Connect with us

Chikmagalur

ಭಾರಿ ಗಾಳಿಗೆ ಮನೆಯ ಗೋಡೆ ಕುಸಿತ

Published

on

ಚಿಕ್ಕಮಗಳೂರು :

ಕಾಫಿನಾಡಲ್ಲಿ ಮುಂದುವರಿದ ಗಾಳಿ-ಮಳೆ ಅಬ್ಬರ

ಭಾರಿ ಗಾಳಿಗೆ ಮನೆಯ ಗೋಡೆ ಕುಸಿತ0

ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರದಲ್ಲಿ ಘಟನೆ

ಮನೆ ಗೋಡೆ ಮನೆಯ ಹೊರ ಭಾಗಕ್ಕೆ ಬಿದ್ದಿದೆ, ಒಳ ಭಾಗಕ್ಕೆ ಬಿದ್ದಿದ್ರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು

ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು

ನಾಗೇಶ್ ಶೆಟ್ಟಿ ಎಂಬುವರ ಮನೆಯ ಮುಂಭಾಗ ಸಂಪೂರ್ಣ ನಾಶ

ಮನೆ ಮುಂದೆ ನಿಲ್ಲಿಸಿದ್ದ ಆಟೋ ಮೇಲೆ ಬಿದ್ದ ಮನೆ ಗೋಡೆ ಆಟೋ ಜಖಂ

ನಾಗೇಶ್ ಶೆಟ್ಟಿ ಎಂಬುವರ ಆಟೋ ಸಂಪೂರ್ಣ ಜಖಂ

ಜಗದೀಶ್ ಶೆಟ್ಟಿ ಮನೆ ಬಳಿ ಆಟೋ ನಿಲ್ಲಿಸಿ ಆಟೋ ಕಳೆದುಕೊಂಡ ಜಗದೀಶ್

ಸ್ಥಳಕ್ಕೆ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಭೇಟಿ, ಪರಿಶೀಲನೆ

ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಗ್ರಾಮ

Continue Reading

Chikmagalur

ಮಲೆನಾಡಲ್ಲಿ ಮುಂದುವರೆದ ಮಳೆ ಅವಾಂತರ

Published

on

ಚಿಕ್ಕಮಗಳೂರು :

ಭಾರೀ ಗಾಳಿಗೆ ಮನೆ ಮೇಲೆ ಬಿದ್ದ ಬೃಹತ್ ಮರ

ಮರ ಬಿದ್ದ ಹಿನ್ನೆಲೆ ಮನೆಯಲ್ಲಿದ್ದ ವೃದ್ದೆಗೆ ಗಾಯ

ಗಾಯಗೊಂಡ ಬೆಲ್ಲಮ್ಮ ಅವರನ್ನ ಆಸ್ಪತ್ರೆಗೆ ರವಾನೆ

ಮನೆಯಿಂದ ಜೋಳಿಗೆಯಲ್ಲಿ ಹೊತ್ತು ಹಳ್ಳ ದಾಟಿಸಿದ ಗ್ರಾಮಸ್ಥರು

ಮನೆಯ ಸಮೀಪವೇ ಹರಿಯುತ್ತಿರುವ ಹಳ್ಳ ದಾಟಲು ಜೋಳಿಗೆ ಮೊರೆ ಹೋದ ಗ್ರಾಮಸ್ಥರು

ಕಳಸ ತಾಲೂಕಿನ ಕಾರ್ಲೆ ಗ್ರಾಮದಲ್ಲಿ ಘಟನೆ

ವೃದ್ಧೆ ಬೆಲ್ಲಮ್ಮ ಕಳಸ ಆಸ್ಪತ್ರೆಯಲ್ಲಿ ದಾಖಲು, ಚಿಕಿತ್ಸೆ

ಹಲವು ವರ್ಷದಿಂದ ರಸ್ತೆ ಇಲ್ಲದೆ ಪರದಾಡ್ತಿರೋ ಕಾರ್ಲೆ ಗ್ರಾಮಸ್ಥರು

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು

Continue Reading

Chikmagalur

ಸರ್ಕಾರಿ ಬಸ್-ಟ್ಯಾಂಕರ್ ನಡುವೆ ಅಪಘಾತ

Published

on

ಚಿಕ್ಕಮಗಳೂರು :ಬ್ರೇಕಿಂಗ್

ಸರ್ಕಾರಿ ಬಸ್-ಟ್ಯಾಂಕರ್ ನಡುವೆ ಅಪಘಾತ

ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ನಜ್ಜುಗೊಜ್ಜು

ಮೂಡಿಗೆರೆ ತಾಲೂಕಿನ ಶಿರವಳಲು ಗ್ರಾಮದ ಬಳಿ ಘಟನೆ

ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿರವಳಲು ಗ್ರಾಮ

ಹಲವರಿಗೆ ಗಂಭೀರ ಗಾಯ, ಜಿಲ್ಲಾಸ್ಪತ್ರೆಗೆ ದಾಖಲು

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ

ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು

Continue Reading

Chikmagalur

ಜಿಲ್ಲೆಯಲ್ಲಿ ಭಾರೀ ಮಳೆಗೆ ಬಲಿ

Published

on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾರೀ ಮಳೆಗೆ ಬಲಿ … ಭದ್ರಾ ನದಿಯಲ್ಲಿ ಬಿದ್ದಿದೆ. ನದಿಯಲ್ಲಿ ಮಹಿಳೆಯೊಬ್ಬರು ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಕಳಸ ತಾಲೂಕಿನಿಂದ ವರದಿಯಾಗಿದೆ

ಆಸ್ಪತ್ರೆಗೆ ಹೋಗಿ ಬರುವುದಾಗಿ ತೆರಳಿದ್ದ ಶಾರದಾ ಎಂಬಾಕೆ ಶವವಾಗಿ ಸಿಕ್ಕಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆ ಹೋಗಿ ಬರುವುದಾಗಿ ಹೇಳಿ ಹೋದ ಮಹಿಳೆ ಭದ್ರಾ ನದಿಗೆ ಬಿದ್ದು ಮೃತಪಟ್ಟಿದ್ದಾರೆ.

ಜಿಲ್ಲೆಯ ಕಳಸ ಪಟ್ಟಣ ಸಮೀಪದ ಗೇರುತೋಟ ಎಂಬಲ್ಲಿ ಘಟನೆ ನಡೆದಿದ್ದು, ಅದೇ ಗ್ರಾಮದ ನಿವಾಸಿ ಶಾರದಾ(55) ಮೃತ ಮಹಿಳೆಯಾಗಿದ್ದಾರೆ. ಜುಲೈ 16 ರಂದು ಶಾರದಾ ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದರು.

 

ಆದರೆ ಶಾರದಾ ಮತ್ತೆ ಮನೆಗೆ ಹಿಂದಿರುಗಿರಲಿಲ್ಲ, ಕುಟುಂಬಸ್ಥರು ಕಳಸ ಪೊಲೀಸರಿಗೆ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಇಂದು ಬೆಳಗ್ಗೆ ಗೇರು ತೋಟ ಸಮೀಪದಲ್ಲಿ ಹರಿಯುವ ಭದ್ರಾ ನದಿಯಲ್ಲಿ ಮಹಿಳೆಯ ಶವವನ್ನುಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಹಾಗೂ ಧರ್ಮಸ್ಥಳ ವಿಪತ್ತು ನಿರ್ವಹಣ ತಂಡದವರ ನೆರವಿನಿಂದ ನದಿಯಲ್ಲಿದ್ದ ಶವವನ್ನು ಹೊರ ತೆಗೆದಿದ್ದಾರೆ. ಆಸ್ಪತ್ರೆಗೆ ಹೋಗಿ ಹಿಂದಿರುಗುವಾಗ ಮಹಿಳೆ ಕಾಲುಜಾರಿ ನದಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.

Continue Reading

Trending

error: Content is protected !!