Connect with us

Manglore

ಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್‌

Published

on

ಪುತ್ತೂರು: ಜಿ.ಎಲ್. ಆಚಾರ್ಯ ಜುವೆಲರ್ಸ್ ವತಿಯಿಂದ ಆಯೋಜಿಸಲಾದ 5ನೇ ವರ್ಷದ ಜಿ.ಎಲ್ .ಟ್ರೋಫಿ -2026 ಸೀಝನ್ – 5 ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ಹಾಗೂ ಸನ್ಮಾನ ಕಾರ್ಯಕ್ರಮವು ಕೊಂಬೆಟ್ಟು ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಭವ್ಯವಾಗಿ ಹಾಗೂ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಲರಾಮ್ ಆಚಾರ್ಯ ಅವರು  ಮಾತನಾಡಿ, ಕ್ರೀಡಾಪಟುಗಳು ಕ್ರೀಡಾ ಸೌಹಾರ್ದತೆಯನ್ನು ಕಾಪಾಡಿಕೊಂಡು ಸ್ನೇಹಪೂರ್ಣವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಎಲ್. ಆಚಾರ್ಯ ಜುವೆಲರ್ಸ್ ಸಂಸ್ಥೆಯ ಹಿರಿಯ ಸಿಬ್ಬಂದಿಯಾದ ಶಂಕರ್ ಮೋಹನ್ ಸಾಲೆ ಅವರು 1967ರಲ್ಲಿ ಜಿ.ಎಲ್. ಆಚಾರ್ಯ ಜುವೆಲರ್ಸ್ ಸಂಸ್ಥೆಗೆ ಸೇರ್ಪಡೆಗೊಂಡು, ಸಂಸ್ಥೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದು, ಅವರು ಸಲ್ಲಿಸಿದ ಅಪಾರ ಸೇವೆ, ಸತ್ಯನಿಷ್ಠ ವ್ಯಾಪಾರ, ಸಮಾಜಮುಖಿ ಚಿಂತನೆ ಹಾಗೂ ಧಾರ್ಮಿಕ ಸೇವೆಗಳ ಮೂಲಕ ಜನಮಾನಸದಲ್ಲಿ ವಿಶಿಷ್ಟ ಗೌರವ ಪಡೆದಿದ್ದಾರೆ ಎಂದು ನಿರಂತ್ ದೇವಸ್ಯ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಂಕರ್ ಮೋಹನ್ ಸಾಲೆ ಅವರನ್ನು ಬಲರಾಮ್ ಆಚಾರ್ಯ, ಸುದನ್ವ ಬಿ ಆಚಾರ್ಯ ಅವರು ಸನ್ಮಾನಿಸಿ ಗೌರವಿಸಿದರು.

ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಹಾಗೂ ಕ್ರೀಡಾ ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪ್ರಥಮ ಸ್ಥಾನವನ್ನು ಜಿ.ಎಲ್. ಹಾಸನ, ದ್ವೀತಿಯ ಸ್ಥಾನವನ್ನು ಜಿ.ಎಲ್. ಕುಶಾಲನಗರ, ತೃತೀಯ ಸ್ಥಾನವನ್ನು ಜಿ.ಎಲ್. ಪುತ್ತೂರು (ಪ್ರಾಚೀ)ಅವರು ಪಡೆದುಕೊಂಡರು. ಸರಣಿ ಶ್ರೇಷ್ಠ ಹಾಗೂ ಫೈನಲ್ ಪಂದ್ಯ ಶ್ರೇಷ್ಠ ಆಟಗಾರನಾಗಿ ಜೇಮ್ಸ್ (ಹಾಸನ), ಉತ್ತಮ ದಾಂಡಿಗನಾಗಿ ವಿನಯ್ ಕೆ.ಪಿ. (ಸುಳ್ಯ), ಉತ್ತಮ ಎಸೆತಗಾರನಾಗಿ ಹರೀಶ್ (ಹಾಸನ), ಉತ್ತಮ ಕ್ಷೇತ್ರರಕ್ಷಕರಾಗಿ ವಿಜಿತ್ ಕೃಷ್ಣ, ಗೇಮ್ ಚೆಂಜರಾಗಿ ಚೇತನ್ (ಕುಶಾಲನಗರ) ಇವರು ಪ್ರಶಸ್ತಿಯನ್ನು ಪಡೆದುಕೊಂಡರು.

ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಜಿ.ಎಲ್ .ಪುತ್ತೂರು (ಪ್ರಾಚೀ), ದ್ವಿತೀಯ ಸ್ಥಾನವನ್ನು ಜಿ.ಎಲ್ ಪುತ್ತೂರು (ಗ್ಲೋ) ಅವರು ಪಡೆದುಕೊಂಡರು.

ಜಿ.ಎಲ್. ಆಚಾರ್ಯ ಜುವೆಲರ್ಸ್ ವತಿಯಿಂದ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಲಕ್ಷ್ಮೀಕಾಂತ್ ಬಿ. ಆಚಾರ್ಯ ಅವರು ದೀಪ ಬೆಳಗಿಸುವ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಹಾಗೂ ವೇದ ಲಕ್ಷ್ಮೀಕಾಂತ್ ಬಿ. ಆಚಾರ್ಯ, ಶ್ರೀರಾಮ್ ಆಚಾರ್ಯ ಮತ್ತು ಇತರರು ಉಪಸ್ಥಿತರಿದ್ದರು.

Continue Reading

Manglore

ಆನ್‌ಲೈನ್ ಗೇಮ್‌ನಲ್ಲಿ ಸೋಲಿಸಿದ ಕೋಪ: ಕೊಲೆಗೆ ಯತ್ನಿಸಿದ ಆರೋಪಿಗೆ ಜೈಲುಶಿಕ್ಷೆ, ದಂಡ

Published

on

ಮಂಗಳೂರು: ಆನ್‌ಲೈನ್ ಗೇಮ್‌ನಲ್ಲಿ ಸೋಲಿಸಿದ ವಿಚಾರದಲ್ಲಿ ನಗರದ ನಂದಿಗುಡ್ಡೆ ಬಳಿಯ ನಿವಾಸಿ ಪ್ರತ್ಯೂಶ್ ಸಾಲಿಯಾನ್ ಎಂಬವರಿಗೆ ಬೆದರಿಕೆ ಹಾಕಿ, ಕೊಲೆ ಯತ್ನ ನಡೆಸಿರುವ ಪ್ರಕರಣದಲ್ಲಿ ಸಂಜಯ್ ಪೂಜಾರಿ ಎಂಬಾತನಿಗೆ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 20,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

2023ರ ಮೇ 17ರಂದು ಸಂಜೆ 3:40ರ ವೇಳೆಗೆ ಪ್ರತ್ಯೂಶ್ ತನ್ನ ಮನೆಯಿಂದ ನಂದಿಗುಡ್ಡೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸಂಜಯ್ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಚೂರಿಯಿಂದ ಕೊಲೆಯತ್ನ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.

ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಪಿಎಸ್‌ಐ ಶೀತಲ್ ಅಲಗೂರು ಮತ್ತು ಪಿಎಸ್‌ಐ ಮನೋಹರ್ ಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್.ಅವರು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸಂಜಯ್ ಪೂಜಾರಿಗೆ ಜ.31ರಂದು 4 ವರ್ಷ ಜೈಲು ಶಿಕ್ಷೆ ಮತ್ತು 20,500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ವಾದಿಸಿದ್ದರು.

Continue Reading

Chikmagalur

ಬಜೆಟ್‌: ಕರಾವಳಿ ಕೃಷಿಕರಿಗೆ ಬಂಪರ್‌ ಕೊಡುಗೆ

Published

on

2026ರ ಬಜೆಟ್‌ನಲ್ಲಿ ರೈತರ ಆದಾಯ ಹೆಚ್ಚಿಸಲು ಅಧಿಕ ಮೌಲ್ಯದ ಬೆಳೆಗಳಾದ ತೆಂಗು, ಶ್ರೀಗಂಧ, ಗೋಡಂಬಿ, ಕೋಕೋಗೆ ಆದ್ಯತೆ ನೀಡಲಾಗಿದೆ. ಶ್ರೀಗಂಧ ಪುನರುಜ್ಜೀವನ, ಕರಾವಳಿ ಬೆಳೆಗಳ ಉತ್ಪಾದಕತೆ ಹೆಚ್ಚಳ ಗುರಿ.

AI ಕೃಷಿ ಉಪಕರಣ ‘ಭಾರತ್ ವಿಸ್ತಾರ್’ ಮೂಲಕ ರೈತರಿಗೆ ಮಾಹಿತಿ ನೀಡಲು ಯೋಜನೆ. ಮೀನುಗಾರಿಕೆ ಮತ್ತು ಪಶುಸಂಗೋಪನೆ ವಲಯಕ್ಕೂ ಬಂಪರ್ ಕೊಡುಗೆ, ಮೌಲ್ಯ ಸರಪಳಿ ಬಲಪಡಿಸಿ, ಉದ್ಯೋಗ ಸೃಷ್ಟಿಗೆ ಒತ್ತು.

ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದಿನ ಬಜೆಟ್‌ನಲ್ಲಿ ತೆಂಗು, ಶ್ರೀಗಂಧ, ಗೋಡಂಬಿ ಮತ್ತು ಕೋಕೋ ಬೆಳೆಗಾರರಿಗೆ ಬಜೆಟ್‌ನಲ್ಲಿ ಬಂಪರ್‌ ಕೊಡುಗೆಗಳನ್ನು ನೀಡಿದ್ದಾರೆ. ಶ್ರೀಗಂಧದ ವ್ಯವಸ್ಥಿತಿ ಕೃಷಿ, ಕೊಯ್ಲು, ಕೊಯ್ಲಿನ ನಂತರದ ಸಂಸ್ಕರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಕರಾವಳಿ ಪ್ರದೇಶಗಳಲ್ಲಿ ತೆಂಗು, ಗೋಡಂಬಿ ಮತ್ತು ಕೋಕೋ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸಲು ವಿಶೇಷ ಕಾರ್ಯಕ್ರಮವನ್ನು ಘೋಷಿಸಲಾಗಿದೆ.

ಮೀನುಗಾರಿಕೆ ಮೌಲ್ಯ ಸರಪಳಿಯನ್ನು ಬಲಪಡಿಸಲು 500 ಜಲಾಶಯಗಳು ಮತ್ತು ಇತರ ಜಲಮೂಲಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಉಪಕ್ರಮಗಳನ್ನು ಪ್ರಸ್ತಾಪಿಸಿದೆ. ಈ ಪ್ರಯತ್ನಗಳು ಮಾರುಕಟ್ಟೆ ಸಂಪರ್ಕಗಳನ್ನು ಸುಧಾರಿಸುವುದು ಮತ್ತು ಸ್ಟಾರ್ಟ್‌ಅಪ್‌ಗಳು, ಮಹಿಳಾ ನೇತೃತ್ವದ ಗುಂಪುಗಳು ಮತ್ತು ಮೀನು ರೈತ ಉತ್ಪಾದಕ ಸಂಸ್ಥೆಗಳನ್ನು ಬೆಂಬಲಿಸುವುದರ ಮೇಲೆ ಕೇಂದ್ರೀಕರಿಸುತ್ತವೆ. ಪಶುಸಂಗೋಪನೆಗಾಗಿ, ಉದ್ಯಮಶೀಲತೆಯನ್ನು ಉತ್ತೇಜಿಸಲು, ಜಾನುವಾರು ಉದ್ಯಮಗಳನ್ನು ಆಧುನೀಕರಿಸಲು ಮತ್ತು ಡೈರಿ, ಕೋಳಿ ಮತ್ತು ಜಾನುವಾರು ವಲಯಗಳಲ್ಲಿ ಸಮಗ್ರ ಮೌಲ್ಯ ಸರಪಳಿಗಳನ್ನು ಹೆಚ್ಚಿಸಲು ಕ್ರೆಡಿಟ್-ಸಂಬಂಧಿತ ಸಬ್ಸಿಡಿ ಕಾರ್ಯಕ್ರಮವನ್ನು ಪರಿಚಯಿಸಲಾಗುವುದು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗುಣಮಟ್ಟದ ಉದ್ಯೋಗವನ್ನು ಸೃಷ್ಟಿಸಲು ಜಾನುವಾರು ರೈತ ಉತ್ಪಾದಕ ಸಂಸ್ಥೆಗಳ ರಚನೆಯನ್ನು ಸರ್ಕಾರ ಪ್ರೋತ್ಸಾಹಿಸುತ್ತದೆ.

Continue Reading

Manglore

ಸ್ವಾರ್ಥವಿಲ್ಲದ ದಾನಗಳಲ್ಲಿ ಶೇಷ್ಠದಾನ ರಕ್ತದಾನ-ಡಾ. ಇಂದಿರಾ

Published

on

ಮಂಗಳೂರು : ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂಡಿಯನ್ ರೆಡ್‌ಕ್ರಾಸ್ ಮಂಗಳೂರು ಸಹಯೋಗದಲ್ಲಿ ರಕ್ತದಾನ ಶಿಬಿರ ಜ.3೦ರಂದು ನಡೆಯಿತು.

ರಕ್ತದಾನ ಶಿಬಿರವನ್ನು ಹೈದರಾಬಾದಿನ ಹಿರಿಯ ರೇಡಿಯಾಲಿಜಿಸ್ಟ್ ಡಾ. ಇಂದಿರಾ ಉದ್ಘಾಟಿಸಿ ಮಾತನಾಡುತ್ತಾ, ಯಾವುದೇ ಸ್ವಾರ್ಥವಿಲ್ಲದೆ, ತಾನು ಯಾರಿಗೆ ರಕ್ತದಾನ ಮಾಡುತ್ತಿದ್ದೇನೆ ಎಂಬ ಮಾಹಿತಿ ಕೂಡ ಕೇಳದೆ, ಇನ್ನೊಬ್ಬರ ಜೀವ ಉಳಿಸಬಲ್ಲ ಉದ್ದೇಶದಿಂದ ಮಾಡುವ ರಕ್ತದಾನ ದಾನಗಳಲ್ಲಿಯೇ ಶ್ರೇಷ್ಠದಾನ. ಪೂಜ್ಯರ ಮಾರ್ಗದರ್ಶನದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳು ಜನರಿಗೆ ಉಪಯುಕ್ತವಾಗಿರುತ್ತದೆ ಎಂಬುದರಲ್ಲಿ ಯಾವ ಸಂಶಯವಿಲ್ಲ. ಇದಕ್ಕೆ ಇಲ್ಲಿ ನೀಡುತ್ತಿರುವ ಉಚಿತ ಹೈಟೆಕ್ ಡಯಾಲಿಸಿಸ್ ಸೇವೆಯೇ ಸಾಕ್ಷಿ ಎಂದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಇವರು ಮಾತನಾಡಿ, ಪೂಜ್ಯ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಆಶೀರ್ವಾದಲ್ಲಿ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ ಇವರ ಮಾರ್ಗದರ್ಶನದಲ್ಲಿ ಅತ್ಯಂತ ಅವಶ್ಯವಾಗಿರುವ ರಕ್ತದಾನ ಶಿಬಿರವನ್ನು ಪ್ರತಿ ತಿಂಗಳು ನಮ್ಮ ಆಸ್ಪತ್ರೆಯ ವತಿಯಿಂದ ನಡೆಸುತ್ತಿದ್ದೇವೆ. ರಕ್ತದಾನದ ಬಗ್ಗೆ ಜನರಿಗೆ ಮಾಹಿತಿಯ ಕೊರತೆ ಇದೆ. ಈ ನಿಟ್ಟಿನಲ್ಲಿ ರಕ್ತದಾನದ ಜಾಗೃತಿಯ ಅವಶ್ಯಕತೆ ಇದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಹೈದಾರಾಬಾದಿನ ಹಿರಿಯ ಶಿಕ್ಷಣ ತಜ್ಞರಾದ ಪ್ರಫುಲ್ ಇವರು ಮಾತನಾಡಿ ರಕ್ತದಾನಕ್ಕೆ ಬೇಕಾಗಿರುವುದು ಮಾನವೀಯತೆ, ತ್ಯಾಗ ಮನೋಭಾವ ಮತ್ತು ಒಳ್ಳೆಯ ಹೃದಯ. ಧರ್ಮಸ್ಥಳದ ಸಂಸ್ಥೆಗಳು ಸೇವೆಗೆ ಹೆಸರುವಾಸಿಯಾಗಿದೆ. ರಕ್ತದಾನ ಕೂಡ ಒಂದು ಶ್ರೇಷ್ಠ ಸೇವೆಯಾಗಿದೆ ಎಂದರು.


ಪೆಥಲಾಜಿಸ್ಟ್ ಡಾ.ಮೇಘಾ ಮಾತನಾಡಿ ದಿನನಿತ್ಯ ಸಾವಿರಾರು ಮಂದಿಗೆ ರಕ್ತದ ಅವಶ್ಯಕತೆ ಇರುತ್ತದೆ. ಆದರೆ ರಕ್ತದಾನ ಮಾಡುವವರ ಸಂಖ್ಯೆ ಕೇವಲ 1 ರಿಂದ 2 ಶೇಕಡಾ ಮಾತ್ರ. ರಕ್ತದಾನ ಮಾಡುವುದರಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ ಎಂದರು.

ಇoಡಿಯನ್ ರೆಡ್‌ಕ್ರಾಸ್ ಬ್ಲಡ್ ಬ್ಯಾಂಕಿನ ಟೆಕ್ನಿಕಲ್ ಸೂಪರ್‌ವೈಸರ್ ಮರಿಯ ಆರತಿ ಅವರು ಮಾತನಾಡಿ, ಯಾರೆಲ್ಲ ರಕ್ತದಾನ ಮಾಡಬಹುದು ಎಂದು ವಿವರಿಸುತ್ತಾ, ಹೆಚ್‌ಐವಿ, ಹೆಪಟೈಟೀಸ್ ಮೊದಲಾದ ಸೋಂಕು ಇಲ್ಲದವರು, 12.5 ಹಿಮೋಗ್ಲೋಬಿನ್ ಮಟ್ಟ ಇರುವವರು ರಕ್ತದಾನ ಮಾಡಬಹುದು. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯು ರಕ್ತದಾನ ಶಿಬಿರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಆಸ್ಪತ್ರೆಯ ಸಹಕಾರದಲ್ಲಿ ಹಲವಾರು ರಕ್ತದಾನ ಶಿಬರವನ್ನು ನಡೆಸಲಾಗುತ್ತದೆ ಎಂದರು.

Continue Reading

Trending

error: Content is protected !!