Connect with us

Hassan

ಹಾಸನ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆಯಲ್ಲಿ ಪ್ರಜ್ವಲ್ ಹಕ್ಕು ಚಲಾವಣೆ

Published

on

ಹಾಸನ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆಯಲ್ಲಿ ಪ್ರಜ್ವಲ್ ಹಕ್ಕು ಚಲಾವಣೆ

ಹರದನಹಳ್ಳಿಯಲ್ಲಿ‌ ಪೂಜೆ ಸಲ್ಲಿಸಿ ಬಂದು ಮತ ಚಲಾಯಿಸಿದ ಪ್ರಜ್ವಲ್ ರೇವಣ್ಣ

ಮತಗಟ್ಟೆ ಸಂಖ್ಯೆ 251 ರಲ್ಲಿ ಹಕ್ಕು ಚಲಾವಣೆ

Continue Reading
Click to comment

Leave a Reply

Your email address will not be published. Required fields are marked *

Hassan

ನನ್ನ ಪತ್ನಿ ಕೈಗೆ ವಿಷಪೂರಿತ ಪೌಡರ್ ಹಾಕಿ ಸಾಯಿಸುವ ಯತ್ನ ತನಿಖೆ ನಡೆಸಿ ನ್ಯಾಯಕೊಡಿಸಿ: ಪತಿ ಎ.ಎಸ್. ಮಹೇಂದರ್ ಒತ್ತಾಯ

Published

on

ಹಾಸನ: ಕಳೆದ ತಿಂಗಳು ನನ್ನ ಪತ್ನಿ ಜಯಕಿರಣ್ ಕೈಗೆ ವಿಷಪೂರಿತ ಕೆಮಿಕಲ್ ಪೌಡರ್ ಹಾಕಿ ಸಾಯಿಸುವ ಯತ್ನ ಮಾಡಲಾಗಿದ್ದು, ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ನ್ಯಾಯಕೊಡಿಸಬೇಕೆಂದು ಈಕೆಯ ಪತಿ ಎ.ಎಸ್. ಮಹೇಂದರ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ನಾನು ಮತ್ತು ನನ್ನ ಪತ್ನಿ ಜಯಕಿರಣ್ ಇಬ್ಬರೂ ಕೂಡ ವಿಶೇಷ ಚೇತನರಾಗಿದ್ದು, ನನಗೆ ಪೂರ್ತಿ ಕಣ್ಣು ಕಾಣಿಸುವುದಿಲ್ಲ. ನನ್ನ ಪತ್ನಿಗೆ ಆಗಿರುವ ಅನ್ಯಾಯದ ವಿರುದ್ಧ 2019ನೇ ಇಸವಿಯಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ದೀಲಿಪ್ ಎಂಬುವರು ನನ್ನ ಪತ್ನಿಯ ವಿರುದ್ಧ ಎತ್ತಿಕಟ್ಟಿ ಗಲಾಟೆ ಮಾಡಿಸಲು ಎರಡು ಸುಳ್ಳು ಕೇಸು ಹಾಕಿಸಲಾಗಿದ್ದು, ಈಗಾಗಲೇ ನ್ಯಾಯಾಲಯದಲ್ಲಿ ಸ್ಟಾಪ್ ಗೊಂಡಿದೆ.

ಸುಮಾರು 11 ಪ್ರಕರಣಗಳಿಗೆ ಕೋರ್ಟ್ ಮೆಟ್ಟಿಲನನ್ನು ಹತ್ತಿಸಿದ್ದಾರೆ ಎಂದು ದೂರಿದರು. ಇದಕ್ಕೆಲ್ಲಾ ಕಳೆದ 26 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ಸಂಬಂಧಪಟ್ಟ ಅಧಿಕಾರಿಗಳೆ ಒಟ್ಟಾಗಿ ಸೇರಿಕೊಂಡು ಕಛೇರಿ ಒಳಗೊಂಡಂತೆ ಇಲಾಖೆಯ ಪ್ರತಿ ಯೋಜನೆಗಳ ಸಿಬ್ಬಂಧಿಗಳ ಆರ್ಥಿಕತೆ ಇತರೆ ಮೇಲೆ ನಿಯಂತ್ರಣ ಹೊಂದಿರುತ್ತಾರೆ ಎಂದು ದೂರಿದರು. ಅಧಿಕಾರಿಗಳ ವಿರುದ್ಧ ಸೂಕ್ತ ದಾಖಲೆ ಸಲ್ಲಿಸಿ ನ್ಯಾಯದ ಪರ ಹೋರಾಟ ಮಾಡುತ್ತಿರುವುದರಿಂದ ನನ್ನ ಮೇಲೆ ಹಾಗೂ ನನ್ನ ಪತ್ನಿ ಮೇಲೆ ಹಲವಾರು ಸಂಚುಗಳನ್ನು ರೂಪಿಸಿದ್ದಾರೆ.

ಗಲಾಟೆ ಮಾಡಿಸಿ ಎರಡು ಸುಳ್ಳು ಕೇಸು ಹಾಕಿಸಿದ್ದಾರೆ ಎಂದರು. ಕಳೆದ ತಿಂಗಳು 31 ರ ಬೆಳಿಗ್ಗೆ ನಾನು ಮತ್ತು ನನ್ನ ಪತ್ನಿ ಜೊತೆ ಮೆಟ್ಟಿಲು ಹತ್ತುವಾಗ ಕೈಗೆ ಏನು ಬಿಸಿಯಾಗಿ ಸಲ್ಪ ಸಮಯದಲ್ಲಿಯೇ ಪತ್ನಿಯ ಕೈ ಉರಿಯಲು ಆರಂಭಿಸಿದೆ. ಚರ್ಮ ಕಿತ್ತುಕೊಂಡು ಹೋಯಿತು. ಉರಿ ಹೆಚ್ಚಾದಗ ಕ್ಲಿನಿಕ್ ಗೆ ಕರೆದುಕೊಂಡು ಹೋಗಲಾಯಿತು. ಇದಾದ ನಂತರ ಆಯುರ್ವೇದ್ ವೈದ್ಯರ ಬಳಿ ಹೋದಾಗ ಆಯಿಟ್ ಮೆಂಟ್ ಹಾಗೂ ಮಾತ್ರೆ ನೀಡಿ ಕಳುಹಿಸಿದರು. ಈ ಘಟನೆ ಬಗ್ಗೆ ದೂರು ನೀಡಲಾಗಿದ್ದು, ಈ ರೀತಿ ನಮ್ಮ ಮೇಲೆ ಅಟೇಕ್ ಮಾಡುವ ಬದಲು ಕೋರ್ಟಿನಲ್ಲಿ ಹೋರಾಟ ನಡೆಸಿ. ವರತು ಈರೀತಿ ಹೋರಾಟ ಮಾಡಬೇಡಿ. ಕೂಡಲೇ ಎಫ್.ಐ.ಆರ್. ಮಾಡಿ ತನಿಖೆ ಕೈಗೊಂಡು ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದರು.

ಕೆ.ಆರ್.ಎಸ್. ಪಕ್ಷದ ಮುಖಂಡ ವಿ. ರಮೇಶ್ ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ಲೈವ್ ಮಾಡಲಾಗಿದ್ದು, ಯಡಿಯೂರು ರಸ್ತೆಯಲ್ಲಿ ಹೋದ ವೇಳೆ ಅಂಗನವಾಡಿ ವಿತರಣೆಯ ಫುಡ್ ಪ್ಯಾಕೆಟ್ ಗಳೆಲ್ಲಾವನ್ನು ರಸ್ತೆ ಮೇಲೆ ಬಿಸಾಡಿದ್ದರು. ಈ ವಿಚಾರವಾಗಿ ದೂರನ್ನು ನೀಡಲಾಗಿತ್ತು. ಅಧಿಕಾರಿಗಳು ತನಿಖೆ ಮಾಡಿದ್ದು, ಕಂಪನಿಯಿಂದ ಈತರ ಫುಡ್ ಬಂದಿದೆ. ಫುಡ್ ನಮ್ಮದೆಯಲ್ಲ ಎಂದು ಹೇಳಿದ್ದಾರೆ. ಎ.ಎಸ್. ಮಹೇಂದರ್ ಪತ್ನಿ ಮೇಲೆ ಕೆಮಿಕಲ್ ಅಟೆಕ್ ಮಾಡಲಾಗಿದೆ ಎಂದು ನಮ್ಮ ಬಳಿ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ದೂರನ್ನೆ ತೆಗೆದುಕೊಳ್ಳುತ್ತಿಲ್ಲ. ಇವರಿಬ್ಬರಿಗೂ ಕಣ್ಣು ಕಾಣಿಸುವುದಿಲ್ಲ. ಈ ವೇಳೆ ಮೂರು ಬಾರಿ ಸಾಯಿಸಲು ಮುಂದಾಗಿದ್ದಾರೆ. ಕೇಸು ದಾಖಲಿಸುವಲ್ಲಿ ಪೊಲೀಸರು ಹಿಂದೆಟು ಹಾಕಿ ರಾತ್ರಿ ದಾಖಲಿಸುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಆರ್.ಎಸ್. ಪಕ್ಷದ ಮುಖಂಡ ವಿ. ರಮೇಶ್ ಬೂವನಹಳ್ಳಿ, ಪ್ರಧಾನ ಕಾರ್ಯದರ್ಶಿ ಮಧು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್, ನಿರಂಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Hassan

ಎನ್.ಟಿ.ಸಿ ಕಾರ್ಮಿಕರ ಹೋರಾಟ ಸ್ಥಳಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಭೇಟಿ : ಕಾರ್ಮಿಕರ ಪರ ನಿಂತ ಶಾಸಕರು

Published

on

ಹಾಸನ: ಬಾಕಿ ಉಳಿಸಿಕೊಂಡಿರುವ ವೇತನ ನೀಡುವಂತೆ ನಗರದ ಕೈಗಾರಿಕಾ ಪ್ರದೇಶದಲ್ಲಿನ ನ್ಯೂ ಮಿನರ್ವ ಮಿಲ್ ಎದುರು ಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಇಂದು ಶಾಸಕ ಸ್ವರೂಪ್ ಪ್ರಕಾಶ್ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು.

ಕಳೆದ ಏಳು ತಿಂಗಳಿನಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ ವೇತನ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಹೋರಾಟ ನಡೆಯುತ್ತಿದ್ದು ಇಂದು ಸ್ಥಳಕ್ಕೆ ಬಂದ ವ್ಯವಸ್ಥಾಪಕರನ್ನು ಕಾರ್ಮಿಕರು ತೀರ್ವ ತರಾಟೆಗೆ ತೆಗೆದುಕೊಂಡರು.

ಪ್ರಮುಖವಾಗಿ ಈಗಾಗಲೇ ಬಾಕಿ ಉಳಿಸಿಕೊಂಡಿರುವ ವೇತನವನ್ನು ಅತೀ ಶೀಘ್ರವಾಗಿ ನೀಡಬೇಕು, ಜೊತೆಗೆ ನಿಂತು ಹೋಗಿರುವ ಕಂಪೆನಿಯಲ್ಲಿನ ಸಾಮಗ್ರಿಗಳನ್ನು ರಕ್ಷಿಸುವ ಸಲುವಾಗಿ ಕಾರ್ಮಿಕರನ್ನು ಕವಾಲುಗಾರರನ್ನಾಗಿ ನೇಮಕ ಮಾಡಿಕೊಂಡಿದ್ದು ಅವರಿಗೂ ವೇತನ ನೀಡುತ್ತಾರೆ ಎಂಬ ನಂಬಿಕೆ ಇಲ್ಲ ಹಾಗಾಗಿ ಎಲ್ಲಾರಿಗೂ ವೇತನ ನೀಡಲು ಗಡುವು ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಕಾರ್ಮಿಕರ ನೀತಿ ನಿಯಮಗಳನ್ನು ಆಡಳಿತಮಂಡಳಿ ಗಾಳಿಗೆ ತೂರಿದೆ, ವ್ಯವಸ್ಥಾಪಕರು ಕಾರ್ಮಿಕರನ್ನು ಒಳಗೆ ಬಿಡದೆ ಹೋರಾಟ ಹತ್ತಿಕ್ಕಲು ಹುನ್ನಾರ ಮಾಡುತ್ತಿದ್ದಾರೆ ಅಲ್ಲದೆ ವೇತನದ ಬಗ್ಗೆ ವ್ಯವಸ್ಥಾಪಕರಲ್ಲಿ ಕೇಳಿದರೆ ಮೇಲಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಹುಸಿ ಭರವಸೆ ನೀಡುತ್ತಾ ಬಂದಿದ್ದಾರೆ ಆದುದರಿಂದ ವೇತನ ನೀಡುವವರೆಗೂ ನಮ್ಮ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಬಳಿಕ ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಕಾರ್ಮಿಕರ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಕೆಲಸ ಮಾಡಬೇಕು. ಈಗಾಗಲೇ ಕೈಗಾರಿಕಾ ಪ್ರದೇಶಕ್ಕಾಗಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಕಳೆದುಕೊಂಡಿರುವ ರೈತ ಕುಟುಂಬಗಳು ಇಂದು ಬೀದಿ ಪಾಲಾಗಿವೆ, ಅವರಿಗೆ ಉದ್ಯೋಗ ನೀಡಿ ಅವರಿಗೆ ಸಹಕಾರ ನೀಡಬೇಕಿರುವುದು ಕಾರ್ಖಾನೆಗಳ ಜವಾಬ್ದಾರಿ ಆದುದರಿಂದ ಸಂಸ್ಥೆ ಕೂಡಲೇ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಕೆಲಸ ಮಾಡಬೇಕಿದೆ ಎಂದರು.

ತಾನು ಕೂಡ ಶಾಸಕನಾಗಿ ಸಂಭಂದಿಸಿದ ಇಲಾಖಾ ಸಚಿವರ ಬಳಿ ನಿಯೋಗ ತೆರಳಿ ಇಲ್ಲಿನ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತಂದು ಶೀಘ್ರವಾಗಿ ಬಗೆಹರಿಸುವ ಕೆಲಸ ಮಾಡಲಾಗುವುದು, ಸರ್ಕಾರದ ಅಂಗ ಸಂಸ್ಥೆಯಾಗಿರುವ ಎನ್.ಟಿ.ಸಿ ಕಾರ್ಖಾನೆಯಿಂದ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು

Continue Reading

Hassan

ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

Published

on

ಹಾಸನ: ಕಾಣೆಯಾಗಿದ್ದ ಮಹಿಳೆ, ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಶಿವಯ್ಯ ನಕೊಪ್ಪಲು ಗ್ರಾಮದ ಬಳಿ ನಡೆದಿದೆ.

ಪವಿತ್ರ (35) ಆತ್ಮಹತ್ಯೆ ಮಾಡಿಕೊಂಡಿ ರುವ ಮಹಿಳೆ. ಶಿವಯ್ಯನ ಕೊಪ್ಪಲು ಗ್ರಾಮದ ಮೋಹನ್‌ಕುಮಾರ್ ಎಂಬುವರು 17 ವರ್ಷಗಳ ಹಿಂದೆ ಆಲೂರು ತಾಲೂಕು, ನಲ್ಲೂರು ಗ್ರಾಮದ ಪವಿತ್ರ ಎಂಬುವವರನ್ನು ಮದುವೆಯಾಗಿದ್ದರು.

ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜೂ.11 ರಂದು ಸಂಜೆ ಮೋಹನ್ ಕುಮಾರ್ ಹಾಲು ಅಳೆ
ಸಲು ಡೈರಿಗೆ ಹೋಗಿದ್ದರು.

ಪವಿತ್ರ ಮನೆಯಲ್ಲಿಯೇ ಇದ್ದರು. ಸಂಜೆ 6.30 ರ ಸುಮಾರಿಗೆ ಮೋಹನ್‌ ಕುಮಾರ್ ಮನೆಗೆ ಬಂದು ನೋಡಿದಾಗ ಪವಿತ್ರ ಕಾಣಲಿಲ್ಲ. ಎಲ್ಲೋ ಹೋಗಿರಬಹುದೆಂದು ಪತಿ ಸಮ್ಮನಿದ್ದರು. ಆದರೆ ರಾತ್ರಿಯಾದರೂ ವಾಪಸ್ ಮನೆಗೆ ಬಾರದ ಕಾರಣ, ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಲಿಲ್ಲ.

ಕಾಣೆಯಾಗಿರುವ ತಮ್ಮ ಪತ್ನಿಯನ್ನು ಹುಡುಕಿ ಕೊಡಬೇಕೆಂದು ಮೋಹನ್ ಕುಮಾರ್ ನೀಡಿದ ದೂರಿನ ಮೇರೆಗೆ ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಕುಟುಂಬದವರೂ ಎಲ್ಲೆಡೆ ಹುಡುಕಾಡಿದ್ದರೂ, ಪವಿತ್ರ ಸಿಕ್ಕಿರಲಿಲ್ಲ. ಇದೀಗ ಗ್ರಾಮದ ಸಮೀಪವೇ ಮರವೊಂದಕ್ಕೆ ಪವಿತ್ರ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

ಸಾಲಬಾಧೆ ಹಾಗೂ ಕೌಟುಂಬಿಕ ಕಲಹದಿಂದ ಪವಿತ್ರ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ಶಾಂತಿಗ್ರಾಮ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Continue Reading

Trending

error: Content is protected !!