Mysore
ಅನ್ನ ಭಾಗ್ಯ ಯೋಜನೆಯ ಗ್ರಾಮ ಸಭೆ: ಆಹಾರ ಇಲಾಖೆಯಿಂದ ವಿಶೇಷ ಕಾರ್ಯಕ್ರಮ

ವರದಿ: ಎಸ್ ಬಿ ಹರೀಶ್ ಸಾಲಿಗ್ರಾಮ
ಸಾಲಿಗ್ರಾಮ: ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳಲೊಂದಾದ ಅನ್ನಭಾಗ್ಯ ಯೋಜನೆ ಕಟ್ಟಕಡೆಯ ಬಡಕುಟುಂಬಗಳಿಗೂ ತಲುಪಿಸುವ ಉದ್ದೇಶದಿಂದ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮ ಮಟ್ಟದ ನ್ಯಾಯ ಬೆಲೆ ಅಂಗಡಿಗಳಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷ ಉದಯ ಶಂಕರ್ ಹೇಳಿದರು.
ಅವರು ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಗ್ರಾಮಮಟ್ಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪಡಿತರ ಚೀಟಿಯಲ್ಲಿ ಹೆಸರಿರುವ ಪ್ರತಿಯೊಬ್ಬರಿಗೂ ಫೆಬ್ರವರಿ ತಿಂಗಳ 5 ಕೆಜಿ ಹಾಗೂ ಮಾರ್ಚ್ ತಿಂಗಳ 10 ಕೆಜಿ ಒಟ್ಟು 15 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ಏಪ್ರಿಲ್ ತಿಂಗಳಿನಿಂದ ತಲಾ ಹತ್ತು ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುವುದು. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನ ಪಡೆಯುವ ಪಡಿತರ ಚೀಟಿದಾರರು ತಾವು ಪಡೆದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದು ಎಂದರು.
ನ್ಯಾಯಬೆಲೆ ಅಂಗಡಿ ಮಾಲೀಕರುಗಳು ಸಾರ್ವಜನಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಅವರುಗಳಿಗೆ ಯಾವುದಾದರೂ ಸಣ್ಣಪುಟ್ಟ ಸಮಸ್ಯೆಗಳು ಕಂಡುಬಂದಲ್ಲಿ ಸೂಕ್ತ ಮಾರ್ಗದರ್ಶನವನ್ನು ನೀಡಿ ಅವರುಗಳ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಪಡಿತರ ಚೀಟಿದಾರರು ಹಿಂಜರಿಕೆಯನ್ನು ಬಿಟ್ಟು ತಮಗೆ ಬರಬೇಕಾದ ಸೌಲಭ್ಯಗಳನ್ನು ಕೇಳಿ ಪಡೆಯಬೇಕು ಅದು ನಿಮ್ಮ ಹಕ್ಕು ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳ ನೇತೃತ್ವದಲ್ಲಿ ಗ್ಯಾರೆಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದ್ದು ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದಲ್ಲಿಯೂ ಕೂಡ ಶಾಸಕ ಡಿ.ರವಿಶಂಕರ್ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಬಹುಮುಖ್ಯ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರುಗಳಿಗೆ ತಲುಪಿಸುವಂತಹ ಕೆಲಸವನ್ನು ಜೊತೆಗೆ ಅದನ್ನು ಪರಿಶೀಲಿಸಿ ನೈಜ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಸಹಿಸದ ವಿರೋಧಪಕ್ಷಗಳು ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿವೆ ಆದರೆ ನಮ್ಮ ಸರ್ಕಾರ ನುಡಿದಂತೆ ನಡೆಯುವ ಮೂಲಕ ರಾಜ್ಯದ ಜನತೆಯ ಪರವಾಗಿ ಕೆಲಸ ಮಾಡುತ್ತಿದೆ ಎಂದರು.
ಕ್ಷೇತ್ರದ ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ಲಿಖಿತವಾಗಿ ಮಾಹಿತಿಯನ್ನು ನೀಡುವ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ ಅಧ್ಯಕ್ಷರು ಪಡಿತರ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಡಿತರ ಚೀಟಿಗಳಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಹೊಸ ಕಾರ್ಡ್ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಂಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು, ಆಹಾರ ಇಲಾಖೆಯ ಶಿರಸ್ತೆದಾರ್ ಮಂಜುನಾಥ್, ನಿರೀಕ್ಷಕ ಸುರೇಶ್, ಕುಮಾರ್, ಪಿಡಿಓ ನವೀನ್, ನ್ಯಾಯಬೆಲೆ ಅಂಗಡಿ ಮಾಲೀಕರಾದ ಎ.ಟಿ.ಗೋಪಾಲ್, ಶ್ರೀನಿವಾಸ, ಡಿಸಿಸಿ ಸದಸ್ಯ ಅಶ್ವಥ್ ನಾರಾಯಣ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರುಗಳಾದ ಲೋಕೇಶ, ಮಹಾಲಿಂಗು, ಮೋಹನ್, ರವಿ, ಚಿಕ್ಕಹನಸೋಗೆ ಮೂರ್ತಿ, ಅನಿಲ್, ವಾಸಿಂ, ಮುಖಂಡರುಗಳಾದ ನಟರಾಜು, ಸುನಂದಮ್ಮ, ಶಿವರಾಜು, ಆರ್ ಟಿ ಸಿ ರಾಜೇಗೌಡ, ಕೃಷ್ಣಶೆಟ್ಟಿ, ಸಣ್ಣರಾಮೇಗೌಡ, ಮಹೇಶ್, ಶೀತಲ್, ಬೈರೇಶ್, ಮೂರ್ತಿ, ವಡ್ಡರಕೊಪ್ಪಲು ಗಿರೀಶ್ ಸೇರಿದಂತೆ ಹಲವರು ಇದ್ದರು.
Mysore
ಆಧುನಿಕ ಔಷದಿ ಚಿಕಿತ್ಸೆಗಿಂತ, ಆಯುರ್ವೇದ ಚಿಕಿತ್ಸೆಗಾಗಿ ಸಲಹೆ ನೀಡುತ್ತಾರೆ: ಕಮಲಾ ಬಾಯಿ

ಮೈಸೂರು: ಇಂದಿಗೂ ಹಲವಾರು ಆರೋಗ್ಯ ತಜ್ಞರು, ವಿವಿಧ ಖಾಯಿಲೆಗಳಿಗೆ ಆಧುನಿಕ ಔಷದಿ ಚಿಕಿತ್ಸೆಗಿಂತ, ಆಯುರ್ವೇದ ಚಿಕಿತ್ಸೆಗಾಗಿ ಸಲಹೆ ನೀಡುತ್ತಾರೆ. ಕಾರಣ ಆಯುರ್ವೇದ ಚಿಕಿತ್ಸೆಯಲ್ಲಿ ಯಾವುದೇ, ಅಡ್ಡಪರಿಣಾಮಗಳಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರ ಆಯುಷ್ ನಿಯೋಜನೆ ಮುಖ್ಯ ಆಡಳಿತಧಿಕಾರಿ ಕಮಲಾ ಬಾಯಿ(ಕೆಎಎಸ್) ತಿಳಿಸಿದರು.
ನಗರದ ಜೆ.ಕೆ ಮೈದಾನದ ಎಂಎಂಸಿ ಪ್ಲಾಟಿನಮ್ ಜುಬಿಲೀ ಸಭಾಂಗಣದಲ್ಲಿ ಶನಿವಾರ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗ 50ರ ಸಂಭ್ರಮ ಅಂಗವಾಗಿ ಹಳೆಯ ವಿದ್ಯಾರ್ಥಿ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ, ಸುವರ್ಣ ಕಾಯ ರಾಷ್ಟ್ರೀಯ ಮಟ್ಟದ ವೈಜ್ಞಾನಿಕ ವಿಚಾರ ಸಂಕಿರಣ ಮತ್ತು ಸ್ನೇಹ ಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ಶಿಕ್ಷಣ ಸಂಸ್ಥೆಯ 50 ರ ಸಂಭ್ರಮ ಕೇವಲ ಆಚರಣೆಯಲ್ಲ, ಅದೊಂದು ಆ ಸಂಸ್ಥೆಯ ಅತ್ಯುತ್ತಮ ಹಾದಿಯ ಶಿಕ್ಷಣ. ನೈತಿಕ ಮೌಲ್ಯಗಳು, ಅಧ್ಯಾತ್ಮಿಕ ಮೌಲ್ಯಗಳು ಸೇರಿದಂತೆ ಒಳ್ಳೆಯ ಸಂದರ್ಭಗಳನ್ನ ಹಾಗೂ ಒಳ್ಳೆಯ ವಿಷಯಗಳನ್ನ ಪುನರ್ಮನನ ಮಾಡಿಕೊಳ್ಳುವ ಸುಸಂರ್ಭ ಸಮಯ. ಇದಲ್ಲದೇ ಒಂದು ಸಂಸ್ಥೆಯ ಸಾಧನೆ ಹಾಗೂ ಉತ್ತಮ ಭವಿಷ್ಯಕ್ಕಾಗಿ ಪೂರ್ವ ಸಿದ್ಧತೆ, ಯೋಜನೆಗಳನ್ನು ರೂಪಿಸಲು ಇಂದಿನ ದಿನ ಪ್ರೇಪಿಸುತ್ತದೆ, ಎಂದು ಹರುಷಪಟ್ಟರು.
Mysore
ಈ ದೇಶಕಂಡ ಅತ್ಯಂತ ದುರ್ಬಲ ಪ್ರಧಾನಿ ನರೇಂದ್ರ ಮೋದಿ: ಉಗ್ರಪ್ಪ

ಮೈಸೂರು: ಈ ದೇಶಕಂಡ ಅತ್ಯಂತ ದುರ್ಬಲ ಪ್ರಧಾನಿ ಅಂದರೆ ಅದು ನರೇಂದ್ರ ಮೋದಿ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಆರೋಪಿಸಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜನವಿರೋಧಿ, ಸಮಾಜವನ್ನು ಒಡೆದು ಆಳುವುದನ್ನು ಮೈಗೂಡಿಸಿಕೊಂಡಿರೋ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಕಳೆದ 11 ವರ್ಷಗಳಿಂದ ದೇಶದಲ್ಲಿ 185 ಲಕ್ಷ ಕೋಟಿ ರೂ ಅಷ್ಟು ಸಾಲ ಮಾಡಿರುವ ಹೆಗ್ಗಳಿಕೆ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸಲ್ಲುತ್ತದೆ ಎಂದರು.
ನಮ್ಮ ರಾಜ್ಯದಲ್ಲಿ ಕೆ. ಆರ್ ಎಸ್, ತುಂಗಭದ್ರಾ ಅಣೆಕಟ್ಟೆಯನಾದರೂ ಕಟ್ಟಿದ್ದೀರ. ಯಾವುದಾದರು ಜನರಿಗೆ ಉದ್ಯೋಗ ದೊರಕುವಂತ ಕಂಪನಿ ಮಾಡಿದ್ದೀರ? ಇಷ್ಟೊಂದು ಸಾಲವನ್ನು ಯಾವುದಕ್ಕಾಗಿ ಮಾಡಿದ್ದೀರ. ಯಾವ ಅಭಿವೃದ್ದಿ ಕೆಲಸವಾಗಿದೆ ತೋರಿಸಿ ಎಂದು ಕೇಂದ್ರದ ಎನ್.ಡಿ.ಎ ಸರಕಾರವನ್ನು ಪ್ರಶ್ನಿಸಿದರು.
ಸಮಾಜದ ನಡುವೇ ಧರ್ಮ. ಜಾತಿ, ಭಾಷೆ ಎಂಬ ಕಂದಕ ಸೃಷ್ಟಿ ಮಾಡಿದ್ದೀರ. ಜನರ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ಅವರ ಬದುಕಿನ ಮೇಲೆ ಚಪ್ಪಡಿಕಲ್ಲು ಎಳೆಯುವ ಕೆಲಸ ಮಾಡುತ್ತಿದ್ದಾರೆ.
ಕೇಂದ್ರ ಸರಕಾರದ ಬೆಲೆ ಏರಿಕೆಯನ್ನು ಮುಚ್ಚಿಕೊಳ್ಳುವುದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಅವರು ಜನಕ್ರೋಶ ಯಾತ್ರೆ ಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರ ಆಕ್ರೋಶ ಸಿಎಂ. ಸಿದ್ದರಾಮಯ್ಯ, ಡಿಸಿಎಂ. ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರದ ಮೇಲೆ ಇಲ್ಲ. ಮೋದಿ ನೇತೃತ್ವದ ಕೇಂದ್ರ ಎನ್.ಡಿ.ಎ ಸರಕಾರದ ಮೇಲೆ ಇರೋದು ಎಂದು ಹರಿಹಾಯ್ದರು.
ರಾಜ್ಯದ ಬಿಜಿಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ,ಪತ್ರಿಪಕ್ಷನಾಯಕ ಆರ್, ಅಶೋಕ ಅವರೆ ಈ ರಾಜ್ಯದಲ್ಲಿ ಬೆಲೆ ಏರಿಕೆಗೆ ಕೇಂದ್ರ ಸರಕಾರ ಕಾರಣವೋ. ರಾಜ್ಯ ಕಾಂಗ್ರೆಸ್ ಸರಕಾರ ಕಾರಣವೋ ಸಾರ್ವಜನಿಕ ಚರ್ಚೆ ಮಾಡೋಣ. ಈ ಚರ್ಚೆಗೆ ಬರುವ ನೈತಿಕತೆ ನಿಮಗೆ ಇದೇಯ. ಕಾಂಗ್ರೆಸ್ ಸರಕಾರ ಸಿದ್ದವಿದೇ. ಸಾರ್ವಜನಿಕರಿಗೆ ಬೆಲೆ ಏರಿಕೆ ಬಗ್ಗೆ ಉತ್ತರಿಸುವ ಧೈರ್ಯ ಇದೆಯ. ನಿಮ್ಮಲ್ಲಿ ಆತ್ಮವಿಶ್ವಸ ಬದುಕಿದೇಯ ಎಂದು ಉಗ್ರಪ್ಪ ಕಿಡಿಕಾರಿದರು.
ಈ ದೇಶದಲ್ಲಿ 2013 ರ ಅಂತರಾಷ್ಟ್ರೀಯ ಮಾರಿಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ ಒಂದು ಬ್ಯಾರೆಲ್ ಗೆ120 ರಿಂದ 130 ಡಾಲರ್ ಇತ್ತು. ಆಗ ಒಂದು ಲೀಟರ್ ಡೇಸಲ್ 56.83 ರೂ ಪೈಸೆ, ಪೆಟ್ರೋಲ್ ಲೀಟರ್ 63.62 ರೂ ಪೈಸೆಗೆ ಮಾರಾಟಮಾಗುತ್ತಿತ್ತು. ಅಡುಗೆ ಅನಿಲ ದರ 400 ರೂ ಗಳಂತೆ ನೀಡಿ ಸಾರ್ವಜನಿಕರಿಕೆ ಪ್ರತಿ ತಿಂಗಳು ಅದರ ಸಬ್ಸಿಡಿ ನೀಡುತ್ತಿದ್ದೋ. ಆದರೆ ನೀವು ಹೀಗ ಬೆಲೆ ಏರಿಕೆ ಮಾಡಿ ಏನು ಕೊಡುತ್ತಿದ್ದೀರ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದರು. ರಾಜ್ಯ ದಲ್ಲಿ ಅಡುಗೆ ಅನಿಲದ ದರ 50 ರೂ ಏರಿಕೆಯನ್ನು ಈಕೂಡಲೇ ವಾಪಾಸು ಪಡೆಯಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ರಾಜ್ಯ ಬಿಜೆಪಿ ಶಾಸಕರು, ಸಂಸದರು ಕೇಂದ್ರ ಸರಕಾರ ಬೆಲೆ ಏರಿಕೆಯನ್ನು ಪಾರ್ಲಿಮೆಂಟ್ ನಲ್ಲಿ ಏಕೆ ಪ್ರಶ್ನೆ ಮಾಡದೇ ಬಾಯಿಗೆ ಬೀಗ ಜಡಿದು ಕುಳಿತ್ತಿದ್ದೀರೆ. ರಾಜ್ಯದಲ್ಲಿ ಜನಕ್ರೋಶ ಯಾತ್ರೆ ಮಾಡುತ್ತ ಜನರಿಗೆ ಮಂಕು ಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರಕಾರ ಅಂಬಾನಿ. ಅದಾನಿ ಅವರ 16 ಸಾವಿ ಕೋಟಿ ರೂ ಸಾಲ ಮನ್ನ ಮಾಡುತ್ತಾರೆ ಆದರೆ ರೈತರ ಸಾಲ ಏಕೆ ಮನ್ನ ಮಾಡೋದಿಲ್ಲ. ನಮ್ಮ ಕಾಂಗ್ರೆಸ್ ಸರಕಾರದ 5 ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಜನರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹಾಲಿನ ದರ ಏರಿಕೆ ಮಾಡಿ ಆ ಹಣವನ್ನು ನೇರವಾಗಿ ರೈತರಿಗೆ ನೀಡುವ ಮೂಲಕ ರೈತರ ಪರವಾಗಿ ನಿಂತಿದ್ದೇವೆ ಎಂದರು.
ಮಾಜಿ ಶಾಸಕ ಜಿ.ಎನ್ ನಂಜುಂಡಾಸ್ವಾಮಿ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ, ಬಿ.ಜೆ ವಿಜಯ್ ಕುಮಾರ್ ಮಾಧ್ಯಮ ಸಂಚಾಲಕ ಕೆ ಮಹೇಶ ಉಪಸ್ಥಿತರಿದ್ದರು.
Mysore
ದಲಿತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಗ್ರಾಮದಲ್ಲಿ ದಲಿತ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ಕರ್ನಾಟಕ ವೀರಕೇಸರಿ ಪಡೆ ಪ್ರತಿಭಟಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದ ಪಡೆಯ ಕಾರ್ಯಕರ್ತರು ದಲಿತರ ಮೇಲಿನ ಹಲ್ಲೇ ಘಟನೆಯನ್ನು ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ವೀರಕೇಸರಿ ಪಡೆಯ ಅಧ್ಯಕ್ಷ ಮಧುವನ ಚಂದ್ರು ಮಾತನಾಡಿ, ಎಚ್.ಡಿ.ಕೋಟೆ ತಾಲ್ಲೂಕಿನ ನಾಗನಹಳ್ಳಿ ಗ್ರಾಮದ ಕವಿತಾಬಾಯಿ ಮತ್ತು ಅವರ ವಿಕಲಚೇತನ ಪತಿ ರಾಯಪ್ಪರ ಮೇಲೆ ಸವರ್ಣೀಯರಾದ ವಿಜಯಕುಮಾರ್ ಮತ್ತು ಪತ್ನಿ ಕವಿತಾ ಮೇರಿ, ಮಗಳಾದ ಶಾಲಿನಿ, ಅಳಿಯ ಯೋಗೇಶ್ ನಿರಂತರವಾಗಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದಾಗಿಯೂ ಹಲ್ಲೆಗೊಳಗಾದವರಿಂದ ಅಟ್ರಾಸಿಟಿ ದೂರು ದಾಖಲಿಸಿಲ್ಲ. ಬದಲಿಗೆ ಹಲ್ಲೆಗೆ ಒಳಗಾದವರ ಮೇಲೆ ದೂರು ದಾಖಲಿಸಿದ್ದಾರೆಂದು ದೂರಿದರು.
ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ರೀತಿ ದೂರು ದಾಖಲಿಸಿ ಮುಂದಿನ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಬಸವರಾಜು, ಸಿದ್ದರಾಜು, ರಾಮನಾಯಕ, ರಾಜೇಶ್ವರಿ ಇನ್ನಿತರರು ಉಪಸ್ಥಿತರಿದ್ದರು.
-
Chamarajanagar23 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Mysore20 hours ago
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ
-
Kodagu20 hours ago
ಹುಲಿ ದಾಳಿಗೆ ಕರು ಬಲಿ
-
Kodagu23 hours ago
ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಚರಣೆ
-
Mysore22 hours ago
ಆರ್. ರಘು ಅವರ ಎರಡು ಕೃತಿಗಳ ಲೋಕಾರ್ಪಣೆ
-
Hassan6 hours ago
ಹಾಸನ : ಕಾರಿನೊಳಗೆ ಅಸಿಸ್ಟೆಂಟ್ ಅಕೌಂಟೆಂಟ್ ಅನುಮಾನಾಸ್ಪದ ಸಾ*ವು
-
Kodagu7 hours ago
ಎ.ಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಿ – ಬೆಂಗಳೂರು ಕೊಡವ ಸಮಾಜ ಸಿಎಂಗೆ ಮನವಿ
-
Kodagu23 hours ago
ಜನಪರ ಪ್ರೀಮಿಯರ್ ಲೀಗ್-3 ಕ್ರಿಕೆಟ್ ಗೆ ಆಟಗಾರರ ಆಯ್ಕೆ