Connect with us

Hassan

ಈ ನಾಡಿನ ಜನ ನನಗೆ ಪೂರ್ಣಾವಧಿ ಸಿಎಂ ಆಗಲು ಅವಕಾಶ ಕೊಡಲಿಲ್ಲ: ಹೆಚ್.ಡಿ. ಕುಮಾರಸ್ವಾಮಿ

Published

on

ಹಾಸನ: ತಮ್ಮ ಜೀವವನ್ನು ಲೆಕ್ಕಿಸದೇ ಶ್ರಮವಹಿಸಿ ದೇಶ ಸೇವೆ ಮಾಡುವವರನ್ನು ಮರೆಯಬಾರದು. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಸಹಕಾರದಲ್ಲಿ ಕೇಂದ್ರ ಗೃಹ ಮತ್ತು ರಕ್ಷಣಾ ಸಚಿವರೊಂದಿಗೆ ಗಮನಸೆಳೆದು ಸ್ಪಂದಿಸುವ ಕೆಲಸ ಮಾಡುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸವ್ಯಕ್ತಪಡಿಸಿದರು.

ನಗರದ ಹೊರವಲಯ ಕೆಂಚಟ್ಟಹಳ್ಳಿಯಲ್ಲಿ ನಿರ್ಮಿಸಿರುವ ನಿವೃತ್ತ ಅರೆಸೇನಾ ಪಡೆ ಯೋಧರ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಅರೆಸೇನಾ ಯೋಧರು, ದೇಶ ಸೇನೆಯ ಮೂರು ವಿಭಾಗಗಳ ಯೋಧರು ಮಾಡುವ ಕೆಲಸವನ್ನು ಮಾಡುತ್ತಾರೆ. ಅರೆಸೇನಾ ಪಡೆಯ ಕಾರ್ಯವನ್ನು, ಜೀವ ಲೆಕ್ಕಿಸದೆ ಶ್ರಮವಹಿಸಿ ಮಾಡುವ ಕೆಲಸವನ್ನೂ ಸರ್ಕಾರ ಮರೆಯಬಾರದು. ನಾನು ಅರೆಸೇನಾ ಪಡೆಯ ಕುಟುಂಬದ ನೋವು ಅರಿತುಕೊಂಡಿದ್ದೇನೆ. ಸೈನಿಕರ ಆರೋಗ್ಯ ಶಿಬಿರಕ್ಕೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು. ಉಳಿದ ನಿಮ್ಮ ಬೇಡಿಕೆ ಈಡೇರಿಕೆಗೆ ಸ್ವಲ್ಪ ಸಮಯ ಕೊಡಿ, ದೇವೇಗೌಡರ ಸಹಕಾರದಿಂದ ಕೇಂದ್ರ ಸರ್ಕಾರದ ಗಮನ ಸೆಳೆದು ಸ್ಪಂದಿಸುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ದೇಶದ ಒಳಗಿರುವ ರಾಜಕಾರಣಿಗಳು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂದು ನೀವೆಲ್ಲ ಗಮನಿಸುತ್ತಿದ್ದೀರಿ. ನಾನು ಎರಡು ಬಾರಿ ಸಿಎಂ ಆದರೂ ಹೆಚ್ಚು ಸಮಯ ಸಿಗಲಿಲ್ಲ. ಪೂರ್ಣಾವಧಿ ಸಿಕ್ಕಿದ್ದರೆ ಮಾದರಿ ಸರ್ಕಾರ ನಡೆಸುತ್ತಿದ್ದೆ. ಅದು ನನ್ನ ದುರಾದೃಷ್ಟ ಎಂದು ಭಾವಿಸುವುದಿಲ್ಲ ಎಂದರು.

ನನಗೆ ಸಿಎಂ ಆಗಿ ಅದಿಕಾರ ನಡೆಸಲು ಎರಡು ಬಾರಿ ಅವಕಾಶ ಸಿಕ್ಕಿದ್ದು, ಬಹಳ ಕಡಿಮೆ ಸಮಯ ಈ ನಾಡಿನ ಜನ ನನಗೆ ಪೂರ್ಣ ಅವದಿ ಕೊಡಲಿಲ್ಲ. ಕೊಟ್ಟಿದ್ದರೆ. ಪೂರ್ಣವಧಿಯಾಗಿ ಈ ರಾಜ್ಯವನ್ನು ಮಾದರಿ ರಾಜ್ಯವಾಗಿ ಮಾಡಿ ತೋರಿಸುತ್ತಿದ್ದೆ. ನಮ್ಮ ಪಕ್ಷ ಮುಗಿದೆ ಹೋಯ್ತು ಅಂದ್ರು. ಈಗ ನಾನು ಕೇಂದ್ರದಲ್ಲಿ ಮಂತ್ರಿ ಆಗಿದ್ದಾನೆ. ಆಂಧ್ರದಲ್ಲಿ ಮುಚ್ಚೇ ಹೋಗಿದ್ದ ಒಂದು ಫ್ಯಾಕ್ಟರಿ ಮರು ಆರಂಭ ಮಾಡಿದೆನೆ. ಅಲ್ಲಿ ಜನ ನನ್ನ ಫೋಟೊಗೆ ಹಾಲಿನ ಅಭಿಷೇಕ ಮಾಡ್ತಾರೆ. ರಾಜ್ಯದಲ್ಲಿ ವಿಶ್ವೇಶ್ವರಯ್ಯ ಫ್ಯಾಕ್ಟರಿ ಉಳಿಸಲು ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು.

ಈ ರಾಜ್ಯ ಸರ್ಕಾರ ೨.೧೦ ಲಕ್ಷ ಕೋಟಿ ಸಾಲ ಮಾಡಿಯಾಗಿದ್ದು, ಕೇವಲ ೧೮ ತಿಂಗಳಲ್ಲಿ ಇಷ್ಟು ಸಾಲ ಆಗಿದೆ. ರಾಜ್ಯದಲ್ಲಿ ಒಟ್ಟು ಸಾಲ ೭ ಲಕ್ಷ ಕೋಟಿ ದಾಟಿದೆ. ತಿಂಗಳಿಗೆ ಎರಡು ಸಾವಿರ ಹಣವನ್ನು ಮಹಿಳೆಯರಿಗೆ ಕೊಡ್ತಾರೆ. ಇದರಿಂದ ಕುಟುಂಬ ನಡೆಸೋಕೆ ಸಾದ್ಯವೇ? ಈಗಲೂ ಕೂಡ ಹಲವು ಹೆಣ್ಣು ಮಕ್ಕಳು ನೆರವಿಗಾಗಿ ನಮ್ಮ ಮನೆ ಹತ್ರ ಬರ್ತಾರೆ. ಎರಡು ಸಾವಿರದಲ್ಲಿ ಜೀವನ ನಡೆಯಿದಾಗಿದ್ರೆ ಅವರು ಯಾಕೆ ಬರ್ತಾರೆ! ಸರ್ಕಾರ ೭ ಲಕ್ಷ ಕೋಟಿ ಸಾಲ ಮಾಡಿ ಅರಾಮಾಗಿ ಓಡಾಡ್ತಾರೆ. ನೀವು ಒಂದೊ ಎರಡು ಲಕ್ಷ ಸಾಲ ಮಾಡಿ ಯಾಕೆ ಹೆದರ್ ತೀರಾ ಧೈರ್ಯದಿಂದ ಓಡಾಡಿ ಈ ಮೈಕ್ರೋ ಫೈನಾನ್ಸ್ ಕಿರುಕುಳ ಅಂತ ಹೆದರಬೇಡಿ. ಸಾಲ ಮಾಡಿ ಮನೆ ಕಟ್ಟಿ, ಮಕ್ಕಳನ್ನು ಓದಿಸಿದರೆ ಆ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೀರಾ, ರಾಜ್ಯ ಸರ್ಕಾರದ ಒಟ್ಟು ಸಾಲ ೭ ಲಕ್ಷ ಕೋಟಿ ದಾಟಿದೆ. ಅವರೇ ನಾಚಿಕೊಳ್ಳುತ್ತಿಲ್ಲ. ನೀವು ಯಾಕೆ ಆತ್ಮಹತ್ಯೆ ಮಾಡುಕೊಳ್ಳುತ್ತೀರಾ ಎಂದು ಸಾಲಗಾರರಿಗೆ ಧೈರ್ಯದ ಮಾತನ್ನು ತಿಳಿಸಿದರು.

ತಪ್ಪುಗಳು ಆಗುತ್ತವೆ, ಆ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಿ, ನಮಗೆ ಸಿಕ್ಕಿರುವ ಈ ಅವಕಾಶವನ್ನು ಜನರಿಗೆ ಧಾರೆ ಎರೆಯುತ್ತೇನೆ, ದುರುಪಯೋಗ ಪಡಿಸಿ ಕೊಳ್ಳುವುದಿಲ್ಲ. ನನ್ನನ್ನು ಮನೆಯ ಮಗ, ಕುಟುಂಬದ ಸದಸ್ಯ ಎಂದು ಸ್ವೀಕಾರ ಮಾಡುತ್ತೀರೋ ಅದು ನಿಮಗೆ ಬಿಟ್ಟಿದ್ದು. ದೇವೇಗೌಡರು ಅನಾರೋಗ್ಯದ ನಡುವೆಯೂ ರಾಜ್ಯಸಭೆಯಲ್ಲಿ ನದಿ ಜೋಡಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ನೇರಳೆ, ಹುಣಸೆ, ಹಲಸು ಬೆಳೆಯುವ ರೈತರಿಗಾಗಿ ನಿಗಮ ಮಾಡುವಂತೆ ರಾಜ್ಯ ಸಭೆಯಲ್ಲಿ ದೇವೇಗೌಡರು ಮನವಿ ಮಾಡಿದ್ದಾರೆ. ನಮ್ಮ ತಂದೆ ಬದುಕಿರುವ ಒಳಗೆ ಈ ದೇಶ, ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನುಡಿದರು.

ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣರ ಆಶಿರ್ವಾದದಿಂದ ಇಂದು ಸೈನಿಕರ ಭವನ ಉದ್ಘಾಟನೆಗೊಂಡಿದೆ. ಜಿಲ್ಲೆಯಲ್ಲಿ ಇಂಜಿನಿಯರಿಂಗ್, ೧೧ಕ್ಕೂ ಹೆಚ್ಚು ಡಿಪ್ಲೊಮಾ ಕಾಲೇಜುಗಳಿವೆ. ಬೇರೆ ಬೇರೆ ದೇಶಗಳಿಗೆ ಹಾಗೂ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಬೇಕಾಗಿದೆ. ಮುಂದೆ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಜಿಲ್ಲೆಯಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡಿ, ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಮನವಿ ಪತ್ರವನ್ನು ಕುಮಾರಸ್ವಾಮಿ ಅವರಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಎ.ಮಂಜು, ಹೆಚ್.ಕೆ. ಕುಮಾರಸ್ವಾಮಿ, ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಜಿಪಂ ಮಾಜಿ ಅಧ್ಯಕ್ಷ, ಸ್ವಾಮಿಗೌಡ, ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಮಂಜೇಗೌಡ, ತಾಪಂ ಮಾಜಿ ಅಧ್ಯಕ್ಷ ದಿನೇಶ್, ಬಿದರಿ ಕೆರೆ ಜಯರಾಂ, ಜೆಡಿಎಸ್. ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಅರೆ ಸೇನಾಪಡೆ ಜಿಲ್ಲಾಧ್ಯಕ್ಷ ಪಿ.ವಿ. ನಾಗೇಶ್, ದೆಹಲಿಯ ಸಿ.ಎ.ಪಿ.ಎಫ್. ಜನರಲ್ ಸೆಕ್ರಟ್ರಿ ರಣಬೀರ್ ಸಿಂಗ್, ಹೆಚ್.ಆರ್. ಸಿಂಗ್, ಎಂಪಿಎಲ್. ರೆಡ್ಡಿ, ರಾಮೇಗೌಡ, ಉಪಾಧ್ಯಕ್ಷ ಎಂ.ಜಿ. ರಮೇಶ್ ಅರೆಸೇನಾ ಪಡೆಯ ಸಂಘದ ಗೌರವಾಧ್ಯಕ್ಷ ನವಾಬ್ ಖಾನ್, ಉಪಾಧ್ಯಕ್ಷ ಎಂ.ಜಿ. ರಮೇಶ್, ನಾಗಪ್ಪ, ಯು. ನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.

Continue Reading

Hassan

ಹಾಸನ| ಸಂಸದ ಶ್ರೇಯಸ್‌ ಎಂ.ಪಟೇಲ್‌ ಓಡಿಶಾ ರಾಜ್ಯದ ಕಾಂಗ್ರೆಸ್ ಘಟಕದ ವೀಕ್ಷಕರಾಗಿ ನೇಮಕ

Published

on

ಹಾಸನ: ಹಾಸನ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಶ್ರೇಯಸ್ ಎಂ.ಪಟೇಲ್ ಅವರಿಗೆ ಎಐಸಿಸಿ ದೊಡ್ಡ ಜವಾಬ್ದಾರಿ ನೀಡಿದ್ದು, ಅವರನ್ನು ಓಡಿಶಾ ರಾಜ್ಯದ ಕಾಂಗ್ರೆಸ್ ಘಟಕದ ವೀಕ್ಷಕರಾಗಿ ಆಯ್ಕೆ ಮಾಡಿದೆ.

ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರುವ ಶ್ರೇಯಸ್ ಅವರನ್ನು ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ಸಂಘಟನ್ ಶ್ರೀಜನ್ ಅಭಿಯಾನದ ಅಂಗವಾಗಿ ಓಡಿಶಾ ರಾಜ್ಯದ ಕಾಂಗ್ರೆಸ್ ಘಟಕದ ವೀಕ್ಷಕರಾಗಿ ನೇಮಿಸಿದೆ.

ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಯುವ ಸಂಸದರಿಗೆ ದೊಡ್ಡ ಜವಾಬ್ದಾರಿ ಸಿಕ್ಕಿರುವುದಕ್ಕೆ ಹಾಸನ ಜಿಲ್ಲೆಗೆ ಹೆಮ್ಮೆ ಮತ್ತು ಸಂತಸದ ವಿಷಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಹರ್ಷ ವ್ಯಕ್ತಪಡಿಸಿದೆ.

ಈ ಮಹತ್ವದ ಜವಾಬ್ದಾರಿ ಸಂಸದರ ಪಕ್ಷ ನಿಷ್ಠೆ ಪರಿಶ್ರಮ ಹಾಗೂ ಸಂಘಟನೆಗೆ ನೀಡುತ್ತಿರುವ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಜಿಲ್ಲೆಯ ಹಲವು ಮುಖಂಡರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.

Continue Reading

Hassan

ಹಾಸನ: ಚಲಿಸುತ್ತಿದ್ದ ರೈಲಿನ ಬೋಗಿಯ ಕೆಳಗೆ ಕಾಣಿಸಿಕೊಂಡ ಸ್ಪಾರ್ಕ್‌

Published

on

ಹಾಸನ: ಹಾಸನ ಜಂಕ್ಷನ್‌ನ ರೈಲ್ವೆ ನಿಲ್ದಾಣದಲ್ಲಿ  ಚಲಿಸುತ್ತಿದ್ದ ರೈಲಿನ ಬೋಗಿಯ ಕೆಳಗೆ ಬೆಂಕಿ ಕಾಣಿಸಿಕೊಂಡಿದೆ.

ಚಲಿಸುತ್ತಿದ್ದ ರೈಲಿನ ಬೋಗಿಯ ಕೆಳಗೆ ಸ್ಪಾರ್ಕ್ ಕಾಣಿಸಿಕೊಂಡ ತಕ್ಷಣ ಎಚ್ಚೆತ್ತುಕೊಂಡ ಹಾಸನ ರೈಲ್ವೆ ನಿಲ್ದಾಣದ ಸಿಬ್ಬಂದಿಗಳು ಬೆಂಕಿ ನಂದಿಸುವ ಮೂಲಕ ಅಪಾಯ ತಪ್ಪಿಸಿದ್ದಾರೆ.

ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಾಸನ ರೈಲು ನಿಲ್ದಾಣ ಪ್ಲಾಟ್ ಸಂಖ್ಯೆ ಎರಡರಲ್ಲಿ ನಿಂತಿದ್ದಾಗ ಬೋಗಿವೊಂದರ ಕೆಳ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಪ್ರಯಾಣಿಕರು, ರೈಲ್ವೆ ನಿಲ್ದಾಣದಲ್ಲಿದ್ದ ಕೊಂಚ ಗಾಬರಿಗೊಂಡಿದ್ದಾರೆ. ಅಲ್ಲದೇ  ರೈಲು ಸರಿಪಡಿಸಿದನ್ನು ಖಾತರಿ ಮಾಡಿಕೊಂಡ ಮೇಲೆ ತಡವಾಗಿ ಹೊರಟಿದೆ.

Continue Reading

Hassan

ಹಾಸನ| ಶಿರಾಡಿ ಘಾಟ್‌ ಬಂದ್‌: ಸಕಲೇಶಪುರ-ಮಂಗಳೂರು ಮಾರ್ಗದ ವಾಹನಗಳನ್ನು ಚಾರ್ಮಾಡಿ ಮೂಲಕ ಸೂಚನೆ

Published

on

ಹಾಸನ : ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣಾರ್ಭಟ ಜೋರಾಗಿದೆ. ಈ ಮಧ್ಯೆ ಟ್ರಾಫ್‌ ಜಾಮ್ ತೆರವುಗೊಳಿಸಲು ಪೊಲೀಸರ ಹರಸಾಹಸ ಮಾಡುತ್ತಿದ್ದು, ಸಕಲೇಶಪುರ-ಮಂಗಳೂರು ಮಾರ್ಗದ ವಾಹನಗಳನ್ನು ಚಾರ್ಮಾಡಿ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.

 

ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟ ಪ್ರದೇಶದಲ್ಲಿ ನಾಲ್ಕೈದು ತಾಸುಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂಕುಸಿತ ಮಾರ್ಗದಲ್ಲಿ ಭೂ ಕುಸಿತದ ಪ್ರಮಾಣ ಹೆಚ್ಚಾಗಿದ್ದು, ವಾಹನ ಸಂಚಾರ ಬಂದ್ ಆಗಿದೆ.

 

 

Continue Reading

Trending

error: Content is protected !!