Connect with us

Kodagu

ಕೊಡಗಿನಲ್ಲಿ ನಿರ್ಮಾಣವಾಗುತ್ತಿದೆ ಮತ್ತೊಂದು ಗ್ಲಾಸ್ ಬ್ರಿಡ್ಜ್

Published

on

ಕೊಡಗು ಜಿಲ್ಲೆಯಲ್ಲಿ ಸದ್ದಿಲ್ಲದೇ ಮಗದೊಂದು ಹೊಸ ಗಾಜಿನ ಸೇತುವೆ (ಗ್ಲಾಸ್ ಬ್ರಿಡ್ಜ್) ಅನಾವರಣಗೊಳ್ಳಲು ಸಜ್ಜಾಗುತ್ತಿದೆ.

ಮಡಿಕೇರಿಯಿಂದ ಅಬ್ಬಿ ಫಾಲ್ಸ್ ಗೆ ತೆರಳುವ ರಸ್ತೆಯಲ್ಲಿ (ನಂದಿ ಮೊಟ್ಟೆ ಬಳಿ) ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಗ್ಲಾಸ್ ಬ್ರಿಡ್ಜ್ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಗ್ಲಾಸ್ ಬ್ರಿಡ್ಜ್ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಳ್ಳಲಿದೆ. ಈ ಗಾಜಿನ ಸೇತುವೆಯಲ್ಲಿ ನಿಂತು ಪ್ರಕೃತಿಯ ಸೊಬಗನ್ನು ಸವಿಯಬಹುದು. ಗಾಜಿನ ಸೇತುವೆಯ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಗ್ಲಾಸ್ ಅಳವಡಿಕೆ ಮಾತ್ರ ಬಾಕಿ ಉಳಿದಿದೆ. ನೂತನ ಗ್ಲಾಸ್ ಬ್ರಿಡ್ಜ್ ಉದ್ಘಾಟನೆಗೊಂಡಲ್ಲಿ ಈ ತಾಣ ಕೊಡಗಿನ ಪ್ರವಾಸೋಧ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಲಿದೆ.

Continue Reading
Click to comment

Leave a Reply

Your email address will not be published. Required fields are marked *

Kodagu

2026ರ ಮಾ.27ರಿಂದ31ರ ವರೆಗೆ ಕುಂಜಿಲ ಪೈನರಿ ಮಖಾಂ ಉರೂಸ್

Published

on

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು : ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಕಕ್ಕಬ್ಬೆ ಕುಂಜಿಲ ಗ್ರಾಮದ ಪೈನರಿ ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಔಲಿಯಾಗಳ ಹೆಸರಿನಲ್ಲಿ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು 2026ರ ಮಾ27ರಿಂದ31ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕುಂಜಿಲ ಪೈನರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷರು,ಆಡಳಿತ ಮಂಡಳಿ, ಸಲಹಾ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Kodagu

ಎ ಎಸ್ ಪೊನ್ನಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಶಿಕ್ಷಕರು

Published

on

ಮಡಿಕೇರಿ : ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಶಿಕ್ಷಕರು ವಿಧಾನಸೌಧ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣರವರನ್ನು ಭೇಟಿ ಮಾಡಿ ವೇತನ ಹೆಚ್ಚಳ ಮತ್ತು ಸೇವಾಭದ್ರತೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು.


ರಾಜ್ಯದಲ್ಲಿ ಸುಮಾರು 300ಕ್ಕೂ ಅಧಿಕ ಶಿಕ್ಷಕರು ಕಳೆದ 22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳಲ್ಲಿ ಗೌರವಧನ ಮತ್ತು ಹೊರಗುತ್ತಿಗೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ 2,100 ರೂ ವೇತನ, ನಂತರ 2010ರಲ್ಲಿ ರೂ 4,400 2017 ರಲ್ಲಿ ರೂ 6,400, 2021 ರಲ್ಲಿ ರೂ 10,500 ವೇತನವನ್ನು ನೀಡುತ್ತಿದ್ದಾರೆ. MOD ಎಂಬ ಹೊಸ ನಿಯಮದ ಅನ್ವಯ ಮಾಸ್ಟರ್ ಆನ್ ಡ್ಯೂಟಿ ಭತ್ಯೆ 3,150 ಹಾಗೂ ಸಾರಿಗೆ ಭತ್ಯೆ 3,000 ರೂ ಸೇರಿ ಒಟ್ಟು 6,150 ಸೇರಿ ಒಟ್ಟಾಗಿ 16,650 ರೂಗಳನ್ನು ನೀಡಲಾಗುತ್ತಿದೆ. MOD ಭತ್ಯೆಯನ್ನು ಸಂಜೆಯಿಂದ ಮುಂಜಾನ ಪ್ರಾರ್ಥನೆ ಸಮಯದವರೆಗೆ ಮಾಡಿದರೆ ಮಾತ್ರ ನೀಡಲಾಗುತ್ತದೆ. PF ಹಣ ಕಡಿತ ಗೊಳಿಸಲಾಗಿದೆ ಎಲ್ಲಾ ಬೇಡಿಕೆಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಮ್ಮ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಪರಿಗಣಿಸಲು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಶಿಕ್ಷಕರ ಮುಖಂಡರು ಉಪಸ್ಥಿತರಿದ್ದರು.

Continue Reading

Kodagu

ಚಲಿಸುತ್ತಿದ್ದ ಆಟೋ ಮೇಲೆ ಕಾಡಾನೆ ದಾಳಿ

Published

on

*ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆ ದಾಳಿ.*

ಚಲಿಸುತ್ತಿದ್ದ ಆಟೋ ಮೇಲೆ ಕಾಡಾನೆ ದಾಳಿ

ಪ್ರಯಾಣಿಕನಿಗೆ ಗಂಭೀರ ಗಾಯ

ಚಾಲಕ ಪ್ರಾಣಪಾಯದಿಂದ ಪಾರು

ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ಬಂದ ಕಾಡಾನೆ

ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪ ಇಂಜಿಲಗೆರೆ ಬಳಿ ಘಟನೆ

ಕಾಫಿ ತೋಟದಿಂದ ರಸ್ತೆಗೆ ಬಂದು ಆಟೋ ಮೇಲೆ ದಾಳಿ ಮಾಡಿದ ಕಾಡಾನೆ.

ಕಾಡಾನೆ ದಾಳಿಯಿಂದ ಗಾಯಗೊಂಡ
ಇಂಜಿಲಗೆರೆಯ ಪ್ರದೀಪ್
ಸಿದ್ದಾಪುರ ಆಸ್ಪತ್ರೆಗೆ ದಾಖಲು

ಕಾಡಾನೆ ಹಾವಳಿ ತಡೆಗಟ್ಟಲು ಒತ್ತಾಯ

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಭೇಟಿ ಪರಿಶೀಲನೆ.

Continue Reading

Trending

error: Content is protected !!