Hassan
ಹಿಂದಿನ ಸಂಪ್ರದಾಯದಂತೆ ಗಿಡಕ್ಕೆ ಪೂಜೆ ಸಲ್ಲಿಕೆ ಅನುಗನಾಳ್ ಕೃಷ್ಣಮೂರ್ತಿ
ಹಾಸನ: ತಾಲೂಕಿನ ಅನುಗನಾಳಿನಲ್ಲಿ ಹೀಗೊಂದು ವಿಶಿಷ್ಟ ಕಾರ್ಯಕ್ರಮ ನಡೆದು ಅನಾದಿಕಾಲದಿಂದಲೂ ನಮ್ಮ ಪೂರ್ವಿಕರು ಭೂಮಿಗೆ ಬೀಜ ಬಿತ್ತುವ ಮೊದಲು ಮತ್ತು ಆ ಬೀಜ ಬೆಳೆದ ಫಸಲನ್ನು ಕೊಯ್ಲು ( ಕಟಾವು) ಮಾಡುವ ಮೊದಲು ಭೂಮಿ ಪೂಜೆ ಮಾಡುವುದು ಸಂಪ್ರದಾಯವಾಗಿತ್ತು. ಇತ್ತೀಚಿನ ಆಧುನಿಕ ಭರಾಟೆಯಲ್ಲಿ ಈ ಎಲ್ಲಾ ಸಂಪ್ರದಾಯಗಳು ಕಣ್ಮರೆ ಆಗುತ್ತಿರುವ ಸಂದರ್ಭದಲ್ಲಿ ಹಾಸನ ತಾಲೂಕಿನ ಅನುಗನಾಳು ಕೃಷ್ಣಮೂರ್ತಿ ಅವರ ಜಮೀನಿನಲ್ಲಿ ನಾಲ್ಕು ವರ್ಷದ ಅಡಿಕೆ ಗಿಡಗಳು ಹೊಂಬಾಳೆ ಬಿಟ್ಟಿರುವುದಕ್ಕೆ ಇವರ ಕುಟುಂಬಸ್ಥರೆಲ್ಲರೂ ಸೇರಿ ಭೂಮಿ ಪೂಜೆ ಮಾಡಿ ಅಲ್ಲೇ ಸಾಂಪ್ರದಾಯಿಕ ಆಹಾರವನ್ನು ಮಾಡಿಕೊಂಡು ಬಂದಂತ ಅತಿಥಿಗಳಿಗೆ ಸತ್ಕಾರವನ್ನು ಮಾಡಿದರು. ಈ ಸಂಪ್ರದಾಯ ಪದ್ಧತಿಯನ್ನು ಉಳಿಸಿ ಬೆಳೆಸಬೇಕೆಂದು ಈ ಪೂಜಾ ಕಾರ್ಯವನ್ನು ಮಾಡಲಾಗುತ್ತದೆ ಎಂದು ಅನುಗನಾಳು ಕೃಷ್ಣಮೂರ್ತಿ ತಿಳಿಸಿದರು.

ಇತ್ತೀಚಿಗೆ ಭೂಮಿಗೆ ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕವನ್ನು ಬಳಸಲಾಗುತ್ತಿದೆ ಇದರಿಂದ ಭೂಮಿ ಪಲವತ್ತತೆ ಕಳೆದುಕೊಳ್ಳುತ್ತಿದ್ದು, ರೈತನ ಮಿತ್ರ ಎಂಬ ಖ್ಯಾತಿಯನ್ನು ಪಡೆದಿದ್ದ ಎರೆಹುಳು ಸಂತತಿ ಕಡಿಮೆಯಾಗುತ್ತಿದ್ದು ಇದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ೩೦ಕ್ಕೂ ಹೆಚ್ಚು ಜನ ರೈತರು ಮತ್ತು ಕುಟುಂಬಸ್ಥರು ಭಾಗವಹಿಸಿ ಇದರ ಅನುಭವ ಪಡೆದರು.
Hassan
ಹಾಸನದಲ್ಲಿ ವಿಪ್ರ ಸಮಾಗಮ: ಡಿಸೆಂಬರ್ 27, 28ರಂದು ಅದ್ಧೂರಿ ‘ಜಿಲ್ಲಾ ವಿಪ್ರ ಸಮ್ಮೇಳನ’
ಹಾಸನ: ಜಿಲ್ಲೆಯ ಸಮಸ್ತ ವಿಪ್ರ ಬಾಂಧವರನ್ನು ಒಂದುಗೂಡಿಸುವ ಮತ್ತು ಸಂಸ್ಕಾರದ ಅರಿವು ಮೂಡಿಸುವ ಉದ್ದೇಶದಿಂದ ಡಿಸೆಂಬರ್ 27 ಮತ್ತು 28ರಂದು ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜು (MCE) ಆವರಣದಲ್ಲಿ ‘ಜಿಲ್ಲಾ ವಿಪ್ರ ಸಮ್ಮೇಳನ’ ಹಮ್ಮಿಕೊಳ್ಳಲಾಗಿದೆ. ಈ ಬೃಹತ್ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಭಾನುವಾರ ಸಂಜೆ ನಗರದ ಶಂಕರ ಮಠದಲ್ಲಿ ಯಶಸ್ವಿಯಾಗಿ ಜರುಗಿತು.
ಕೋಟಿ ಗಾಯತ್ರಿ ಜಪದ ಸಂಕಲ್ಪ: ಭರದಿಂದ ಸಾಗಿದ ಸಿದ್ಧತೆ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಮಂಜುನಾಥ ಮೂರ್ತಿ ಅವರು, ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿರುವ ‘ಕೋಟಿ ಗಾಯತ್ರಿ ಜಪ’ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ ಎಂದರು.
ಈಗಾಗಲೇ ಸುಮಾರು 1 ಕೋಟಿ17 ಲಕ್ಷ ಜಪ ಪೂರ್ಣಗೊಂಡಿದ್ದು, ಮುಂದಿನ ಒಂದು ವಾರದಲ್ಲಿ ಈ ಸಂಖ್ಯೆ 50 ಲಕ್ಷ ದಾಟುವ ನಿರೀಕ್ಷೆಯಿದೆ ಎಂದರು.
ಸಮ್ಮೇಳನದ ಪ್ರಚಾರಕ್ಕಾಗಿ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡಾಗ ವಿಪ್ರ ಬಾಂಧವರಿಂದ ಭವ್ಯ ಸ್ವಾಗತ ಹಾಗೂ ಬೆಂಬಲ ದೊರೆತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
*ಸಮ್ಮೇಳನದ ಪ್ರಮುಖ ಆಕರ್ಷಣೆಗಳು

ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಸಮಾಜದ ಎಲ್ಲಾ ವರ್ಗದವರನ್ನು ತಲುಪಲು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ:*
ಗಾಯತ್ರಿ ಹೋಮ: ಡಿಸೆಂಬರ್ 27ರಂದು 30 ಹೋಮ ಕುಂಡಗಳಲ್ಲಿ 600 ಜನ ಋತ್ವಿಜರಿಂದ ಗಾಯತ್ರಿ ಹೋಮ ನಡೆಯಲಿದ್ದು, ಮಧ್ಯಾಹ್ನ 12:30ಕ್ಕೆ ಪೂರ್ಣಾಹುತಿ ನೆರವೇರಲಿದೆ.
* ವೈವಿಧ್ಯಮಯ ಉತ್ಸವಗಳು: ಸಮ್ಮೇಳನದಲ್ಲಿ ಗಾಳಿಪಟ ಉತ್ಸವ, ಮೆಹಂದಿ , ವಿವಿಧ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆಯಲಿವೆ.
* ರಾಜ್ಯಮಟ್ಟದ ಗಣ್ಯರ ಆಗಮನ: ರಾಜ್ಯದ ವಿವಿಧ ಜಿಲ್ಲೆಗಳ ವಿಪ್ರ ಸಭೆಗಳಿಗೆ ಆಮಂತ್ರಣ ನೀಡಲಾಗಿದ್ದು, ನೂರಾರು ಗಣ್ಯರು ಭಾಗವಹಿಸಲಿದ್ದಾರೆ.
ಮಕ್ಕಳಿಗೆ ಸಂಸ್ಕಾರದ ಅಡಿಪಾಯ
“ಇಂದಿನ ಪೀಳಿಗೆಗೆ ಸಂಸ್ಕಾರ ನೀಡುವುದು ಈ ಸಮ್ಮೇಳನದ ಮುಖ್ಯ ಉದ್ದೇಶ. ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ನಮ್ಮ ಪರಂಪರೆಯ ಅರಿವು ಮೂಡಿಸಬೇಕು” ಎಂದು ಅಧ್ಯಕ್ಷರು ಮನವಿ ಮಾಡಿದರು. ಅಲ್ಲದೆ, ಸಮ್ಮೇಳನಕ್ಕೆ ಸ್ಥಳಾವಕಾಶ ನೀಡಿ ಸಹಕರಿಸುತ್ತಿರುವ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.
ತನು-ಮನ-ಧನದ ಸಹಕಾರಕ್ಕೆ ಕರೆ
ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿಪ್ರ ಬಾಂಧವರು ತನು-ಮನ-ಧನದಿಂದ ಸಹಕರಿಸಬೇಕೆಂದು ಕೋರಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಸುರೇಶ್ ಹಾಗೂ ಖಜಾಂಚಿ ಅಶ್ವಿನಿ ಉಪಸ್ಥಿತರಿದ್ದರು.
Hassan
ಜಿಲ್ಲಾ ಸರ್ಕಾರಿ ನೌಕರರ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ 2026 ರ ಕ್ಯಾಲೆಂಡರ್ ಬಿಡುಗಡೆ
ಹಾಸನ: ನಗರದ ಖಾಸಗೀ ಹೋಟೆಲೊಂದರಲ್ಲಿ ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಜಿಲ್ಲಾ ಸರಕಾರಿ ನೌಕರರ ಕೋ-ಆಪರೇಟಿವ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ 2026 ರ ನೂತನ ಕ್ಯಾಲೆಂಡರ್ ಬಿಡುಗಡೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಇದೇ ವೇಳೆ ಪತ್ರಕರ್ತರ ಸಂಘದ ಅಧ್ಯಕ್ಷ ಕೆಂಚೇಗೌಡ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡುತ್ತಾ, ಈ ಸಂಘವನ್ನು ಯಶಸ್ವಿಯಾಗಿ ಹುಟ್ಟುಹಾಕಲಾಗಿದ್ದು, ಸಂಘ-ಸಂಸ್ಥೆಯನ್ನು ಉತ್ಸಹದಲ್ಲಿ ಪ್ರಾರಂಭ ಮಾಡಬಹುದು, ಆದರೇ ಯಾವುದೇ ಸಂಘ ಸಂಸ್ಥೆಯಲ್ಲಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಅಲ್ಲಿನ ಸಮತೋಲನವನ್ನು ಸರಿದೂಗಿಸಿಕೊಂಡು ಸಂಘವನ್ನು ಬಹಳ ವರ್ಷಗಳ ಕಾಲ ಹಿಡಿದಿಟ್ಟುಕೊಳ್ಳುವುದು ಬಹಳ ಕಷ್ಟದ ಕೆಲಸ. ಎಲ್ಲಾ ಸಂಘ ಸಂಸ್ಥೆಯಲ್ಲೂ ಪರ-ವಿರೋಧ, ಜಾತಿ ಎಲ್ಲಾವು ಕೆಲಸ ಮಾಡುವುದರಿಂದ ಸರಿದೂಗಿಸಿಕೊಂಡು ಹೋಗುವುದು ಕಷ್ಟದ ಕೆಲಸ. ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎರಡು ಸಂಘವನ್ನು ಸಂಯೋಜನೆ ಮಾಡಿಕೊಂಡು ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ ಎಂದು ಹೇಳಿದರು.

ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಾವುಗಳು ಸಂಘ ಸ್ಥಾಪಿಸಿ ಅನೇಕ ಸೇವಾ ಚಟುವಟಿಕಕೆಗಳನ್ನ ಮಾಡಲಾಗಿದೆ. ಅದರಲ್ಲಿ ಗಿಡಗಳನ್ನು ನೆಡುವುದು, ಕ್ರೀಡೆಯನ್ನ ಸಾಧನೆ ಮಾಡಿದ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರೋತ್ಸಹ ಧನ ಕೊಡುವುದು, ಹಸಿರು ಭೂಮಿ ಪ್ರತಿಷ್ಠಾನದ ಕೆಲಸಗಳಿಗೆ ನಾವು ಅಲ್ಲಿಯೂ ಕೂಡ ಕೈಜೋಡಿಸುತ್ತಿದ್ದೇವೆ. ಹಲವಾರು ಸಾಮಾಜಿಕ ಕಳಾಕಳಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು. .
ನಮ್ಮ ಗೃಹ ನಿರ್ಮಾಣ ಸಹಕಾರ ಸಂಘ ಪ್ರಾರಂಭವಾಗಿ ಏಳು ವರ್ಷಗಳೇ ಕಳೆದಿದೆ. ಹಲವಾರು ಬಡಾವಣೆ ನಿರ್ಮಿಸಿ ಸಾರ್ವಜನಿಕವಾಗಿ ಮತ್ತು ನಮ್ಮ ಸಿ ಗ್ರೂಪ್ ನೌಕರರಿಗೆ ಕೈಗೆಟಕುವ ಧರದಲ್ಲಿ ನಿವೇಶನಗಳನ್ನು ಸದಸ್ಯರಿಗೆ ಕೊಡುತ್ತಾ ಬಂದಿದ್ಧೇವೆ. ಈಗಾಗಲೇ 500 ನಿವೇಶನಗಳನ್ನು ಸದಸ್ಯರಿಗೆ ನೀಡಿದ್ದು, ಯಾವುದೇ ದಲ್ಲಾಳಿಗಳ ಹಾವಳಿ ಇಲ್ಲದೇ ಹೆಚ್ಚಿನ ಬೆಲೆ ನೀಡದ ರೀತಿ ಕಂತಿನ ಬೆಲೆಯಲ್ಲಿ ಕೊಡಲು ನೋಡಿಕೊಂಡಿದ್ದೇವೆ. ಮುಂದೆ ಇನ್ನು ಹಲವಾರು ನಿವೇಶನ ಕೊಡುವ ಗುರಿ ಹೊಂದಿದ್ದೇವೆ. ಇವತ್ತು 4 ಕೋಟಿ ಸಾಲವನ್ನು ನಮ್ಮ ಕೋ-ಆಪರೇಟಿವ್ ಸೊಸೈಟಿ ನೀಡಿದೆ. ಮುಂದಿನ ದಿನಗಳಲ್ಲಿ ಎರಡು ಬಡಾವಣೆಗಳಲ್ಲೂ ಕಡಿಮೆ ಧರದಲ್ಲಿ ನಿವೇಶನ ಕೊಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದಯ ವರದಿ ಕನ್ನಡ ದಿನ ಪತ್ರಿಕೆ ಸಂಪಾದಕ ಹಾಗೂ ದತ್ತಿ ಪ್ರಶಸ್ತಿ ವಿಜೇತ ವೆಂಕಟೇಶ್, ಪತ್ರಕರ್ತರ ಸಂಘದ ಕಾರ್ಯದರ್ಶಿ ಹರೀಶ್, ಕೋ. ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಂ.ಎನ್. ಪರಮೇಶ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರು ಟಿ. ರಾಜು, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಜಿ.ಪಿ. ವಿಶ್ವನಾಥ್, ಎಸ್. ಮಧು, ಸಂಘದ ಪದಾಧಿಕಾರಿಗಳು ಗೋಪಾಲಕೃಷ್ಣ, ಆರ್.ಸಿ. ಸತೀಶ್, ಬೈರಪ್ಪ, ಸಾವಿತ್ರಮ್ಮ, ದಾಕ್ಷಾಯಿಣಿ, ನಿರ್ದೇಶಕರುಗಳು ವೆಂಕಟೇಶ್ ಇತರರು ಭಾಗವಹಿಸಿದ್ದರು.
Hassan
ಫೋನ್‌ನಲ್ಲಿ ಮಾತನಾಡಲು ಹೋಗಿ ಒಂದು ಕಾಲು ಕಳೆದುಕೊಂಡ ಯುವಕ
ಹಾಸನ: ಯುವಕನೋರ್ವ ತನ್ನ ಫೋನ್‌ಗೆ ಬಂದ ಕರೆ ಸ್ವೀಕರಿಸಿ ಮಾತನಾಡಲು ಹೋಗಿ ಒಂದು ಕಾಲುನ್ನು ಕಳೆದುಕೊಂಡಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಬಾಗೂರು ಹೋಬಳಿ, ಕುರದಹಳ್ಳಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.

ಗ್ರಾಮದ ಪ್ರಸನ್ನ (25) ಫೋನ್ ಕರೆಯಿಂದ ಕಾಲು ಕಳೆದುಕೊಂಡ ಯುವಕ. ಟಿಟಿ ವಾಹನ ಚಾಲಕನಾಗಿರುವ ಚಾಲಕ ಇಂದು ಗ್ರಾಮಕ್ಕೆ ಬಂದಿದ್ದ. ತನ್ನ ಸ್ನೇಹಿತ ಟ್ರ್ಯಾಕ್ಟರ್‌ನಲ್ಲಿ ಜಮೀನು ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ. ಈ ವೇಳೆ ಪ್ರಸನ್ನ ಫೋನ್‌ಗೆ ಕರೆ ಬಂದಿದ್ದು ಟ್ರ್ಯಾಕ್ಟರ್ ಶಬ್ದದಿಂದ ಮಾತನಾಡುವುದು ಸರಿಯಾಗಿ ಕೇಳಿಸಲ್ಲ ಎಂದು ಕೆಳಗೆ ಇಳಿದಿದ್ದು ಈ ವೇಳೆ ಆಯತಪ್ಪಿ ರೋಟರ್‌ಗೆ ಸಿಲುಕಿ ಪ್ರಸನ್ನನ ಒಂದು ಕಾಲು ನಜ್ಜುಗುಜ್ಜಾಗಿ ತುಂಡಾಗಿದೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಪ್ರಸನ್ನ ಚಿಕಿತ್ಸೆ ಪಡೆಯುತ್ತಿದ್ದು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
-
Mandya21 hours agoಕಡ್ಡಾಯವಾಗಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಕೊಡಿಸಿ: ಶಾಸಕ ಪಿ. ರವಿಕುಮಾರ್
-
Mandya17 hours agoಮನ್ ಮುಲ್ ಮಾಜಿ ನಿರ್ದೇಶಕ ಕೆ.ಎಲ್. ಯೋಗಿಶ್ ನಿಧನ
-
Hassan16 hours agoಕಾಂಗ್ರೆಸ್ ಶಾಸಕರಿಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಹೆಚ್ಡಿಕೆ
-
Kodagu11 hours agoಮಹಿಳೆಯರು ಜಾಗೃತರಾದರೆ ಸ್ವಸ್ಥ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ -ಜಿ.ವಿ. ಶ್ರೀನಾಥ್
-
Hassan17 hours agoಇಳಿ ವಯಸ್ಸಿನಲ್ಲಿ ಎರಡನೇ ವಿವಾಹ : ಪೊಲೀಸ್ ಠಾಣೆ ಮೆಟ್ಟಿಲೇರಿದ ಮಕ್ಕಳು
-
Mysore21 hours agoಪೋಲಿಯೋ ಲಸಿಕೆ ಹಾಕಿಸಿ ದೇಶದಿಂದ ರೋಗವನ್ನು ನಿರ್ಮೂಲನೆ ಮಾಡಿ: ರವಿಚಂದ್ರ
-
Hassan16 hours agoಕಾಫಿ ಬೀಜ ಕಳ್ಳತನ: ಕಳ್ಳನನ್ನು ಮಾಲಿನ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
-
Chamarajanagar16 hours agoವಿಜೃಂಭಣೆಯಿಂದ ನಡೆದ ಶ್ರೀ ಶನೇಶ್ವರ ಸ್ವಾಮಿ ಪೂಜಾ ಮಹೋತ್ಸವ
