Connect with us

Hassan

ಹಣ, ಸಂಪತ್ತು ಎಲ್ಲಾವನ್ನು ಕದಿಯಬಹುದು, ಜ್ಞಾನವನ್ನು ಕದಿಯಲು ಸಾಧ್ಯವಿಲ್ಲ: ಹೆಚ್.ಪಿ. ಮೋಹನ್

Published

on

ಹಾಸನ: ಮನುಷ್ಯ ಸಂಪಾದಿಸುವ ಹಣ ಮತ್ತು ಆಸ್ತಿಯೆಲ್ಲಾವನ್ನು ಕದಿಯಬಹುದು ಆದರೇ ಮೆದುಳಿನಲ್ಲಿ ಬಂದಿರುವ ಜ್ಞಾನವನ್ನು ಯಾರಿಂದಲೂ ದೋಚಿಕೊಳ್ಳಲು ಸಾಧ್ಯವಿಲ್ಲ ಎಂದು ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷರು ಹೆಮ್ಮಿಗೆ ಮೋಹನ್ ತಿಳಿಸಿದರು.

ನಗರದ ಅರಳೇಪೇಟೆ ರಸ್ತೆ, ಉತ್ತರ ಬಡಾವಣೆ ಶಾಲೆ ಹಿಂಬಾಗ ಇರುವ ನ್ಯಾಷನಲ್ ಶಾಲೆಯಲ್ಲಿ ಶನಿವಾರದಂದು ಹೆಲ್ಪೀಂಗ್ ಹ್ಯಾಂಡ್ಸ್ ಫೋರಂ ವತಿಯಿಂದ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ಪಡೆದರೇ ಮಾತ್ರ ಉತ್ತಮ ಜೀವನ ಸಾಧ್ಯ. ಇಲ್ಲವಾದರೇ ಈ ಸಮಾಜದಲ್ಲಿ ಬದುಕುವುದು ಕಷ್ಟವಾಗುತ್ತದೆ. ನಿಜವಾದ ಶಿಕ್ಷಣ ಎಂದರೇ ಹೊರ ಪ್ರಪಂಚದಲ್ಲಿ ನಡೆಯುವಂತದ್ದು ಆಗಿದೆ. ಥಾಮಸ್ ಎಡಿಸನ್ ಬಗ್ಗೆ ಕೇಳಲಾಗಿದ್ದು, ರಾತ್ರಿ ಹೊತ್ತು ಬೆಳಕು ಕೊಟ್ಟ ವಿಶ್ವದ ವಿಜ್ಞಾನಿ. ಸಾವಿರ ಸಲ ಪ್ರಯತ್ನಪಟ್ಟು ಫೇಲಾಗುತ್ತರೆ. ಒಂದು ಸಾವಿರದ ಒಂದನೆ ಪ್ರಯತ್ನದಲ್ಲಿ ಯಶಸ್ಸು ಕಂಡರು. ಒಂದು ಸಾಧನೆ ಮಾಡಬೇಕಾದರೇ ಸತತ ಪ್ರಯತ್ನ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಪ್ರಾಪಂಚಿಕ ಶಿಕ್ಷಣ ಬೇಕು. ಪುಸ್ತಕದಿಂದ ಪರೀಕ್ಷೆಯನ್ನು ಬರೆದು ಜ್ಞಾನದಿಂದ ಬರೆಯಬೇಕು ಎಂದರು. ಹಣ, ಸಂಪತ್ತು ಎಲ್ಲಾವನ್ನು ಕದಿಯಬಹುದು ಆದರೇ ಮೆದುಳಿನಲ್ಲಿ ಜ್ಞಾನವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಜ್ಞಾನ ಇದ್ವರಿಗೆ ಹೆಚ್ಚಿನ ಗೌರವ ಸಿಗಲಿದೆ ಎಂದು ಹೇಳಿದರು.

ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕರಾದ ಎಸ್.ಎಸ್. ಪಾಷಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಗರದ ನ್ಯಾಷನಲ್ ಹೈಸ್ಕೂಲ್ ನಲ್ಲಿ ಹಾಸನ ಹೆಲ್ಪೀಂಗ್ ಹ್ಯಾಂಡ್ಸ್ ಫೋರಂ ವತಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಪರೀಕ್ಷೆಗಳನ್ನ ಧೈರ್ಯವಾಗಿ ಎದುರಿಸಲು ಕಠಿಣ ಅಭ್ಯಾಸ ಮತ್ತು ಪರಿಶ್ರಮದಿಂದ ಸಾಧ್ಯ ಮತ್ತು ವಿಧ್ಯಾರ್ಥಿ ಜೀವನದಲ್ಲಿ ಕನ್ನಡ ದಿನ ಪತ್ರಿಕೆಗಳನ್ನ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ೧೦ ಮತ್ತು ೧೨ನೇ ತರಗತಿಯ ನಂತರ ಹಲವಾರು ಬೇರೆ ಬೇರೆ ಕೋರ್ಸ್‌ಗಳಿದ್ದು ಓದುವುದರಲ್ಲಿ ಆಸಕ್ತಿ ಹೊಂದಿ ಜೀವನದಲ್ಲಿ ಗುರಿ ತಲುಪುಬೇಕು, ವಾಹನ ಚಾಲನೇಯನ್ನು ಲೈಸೆನ್ಸ್ ಇಲ್ಲದ ಅಪ್ರಾಪ್ತರು ಕಾನೂನು ಉಲ್ಲಂಘಿಸಿ ವಾಹನ ಚಾಲನೆ ಮಾಡಬಾರದು, ಆಗೇ ವೀಲಿಂಗ್ ಮಾಡಬಾರದು ಎಂದರು.

ಕಾರ್ಯಕ್ರಮದಲ್ಲಿ ವಕೀಲರಾದ ಜಮೀರ್ ಅಹಮದ್ ಅವರನ್ನು ಇದೆ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಕನ್ನಡ ದಿನ ಪತ್ರಿಕೆಯನ್ನು ಇದೆ ವೇಳೆ ಮಕ್ಕಳಿಗೆ ವಿತರಣೆ ಮಾಡಿದರು.

ಇದೆ ಸಂದರ್ಭದಲ್ಲಿ ಹಾಸನ ಜಿಲ್ಲಾ ಹೆಲ್ಪಿಂಗ್ ಹ್ಯಾಂಡ್ಸ್ ಫೋರಂನ ಅಧ್ಯಕ್ಷರು, ಆಡಿ. ಫರ್ಹಾನ್, ಪ್ರಧಾನ ಕಾರ್ಯದರ್ಶಿ ಆತಿಖುರ್ ರಹಮಾನ್ ಎನ್.ಎಂ. ಉಪಾಧ್ಯಕ್ಷ ಅಬ್ದುಲ್ ಬಷೀರ್, ಆಡಿ. ಸೈಯದ್ ನಾಹಿದ್, ನ್ಯಾಷನಲ್ ಸ್ಕೂಲ್ ನ ಕಾರ್ಯದರ್ಶಿ ಉಮರ್ ಫಾರೂಕ್. ಮುಖ್ಯ ಶಿಕ್ಷಕ ಇಕ್ಬಾಲ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹಾಸನ ಜಿಲ್ಲೆಯ ನಾಲ್ಕು ತಾಲ್ಲೂಕಿನ ಎಲ್ಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

Published

on

ಹಾಸನ : ಹಾಸನ ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅಬ್ಬರ

ಹಾಸನ ಜಿಲ್ಲೆಯ ನಾಲ್ಕು ತಾಲ್ಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲ್ಲೂಕಿನ ಎಲ್ಲಾ ಕಾಲೇಜುಗಳಿಗೆ ರಜೆ ಘೋಷಣೆ

ಡಿಡಿಪಿಯು ಮಹಾಲಿಂಗಯ್ಯ ಆದೇಶ

ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ಉಳಿದ ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆಯಾದರೆ ರಜೆ ನೀಡುವ ಬಗ್ಗೆ ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಸೂಚನೆ

ಡಿಸಿ ಅನುಮತಿ ಪಡೆದು ರಜೆ ಘೋಷಣೆ ಮಾಡಿದ ಡಿಡಿಪಿಯು

Continue Reading

Hassan

ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

Published

on

ಹಾಸನ : ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

ರಾಜೇಶ್ (9) ಸಾವನ್ನಪ್ಪಿದ ಬಾಲಕ

ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ಮಾಡಾಳು ಗ್ರಾಮದಲ್ಲಿ ಘಟನೆ

ಗ್ರಾಮದ ಗೌರಮ್ಮ-ನಾಗರಾಜ ದಂಪತಿ ಪುತ್ರ ರಾಜೇಶ್

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ರಾಜೇಶ್

ನಾಲ್ಕು ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್

ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್

ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಹಿಮ್ಸ್‌ಗೆ ದಾಖಲಾಗಿದ್ದ ರಾಜೇಶ್

ಚಿಕಿತ್ಸೆ ಫಲಕಾರಿಯಾಗದೆ ಇಂದು ರಾಜೇಶ್ ಸಾವು

Continue Reading

Hassan

2 ತಿಂಗಳ ಮಗುವಿಗೆ ಅನಾರೋಗ್ಯ ಬೇಸೆತ್ತ ಅಪ್ಪ ಆತ್ಮಹತ್ಯೆಗೆ ಯತ್ನ

Published

on

ಹಾಸನ: ಮಗುವಿನ ಆರೋಗ್ಯವು ಸುಧಾರಿಸದೇ ದಿನೆ ದಿನೆ ಹೆಚ್ಚಾದ ಹಿನ್ನಲೆಯಲ್ಲಿ ಮನಸ್ಸಿಗೆ ನೋವುಂಟು ಮಾಡಿದ ಹಿನ್ನಲೆಯಲ್ಲಿ ಏನು ಮಾಡುವುದು ಎಂಬುದು ತೋಚದೇ ಹಾಸನ ಜಿಲ್ಲಾ ಸರಕಾರಿ ಆಸ್ಪತ್ರೆ ಕಟ್ಟಡದ ಮೇಲೆ ಹೋಗಿ ತುದಿಯಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ಕೊನೆಗೆ ಆಸ್ಪತ್ರೆ ಸಿಬ್ಬಂದಿಗಳು ಆತನ ಮನವೊಲಿಸುವಲ್ಲಿ ಯಶಸ್ವಿಯಾಗಿ ಬದುಕಿಸಿದ ಘಟನೆ ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಬೇಲೂರು ತಾಲ್ಲೂಕಿನ ಹಳೆಬೀಡು ಸಮೀಪದ ಬಸವರಾಯನಪುರ ಗ್ರಾಮದ ಗಂಗಸ್ವಾಮಿ ಎಂಬುವರ ಎರಡು ತಿಂಗಳ ಮಗುವಿನ ಅನಾರೋಗ್ಯವು ಹೆಚ್ಚಾಗುತ್ತಿರುವ ಬಗ್ಗೆ ತಿಳಿದು ಬೇಸರದಿಂದ ಆತ್ಮಹತ್ಯೆ ಯತ್ನಿಸಿರುವುದಾಗಿ ಹೇಳಲಾಗಿದೆ. ಮಗುವಿನ ಅನಾರೋಗ್ಯದಿಂದ ತಂದೆ ಮನನೊಂದಿದ್ದು, ಹಾಸನದ ಜಿಲ್ಲಾ ಹಿಮ್ಸ್ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ಮೇಲೇರಿ ಸಾಯುವ ಹೈಡ್ರಾಮ ಮಾಡಲಾಗಿದೆ. ಕಟ್ಟಡದ ಐದನೇ ಮಹಡಿಯ ತುದಿಯಲ್ಲಿ ನಿಂತು ಆತ್ಮಹತ್ಯೆ ಬೆದರಿಕೆ ಹೊಡ್ಡಿದ್ದು,

ಮಗುವಿನ ಅರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಈ ಆತ್ಮಹತ್ಯೆ ಯತ್ನ ಮಾಡಲಾಗಿದೆ ಎನ್ನಲಾಗಿದೆ. ಆಸ್ಪತ್ರೆ ಸಿಬ್ಬಂದಿಯ ಸಮಯ ಪ್ರಜ್ಞೆ ಯಿಂದ ಅನಾಹುತ ತಪ್ಪಿದಂತಾಗಿದೆ. ಗಂಗಸ್ವಾಮಿಯನ್ನ ಆಸ್ಪತ್ರೆ ಕಟ್ಟಡದಿಂದ ಕೆಳಗಿಳಿಸಿ ನಂತರ ಪೊಲಿಸ್ ಠಾಣೆಗೆ ಆಸ್ಪತ್ರೆ ಸಿಬ್ಬಂದಿಗಳು ಕರೆದುಕೊಂಡು ಹೋಗಿದ್ದಾರೆ. ಈ ದೃಶ್ಯವನ್ನು ರಸ್ತೆಯಲ್ಲಿ ಸಾರ್ವಜನಿಕರು ನೋಡಿದ್ದು, ವಿಡಿಯೋ ಸೆರೆ ಹಿಡಿದಿದ್ದಾರೆ.

Continue Reading

Trending

error: Content is protected !!