Chamarajanagar
ಕೇಂದ್ರ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಬಜೆಟ್ ಮಂಡಿಸಿದೆ: ಭಾಗ್ಯರಾಜ್
ಚಾಮರಾಜನಗರ: ಕೇಂದ್ರ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಬಜೆಟ್ ಮಂಡಿಸಿದೆ. ರೈತರ ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಇದಾಗಿದೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಬೇಸರ ವ್ಯಕ್ತಪಡಿಸಿದ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತ ಬೆಳೆದ ಬೆಳೆಗಳಿಗೆ ಎಂಎಸ್‌ಪಿ ಖಾತ್ರಿ ಕಾಯ್ದೆ, ಎಮ್ ಎಸ್ ಸ್ವಾಮಿನಾಥನ್ ವರದಿ ಜಾರಿಯ ಬಗ್ಗೆ ಕ್ರಮ ಕೈಗೊಂಡಿಲ್ಲ.
ರೈತರ ಸಾಲ ಮನ್ನದ ಪ್ರಸ್ತಾಪವಿಲ್ಲ. ಕೃಷಿ ಸಾಲದ ನೀತಿ ರೈತನ ಹೊಲದಲ್ಲಿನ ಕಬ್ಬಿನ ದರದ ಬಗೆ ಪ್ರಸ್ತಾಪವಿಲ್ಲ ಎಂದು ಹೇಳಿದರು.
ರೈತರ ಬೆಳೆ ವಿಮೆ ನೀತಿಯು ವೈಯಕ್ತಿಕ ವಿಮೆ ರೀತಿ ಜಾರಿಗೆ ತರಬೇಕಾಗಿತ್ತು. ರೈತರ ಕೃಷಿ ಉತ್ಪನ್ನಗಳನ್ನು ವರ್ಷಪೂರ್ತಿ ಖರೀದಿ ಕೇಂದ್ರಗಳ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ. ಎಲ್ಲಾ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಬೆಲೆಕುಸಿತವಾದಾಗ ಖರೀದಿ ಮಾಡುವ ಯೋಜನೆಯನ್ನು ಪ್ರಕಟಣೆ ಮಾಡಿಲ್ಲ. ಕೇವಲ ತೆಂಗು, ಗೋಡಂಬಿ, ಶ್ರೀಗಂಧ ಬೆಳೆಗೆ ಮಾತ್ರ ವಿಶೇಷ ಗಮನಹರಿಸಿ ರೈತರ ಮೂಗಿಗೆ ತುಪ್ಪ ಸವರೋ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಕೇಂದ್ರ ಸರ್ಕಾರ ಬಜೆಟ್ ವಿರುದ್ಧ ನಿರಾಸೆ ವ್ಯಕ್ತಪಡಿಸಿದರು.
Chamarajanagar
ಚಿಕ್ಕಮಾಲಾಪುರದಲ್ಲಿ ವನ್ಯಜೀವಿ ದಾಳಿ: ಕುರಿ ಬಲಿ
ಹನೂರು: ತಾಲೂಕಿನ ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂಟಮಾಲಪುರ ಗ್ರಾಮದ ಕೆರೆ ಸಮೀಪ ವನ್ಯಜೀವಿ ದಾಳಿಯಿಂದ ಕುರಿಯೊಂದು ಸಾವನ್ನಪ್ಪಿದ ಘಟನೆ ನಡೆದಿದೆ.
ಗೋವಿಂದ ನಾಯ್ಡು ಅವರಿಗೆ ಸೇರಿದ ಕುರಿಯ ಮೇಲೆ ಹುಲಿ ದಾಳಿ ನಡೆಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕುರಿಯನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಪ್ರತ್ಯಕ್ಷದರ್ಶಿ ನಾಗರಾಜು ಹೇಳಿದ್ದಾರೆ.

ಘಟನೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಜ್ಜೆ ಗುರುತುಗಳನ್ನು ಪರಿಶೀಲಿಸುತ್ತಿದ್ದಾರೆ. ದಾಳಿ ಮಾಡಿದ ಪ್ರಾಣಿಯ ಕುರಿತು ಖಚಿತಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಉಂಟಾಗಿದ್ದು, ಅರಣ್ಯ ಇಲಾಖೆ ಹೆಚ್ಚುವರಿ ನಿಗಾ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Chamarajanagar
ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
ಗುಂಡ್ಲುಪೇಟೆ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಮದ್ದೂರು ಚೆಕ್‌ಪೋಸ್ಟ್ ಬಳಿ ನಡೆದಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Chamarajanagar
ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಸಾ*ವು
ಹನೂರು : ಕುಡಿಯುವ ನೀರು ತೆಗೆದುಕೊಳ್ಳಲು ಹೋಗಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಲೊಕ್ಕನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಸಿದ್ದರಾಜಮ್ಮ ಮೃತ ದುರ್ದೈವಿ.

ಘಟನೆ ವಿವರ : ಮಧುವನಹಳ್ಳಿ ಗ್ರಾಮದಿಂದ ಲೊಕ್ಕನಹಳ್ಳಿ ಗ್ರಾಮದ ಜಮೀನೊಂದಕ್ಕೆ ಕೂಲಿಗಾಗಿ ಬಂದಿದ್ದ ಸಂದರ್ಭದಲ್ಲಿ ಕುಡಿಯಲು ನೀರು ತೆಗೆದುಕೊಳ್ಳಲು ಜಮೀನಿನಲ್ಲಿ ಇದ್ದಂತಹ ಕೃಷಿ ಹೊಂಡಕ್ಕೆ ತೆರಳಿದ್ದಾಗ ಆಯಾ ತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಸಾವನಪ್ಪಿರುತ್ತಾರೆ ಎಂದು ತಿಳಿದುಬಂದಿದೆ.
ಘಟನಾಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ
-
Special22 hours agoಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ: ಅರ್ಜಿ ಆಹ್ವಾನ!
-
Special10 hours agoLPG ಸಿಲಿಂಡರ್ ಹೊಸ ನಿಯಮಗಳು: ಈ ತಪ್ಪು ಮಾಡಿದ್ರೆ ಗ್ಯಾಸ್ ಕನೆಕ್ಷನ್ ಬ್ಲಾಕ್ ಆಗಬಹುದು!
-
Mandya56 minutes agoಸಿದ್ದರಾಮಯ್ಯನವರ ರಾಜೀನಾಮೆ ನಿರೀಕ್ಷಿತ: ಸುಮಲತಾ ಅಂಬರೀಷ್
-
State23 hours agoಕರ್ನಾಟಕದಲ್ಲಿ ಗುಡುಗು–ಸಿಡಿಲು ಮಳೆ ಎಚ್ಚರಿಕೆ: ಆರೆಂಜ್, ಯೆಲ್ಲೋ ಅಲರ್ಟ್ IMDಯಿಂದ ಘೋಷಣೆ
-
National23 hours agoಈ ಬಾರಿ ಕೋಲ್ಕತ್ತಾದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಿ ಮೋದಿ ಭಾಗಿ
-
Politics22 hours agoಜೈಪುರದಲ್ಲಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ
-
Hassan2 hours agoಕೆ.ಎಂ. ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದ ಶ್ರೇಯಸ್ ಪಟೇಲ್
-
Chamarajanagar7 hours agoಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
