Connect with us

Crime

ನಗದು ಹಾಗೂ ಚಿನ್ನಾಭರಣ ಕಳ್ಳತನ – ಆರೋಪಿ ಬಂಧನ

Published

on

ಗೋಣಿಕೊಪ್ಪ : ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಮಯಾಮುಡಿ ಗ್ರಾಮದ ರಾಜ ಕಾಲೋನಿ ನಿವಾಸಿ ಎನ್.ಮಂಜುನಾಥ ಎಂಬುವವರ ಮನೆಯಲ್ಲಿ ಜೂನ್ 17 ರಂದು ನಗದು ಹಾಗೂ ಚಿನ್ನಾಭರಣವನ್ನು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸಾಗ್ಯ ಗ್ರಾಮ ನಿವಾಸಿ ಎಂ. ಮಲ್ಲೇಶ (24) ಎಂಬುವವನನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.

ಪ್ರಕರಣ ಪತ್ತೆ ಹಚ್ಚಲು ಆರ್.ಮೋಹನ್ ಕುಮಾರ್ ಡಿಎಸ್‌ಪಿ ವಿರಾಜಪೇಟೆ ಉಪವಿಭಾಗ, ಮತ್ತು ಗೋವಿಂದರಾಜು.ಎಂ.ವಿ ಸಿಪಿಐ, ಗೋಣಿಕೊಪ್ಪ ವೃತ್ತ, ರೂಪಾದೇವಿ ಬಿರಾದಾರ್ ಪಿಎಸ್ಐ ಗೋಣಿಕೊಪ್ಪ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಪ್ರಕರಣವನ್ನು ಪತ್ತೆಹಚ್ಚಲಾಗಿದೆ.

ಸದರಿ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Crime

ಕಲ್ಲು ಗಣಿಗಾರಿಕೆ ವೇಳೆ ಸ್ಫೋಟ,ಮೂರಕ್ಕೂ ಹೆಚ್ಚು ಕಾರ್ಮಿಕರ ಸಾವಿನ ಶಂಕೆ

Published

on

ಹಾಸನ: ತಾಲ್ಲೂಕಿನ ಶಾಂತಿಗ್ರಾಮ ದೂಮಗೆರೆ ಗ್ರಾಮದ ಕಲ್ಲು ಕ್ವಾರಿಯಲ್ಲಿ ಬೃಹತ್ ಸ್ಫೋಟ ನಡೆದು ಈ ಘಟನೆಯಲ್ಲಿ ಮೂವರು ಮೃತಪಟ್ಟಿರುವ ಶಂಕೆ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಸದ್ಯ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅದರಲ್ಲಿ ಒಬ್ಬನ ಪರಿಸ್ಥಿತಿ ಚಿಂತಾಜನಕವಾಗಿದೆ. ವಿಷಯ ತಿಳಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಎಸ್ಪಿ ಮೊಹಮದ್ ಸುಜೀತಾ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ಉಪವಿಭಾಗಾಧಿಕಾರಿ ಮಾರುತಿ ಇವರು ತಡರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಂಡ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಡಿಸಿ ಸಿ.ಸತ್ಯಭಾಮ ಕ್ವಾರಿ ಗುತ್ತಿಗೆ ಪಡೆದಿರುವ ಮಾಲೀಕ ದೇವರಾಜು ವಿರುದ್ಧ ಹರಿಹಾಯ್ದರು. ಮಾಹಿತಿ ಮುಚ್ಚಿಟ್ಟ ಆರೋಪದಡಿ ದೇವರಾಜ್ ವಿರುದ್ಧ ಎಫ್ ಐಆ‌ರ್ ದಾಖಲಿಸಲು ಡಿಸಿ ಸೂಚಿಸಿದರು.

Continue Reading

Crime

ಸಂಭ್ರಮಾಚರಣೆ ವೇಳೆ RCB ಅಭಿಮಾನಿಗೆ ಚಾ*ಕು ಇರಿತ

Published

on

ಬೆಂಗಳೂರು, ಜೂನ್ 4: ಆರ್​ಸಿಬಿ (RCB) ತಂಡ ಚೊಚ್ಚಲ ಐಪಿಎಲ್​​ ಟ್ರೋಫಿ (IPL Trophy) ಎತ್ತಿಹಿಡಿದ ಬೆನ್ನಲ್ಲೇ ಬೆಂಗಳೂರು ನಗರದಾದ್ಯಂತ ಸಂಭ್ರಮಾಚರಣೆ ಮುಗಿಲುಮುಟ್ಟಿತು. ಹಲವೆಡೆ ಪಟಾಕಿಗಳನ್ನು ಸಿಡಿಸಿ ಜನ ಸಂಭ್ರಮಿಸಿದರೆ, ಇನ್ನು ಕೆಲವೆಡೆ ರಸ್ತೆಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ, ಬೆಂಗಳೂರಿನ ಪೀಣ್ಯದ ಜಾಲಹಳ್ಳಿ ಕ್ರಾಸ್ ಬಳಿ ದುಷ್ಕರ್ಮಿಗಳ ಗುಂಪು ಕ್ರೌರ್ಯ ಮೆರೆದಿದೆ. ಸಂಭ್ರಮಾಚರಣೆ ವೇಳೆ ಯುವಕನಿಗೆ ಚಾಕು ಇರಿದು ಪರಾರಿಯಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ರಾತ್ರಿಯಿಡೀ ಸಂಭ್ರಮಾಚರಣೆ ನೆರವೇರಿದೆ. ವಿವಿಧೆಡೆ ರಸ್ತೆಗಳಲ್ಲಿ ಘೋಷಣೆ ಕೂಗುತ್ತಾ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳ ಗುಂಪೊಂದು ಯುವಕನಿಗೆ ಚಾಕು ಇರಿದ ಘಟನೆ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.

Continue Reading

Crime

*ಕ್ಷುಲ್ಲಕ ವಿಚಾರಕ್ಕೆ ಪತ್ನಿಯನ್ನು ಕೊಂದು ತಾನು ಆತ್ಮಹ*ತ್ಯೆಗೆ ಶರಣಾದ ಪತಿ*

Published

on

ಬೆಂಗಳೂರು : ಸಣ್ಣ ವಿಚಾರಕ್ಕೆ ಶುರುವಾದ ಈ ಜಗಳ ಇಬ್ಬರ ಕೋಪದಿಂದ ಕುಟುಂಬವೇ ಬ* ಯಾಗಿರುವಂತಹ ಘಟನೆ ನಡೆದಿದೆ. , ಅಂದಹಾಗೆ ಗಂಡನೇ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿ ತಾನು ಆತ್ಮಹ* ಗೆ ಶರಣಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

ಮೂಲತಃ ಹಾಸನ ಮೂಲದ ಬಸವಾಚಾರಿ ಮತ್ತು ಸುಮಾ ದಂಪತಿ ಕಳೆದ 16 ವರ್ಷದ ಹಿಂದೆ ಮದುವೆಯಾಗಿ ವಿಜಯಪುರ ಪಟ್ಟಣಕ್ಕೆ ಬಂದಿದ್ದು, ವೆಲ್ಡಿಂಗ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.ಮೊದಲಿಗೆ ವ್ಯಾಪಾರ ಚೆನ್ನಾಗಿದ್ದು, ಈ ಕಾರಣಕ್ಕೆ ಸ್ವಂತ ಮನೆ, ಸೈಟ್ ಎಲ್ಲಾ ಖರೀದಿ ಮಾಡಿದ್ದು ಎಲ್ಲವೂ ಚೆನ್ನಾಗೆ ನಡೆದುಕೊಂಡು ಬರುತಿತ್ತು . ಹೀಗಿರುವಾಗ ಒಂದು ದಿನ ಮನೆಯಲ್ಲಿದ್ದ ದಂಪತಿ ಬೆಳಗ್ಗೆ ಮಕ್ಕಳನ್ನ ಶಾಲೆಗೆ ಕಳಿಸಿದವರು ನಂತರ ಸೈಟ್ ಒಂದರ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿದೆ. ಇನ್ನೂ ಇದೇ ಜಗಳ ನೋಡ ನೋಡುತ್ತಿದಂತೆ ಇಬ್ಬರ ನಡುವೆ ವಿಕೋಪಕ್ಕೆ ತೆರಳಿದ್ದು, ಪರಸ್ಪರ ಹೊಡೆದಾಡಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ.


ಇನ್ನೂ ಈ ವೇಳೆ ಕೋಪದಲ್ಲಿ ಮನೆಯಲ್ಲಿದ್ದ ಜಿಮ್ ಡಂಬಲ್​ನಿಂದ ಗಂಡ ಪತ್ನಿಯ ತಲೆಗೆ ಹೊಡೆದಿದ್ದು, ಪತ್ನಿ ಸ್ಥಳದಲ್ಲೇ ಕುಸಿದು ಬಿದ್ದು ತೀವ್ರ ರಕ್ತ ಸಾವ್ರವಾಗಿ ಸಾವನ್ನಪಿದ್ದಾಳೆ. ಇನ್ನೂ ಪತ್ನಿ ಸಾವನ್ನಪುತ್ತಿದ್ದಂತೆ ಗಂಡನಿಗೆ ಭಯ ಶುರುವಾಗಿದ್ದು, ಆತುರದಲ್ಲಿ ಪತ್ನಿಯನ್ನ ಕೊಂದ ಆತಂಕದಲ್ಲಿ ತಾನು ಸಹ ನೇಣು ಬಿಗಿದುಕೊಂಡು ಆತ್ಮಹ ಗೆ ಶರಣಾಗಿದ್ದಾರೆ.
ಶಾಲೆಗೆ ಹೋಗಿದ್ದ ಮಕ್ಕಳು ಮನೆಗೆ ಬಂದು ಬಾಗಿಲು ತೆಗೆಯುತ್ತಿದ್ದಂತೆ ತಾಯಿ ಬೆಡ್ ಮೇಲೆ ಕೊ* ಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ತಂದೆ ನೇ* ನ ಕುಣಿಕೆಯಲ್ಲಿ ನೇತಾಡುತ್ತಿರುವ ಭೀಕರ ದೃಶ್ಯ ಕಂಡು ಬೆಚ್ಚಿ ಬಿದಿದ್ದಾರೆ. ಇಂತಹ ಸನ್ನಿವೇಶ ಯಾವ ಶತ್ರುವಿಗೂ ಬೇಡ, ಇನ್ನೂ ತಂದೆ-ತಾಯಿಯ ಶವಗಳನ್ನ ನೋಡುತ್ತಿದಂತೆ ಮಕ್ಕಳು ಕೂಡಲೇ ದೊಡ್ಡಪ್ಪನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಆ ಕುಟುಂಬ 20 ವರ್ಷಗಳ ಹಿಂದೆ ಹಾಸನದಿಂದ ಬೆಂಗಳೂರಿನ ಹೊರ ವಲಯಕ್ಕೆ ಬಂದಿದ್ದು ಬ್ಯುಸಿನೆಸ್​ನಲ್ಲಿ ಚೆನ್ನಾಗೆ ದುಡಿದು ಸ್ವಂತ ಮನೆ, ಸೈಟ್ ಎಲ್ಲಾ ಮಾಡಿಕೊಂಡಿದ್ದರು. ಆದರೆ ಈ ನಡುವೆ ಸೈಟ್ ಮಾರುವ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಕಲಹ ಶುರುವಾಗಿದೆ.

ಡೆ *ತ್ ನೋಟ್​​ನಲ್ಲಿ ಏನಿದೆ?
ಮನೆ ವಿಚಾರ ತಿಳಿಯುತ್ತಿದ್ದಂತೆ ಸಂಬಂಧಿಕರು ಮತ್ತು ಪೊಲೀಸರು ಸಹ ಸ್ಥಳಕ್ಕೆ ದೌಡಾಯಿಸಿದ್ದು, ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಡೆತ್ ನೋಟ್ ಸಿಕ್ಕಿದೆ. ಜೊತೆಗೆ ಡೆತ್ ನೋಟ್​ನಲ್ಲಿ ಸೈಟ್​ನ 26 ಲಕ್ಷ ರೂ ಹಣ ಬರಲಿದ್ದು, ಆ ಹಣವನ್ನ ಮಕ್ಕಳ ಹೆಸರಿನಲ್ಲಿ ಅಕೌಂಟ್​ಗೆ ಹಾಕಿ. ನಮ್ಮ ಸಾವಿಗೆ ನಾವೇ ಹೊಣೆ ಅಂತ ಬರೆದಿದ್ದಾರೆ. ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಹಾಸನದಿಂದ ಸಂಬಂಧಿಕರು ದೌಡಾಯಿಸಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಹಾಸನಕ್ಕೆ ಕುಟುಂಬ ಶಿಫ್ಟ್​ ಆಗುವ ಪ್ಲ್ಯಾನ್​ ಮಾಡಿದ್ದರು, ಆದರೆ ಅಷ್ಟರಲ್ಲೇ ಈ ರೀತಿಯಾಗಿದೆ ಅಂತ ದಂಪತಿಗಳ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಒಟ್ಟಾರೆ ಇರುವುದಕ್ಕೆ ಒಂದು ಮನೆ, ದುಡಿಯೋಕ್ಕೆ ಒಂದು ಅಂಗಡಿ ಸೇರಿದಂತೆ ಎಲ್ಲವೂ ಚೆನ್ನಾಗಿದ್ದರೂ ಸಣ್ಣ ಹಣಕಾಸಿನ ವಿಚಾರ ದಂಪತಿಗಳ ಜೀವವನ್ನು ತೆಗೆದಿದ್ದು, ಇಬ್ಬರೂ ಮುದ್ದಾದ ಮಕ್ಕಳನ್ನ ಅನಾಥರನ್ನಾಗಿ ಮಾಡಿದ್ದು ಮಾತ್ರ ನಿಜಕ್ಕೂ ದುರಂತ.

Continue Reading

Trending

error: Content is protected !!