತ್ತಮ ಕಾಯಕ ಸ್ವರ್ಗ ಸೃಷ್ಟಿಸುವ ಎರಡು ಮಾರ್ಗಗಳು. ಈ ದೇವಸ್ಥಾನ ಸ್ವರ್ಗಾನುಭವ ಕಲ್ಪಿಸುವ ಶಕ್ತಿ ಸ್ಥಾನ ಎಂದು ಮಾಜಿ ಶಾಸಕ ಹೆಚ್. ಕೆ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ದೊಡ್ಡಕಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಳಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಮೌಲ್ಯಯುತ ಬದುಕು ನಮ್ಮದಾಗಿಸಿಕೊಂಡು, ಸಮಾಜದೆಡೆಯಲ್ಲಿ ಅರ್ಥಪೂರ್ಣ ಹೆಜ್ಜೆ ನಮ್ಮದಾದಲ್ಲಿ ಸುಂದರ ಜೀವನ ನಮ್ಮದಾಗುವದು. ಈ ಕಾರ್ಯಸಿದ್ದಿ ಆಂಜನೇಯ ಭಕ್ತರ ಅತೀ ದೊಡ್ಡ ಶಕ್ತಿ ದೇವ ಎನ್ನುವದಕ್ಕೆ ಇಲ್ಲಿ ಕೂಡಿ, ಸಂಭ್ರಮಿಸುತ್ತಿರುವ ಅಸಂಖ್ಯಾತ ಭಕ್ತರೇ ಸಾಕ್ಷಿಯಾಗಿದ್ದು ಇಲ್ಲಿ ಜರುಗುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿಯ ಭಕ್ತರ ಉದ್ಧರಿಸಿ ನಾಡು ದೇಶ ಮತ್ತಷ್ಟು ಸಂಪನ್ನಗೊಳಿಸಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಬಿಜೆಪಿ ಮಹಿಳಾ ಮುಖಂಡರಾದ ಪ್ರತಿಭಾ ಮಂಜುನಾಥ್ ಮಾತನಾಡಿ, ಎಲ್ಲಿ ನಿಸ್ವಾರ್ಥತೆ ಇರುತ್ತದೋ ಅಲ್ಲಿ ಶಕ್ತಿ ಇರುತ್ತದೆ. ಆ ಶಕ್ತಿಯೇ ದೇವರು.ಕವಳಿಕೆರೆ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಲೋಕಾರ್ಪಣೆಗೊಂಡಿರುವುದು ಇಲ್ಲಿಯ ಜನರ ಪರಿಶುದ್ಧ ಭಾವನೆಗಳ ಸಂಕೇತವಾಗಿದೆ.. ಈ ದೇವಸ್ಥಾನ ನಿರ್ಮಿಸಲು ಕಾರಣರಾದವರನ್ನು ಸ್ಮರಣೆ ಮಾಡಬೇಕು

ಶಾಸಕ ಸಿಮೆಂಟ್ ಮಂಜು ಪತ್ನಿ ಪ್ರತಿಭಾ ಮಂಜುನಾಥ್, ಕಾಂಗ್ರೆಸ್ ಮುಖಂಡ ಮುರಳಿಮೋಹನ್ ಸೇರಿದಂತೆ ತಾಲೂಕಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಣುಕಧರ್ಮ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಿರಿಯಣ್ಣಗೌಡ, ಸದಸ್ಯೆ ಸುಧಾ ನಾಗೇಂದ್ರ, ತೀರ್ಥೇಶ್, ಹಿರಿಯ ಮುಖಂಡ ಪಟೇಲ್ ಹೀರೇಗೌಡ, ಮತ್ತು ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Continue Reading

Hassan

ಜಾನಪದ ಎಂಬುದು ಯಾರನ್ನು ನೋಯಿಸುವುದಿಲ್ಲ: ಹೆಚ್.ಎಲ್.ಮಲ್ಲೇಶ್ ಗೌಡ

Published

on

ಹಾಸನ: ಜಾನಪದ ಎಂಬುದು ಯಾರನ್ನು ನೋಯಿಸುವುದಿಲ್ಲ. ಎಲ್ಲಾರ ಎದೆಯನ್ನು ತಟ್ಟುತ್ತದೆ. ಮುಟ್ಟಿ ಎಲ್ಲಾರಿಗೂ ರೋಮಾಂಚನ ಕೊಡುತ್ತದೆ. ಆದರೇ ನಾಗರೀಕ ಕಲೆಯು ಇದು ಎಲ್ಲಾರನ್ನು ತಟ್ಟುವುದಕ್ಕಿಂತ ಹೆಚ್ಚಾಗಿ ಎಲ್ಲಾರನ್ನು ಹರ್ಟ್ ಮಾಡುತ್ತದೆ. ಆಗೆ ಅದನ್ನೆ ತಮ್ಮ ಕಲೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ತಿಳಿಸಿದರು.

ನಗರದ ಎಂ.ಜಿ. ರಸ್ತೆ ಬಳಿ ಇರುವ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸಾಂಸ್ಕೃತಿಕ ವೇದಿಕೆ ಮತ್ತು ಐ.ಕ್ಯೂ.ಎ.ಸಿ. ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಾನಪದ ಉತ್ಸವ, ಗ್ರಾಮೀಣ ಕಲರವ ಮತ್ತು ವಾರ್ಷಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಅವರು ವಿಭಿನ್ನ ರೀತಿ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಜಾನಪದಕ್ಕೆ ವಿಶ್ವವನ್ನು ಕುಣಿಸುವ ಶಕ್ತಿ ಇದೆ. ಅದು ಈ ಜನಪದದ ಸತ್ವ. ಜಾನಪದದ ತುತ್ತ ತುದಿಯ ಸೊಗಡನ್ನು ಉಂಡು, ಇವತ್ತು ನಾಗರೀಕತೆಯ ತುತ್ತ ತುದಿಯಲ್ಲಿ ನಿಂತು ಎಲ್ಲಾವನ್ನು ಮರೆಯುತ್ತಿರುವ ಹಾಗೂ ಬರಡು ಆಗಿರುವ ಬಾರೆಯನ್ನು ಕೂಡ ನೋಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ತಲೆ ಮಾರಿಗೆ ಮರೆತು ಹೋಗಿರುವುದಿಲ್ಲ. ಆದರೇ ನಿಮ್ಮ ತಲೆ ಮಾರಿಗೆ ನೊಡುವ ಸೌಭಾಗ್ಯ ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ ಎನ್ನುವ ನೋವು ನನ್ನಲ್ಲಿದೆ. ನಮ್ಮ ತಲೆ ಮಾರಿನ ಜನ ಓದುವುದೇ ಸಂಭ್ರಮ ಎಂದುಕೊಂಡು ಅದನ್ನೆಲ್ಲಾ ಮೂಲೆ ಸೇರಿಸಿ ಬಿಟ್ಟೆವು. ನಮ್ಮಪ್ಪ, ನಮ್ಮಜ್ಜ ಏನು ಮೂಟೆ ಕಟ್ಟಿ ಬಿಟ್ಟಿ ಹೋಗಿದ್ದರೂ ಅದನ್ನು ಹೊತ್ತುಕೊಂಡು ಬಂದು ನಿಮ್ಮ ಎದುರಿಗೆ ಇಡುವ ಶಕ್ತಿ ನಮಗೆ ಇರಲಿಲ್ಲ. ಅದ್ನನ ಮಾಡಬೇಕಿತ್ತು. ಆದರೇ ಮಾಡಲಿಲ್ಲ. ಒಂದು ಕಾಲಮಾನದಲ್ಲಿ ಇರುವುದು ಅದೆಲ್ಲಾ ಬಿಟ್ಟು ನಾಗರೀಕತೆಯತ್ತ ಹೊರಡದೆ ಒಂದು ದೊಡ್ಡ ಪರಿವರ್ತನೆ ಎಂದು ಹೇಳಿ ಒಂದು ದೊಡ್ಡ ಭ್ರಮೆಯಲ್ಲಿ ನಾವುಗಳು ಇದ್ದೇವು. ಪರಿವರ್ತನೆಯ ತುತ್ತ ತುದಿಯತ್ತ ಬಂದಾಗ ಗೊತ್ತಾಗಿ ಇದರಲ್ಲಿ ಅರ್ಥ, ಶಕ್ತಿ ಹಾಗೂ ಸತ್ವ ಇಲ್ಲ ಎಂಬುದು ತಿಳಿಯಿತು. ಈ ಸ್ವಾಧ, ಶಕ್ತಿ ಎಲ್ಲಾ ಪೂರ್ವಿಕರು ಆಚರಿಸಿಕೊಂಡು ಬಂದ ಅದರಲ್ಲಿ ಇತ್ತು ಎಂದರು.

ಕಾರ್ಯಕ್ರಮದಲ್ಲಿ ಜಾನಪದ ಹಾಗೂ ಗ್ರಾಮೀಣ ಸೊಗಡನ್ನು ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸಿದ್ದರು. ಹಿಂದಿನ ದಿನಗಳಲ್ಲಿ ನಡೆಯುತ್ತಿದ್ದ ಮದುವೆಯನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿದರು. ಜೊತೆಗೆ ಗ್ರಾಮೀಣ ಕ್ರೀಡಾಕೂಟ ಎಲ್ಲಾವು ನೋಡುಗರ ಗಮನಸೆಳೆಯಿತು.

ಇದೆ ವೇಳೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಜಾನಪದ ಕಲಾವಿದ ಬಿ.ಟಿ. ಮಾನವ, ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಕೆ.ಜಿ. ಕವಿತ, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಬಿ.ಎನ್. ಮಹಂತೇಶ್, ಸರ್.ಎಂ. ವಿಶ್ವೇಶ್ವರಯ್ಯ ಸಂಘದ ಅಧ್ಯಕ್ಷ ಎಂ. ಸುನಿಲ್ ಕುಮಾರ್, ಸಿಟಿ ಕೋ ಆಪರೇಟಿವ್ ನಿರ್ದೇಶಕ ಬಾಲಸುಬ್ರಮಣ್ಯ, ನಗರಸಭೆ ಮಾಜಿ ಸದಸ್ಯ ಚಂಧ್ರಶೇಖರ್, ಸಮಾಜ ಸೇವಕ ಹೆಚ್.ಆರ್. ಪ್ರದೀಪ್ ಕುಮಾರ್, ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಅಧ್ಯಕ್ಷ ಸಚಿನ್, ವಾರ್ಷಿಕ ಸಂಚಿಕೆ ಸಂಚಾಲಕ ಬಿ.ಹೆಚ್. ರಾಮೇಗೌಡ, ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಹೆಚ್.ಎನ್. ಹರೀಶ್, ಉಪನ್ಯಾಸಕ ಮಹೇಶ್, ಇಂಗ್ಲೀಷ್ ಭಾಷೆ ಉಪನ್ಯಾಸಕ ಎಸ್. ಯೋಗೇಶ್, ಹರ್ಷಾ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಹರೀಶ್ ಸ್ವಾಗತಿಸಿದರು.

Continue Reading

Hassan

ನಾಗತವಳ್ಳಿ ಪಾರ್ಕ್ ಜಾಗ ಉಳಿಸಲು ಮುಂದುವರಿದ ಹೋರಾಟ: ಶಾಸಕ ಸ್ವರೂಪ್ ಸಾಥ್‌

Published

on

ಹಾಸನ: ನಾಗತವಳ್ಳಿ ಗ್ರಾಮದ ಸರ್ವೆ ನಂಬರ್ 54 ರಲ್ಲಿ ನ 2 ಎಕರೆ ಜಾಗವನ್ನು ಪಾರ್ಕ್ ಗಾಗಿ ಮೀಸಲಿಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲು ಇಂದು ಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಬೆಂಗಳೂರಿಗೆ ತೆರಳಿದರು. ಹೋರಾಟಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಸಾತ್ ನೀಡಿದರು.

ಗ್ರಾಮದಿಂದ ಇಂದು ಬೆಳಗ್ಗೆ ಗ್ರಾಮದ ಮುಖಂಡರು ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪಾರ್ಕ್ ಜಾಗವನ್ನು ಅಕ್ರಮವಾಗಿ ಖಾಸಗಿಯವರಿಗೆ ಕೆ.ಎ.ಐ.ಡಿ.ಬಿ ಅಧಿಕಾರಿಗಳು ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ದೇವರಾಜು ಮಾತನಾಡಿ, ಗ್ರಾಮದ ಪಾರ್ಕ್ ಜಾಗಕ್ಕಾಗಿ ಕಳೆದ 10 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೆ ಕೆ.ಎ.ಐ.ಡಿ.ಬಿ ಅಧಿಕಾರಿಗಳು ಶಾಮೀಲಾಗಿ ಖಾಸಗಿ ಪುಷ್ಪಗಿರಿ ವೇರ್ ಹೌಸ್ ಮಾಲೀಕರಿಗೆ ಮಂಜೂರು ಮಾಡಿ ಕೊಟ್ಟಿದ್ದಾರೆ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಇದೇ ವಿಚಾರವಾಗಿ ಹಾಸನದ ಜಿಲ್ಲಾಧಿಕಾರಿಗಳ ಕಚೇರಿ, ಕೆ.ಎ.ಐ.ಡಿ.ಬಿ ಅಧಿಕಾರಿಗಳ ಕಚೇರಿ, ಹಾಗೂ ಪಾರ್ಕಿಗೆ ಮೀಸಲಿಟ್ಟಿದ ಸ್ಥಳ ಸೇರಿದಂತೆ ವಿವಿಧಡೆ ಪ್ರತಿಭಟನೆಗಳು ನಡೆದರು ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ. ಬಿ ಪಾಟೀಲ್ ರವರು ಪಾರ್ಕ್ ಜಾಗವನ್ನು ಪಾರ್ಕಿಗಾಗಿಯೇ ಮೀಸಲಿರಿಸುವಂತೆ ಆದೇಶ ಹೊರಡಿಸಿದರು ಈವರೆಗೆ ಅಧಿಕಾರಿಗಳು ಜಾಗವನ್ನು ತೆರವುಗೊಳಿಸಲು ಮುಂದಾಗಿಲ್ಲ ಎಂದರು.

ಗ್ರಾಮದ ಸುನಿಲ್ ಮಾತನಾಡಿ, 2 ಎಕರೆ ಪಾರ್ಕ್ ಜಾಗ ಯಾರೊಬ್ಬರ ಸ್ವತ್ತಲ್ಲ. ಗ್ರಾಮದ ಜನರ ಅನುಕೂಲಕ್ಕಾಗಿ ಪಾರ್ಕ್ ನಿರ್ಮಾಣ ಮಾಡಲು ಮೀಸಲಿಟ್ಟಿರುವ ಜಾಗ ಇದಾಗಿದೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಇದೀಗ ಎರಡು ಎಕರೆ ಬೆಲೆಬಾಳುವ ಜಾಗ ಖಾಸಗಿಯವರ ಪಾಲಾಗುತ್ತಿದೆ ಇದನ್ನು ಸರ್ಕಾರ ತಡೆಯಬೇಕಿದೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು, ಮಾಜಿ ಸಚಿವರಾದ ಎಚ್ ಡಿ ರೇವಣ್ಣನವರು. ಶಾಸಕರಾದ ಸ್ವರೂಪ ಪ್ರಕಾಶ್ ಸೇರಿದಂತೆ ಹಲವರು ಜಾಗ ಉಳಿಸಲು ಮನವಿ ಮಾಡಿದ ಮೇರೆಗೆ ಇದೀಗ ಸಚಿವರಾದ ಎಂಬಿ ಪಾಟೀಲ್ ರವರು ಜಾಗವನ್ನು ಪಾರ್ಕಿಗೆ ಮೀಸಲಿಡಲು ಆದೇಶಿಸಿದ್ದಾರೆ ಅದರಂತೆ ಕೆ.ಎ.ಐ.ಡಿ.ಬಿ ಅಧಿಕಾರಿಗಳು ಜಾಗವನ್ನು ತೆರವುಗೊಳಿಸುವ ಬದಲಾಗಿ ಖಾಸಗಿಯವರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ರಾಜ್ಯಮಟ್ಟದ ಹೋರಾಟಕ್ಕೆ ಗ್ರಾಮಸ್ಥರು ಸಜ್ಜಾಗಿದ್ದು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಹಾಗೂ ಕೆ.ಎ.ಐ.ಡಿ.ಬಿ ಕೇಂದ್ರ ಕಚೇರಿ ಎದುರು ಗ್ರಾಮಸ್ಥರ ಸಮ್ಮುಖದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಹಾಗೂ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಜಾಗವನ್ನು ಉಳಿಸುವ ಕೆಲಸ ಮಾಡಬೇಕಿದೆ ಇಲ್ಲವಾದರೆ ಗ್ರಾಮಸ್ಥರೆಲ್ಲರೂ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದು ಖಚಿತ ಎಂದು ಎಚ್ಚರಿಸಿದರು.

ಪ್ರತಿಭಟನೆ ವೇಳೆ ನಾಗತವಳ್ಳಿ ಗ್ರಾಮಸ್ಥರಾದ ಶರತ್, ಶೇಖರ್, ಪುಟ್ಟರಾಮು, ರಂಗಣಿ, ಸರೋಜಾ, ಕೋಮಲ, ರೇಣುಕಾ, ಗವಿ, ಆನಂದ್, ಶಿವಕುಮಾರ್, ಪುಟ್ಟರಾಜು, ಕೆಂಪೇಗೌಡ, ಕಿರಣ್, ರವಿ, ಇತರರು ಉಪಸ್ಥಿತರಿದ್ದರು

Continue Reading

Trending

error: Content is protected !!