Hassan
ಹಾಸನದಲ್ಲಿ ಗೋ ಮಧುಸೂದನ್ ಹೇಳಿಕೆ
ವೈನಾಡಿನಲ್ಲಿ ರಾಹುಲ್ ಗಾಂಧಿ ತಮ್ಮ ಹಣೆ ಬರಹ ಪರೀಕ್ಷೆಗೊಡ್ಡಿದ್ದಾರೆ
ಕೇರಳದ ಸಿಎಂ ಪಿಣರಾಯ್ ವಿಜಯನ್ ಅವರೇ ರಾಹುಲ್ ಗಾಂಧಿ ವಿರೊಧ ಮಾಡ್ತಾ ಇದಾರೆ
ನಾನು ಆಭಾಗದಲ್ಲಿ ಪ್ರವಾಸ ಮಾಡಿದ್ದೇನೆ, ಅಲ್ಲಿಯ ಮತದಾರರು ಡಿವೈಡ್ ಆಗಿದಾರೆ ಅನ್ನಿಸುತ್ತೆ
ಅಲ್ಲಿನ ಕಾಫಿ, ಟಿ ಎಸ್ಟೇಟ್ ಕಾರ್ಮಿಕರು ಕಮ್ಯುನಿಸ್ಟ್ ಪಾರ್ಟಿಗೆ ಸಹಾಯ ಮಾಡ್ತಾರೆ
ಕೇರಳದಲ್ಲಿ ನಾವು ಗೆಧ್ದು ಬಿಡ್ತೇವೆ ಎನ್ನುವಷ್ಟು ನಾವು ಬೆಳೆದಿಲ್ಲ.
ಕಳೆದ ಬಾರಿ ನಾವು 85 ಸಾವಿರ ಮತ ತಗೊಂಡಿದ್ದೆವು
ಈ ಬಾರಿ ಒಂದೂವರೆ ಲಕ್ಷ ಮತ ಬರಬಹುದು ರಾಹುಲ್ ಲೀಡ್ ಕಡಿಮೆ ಆಗಬಹುದು
ಕಾಂಗ್ರೆಸ್ ದೇಶ ವಿರೋಧಿಗಳ ನೆರವಿನಿಂದ ಗೆಲ್ಲಬೇಕಾದ ಪರಿಸ್ಥಿತಿ ಬಂದಿದೆ
ಕಾಂಗ್ರೆಸ್ ತನ್ನ ಕೊನೆಯ ದಿನಗಳನ್ನ ಎಣಿಸುತ್ತಿದೆ
ಕಾಂಗ್ರೆಸ್ ರಾಹುಲ್ ಬಗ್ಗೆ ಅಯ್ಯೊ ಪಾಪ ಎನಿಸುತ್ತಿದೆ
ತಮಿಳುನಾಡಿನ ಕೊಯಮತ್ತೂರಿನಲ್ಲಿ ನಮ್ಮ ಅಣ್ಣಾಮಲೈ ಸ್ಪರ್ಧೆ ಮಾಡಿದಾರೆ
ಅಲ್ಲಿನ ಸಾಮಾನ್ಯ ಜನರು ಡಿ ರಾಜಾ , ಕನ್ನಿಮೋಳಿ ಅವರು ನಮಗೆ ಹಣ ಕೊಡ್ತಾರೆ
ಅವರು ಹಣ ಕೊಟ್ಟರೆ ತಗೊತಿವಿ ಓಟು ಬಿಜೆಪಿ ಗೆ ಹಾಕ್ತಿವಿ ಅಂತಾರೆ
ಅಲ್ಲಿ ನಿಜಕ್ಕೂ ಅಚ್ಚರಿಯ ಪರಿಸ್ಥಿತಿ ಇದೆ, ತಮಿಳುನಾಡಿನಲ್ಲಿ ಈ ಬಾರಿ 20 ಸ್ಥಾನ ಬರುತ್ತೆ ಅಂತಿದಾರೆ
ಅಲ್ಲಿನ ನಮ್ಮ ನಾಯಕರು ಕನಿಷ್ಠ 12 ಗೆಲ್ತೀವಿ ಅಂತಾರೆ
ಕರ್ನಾಟಕ ದಲ್ಲೂ ಕೂಡ ಬಿಜೆಪಿ ಜೆಡಿಎಸ್ ಮೈತ್ರಿ ಹೋರಾಟ ಇದೆ.
ಬೆಂಗಳೂರು ಗ್ರಾಮಾಂತರದಲ್ಲಿ ಸಿದ್ದರಾಮಯ್ಯ ಅವರೇ ಬಿಜೆಪಿ ಗೆಲ್ಲಿಸಿಕೊಡ್ತಾರೆ.
ಕೋಲಾರದಲ್ಲಿ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಸೇರಿ ಜೆಡಿಎಸ್ ಗೆಲ್ಲಿಸುತ್ತಾರೆ..
ಹಾಸನದಲ್ಲಿ ಕೂಡ ಜೆಡಿಎಸ್ ಗೆಲ್ಲುತ್ತೆ
ರಾಜ್ಯದಲ್ಲಿ ನಾವು ಬಿಜೆಪಿ 25 ಕ್ಕೆ 25 ಸ್ಥಾನ ಗೆಲ್ಲುತ್ತೇವೆ
ಒಂದೊ ಎರಡು ಸ್ಥಾನ ವ್ಯತ್ಯಾಸ ಆದರೆ ಆಗಬಹುದು ಅಷ್ಟೇ
ತಮಿಳುನಾಡು,ತೆಲಂಗಾಣ ಆಂಧ್ರದಲ್ಲೂ ನಮಗೆ ಒಳ್ಳೆಯ ಫಲಿತಾಂಶ ಬರಲಿದೆ
ಈ ಬಾರಿ ಮತ್ತೆ ಮೋದಿ ಸರ್ಕಾರ ಬರುತ್ತೆ, 400 ಕ್ಕು ಅದಿಕ ಸ್ಥಾನ ಎನ್ನುವ ವಿಶ್ವಾಸ ನಿಜ ಆಗಲಿದೆ
ಹಾಸನದಲ್ಲಿ ಬಿಜೆಪಿ ಮಾದ್ಯಮ ಸಂಚಾಲಕ ವಿಜಿಕುಮಾರ್ ಮೇಲಿನ ಹಲ್ಲೆ ಯಾರೂ ಒಪ್ಪುವಂತಾದ್ದಲ್ಲ
11 ತಿಂಗಳಲ್ಲೇ ಕಾಂಗ್ರೆಸ್ ಕೈಯಲ್ಲಿ ಚಂಬು ಹಿಡಿದುಕೊಂಡಿದೆ.
ನಮ್ಮ ಕೈಲಿ ಏನೂ ಉಳಿದಿಲ್ಲ ಏನಾದ್ರು ಬಿಕ್ಷೆ ಹಾಕಿ ಎಂದು ಮೋದಿ ಅವರನ್ನು ಕೇಳಿದಾರೆ ಎಂದು ವ್ಯಂಗ್ಯ
ಕಾಂಗ್ರೆಸ್ ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದೆ.
ಕೇರಳ ಕೂಡ ಕೋರ್ಟ್ ಗೆ ಹೋಗಿತ್ತು ಅವರಿಗೆ ಹೇಗೆ ಮಂಗಳಾರತಿ ಆಯ್ತು
ಕರ್ನಾಟಕಕ್ಕೂ ಹಾಗೆಯೇ ಆಗಲಿದೆ ಎಂದು ಗೋಮ ತಿರುಗೇಟು
ಮೊದಲು ಕೊಟ್ಟ ಹಣ ಏನಾಯ್ತು ಹೇಳುವಂತೆ ಆಗ್ರಹ
Hassan
ಯಶಸ್ವಿಗೊಂಡ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರ
ಹಾಸನ: ನಗರದ ಪೆನ್ಷನ್ ಮೊಹಲ್ಲಾದಲ್ಲಿರುವ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹೋಪ್ ಫಾರ್ ಹ್ಯೂಮನಿಟಿ ವೆಲ್ಫೇರ್ ಟ್ರಸ್ಟ್ ಮತ್ತು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ಇವರ ಸಹಯೋಗದೊಂದಿಗೆ ಭಾನುವಾರ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಇದರಲ್ಲಿ ನೂರಾರು ಜನರು ಇದರ ಪ್ರಯೋಜನ ಪಡೆದುಕೊಂಡರು.
ಇದೆ ವೇಳೆ ನಗರಸಭೆ ಸದಸ್ಯ ಅಮೀರ್ ಜಾನ್ ಮಾತನಾಡಿ, ಮನುಷ್ಯನಿಗೆ ಬಿಪಿ, ಶುಗರ್ ಇತರೆ ಏನಿದೆ ಎಂದು ತಿಳಿಯಬೇಕಾದರೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡರೇ ಮಾತ್ರ ಸರಿಯಾಗಿ ತಿಳಿಯುತ್ತದೆ. ವರ್ಷದಲ್ಲಿ ಒಂದು ಇಲ್ಲವೇ ಎರಡು ಬಾರಿ ದೇಹ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಆರೋಗ್ಯ ಇದ್ದರೇ ಸಮಾಜದಲ್ಲಿ ಏನಾದರು ಸಾಧಿಸಬಹುದು ಎಂದರು.
ಸಮಾಜ ಸೇವಕ ಎಸ್.ಎಸ್. ಪಾಷಾ ಮಾತನಾಡಿ, ಒಂದು ಹಳೆ ಹಾಸನ ಎಂದರೇ ಬಸ್ ನಿಲ್ದಾಣದಿಂದ ಒಳಗೆ, ಎಪಿಎಂಸಿಯಿಂದ ಇಲ್ಲಿಗೆ ಬಹುತೇಕರು ಹಳೆ ಹಾಸನದವರು. ಈ ಭಾಗ ನೆಗ್ಲೆಟ್ ಗೆ ಒಳಗಾಗಿದೆ. ಈ ಭಾಗಕ್ಕೆ ಒಂದು ಸಿಟಿ ಬಸ್ ಸೌಕರ್ಯವಿಲ್ಲ. ಗ್ರಂಥಾಲಯವಿಲ್ಲ. ಸರಿಯಾದ ಆಸ್ಪತ್ರೆ ಕೂಡ ಇಲ್ಲ. ಇದ್ದರೂ ನಾಮಕವಸ್ತೆ ಮಾತ್ರ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದರು. ನಾನು ಕೂಡ ಇಲ್ಲೆ ಹುಟ್ಟಿ ಬೆಳೆದವರು, ಇಲ್ಲಿನ ಕಷ್ಟಗಳನ್ನು ಕಂಡಿದ್ದೇವೆ. ಇಲ್ಲಿನ ಜನರಿಗೆ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು. ಖಾಯಿಲೆ ಬಂದ ಮೇಲೆ ಔಷಧಿ ತೆಗೆದುಕೊಳ್ಳುತ್ತೇವೆ. ಆದರೇ ಖಾಯಿಲೆ ಬರುವುದಕ್ಕೆ ಮೊದಲೇ ಎಚ್ಚೆತ್ತುಕೊಳ್ಳುವುದು ಸೂಕ್ತ. ಬೆಳಗಿನ ಸಮಯ ವಾಕ್ ಮಾಡಬೇಕು. ಯಾವಾಗಲೂ ವಾಹನದಲ್ಲೆ ನಾವು ಹೋಗುತಿದ್ದರೇ ನಾನಾ ಖಾಯಿಲೆಗಳು ಉದ್ಭವಿಸುತ್ತದೆ. ನಮ್ಮ ಜೀವನ ಶೈಲಿಯಲ್ಲಿ ಸಲ್ಪ ಬದಲಾವಣೆ ಮಾಡಿಕೊಂಡು ನಡೆಯುವ ಪ್ರವೃತ್ತಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಡಾಕ್ಟರ್ ನಾಯೀಮ್ ಸಿದ್ದಿಕಿ ಮಾತನಾಡಿ, ಇಂತಹ ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ಅಗತ್ಯವಿದೆ. ಒಮದು ಸಾಮಾನ್ಯ ಚಿಕಿತ್ಸೆಗಾಗಿ ದೂರದ ಸ್ಥಳಗಳಿಗೆ ದುಂದು ವೆಚ್ಚ ಮಾಡಿಕೊಂಡು ಹೋಗಬೇಕಾಗಿದೆ. ಈ ಶಿಬಿರಕ್ಕೆ ನುರಿತ ವೈದ್ಯರು ಇದ್ದು, ಇಲ್ಲಿನ ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಬಾಳೆಹಣ್ಣು ವರ್ತಕರ ಸಂಘದ ಅಧ್ಯಕ್ಷ ಸಮೀರ್ ಅಹಮದ್ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ರಕ್ತದ ಅವಶ್ಯಕತೆ ಇದ್ದಾಗ ಯಾವ ಜಾತಿ ಇರುವುದಿಲ್ಲ. ಒಟ್ಟಾರೆ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದಾನ ಮಾಡುವುದು ಒಳ್ಳೆಯ ಉದ್ದೇಶ. ಇದರಲ್ಲಿ ಯುಆವ ಸಂಬಂಧ ಇರುವುದಿಲ್ಲ. ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಿದರೇ ನಮ್ಮ ದೇಹಕ್ಕೆ ಹೊಸ ರಕ್ತ ಉತ್ಪತ್ತಿಯಾಗಿ ಆರೋಗ್ಯ ಸುಧಾರಿಸುತ್ತದೆ. ದೈಹಿಕವಾಗಿ ಸದೃಢರಾಗಿರುತ್ತೇವೆ ಎಂದರು. ಈ ಉದ್ದೇಶದಲ್ಲಿ ಇಂತಹ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರದಲ್ಲಿ ನೂರಾರು ಜನರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ಮೂಳೆ ತಜ್ಞರು ನರರೋಗ ತಜ್ಞರು ಸ್ತ್ರೀರೋಗ ತಜ್ಞರು, ನೇತ್ರ ತಜ್ಞರು, ಹೃದ್ರೋಗ ತಜ್ಞರು ಹಾಗೂ ಉಚಿತ ಕನ್ನಡಕ ಸಹಿತವಾಗಿ ಈ ಮೇಲ್ಕಂಡ ಖಾಯಿಲೆಗಳ ತಪಾಸಣೆ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹೋಪ್ ಫಾರ್ ಹ್ಯೂಮನಿಟಿ ಅಧ್ಯಕ್ಷರಾದಂತಹ ಮುದಸಿರ್, ಹಫೀಜ್ ಹಿದಾಯ್ತುಲ್ಲ ಖಾನ್, ಇಂಡಿಯಾನಾ ಆಸ್ಪತ್ರೆಯ ಡಾಕ್ಟರ್ ಆಫ್ರಿಕಾ ತಾಜ್, ಇಂಡಿಯನ್ ಆಸ್ಪತ್ರೆ, ಹೆಚ್.ಜಿ. ಭರತ್ ಕುಮಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ಚೇರ್ಮನ್, ಜಬಿ ಉಲ್ಲಬೇಗ್, ಕಾರ್ಯದರ್ಶಿ ಡಾಕ್ಟರ್ ಕೃತಿ, ನಿ ಡಾಕ್ಟರ್ ಮಹೇಂದ್ರರವರು, ಡಾಕ್ಟರ್ ಶಶಂಕ್, ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಪವನ್ ರಾಜ್ ರವರು ರಾಕೇಶ್ ನೇತ್ರಾಲಯ ಇತರರು ಉಪಸ್ಥಿತರಿದ್ದರು.
Hassan
ಅಡುಗೆ ಸಿಬ್ಬಂದಿ ಗೆ ಒಂದು ದಿನದ ತರಬೇತಿ ಕಾರ್ಯಾಗಾರ
ವರದಿ:- ರಾಜೇಂದ್ರ ಸುಹಾಸ್
ಅರಕಲಗೂಡು:-ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಎ ಮಂಜು ನವರು ಭಾಗವಹಿಸಿದರು. ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿನಿತ್ಯ ಮಕ್ಕಳಿಗೆ ಶುಚಿಯಾದ ರುಚಿಯಾದ ಆಹಾರ ಮಾಡಿಕೊಡುವಂತೆ
ಅಡುಗೆ ಸಿಬ್ಬಂದಿಯರಲ್ಲಿ ಮನವಿ ಮಾಡಿದರು ಹಾಗೂ ಅರವತ್ತು ವರ್ಷ ತುಂಬಿದ ಅಡುಗೆ ಸಿಬ್ಬಂದಿಯವರಿಗೆ ಸನ್ಮಾನಿಸಿ ತಮ್ಮ ಮುಂದಿನ ಜೀವನ ಸುಖಕರವಾಗಿರಲಿ ಎಂದು ಅಭಿನಂದಿಸಿದರು. ಹಾಗೂ ಅಡುಗೆ ಸಹಾಯಕರ ಮಕ್ಕಳು SSLC ಹಾಗೂ PUC ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು..
Hassan
ಜೆ. ಇ . ಎಸ್ ಕಲೋತ್ಸವ 2024-2025
ವರದಿ:-ರಾಜೇಂದ್ರ ಸುಹಾಸ್
ಅರಕಲಗೂಡು: ಪಟ್ಟಣದ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮಾನ್ಯ ಶಾಸಕರಾದ ಎ. ಮಂಜು ರವರು ಉದ್ಘಾಟಿಸಿದರು ನಂತರ ಮಾತನಾಡಿ ದೇಶದ ಬದಲಾವಣೆ ಹಾಗೂ ಸಮಾಜದ ಬದಲಾವಣೆಗೆ ಶಿಕ್ಷಣದಿಂದ ಮಾತ್ರ ಸಾಧ್ಯ ಆದ್ದರಿಂದ ಎಲ್ಲಾ ಮಕ್ಕಳು, ಶಿಕ್ಷಣ ಪಡೆದು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು..
ಕಾರ್ಯಕ್ರಮದಲ್ಲಿ ಬಿ.ಇ.ಓ. ಕೆಪಿ. ನಾರಾಯಣ. ಹೆಚ್. ಟಿ ಮಂಜುನಾಥ್. ಎ.ಎಸ್ ಹಿರಣ್ಣಯ್ಯ. ಎ. ಸಿ ರಮೇಶ್ ಚಿಕ್ಕೊನ್ನೆಗೌಡ್ರು. ಕೆ.ಸಿ ಲೋಕೇಶ್. ಎ.ಎನ್ ಪುಟ್ಟಸ್ವಾಮಿ. ಎ. ಜಿ ಸುಬ್ರಹ್ಮಣ್ಯ ಭಾಗವಹಿಸಿದ್ದರು
-
Kodagu21 hours ago
ಅಖಿಲ ಕೊಡವ ಸಮಾಜದ ಹೇಳಿಕೆಗೆ ನಮ್ಮ ವಿರೋಧವಿದೆ, ಹೋರಾಟ ಮುಂದುವರಿಯಲಿದೆ – ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಸ್ಪಷ್ಟನೆ
-
Kodagu20 hours ago
ಕಿಡಿಗೇಡಿಗಳನ್ನು ಬಂಧಿಸದೇ ನಡೆಸುವ ಶಾಂತಿ ಮಾತುಕತೆಗೆ ನಮ್ಮ ಬೆಂಬಲವಿಲ್ಲ: ಯುಕೊ ಸ್ಪಷ್ಟನೆ
-
Tech17 hours ago
ಮೊಬೈಲ್ ಬಳಕೆದಾರರಿಗೆ ದೂರ ಸಂಪರ್ಕ ಇಲಾಖೆಯಿಂದ ಗೂಡ್ ನ್ಯೂಸ್ : ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಮಾಹಿತಿ
-
Sports22 hours ago
Champions Trophy 2025ಕ್ಕೆ ಟೀಂ ಇಂಡಿಯಾ ಪ್ರಕಟ: ಗಿಲ್ಗೆ ಉಪನಾಯಕ ಪಟ್ಟ
-
National - International23 hours ago
ಕೊಲ್ಕತ್ತಾ ವೈದ್ಯ ಮೇಲಿನ ಅತ್ಯಾಚಾರ ಪ್ರಕರಣ: 57 ದಿನಗಳಲ್ಲಿ ತೀರ್ಪು ಪ್ರಕಟ; ರಾಯ್ ದೋಷಿ
-
Mysore21 hours ago
ಮೈಸೂರು ವಿವಿ ಗೌರವ ಡಾಕ್ಟರೇಟ್ ತಂದ ಖುಷಿ
-
Mysore19 hours ago
ಮೈಸೂರಿನ ಮಾರುಕಟ್ಟೆಗೆ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು
-
Hassan22 hours ago
ನ್ಯಾಯಾಲಯದ ತಡೆ ಆಜ್ಞೆ ಇದ್ರೂ ವಿಮಾನ ನಿಲ್ದಾಣದ ಸುತ್ತ ಕಾಂಪೌಂಡ್ ನಿರ್ಮಾಣ