Connect with us

Mysore

ಸೋಲಿಗೆ ಅಂಜದಿರಿ, ಯಶಸ್ಸಿನತ್ತ ಮುನ್ನಡೆಯಿರಿ: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌

Published

on

ಮೈಸೂರು: “ಹೋರಾಟಗಳು ಮತ್ತು ವೈಫಲ್ಯಗಳಿಂದ ನಾವು ಕಲಿಯಬೇಕು. ವಿದ್ಯಾರ್ಥಿಗಳೇ, ನಿಮ್ಮ ಕನಸುಗಳನ್ನು ಎಂದಿಗೂ ಬಿಟ್ಟುಕೊಡಬೇಡಿ, ತೊಂದರೆಗಳಿಗೆ ಹೆದರಬೇಡಿ ಮತ್ತು ಯಾವಾಗಲೂ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಮುಂದುವರಿಯಿರಿ” ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 20ನೇ ಘ ಟಿಕೋತ್ಸವದ ಅಧ್ಯಕ್ಷತೆ ವಹಿಸಿ ಗುರುವಾರ ಅವರು ಮಾತನಾಡಿದರು.
“ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಹೇಳಿದಂತೆ “ಸೋಲು ಯಶಸ್ಸಿನ ಮೆಟ್ಟಿಲು”. ನಮ್ಮ ಜೀವನದಲ್ಲಿ ಸೋಲು-ಗೆಲವು ನಿಶ್ಚಿತ. ಸೋತರೆ ಕುಗ್ಗಬಾರದು. ಅದನ್ನೇ, ಗೆಲುವಿನ ಮೆಟ್ಟಿಲು ಎಂದುಕೊಂಡು ಮುನ್ನಡೆಯಿರಿ” ಎಂದರು.

“ವಿದ್ಯಾವಂತ ಯುವಕರು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಬಲ್ಲರು. ಯುವಜನತೆ ಯಾವುದೇ ಕ್ಷೇತ್ರವನ್ನು ಅನುಸರಿಸುತ್ತಿರಲಿ – ಅದು ವಿಜ್ಞಾನ, ತಂತ್ರಜ್ಞಾನ, ವ್ಯಾಪಾರ, ಕಲೆ ಅಥವಾ ಸಮಾಜ ಸೇವೆಯಾಗಿರಲಿ, ಅವರ ಪ್ರಯತ್ನಗಳಿಂದ ದೇಶವು ಪ್ರಗತಿ ಸಾಧಿಸುತ್ತದೆ. ಇಂದಿನ ಯುಗವು ನಾವೀನ್ಯತೆ ಮತ್ತು ಸ್ಪರ್ಧೆಯ ಯುಗವಾಗಿದೆ. ಪ್ರಸ್ತುತ ಡಿಜಿಟಲ್ ಯುಗವಾಗಿದ್ದು, ಕೃತಕ ಬುದ್ಧಿಮತ್ತೆ , ಡೇಟಾ ವಿಜ್ಞಾನ ಮತ್ತು ಸುಧಾರಿತ ತಂತ್ರಜ್ಞಾನಗಳು ಜಗತ್ತಿಗೆ ಹೊಸ ಆಯಾಮಗಳನ್ನು ನೀಡುತ್ತಿವೆ. ಕಲಿಕೆಯ ಜೊತೆಗೆ ನಾವೀನ್ಯತೆ ಮತ್ತು ಸೃಜನಶೀಲತೆಯೊಂದಿಗೆ ನಾವು ಮುಂದುವರಿಯಬೇಕು. ಒಬ್ಬ ಯಶಸ್ವಿ ವ್ಯಕ್ತಿ ಎಂದರೆ ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳುವ, ಹೊಸ ವಿಷಯಗಳನ್ನು ಕಲಿಯುವ ಮತ್ತು ನಾಯಕತ್ವದ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.

“ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಲಕ್ಷಾಂತರ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ವ್ಯವಸ್ಥೆಯ ಮೂಲಕ ಕಲಿಕೆಯ ಅವಕಾಶಗಳನ್ನು ಒದಗಿಸಿದೆ, ಅವರ ವೈಯಕ್ತಿಕ ಮತ್ತು ವೃತ್ತಿಪರ ಆಕಾಂಕ್ಷೆಗಳನ್ನು ಪೂರೈಸಲು ಅನುವು ಮಾಡಿಕೊಡುತ್ತಿದೆ.” ಎಂದು ಶ್ಲಾಘಿಸಿದರು.

“ವಿದ್ಯಾರ್ಥಿಗಳೇ, ನಿಮ್ಮ ಶಿಕ್ಷಕರು ಮತ್ತು ಪೋಷಕರನ್ನು ಗೌರವಿಸಬೇಕು. ಇಂದು ನಿಮ್ಮ ಯಶಸ್ಸಿನಲ್ಲಿ ನಿಮ್ಮ ಶಿಕ್ಷಕರು ಮತ್ತು ಪೋಷಕರು ಪ್ರಮುಖ ಕೊಡುಗೆಯನ್ನು ಹೊಂದಿದ್ದಾರೆ. ಶಿಕ್ಷಕರು ನಿಮಗೆ ಜ್ಞಾನವನ್ನು ನೀಡಿ, ಸರಿಯಾದ ದಿಕ್ಕನ್ನು ತೋರಿಸಿ, ಸ್ಫೂರ್ತಿ ನೀಡಿದರು. ಪಾಲಕರು ಮತ್ತು ಕುಟುಂಬವು ನಿಮ್ಮನ್ನು ಬೆಂಬಲಿಸಿ, ಹೋರಾಟದಲ್ಲಿ ನಿಮ್ಮ ಬೆಂಬಲಕ್ಕೆ ನಿಂತಿದ್ದಾರೆ.” ಎಂದು ತಿಳಿಸಿದರು.

ಸ್ವಾತಂತ್ರ್ಯದ ನಂತರ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ ಮತ್ತು ದೇಶದ ಆರ್ಥಿಕತೆಯು ಪ್ರಬಲವಾಗಿದೆ. ಇಂದು ನಮ್ಮ ಆರ್ಥಿಕತೆಯು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇಂದು ಜಗತ್ತಿನಲ್ಲಿ ಪರಿಸರ ಅಸಮತೋಲನವು ಗಂಭೀರ ಸಮಸ್ಯೆಯಾಗಿದೆ. ಪರಿಸರದ ರಕ್ಷಣೆ ಮತ್ತು ಪ್ರಚಾರ ನಮಗೆಲ್ಲರಿಗೂ ಮುಖ್ಯವಾಗಿದೆ. ನೀರು, ಅರಣ್ಯ ಮತ್ತು ವಾಯು ಸಂರಕ್ಷಣೆಗೆ ಹೆಚ್ಚಿನ ಕೆಲಸ ಮಾಡುವ ಅಗತ್ಯವಿದೆ.” ಎಂದು ಅವರು ಹೇಳಿದರು.

“ಈ ವಿಶ್ವವಿದ್ಯಾಲಯದಿಂದ ಪಡೆದ ಜ್ಞಾನದಿಂದ ಮುಂಬರುವ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿರಿ ಮತ್ತು “ಏಕ್ ಭಾರತ್ – ಶ್ರೇಷ್ಠ ಭಾರತ” ಮತ್ತು “ಸ್ವಾವಲಂಬಿ ಭಾರತ” ನಿರ್ಮಾಣದಲ್ಲಿ ಭಾಗವಹಿಸಿ. ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರವನ್ನು ವಹಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಿ” ಎಂದರು.

“ಸ್ವಾಮಿ ವಿವೇಕಾನಂದ ಹೇಳುತ್ತಿದ್ದರು – “ಎದ್ದೇಳಿ, ಎಚ್ಚರಗೊಳ್ಳಿರಿ ಮತ್ತು ಗುರಿಯನ್ನು ಸಾಧಿಸುವವರೆಗೆ ನಿಲ್ಲಬೇಡಿ” “ಒಂದು ಸಮಯದಲ್ಲಿ ಒಂದು ಕೆಲಸವನ್ನು ಮಾಡಿ ಮತ್ತು ಅದನ್ನು ಪೂರ್ಣ ಭಕ್ತಿಯಿಂದ ಮಾಡಿ.” ಸ್ವಾಮಿ ವಿವೇಕಾನಂದರು ” ರಾಷ್ಟ್ರದ ಅಭಿವೃದ್ಧಿಗೆ ಯುವ ಶಕ್ತಿಯೇ ಆಧಾರ ಎಂದು ನಂಬಿದ್ದರು. ಅವರು ಯುವಕರನ್ನು ಸ್ವಾವಲಂಬಿ, ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪ್ರೇರೇಪಿಸಿದರು. ಅವರ ತೋರಿದ ಮಾರ್ಗದಲ್ಲಿ ನಡೆಯಬೇಕು. “ಶಿಕ್ಷಣವು ಜೀವನದ ಬಹುದೊಡ್ಡ ಕೊಡುಗೆಯಾಗಿದೆ, ಶಿಕ್ಷಣವು ಉದ್ಯೋಗದ ಜೊತೆಗೆ ನಮಗೆ ನೈತಿಕತೆ, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಸಹ ನೀಡುತ್ತದೆ. ಶಿಕ್ಷಣವು ವ್ಯಕ್ತಿಯ ಜೀವನದಲ್ಲಿ ಹೊಸ ಆಲೋಚನೆಗಳು, ಜ್ಞಾನ ಮತ್ತು ಸಾಧ್ಯತೆಗಳನ್ನು ತುಂಬುವ ನಿರಂತರ ಪ್ರಯಾಣವಾಗಿದೆ” ಎಂದು ಹೇಳಿದರು.

ಘಟಿಕೋತ್ಸವ ಸಮಾರಂಭದಲ್ಲಿ ಸಮಾಜ, ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತದೃಷ್ಟಿಯಿಂದ ಕೆಲಸ ಮಾಡಿದ ಸಿ.ಎಂ.ಇರ್ಫಾನುಲ್ಲಾ ಷರೀಫ್, ಮತ್ತು ಡಾ.ದಾಕ್ಷಾಯಿಣಿ ಎಸ್.ಅಪ್ಪಾ ಅವರಿಗೆ ಗೌರವ ಪದವಿ ನೀಡಿ ಗೌರವಿಸಲಾಗಿದೆ. ಅವರ ಅತ್ಯುತ್ತಮ ಸಾಧನೆಗಳಿಗಾಗಿ ಅಭಿನಂದಿಸುತ್ತೇನೆ ಮತ್ತು ಸಮಾಜ ಮತ್ತು ದೇಶದ ಪ್ರಗತಿಯಲ್ಲಿ ಅವರ ಪ್ರಮುಖ ಕೊಡುಗೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.

ಸಮಾರಂಭದಲ್ಲಿ ಎನ್. ಸಿ.ವಿ.ಈ.ಟಿ ಮತ್ತು ಎಂ.ಎಸ್.ಡಿ.ಇ. ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ, ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮತ್ತು ಗಣ್ಯರು ಹಾಜರಿದ್ದರು.

Continue Reading

Mysore

ನಕಲಿ ದಾಖಲೆ ಸೃಷ್ಟಿಸಿ ಮೈಸೂರಿನ ಐಸಿಐಸಿಐ ಬ್ಯಾಂಕ್‌ಗೆ 2.33 ಕೋಟಿ ರೂ. ವಂಚನೆ

Published

on

ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ಮೈಸೂರಿನ ಐಸಿಐಸಿಐ ಬ್ಯಾಂಕ್‌ಗೆ 2.33 ಕೋಟಿ ರೂ. ವಂಚಿಸಲಾಗಿದೆ.
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಧ್ಯವರ್ತಿಗಳು ಸೇರಿದಂತೆ 8 ಮಂದಿ ವಿರುದ್ಧ ನಗರದ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ವಿವಿ ಮೊಹಲ್ಲಾ ಶಾಖೆಯ ವ್ಯವಸ್ಥಾಪಕ ವಸಂತ್ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ 1: ಸಾಲಗಾರ ಚಂದ್ರಶೇಖರ್, ಸಹ ಸಾಲಗಾರ ಸಂದೀಪ್ ಹಾಗೂ ಮಧ್ಯವರ್ತಿ ಪ್ರತಾಪ್ ಆರೋಪಿಗಳು. ಇವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಗೆ 45 ಲಕ್ಷ ರೂ. ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ 2: ಸಾಲಗಾರ ರವಿಕೀರ್ತಿ, ಸಹ ಸಾಲಗಾರ ರಂಜನ್ ಹಾಗೂ ಮಧ್ಯವರ್ತಿ ರೋಷನ್ ಆರೋಪಿಗಳು. ಬ್ಯಾಂಕ್ ಗೆ ನಕಲಿ ದಾಖಲೆ ಸಲ್ಲಿಸಿ 65,55,187 ರೂ. ವಂಚಿಸಿದ್ದಾರೆಂದು ಉಲ್ಲೇಖಿಸಲಾಗಿದೆ.

ಪ್ರಕರಣ 3: ಸಾಲಗಾರ ರೋಷನ್ ಹಾಗೂ ಸಹ ಸಾಲಗಾರರಾದ ಸುಹಾನಾ ಎಂಬುವರು ನಕಲಿ ದಾಖಲೆ ನೀಡಿ 1,22,10,470 ರೂ. ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಸದರಿ ಆರೋಪಿಗಳು 2022ರಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದಿದ್ದಾರೆ. ಆದರೆ ಹಣ ಮರು ಪಾವತಿ ಮಾಡಿಲ್ಲ. ಪರಿಶೀಲನೆ ನಡೆಸಿದಾಗ ನಕಲಿ ದಾಖಲೆ ನೀಡಿರುವುದು ಗೊತ್ತಾಗಿದೆ ಎಂದು ವಿವರಿಸಲಾಗಿದೆ.

Continue Reading

Mysore

ನಿರ್ಧಾರ ಕೈ ಬಿಡುವಂತೆ ಅಗ್ರಹ

Published

on

ತಿ.ನರಸೀಪುರ: ಪ್ರಸಿದ್ಧ ರಾಜ ಬೊಪ್ಪೇಗೌಡನ ಪುರದ ಮಂಟೇಸ್ವಾಮಿ ಗದ್ದುಗೆ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿರುವ ಇತರೆ ಮಂಟೇಸ್ವಾಮಿ,ರಾಚಪ್ಪಾಜಿ ಮತ್ತು ಸಿದ್ದಪ್ಪಾಜಿ ಗದ್ದುಗೆಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚನೆ ನಿರ್ಧಾರವನ್ನು ಸರ್ಕಾರ ಕೈ ಬಿಡಬೇಕು ಎಂದು ಹಲವು ಸಂಘಟಗಳ ಮುಖಂಡರು ಒತ್ತಾಯಿಸಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಕರೆದಿದ್ದ ಸುದ್ದಿ ಘೋಷ್ಠಿಯಲ್ಲಿ ತಾಲೂಕು ರೈತ ಸಂಘ, ಬಹುಜನ ಸಮಾಜವಾದಿ ಪಕ್ಷ ಮತ್ತುತಾಲೂಕು ಮಾದಿಗ ಸಂಘಟನೆಗಳು ಸರ್ಕಾರ ಪ್ರಾಧಿಕಾರ ರಚನೆಯ ನಿರ್ಧಾರವನ್ನು ಖಂಡಿಸಿದವು.
ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ, ಕೆಲವು ರಾಜಕೀಯ ನಾಯಕರು ತಮ್ಮ ವೈಯುಕ್ತಿಕ ಹಿತಾಸಕ್ತಿಗೋಸ್ಕರ ಬೋಪ್ಪೆಗೌಡನಪುರ,ಕಪ್ಪಡಿ, ಕುರುಬನಕಟ್ಟೆ, ಚಿಕ್ಕಲ್ಲೂರು ಮತ್ತು ಹೊನ್ನನಾಯಕಹಳ್ಳಿ ಗಳಲ್ಲಿರುವ ಸಿದ್ದಪ್ಪಾಜಿ, ರಾಚಪ್ಪಾಜಿ ಮತ್ತು ಮಂಟೇ ಸ್ವಾಮಿ ಗದ್ದುಗೆಗಳಿಗೆ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚನೆ ಚಿಂತನೆ ನಡೆಸಿದ್ದು, ಈ ನಿರ್ಧಾರದಿಂದ ಈ ಎಲ್ಲ ಶ್ರೀ ಕ್ಷೇತ್ರಗಳಲ್ಲಿ ಮಂಟೇಸ್ವಾಮಿ,ಸಿದ್ದಪ್ಪಾಜಿ ಮತ್ತು ರಾಚಪ್ಪಾಜಿ ಪರಂಪರೆ ನಶಿಸಿ ಹೋಗಲಿದೆ. ಹಾಗಾಗಿ ಸರ್ಕಾರ ಪ್ರಾಧಿಕಾರ ರಚನೆಯ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಅಗ್ರಹಿಸಿದರು.
ರೈತ ಸಂಘದ ಜಿಲ್ಲಾ ಮುಖಂಡರಾದ ಚಿದರಹಳ್ಳಿ ನಾಗೇಂದ್ರ,
ಈ.ರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಜ್ಜಲೂರು ಚಂದ್ರಶೇಖರ್, ತಾಲೂಕು ಸಂಘಟನಾ ಕಾರ್ಯದರ್ಶಿ ಶಾಂತಮೂರ್ತಿ,
ಬಿಎಸ್ ಪಿ ರಾಜ್ಯ ಕಾರ್ಯದರ್ಶಿ ಪುಟ್ಟಸ್ವಾಮಿ, ತಾಲೂಕು ಬಾಬು ಜಗಜೀವನ್ ರಾಂ ಸಂಘದ ಮಾಜಿ ಅಧ್ಯಕ್ಷ ಪುಟ್ಟಯ್ಯ, ಕೊತ್ತೆಗಾಲ ಕುಮಾರ್, ರಾಮಸ್ವಾಮಿ, ಕಳ್ಳಿಪುರ ನಾರಾಯಣ್, ಕೆಇಬಿ ನಾರಾಯಣ್ (ಕಂಟ್ರಾಕ್ಟರ್ ), ಹೇಳವರಹುಂಡಿ ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.

Continue Reading

Mysore

ಬಿಸಿಯೂಟ ಅನುದಾನ ದುರುಪಯೋಗ

Published

on

ತಿ.ನರಸೀಪುರ: ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ಬಿಸಿಯೂಟ ಯೋಜನೆ ಹೆಸರಿನಲ್ಲಿ ಅನುದಾನ ದುರ್ಬಳಕೆ, ಅನುದಾನ ಹೊಂದಾಣಿಕೆ ಮಾಡಲು ನಕಲಿ ಬಿಲ್‌ಗಳ ಸೃಷ್ಟಿ ಮತ್ತು ಲೆಕ್ಕಪತ್ರಗಳಲ್ಲಿ ಗೊಂದಲವಿದ್ದು, ವಿದ್ಯೋದಯ ಸಂಸ್ಥೆ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಬಣ) ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ್ ಅಗ್ರಹಿಸಿದರು.

ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಕ್ಷರ ದಾಸೋಹ ಖಾತೆಯಿಂದ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿಕೊಂಡು ಹಣವನ್ನು ಸಂಸ್ಥೆಯ ಎರಡು ಶಾಲೆಗಳ ಮುಖ್ಯ ಶಿಕ್ಷಕರು ದುರುಪಯೋಗ ಮಾಡಿಕೊಂಡಿರುವುದು ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗಗೊಂಡಿದೆ.

ಹೆಚ್ಚುವರಿ ಹಣ ಬಿಡುಗಡೆ ಮಾಡಿ ಆದನ್ನು ಹೊಂದಾಣಿಕೆ ಮಾಡಲು ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇದ್ದಕ್ಕಾಗಿ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಅಸಮಾನತೆ, ಹಾಜರಿಲ್ಲದ ಮಕ್ಕಳಿಗೂ ಹಾಜರಾತಿ ನೀಡಲಾಗಿದೆ.ಅಲ್ಲದೆ ಡ್ರಾ ಮಾಡಿರುವ ಹಣಕ್ಕೆ ಹಣಕಾಸು ವಹಿಯನ್ನು ಸಮರ್ಪಕವಾಗಿ ನಿರ್ವಹಿಸದಿಲ್ಲದಿರುವುದು ಕೂಡ ಕಂಡು ಬಂದಿದೆ.

ಸಾಮಾಜಿಕ ಹೋರಾಟಗಾರ ಬಿ.ಎಂ.ನವೀನ್ ಮಾತನಾಡಿ,ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರಿಗೆ ಗೈರು ಹಾಜರಾತಿಯಾಗಿದ್ದ ಮಕ್ಕಳ ಹೆಸರಿನಲ್ಲಿ ಸುಳ್ಳು ಹಾಜರಾತಿ ದಾಖಲಿಸಲು ಒತ್ತಡ ಹಾಕಿದ್ದು, ನಕಲಿ ಬಿಲ್‌ಗಳಿಗೆ ಸಹಿ ಮಾಡಿಸಲು ಒತ್ತಾಯ ಮಾಡಿದ್ದಾರೆ. ಕೆಲ ಶಿಕ್ಷಕರ ಮೇಲೆ ಜಾತಿ ಆಧಾರಿತ ಪ್ರಕರಣ ದಾಖಲಿಸಲು ಸೂಚನೆ ನೀಡಿರುವುದು ವರದಿಯಲ್ಲಿ ಉಲ್ಲೇಖವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕದಸಂಸ ತಾಲೂಕು ಸಂಚಾಲಕ
ಕುಂತನಹಳ್ಳಿ ಪುರುಷೋತ್ತಮ್, ಕೋಣಗಳ್ಳಿ ಮಹೇಶ್, ಅತ್ತಹಳ್ಳಿ ರವಿ, ಸದಸ್ಯರಾದ ಸೋಸ್ಲೆ ನಾರಾಯಣ್, ಬಿ.ಎಂ.ನವೀನ್, ಕುಂತನಹಳ್ಳಿ ಗೋಪಿ ಹಾಜರಿದ್ದರು.

ಮಾನ್ಯತೆ ನವೀಕರಣ ರದ್ದತಿಗೆ ಅಗ್ರಹ:

ಕರ್ನಾಟಕ ಶಿಕ್ಷಣ ಕಾಯಿದೆ 1983ರ ಕಲಂ 53ರಡಿ ಮೂವರು ಶಿಕ್ಷಕರನ್ನು ಅಮಾನತು ಮಾಡಲು ಶಿಫಾರಸು ಮಾಡಿದ್ದರೂ, ಆಡಳಿತ ಮಂಡಳಿ ಕ್ರಮ ಕೈಗೊಂಡಿಲ್ಲ. “ರಾಜಕೀಯ ಒತ್ತಡದಿಂದ ವಿಚಾರಣೆ ನಿಲ್ಲಿಸಲಾಗಿದೆ.ವಿದ್ಯೋದಯ ಶಾಲೆಗೆ ಅಕ್ಷರ ದಾಸೋಹ ಅನುದಾನವನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು. ಶಾಲೆಯ ಮಾನ್ಯತೆ ನವೀಕರಣ ರದ್ದುಪಡಿಸಬೇಕು.ಆರೋಪಿತ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸಮಿತಿ ಮನವಿ ಸಲ್ಲಿಸಿದೆ. ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಮಾಡಲಾಗುವುದು ಎಂದು ಸೋಸಲೆ ರಾಜಶೇಖರ್ ಎಚ್ಚರಿಸಿದ್ದಾರೆ.

Continue Reading

Trending

error: Content is protected !!