Chamarajanagar
ಹಳೆ ಪಿಂಚಣಿ ಯೋಜನೆ ಜಾರಿಗಾಗಿ ಆಗ್ರಹ
ಯಳಂದೂರು ಪಟ್ಟಣದ NPS ನೌಕರರ ಸಂಘ, ಮಾತೃ ಸಂಘ, ಪ್ರಾಥಮಿಕ ಶಾಲಾ ನೌಕರರ ಸಂಘ, ವೃಂದ ಸಂಘಗಳ ನೇತೃತ್ವದಲ್ಲಿ OPS ಜಾರಿಗಾಗಿ ಹಕ್ಕೋತ್ತಾಯ ಚಿಂತನಾ ಸಭೆಯನ್ನು ಡಾ. ಬಿ. ಆರ್. ಅಂಬೇಡ್ಕರ್ ರವರ ಭವ್ಯ ಪುತ್ತಳಿಗೆ ಮಾಲಾರ್ಪಣೆ ಮಾಡುವುದರ ಮುಖಾಂತರ ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಲಾಯಿತು.

“ಎನ್ ಪಿ ಎಸ್ ತೊಲಗಲಿ ಓ ಪಿ ಎಸ್ ಜಾರಿಯಾಗಲಿ” ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ತಂದಿರುವ ಎನ್ ಪಿ ಎಸ್ ಯೋಜನೆಯನ್ನು ಕೈಬಿಟ್ಟು ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು.ಎನ್ ಪಿ ಎಸ್ ನಿಂದ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಇಳಿವಯಸ್ಸಿನಲ್ಲಿ ವಿಶ್ರಮಿಸುವ ಸಂದ್ಯಾಕಾಲದಲ್ಲಿ ಯಾವುದೇ ಭದ್ರತೆ ಇಲ್ಲದ ಯೋಜನೆ ಎನ್ ಪಿ ಎಸ್ ಯೋಜನೆ. ರಾಜ್ಯ ಸರ್ಕಾರದ ತೀರ್ಮಾನ ಓ ಪಿ ಎಸ್ ಆಗಿರಲಿ ಎಂದು ಹಕ್ಕೊತ್ತಾಯಿಸಿ ಹಮ್ಮಿಕೊಂಡ ಈ ಸಂದರ್ಭದಲ್ಲಿ ಎಲ್ಲಾ ನೌಕರರಿಗೆ ಶುಭ ಸಂದೇಶ ಸಿಗುವಂತಾಗಲಿ.ಎಂದು ತಿಳಿಸಿದರು.

ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ನಂಜುಂಡಸ್ವಾಮಿ, ಕಾರ್ಯದರ್ಶಿ ನಾಗರಾಜು, ನೌಕರ ಸಂಘದ ಅಧ್ಯಕ್ಷರು ಮಂಜುನಾಥ್, ಕಾರ್ಯದರ್ಶಿ ಅಮ್ಮನಪುರ ಮಹೇಶ್, ತಾಲ್ಲೂಕು ಎನ್‌ಪಿಎಸ್ ನೌಕರ ಸಂಘದ ಅಧ್ಯಕ್ಷರಾದ ಬಸವಣ್ಣ, ಕಾರ್ಯದರ್ಶಿ ಗಿರೀಶ್, ಖಜಾಂಚಿ ಶಿವರಾಮು ಹಾಗೂ ನೌಕರರಾದ ಆಶಾರಾಣಿ, ತಾರಾ, ನೇತ್ರ, ಶ್ರೀಕಂಠ, ಶಾಂತರಾಜು, ಮಲ್ಲಿಗಯ್ಯ, ಶಿವಣ್ಣ, ಪ್ರಾಂಶುಪಾಲ ಮಹೇಶ್, ನಾಗರಾಜು, ಅಜಯ್, ಜ್ಞಾನೇಂದ್ರ, ಶಶಿಧರ್, ಮತ್ತು ವಿವಿಧ ಇಲಾಖೆಯ ನೌಕರರು ಹಾಜರಿದ್ದರು,
Chamarajanagar
ಬಸ್ ತಡೆದು ಪ್ರತಿಭಟನೆ ನಡೆಸಿದ ಶಾಲಾ ಮಕ್ಕಳು
ಗುಂಡ್ಲುಪೇಟೆ: ತಾಲೂಕಿನ ದೇಶಿಪುರ ಗ್ರಾಮದಲ್ಲಿ ಶಾಲಾ ಮಕ್ಕಳು ಹಾಗೂ ರೈತ ಸಂಘದ ಮುಖಂಡರು ಕೆಎಸ್ಆರ್‌ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ದೇಶಿಪುರ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ದಿನನಿತ್ಯ ಕೆಲಸ ಕಾರ್ಯಗಳಿಗೆ ಹೋಗುವ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ಮಕ್ಕಳಿಗೆ ಸರಿಯಾದ ಸಮಯಕ್ಕೆ ಬಸ್ ಇಲ್ಲದ್ದೆ ಪರದಾಡುತ್ತಿದ್ದಾರೆ.

ಅಲ್ಲದೆ ದೇಶಿಪುರ ಗ್ರಾಮಕ್ಕೆ ಹೆಚ್ಚುವರಿ ಬಸ್ ನೀಡಬೇಕು ಎಂದು ಶಾಲಾ ಮಕ್ಕಳು ಹಾಗೂ ರೈತ ಸಂಘದವರು ಕೆಲಕಾಲ ಬಸ್ ತಡೆದು ಪ್ರತಿಭಟನೆ ಮಾಡಿದರು.
ವಿಚಾರ ತಿಳಿದು ಕೂಡಲೇ ಗುಂಡ್ಲುಪೇಟೆ ಕೆಎಸ್ಆರ್‌ಟಿಸಿ ಡಿಪೋ ಮೆನೇಜರ್ ಹಾಗೂ ಬೇಗೂರು ಪೊಲೀಸ್ ಪೊಲೀಸ್ ಠಾಣೆ ಸಿಬ್ಬಂದಿಗಳು ಗ್ರಾಮಕ್ಕೆ ಆಗಮಿಸಿ ಮುಂದಿನ ವಾರದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿ ಕೊಡುವುದಾಗಿ ಡಿಪೋ ಮ್ಯಾನೇಜರ್ ಭರವಸೆಯನ್ನು ನೀಡಿದರು.
ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.
Chamarajanagar
ಡಿ. 10ಕ್ಕೆ ಚಾ.ನಗರದಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಲಿರುವ ಲೋಕಾಯುಕ್ತ ಅಧಿಕಾರಿಗಳು
ಚಾಮರಾಜನಗರ : ಜಿಲ್ಲೆಯ ಲೋಕಾಯುಕ್ತ ಕಚೇರಿಯ ಅಧಿಕಾರಿಗಳು ಚಾಮರಾಜನಗರ ಪ್ರವಾಸಿಮಂದಿರದಲ್ಲಿ (ಐ.ಬಿ) ಡಿಸೆಂಬರ್. 10ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಂದ ಕರ್ನಾಟಕ ಲೋಕಯುಕ್ತ ಕಾಯ್ದೆಯಡಿ ಭರ್ತಿ ಮಾಡಿದ ದೂರು ಅರ್ಜಿಗಳನ್ನು ಸ್ವೀಕರಿಸಿ ವಿಚಾರಣೆ ನಡೆಸಲಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಕೆಲಸದ ಅನಗತ್ಯ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ನಮೂನೆ-1 ಮತ್ತು 2 ರಲ್ಲಿ ಭರ್ತಿಮಾಡಿ ಸಲ್ಲಿಸಬಹುದು.
ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರ್ನಾಟಕ ಲೋಕಾಯುಕ್ತ ಜಿಲ್ಲಾ ಪೊಲೀಸ್ ವಿಭಾಗದ ಉಪಾಧೀಕ್ಷಕ ಜಿ.ಎಸ್. ಗಜೇಂದ್ರ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chamarajanagar
ಚಾಮರಾಜನಗರ, ನಂಜನಗೂಡು, ಕಡಕೊಳ, ಅಶೋಕಪುರಂ ರೈಲು ನಿಲ್ದಾಣಗಳಿಗೆ ಡಿಆರ್‌ಎಂ ಭೇಟಿ, ಪರಿಶೀಲನೆ
ಮೈಸೂರು: ಮೈಸೂರು ವಿಭಾಗದ ನೈರುತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಮುದಿತ್ ಮಿತ್ತಲ್ ಅವರು ಚಾಮರಾಜನಗರ, ನಂಜನಗೂಡು ಟೌನ್, ಕಡಕೊಳ ಮತ್ತು ಅಶೋಕಪುರಂ ರೈಲು ನಿಲ್ದಾಣಗಳನ್ನು ಸೋಮವಾರ ಪರಿಶೀಲಿಸಿದರು.

ಚಾಮರಾಜನಗರದಲ್ಲಿ ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಅವರು ಪರಿಶೀಲಿಸಿ, ಪ್ರಯಾಣಿಕರ ಸೌಲಭ್ಯಗಳು, ಮೂಲಸೌಕರ್ಯ ಸುಧಾರಣೆಗಳು ಮತ್ತು ನಿಲ್ದಾಣ ಪುನರ್ವಿಕಾಸಕ್ಕೆ ಸಂಬಂಧಿಸಿದ ಅಂಶಗಳ ಮೇಲೆ ವಿಶೇಷ ಗಮನ ಹರಿಸಿದರು. ಅಲ್ಲದೇ, ನಿಲ್ದಾಣದಲ್ಲಿನ ಉದ್ಯೋಗಿಗಳು ಮತ್ತು ಸಿಬ್ಬಂದಿಯೊಂದಿಗೆ ಕೂಡ ಸಂವಾದ ನಡೆಸಿದರು.
ನಂಜನಗೂಡು ಪಟ್ಟಣದ ಗೂಡ್ಸ್ ಶೆಡ್ ಪರಿಶೀಲಿಸಿ, ಅದರ ಕಾರ್ಯಾಚರಣಾ ದಕ್ಷತೆ ಹಾಗೂ ಭವಿಷ್ಯದ ಸಾಮರ್ಥ್ಯ ವೃದ್ಧಿ ಅಗತ್ಯಗಳನ್ನು ಅವಲೋಕಿಸಿದರು. ನಂತರ ಕಡಕೊಳ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಕಂಟೇನರ್ ಲೋಡಿಯಿಂಗ್ ಪಾಯಿಂಟ್ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು.

ಈ ವೇಳೆ ಸರಕು ಹಸ್ತಾಂತರ ಸೌಲಭ್ಯಗಳು ಹಾಗೂ ಸರಕು ಸಾಗಣೆ ಕಾರ್ಯಕ್ಷಮತೆ ಮುಂಬರುವ ಅಭಿವೃದ್ಧಿ ಚಟುವಟಿಕೆಗಳನ್ನು ಪರಿಶೀಲಿಸಿದರು.
ಅಶೋಕಪುರಂ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯಗಳು, ಸುರಕ್ಷತಾ ಕ್ರಮಗಳು ಹಾಗೂ ನಿಲ್ದಾಣದ ನಿರ್ವಹಣೆಯನ್ನೂ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಗತಿ ಶಕ್ತಿ ಸಿಪಿಎಂ ಆನಂದ್ ಭಾರತಿ ಮತ್ತು ವಿವಿಧ ವಿಭಾಗದ ಹಿರಿಯ ಅಧಿಕಾರಿಗಳು ಇದ್ದರು.
-
Mandya21 hours agoಡಿ.17ಕ್ಕೆ ಮಳವಳ್ಳಿಗೆ ರಾಷ್ಟ್ರಪತಿ ಆಗಮನ : ಜಿಲ್ಲಾಧಿಕಾರಿಗಳಿಂದ ಸ್ಧಳ ಪರಿಶೀಲನೆ
-
Mysore20 hours agoಮೈಸೂರು ದಸರಾ: ಮಹಿಳಾ ಉದ್ಯಮಿ ಉಪಸಮಿತಿಗೆ ಎಸ್. ರಂಗನಾಥ ಸಂಚಾಲಕರಾಗಿ ನೇಮಕ
-
Hassan24 hours agoಜಿಲ್ಲಾ ಮಟ್ಟದ ಅಂತರಶಾಲಾ ಚೆಸ್ ಸ್ಪರ್ಧೆ ಯಶಸ್ವಿ
-
Hassan23 hours agoಎಂಸಿಇ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸ್ಪೋರ್ಟ್ಸ್ ವಿಜೇತರಿಗೆ ಸನ್ಮಾನ
-
Mysore1 hour agoಡೆವಿಲ್ ಚಿತ್ರದ ಯಶಸ್ಸಿಗಾಗಿ ಕುಂಬಳಕಾಯಿ ದೃಷ್ಟಿ ತೆಗೆದು ಪ್ರಾರ್ಥಿಸಿದ ಅಭಿಮಾನಿಗಳು
-
Hassan21 hours agoಭಾರಿ ಹೊಂಡದಲ್ಲಿ ಸಿಲುಕಿದ ಲಾರಿ: ಒಂದು ಗಂಟೆ ಕಾಲ NH-75 ಬಂದ್
-
Hassan19 hours agoಡಿ.21ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆ: ಎಸ್.ವರಲಕ್ಷ್ಮೀ
-
Mandya2 hours agoಮುತುವರ್ಜಿ ವಹಿಸಿ ಹಾಸ್ಟೆಲ್ ಹಾಗೂ ಅಂಗನವಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿ: ಡಾ.ಕುಮಾರ
