Mysore
ಚುನಾವಣೆ ನಂತರ ಪಂಚ ಗ್ಯಾರಂಟಿಗಳು ರದ್ದಾದಾಗಲಿದ್ದು, ಇವರ ವಂಚನೆ ಗೊತ್ತಾಗಲಿದೆ : ಎಚ್. ಡಿ. ಕುಮಾರಸ್ವಾಮಿ
ಸಾಲಿಗ್ರಾಮ – ದಿನಗಳು ಕಳೆದಂತೆ ಗ್ಯಾರಂಟಿಗಳು ಈ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಬರಿದು ಮಾಡುವತ್ತ ಸಾಗುತ್ತಿದ್ದು ಲೋಕಸಭೆ ಚುನಾವಣೆ ಕಳೆದ ನಂತರ ಪಂಚ ಗ್ಯಾರಂಟಿ ಯೋಜನೆಗಳು ರದ್ದಾಗಲಿದ್ದು ಆನಂತರ ಜನರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ವಂಚಿಸುತ್ತಿರುವ ಪರಿ ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ನೆಪದಲ್ಲಿ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದೆ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರು. ಸರ್ಕಾರ ಶಾಶ್ವತ ಯೋಜನೆಗಳು ಮತ್ತು ಜನರಿಗೆ ಅನುಕೂಲವಾಗುವ ಕಾರ್ಯಕ್ರಮವನ್ನು ಜಾರಿಗೆ ತರುವ ಬದಲು ಸಾಲ ಮಾಡಿ ಪುಕ್ಕಟೆ ಯೋಜನೆಗಳನ್ನು ನೀಡುವ ಮೂಲಕ ಜನರ ಮೇಲೆ ಸಾಲದ ಹೊರೆ ಹೇರುತ್ತಿದ್ದು ಭವಿಷ್ಯದಲ್ಲಿ ಇದು ದೊಡ್ಡ ಗಂಡಾಂತರ ತಂದೊಡ್ಡಲಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತದಾರರಿಗೆ ಸುಳ್ಳುಗಳ ಸರಮಾಲೆಯನ್ನೇ ಹೇಳಿಕೊಂಡು ಬರುತ್ತಿದ್ದು ಇದನ್ನು ಯಾರು ನಂಬಬಾರದು ಎಂದ ಮಾಜಿ ಮುಖ್ಯಮಂತ್ರಿಗಳು ನಾನು ಆಯ್ಕೆಯಾದರೆ ಕೇಂದ್ರ ಸರ್ಕಾರದಲ್ಲಿ ಉನ್ನತ ಸ್ಥಾನಮಾನ ದೊರಕುವ ವಿಶ್ವಾಸವಿದ್ದು ಆ ನಂತರ ಕ್ಷೇತ್ರ ಮತ್ತು ರಾಜ್ಯದ ಅಭಿವೃದ್ಧಿಗೆ ಬದ್ಧನಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನನ್ನನ್ನು ಚುನಾವಣೆಗೆ ನಿಲ್ಲುವಂತೆ ಹೇಳಿದ್ದರಿಂದ ಸ್ಪರ್ಧೆ ಮಾಡಿದ್ದು ಇದು ಭವಿಷ್ಯದಲ್ಲಿ ರಾಜ್ಯದ ರೈತರ ಸಹಕಾರಕ್ಕೆ ನಾನು ಬಂದು ಅವರ ಪರವಾಗಿ ಕೆಲಸ ಮಾಡಲಿ ಎಂಬ ಉದ್ದೇಶವಿರಬಹುದೆಂದು ನುಡಿದರು.
ವಿದಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಸಚಿವರಾದ ಎಂ.ಪಿ. ನಾಡಗೌಡ, ಸಾರಾ ಮಹೇಶ್ ಮಾತನಾಡಿದರು. ಪ್ರಚಾರ ಸಭೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಾ.ರಾ. ಮಹೇಶ್ ಅವರನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಬೃಹತ್ ಹಣ್ಣಿನ ಹಾರಗಳನ್ನು ಹಾಕುವ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ದಿವ್ಯ, ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯದರ್ಶಿ ಎಚ್. ಡಿ. ಪ್ರಭಾಕರ್ ಜೈನ್, ಜಿ.ಪಂ.ಮಾಜಿ ಮಾಜಿ ಸದಸ್ಯರಾದ ಅಮಿತ್ ವಿ.ದೇವರಹಟ್ಟಿ, ಎಂ.ಟಿ.ಕುಮಾರ್. ಸಿ.ಜೆ.ದ್ವಾರಕೀಶ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಸಾಲಿಗ್ರಾಮ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳು ಮದು, ಹುಣಸೂರು ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜ ಒಡೆಯರ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ, ಜಿಲ್ಲಾ ಗ್ರಾಮಾಂತರ ಬಿಜೆಪಿ ಮಾಜಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಜಿಲ್ಲಾ ಜೆಡಿಎಸ್ ಮುಖಂಡ ಹಳಿಯೂರು ಎಚ್. ಕೆ. ಮಧುಚಂದ್ರ, ಎಸ್. ಟಿ. ಕೀರ್ತಿ,. ಜೆಡಿಎಸ್ ಮುಖಂಡರಾದ , ಬಿ.ರಮೇಶ್, ಎಸ್.ಟಿ.ಕೀರ್ತಿ, ಹೆಚ್.ಆರ್.ಮದುಚಂದ್ರ, , ಗುತ್ತಿಗೆದಾರ ಹೆಚ್.ಕೆ.ಕೀರ್ತಿವಕೀಲ ರಮೇಶ್ , ಇನ್ನಿತರ,ಇದರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಗಂಬೀರ ಆರೋಪ ಮಾಡಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್. ಡಿ. ಕುಮಾರಸ್ವಾಮಿ ಅವರ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿದ್ದು ಇದರಿಂದ ರೈತರಿಗೆ ತೊಂದರೆಯಾಗಿದೆ ಆದರೆ ಇದನ್ನು ಹೇಳುವವರು ಕೇಳುವವರು ಇಲ್ಲವಾಗಿದೆ ಎಂದರು.
15 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಪುನರಾರಂಭ ಮಾಡಲಾಗಿತ್ತು ಆನಂತರ ಕೆಲವು ತಾಂತ್ರಿಕ ಕಾರಣಗಳಿಂದ ಅದು ಮತ್ತೆ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿದಾಗ ಎರಡು ವರ್ಷಗಳ ಹಿಂದೆ ನಾನು ಮತ್ತೆ ಆರಂಭ ಮಾಡಿಸಿದ್ದೆ, ಆದರೆ ಈಗ ಮತ್ತೆ ಕಾರ್ಖಾನೆ ನಿಂತು ಹೋಗಿದ್ದು ಈಗಿನವರು ಏನು ಮಾಡುತ್ತಿದ್ದಾರೆಂದು ಪ್ರಶ್ನಿಸಿದರು.
ಕೆ. ಆರ್. ನಗರ ಪಟ್ಟಣದ ಪುರಸಭೆಯ 72 ವಾಣಿಜ್ಯ ಮಳಿಗೆಗಳ ಬಾಡಿಗೆ ಮಾಲೀಕರಿಂದ 2.5 ಕೋಟಿ ಹಣವನ್ನು ಅಕ್ರಮವಾಗಿ ವಸೂಲಿ ಮಾಡಿದ್ದು ಆ ಬಗ್ಗೆ ತನಿಖೆ ನಡೆಸಿ ತಪ್ಪು ಮಾಡಿರುವವರನ್ನು ಜೈಲಿಗೆ ಕಳಿಸಬೇಕೆಂದು ಪರೋಕ್ಷವಾಗಿ ಶಾಸಕ ಡಿ. ರವಿಶಂಕರ್ ಅವರನ್ನು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ರಾಜ್ಯಕ್ಕೆ ದರಿದ್ರ ಅವರಿಸಲಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬೆಳೆಯಾಗಿ ಮತ್ತೆ ಸುವರ್ಣ ಯುಗ ಆರಂಭವಾಗಬೇಕಾದರೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಅಧಿಕಾರಿಗಳು ಮತ್ತು ಗುತ್ತಿಗೆದಾರರಿಂದ ಲಂಚ ಪಡೆಯುವ ಬದಲು ದೇವಾಲಯದ ಮುಂದೆ ಕುಳಿತು ಬಿಕ್ಷೆ ಬೇಡುವುದೇ ವಾಸಿ ಎಂದು ನಾನು ಹೇಳಿಕೆ ನೀಡಿದ ನಂತರ. ಪ್ರತಿಕ್ರಿಯೆ ನೀಡುವ ನೀವು ಕುಂಬಳಕಾಯಿ ಕಳ್ಳ ಎಂದರೆ ಏಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರೆಂದು ಪರೋಕ್ಷವಾಗಿ ಶಾಸಕ ಡಿ.ರವಿಶಂಕರ್ ಅವರನ್ನು ಟೀಕಿಸಿದರು.
Mysore
ಜೂಜಾಡುತ್ತಿದ್ದ ನಾಲ್ವರ ಬಂಧನ
ಮೈಸೂರು: ಕಾನೂನು ಬಾಹಿರವಾಗಿ ಜೂಜಾಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ ನಾಲ್ವರನ್ನು ಸಿ.ಸಿ.ಬಿ ಪೊಲೀಸರು ಬಂಧಿಸಿ ಒಟ್ಟು 12.5 ಸಾವಿರ ರೂ ನಗದು ಮತ್ತು ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ನಗರ 2ನೇ ಹಂತದ ಜೆ.ಬಿ. ಪ್ಯಾರಡೈಸ್ನ ಕೊಠಡಿಯೊಂದರಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಡುತ್ತಿದ್ದರು.
ಇದರ ಬಗ್ಗೆ ಜನವರಿ 14 ರಂದು ನಗರದ ಸಿ.ಸಿ.ಬಿ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿ.ಸಿ ಬಿ.ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ವಿ ಜಯನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
Mysore
ಕಾನೂನು ಬಾಹಿರವಾಗಿ ಗ್ಯಾಸ್ ದಾಸ್ತಾನು ಮಾಡುತ್ತಿದ್ದ ನಾಲ್ವರ ಬಂಧನ.
ಮೈಸೂರು: ವಿವಿಧ ಕಂಪನಿಗೆ ಕಾನೂನು ಬಾಹಿರವಾಗಿ ಗ್ಯಾಸ್ ದಾಸ್ತಾನು ಮಾಡಿಕೊಂಡು ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ನಾಲ್ವರನ್ನು ಸಿ.ಸಿ.ಬಿ ಪೊಲೀಸರು ಬಂಧಿಸಿ. ಒಟ್ಟು 127 ಸಿಲಿಂಡರ್ ಗಳು 79 ರಾಡುಗಳು, 2 ಡಿಜಿಟಲ್ ಯಂತ್ರಗಳು ಹಾಗೂ 1 ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ನಗರದ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಶೆಡ್ ನಲ್ಲಿ ಅಕ್ರಮವಾಗಿ ವಿವಿಧ ಕಂಪನಿಗಳಿಗೆ ಅಡುಗೆ ಅನಿಲ ಸಿಲಿಂಡರ್ ಗಳನ್ನು ಉಪಯೋಗಿಸಿಕೊಂಡು ಯಾವುದೇ ಅಧಿಕೃತ ರಹದಾರಿ ಮತ್ತು ಖರೀದಿ ಮಾಡಿರುವ ಬಿಲ್ ಇಲ್ಲದೆ.
ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಾರೆ ಎಂದು ಜನವರಿ 11 ರಂದು ಸಿ.ಸಿ.ಬಿ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯ ಮೇರೆಗೆ. ಸಿ.ಸಿ.ಬಿ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
Mysore
ಮಾದಕವಸ್ತು ಮಾರಾಟ ಮಾಡಲು ಪ್ರಯತ್ನಿಸುತ್ತದ್ದ ಪೆಡ್ಲರ್ ಬಂಧನ
ಮೈಸೂರು ಎಂ.ಡಿ.ಎಂ.ಎ ಎಂಬ ನಿಷೇಧಿತ ಮಾದಕವಸ್ತುವನ್ನು ಮಾರಾಟ ಮಾಡಲು ಪ್ರಯತ್ನಿಸಿದ ಪೆಡ್ಲರ್ ನನ್ನು ಸಿ.ಸಿ.ಬಿ ಘಟಕದ ಪೊಲೀಸರು ಬಂಧಿಸಿ ಒಟ್ಟು 20. ಸಾವಿರ ರೂ ಮೌಲ್ಯದ 6 ಗ್ರಾಂ 600 ಮಿಲಿ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣಿಗಿರಿ ಹಳೇ ಆರ್.ಟಿ.ಒ. ಅಫೀಸ್ ಹತ್ತಿರ ಇರುವ ತ್ರಿವೇಣೆ ಪಾರ್ಕ್ ಬಳಿ. ಎಂ.ಡಿ.ಎಂ.ಎ ಎಂಬ ನಿಷೇಧಿತ ಮಾದಕವಸ್ತುವನ್ನು ಮಾರಾಟ ಮಾಡಲು ಒಬ್ಬ ಪೆಡ್ಲರ್ ನಿಂತಿದ್ದಾನೆಂದು ಜನವರಿ 7 ರಂದು ನಗರದ ಸಿ.ಸಿ.ಬಿ. ಘಟಕದ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯ ಮೇರೆಗೆ.
ಸಿ.ಸಿ.ಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.
-
Chamarajanagar20 hours ago
Hannur|ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಜಟಾಪಟಿ
-
Hassan22 hours ago
Hassan| ಕಾಡಾನೆ ದಾಳಿಗೆ ಕಾರ್ಮಿಕ ಬ*ಲಿ
-
State15 hours ago
ಯಲ್ಲಾಪುರ, ಸಿಂಧನೂರಿನಲ್ಲಿ ಭೀಕರ ಅಪಘಾತ: ಮೃತರ ಕುಟುಂಬಕ್ಕೆ 3ಲಕ್ಷ ಪರಿಹಾರ ಘೋಷಿಸಿದ ಸಿಎಂ
-
Chamarajanagar11 hours ago
ಜ.23ರಂದು ಚಾಮರಾಜನಗರ ಪಟ್ಟಣದ ವಿವಿಧೆಡೆ ವಿದ್ಯುತ್ ವ್ಯತ್ಯಯ
-
National - International14 hours ago
ಪನಾಮಾ ಕಾಲುವೆ ವಿವಾದ: ಟ್ರಂಪ್ ಹೇಳಿಕೆ ತಿರಸ್ಕರಿಸಿದ ಪನಾಮಾ ಅಧ್ಯಕ್ಷ ಜೋಸ್ ರೌಲ್
-
National - International13 hours ago
ರಾಜ್ಯದಲ್ಲಿ ಪ್ರತ್ಯೇಕ ಎರಡು ಕಡೆ ಅಪಘಾತ: ಮೃತರಿಗೆ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ
-
Hassan17 hours ago
ಕಾಡಾನೆ ದಾಳಿಯಿಂದ ವೃದ್ದ ಸಾ*ವು ಪ್ರಕರಣ
-
Kodagu12 hours ago
ಸಾರ್ವಜನಿಕರಿಗೆ ಪಂಗನಾಮ ಹಾಕಿದ್ದ ಫರ್ನೀಚರ್ ಅಂಗಡಿ ಮಾಲೀಕನ ಬಂಧನ