Kodagu
ಮೊಬೈಲ್ ಸಂಖ್ಯೆ ಹ್ಯಾಕ್ ಮಾಡುವ ಕಿಡಿಗೇಡಿಗಳ ಬಗ್ಗೆ ಎಚ್ಚರವಹಿಸಲು ಮನವಿ
ಮಡಿಕೇರಿ: ಕಿಡಿಗೇಡಿಗಳು ಜು.15 ರಂದು ತನ್ನ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿ ತನ್ನ ವಾಟ್ಸಪ್ ಸಂಪರ್ಕದಲ್ಲಿರುವ ವ್ಯಕ್ತಿಗಳ ಸಂಖ್ಯೆಗಳಿಗೆ ಮತ್ತು ಗ್ರೂಪ್‌ಗಳಿಗೆ ಅಶ್ಲೀಲ ಸಂದೇಶ ರವಾನಿಸಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಅಧ್ಯಕ್ಷ ಎ.ಪಿ.ದೀಪಕ್ ಪೊನ್ನಪ್ಪ, ಈ ಸಂಬಂಧ ಪೊಲೀಸ್ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ತಾನು ಸೋಮವಾರ(ಜು.15) ಕಾರ್ಯನಿಮಿತ್ತ ಮೈಸೂರಿನಲ್ಲಿದ್ದೆ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಕೆಲವರು ನನಗೆ ಕರೆ ಮಾಡಿ ಈ ಬಗ್ಗೆ ಪ್ರಶ್ನಿಸಿದಾಗ ನನ್ನ ಅರಿವಿಗೆ ಬಂದಿದೆ ಎಂದು ತಿಳಿಸಿರುವ ದೀಪಕ್, ನನಗೂ ಈ ಅಶ್ಲೀಲ ಸಂದೇಶಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ತನ್ನ ಸಂರ್ಪದಲ್ಲಿರುವವರು ಹ್ಯಾಕ್ ಆಗಿರುವ ನನ್ನ ಸಂಖ್ಯೆಯಿಂದ ಯಾವುದೇ ರೀತಿಯ ಅಶ್ಲೀಲ ಸಂದೇಶ ಬಂದಲ್ಲಿ ಪ್ರತಿಯುತ್ತರ ನೀಡದಂತೆ ಮನವಿ ಮಾಡಿದ ಅವರು, ನಾನೊಬ್ಬ ಸಮಾಜ ಸೇವಕ. ಈ ಘಟನೆ ನನ್ನ ಸಾಮಾಜಿಕ ಜೀವನಕ್ಕೆ ಕಪ್ಪು ಚುಕ್ಕೆಯಾಗಲಿದೆ. ಪರಿಣಾಮ ಈಗಾಗಲೇ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿದೆ. ಸಾರ್ವಜನಿಕರು ಮೊಬೈಲ್ ಸಂಖ್ಯೆ ಹ್ಯಾಕ್ ಮಾಡುವ ಕಿಡಿಗೇಡಿಗಳ ಬಗ್ಗೆ ಎಚ್ಚರವಹಿಸಬೇಕೆಂದು ಮನವಿ ಮಾಡಿದರು.

ಪೊಲೀಸ್ ಇಲಾಖೆ ಎಚ್ಚರವಹಿಸಬೇಕು: ಈ ಘಟನೆಗೆ ಸಂಬಂಧಿಸಿದಂತೆ ಸೈಬರ್ ಕ್ರೈಂಗೆ ದೂರು ನೀಡಲು ತೆರಳಿಸಿದ ಸಂದರ್ಭ ಹಣ, ವಂಚನೆ ನಡೆದಿಲ್ಲ ಎಂದು ನಿರ್ಲಕ್ಷ್ಯ ವಹಿಸಿದರು ಎಂದು ಆರೋಪಿಸಿರುವ ಅವರು, ಈ ರೀತಿಯ ನಿರ್ಲಕ್ಷ್ಯ ವಂಚಕರಿಗೆ ಮತ್ತಷ್ಟು ಧೈರ್ಯ ತುಂಬಿದಂತಾಗುತ್ತದೆ. ಆದ್ದರಿಂದ ಒಂದು ಪ್ರಕರಣ ದಾಖಲಾಗುವಾಗಲೇ ಪ್ರಕಟಣದ ಬೆನ್ನತ್ತಿ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎ.ಪಿ.ದೀಪಕ್ ಅವರ ತಂದೆ ಪೊನ್ನಪ್ಪ ಉಪಸ್ಥಿತರಿದ್ದರು.
Kodagu
ಕೊಡಗು ಜಿಲ್ಲೆಯ ಮಳೆ ವಿವರ(ಮಿಲಿ ಮೀಟರ್‍ಗಳಲ್ಲಿ)
ಮಡಿಕೇರಿ : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 24.70 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 2.89 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2656.81 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2642.19 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 38.95 ಮಿ.ಮೀ. ಕಳೆದ ವರ್ಷ ಇದೇ ದಿನ 1.18 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 4006.73 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 3799.21 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 18.75 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2384.80 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2380.40 ಮಿ.ಮೀ. ಮಳೆಯಾಗಿತ್ತು.
ಪೆÇನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 26.10 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 3.13 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2454.09 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2464.39 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 30.90 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 9.65 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3056.72 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2977.96 ಮಿ.ಮೀ. ಮಳೆಯಾಗಿತ್ತು.
ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 8.80 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.50 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1381.69 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1589.00 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 29, ನಾಪೋಕ್ಲು 17.60, ಸಂಪಾಜೆ 63, ಭಾಗಮಂಡಲ 46.20, ವಿರಾಜಪೇಟೆ 20, ಅಮ್ಮತ್ತಿ 17.50, ಹುದಿಕೇರಿ 25.40 , ಶ್ರೀಮಂಗಲ 41, ಪೆÇನ್ನಂಪೇಟೆ 18, ಬಾಳೆಲೆ 20, ಸೋಮವಾರಪೇಟೆ 21.40, ಶನಿವಾರಸಂತೆ 16, ಶಾಂತಳ್ಳಿ 58, ಕೊಡ್ಲಿಪೇಟೆ 28.20, ಕುಶಾಲನಗರ 2.60, ಸುಂಟಿಕೊಪ್ಪ 15 ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ (04-09-2025) ವರದಿ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು, ಇಂದಿನ ನೀರಿನ ಮಟ್ಟ 2858.47 ಅಡಿಗಳು. ಕಳೆದ ವರ್ಷ ಇದೇ ದಿನ 2858.52 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 12.60 ಮಿ.ಮೀ., ಕಳೆದ ವರ್ಷ ಇದೇ ದಿನ 0.00 ಮಿ.ಮೀ., ಇಂದಿನ ನೀರಿನ ಒಳಹರಿವು 5672 ಕ್ಯುಸೆಕ್, ಕಳೆದ ವರ್ಷ ಇದೇ ದಿನ 3512 ಕ್ಯುಸೆಕ್., ಇಂದಿನ ನೀರಿನ ಹೊರ ಹರಿವು ನದಿಗೆ 5500 ಕ್ಯುಸೆಕ್. ನಾಲೆ
Kodagu
ಮಳೆ ಆರ್ಭಟ: ಒಂದೇ ತಿಂಗಳಿಗೆ 3,000 ವೈರಲ್ ಫೀವರ್ ಕೇಸ್‌ಗಳು ಪತ್ತೆ
ಮಡಿಕೇರಿ: ಜಿಲ್ಲೆಯಾದ್ಯಂತ ನಿರಂತರ ಮಳೆ ಆರ್ಭಟದಿಂದಾಗಿ ಜನರಲ್ಲಿ ವೈರಲ್ ಫೀವರ್ ಹೆಚ್ಚಾಗಿ ಹರಡುತ್ತಿದ್ದು, ಕಳೆದ ಒಂದೇ ತಿಂಗಳಲ್ಲಿ 3,000 ಶೀತಜ್ವರ ಪ್ರಕರಣಗಳು ಪತ್ತೆಯಾಗಿವೆ.

ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯೊಂದಿಗೆ ಶೀತಗಾಳಿಯೂ ಹೆಚ್ಚಾಗಿರುವುದರಿಂದ ಜನರಿಗೆ ವೈರಲ್ ಫೀವರ್ ಹರಡುತ್ತಿದೆ. ಮಳೆ, ಶೀತಗಾಳಿ ಪರಿಣಾಮ ಶೀತಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗಿವೆ.
ಜಿಲ್ಲೆಯಾದ್ಯಂತ ಕಳೆದ ಏಪ್ರಿಲ್‌ನಲ್ಲಿ 15,000 ಶೀತಜ್ವರ ಪ್ರಕರಣಗಳು ದಾಖಲಾಗಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ 3,000 ಜ್ವರ ಪ್ರಕರಣಗಳು ದಾಖಲಾಗಿದೆ. ಕಳೆದ 3 ತಿಂಗಳಿಗೆ ಹೋಲಿಕೆ ಮಾಡಿದರೆ ಈ ತಿಂಗಳಲ್ಲಿ ಹೆಚ್ಚು ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಮಾಹಿತಿ ನೀಡಿದ್ದಾರೆ.

ಇನ್ನೂಈ ಬಾರಿ ಮಕ್ಕಳು, ವಿದ್ಯಾರ್ಥಿಗಳು ಸಹ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಜನರು ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.
Kodagu
ಕಲ್ಲುಗುಂಡಿ ಬಳಿ ಟ್ಯಾಂಕರ್ ಮತ್ತು ಕಾರಿನ ಮಧ್ಯೆ ಭೀಕರ ಅಪಘಾತ : ಮಹಿಳೆ ಮೃತ್ಯು
ಮಡಿಕೇರಿ: ಕಲ್ಲುಗುಂಡಿ ಕಡೆಪಾಲ ಬಳಿ ಟ್ಯಾಂಕರ್ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ಮಡಿಕೇರಿಗೆ ತೆರಳುವ ಕಾರು ಹಾಗೂ ಸುಳ್ಯ ಕಡೆ ಬರುತ್ತಿದ್ದ ಟ್ಯಾಂಕರ್ ಲಾರಿ ನಡುವೆ ಕಡೆಪಾಲ ತಿರುವಿನಲ್ಲಿ ಅಪಘಾತವಾಗಿದೆ.

ಗಂಭೀರ ಗಾಯಗೊಂಡ ಕಾರಿನಲ್ಲಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಇತರರು ಗಂಭೀರ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
-
Kodagu23 hours agoಈದ್ ಮಿಲಾದ್ ಪ್ರಯುಕ್ತ ಎಮ್ಮೆಮಾಡು ಎಸ್ವೈಎಸ್ ಶಾಖೆ ವತಿಯಿಂದ ಸ್ವಚ್ಛತಾ ಶ್ರಮದಾನ
-
Mysore20 hours agoನಂಜನಗೂಡು: ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿನ ಗೊಂದಲ ಪರಿಹರಿಸುವಂತೆ ಆಗ್ರಹಿಸಿ ಪ್ರತಿಭಟನೆ
-
Hassan18 hours agoವರ್ಷ ಪೂರ್ತಿ ಕಾರ್ಯನಿರ್ವಹಿಸಲಿರುವ ಕಾಂಗ್ರೆಸ್ ಪ್ರಚಾರ ಸಮಿತಿ : ವಿನಯ್ ಕುಮಾರ್ ಸೊರಕೆ
-
Mandya23 hours agoಜಿಲ್ಲೆಯಲ್ಲಿ ಸೆ.9ಕ್ಕೆ ಬಾಪೂಜಿ ಪ್ರಬಂಧ ಸ್ಪರ್ಧೆ: ಕೆ.ಆರ್. ನಂದಿನಿ
-
Hassan18 hours agoದಸರಾ ಉದ್ಘಾಟನೆ| ಸಂಪ್ರದಾಯದಂತೆ ಶಾಸ್ತ್ರೋತ್ತವಾಗಿ ಮಾಡುವುದಾಗಿ ಬಾನು ಮುಷ್ತಾಕ್ ತಿಳಿಸಿದ್ದಾರೆ: ಸುರೇಶ್ ಗೌಡ
-
Mysore2 hours agoಮೈಸೂರು ದಸರಾ: ಮಾನ್ಯ ಸಿಎಂ ಸಿದ್ದರಾಮಯ್ಯಗೆ ಅಧಿಕೃತ ಆಹ್ವಾನ
-
Chamarajanagar21 hours agoಗುಂಡ್ಲುಪೇಟೆ: ಟಿಪ್ಪರ್ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರನಿಗೆ ಗಾಯ
-
Kodagu19 hours agoಮಳೆ ಆರ್ಭಟ: ಒಂದೇ ತಿಂಗಳಿಗೆ 3,000 ವೈರಲ್ ಫೀವರ್ ಕೇಸ್‌ಗಳು ಪತ್ತೆ
