Connect with us

Hassan

ಅಂತರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹೆಚ್. ಮಹೇಶ್ ಗೆ ಬಹುಮಾನ

Published

on

ಹಾಸನ: ಥೈಲ್ಯಾಂಡಿನ ರಾಟಚಾಪ್ರುಕ್ ಕ್ರೀಡಾಂಗಣದಲ್ಲಿ ನಡೆದ ಅಂತರ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಹಾಸನ ತಾಲೂಕಿನ ಗೊರೂರುನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರಾದ ಹೆಚ್. ಮಹೇಶ್ ಅವರು ಬೆಳ್ಳಿಯ ಪದಕ ಗೆದ್ದು ಕೀರ್ತಿ ತಂದಿದ್ದು, ನಗರದ ಮಹಾರಾಜ ಪಾರ್ಕ್, ಹೇಮಾವತಿ ಪ್ರತಿಮೆ ಬಳಿ ಇರುವ ನಂದಿನಿ ಡೈರಿ ಮಿಲ್ಸ್ ಪಾರ್ಲರ್ ನಲ್ಲಿ ಭಾರತ್ ಸೇವಾದಳದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಭಾರತ ಸೇವಾದಳ ಸಂಪನ್ಮೂಲ ವ್ಯಕ್ತಿಯಾಗಿದ್ದು , ಹಾಸನ ತಾಲ್ಲೂಕಿನ ಭಾರತ ಸೇವಾದಳ ತಾಲ್ಲೂಕು ಅಧಿನಾಯಕರಾದ ಹೆಚ್. ಮಹೇಶ್ ಅವರು, ೧೧೦ ಮೀಟರ್ಸ್ ಅಡೆತಡೆ ಓಟದಲ್ಲಿ ಬೆಳ್ಳಿಯ ಪದಕವನ್ನು ಪಡೆದಿದ್ದು ಮತ್ತು ಎತ್ತರ ಜಿಗಿತದಲ್ಲಿ ಭಾಗವಹಿಸಿ ಬೆಳ್ಳಿಯ ಪದಕವನ್ನು ಪಡೆಯುವ ಮೂಲಕ ಅಂತರ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ದೇಶಕ್ಕೆ ಮತ್ತು ಕರ್ನಾಟಕ ರಾಜ್ಯದ ಕೀರ್ತಿಯನ್ನು ಹಾಗೂ ಹಾಸನ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿರುವುದಕ್ಕಾಗಿ ಸನ್ಮಾನಿಸಿ ಗೌರವಿಸಲಾಗಿದೆ.

ಇದೆ ವೇಳೆ ಭಾರತ ಸೇವಾದಳದ ಜಿಲ್ಲಾಧ್ಯಕ್ಷರು ಮತ್ತು ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ .ಕೆ. ಕಮಲ್ ಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ಗಿರೀಶ್ ಚನ್ನವೀರಪ್ಪ, ಕೋಶಾಧ್ಯಕ್ಷರಾದ ಜಿ.ಆರ್. ಶ್ರೀನಿವಾಸ್, ಸಮಿತಿ ಸದಸ್ಯರಾದ ಜೆ. ಹರೀಶ್, ವಾಸುದೇವ್, ತಾಲ್ಲೂಕು ಸಮಿತಿ ಉಪಾಧ್ಯಕ್ಷರಾದ ಬಿ. ವರದರಾಜು, ಸಿ.ಆರ್. ಅಮರೇಂದ್ರ, ನಂದಿನಿ ಡೈರಿಯ ಆದರ್ಶ್ ಪ್ರಸಾದ್, ಎಚ್. ಮಹೇಶ್, ಶ್ರೀಮತಿ ದೀಪಾ ಮಹೇಶ್, ಮಹೇಶ್ ರವರ ಸುಪುತ್ರಿ ಚಾರ್ವಿ, ವಲಯ ಸಂಘಟಕರಾದ ಶ್ರೀಮತಿ ವಿ.ಎಸ್. ರಾಣಿ, ತಾಲ್ಲೂಕು ಸಮಿತಿ ಮತ್ತು ಭಾರತ ಸೇವಾದಳದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಗೌರವ ಸಮರ್ಪಣೆಯ ಸಲುವಾಗಿ ಕೇಕ್ ಕತ್ತರಿಸಿ ಸಿಹಿ ತಿನಿಸಿ .ಶಾಲು ಹೊದಿಸಿ ಖಾದಿಹಾರ ಮತ್ತು ಗಾಂದಿ ಟೋಪಿ ಮತ್ತು ಹೂಗುಚ್ಚ ನೀಡಿ ಹಣ್ಣಿನ ಬುಟ್ಟಿ ನೀಡುವ ಮೂಲಕ ತುಂಬು ಹೃದಯದ ಅಭಿನಂದನೆಯನ್ನು ಸಲ್ಲಿಸಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Hassan

ಟಿಕೆಟ್ ಪರಿಶೀಲನೆ ವೇಳೆ ಭೀಕರ ಅಪಘಾತ: ಲಾರಿ ಗುದ್ದಿ KSRTC ಟಿಕೆಟ್ ತನಿಖಾಧಿಕಾರಿ ಸ್ಥಳದಲ್ಲೇ ಸಾ*ವು

Published

on

ಹಾಸನ : ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಸಮೀಪ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ KSRTC ಟಿಕೆಟ್ ತಪಾಸಣಾ ಇನ್ಸ್‌ಪೆಕ್ಟರ್‌ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾಸನ ವಿಭಾಗೀಯ ತನಿಖಾ ಸಂಚಾರ ನಿಯಂತ್ರಕ ದಳದ ತಪಾಸಣಾ ಇನ್ಸ್‌ಪೆಕ್ಟರ್ ಶಕುನಿಗೌಡ (57) ಮೃತ ಅಧಿಕಾರಿ. ನಲ್ಲೂರು-ಮಗ್ಗೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ರಾಜ್ಯ ಸಾರಿಗೆ ಬಸ್ ಅನ್ನು ತಡೆದು, ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸುವ ಉದ್ದೇಶದಿಂದ ಅವರು ರಸ್ತೆ ದಾಟುತ್ತಿದ್ದ ವೇಳೆ, ವೇಗವಾಗಿ ಬಂದ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಶಕುನಿಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ನಂತರ ಕ್ಯಾಂಟರ್ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಚಾಲಕನ ಪತ್ತೆಗೆ ತನಿಖೆ ಮುಂದುವರಿದಿದೆ.

Continue Reading

Hassan

ವರ್ತಕರು ಕಾಫಿ, ಏಲಕ್ಕಿ, ಮೆಣಸು ಕಳ್ಳತನ ಪ್ರಕರಣಗಳು ನಡೆಯದಂತೆ ಮುಂಜಾಗ್ರತಾಕ್ರಮವನ್ನು ಅನುಸರಿಸಿ: ಡಿವೈಎಸ್‌ಪಿ ಎಸ್ .ಕೆ.ಮಾಲತೀಶ

Published

on

ಸಕಲೇಶಪುರ : ಇತ್ತೀಚಿನ ದಿನಗಳಲ್ಲಿ ಕಾಫಿ ಬೆಲೆಯಲ್ಲಿ ಏರಿಕೆ ಇರುವುದರಿಂದ ಕಾಫಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಳೆಗಾರರು ಹಾಗೂ ವರ್ತಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಕಳ್ಳತನ ಪ್ರಕರಣಗಳನ್ನು ಕಡಿಮೆ ಮಾಡಬೇಕು ಎಂದು ಸಕಲೇಶಪುರ ಪೊಲೀಸ್ ಉಪ ಆಧೀಕ್ಷಕ  ಎಸ್ .ಕೆ. ಮಾಲತೀಶ ಹೇಳಿದರು


ಗ್ರಾಮಾಂತರ ಠಾಣೆ ಸಕಲೇಶಪುರದಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಸಕಲೇಶಪುರ ಪೊಲೀಸ್ ಉಪಾಧೀಕ್ಷಕ ಸಂಯೋಗದಲ್ಲಿ ಕಾಫಿ ವರ್ತಕರ ಸಭೆ 2025 ಯನ್ನು ಹಮ್ಮಿಕೊಳ್ಳಯಾಗಿತ್ತು. ಸಭೆಯಲ್ಲಿ ಬೆಳೆಗಾರರಿಗೆ ಮತ್ತು ವರ್ತಕರಿಗೆ ಕಾಫಿ,ಏಲಕ್ಕಿ,ಮೆಣಸು ಕಳ್ಳತನ ಪ್ರಕರಣಗಳು ನಡೆಯದಂತೆ ಮುಂಜಾಗೃತಕ್ರಮದ ಬಗ್ಗೆ ಸೂಚನೆ ನೀಡಿದರು.

ವರ್ತಕರು ಕಾಫಿ,ಏಲಕ್ಕಿ,ಮೆಣಸು ಮಾರಾಟ ಮಾಡಲು ಬರುವವರ ಬಳಿ ಜಮೀನಿನ ಆರ್‌ಟಿಸಿ ಪಡೆದುಕೊಳ್ಳಬೇಕು,ಹಾಗೂ ತಮ್ಮ ಅಂಗಡಿಗಳಲ್ಲಿ ಅಂಗಡಿಯ ಒಳ ಬಾಗ ಮತ್ತು ಅಂಗಡಿ ಮುಂಬಾಗ ಹಾದುಹೋಗಿರುವ ರಸ್ತೆಯ ದೃಶ್ಯಗಳು ಕಾಣುವ ಹಾಗೆ ಸಿಸಿ ಕ್ಯಾಮೆರಗಳನ್ನು ಕಡ್ಡಾಯವಾಗಿ ಆಳವಡಿಸಿ ಕನಿಷ್ಟ 3 ತಿಂಗಳ ಬ್ಯಾಕ್ ಅಪ್ ಇಟ್ಟುಕೊಳ್ಳುಬೇಕು ಮತ್ತು ಅಂಗಡಿಗಳಲ್ಲಿ ಒಂದು ರಿಜಿಸ್ಟರ್ ಇಟ್ಟು ಅದರಲ್ಲಿ ಪ್ರತಿ ದಿನ ಅವರ ಬಳಿಗೆ ಕಾಫಿ,ಏಲಕ್ಕಿ,ಮೆಣಸು ಮಾರಾಟ ಮಾಡಲು ಬರುವವರ ವಿಳಾಸ, ಮೊಬೈಲ್ ನಂಬರ್ ಹಾಗೂ ಅವರಿಂದ ಖರೀದಿಸಿದ ಕಾಫಿಯ ವಿವರವನ್ನು ನಮೂದು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಅನುಮಾನಸ್ಪದ ವ್ಯಕ್ತಿಗಳು ಕಾಫಿ,ಏಲಕ್ಕಿ,ಮೆಣಸು ಮಾರಲು ಬಂದಾಗ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು, ವರ್ತಕರು ಹಾಗೂ ಬೆಳೆಗಾರರು ಮುಂಜಾಗ್ರತಾಕ್ರಮವನ್ನು ವಹಿಸುವ ಮೂಲಕ ಕಳ್ಳತನ ಕಡಿಮೆ ಮಾಡಬಹುದು.ಇದಕ್ಕೆ ತಮ್ಮೆಲ್ಲರ ಸಹಕಾರ ಅತಿ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

ರಾತ್ರಿ ಗಸ್ತಿನ ವೇಳೆ ಅನುಮಾನಸ್ಪದವಾಗಿ ಓಡಾಡುವ ಮಾರುತಿ 800 ಕಾರು,ಓಮಿನಿ ಕಾರು. ಗೂಡ್ಸ್ ಆಟೋಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡುವಂತೆ ಬೀಟ್‌ ಸಿಬ್ಬಂದಿ ಮತ್ತು ರಾತ್ರಿ ರೌಂಡ್ಸ್ ಅಧಿಕಾರಿಗಳಿಗೆ ಸೂಚಿಸಿದರು.

 


ಈ ಸಂದರ್ಭದಲ್ಲಿ ಯಸಳೂರು ಠಾಣೆ ಪಿ.ಎಸ್.ಐ ಸಲ್ಮಾನ್ ಖಾನ್ ತಂಬುಳ್ಳಿ, ನಗರ ಠಾಣೆ ಇನ್ಸ್‌ಪೆಕ್ಟರ್‌ ವನರಾಜ್, ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್‌ ಪ್ರಸನ್ನ ಕುಮಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ವರ್ತಕರು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು .

Continue Reading

Hassan

ಡಿ. 16ಕ್ಕೆ ಖಾಸಗಿ ವಿದ್ಯಾಸಂಸ್ಥೆ ವಿರುದ್ಧ ಪ್ರತಿಭಟನೆ : ಎಂ.ಡಿ.ಬಾಲರಾಜು ಆಗ್ರಹ

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು: ತಾಲೂಕಿನ ಹುಣಸನಾಳು ಗ್ರಾಮದ ಬಳಿ ಇರುವ ಖಾಸಗಿ ವಿದ್ಯಾ ಸಂಸ್ಥೆಯೂ ಕಾನೂನು ಬಾಹಿರವಾಗಿ ಶಾಲೆಯನ್ನು ನಡೆಸುತ್ತಿದ್ದು, ಇದೇ ತಿಂಗಳ ಡಿ. 16ರಂದು ಶಾಲೆ ಮುಂಭಾಗ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಯುವ ಮುಖಂಡ ಎಂ.ಡಿ ಬಾಲರಾಜು ತಿಳಿಸಿದರು.

ನಗರದ ಪತ್ರಕರ್ತ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾಸಗಿ ವಿದ್ಯಾ ಸಂಸ್ಥೆಯೂ ಒಂದರಿಂದ ಐದನೇ ತರಗತಿವರೆಗೆ ಮಾತ್ರ ರಾಜ್ಯ ಪಠ್ಯಕ್ರಮಕ್ಕೆ ಪರವಾನಾಗಿ ಪಡೆದು, ಐಸಿಎಸ್‌ಸಿ ಕೇಂದ್ರ ಪಠ್ಯಕ್ರಮ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಇತ್ತೀಚಿಗೆ 6ನೇ ತರಗತಿಗೆ ಪಾಠ ಮಾಡುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆ. ಶಿಕ್ಷಣ ಇಲಾಖೆಗೆ ಒಂದು ಶುಲ್ಕದ ಮಾಹಿತಿ ನೀಡಿ, ಪೋಷಕರಿಗೆ ಮತ್ತೊಂದು ಶುಲ್ಕದ ಪಟ್ಟಿ ನೀಡಿ ಹಗಲು ದರೋಡೆ ಮಾಡುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ ಇಲಾಖೆಯ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಅಂಚೆ ಇಲಾಖೆ ಕೆಲಸದ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಕಳೆದ ತಿಂಗಳು ಪೋಷಕರು ಪ್ರತಿಭಟನೆ ಮಾಡಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕೇಸು ದಾಖಲು ಮಾಡುವಂತೆ, ಹಾಗೂ ಹೆಚ್ಚುವರಿ ಶುಲ್ಕ ವಾಪಸ್ ನೀಡುವಂತೆ ಡಿಡಿಪಿಐ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆದರೆ ಅದು ಕೂಡ ಶಾಲಾ ಆಡಳಿತ ಮಂಡಳಿಗೆ ಸಾಧ್ಯವಾಗಿಲ್ಲ. ಬಲವಂತವಾಗಿ ಆರನೇ ತರಗತಿ ವಿದ್ಯಾರ್ಥಿಗಳಿಗೆ ಟಿಸಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಖಾಸಗಿ ವಿದ್ಯಾಸಂಸ್ಥೆ ಜೊತೆ ಶಾಮೀಲಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಂಚನೆ ಪ್ರಕರಣದಲ್ಲಿ ಖಾಸಗಿ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರ ವಿರುದ್ಧ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಬೇಕು. ಇನ್ನು ಮೂರು ದಿನಗಳ ಒಳಗೆ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಡಿ.16ರಂದು  ಶಾಲೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪೋಷಕರಾದ ರುದ್ರೇಶ್, ಪವಿತ್ರ ಕುಮಾರ್, ಅಮರನಾಥ್, ಪ್ರಶಾಂತ್, ದೇವಪ್ಪ, ಗಣೇಶ್ ಗಿರೀಶ್ ಅಶೋಕ್‌ ಹಾಗೂ ಪ್ರಭು  ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.

Continue Reading

Trending

error: Content is protected !!