Connect with us

Mysore

ಗೋಲ್ಡ್ ಕಾರ್ಡ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವಂತೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಆಗ್ರಹಿಸಿದೆ

Published

on

ಮೈಸೂರು: ದಸರಾ ಚಾಲನೆಗೊಂಡು ಹಲವು ದಿನಗಳೇ ಕಳೆದಿದ್ದು, ಈ ವೇಳೆ ಪ್ರವಾಸಿಗರ ಬೇಡಿಕೆಯಾದ ಗೋಲ್ಡ್ ಕಾರ್ಡ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವಂತೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಆಗ್ರಹಿಸಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್, ನಾಡಹಬ್ಬ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿದೆ. ನಾಡಹಬ್ಬ ದಸರಾ ವೀಕ್ಷಣೆಗೆ ದೇಶ- ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಹೀಗಿರುವಾಗ ಶೀಘ್ರದಲ್ಲೇ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡುತ್ತೇವೆಂದರು.
ಇನ್ನೂ ಪ್ರವಾಸೋದ್ಯಮ ಬೆಳವಣಿಗೆಗೆ ಸ್ಥಳೀಯರನ್ನು ಆಹ್ವಾನಿಸಿ ಒಂದು ಸಭೆಯನ್ನು ನಡೆಸದೇ ಇರುವುದು ವಿಷಾಧನೀಯ. ಮಾತ್ರವಲ್ಲದೆ ಸ್ಥಳೀಯ ಪ್ರವಾಸೋದ್ಯಮಿಗಳನ್ನು ಪರಿಗಣಿಸಬೇಕೆಂದು ಆಗ್ರಹಿಸಿದರು.
ಅ.16 ರಿಂದ 24 ರವರೆಗೆ ಹೊರ ರಾಜ್ಯದ ವಾಹನಗಳಿಗೆ ನೀಡಿರುವ ತೆರಿಗೆ ವಿನಾಯಿತಿಯನ್ನು ಒಂದು ತಿಂಗಳಿಗೆ ವಿಸ್ತರಿಸಬೇಕೆಂದು ಹೇಳಿದರು.

 

 

Continue Reading
Click to comment

Leave a Reply

Your email address will not be published. Required fields are marked *

Crime

ಬೋಟಿಕ್ ತರಬೇತಿ ನೆಪದಲ್ಲಿ 12 ಲಕ್ಷ ರೂ. ವಂಚನೆ

Published

on

ಮೈಸೂರು: ಡಿಸೈನಿಂಗ್ ಬೋಟಿಕ್ ತರಬೇತಿ ನೀಡಿ ವಿದೇಶಗಳ ಸರ್ಟಿಫಿಕೇಟ್ ನೀಡುವುದಾಗಿ ನಂಬಿಸಿ 12 ಲಕ್ಷ ರೂ. ವಂಚನೆ ಮಾಡಲಾಗಿದೆ.

ದೇವಾಂಶ್ ಬೋಟಿಕ್ ಮತ್ತು ರೆಂಟಲ್ ಸಂಸ್ಥೆಯ ಮಾಲೀಕರಾದ ಸುನಂದ ಮಾಲಾ ಹಾಗೂ ಬಾಲಬೊಮ್ಮ ಆರೋಪಿಗಳು‌.

ನವ್ಯ, ಜ್ಯೋತಿ, ರಕ್ಷಿತಾ, ಶ್ಯಾಮಲಾ, ಶೃತಿ, ಮಲ್ಲೇಶ್ವರಿ, ಉಷಾ ಸೇರಿದಂತೆ 8 ಮಂದಿ ವಂಚನೆಗೆ ಒಳಗಾಗಿದ್ದಾರೆ.

ಇವರಿಂದ ಆರೋಪಿಗಳು ಡಿಸೈನಿಂಗ್ ಬೋಟಿಕ್ ತರಬೇತಿ ನೀಡುವುದಾಗಿ ನಂಬಿಸಿ ತಲಾ 1 ಲಕ್ಷ ರೂ. ಹಣ ಪಡೆದು ಬಿಲ್ ನೀಡಿಲ್ಲ. ನಂತರ ಬಟ್ಟೆಗಳಿಗೆ ಎಂದು 60 ಸಾವಿರ ಪಡೆದು ತಾವುದೇ ತರಬೇತಿ ನೀಡದೆ ವಂಚಿಸಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ 180 ದೇಶದ ಸರ್ಟಿಫಿಕೇಟ್ ಕೊಡುವುದಾಗಿ ಸಹ ನಂಬಿಸಿ ಮೋಸ ಮಾಡಿದ್ದಾರೆ.

ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Mysore

ರಾಜಕೀಯ ಪ್ರೇರಿತದಿಂದ ನೂತನ ಸಹಕಾರ ಸಂಘ ಸ್ಥಾಪನೆ: ಸತೀಶ್ ಆರೋಪ

Published

on

ಪಿರಿಯಾಪಟ್ಟಣ: ರಾಜಕೀಯ ಪ್ರೇರಿತದಿಂದ ಮತ್ತೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ ಹೊರತು ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲ್ಲ ಎಂದು ಕಸಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಆರೋಪಿಸಿದರು.

ಹಬಟೂರು ಗ್ರಾಮದ ಸಮುದಾಯ ಭವನದಲ್ಲಿ ಕರೆದಿದ್ದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ನಮ್ಮ ಸಂಘದಿಂದ ರೈತರಿಗೆ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಸಂಘವು ಉತ್ತಮವಾಗಿ ಲಾಭದತ್ತ ಸಾಗುತ್ತಿದೆ. ಆದರೆ ನಮ್ಮ ಸಂಘದ ವ್ಯಾಪ್ತಿಗೆ ಒಳಪಡುವ ಚೌತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಬಟ್ಟೂರು ಗ್ರಾಮದಲ್ಲಿ ನೂತನ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಈ ನೂತನ ಸಂಘದ ವ್ಯಾಪ್ತಿಗೆ ಒಳಪಡುವ ರೈತರು ಇನ್ನುಮುಂದೆ ಅದೇ ಸಂಘದಲ್ಲಿ ಸಾಲ ಪಡೆಯಬೇಕು ಹಾಗೂ ನಮ್ಮ ಸಂಘದಿಂದ ಅವರನ್ನು ಬಿಡುಗಡೆಗೊಳಿಸಬೇಕು ಎಂಬಂತೆ ಸಹಾಯಕ ನಿಬಂಧಕರು ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ನಮ್ಮ ಸಂಘವು ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯವು ಆದೇಶಕ್ಕೆ ತಡೆ ನೀಡಿದೆ ಎಂದು ತಿಳಿಸಿದರು.


ಆದ್ದರಿಂದ ನಮ್ಮ ಸಂಘದ ವ್ಯಾಪ್ತಿಗೆ ಒಳಪಡುವ ಬೂದಿತಿಟ್ಟು, ಹಬಟ್ಟೂರು, ಲಕ್ಷ್ಮೀಪುರ, ಹಬಟ್ಟೂರು ಕೊಪ್ಪಲು, ಅಂಕನಹಳ್ಳಿ ಕೊಪ್ಪಲು, ಜವರಿ ಕೊಪ್ಪಲು ಹಾಗೂ ಮಲ್ಲಯ್ಯನ ಕೊಪ್ಪಲು ಗ್ರಾಮಗಳ ರೈತರು ಯಾವುದೇ ಗೊಂದಲಕ್ಕೆ ಒಳಗಾಗದೆ, ಇದುವರೆಗೆ ವ್ಯವಹರಿಸುತ್ತಿದ್ದ ಸಂಘದಲ್ಲಿಯೇ ಸಾಲ ಪಡೆಯಬಹುದು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಮೇಗೌಡ, ಸದಸ್ಯರಾದ ಪಿ.ಕೆ. ಕುಮಾರ್, ಎಚ್‌.ಪಿ. ಸುರೇಶ್, ರಮೇಶ್, ರಾಮಕೃಷ್ಣ, ಜಮೀನ್, ಶೋಭಾ, ಗೀತಾ, ನಳಿನಿ,ವಿ. ಆರ್ ವೆಂಕಟೇಶ್, ಕರಿ ನಾಯ್ಕ, ಸೇರಿದಂತೆ ರೈತರು ಉಪಸ್ಥಿತರಿದ್ದರು.

Continue Reading

Mysore

ವಿಜೃಂಭಣೆಯಿಂದ ಜರುಗಿದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ

Published

on

ವರದಿ: ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ:  ತಾಲೂಕಿನ ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ರಥೊತ್ಸವವು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವದ ಹಿನ್ನಲೆ ಗ್ರಾಮದ ಮತ್ತು ಬೆಟ್ಟದ ಮೇಲಿನ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆಯಿಂದ ವಿಶೇಷ ಪೂಜೆಗಳು ಮಂತ್ರ ಪಠಿಸುವ ಮೂಲಕ ನಡೆಯಿತು. ಮೂರು ರಥಗಳಿಗೂ ವಿವಿಧ ಪುಷ್ಪಗಳಿಂದ ಹಾಗೂ ಕೇಸರಿ ಸೇರಿದಂತೆ ಹಲವು ಬಗೆಯ ಬಣ್ಣ ಬಣ್ಣಗಳ ಬಾವುಟಗಳಿಂದ ಅಲಂಕಾರ ಮಾಡಲಾಗಿತ್ತು. ರಥಗಳ ಮೇಲೆ ಕ್ರಮವಾಗಿ ಬೆಳ್ಳಿಬಸಪ್ಪ, ಗಣಪತಿ ಹಾಗೂ ಗಿರಿಜಮ್ಮ ಮಲ್ಲಯ್ಯ ದೇವರ ಉತ್ಸವ ಮೂರ್ತಿಗಳನ್ನು ಪೂಜೆ ಸಲ್ಲಿಸಿ, ಸುತ್ತ ಪ್ರದಕ್ಷಿಣೆ ಹಾಕಿ ಪ್ರತಿಷ್ಠಾಪಿಸಲಾಯಿತು. ಬೆಳಿಗ್ಗೆ ಸಲ್ಲಿದ ಶುಭಗಳಿಗೆಯಲ್ಲಿ ಗಣ್ಯರು ಹಾಗೂ ಭಕ್ತಾಧಿಗಳು ರಥಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.

ಬಳಿಕ ವಿವಿಧೆಡೆಯಿಂದ ಆಗಮಿಸಿದ ಭಕ್ತರೆಲ್ಲ ಒಟ್ಟಾಗಿ ಸೇರಿ ಮೊದಲು ಬೆಳ್ಳಿ ಬಸಪ್ಪ, ನಂತರ ಗಣಪತಿ ಮತ್ತು ಕಡೆಯಲ್ಲಿ ಗಿರಿಜಮ್ಮ ಮಲ್ಲಯ್ಯ ರಥಗಳನ್ನು ಒಂದೊಂದಾಗಿ ಉಘೇ ಮಲ್ಲಯ್ಯ, ಉಘೇ ಗಿರಿಜಾಮ್ಮ, ಉಘೇ ಮಲ್ಲಿಕಾರ್ಜುನ ಜೈಕಾರದೊಂದಿಗೆ ಎಳೆದು ಭಕ್ತಿ ಸಮರ್ಪಣೆ ಮಾಡಿದರು. ನವದಂತಿಗಳು ಸೇರಿದಂತೆ ಆಗಮಿಸಿದ ಭಕ್ತರು ಹಣ್ಣು ದವನ ಎಸೆದು ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಪ್ರಾರ್ಥಿಸಿಕೊಂಡರು.

ಬೆಟ್ಟ ಹತ್ತಿಳಿದ ಭಕ್ತರು: ಇನ್ನಾ ಜಾತ್ರಾ ಮಹೋತ್ಸವ ಅಂಗವಾಗಿ ಕಳೆದು ಮೂರು ನಾಲ್ಕು ದಿನಗಳಿಂದ ಬೆಟ್ಟ ಹತ್ತುವರ ಸಂಖ್ಯೆ ಹೆಚ್ಚಾಗಿದೆ. ರಥೋತ್ಸವ ದಿನವು ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸಿದೆ ಸಾವಿರಾರೂ ಮಂದಿ ಬೆಟ್ಟ ಹತ್ತಿ ಮೇಲಿರುವ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಗೆ ಪೂಜೆ ಸಲ್ಲಿಸಿದರು.

ಬೆಟ್ಟಕ್ಕೆ ಆಗಮಿಸಿದ ಭಕ್ತರು ಮಾತ್ರವಲ್ಲದೇ ಯುವಕ ಯುವತಿಯರು, ಸ್ನೇಹಿತರು ಫೋಟೋ ತೆಗೆದುಕೊಂಡು ಹಾಗೂ ಹಲವರು ರೀಲ್ಸ್ ಮಾಡುವ ಮೂಲಕ ಸಂತಸಪಟ್ಟರು. ಬಿಸಿಲಿನ ದಾಹದ ದಣಿವು ನಿಗಿಸಲು ಮೆಟ್ಟಿಲುಗಳ ಉದ್ದಕ್ಕೂ ನೀರಿನ ಬಾಟಲ್, ಮಜ್ಜಿಗೆ ಮತ್ತು ಜ್ಯೂಸ್ ಮಾರಾಟ ಮಾಡುವ ಸಣ್ಣಪುಟ್ಟ ಅಂಗಡಿಗಳು ವ್ಯಾಪಾರ ವಹಿವಾಟು ನಡೆಸದವು.

ಜಾತ್ರಾ ಮಹೋತ್ಸವ ಹಿನ್ನಲೆ ಸ್ಥಳೀಯ ವಿವಿಧ ಸೇವಾ ಸಂಘ ಸಮಿತಿಗಳು ಬಂದಂತಹ ಭಕ್ತರಿಗೆ ಅನ್ನದಾನ ಆಯೋಜಿಸಿದರು. ತಾಲೂಕು ಆರೋಗ್ಯ ಇಲಾಖೆವತಿಯಿಂದ ಬೆಟ್ಟದ ಬಳಿ ಆರೋಗ್ಯ ಶಿಬಿರವನ್ನು ಆಯೋಜಿಸಿ ಆರೋಗ್ಯ ತಪಾಸಣೆ ಮಾಡಿದರು.

ಜಾತ್ರಾ ಮಹೋತ್ಸವದಲ್ಲಿ ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ, ಕನ್ನಡ ಮಠದ ಶ್ರೀ ಚನ್ನಬಸವ ದೇಶಿ ಸ್ವಾಮೀಜಿ ಉಪಸ್ಥಿತರಿದ್ದರು.

Continue Reading

Trending

error: Content is protected !!