Connect with us

Mandya

ಕನಿಷ್ಠ ವೇತನ ವ್ಯತ್ಯಾಸ ಸರಿಪಡಿಸಲು ಕ್ರಮ – ಬಾಬು

Published

on

ಮಂಡ್ಯ : ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಅರಿವು ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರ ಕನಿಷ್ಠ ವೇತನ ಹಾಗೂ ತುಟ್ಟಿ ಭತ್ಯೆಯಲ್ಲಿ ಆಗಿರುವ ವ್ಯತ್ಯಾಸವನ್ನು ಗ್ರಂಥಾಲಯ ಉಪಕರದಿಂದ ಸರಿದೂಗಿಸಲು ತಕ್ಷಣ ಕ್ರಮ ವಹಿವುದಾಗಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಾಬು ಎಂ ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದ‌‌ ಅವರು,‌ ಕರ್ನಾಟಕ ಸರ್ಕಾರದ ನಡವಳಿಯಂತೆ ಆದೇಶವಾಗಿರುವ ಕನಿಷ್ಠ ವೇತನ ರೂಪಾಯಿ 16,382 ಗಳಾಗಿದ್ದು ತುಟ್ಟಿಭತ್ಯೆ ರೂಪಾಯಿ 1,542 ಸೇರಿದಂತೆ ಒಟ್ಟಾರೆ ರೂಪಾಯಿ 17,924 ಗಳಿಗೆ ವ್ಯತ್ಯಾಸವಾಗುವ ತುಟಿ ಭತ್ಯೆ ಹಾಗೂ ಹೆಚ್ಚುವರಿ ಕನಿಷ್ಠ ವೇತನವನ್ನು ಗ್ರಂಥಾಲಯ ಉಪಕರದಿಂದ ಭರಿಸಲು ಶೀಘ್ರದಲ್ಲೇ ಖಾತೆ ತೆರೆಯುವ ಸಂಬಂಧ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಗಮನಕ್ಕೆ ತಂದು ಕ್ರಮವಹಿಸಲಾಗುವುದು.

ಗ್ರಂಥಾಲಯ ಮೇಲ್ವಿಚಾರಕರು ಇಲಾಖೆಯ ಆದೇಶದಂತೆ ಕಾರ್ಯಕ್ರಮಗಳನ್ನು ರೂಪಿಸಿ ಗ್ರಾಮೀಣ ಜನತೆಗೆ ಪ್ರಾಮಾಣಿಕವಾಗಿ ಬದ್ಧತೆಯಿಂದ ಸೇವೆ ನೀಡಿ ಎಂದು ಅವರು ಇದೇ ವೇಳೆ ಸೂಚನೆ ನೀಡಿದರು.

ಶ್ರೀರಂಗಪಟ್ಟಣ ತಾಲೂಕು ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೂಡಲಕುಪ್ಪೆ ಸೋಮಶೇಖರ್ ಮಾತನಾಡಿ, ಈಗಾಗಲೇ ಖಾತೆಯಾಗಿರುವ ನಿವೇಶನಗಳಿಗೆ ಕಟ್ಟಡ ಕಟ್ಟಲು ಸೂಕ್ತ ಅನುದಾನ ನೀಡುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದಂತ ಪೂರಕ ಪುಸ್ತಕಗಳ ವ್ಯವಸ್ಥೆ, ಮಾಸಿಕ ಪತ್ರಿಕೆ ಹಾಗೂ ನಿಯತಕಾಲಿಕೆ ಬಾಪ್ತು, ಶುಚಿತ್ವ ಭತ್ಯೆ ಪ್ರತಿ ತಿಂಗಳು ಪಾವತಿಸುವುದು, ಡಿಜಿಟಲ್ ಗ್ರಂಥಾಲಯಕ್ಕೆ ಬೇಕಾದ ಪೂರಕ ಉಪಕರಣಗಳನ್ನು ಪೂರೈಸುವುದು, ಶಿಥಿಲಗೊಂಡಿರುವ ಕಟ್ಟಡಗಳನ್ನು ಸರಿಪಡಿಸಲು ಕ್ರಮ ವಹಿಸುವುದು, ಏಕರೂಪ ಎರವಲು ಸೇವೆಗೆ ಬೇಕಾದಂತಹ ಅಗತ್ಯ ದಾಖಲೆಗಳು ಒದಗಿಸುವುದು, ಇಲಾಖೆಯ ನಿರ್ದೇಶನದಂತೆ ಆಯೋಜಿಸುವ ಕಾರ್ಯಕ್ರಮಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಪೂರಕ ವ್ಯವಸ್ಥೆಯನ್ನು ಕಲ್ಪಿಸುವುದು ಸೇರಿದಂತೆ ಇತರ ಸಮಸ್ಯೆಗಳನ್ನು ನಿವಾರಿಸಿ ಗ್ರಾಮೀಣ ಓದುಗರಿಗೆ ಉತ್ತಮ ಸೇವೆ ನೀಡಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಂಡ್ಯ ತಾಲೂಕು ಸಂಘದ ಅಧ್ಯಕ್ಷ ದೊಡ್ಡ ಗರುಡನಹಳ್ಳಿ ತಮ್ಮಣ್ಣ ಶೆಟ್ಟಿ, ಪದಾಧಿಕಾರಿಗಳಾದ ಮಾರಗೌಡನಹಳ್ಳಿ ಗದ್ದೆಗೌಡ ಹಾಗೂ ದುದ್ದ ರಮೇಶ್ ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಫೆ. 06 ರಂದು ಜಿಲ್ಲಾ”ಬಾಲ್ಯವಿವಾಹ ಮುಕ್ತ ಮಾಡುವ ಸಂಕಲ್ಪ

Published

on

ಮಂಡ್ಯ: ಜಿಲ್ಲಾ “ಬಾಲ್ಯವಿವಾಹ ಮುಕ್ತ ಮಾಡುವ ಸಂಕಲ್ಪ” :ಅಭಿಯಾನದ ಅಂಗವಾಗಿ ನಾಳೆ(ಫೆ.06) ಮಕ್ಕಳ ಸಂರಕ್ಷಣೆ ಮತ್ತು ಕಾನೂನು ಕುರಿತು ಬೃಹತ್ ತರಬೇತಿ ಕಾರ್ಯಾಗಾರ ಹಮ್ನಕೊಳ್ಳಲಾಗಿದೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ಬಾಲ ನ್ಯಾಯ ಸಮಿತಿ ಕರ್ನಾಟಕ ಉಚ್ಚ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಡ್ಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಕೀಲರ ಸಂಘ (ರಿ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ,ಇವರ ಸಂಯುಕ್ತ ಆಶ್ರಯದಲಲ್ಲಿ ಜಿಲ್ಲೆಯನ್ನು “ಬಾಲ್ಯವಿವಾಹ ಮುಕ್ತ ಮಾಡುವ ಸಂಕಲ್ಪ” ಅಭಿಯಾನದ ಅಂಗವಾಗಿ ಮಕ್ಕಳ ಸಂರಕ್ಷಣೆ ಮತ್ತು ಕಾನೂನು ಕುರಿತು ಬೃಹತ್ ತರಬೇತಿ ಕಾರ್ಯಾಗಾರವನ್ನು ಫೆ. 06 ರಂದು ಬೆಳಿಗ್ಗೆ 10.30 ಗಂಟೆಗೆ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿದೆ.

ಜಿಲ್ಲಾ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಹೆಚ್. ಶಶಿಧರ ಶೆಟ್ಟಿ ರವರು ಕಾರ್ಯಕ್ರಮ ವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ಕಾರ್ಯಕ್ರಮದ ಅಧ್ಯಕತೆಯನ್ನು ವಹಿಸಲಿದ್ದಾರೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಆನಂದ.ಎಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರಾದ ಶಿವಪ್ರಸಾದ್‌ ಕೆ.ಬಿ,ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ವೆಂಕಟೇಶ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಆ‌ರ್. ನಂದಿನಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯಜಂಟಿ ನಿರ್ದೇಶಕರಾದ ನಿಶ್ಚಲ್ ಬಿ.ಹೆಚ್, ಮಕ್ಕಳ ರಕ್ಷಣಾ ನಿರ್ದೇಶನಾಲಯ ನಿರ್ದೇಶಕರಾದ ಡಾ.ಸ್ನೇಹ ಸಿ.ವಿ ಕೆ.ಎ.ಎಸ್‌,ವಕೀಲರ ಸಂಘ,ಅಧ್ಯಕ್ಷರು ಸತ್ಯಾನಂದ.ಟಿ.ಎಸ್‌.,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಶೋಭಾರಾಣಿ ವಿ.ಜೆ,ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

Continue Reading

Mandya

ಶ್ರೀ ಸೋಮನಹಳ್ಳಿಯಲ್ಲಿ 10 ದಿನಗಳ ಕಾಲ ಅಮ್ಮನವರ ಉತ್ಸವ : 7 ದಿನಗಳ ಕಾಲ”ದನಗಳ ಜಾತ್ರೆ

Published

on

ಮೇಲುಕೋಟೆ : ಚಿಣ್ಯ ಹಾಗು ಹೊನಕೆರೆ ಪಂಚಾಯತಿ ವ್ಯಾಪ್ತಿಯ 24 ಗ್ರಾಮ ಗಳ ಸಮೂಹ ಮತ್ತು ನೇತೃತ್ವದಲ್ಲಿ “ಶ್ರೀ ಸೋಮನಹಳ್ಳಿ ಅಮ್ಮನವರ ” 10 ದಿನಗಳ ಉತ್ಸವ, ತೇರು, ಕೊಂಡೋತ್ಸವ ದ ಅಂಗವಾಗಿ ಏಳು ದಿನಗಳ ಕಾಲ”ದನಗಳ ಜಾತ್ರೆ “ಯನ್ನು ತಾಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿತ್ತು. ಸುಮಾರು 465 ಜೋಡಿ ರಾಸು ಗಳ ಪ್ರದರ್ಶನ ಮತ್ತು ಮಾರಾಟ ದ ವಹಿವಾಟಾ ಯಿತು.

ಪ್ರದರ್ಶನ ದ ಅಂತಿಮ ದಿನ ವಾದ ಇಂದು ತಾಲೂಕಿನ ನಾಯಕರಾದ ಶ್ರೀಮತಿ ಶ್ರೀಚೆಲುವ ರಾಯ ಸ್ವಾಮಿ,ನಾಗಮಂಗಲ ತಾ. ಪಿ. ಎಲ್. ಡಿ.ಅಧ್ಯಕ್ಷ ಶ್ರೀ ವೆಂಕಟೇಶ್, ಶ್ರೀ ಸುನೀಲ್ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀ ಕೃಷ್ಣೆಗೌಡ, ಪ್ರದೀಪ್ ಮುಂತಾದವರು ಹಾಜರಿದ್ದು. ಗುರುತಿಸಿದ ಉತ್ತಮ ರಾಸು ಗಳಿಗೆ ಬಹುಮಾನ ವಿತರಿಸಿದರು.

Continue Reading

Mandya

ಬೃಹತ್ ಜನಜಾಗೃತಿ ಜಾಥಾ, ಪ್ರತಿಜ್ಞಾ ವಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿಸಿ, ಎಸ್‌ಪಿ

Published

on

ಮದ್ದೂರು: ಅಜ್ಞಾನ, ಅರಿವಿನ ಕೊರತೆಯಿಂದ ತಮ್ಮ ಮೇಲಿರುವ ಭಾರ ಕಳೆದುಕೊಳ್ಳಬೇಕೆಂಬ ಉದ್ದೇಶದಿಂದ 18 ವರ್ಷಕ್ಕೂ ಮೊದಲೇ ಹೆಣ್ಣು ಮಕ್ಕಳ ಮದುವೆ ಮಾಡಿಸುವ ಮೂಲಕ ಪಾಲಕರು ಅವರ ಬದುಕನ್ನು ಬಲಿ ಕೊಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಕ್ಕಳ ರಕ್ಷಣಾ ನಿರ್ದೇಶಾನಲಯ, ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬಾಲ್ಯ ವಿವಾಹ ಮುಕ್ತ ಮಂಡ್ಯ ಜಿಲ್ಲಾ ಅಭಿಯಾನದ ಅಂಗವಾಗಿ ಬಾಲ್ಯ ವಿವಾಹ ವಿರೋಧಿಸಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ಜನಜಾಗೃತಿ ಜಾಥಾ ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ ಹಲವು ಅನಿಷ್ಠ ಪದ್ಧತಿಗಳ ಪೈಕಿ ಬಾಲ್ಯ ವಿವಾಹವೂ ಒಂದಾಗಿದ್ದು, ಹೆಣ್ಣು ಮಕ್ಕಳ ಬದುಕಿಗೆ ಮಾರಕವಾಗಿ ಪರಿಣಮಿಸಿದೆ ಇಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯವಾಗಲಿದೆ ಎಂದರು.

ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗಾಗಿದ್ದು, ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡುವುದು ಸಹ ಸಾರ್ವಜನಿಕರ ಹೊಣೆಯಾಗಿದ್ದು, ಜಿಲ್ಲೆಯಲ್ಲಿ ಬಾಲ್ಯ ವಿವಾಹವು ಕಳೆದ ಮೂರು ವರ್ಷಗಳಿಗೆ ಹೊಲಿಸಿದರೆ ಈ ವರ್ಷ 14 ಪ್ರಕರಣಗಳಿಗೆ ಇಳಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ನಾವೆಲ್ಲರು ಜಾಗೃತರಾಗಬೇಕೆಂದು ಕಿವಿ ಮಾತು ಹೇಳಿದರು.

ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ ಹಲವಾರು ಅನಿಷ್ಠ ಪದ್ಧತಿಗಳ ಪೈಕಿ ಬಾಲ್ಯ ವಿವಾಹವೂ ಒಂದು. ಇದು ಪ್ರಮುಖವಾಗಿ ಹೆಣ್ಣು ಮಕ್ಕಳ ಬದುಕಿಗೆ ಮಾರಕವಾಗಿ ಪರಿಣಮಿಸಿದೆ ಇಂತಹ ಪಿಡುಗಿಗೆ ಹಲವಾರು ಹೆಣ್ಣುಮಕ್ಕಳು ತುತ್ತಾಗಿದ್ದಾರೆ ಎಂದರು.

ಈ ಅನಿಷ್ಟ ಪದ್ದತಿ ಹಾಗೂ ಸಾಮಾಜಿಕ ಪಿಡುಗು ಎಂದು ಕೇಂದ್ರ ಸರ್ಕಾರ ಗುರುತಿಸಿ ಅದಕ್ಕಾಗಿಯೇ ಜಾರಿಗೆ ತಂದ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಪ್ರಕಾರ 18 ವರ್ಷದೊಳಗಿನ ಹೆಣ್ಣು ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳ ಮದುವೆ ಶಿಕ್ಷಾರ್ಹ ಅಪರಾಧವಾಗಿದೆ. ಈ ಕಾಯಿದೆ ಪ್ರಕಾರ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವ ಮೊದಲೇ ಬಾಲ್ಯ ವಿವಾಹ ಮಾಡಿದರೆ ಪಾಲಕರಿಗೆ 2 ವರ್ಷಗಳ ಕಠಿಣ ಜೈಲುವಾಸ, 1 ಲಕ್ಷ ದಂಡ ಇದೆ. ಇದು ಜಾಮೀನು ರಹಿತ ಹಾಗೂ ವಿಚಾರಣಾರ್ಹ ಅಪರಾಧವಾಗಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಆನಂದ್ ಮಾತನಾಡಿ, ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಸಾಕಷ್ಟು ಪ್ರಕರಣಗಳು ದಾಖಲಾಗಿದ್ದವು. ಆದರೆ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಕ್ಕಳ ರಕ್ಷಣಾ ನಿದರ್ೇಶನಾಲಯ, ಅಧಿಕಾರಿಗಳ ಜತೆಗೆ ಸಾಕಷ್ಟು ಜಾಥಾ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷ 14 ಪ್ರಕರಣಗಳಿಗೆ ಇಳಿಕೆಯಾಗಿದ್ದು, ಇನ್ನು ಮುಂದಿನ ದಿನಗಳಲ್ಲಿ ಶೂನ್ಯಕ್ಕೆ ತರಲು ಎಲ್ಲರು ಮುಂದಾಗಬೇಕೆಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದಿಂದ ತಾಲೂಕು ಕ್ರೀಡಾಂಗಣದವರೆಗೂ ವಿವಿಧ ಶಾಲಾ, ಕಾಲೇಜು ವಿದ್ಯಾಥರ್ಿಗಳು, ಅಂಗನವಾಡಿ ಕಾರ್ಯಕತರ್ೆಯರು, ಸಹಾಯಕಿರು, ಆಶಾ ಕಾರ್ಯಕತರ್ೆಯರು ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್.ಹರಿಣಿ, ಎನ್.ಸಿ ನಳಿನಿ, ಶಾಲಾ ಶಿಕ್ಷಣ ಇಲಾಖೆ ಉಪ ನಿದರ್ೇಶಕ ಲೋಕೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಆಶಾ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಡಿವೈಎಸ್‌ಪಿ ಯಶವಂತ್ ಕುಮಾರ್, ನಗರಸಭೆ ಪೌರಾಯುಕ್ತೆ ಎಸ್.ಎನ್.ರಾಧಿಕಾ, ಬಿಇಓ ಎಸ್.ಬಿ.ಧನಂಜಯ, ಸಿಡಿಪಿಓ ಅರುಣ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದಶರ್ಿ ಎಂ.ಜೆ.ಸುಮಂತ್, ಸಿಪಿಐ ನವೀನ್ ಕುಮಾರ್ ಮತ್ತಿತರರು ಇದ್ದರು.

Continue Reading

Trending

error: Content is protected !!