Connect with us

Mysore

ಮಹಿಷಾ ದಸರಾ ಆಚರಣೆಯನ್ನು ತಡೆಯುವುದು ಸರಿಯಲ್ಲ – ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌

Published

on

ಮೈಸೂರು: ಮಹಿಷಾ ದಸರಾ ಆಚರಣೆಯನ್ನು ತಡೆಯುವುದು ಸರಿಯಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಹಿಷಾ ದಸರಾವನ್ನು ಒಂದು ವರ್ಗ ಮಾಡಿಕೊಂಡು ಬಂದಿದೆ. ಜೊತೆಗೆ ಮಹಿಷಾನ ಆಚರಣೆಯ ಕುರಿತು ವಿವರಣೆ ನೀಡುತ್ತಿದ್ದಾರೆ. ಹೀಗಿದ್ದರೂ ಅದನ್ನು ತಡೆಯುವ ಯತ್ನವೇಕೆ? ಅದು ಕೂಡ ಚಾಮುಂಡಿ ಚಲೋ ಹೆಸರಿನಲ್ಲಿ ತಡೆಯಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿಗೆ ಟಾಂಗ್‌ ನೀಡಿದರು.
ಸಂಸದ ಪ್ರತಾಪ್‌ ಸಿಂಹ ಹಾಗೂ ಬಿಜೆಪಿ ಅವರು ಮಾಡುವುದೇ ಇಂತಹ ಕೆಲಸವಾಗಿದೆ. ಭೂತಕಾಲದ ಘಟನೆಗಳನ್ನು ವರ್ತಮಾನದಲ್ಲಿ ಸಮೀಕರಿಸಿ ಭವಿಷ್ಯದ ಬಗ್ಗೆ ಚಿಂತಿಸಬೇಕು. ಆದರೆ, ಬಿಜೆಪಿ ಮಸೀದಿಯೊಳಗೆ ಶಿವಲಿಂಗ ಇತ್ತು, ಮತ್ತೊಂದು ಇತ್ತು ಎಂದು ತಿರುಗುತ್ತಾರೆ. ಭೂತಕಾಲದಲ್ಲಿ ಓಡುವುದೇ ಬಿಜೆಪಿ ಗುಣ. ಮಹಿಷಾ ದಸರೆಯನ್ನು ಕುರಿತು ನ್ಯಾಯಾಲಯ ಏನು ಹೇಳಲಿದೆ ಎಂಬುದನ್ನು ಕಾದು ನೋಡಣ ಎಂದರು.
ಶಾಮನೂರು ದಾವರಣಗೆರೆಯಲ್ಲಿ ಕಾಂಗ್ರೆಸ್‌‍ ಗೆಲ್ಲಿಸಲಿ: ಪ್ರತಿ ಬಾರಿ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಬಿಜೆಪಿಯಲ್ಲಿನ ಶ್ಯಾಮನೂರು ತಮ ಬೀಗರನ್ನು ಗೆಲ್ಲಿಸಿಕೊಳ್ಳುತ್ತಿದ್ದಾರೆ, ಕಾಂಗ್ರೆಸ್‌‍ ಅಭ್ಯರ್ಥಿಯನ್ನು ಯಾಕೇ ಗೆಲ್ಲಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಶ್ಯಾಮನೂರು ಅವರು ಏಳು ಬಾರಿ ಗೆದ್ದಿರುವುದು ಸ್ವಂತ ಕ್ಷಿರ್ಚಸ್ಸಿನಿಂದ ಅಲ್ಲ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತಗಳಿಂದ. ಲಿಂಗಾಯತ ಸಮುದಾಯವೇ ಅವರಿಗೆ ಓಟು ಹಾಕಿಲ್ಲ. ದಾವಣಗೆರೆಯನ್ನು ಅಪ್ಪ ಮಕ್ಕಳೇ ವಹಿಸಿಕೊಂಡಿದ್ದಾರೆ. ಹೀಗಾಗಿ ಅವರು ಯಾರಿಂದ ಗೆದ್ದಿದ್ದಾರೆ. ಯಾಕೇ ಎಂಪಿ ಚುನಾವಣೆ ಗೆಲ್ಲಲು ಆಗುತ್ತಿಲ್ಲ ಎಂಬುದನ್ನು ಮೊದಲು ತಿಳಿಸಲಿ ಎಂದು ಹೇಳಿದರು.
ಕುರಿ ನಡೆದಾಡುವ ಬ್ಯಾಂಕ್‌: ಕುರಿ, ಮೇಕೆ, ದನ ಸೇರಿದಂತೆ ಪಶು ಸಂಗೋಪನೆ ದೇಶದ ಸಂಪನೂಲವಾಗಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಅರ್ಥ ಮಾಡಿಕೊಂಡಿಲ್ಲ. ಎಲ್ಲ ಸಮುದಾಯದಲ್ಲೂ ಕುರಿ ಸಾಕುವವರಿದ್ದಾರೆ. ಕುರಿ ಪ್ರತಿ ಮನೆಯ ಆಸ್ತಿ ಮತ್ತು ನಡೆದಾಡುವ ಬ್ಯಾಂಕ್‌. ಹೀಗಾಗಿ ಕುರಿಯ ಸಂಪನೂಲವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮೊದಲು ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನದ ವತಿಯಿಂದ ವಿಶ್ವನಾಥ್‌ ಅವರನ್ನು ಸನಾನಿಸಲಾಯಿತು. ಅಧ್ಯಕ್ಷ ಜಾಕೀರ್‌ ಹುಸೇನ್‌, ಚಿಂತಕ ಪ್ರೊ.ಕೆ.ಎಸ್‌‍.ಭಗವಾನ್‌, ಲೇಖಕ ಮಾನಸ, ಹಿರಿಯ ರಂಗಕರ್ಮಿ ಜನಾರ್ಧನ್‌ (ಜನ್ನಿ), ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಚಂದ್ರಶೇಖರ್‌, ಕರ್ನಾಟಕ ರಾಜ್ಯ ನಾಯಕರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ದ್ಯಾವಪ್ಪ ನಾಯಕ, ಕಟ್ಟಡ ಕಾರ್ಮಿಕರ ಸಂಘದ ಪಿ.ರಾಜು ಮುಂತಾದವರು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಕಸದ ತ್ಯಾಜ್ಯ ಮತ್ತು ಎಣ್ಣೆ ಕಾಲಿ ಬಾಟಲ್ ಗಳು ರೋಡಿನಲ್ಲಿ ಬಿದ್ದಿರುವುದು ಇದನ್ನು ಕೇಳದ ಪುರಸಭೆ

Published

on

ಎಚ್ ಡಿ ಕೋಟೆ ಹಾಗೂ ಹ್ಯಾಂಡ್ ಪೋಸ್ಟ್ ಗೆ ಓಡಾಡುವ ರಸ್ತೆ ತುಂಬಾ ಕಸದ ರಾಶಿ ಮತ್ತು ಎಣ್ಣೆ ಬಾಟಲಿಗಳು ಬಿದ್ದಿರುವುದನ್ನು ಯಾರು ಕೇಳುತ್ತಿಲ್ಲ 100 ಮೀಟರ್ ಅಂತರದಲ್ಲಿ ಗಣಪತಿ ದೇವಸ್ಥಾನ ವಿದ್ದು ಸಾರ್ವಜನಿಕರು ಓಡಾಡಲು ತುಂಬಾ ಕಷ್ಟವಾಗುತ್ತಿದೆ ದಯವಿಟ್ಟು ಇದನ್ನು ಗುರು. ವೈನ್ಸ್ ಬಾರ್ ಬಾರ್ ನಿಂದ ಬಂದ ಕಸ ಇದು ಮೊಟ್ಟೆ * ಮತ್ತು ಎಣ್ಣೆ ಖಾಲಿ ಬಾಟಲಿಗಳು ಬಾಟಲೂಗಳು

ಬಿದ್ದಿರುವುದನ್ನು ನೋಡಿ ಎಚ್ ಡಿ ಕೋಟೆ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ಇದನ್ನು ನೋಡಿ ತುಂಬಾ ಮುಜುಗರವಾಗುತ್ತಿದೆ & ಮತ್ತು ವಿದ್ಯಾರ್ಥಿಗಳಿಗೆ ಕೆಟ್ಟ ಪರಿಣಾಮ ವಿರುತ್ತದೆ ದೇವಸ್ಥಾನದ ಅಕ್ಕ ಪಕ್ಕ ಸ್ವಚ್ಛತೆಯನ್ನು ಕಾಪಾಡಬೇಕೆಂದು ಪುರಸಭೆ ವ್ಯಾಪ್ತಿಯಿಂದ ಅವರಿಗೆ ತಿಳಿಸಬೇಕಾಗಿ ಮನವಿ.

Continue Reading

Mysore

ದಿವಾಳಿಯ ಅಂಚಿನಲ್ಲಿರುವ ವಿಶ್ವವಿದ್ಯಾನಿಲಯಗಳು. ಸರ್ಕಾರ ಮತ್ತು ಉನ್ನತ ಶಿಕ್ಷಣ ಸಚಿವರು ವಿಶ್ವವಿದ್ಯಾನಿಲಯಗಳತ್ತ ಕಣ್ತೆರೆವರೇ!

Published

on

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯ ಮೈಸೂರು ಮತ್ತು ಕೊಡಗು ಜಿಲ್ಲಾ ಸಂಚಾಲಕ. ಡಾ. ಅರುಣ್ ಕುಮಾರ್ H R ಬೇಸರ.

ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಉತ್ಕೃಷ್ಟವಾದ ಶಿಕ್ಷಣ ಜ್ಞಾನವನ್ನ ಕೊಟ್ಟು . ಸಾಮಾಜಿಕವಾಗಿ ಮೌಡ್ಯ ದಿಂದ ಮುಖ್ಯವಾಹಿನಿಗೆ ತರುವಲ್ಲಿ ವಿಶ್ವವಿದ್ಯಾನಿಲಯ ಗಳು ಉನ್ನತವಾದ. ಸ್ಥಾನವನ್ನ ಪಡೆದಿವೆ.

ಅದರಂತೆ ಪ್ರಾಚೀನ ನಳಂದ ವಿಶ್ವವಿದ್ಯಾನಿಲಯ ತನ್ನದೇ ಆದ ಚರಿತ್ರೆ ಮತ್ತು ಸಂಸ್ಕೃತಿಯನ್ನು ಹೊಂದಿದೆ.
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದಲ್ಲಿ ಶಿಕ್ಷಣಕ್ಕೆ ಪ್ರಮುಖ ಪಾತ್ರವನ್ನು ಕೊಟ್ಟರು. ಅದರಂತೆ 1945 ರಲ್ಲಿ UGC. ಯನ್ನು ರಚಿಸಲಾಯಿತು. ಮೂರು ಕೇಂದ್ರೀಯ ವಿಶ್ವವಿದ್ಯಾನಿಲಯಗಳಾದ. ಆಲಿಘರ್. ಬನಾರಸ್. ದೆಹಲಿ. ಮೇಲ್ವಿಚಾರಣೆ ಕೆಲಸವನ್ನು ಮಾಡಿದವು.

1947ರಲ್ಲಿ ಎಲ್ಲಾ ಭಾರತೀಯ ವಿಶ್ವವಿದ್ಯಾಲಯಗಳು ಒಳಗೊಳಲು ವಿಸ್ತರಿಸಲಾಯಿತು.1952 ರಲ್ಲಿ ಸರ್ಕಾರವು ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಎಲ್ಲಾ ಅನುದಾನಗಳನ್ನು UGC ಮೂಲಕ ವಹಿಸಬೇಕೆಂದು ನಿರ್ಧರಿಸಿತು. ನಂತರ ಶಿಕ್ಷಣ ಮತ್ತು ನೈಸರ್ಗಿಕ ಸಂಪನ್ಮೂಲಗಳು ವೈಜ್ಞಾನಿಕ ಸಂಶೋಧನಾ ಸಚಿವರಾದ ಮೌಲಾನಾ ಅಬುಲ್ ಕಲಾಂ ಅಜಾದ್ ರವರು 28 ಡಿಸೆಂಬರ್ 1953 ರಂದು ಉದ್ಘಾಟನೆ ಮಾಡಿದರು.

UGC ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ಒಂದು ಶಾಸನಬದ್ಧ ಸಂಸ್ಥೆಯಾಗಿದೆ ಇದನ್ನ UGC ಇದೆ 1956 ರಲ್ಲಿ ಅನುಗುಣವಾಗಿ ಸ್ಥಾಪಿಸಲಾಗಿದೆ. UGC ಯು JRF ಉತ್ತೀರ್ಣರಾದ ಎಲ್ಲರಿಗೂ ಡಾಕ್ಟರೇಟ್ ಮತ್ತು ಡಾಕ್ಟರ್ ಫೆಲೋಶಿಪ್ ಗಳಿಗೆ ಪ್ರೋತ್ಸಾಹವನ್ನು ನೀಡುತ್ತಾಬಂದಿದೆ.

ಕರ್ನಾಟಕದಲ್ಲಿ 20 ವಿಶ್ವವಿದ್ಯಾನಿಲಯಗಳು ಇವೆ. ಅದರಲ್ಲೂ ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ 1916 ಸ್ಥಾಪನೆ ಆದ ಮೈಸೂರು ವಿಶ್ವವಿದ್ಯಾನಿಲಯ. ಮತ್ತು.ಅನೇಕ ಡಿಮ್ಡ್ ಯೂನಿವರ್ಸಿಟಿ. ಪ್ರತ್ಯೇಕ ವಿಷಯಗಳಿಗೆ ಆಧರಿತವಾಗಿ ಯೂನಿವರ್ಸಿಟಿ ಗಳು ಇವೆ.

ಇನ್ನು 2022-2023 BJP ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಒಂದೊಂದು ವಿಶ್ವವಿದ್ಯಾಲಯ ಪರಿಕಲ್ಪನೆಯಂತೆ ಹೊಸದಾಗಿ 7ವಿಶ್ವವಿದ್ಯಾನಿಲಯಗಳು ಸ್ಥಾಪನೆಗೊಂಡಿವೆ.

ಆದರೆ ವಿಶ್ವವಿದ್ಯಾನಿಲಯಗಳು ಆರ್ಥಿಕ ಸಂಕಷ್ಟದಿಂದ ಕೂಡಿದ್ದು ದಿನದಿಂದ ದಿನಕ್ಕೆ ನಿವೃತ್ತ ಪ್ರಾಧ್ಯಾಪಕರ ಸಂಖ್ಯೆ ಹೆಚ್ಚುತ್ತಿದೆ . ಇನ್ನು ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿ ಕೆಲಸ ಮಾಡುವ ಅತಿಥಿ ಉಪನ್ಯಾಸಕರು. ಮತ್ತು ಅರೆ ನೌಕರಿ ಸಿಬ್ಬಂದಿಗಳ ಪಾಡು ಹೇಳತಿರದು. ಸರಿಯಾಗಿ ಒಂದು ತಿಂಗಳಿಗೆ ಸಂಬಳವೂ ಆಗುವುದಿಲ್ಲ. ಇನ್ನು ನಿವೃತ್ತಿಯಾದ ಪ್ರಾಧ್ಯಾಪಕರಿಗೆ ನಿವೃತ್ತಿ ಬತ್ತೆಗಳು ಕೊಟ್ಟಿಲ್ಲ.

ಹೊಸ ವಿಶ್ವವಿದ್ಯಾಲಯ ಗಳ ಕಥೆ ಹೇಳುತ್ತಿರದು. ಯಾವ ಪುರುಷಾರ್ಥಕ್ಕಾಗಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪನೆ ಆಯಿತು. ಅವಲೋಕನ ಮಾಡಬೇಕಾಗಿದೆ ಇದರಿಂದ ವಿಶ್ವ ವಿದ್ಯಾಲಯದ ಘನತೆ ಕುಗ್ಗಿದೆ.

ಸರ್ಕಾರದಿಂದ ಹಣ ಬಿಡುಗಡೆ ಮಾಡಿಲ್ಲ ಎಂದರೆ ಮಾತೃ ಸಂಸ್ಥೆಗೆ ವರ್ಗಾಯಿಸಿ ಬಿಡುವುದು ಒಳ್ಳೆಯದು.

ವಿಶ್ವವಿದ್ಯಾಲಯಗಳಲ್ಲಿ ದುಡಿಯುವ ಪ್ರಾಮಾಣಿ ಪ್ರಾಮಾಣಿಕ ಅತಿಥಿ ಉಪನ್ಯಾಸಕರ ಸ್ಥಿತಿ ಯಾರು ಕೇಳಲಾರರು ಸರಿಯಾಗಿ ಸಂಬಳ ಬರುವುದಿಲ್ಲ ಎಂದರೆ ಜೀವನ ನಿರ್ವಹಣೆ ಮಾಡುವುದು ಹೇಗೆ ಸರ್ಕಾರವೇ ಯೋಚನೆ ಮಾಡಬೇಕಾಗಿದೆ.

ಹಾಗಾಗಿ ವಿಶ್ವವಿದ್ಯಾನಿಲಯಗಳು ದೇಶದ ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ ಕೆಲಸವನ್ನು ಮಾಡುತ್ತವೆ ಆದರೆ ಉಪನ್ಯಾಸಕ ನೀಡುವ ಅತಿಥಿ ಉಪನ್ಯಾಸಕರಿಗೆ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿ ವಿದ್ಯಾರ್ಥಿಗಳ ಭವಿಷ್ಯ ಕಟ್ಟಿ ಎಂದರೆ ಎಷ್ಟು ಸಮಂಜಸ!!!

ಇನ್ನು ವಿಶ್ವವಿದ್ಯಾಲಯದ ಕುಲಪತಿಗಳ ಆಯ್ಕೆಯಲ್ಲಿ ಕೋಟಿ ಕೋಟಿ ದುಡ್ಡಿರುವವರನ್ನ ಆಯ್ಕೆ ಮಾಡುತ್ತಿರುವುದು ಸುದ್ದಿ ಕೇಳುತ್ತಿದೆ.

ಇನ್ನು ವಿಶ್ವವಿದ್ಯಾನಿಲಯಗಳಲ್ಲಿ ಮಾನವಿಕ ವಿಭಾಗದ ಕೋರ್ಸ್ಗಳನ್ನ ಮುಚ್ಚುವುದು ಎಷ್ಟು ಸಮಂಜಸ! ಇದರ ಬಗ್ಗೆ ಸರ್ಕಾರ ಅವಲೋಕನ ಮಾಡಬೇಕಾಗಿದೆ.

ಹೀಗೆ ನಿರಂತರವಾಗಿ ವಿಶ್ವವಿದ್ಯಾನಿಲಯಗಳನ್ನು ಸುಸ್ಥಿತಿಗೆ ತರದೆ ಅಥವಾ ಬಲಪಡಿಸದೆ ಹೋದಲ್ಲಿ
ಮುಚ್ಚುತ್ತದೆ ಇಲ್ಲವೆಂದರೆ private university ಗೆ ಮಾರಬೇಕಾಗುತ್ತದೆ.

ಬೇಡವಾದ ಯೋಜನೆಗಳಿಗೆ ಸರ್ಕಾರ ಸಾವಿರಾರು ಕೋಟಿ ಹಣವನ್ನು ವ್ಯಯ ಮಾಡುತ್ತಿದೆ ಅಂತ ಕೋಟಿ ಹಣವನ್ನು ವಿಶ್ವವಿದ್ಯಾನಿಲಯಗೆ ಉಪಯೋಗ ಮಾಡಿದರೆ ವಿಶ್ವವಿದ್ಯಾನಿಲಯಗಳು ಖಾಸಗಿ ವಿಶ್ವವಿದ್ಯಾನಿಲಯಗಳಿಗಿಂತ ಹೆಚ್ಚಾಗಿ ಬೆಳೆಯುತ್ತದೆ.

ವಿಶ್ವವಿದ್ಯಾನಿಲಯಗಳು . ಆ ಭಾಗದ ಸಂಸ್ಕೃತಿ. ಕಲೆ. ಭಾಷೆ. ಜ್ಞಾನ ವನ್ನ ಎತ್ತಿ ಹಿಡಿಯುತ್ತವೆ. ಮುಂದಿನ 10. 20 ವರ್ಷಗಳಲ್ಲಿ ಈ ರೀತಿ ಆದರೆ ವಿಶ್ವವಿದ್ಯಾಲಯಗಳು ತನ್ನಷ್ಟಕ್ಕೆ ತಾನೇ ಬಾಗಿಲು ಹಾಕಿಕೊಳ್ಳಬೇಕಾಗುತ್ತದೆ. ಆದರಿಂದ ಉನ್ನತ ಸಚಿವರು ಮತ್ತು ಸರ್ಕಾರಗಳು ಇದರ
ವಿಶ್ವವಿದ್ಯಾನಿಲಯಗಳನ್ನು ಕಟ್ಟುವ ಬಗ್ಗೆ ಆಸಕ್ತಿ ತೆಗೆದುಕೊಂಡು ಈ ದೇಶ ಕಟ್ಟುವ ವಿಶ್ವವಿದ್ಯಾನಿಲಯಗಳ ಕಾಯಕವನ್ನು ಮಾಡಬೇಕಾಗುತ್ತದೆ .

ಡಾ. ಅರುಣ್ ಕುಮಾರ್ HR
MA. Mphil. PhD.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ.ವಾಸುದೇವ ಮೇಟಿ ಬಣ
ಮೈಸೂರು ಮತ್ತು ಕೊಡಗು ಜಿಲ್ಲಾ ಸಂಚಾಲಕರು. ಹಾಗೂ ಮಾಜಿ ಗ್ರಾಮ ಪಂಚಾಯತಿ ಸದಸ್ಯರು.

Continue Reading

Mysore

ಗುರುವಿನ ಕೃಪೆ ಇಲ್ಲದೆ ಗುರಿ ಮುಟ್ಟಲು ಸಾಧ್ಯವಿಲ್ಲ: ದತ್ತ ವಿಜಯಾನಂದ ತೀರ್ಥ ಶ್ರೀ

Published

on

ಮೈಸೂರು, ಜು.21: ಗುರುವಿನ ಕೃಪೆ ಇಲ್ಲದೆ ನಾವು ಯಾವುದೇ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ, ಹಾಗಾಗಿ ಪ್ರತಿನಿತ್ಯ ಗುರು ಸ್ಮರಣೆ ಮಾಡಬೇಕು ಎಂದು ಅವದೂತ ಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.

ಅವಧೂತ ದತ್ತ ಪೀಠದ ಪ್ರಾರ್ಥನಾ ಮಂದಿರದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಪೂಜಾ ಕಾರ್ಯಗಳನ್ನು ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿ ಶ್ರೀಗಳು ಮಾತನಾಡಿದರು.

ನಮ್ಮ ಗುರಿ ಮುಟ್ಟಲು ಭಕ್ತಿ,ಶ್ರದ್ಧೆ ಇರಬೇಕು ಅಂತವರಿಗೆ ಮಾತ್ರ ಗುರು ಕೃಪೆ ಸಿಗುತ್ತದೆ ಎಂದು ತಿಳಿಸಿದರು.

ಇಂದು ವ್ಯಾಸ ಪೂರ್ಣಿಮೆ, ಆ ಭಗವಂತನೇ ವೇದವ್ಯಾಸರ ರೂಪದಲ್ಲಿ ಇಳಿದುಬಂದು ನಮಗೆ ಜ್ಞಾನವನ್ನು ನೀಡಿದ್ದಾನೆ, ಇದು ನಿಜಕ್ಕೂ ಒಂದು ಚಮತ್ಕಾರ. ಎಲ್ಲವೂ ಇರುತ್ತದೆ ಆದರೆ ಜ್ಞಾನವೇ ಇಲ್ಲದಿದ್ದರೆ ಏನೂ ಪ್ರಯೋಜನ ಆಗಲಾರದು, ಒಂದು ವಜ್ರವನ್ನು‌ ಮಗುವಿನ ಕೈಗೆ ಕೊಟ್ಟರೆ ಅದು ಚೆಂಡೆಂದು ಆಟವಾಡುತ್ತದೆ, ಅದೇ ವಜ್ರವನ್ನು ಬಲ್ಲವರಿಗೆ ಕೊಟ್ಟರೆ ಅದರ ಸದುಪಯೋಗ ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿಸಿಕೊಡುತ್ತಾರೆ ಎಂದು ಉದಾಹರಣೆ ಸಹಿತ ವಿವರಿಸಿದರು.

ಗುರುವಿನ ಮೂಲಕ ಜ್ಞಾನ ಸಂಪಾದನೆ ಮಾಡಬೇಕು ಗುರು ಇಲ್ಲದೆ ಗುರಿ ಮುಟ್ಟಲು ಖಂಡಿತ ಸಾಧ್ಯವಿಲ್ಲ ಹಾಗಾಗಿ ಗುರುಸ್ಮರಣೆ ನಿರಂತರವಾಗಿರಬೇಕು. ನಾವು ಈ ದಿನ ವೇದವ್ಯಾಸರನ್ನು ಸ್ಮರಿಸಬೇಕು ಜ್ಞಾನ ಪ್ರತಿಯೊಬ್ಬರಿಗೂ ಬೇಕೇ ಬೇಕು ನಮಗೆಲ್ಲರಿಗೂ ಶ್ರೀ ಕೃಷ್ಣನೇ ಮೊದಲ ಗುರು. ಯುದ್ಧ ಮಾಡಿಸಿದ ಕೃಷ್ಣ ಬೇರೆ, ಗೀತ ಬೋಧನೆ ಮಾಡಿದ ಕೃಷ್ಣ ಬೇರೆ ಎಂದು ನಾವು ತಿಳಿದಿದ್ದೇವೆ ಆದರೆ ಅದೆಲ್ಲ ಮಾಯೆ ಇಬ್ಬರೂ ಕೃಷ್ಣನ್ನು ಒಂದೇ. ಧರ್ಮ ಸಂರಕ್ಷಣೆಗೆ ಕೃಷ್ಣ ಯುದ್ಧ ಮಾಡಿದ ಜ್ಞಾನ ಸಂಪಾದನೆಗೆ ಗೀತ ಬೋಧನೆ ಮಾಡಿದ ಎಂದು ವಿವರಿಸಿದರು.

ಇಂದು ಚಿಕಾಗೋದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳವರು 8,000 ಮಂದಿಯಿಂದ ಗೀತ ಪಠನ ಮಾಡಿಸಿದ್ದಾರೆ, ಇದೊಂದು ಅದ್ಭುತ ಕ್ಷಣ ಈ ಈ ಕಲಿಯುಗದಲ್ಲೂ ಗುರುವಿನ ಕೃಪೆಯಿಂದ ಇಂತಹದ್ದನ್ನು ಮಾತ್ರ ಮಾಡಲು ಸಾಧ್ಯವಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ನಮ್ಮ ಸನಾತನ ಧರ್ಮ ಕಾಪಾಡಲು ಗುರು ಕೃಪೆ ಬೇಕೇ ಬೇಕು, ಭಗವಂತನಿಗೆ ದೊಡ್ಡವರು ಚಿಕ್ಕವರು ಎಂಬ ಬೇಧ ಇಲ್ಲ ಜ್ಞಾನವನ್ನು ಯಾವುದೇ ಕಾರಣಕ್ಕೂ ನಾವು ಮರೆಯಬಾರದು ಅದೇ ಗುರಿ ಆ ಗುರಿ ಮುಟ್ಟಲು ನಮಗೆಲ್ಲ ಜ್ಞಾನ ಮಾರ್ಗವೇ ಮುಖ್ಯ.

ವೇದಾಂತ, ವೈರಾಗ್ಯದಿಂದ ಮಾತ್ರ ಮಾನವನ ಉದ್ಧಾರ ಸಾಧ್ಯ ಹಾಗಾಗಿ ವೇದವ್ಯಾಸರನ್ನು ಮರೆಯಬಾರದು ಅದೇ ರೀತಿ ಶಂಕರಾಚಾರ್ಯರನ್ನು ನಾವು ಮರೆಯಬಾರದು ಅವರು ಇಲ್ಲದಿದ್ದರೆ ಭಗವದ್ಗೀತೆಯೇ ಇರುತ್ತಿರಲಿಲ್ಲ.

ಗುರುಕೃಪೆಯಿಂದ ಅನುಭವ ಬರುತ್ತದೆ ನಮಗೆ ಗುರು ಕೃಪೆ ಸಿಗುತ್ತದೆ ಸ್ಮರಣೆ ಇದ್ದಲ್ಲಿ ಮರಣದ ಭಯ ಇರುವುದಿಲ್ಲ ನಿರಂತರ ಭಗವಂತನ ಸ್ಮರಣೆ ಮಾಡಲು ಚಾತುರ್ಮಾಸ್ಯ ಅತ್ಯುತ್ತಮ.

ಯಾರು ಬೇಕಾದರೂ ಚಾತುರ್ಮಸ್ಯ ವ್ರತ ಮಾಡಬಹುದು‌ ನೀವು ಮಾಡಿ ನಾವೀಗ ಮೈಸೂರಿನಲ್ಲಿ ಮೈಸೂರಿನಲ್ಲೇ ಇಂದಿನಿಂದ ಚಾತುರ್ಮಾಸ್ಯ ವ್ರತ ಕೊಂಡಿದ್ದೇವೆ ನೀವು ಒಂದಲ್ಲ ಒಂದು ಅಂದರೆ ಕ್ಷೀರ ವ್ರತ, ಕ್ಷಾರ ವ್ರತವನ್ನು ಈ ಮಾಸಗಳಲ್ಲಿ ಮಾಡಬಹುದು ಎಂದು ಶ್ರೀ ವಿಜಯಾನಂದ ತೀರ್ಥ ಸ್ವಾಮೀಜಿ ಸಲಹೆ ನೀಡಿದರು.

ಇದೇ ವೇಳೆ ಶತಶ್ಲೋಕಿ ರಾಮಾಯಣ ಬ್ರೈಲ್ ಲಿಪಿಯಲ್ಲಿ ತೆಲುಗು ಮತ್ತು ಕನ್ನಡ ಭಾಷೆಯ ಪುಸ್ತಕಗಳನ್ನು ಶ್ರೀಗಳು ಮತ್ತು ಶಾಸಕ ಟಿ. ಎಸ್ ಶ್ರೀವತ್ಸ ಬಿಡುಗಡೆ ಮಾಡಿದರು.

ಮುಂಜಾನೆಯಿಂದಲೇ ಗುರುಪೂರ್ಣಿಮೆ ಪ್ರಯುಕ್ತ ಶ್ರೀ ದತ್ತ ವಿಜಯಾನಂದ ತೀರ್ಥ‌ ಸಾಮೀಜಿಯವರು ಧಾರ್ಮಿಕ ‌ವಿಧಿವಿಧಾನಗಳನ್ನು ನೆರವೇರಿಸಿದರು.

ಶ್ರೀ ‌ವೆಂಕಟೇಶ್ವರ‌ ಸನ್ನಿಧಿ ಮತ್ತು ‌ಕಾರ್ಯಸಿದ್ದಿ ಹನುಮಾನ್ ಮಂದಿರಗಳಲ್ಲಿ ಪೂಜೆ ನೆರವೇರಿಸಿ ನಂತರ ಶ್ರೀ ಗುರು ದತ್ತಾತ್ರೇಯ ಸ್ವಾಮಿಯ‌ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ‌ದತ್ತ ಮಂದಿರಕ್ಕೆ ಕಿರಿಯ ಶ್ರೀಗಳ ನೇತೃತ್ವದಲ್ಲಿ ‌ತರಲಾಯಿತು.

ಗೋಪೂಜೆ ನೆರವೇರಿಸಿದ ನಂತರ ಶ್ರೀ ದತ್ತ ವಿಜಯಾನಂದ ತೀರ್ಥ‌ ಸಾಮೀಜಿಯವರು ಪ್ರಾರ್ಥನಾ ಮಂದಿರದಲ್ಲಿರುವ ಎಲ್ಲಾ ದೇವರುಗಳಿಗೂ ಪೂಜೆ ಸಲ್ಲಿಸಿದರು.

ತದನಂತರ ಸಂಕಲ್ಪ ಮಾಡಿ‌ ಭಕ್ತ ರಿಂದಲೂ‌ ಸಂಕಲ್ಪ ಮಾಡಿಸಿ‌ದರು.ಗುರು ಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರಃ ಮಂತ್ರವನ್ನು ಎಲ್ಲರೂ ಶ್ರದ್ಧೆ, ಭಕ್ತಿಯಿಂದ ಪಠಿಸಬೇಕೆಂದು ಶ್ರೀಗಳು ತಿಳಿಸಿದರು.

ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ 21 ನೇ ಚಾತುರ್ಮಾಸ್ಯ‌ ವ್ರತದೀಕ್ಷಾ ಮಹೋತ್ವವವೂ ಕೂಡಾ ನೆರವೇರಿತು.

ರಾಜ್ಯ,ಹೊರ ರಾಜ್ಯಗಳಿಂದಲೂ ನೂರಾರು ಭಕ್ತರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ‌ಆಗಮಿಸಿ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‌ಭಕ್ತಿ ಸಮರ್ಪಿಸಿದರು.

Continue Reading

Trending

error: Content is protected !!