Hassan
ದೇಶಪ್ರೇಮಕ್ಕೆ ಪ್ರತಿಯಾಗಿ ಕ್ರಿಮಿನಲ್ ಪಟ್ಟ ಪಡೆದ “ಗೋರ್ ಮಾಟಿ”

ಇದೇ ಬುದುವಾರ ಸಂಜೆ ಕಲಾಭವನದಲ್ಲಿ ಚಂದದ ನಾಟಕ ಯಾಕೆ ನೋಡಬೇಕಂದ್ರೆ…
– ಚಲಂ
ನೋಡಲು ಚಂದವಿರುವ ಕಾರಣಕ್ಕೆ ನಮ್ಮನ್ನು “ಗೋರ್” ಅಂತಾರೆ. ನಮ್ಮ ಸಮುದಾಯದ ಜನ ಎತ್ತರಕ್ಕೆ, ಎಣ್ಣೆಗಂಪು ಬಣ್ಣದ ಸುಂದರ ಜನಗಳು. ಹಾಗಾಗಿ ನಾವು ಗೋರ್. ಮರಾಠಿ ಭಾಷೆಯಲ್ಲಿ ಸುಂದರವಾಗಿರುವ ಜನರನ್ನು ಗೋರ್ ಮಾಟಿ ಅಂತಾರೆ. ಹಾಗಾಗಿ ನಮ್ಮ ಸಮುದಾಯ ಮಹಾರಾಷ್ಟ್ರದಲ್ಲಿ ಗೋರ್ ಮಾಟಿ. ಇಲ್ಲಿ ಲಂಬಾಣಿ, ದೇಶದ ಹದಿನಾರು ರಾಜ್ಯಗಳಲ್ಲಿ ಹದಿನಾರು ಹೆಸರಿನಿಂದ ನಮ್ಮನ್ನು ಕರೆಯುತ್ತಾರೆ ಎಂದು ಶಿಕ್ಷಕರಾದ ಸೋಮನಾಯಕ್ ವಿವರಿಸುವಾಗ ಕಣ್ಣಿನಲ್ಲಿ ಹೆಮ್ಮೆಯ ಹೊಳಪು.
ನಾಡಿದ್ದು ಅಂದರೆ ಜೂನ್ 19 ನೇ ತಾರೀಖು ಹಾಸನದ ಕಲಾಭವನದಲ್ಲಿ ರಂಗಾಯಣ “ಗೋರ್ ಮಾಟಿ” ಎಂಬ ನಾಟಕ ಪ್ರದರ್ದಶನ ಮಾಡುತ್ತಿದೆ. ಹಾಸನದ ಉಲಿವಾಲ ಸ್ಕೂಲ್ ಆಫ್ ಡ್ರಾಮ ಈ ನಾಟಕವನ್ನು ಆಯೋಜನೆ ಮಾಡ್ತೀವಿ ಅಂತ ಹೊರಟಾಗ ಸಿಕ್ಕವರೇ ಈ ಸೇವಾಲಾಲರ ಮನೆಮಂದಿ.
ಬಂಜಾರ ಎಂಬುದು ಎಲ್ಲೆಡೆ ಇರುವ ಹೆಸರು. ಈ ಬಂಜಾರ ಸಮುದಾಯದ ಜನ ಸೌಂದರ್ಯವಂತರು ಮಾತ್ರವಲ್ಲ, ಬಹಳ ಶ್ರಮಜೀವಿಗಳು. ಶ್ರಮಜೀವಿಗಳು ಮಾತ್ರವಲ್ಲ, ಕುಟಿಲತೆಯರಿದ ಕುಶಲಮತಿಗಳು. ದೇಶವನ್ನು ಕಟ್ಟಿದವರ ಬಗ್ಗೆ ದೊಡ್ಡ ದೊಡ್ಡ ಪುಸ್ತಕಗಳಿವೆ, ಏನೇನೋ ಸಂಶೋದನೆಗಳಾಗಿವೆ. ಆದರೆ ಸ್ವಾತಂತ್ರ್ಯ ಮುನ್ನ ಮತ್ತು ಸ್ವಾತಂತ್ರ್ಯ ನಂತರ ಈ ದೇಶದಲ್ಲಿ ಕಟ್ಟಿದ ದೊಡ್ಡ ಸೇತುವೆಗಳು, ಉದ್ದದ ರೈಲ್ವೇ ಟ್ರ್ಯಾಕುಗಳು, ಅಣೆಕಟ್ಟುಗಳು ಎಲ್ಲವುಗಳನ್ನು ಕಟ್ಟುವುದಲ್ಲಿ ಮೊದಲ ಕೈ ಅಂತ ಏನಾದರೂ ಇದ್ದರೆ ಅದು ಬಂಜಾರ ಸಮುದಾಯದ್ದು. ದಟ್ಟವಾದ ಕಾಡಿನಲ್ಲಿ ಏನಕ್ಕೂ ಹೆದರದೇ ನುಗ್ಗಿ ರೈಲಿನ ದಾರಿ ಮಾಡಿದವರು ಈ ಗೋರ್ ಮಾಟಿಗಳು. ಇಂದಿಗೂ ರಸ್ತೆಯ ಕೆಲಸ ಹಾಗು ರಸ್ತೆ ಬದಿಯ ಪೈಪ್ ಹೂಳುವ ಕೆಲಸದಂತಹಾ ಶ್ರಮದ ಕೆಲಸಗಳಲ್ಲಿ ದಣಿವರಿಯದೇ ಕೆಲಸ ಮಾಡುವವರು ಈ ಗೋರ್ ಮಾಟಿಯರು ಅಂತ ಹೇಳಿದರೆ ಸಂಪೂರ್ಣ ಪರಿಚಯವಾಗುವುದಿಲ್ಲ.
ಈ ದೇಶಕ್ಕೆ ಬಿಡುಗಡೆ ಬೇಕು ಅಂತ ಅಲ್ಲಲ್ಲೇ ಯುದ್ದಸನ್ನದ್ದರಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಒಂದೆಡೆಯಿಂದ ಮತ್ತೊಂದೆಡೆಗೆ ಶಸ್ತ್ರಾಸ್ತ್ರ ಪೂರೈಸಿದವರು ಈ ಗೋರ್ ಮಾಟಿಗಳು.
ಗೆರಿಲ್ಲಾ ಯುದ್ದದಲ್ಲಿ ಪಳಗಿದ ಬಂಜಾರ ಸಮುದಾಯ ಬ್ರಿಟಿಷರಿಗೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿತು. ಅದೇ ಕಾರಣಕ್ಕೆ ಅಂದಿನ ಬ್ರಿಟಿಷ್ ಸರ್ಕಾರ ಈ ಸಮುದಾಯವನ್ನು ಇಂತಹಾ ಶ್ರಮಜೀವಿಗಳ ಸಮುದಾಯವನ್ನು ಕ್ರಮಿನಲ್ ಆಕ್ಟ್ ಮೂಲಕ ಕೆಟ್ಟವರನ್ನನ್ನಾಗಿಸಿತು. ಬ್ರಿಟೀಷರು ತೊಲಗಿದ ನಂತರವೂ ಈ ಸಮುದಾಯಕ್ಕೆ ಅಂಟಿದ ಕಳಂಕ ಸುಲಭಕ್ಕೆ ತೊಳೆದು ಹೋಗಲಿಲ್ಲ.
ಸಣ್ಣಪುಟ್ಟ ವ್ಯಾಪಾರದ ಮೂಲಕ, ಶ್ರಮದ ಕೆಲಸಗಳ ಮೂಲಕ ತಮ್ಮದೇ ಅಸ್ತಿತ್ವ ಹೊಂದಿರುವ ಬಂಜಾರ ಸಮುದಾಯ ಕ್ರಿಮಿನಲ್ ಸಮುದಾಯವಾಗಿ ಬಿಂಬಿತವಾಯಿತು. ಉಪ್ಪನ್ನು ಮಾರಿ ಜನರಿಗೆ ರುಚಿ ಪರಿಚಯ ಮಾಡಿಸಿದ ಲವಣಿಗರು ಅಂದರೆ ಈ ಚಂದದ ಲಂಬಾಣಿಗಳು ಜನರ ಕಣ್ಣಲ್ಲಿ ಕಳ್ಳರಾದರು. ಮೇಲ್ಜಾತಿಗಳ ಕುತಂತ್ರಕ್ಕೆ ಬಲಿಯಾಗಿ ಕೆಟ್ಟ ಹೆಸರು ತಂದುಕೊಟ್ಟ ಬಹಳಷ್ಟು ಸಮುದಾಯಗಳ ನಡುವೆ ಮುಖ್ಯವಾದ ಈ ಸಮುದಾಯದ ಹೆಸರು ನಮೂದಾಯಿತು.
ಈ ದೇಶದ ಅಥವಾ ಈ ಪ್ರಪಂಚದ ಯಾವುದೇ ಬುಡಕಟ್ಟು ಜನಾಂಗ ದೇಶದ್ರೋಹದ ಕೆಲಸ ಮಾಡಿದ ಉದಾಹರಣೆಗಳಿಲ್ಲ. ಹಾಗೆ ನೋಡಿದರೆ ತಮ್ಮ ಅಸ್ತಿತ್ವ ಕೂಡ ಒಂದು ಸ್ವಾತಂತ್ರ್ಯ ಅಂತ ಹೇಳಿಕೊಟ್ಟವರೇ ಇಂತಹಾ ಸಮುದಾಯಗಳು. ಆದರೆ ಇಂತಹಾ ಸಮುದಾಯಗಳನ್ನು ಕೆಟ್ಟವು ಅಂತ ಮಾಡಿ ಅಳಿವಿನಂಚಿಗೆ ತರಲಾಯಿತು. ಈಗಲೂ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಅಲ್ಲಲ್ಲಿ ಹರಡಿಹೋಗಿರುವ ಹದಿನಾರು ಕೋಟಿ ಬಂಜಾರ ಜನಾಂಗದ ಸಂಸ್ಕೃತಿ ಕೂಡ ಶ್ರಿಮಂತವಾದುದು.
ಮೊದಲಿಗೆ ಎದ್ದು ಕಾಣುವ ಅವರ ಚಂದದ ವಸ್ತ್ರ ವಿನ್ಯಾಸ ಎಂತಹವರ ಮನಸಿನಲ್ಲಿಯೂ ಉಲ್ಲಾಸದ ಭಾವನೆ ಮೂಡಿಸುವಂತದು. ಅವರ ನೃತ್ಯ ಶೈಲಿ, ಹಾಡುಗಳು, ಅವರದೇ ಆದ ಭಾಷೆ ಬಂಜಾರ ಸಮಾಜದ ಸದೃಡತೆಗೆ ಹಿಡಿದ ಕನ್ನಡಿ.
ಹದಿನೇಳನೇ ಶತಮಾನದಲ್ಲಿ ಸೇವಾಲಾಲ್ ಎಂಬ ಶ್ರೀಮಂತ ಕುಟುಂಬದ ಕುಡಿಯೊಂದು ಸಮುದಾಯದ ಚೈತನ್ಯವಾಗಿ ಬಂದ ನಂತರ ಒಂದಷ್ಟು ಜಾಗೃತಿ ಬಂಜಾರ ಸಮುದಾಯಕ್ಕೆ ದಕ್ಕಿತಾದರೂ ಸ್ವಾತಂತ್ರ್ಯ ಪೂರ್ವ ಹಾಗು ಸ್ವಾತಂತ್ರ್ಯ ಬಂದ ನಂತರವೂ ಶಾಪಗ್ರಸ್ತರಾಗಿಯೇ ಉಳಿದುಹೋಗಿರುವ ಈ ಬಂಜಾರರ ಬಗ್ಗೆ ನಮ್ಮ ಅರಿವು ವಿಸ್ತರಿಸಲೇ ಇಲ್ಲ.
ಕಳೆದ ವಾರ ರಂಗಾಯಣದ ನಿರ್ಮಲಾ ಹಿರೇಮಠ ಮೇಡಂ ಕರೆಮಾಡಿ ಹಾಸನದಲ್ಲಿ ಈ ತರಹದೊಂದು ನಾಟಕ ಪ್ರದರ್ಶನ ಮಾಡುವ ಅವಕಾಶವಿದೆ ನೋಡಿ ಅಂದಾಗ ಕಡಿಮೆ ಸಮಯವಿದ್ದರೂ “ಥಟ್ ಅಂತ ಹೇಳಿ” ಒಪ್ಪಿಕೊಳ್ಳಲು ಸಂಸ್ಕೃತಿಯ ಕಾರಣವಿತ್ತು.
ಅದರಲ್ಲೂ ಸಿ ಬಸವಲಿಂಗಯ್ಯನವರಂತಹಾ ನಿರ್ದೇಶನದ ಒಂದು ನಾಟಕ ನಾವು ಹಾಸನದವರು ನೋಡದಿದ್ದರೆ, ಬಂಜಾರ, ಲಂಬಾಣಿ ಅಂತೆಲ್ಲಾ ಕರೆಸಿಕೊಳ್ಳುವ ಈ ಗೋರ್ ಮಾಟಿ ಸಮುದಾಯದ ಪರಿಚಯ ಶಕ್ತವಾಗಿ ಪರಿಚಯಿಸಿ ಕೊಳ್ಳದೇ ಹೋದರೆ ನಷ್ಟ ನಮಗಲ್ಲದೇ ಮತ್ಯಾರಿಗೆ ಹೇಳಿ…?
Hassan
ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾ*ವು

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ಟೌನ್ ಶೆಟ್ಟಿಹಳ್ಳಿ ಬಳಿ ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.
ಈ ಘಟನೆ ಇಂದು ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ಸಂಭವಿಸಿದೆ.
ಇನ್ನೂ ಈ ದುರಂತದಿಂದ ಇಬ್ಬರು ಮೃತಪಟ್ಟಿದ್ದರೆ, ಮತ್ತಿಬ್ಬರಿಗೆ ಗಂಭೀರ ಗಾಯಾಗಳಾಗಿವೆ.
ಸದ್ಯ ಇವರಿಬ್ಬರನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
Hassan
ಅರ್ಹರಿಗೆ ಸರ್ಕಾರಿ ಸೌಲಭ್ಯವನ್ನು ಒದಗಿಸಿ : ಡಿಸಿ ಲತಾ ಕುಮಾರಿ





Hassan
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಪ್ರಾರಂಭಿಸಲು ಆಗ್ರಹಿಸಿ: ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನೆ

ಹಾಸನ: ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರವೇ ಆರಂಭಿಸುವಂತೆ ಹಾಗೂ ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ ಜಿಲ್ಲೆಯ ಜನಾರೋಗ್ಯವನ್ನು ಖಾತ್ರಿಪಡಿಸುವಂತೆ ಆಗ್ರಹಿಸಿ ಇನ್ನು ಸಾರ್ವಜನಿಕರಿಗೆ ಸೇವೆ ಸಿಗದ ಹಾಸನದ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಮುಂದೆ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನಾ ಸಭೆ ನಡೆಸಿದರು.
ಈ ವೇಳೆ ಸಾಮಾಜಿಕ ಹೋರಾಟಗಾರರು ಹಾಗೂ ಸಾಹಿತಿ ರೂಪ ಹಾಸನ್, ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ,ಕಳೆದ ತಿಂಗಳಿನಿಂದೀಚೆಗೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ಸಾವುಗಳು ಎಲ್ಲರನ್ನೂ ಆತಂಕಕ್ಕೆ ಈಡು ಮಾಡಿವೆ. ಜಿಲ್ಲೆಯ ಹೃಧಯಾಘಾತದ ಸಾವುಗಳು ದೇಶದಾದ್ಯಂತ ಸುದ್ದಿಯಾದವು. ಅದರಲ್ಲೂ ಎಳೆಯರ ಮತ್ತು ಯುವಜನರ ಹಠಾತ್ ಸಾವು ತೀವ್ರ ಆತಂಕವನ್ನು ಸೃಷ್ಟಿಮಾಡಿದೆ ಎಂದರು.
ಸರ್ಕಾರ ಈಗಾಗಲೇ ಈ ಹಠಾತ್ ಸಾವುಗಳ ಕುರಿತು ತಜ್ಞರ ಸಮಿತಿ ಮೂಲಕ ಅಧ್ಯಯನ ನಡೆಸಿ ವರದಿ ತರಿಸಿಕೊಂಡಿದೆ. ಹಾಗೂ ಅಗತ್ಯ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ತಜ್ಞರ ಸಮಿತಿಯ ವರದಿಯು ಹಠಾತ್ ಸಾವುಗಳಿಗೆ ಜೀವನ ಶೈಲಿ, ಆಹಾರ ಪದ್ದತಿ, ಪರಿಸರ ಮಾಲಿನ್ಯ ಮತ್ತು ಕೋವಿಡೋತ್ತರ ಪರಿಸ್ಥಿತಿಯ ಕಾರಣಗಳತ್ತ ಬೊಟ್ಟು ಮಾಡಿದೆ. ಈ ಸ್ಪರ್ಧಾತ್ಮಕ ಸಮಾಜದಲ್ಲಿ ಜನರು ಅನುಭವಿಸುತ್ತಿರುವ ಆರ್ಥಿಕ, ಸಾಮಾಜಿಕ ತಾರತಮ್ಯಗಳು ಮತ್ತು ಕೌಟುಂಬಿಕ ಒತ್ತಡಗಳು, ಇಂತಹ ಗಂಭೀರವಾದ ಪರಿಣಾಮಗಳಿಗೆ ಕಾರಣವಾಗುತ್ತಿವೆ. ಈ ಎಲ್ಲಾ ಪರಿಣಾಮಗಳಿಗೆ ಕೇವಲ ಜನರ ವಯಕ್ತಿಕ ಮಟ್ಟದ ಕಾರಣಗಳು ಮಾತ್ರವೇ ಆಗಿರದೆ ಪ್ರಮುಖವಾಗಿ ಅವುಗಳು ಸಾಮಾಜಿಕ ಆರ್ಥಿಕ ಕಾರಣಗಳಾಗಿವೆ. ಈ ಸಾಮಾಜಿಕ ಆರ್ಥಿಕ ಕಾರಣಗಳಿಗೆ ಮೊದಲು ಪರಿಹಾರ ದೊರಕಿಸಿಕೊಡುವ ಕೆಲಸ ಯಾವುದೇ ಪ್ರಜಾಸತ್ತಾತ್ಮಕ ನಾಗರಿಕ ಸರ್ಕಾರಗಳ ಮತ್ತು ಆಡಳಿತ ವ್ಯವಸ್ಥೆಯ ಹೊಣೆಗಾರಿಕೆಯಾಗಿದೆ ಎಂದು ದೂರಿದರು.
ಶಸ್ತ್ರಚಿಕಿತ್ಸಕ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ, ಮಕ್ಕಳ ತಜ್ಞ ಮತ್ತು ಅರಿವಳಿಕೆ ತಜ್ಞರು ಇರಬೇಕು. ಆದರೆ, ಹಾಸನ ಜಿಲ್ಲೆಯ ಹಲವು ಸಿ.ಹೆಚ್.ಸಿ.ಗಳಲ್ಲಿ ಈ ಬಹುತೇಕ ತಜ್ಞರ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಸಿ-ಸೆಕ್ಷನ್ ಹೆರಿಗೆ ಅಥವಾ ಇತರ ಪ್ರಮುಖ ಶಸ್ತ್ರಚಿಕಿತ್ಸೆಗಳಿಗೆ ಜಿಲ್ಲಾ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ವೈದ್ಯಾಧಿಕಾರಿಗಳು ಇಬ್ಬರು ವೈದ್ಯಾಧಿಕಾರಿಗಳ ಬದಲು ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಲ್ಯಾಬ್ ಟೆಕ್ನಿಷಿಯನ್, ಫಾರ್ಮಾಸಿಸ್ಟ್ ಮತ್ತು ನರ್ಸಿಂಗ್ ಸಿಬ್ಬಂದಿಯ ಕೊರತೆಯೂ ಸಾಮಾನ್ಯವಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯುತ್ತಿದ್ದರೂ, ಖಾಯಂ ಹುದ್ದೆಗಳು ಖಾಲಿ ಇರುವುದು ಸೇವೆಯ ಮೇಲೆ ಪರಿಣಾಮ ಬೀರುತ್ತಿದೆ. ಸಿಬ್ಬಂದಿ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ, ಎಲ್ಲಾ ಪಿ.ಹೆಚ್.ಸಿ. ಗಳಲ್ಲಿ 24×7 ತುರ್ತು ಮತ್ತು ಹೆರಿಗೆ ಸೇವೆಗಳನ್ನು ಪರಿಣಾಮಕಾರಿಯಾಗಿ ನೀಡುವುದು ಸವಾಲಾಗಿದೆ. ಕೆಲವು ಸಿ.ಹೆಚ್.ಸಿ.ಗಳಲ್ಲಿ ಎಕ್ಸ್-ರೇ ಯಂತ್ರಗಳು ಇದ್ದರೂ, ಅವುಗಳನ್ನು ನಿರ್ವಹಿಸಲು ರೇಡಿಯೋಗ್ರಾಫರ್ ಇಲ್ಲದಿರುವುದು ಅಥವಾ ಯಂತ್ರಗಳು ಕೆಟ್ಟಿರುವುದು ವರದಿಯಾಗಿದೆ ಎಂದು ದೂರಿದರು.
ಇದೇ ರೀತಿ, ಎಲ್ಲಾ ಕೇಂದ್ರಗಳಲ್ಲಿ ಸಂಪೂರ್ಣ ಸುಸಜ್ಜಿತ ಪ್ರಯೋಗಾಲಯಗಳು ಲಭ್ಯವಿಲ್ಲ. ಐ.ಪಿ.ಹೆಚ್.ಎಸ್. ಪ್ರಕಾರ ಸಿ.ಹೆಚ್.ಸಿ. ಗಳು ಪ್ರಥಮ ರೆಫರಲ್ ಘಟಕವಾಗಿ ಕಾರ್ಯನಿರ್ವಹಿಸಲು ರಕ್ತ ಸಂಗ್ರಹಣಾ ಘಟಕವನ್ನು ಹೊಂದಿರಬೇಕು. ಮಾನದಂಡಗಳ ಪ್ರಕಾರ ಅಗತ್ಯ ತಜ್ಞ ವೈದ್ಯರ ಕೊರತೆ, ಅಗತ್ಯ ಕಟ್ಟಡ, ಲ್ಯಾಬೊರೇಟರಿ, ವೈದ್ಯಕೀಯ ಯಂತ್ರೋಪಕರಣಗಳು ಹಾಗೂ ಅಗತ್ಯ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳ ಕೊರತೆಗಳನ್ನು ಎದುರಿಸುತ್ತಿವೆ ಎಂದು ಹೇಳಿದರು.
ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಒಟ್ಟು ಮಂಜೂರಾದ 340 ವೈದ್ಯರ ಹುದ್ದೆಗಳಲ್ಲಿ 117 ವೈದ್ಯರ ಹುದ್ದೆಗಳು ಖಾಲಿಯಿವೆ. ಅವುಗಳಲ್ಲಿ 36 ತಜ್ಞ ವೈದ್ಯರು, 22 ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು ಮತ್ತು 52 ಕರ್ತವ್ಯನಿರತ ವೈದ್ಯಾಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಒಟ್ಟು ಮಂಜೂರಾದ 1856 ವೈದ್ಯಕೀಯ ಸಿಬ್ಬಂದಿ ಹುದ್ದೆಗಳಲ್ಲಿ 815 ವೈದ್ಯಕೀಯ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಒಟ್ಟು ಮಂಜೂರಾದ 824 ವೈದ್ಯಕೀಯೇತರ ಸಿಬ್ಬಂದಿಗಳ ಹುದ್ದೆಗಳಲ್ಲಿ 664 ವೈದ್ಯಕೀಯೇತರ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಹಾಗೂ ಇಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಇಡೀ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೊಳಗೆ ಕೇವಲ ಒಬ್ಬರ ಮಾತ್ರ ಹೃದ್ರೋಗ ತಜ್ಞರು (ಕಾರ್ಡಿಯಾಲಜಿಸ್ಟ್) ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ಜಿಲ್ಲೆಯ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಸುತ್ತದೆ ಎಂದರು.
ಹಾಸನ ವೈಧ್ಯಕೀಯ ವಿಜ್ಞಾನಗಳ ಸಂಸ್ಥೆಯ ಜಿಲ್ಲಾ ಆಸ್ಪತ್ರೆ ಸಾಕಷ್ಟು ಉತ್ತಮ ಗುಣಮಟ್ಟದ ವೈಧ್ಯಕೀಯ ಸೇವೆಯನ್ನು ಉಚಿತ ಮತ್ತು ಅತ್ಯಂತ ಕಡಿಮೆ ದರದಲ್ಲಿ ಒದಗಿಸುತ್ತಿದ್ದರೂ ಕೂಡ ಜಿಲ್ಲೆಯ ಜನರಲ್ಲಿ ತೀವ್ರವಾಗಿ ಹೆಚ್ಚಾಗುತ್ತಿರುವ ಆರೋಗ್ಯದ ಸಮಸ್ಯೆಗಳು ಹಾಗೂ ಪಕ್ಕದ ಹೊರ ಜಿಲ್ಲೆಗಳಿಂದ ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಸ್ಪತ್ರೆಯ ಮೇಲೆ ತೀವ್ರ ಒತ್ತಡ ಹೆಚ್ಚಾಗುತ್ತಿದೆ. ಅಗತ್ಯ ವೈದ್ಯಕೀಯ ತಜ್ಞರು ಮತ್ತು ಶಸ್ತ್ರಚಿಕಿತ್ಸಾ ತಜ್ಞರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬದಿಗಳ ಕೊರತೆ ತೀವ್ರವಾಗಿದೆ ಎಂದು ತಿಳಿಸಿದರು.
ಮಾರಣಾಂತಿಕ ಖಾಯಿಲೆಗಳಾದ ಹೃದ್ರೋಗ, ಕ್ಯಾನ್ಸರ್, ಮೂತ್ರಪಿಂಡ, ಮೆದುಳು ಮತ್ತು ನರರೋಗಗಳ ತಪಾಸಣೆ ಮತ್ತು ಚಿಕಿತ್ಸೆಗೆ ಸೂಕ್ತವಾಗುವ ತಜ್ಞ ವೈದ್ಯರುಗಳು, ಸಿಬ್ಬಂದಿಗಳು ಮತ್ತು ವೈದ್ಯಕೀಯ ವ್ಯವಸ್ಥೆಯ ಕೊರತೆಯಿದೆ. ಇತ್ತೀಚೆಗಷ್ಟೇ ಹಿಮ್ಸ್‌ನಲ್ಲಿ ಒಬ್ಬರು ಹೃದ್ರೋಗ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದು ಅವರು ಇಡೀ ಜಿಲ್ಲೆಗೆ ಒಬ್ಬರೇ ವೈದ್ಯರು ಕರ್ತವ್ಯ ನಿರ್ವಹಿಸುವಂತಾಗಿದೆ. ಹಿಮ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಮತ್ತಷ್ಟು ಉನ್ನತೀಕರಿಸಿ ಹಲವು ಬಗೆಯ ವೈದ್ಯಕೀಯ ವಿಭಾಗಗಳು ಆರಂಭವಾಗುವುದು ತುರ್ತು ಅಗತ್ಯವಿದೆ ಎಂದರು.
ಹೃದ್ರೋಗ, ನರರೋಗ ಸೇರಿದಂತೆ ಗಂಭೀರ ಸ್ವರೂಪದ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ದೊರೆಯುವ ಹಿಮ್ಸ್‌ನ ಸೂಪರ್ ಸ್ಪೆಶಾಲಿಟಿ ಆತ್ಪತ್ರೆಯು ಆರಂಭವಾಗದೇ ಹಾಗೇ ನಿಂತಿದೆ. ಆಸ್ಪತ್ರೆಯ ಕಟ್ಟಡ ಕಾಮಗಾರಿ, ವೈದ್ಯಕೀಯ ಯಂತ್ರೋಪಕರಣ, ತಜ್ಞ ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳ ನೇಮಕಾತಿಗಾಗಿ ಅಂದಾಜಿನ ಪ್ರಕಾರ ಕನಿಷ್ಟ ೫೦ ಕೋಟಿ ರೂಪಾಯಿಗಳ ಅನುದಾನದ ಅಗತ್ಯವಿದೆ. ಕೂಡಲೇ ಕರ್ನಾಟಕ ಸರ್ಕಾರಕ್ಕೆ ಅಗತ್ಯವಿರುವ ಅನುದಾನವನ್ನು ಬಿಡುಗಡೆಮಾಡಿ ಹಾಗೂ ಸ್ಪೆಶಾಲಿಟಿ ಆಸ್ಪತ್ರೆಯ ಕಾರ್ಯಾರಂಭಕ್ಕೆ ಅಗತ್ಯ ಅನುಮತಿ ನೀಡುವ ಅಗತ್ಯವಿದೆ ಎಂದು ಹೇಳಿದರು.
ಹಕ್ಕೋತ್ತಾಯಗಳೆಂದರೇ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಬೇಕಾದ ಕನಿಷ್ಟ 50 ಕೋಟಿ ರೂ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರವೇ ಕಾರ್ಯಾರಂಭ ಮಾಡಬೇಕು. ಹೃದ್ರೋಗ, ಮೂತ್ರಪಿಂಡ, ನರರೋಗ, ಕ್ಯಾನ್ಸರ್ ಮತ್ತಿತರೆ ಮಾರಣಾಂತಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲು ವೈದ್ಯಕೀಯ ವಿಭಾಗಗಳು, ಕ್ಯಾತ್ ಲ್ಯಾಬ್, ಅತ್ಯಂತ ಸುಸಜ್ಜಿತವಾದ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳಿರುವ ಪ್ರತ್ಯೇಕ ಶಸ್ತ್ರಚಿಕಿತ್ಸಾ ಘಟಕಗಳನ್ನು ಕೂಡಲೇ ಪ್ರಾರಂಭಿಸಬೇಕು. ತಜ್ಞ ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ ಅವುಗಳಿಗೆ ಮಾನದಂಡಗಳ ಅನುಸಾರ ಪ್ರಾಥಮಿಕ ಸೌಲಭ್ಯಗಳಾದ ಸುಸಜ್ಜಿತ ವೈಧ್ಯಕೀಯ ಪ್ರಯೋಗಾಲಯ, ಇಸಿಜಿ, ಎಕೋ, ಎಕ್ಸ್‌ರೇ, ತುರ್ತು ಚಿಕಿತ್ಸಾ ಘಟಕ ಮತ್ತು ಆಂಬುಲೆನ್ಸ್ ಹಾಗೂ ತಜ್ಞ ವೈಧ್ಯರು ಮತ್ತು ಸಿಬ್ಬಂಧಿಗಳನ್ನು ಒದಗಿಸಬೇಕು. ತಾಲ್ಲೂಕು ಆಸ್ಪತ್ರೆಗಳನ್ನು ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಿ ಹೃದಯ ಮತ್ತು ಮೂತ್ರಪಿಂಡ ಸಂಬಂಧಿ ಹಾಗೂ ಇನ್ನಿತರೆ ಮಾರಣಾಂತಿಕ ಖಾಯಿಲೆಗಳ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.
ಆರೋಗ್ಯ ತಪಾಸಣೆಗಾಗಿ ಮತ್ತು ಅವಶ್ಯಕ ಪರೀಕ್ಷೆಗಳಿಗಾಗಿ ಸಂಚಾರಿ ವೈದ್ಯಕೀಯ ವಾಹನ ವ್ಯವಸ್ಥೆಯನ್ನು ಏರ್ಪಡಿಸಿ, ಅದು ನಿಯಮಿತವಾಗಿ ಎಲ್ಲ ಹಳ್ಳಿಗಳನ್ನು ತಲುಪುವಂತೆ ಕ್ರಮ ಕೈಗೊಳ್ಳಿ. ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹೆಚ್ಚುಗೊಳಿಸಿ ಮತ್ತು ನಿಯಮಿತಗೊಳಿಸಿ. ಆಮೂಲಕ ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದವರನ್ನು ಗುರ್ತಿಸಲು ಸಾಧ್ಯವಾಗುತ್ತದೆ. ಆರೋಗ್ಯ ಸಹಾಯವಾಣಿ ಸಮರ್ಪಕವಾದ ಮತ್ತು ಗುಣಮಟ್ಟದ ಸೇವೆಯನ್ನು ನೀಡುತ್ತಿಲ್ಲ. ಇದನ್ನು ತುರ್ತಾಗಿ ಚುರುಕುಗೊಳಿಸಿ. ಹಾಗೂ ತುರ್ತು ಸೇವೆಗಾಗಿ ಅಂಬುಲೆನ್ಸ್ ಗಳ ಸಂಖ್ಯೆಯನ್ನು ಸಾಕಷ್ಟು ಸಂಖ್ಯೆಯಲ್ಲಿ ಹೆಚ್ಚಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿಧ್ಯಾರ್ಥಿ ಯುವಜನರಿಗೆ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟ, ಕಣ್ಣು, ಕಿವಿ, ಸ್ಥೂಲಕಾಯ ಮತ್ತಿತರೆ ಪ್ರಾಥಮಿಕ ವೈಧ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ 6 ತಿಂಗಳಿಗೊಮ್ಮೆ ಮಾಡಿಸಬೇಕು. ಯಾವುದೇ ಹಾನಿಕಾರಕ ರಾಸಾಯನಿಕ, ಕೃತಕ ಮತ್ತು ಕಲುಷಿತ ಎಣ್ಣೆ ಮತ್ತು ಕೃತಕ ಬಣ್ಣಗಳು ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಮತ್ತು ಈಗಾಗಲೇ ನಿಷೇಧಿಸಲ್ಪಟ್ಟ ಅಪಾಯಕಾರಿ ಕೀಟ ನಾಶಕಗಳನ್ನು ಶುಂಠಿ ಸೇರಿದಂತೆ ವಿವಿದ ಬೆಳೆಗಳಲ್ಲಿ ಬಳಕೆ ಮಾಡಲಾಗುತ್ತಿದ್ದು ಇದರಿಂದಾಗುವ ದೂರಗಾಮಿ ಕೆಟ್ಟ ಪರಿಣಾಮಗಳನ್ನು ತಡೆಯಲು ಕೃಷಿಯಲ್ಲಿ ಅಪಾಯಕಾರಿ ಕೀಟನಾಶಕಗಳು ಮತ್ತು ರಾಸಾಯನಿಕಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲೆ ನಿಯಂತ್ರಣ ಹೇರಬೇಕು ಎಂದು ಒತ್ತಾಯಿಸಿದರು.
ಈ ಬೇಡಿಕೆಗಳು ಈಡೇರುವವರೆಗೂ ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವವರೆಗೂ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಜನಪರ ಸಂಘಟನೆಗಳು, ಸಂಘ ಸಂಸ್ಥೆಗಳು ಮತ್ತು ನಾಗರಿಕರು ನಿರಂತರವಾದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಚ್ಚರಿಸಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ದಲಿತ ಹಿರಿಯ ಮುಖಂಡ ಎಚ್.ಕೆ. ಸಂದೇಶ್, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್, .ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ವಕೀಲ ಅನ್ಷಾದ್ ಪಾಳ್ಯ, ಎಫ಼್.ಐ ಜಿಲ್ಲಾ ಕಾರ್ಯದರ್ಶಿ ಎಸ್. ರಮೇಶ್, ಸಾಮಾಜಿಕ ಕಾರ್ಯಕರ್ತ ಮಲ್ನಾಡ್ ಮೆಹಬೂಬ್, ಸಾಹಿತಿ ಹರೀಶ್ ಕಟ್ಟೆಬೆಳಗುಲಿ, ಭಾರತೀಯ ರೆಡ್ ಕ್ರಾಸ್ ಕಾರ್ಯದರ್ಶಿ ಶಬ್ಬೀರ್, ಮಹಿಳಾ ಪರ ಚಿಂತಕರಾದ ಗೀತಾ, ಜನನಿ ಫೌಂಡೇಶನ್ ಅಧ್ಯಕ್ಷೆ ಭಾನುಮತಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಪುಷ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
-
State15 hours ago
GST ನೋಟಿಸ್: ನಗದು ವ್ಯವಹಾರದತ್ತ ಮುಖ ಮಾಡಿದ ವರ್ತಕರು; ಗೊಂದಲಗಳಿಗೆ ತೆರಿಗೆ ಇಲಾಖೆ ಕೊಟ್ಟ ಸ್ಪಷ್ಟನೆ, ಸೂಚನೆಗಳೇನು..?
-
Mandya11 hours ago
ಡಿಸಿಎಂ ಡಿ.ಕೆ.ಶಿವಕುಮಾರ್ ಎಸ್ಕಾರ್ಟ್ ವಾಹನ ಪಲ್ಟಿ : ಇಬ್ಬರಿಗೆ ಗಾಯ
-
Chamarajanagar17 hours ago
ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವು
-
Chamarajanagar11 hours ago
ಸುರೇಶ್ ಎನ್. ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ
-
Mysore12 hours ago
ನಾವು ನಿಮ್ಮ ಬಳಿ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ ನಿಮ್ಮ ಋಣ ತೀರಿಸಲು ಬಂದಿದ್ದೇವೆ – ಡಿ.ಕೆ.ಶಿವಕುಮಾರ್
-
Special15 hours ago
ನಿಸ್ವಾರ್ಥ ಸೇವೆಯ ಆಯುರ್ವೇದ ತಜ್ಞ ವೈದ್ಯ ಡಾ.ಗುರುಬಸವರಾಜ
-
Kodagu11 hours ago
ಕೊಡಗು ಸೇರಿ ರಾಜ್ಯದ ಮಲೆನಾಡಿನಲ್ಲಿ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ
-
Chamarajanagar11 hours ago
ಹಸುಗೂಸನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ಪೋಷಕರು