Mandya
ಕೃಷಿ ಉತ್ಪನ್ನಗಳಿಗೆ ಸರ್ಕಾರ ಗಳು ವೈಜ್ಞಾನಿಕ ಬೆಲೆ ನಿಗಧಿ ಪಡಿಸಲಿ :ಜಿ. ಧನಂಜಯ ದರಸಗುಪ್ಪೆ ಆಗ್ರಹ
ಶ್ರೀರಂಗಪಟ್ಟಣ : ರೈತರ ಕೃಷಿ ಉತ್ಪನ್ನಗಳಿಗೆ ಸರ್ಕಾರಗಳು ವೈಜ್ಞಾನಿಕ ಬೆಲೆ ನಿಗಧಿಪಡಿಸದಿದ್ದಲ್ಲಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿ ಆಹಾರ ಕೊರತೆ ಎದುರಾಗುವುದು ಖಚಿತ ಎಂದು, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಿ. ಧನಂಜಯ ದರಸಗುಪ್ಪೆ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿಬಾಲಕಿಯರ ಪ್ರೌಢಶಾಲೆ ಶಾಲೆಯಲ್ಲಿ, ಶ್ರೀರಂಗಪಟ್ಟಣ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ, ದಿ.ತುಕ್ಕೋಜಿರಾವ್ ಮತ್ತು ಶ್ರೀಮತಿ ಸುಶೀಲಭಾಯಿ ದತ್ತಿ ಹಾಗೂ ಶ್ರೀ ಬಿ. ಸಿ.ಸಿದ್ದಪ್ಪ ಮತ್ತು ಹೆಚ್. ಸರಸ್ವತಮ್ಮ ಸ್ಮಾರಕ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ನೀರಿನ ಕೊರತೆ, ವಾತಾವರಣದ ಏರುಪೇರು,ಬಿತ್ತನೆ ಬೀಜ, ಗೊಬ್ಬರ, ದುಬಾರಿ ಕೂಲಿ,ಸುಧಾರಿಸದ ಮಾರುಕಟ್ಟೆ ವ್ಯವಸ್ಥೆ,ಸಾಗಾಣಿಕೆ ಹಾಗೂ ಶೀತಲಗೃಹಗಳ ಕೊರತೆಯಿಂದ ಜರ್ಜರಿತವಾಗಿರುವ ರೈತರಿಗೆ ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ಸರ್ಕಾರಗಳು ವೈಜ್ಞಾನಿಕ ಬೆಲೆ ನಿಗಧಿಪಡಿಸದಿದ್ದಲ್ಲಿ ಕೃಷಿ ಉದ್ಯೋಗದಿಂದ ರೈತರು ವಿಮುಖವಾಗುವ ದಿನ ದೂರವಿಲ್ಲ. ಹಾಗಾಗಿ ಸರ್ಕಾರಗಳು ಕೃಷಿಯನ್ನು ಉದ್ದಿಮೆಯ ರೀತಿಯಲ್ಲಿ ಪರಿಗಣಿಸಿ ಕೃಷಿ ಹಾಗೂ ಕೃಷಿ ಆಧಾರಿತ ಕೈಗಾರಿಕೆ ಅಭಿವೃದ್ಧಿಗೆ ಮುಂದಾಗಬೇಕೆಂದು ಒತ್ತಾಯಿಸಿದರು.
ಸಂಪನ್ಮೂಲ ವ್ಯಕ್ತಿ ಸತ್ಯಮೂರ್ತಿ ಉಪನ್ಯಾಸ ನೀಡುತ್ತಾ, ಭಾರತ ಮೂಲತಃ ಕೃಷಿ ಆಧಾರಿತ ದೇಶ, ಕೃಷಿ ಹಾಗೂ ಸಂಬಂಧಿತ ಕೈಗಾರಿಕೆ ನಂಬಿ ಸಾಕಷ್ಟು ಮಂದಿ ಬದುಕು ದೂಡುತ್ತಿದ್ದಾರೆ. ಈ ಸಂಕಷ್ಟ ದಲ್ಲಿಯೂ ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದು, ಸರ್ಕಾರಗಳು ಕೃಷಿಯನ್ನು ಕೈಗಾರಿಕೆ ಎಂದು ಪರಿಗಣಿಸದಿದ್ದಲ್ಲಿ ಮುಂದೆ ಗಂಡಾಂತರ ಎದುರಿಸಬೇಕಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯಮಟ್ಟದ ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಆಶಾಲತ ಪುಟ್ಟೇಗೌಡ, ಸಾಧಕಿ ಸ್ತ್ರೀ ಪ್ರಶಸ್ತಿ ಪುರಸ್ಕೃತ ಸರಸ್ವತಿ ಬಸವರಾಜು ರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಶ್ರೀರಂಗಪಟ್ಟಣ ತಾಲ್ಲೂಕಿನ ಕ. ಸಾ. ಪ. ಅಧ್ಯಕ್ಷ ಬಿ. ಮಂಜುನಾಥ ಬಲ್ಲೇನಹಳ್ಳಿ,ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ತಾಲೂಕಿನಲ್ಲಿರುವ ಸಾಧಕರ ಕುಟುಂಬದವರು ಅವರ ಹೆಸರಿನಲ್ಲಿ ದತ್ತಿ ಇಡುವ ಮೂಲಕ ಮುಂದಿನ ಜನಾಂಗಕ್ಕೆ ಅವರ ಸಾಧನೆ ಬಗ್ಗೆ ತಿಳಿಸುವಂತಾಗಲು ಮುಂದಾಗಬೇಕೆಂದು ಮನವಿ ಮಾಡಿದರು. ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ತಾ. ಸ. ನೌ. ಸಂ. ಅಧ್ಯಕ್ಷ ಸಿ. ಜೆ. ಶ್ರೀನಿವಾಸ ಮಾತನಾಡಿದರು , ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಶಾಹಿದಾ ಭಾನು ಹಾಗೂ ಕ ಸಾ. ಪ. ಹೋಬಳಿ ಘಟಕದ ಅಧ್ಯಕ್ಷರುಗಳಾದ ಶೇಖರ್ ಪಾಲಹಳ್ಳಿ(ಬೆಳಗೊಳ), ಅರಕೆರೆ ರಾಮಕೃಷ್ಣ (ಅರಕೆರೆ )ಶಂಕರ್ ಚಂದಗಾಲು (ಕಸಬಾ ), ಲೋಕೇಶ್ ದರಸಗುಪ್ಪೆ (ಕೆ. ಶೆಟ್ಟಹಳ್ಳಿ)ಉಪಸ್ಥಿತರಿದ್ದರು.
Mandya
ಕೆ.ಆರ್.ಎಸ್. ಜಲಾಶಯದಿಂದ 1,50,000 ಕ್ಯೂಸೆಕ್ ನೀರು ಬಿಡುವ ಸಾಧ್ಯತೆ – ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ಜಲಾಶಯದಿಂದ ಈಗಾಗಲೇ 70,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದ್ದು, ಮಳೆ ಹೆಚ್ಚಾಗಿರುವುದರಿಂದ ಸುಮಾರು 1,00,000 ದಿಂದ 1,50,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿನ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಹಾಗೂ ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ಹಾಗೂ ರೈತರು ತಮ್ಮ ಆಸ್ತಿ ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದ್ದಾರೆ.
Mandya
ಆ.02 ರಿಂದ ಅಂತರಾಷ್ಟ್ರೀಯ ವೈದ್ಯಕೀಯ ಸಮ್ಮೇಳನ.
ಮಂಡ್ಯ: ಆದಿಚುಂಚನಗಿರಿ ವಿಶ್ವವಿದ್ಯಾಲಯ, ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಫಾರ್ ಮಾಲಿಕ್ಯುಲರ್ ಮೆಡಿಸಿನ್ ಹಾಗೂ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಶ್ರಯದಲ್ಲಿ ಆ. 02 ಮತ್ತು 03 ರಂದು ಅಂತರರಾಷ್ಟ್ರೀಯ ವೈದ್ಯಕೀಯ ಸಮ್ಮೇಳನವನ್ನು ಚುಂಚನಗಿರಿ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದೆ ಎಂದು ಆದಿಚುಂಚನಗಿರಿ
ವಿಶ್ವವಿದ್ಯಾಲಯದ ಡಾಕ್ಟರ್ ಶೋಬಿತ್ ರಂಗಪ್ಪ ತಿಳಿಸಿದರು .
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ 18 ಮಂದಿ ಪ್ರೊಫೆಸರ್ ಗಳು ತಮ್ಮ ವಿಚಾರವನ್ನು ಮಂಡಿಸಿ ಸಾಧನೆ ಮತ್ತು ಸಂಶೋಧನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಶ್ರೀ ಬಾಲ ಗಂಗಾಧರನಾಥ ಮಹಾ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಶ್ರೀ ಡಾ..ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆಮಿಕಲ್ ಬಯೋಲಜಿ ಸೊಸೈಟಿಯ ಅಧ್ಯಕ್ಷ ಪ್ರೊಫೆಸರ್ ತೇಜ್ ಪಾಲ್ ಸಿಂಗ್ ಭಾಗವಹಿಸಲಿದ್ದಾರೆ ಎಂದರು. ಅತಿಥಿಗಳಾಗಿ ಇಂಡಿಯಾ ಕೆಮಿಕಲ್ ಬಯಾಲಜಿ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಪ್ರೊಫೆಸರ್ ಸಿದ್ದಾರ್ಥ ,ಉಪಾಧ್ಯಕ್ಷ ಪ್ರೊಫೆಸರ್ ಕೆಎಸ್ ರಂಗಪ್ಪ ,ಮಾಜಿ ಅಧ್ಯಕ್ಷ ಪ್ರೊಫೆಸರ್ ತಪಸ್ ಕೆ ಕುಂದು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ಘೋಷ್ಠಿಯಲ್ಲಿ ಪ್ರೊಫೆಸರ್ ಪ್ರಶಾಂತ್ ಕಾಳಪ್ಪ ,ಪ್ರೊಫೆಸರ್ ಡಾಕ್ಟರ್ ಅನಿಲ್ ಕುಮಾರ್ ಉಪಸ್ಥಿತರಿದ್ದರು.
Mandya
ಹೆದ್ದಾರಿ ಒತ್ತುವರಿ ಸಂಬಂಧ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ – ಆರ್.ಟಿ.ಐ ಕಾರ್ಯಕರ್ತ ರವೀಂದ್ರ
ಮಂಡ್ಯ: ಬೆಂಗಳೂರು ಮೈಸೂರು ಹೆದ್ದಾರಿಯನ್ನು ಒತ್ತುವರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಆರ್‌ಟಿಐ ಕಾರ್ಯಕರ್ತ ಹಾಗು ಕರ್ನಾಟಕ ರಾಜೀವ್ ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ವೇದಿಕೆ ಗೌರವಾಧ್ಯಕ್ಷ ಕೆಆರ್ ರವೀಂದ್ರ ತಿಳಿಸಿದರು .
ಕರ್ನಾಟಕ ರಾಜೀವ್ ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ವೇದಿಕೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಯಚಾಮರಾಜೇಂದ್ರ ಒಡೆಯರ್ ವೃತ್ತ, ಬೆಂಗಳೂರು ಮೈಸೂರು ಹೆದ್ದಾರಿ 152 ಅಗಲ ವಿಸ್ತೀರ್ಣ ಹೊಂದಿದೆ. 19 41 ರಲ್ಲಿಯೇ ಈ ಬಗ್ಗೆ ಕಾನೂನು ರೂಪಿಸಲಾಗಿದೆ. ಆದರೆ ಮೈಸೂರು ಬೆಂಗಳೂರು ಹೆದ್ದಾರಿಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದಾರೆ ಎಂದು ದೂರಿದರು.
ಚನ್ನಪಟ್ಟಣ ,ಮದ್ದೂರು, ರಾಮನಗರ ಪಟ್ಟಣಗಳನ್ನು ನೋಡಿದರೆ ಮಂಡ್ಯ ನಗರದ ಹೆದ್ದಾರಿ ಕಿಸ್ಕಿಂದೇಯಾಗಿದೆ ಎಂದು ತಿಳಿಸಿದರು.
ಮಂಡ್ಯದಲ್ಲಿ ಸುಗಮ ಸಂಚಾರಕ್ಕೆ ಮತ್ತು ನಗರದ ಅಭಿವೃದ್ಧಿಗೆ ರಸ್ತೆ ಅಗಲೀಕರಣ ಆಗಬೇಕಿದೆ. ಹಳ್ಳ ಕೊಳ್ಳಗಳನ್ನು ಮುಚ್ಚಬೇಕಾಗಿದೆ. ವೈಜ್ಞಾನಿಕವಾಗಿ ರಸ್ತೆ ದಿಬ್ಬಗಳನ್ನು ಹಾಕಬೇಕಾಗಿದೆ. ಆದರೆ ಇದ್ಯಾವುದು ಆಗಿಲ್ಲ. ಆದಕಾರಣ ಇದನ್ನು ಪ್ರಶ್ನಿಸಿ, ನಗರಸಭೆ ಪಿಡಬ್ಲ್ಯೂಡಿ ಹಾಗೂ ಹೆದ್ದಾರಿ ಪ್ರಾದಿಕಾರದ ವಿರುದ್ಧ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ನುಡಿದರು.
ಮಂಡ್ಯದಲ್ಲಿ ಆಫೆ ಪ್ಯಾಸೆಂಜರ್ ಆಟೋಗಳಲ್ಲಿ ಡ್ರೈವರ್ ಸೇರಿದಂತೆ ನಾಲ್ಕು ಮಂದಿ ಪ್ರಯಾಣಿಸಲು ಅವಕಾಶವಿದೆ. ಆದರೆ 15 ಮಂದಿ ಜನರನ್ನು ತುಂಬಿಕೊಂಡು ಹೋಗಲಾಗುತ್ತಿದೆ. ಜೊತೆಗೆ ಇಪ್ಪತ್ತು ಕಿಲೋಮೀಟರ್ ವರೆಗೆ ಪರವಾನಗಿ ನೀಡಲಾಗಿದ್ದು, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳ ಆಟಗಳು ಪರ್ಮಿಟ್ ಇಲ್ಲದೆ ಸಂಚರಿಸುತ್ತಿದ್ದು ಇದರಿಂದ ಸ್ಥಳೀಯರ ಆರೋಗ್ಯಗಳ ತೊಂದರೆಯಾಗಿದೆ. ಆದಕಾರಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಟೋ ಟ್ಯಾಕ್ಸಿ ಚಾಲಕರ ವೇದಿಕೆಯ ಅಧ್ಯಕ್ಷ ಟಿ ಕೃಷ್ಣ ,ಉಪಾಧ್ಯಕ್ಷ ರವಿಕುಮಾರ, ಕಾರ್ಯದರ್ಶಿ ರಾಜು ,ಬೋರಲಿಂಗ ಕೃಷ್ಣ ಸೇರಿದಂತೆ ಇತರರಿದ್ದರು
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.