Mandya
ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು*

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಗಂಜಾಂನ ನಿಮಿಷಾಂಬ ದೇವಾಲಯದ ಬಳಿ ಗುರುವಾರ ಸಂಭವಿಸಿದೆ.
ವಿಶಾಲ್ (19) ರೋಹಣ್ (17) ಮೃತ ಯುವಕರು. ಇವರು ಬೆಂಗಳೂರು ಮತ್ತು ತಮಿಳುನಾಡು ಮೂಲ

ಯುವಕರಾಗಿದ್ದು, ಕಾವೇರಿ ನದಿಯಲ್ಲಿ ಈಜಲು ಹೋಗಿ ಈ ದುರ್ಘಟನೆ ಸಂಭವಿಸಿದೆ.

ಮೈಸೂರಿನ ಅಜ್ಜಿ ಮನೆಗೆ ಬಂದಿದ್ದ ಇವರು, ಕುಟುಂಬದ ಜೊತೆ ಶ್ರೀನಿಮಿಷಾಂಬ ದೇಗುಲಕ್ಕೆ ಬಂದಿದ್ದರು. ಈ ವೇಳೆ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪಿದ್ದಾರೆ.
ಸ್ಥಳೀಯರು ಮೃತ ದೇಹಗಳನ್ನು ಹೊರ ತೆಗೆದಿದ್ದು, ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲುಗೊಂಡಿದೆ.
![]()
Mandya
ಪ್ರವಾಸಿ ತಾಣಗಳನ್ನು ಉತ್ತೇಜಿಸಲು ಪ್ರವಾಸಿ ಗೈಡ್, ಮ್ಯಾಪ್ ಹಾಗೂ ವೈಬ್ ಸೈಟ್ ಗಳನ್ನು ಸಿದ್ಧಪಡಿಸಿಲಾಗಿದೆ : ಡಾ. ಕುಮಾರ
ಮಂಡ್ಯ : ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಗುರುತಿಸಿರುವ ಹೆಗ್ಗಳಿಕೆ ಮಂಡ್ಯ ಜಿಲ್ಲೆಗೆ ಬಂದಿದ್ದು, ಪ್ರವಾಸಿ ತಾಣಗಳನ್ನು ಉತ್ತೇಜಿಸಲು ಪ್ರವಾಸಿ ಗೈಡ್, ಮ್ಯಾಪ್ ಹಾಗೂ ವೈಬ್ ಸೈಟ್ ಗಳನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಕಾವೇರಿ ನದಿ ತೀರದಲ್ಲಿ ಒತ್ತುವರಿಯಾಗಿರುವ ಜಾಗಗಳನ್ನು ತೆರವುಗೊಳಿಸುವ ಸಂಬಂಧ ಚರ್ಚಿಸಲು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಸೋದ್ಯಮ ನೀತಿ 2024-29 ರಡಿ ಮಂಡ್ಯ ಜಿಲ್ಲೆಯಲ್ಲಿ 106 ಪ್ರವಾಸಿ ತಾಣಗಳನ್ನು ಸರ್ಕಾರದಿಂದ ಅಧಿಕೃತವಾಗಿ ಗುರುತಿಸಲಾಗಿದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ರೀತಿಯ ವೆಬ್‌ಸೈಟ್ ಇರದ ಕಾರಣ ಪ್ರವಾಸೋದ್ಯಮ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾ ಪ್ರವಾಸೋದ್ಯಮದ ಕುರಿತು ವೆಬ್‌ಸೈಟ್ ನ್ನು ಸಾರ್ವಜನಿಕರ ಹಾಗೂ ಪ್ರವಾಸಿಗರ ಉಪಯೋಗಕ್ಕಾಗಿ ಸಿದ್ದಪಡಿಸಲಾಗಿದೆ. ಅಧಿಕೃತವಾಗಿ ಚಾಲನೆಯನ್ನು ಶೀಘ್ರದಲ್ಲೇ ನೀಡಲಾಗುವುದು ಎಂದರು.
ಮೇಲುಕೋಟೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ಯಾತ್ರಿನಿವಾಸ ಕಟ್ಟಡವನ್ನು ನಿರ್ವಹಣೆಗಾಗಿ ವಹಿಸುವ ಸಂಬಂಧ ಪ್ರವಾಸೋದ್ಯಮ ಇಲಾಖೆಯಿಂದ ಕರೆಯಲಾಗಿದ್ದ ಇ-ಟೆಂಡರ್ ನಲ್ಲಿ ಬಿಡ್ಡುದಾರರು ಭಾಗವಹಿಸದ ಹಿನ್ನೆಲೆಯಲ್ಲಿ ಸದರಿ ಕಟ್ಟಡವನ್ನು ಮೇಲುಕೋಟೆಯ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಮರ್ಪಕವಾಗಿ ನಿರ್ವಹಿಸಲು ತಿಳಿಸಿದರು.

ಶ್ರೀರಂಗಪಟ್ಟಣದ ಕೋಟೆ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅನುಷ್ಟಾನಗೊಳಿಸಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ನಿರ್ವಹಣೆಗಾಗಿ ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಲು ಆಹ್ವಾನಿಸಲಾಗಿದ್ದ ಇ-ಟೆಂಡರ್ ನಲ್ಲಿ ಯಾವುದೇ ಬಿಡ್ಡುದಾರರು ಭಾಗವಹಿಸದ ಹಿನ್ನೆಲೆಯಲ್ಲಿ ಸದರಿ ಸೌಲಭ್ಯವನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿ ವತಿಯಿಂದ ನಿರ್ವಹಿಸಲು ಸರ್ಕಾರದಿಂದ ಅನುದಾನ ಪಡೆಯಲು ಪ್ರಸ್ತಾವನೆ ಸಲ್ಲಿಸುಂತೆ ಸೂಚಿಸಿದರು.
ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಪ್ರವಾಸಿ ತಾಣದಲ್ಲಿ ನಿರ್ಮಿಸಿರುವ ಇಂಟರ್‌ಪ್ರಿಟೇಷನ್ ಸೆಂಟರ್ ಸೌಲಭ್ಯದ ನಿರ್ವಹಣೆಗಾಗಿ ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಲು ಆಹ್ವಾನಿಸಲಾಗಿದ್ದ ಇ-ಟೆಂಡರ್ ನಲ್ಲಿ ಯಾವುದೇ ಬಿಡ್ಡುದಾರರು ಭಾಗವಹಿಸದ ಹಿನ್ನೆಲೆಯಲ್ಲಿ ಸದರಿ ಸೌಲಭ್ಯವನ್ನು “WWF India” ಸಂಸ್ಥೆಯಿಂದ ನಿರ್ವಹಿಸಲು ಸರ್ಕಾರದಿಂದ ಸೂಕ್ತ ಸ್ಪಷ್ಟೀಕರಣ ಡೆಯಬೇಕು ಎಂದು ಹೇಳಿದರು.
ನಾಗಮಂಗಲ ತಾಲ್ಲೂಕಿನ ಮುಳುಕಟ್ಟಮ್ಮ ದೇವಾಲಯದ ಬಳಿ ನಿರ್ಮಿಸಿರುವ ಯಾತ್ರಿನಿವಾಸ ಕಟ್ಟಡವನ್ನು ನಿರ್ವಹಣೆಗಾಗಿ ವಹಿಸುವ ಸಂಬೌಧ ಪ್ರವಾಸೋದ್ಯಮ ಇಲಾಖೆಯಿಂದ ಕರೆಯಲಾಗಿದ್ದ ಇ-ಟೆಂಡರ್ ನಲ್ಲಿ ಇಬ್ಬರು ಬಿಡ್ಡುದಾರರು ಭಾಗವಹಿಸಿದ್ದು, ಸದರಿಯವರ ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಇರುವ ಹಿನ್ನೆಲೆಯಲ್ಲಿ, ತಾಂತ್ರಿಕವಾಗಿ ಬಿಡ್ ಗಳು ಅನರ್ಹವಾಗಿದ್ದು, ಸದರಿ ಟೆಂಡರ್ ನ್ನು ರದ್ದುಪಡಿಸಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿ ವತಿಯಿಂದ ನಿರ್ವಹಿಸಲು ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಲು ಹೊಸದಾಗಿ ಮರು ಟೆಂಡರ್ ಆಹ್ವಾನಿಸಿ ಎಂದು ಹೇಳಿದರು.
ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯ ಬಳಿ ನಿರ್ಮಿಸಲಾಗಿರುವ ಎರಡು ಹೋಂ ಸ್ಟೇಗಳು ರಂಗನತಿಟ್ಟು ಪಕ್ಷಿಧಾಮ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರಲಿದ್ದು. ಹಿಂದೆ ನೀಡಿದ್ದ ಎರಡು ಹೋಂ ಸ್ಟೇಗಳನ್ನು ರದ್ದು ಪಡಿಸಿ ನೊಂದಣಿಯನ್ನು ಹಿಂಪಡೆಯುವಂತೆ ಸಭೆಯಲ್ಲಿ ಸೂಚಿಸಿದರು.
ನಿರ್ಮಾಣ ಮಾಡಲು ಅನುಮತಿ ನೀಡಿದ ಅಧಿಕಾರಿಗಳು ಹಾಗೂ ಹೋಂ ಸ್ಟೇ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಮಂಡ್ಯ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಒಟ್ಟು ರೂ.3672.41 ಲಕ್ಷಗಳ 41 ಮುಂದುವರೆದ ಪ್ರವಾಸಿ ಮೂಲಸೌಕರ್ಯ ಅಭಿವೃದ್ದಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದ್ದೆ. ಸದರಿ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ತಿಳಿಸಿದರು.
ಸಭೆಯಲ್ಲಿ ಅಪರ ಪೊಲೀಸ್ ಅಧೀಕ್ಷಕ ಗಂಗಾಧರ ಸ್ವಾಮಿ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ -1 ಶಿವಲಿಂಗಯ್ಯ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ನಿರ್ದೇಶಕಿ ಗೀತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Mandya
ಮುತುವರ್ಜಿ ವಹಿಸಿ ಹಾಸ್ಟೆಲ್ ಹಾಗೂ ಅಂಗನವಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿ: ಡಾ.ಕುಮಾರ
ಮಂಡ್ಯ: ಅಧಿಕಾರಿಗಳು ಹಾಸ್ಟೆಲ್ ಹಾಗೂ ಅಂಗನವಾಡಿ ಕಾಮಗಾರಿಗಳನ್ನು ವಿಳಂಬ ಮಾಡದೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸೂಚಿಸಿದರು.
ಮುಖ್ಯಮಂತ್ರಿಗಳ ಸಭೆಯಲ್ಲಿ ನೀಡಿದ ಸೂಚನೆಯಂತೆ ವಿವಿಧ ಇಲಾಖೆಗಳ ಕಾಮಗಾರಿ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಇಲಾಖೆಯ 30 ವಿವಿಧ ಕಾಮಗಾರಿಗಳು ಬಾಕಿ ಇದ್ದು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಹೇಳಿದರು.
ಹಾಸ್ಟೆಲ್ ರಿಪೇರಿ ಕಾಮಗಾರಿಗಳು ನೂತನ ಹಾಸ್ಟೆಲ್ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ತೆಗೆದುಕೊಂಡು ಕಾರ್ಯನಿರ್ವಹಿಸಿ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿದಾಗ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.
ಗುತ್ತಿಗೆದಾರರು ನಿಗದಿತ ಅವಧಿ ಒಳಗೆ ಕಾಮಗಾರಿಗಳನ್ನು ಮುಗಿಸಬೇಕು. ನಿಗದಿತ ಅವಧಿಗಿಂತ ಹೆಚ್ಚು ಸಮಯ ತೆಗೆದುಕೊಂಡರೆ ಗುತ್ತಿಗೆದಾರರೇ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ. ಅಂಗನವಾಡಿ ಕೇಂದ್ರಗಳು ಅತಿ ಮುಖ್ಯ, ಅಂಗನವಾಡಿ ಕೇಂದ್ರಕ್ಕೆ ಸಂಬಂಧಪಟ್ಟ ಕಾಮಗಾರಿಗಳನ್ನು ವಿಳಂಬ ಮಾಡಲೇ ಶೀಘ್ರವಾಗಿ ಮುಗಿಸಿ
ಎಂದು ಎಚ್ಚರಿಸಿದ್ದರು.

ಮಿನ್ಸ್ ಕ್ಯಾನ್ಸರ್ ಕೇರ್ ಸೆಂಟರ್ ಈಗಾಗಲೇ ನಿರ್ಮಾಣಗೊಂಡಿದ್ದು ಶೀಘ್ರವಾಗಿ ಉದ್ಘಾಟನೆ ಮಾಡಲಾಗುವುದು. ಸಂಬಂಧಪಟ್ಟ ವಿವಿಧ ಕಾಮಗಾರಿಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಭೆ ಆಯೋಜಿಸಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಬೇಕು ಎಂದು ಹೇಳಿದರು.
ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ 166 ಕೊಠಡಿಗಳ ಕಾಮಗಾರಿಗಳು ಇದ್ದು ಈಗಾಗಲೇ 154 ಕೊಠಡಿಗಳ ಕಾಮಗಾರಿಗಳನ್ನು ಮುಗಿಸಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸುಸರ್ಜಿತವಾದ ಕೊಠಡಿಗಳನ್ನು ನಿರ್ಮಾಣ ಮಾಡಿ ಎಂದು ಹೇಳಿದರು.
ಸರ್ಕಾರದ ವಿವಿಧ ಕಾಮಗಾರಿಗಳನ್ನು ಸಂಬಂಧಪಟ್ಟ ಇಲಾಖೆಯವರು ವಿಶೇಷ ಆಸಕ್ತಿ ವಹಿಸಿ ಗುತ್ತಿಗೆದಾರರೊಂದಿಗೆ ಸಮನ್ವಯ ಸಾಧಿಸಿ ನಿರ್ದಿಷ್ಟ ಅವಧಿಯೊಳಗೆ ಪೂರ್ಣಗೊಳಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಶಿವಲಿಂಗಯ್ಯ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಆಶಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Mandya
ಟನ್ ಕಬ್ಬಿಗೆ 5500.ರೂ. ನೀಡುವಂತೆ ಒತ್ತಾಯ: ಎನ್.ಎಲ್.ಭರತ್ ರಾಜ್ ಆರೋಪ
ಶ್ರೀರಂಗಪಟ್ಟಣ : ರಾಜ್ಯ ಸರ್ಕಾರ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಳೆದು ರೂ. 3,200 ಹಾಗೂ 3,300 ನಿಗದಿಪಡಿಸಿದೆ. ಆದರೆ ಮಂಡ್ಯ ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ನೀಡದೆ ಪ್ರಾದೇಶಿಕ ತಾರತಮ್ಮ ಮಾಡಿ ರಾಜ್ಯ ಕಬ್ಬು ಬೆಳೆಗಾರ ನಡುವೆ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ. ಎಂದು ಕರ್ನಾಟಕ ಕಬ್ಬು ಬೆಳೆಗಾರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್ ಆರೋಪಿಸಿದ್ದಾರೆ.
ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಕಬ್ಬು ಬೆಳೆಗಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೆಲೆ ನೀತಿ ಕೇವಲ ಬೆಳಗಾವಿ ಮತ್ತು ಉತ್ತರ ಕರ್ನಾಟಕ ದ ಜಿಲ್ಲೆಗೆ ಸೀಮಿತ ಮಾಡಿದ್ದಾರೆ.
ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಎಫ್ ಆರ್ ಪಿ ನಿಗಧಿ ಪಡಿಸುವಲ್ಲೂ ಕೇಂದ್ರ ಸರ್ಕಾರ ವಂಚನೆ ಮಾಡಿದೆ. 2009 ಕ್ಕಿಂತ ಮೊದಲು ಶೇ.8.50 ಸಕ್ಕರೆ ಇಳುವರಿ 2000 ದಿಂದ 2018 ರವರೆಗೆ ಶೇ. 9.50 ಸಕ್ಕರೆ ಇಳುವರಿ 2018 ರಿಂದ 22 ರವರೆಗೆ ಶೇ. 10. ಸಕ್ಕರೆ ಇಳುವರಿ, 2022 ರಿಂದ ಶೇ. 10.25 ಸಕ್ಕರೆ ಇಳುವರಿ ಆಧಾರದ ಮೇಲೆ ಎಫ್ ಆರ್.ಪಿ. ನಿಗದಿಪಡಿಸುತ್ತಿದ್ದಾರೆ.
ಇದರಲ್ಲಿ ಮೋದಿಯವರ ಮೋಸ ಜನರಿಗೆ ಅರಿವಾಗಬೇಕು. ಒಂದು ಪರ್ಸೆಂಟ್ ಹೆಚ್ಚಾದರೆ 346 ರೂ.ಗಳನ್ನು ಎಫ್ ಆರ್ ಪಿ ಜೊತೆಗೆ ನೀಡಬೇಕಾಗುತ್ತದೆ. ಆ ಕಾರಣದಿಂದಾಗಿ ಸಕ್ಕರೆ ಇಳುವರಿಯ ಪ್ರಮಾಣವನ್ನೇ ಕಡಿಮೆ ಮಾಡುವಂತಹ ಯತ್ನ ಸರ್ಕಾರಗಳು ಹಾಗೂ ಕಾರ್ಖಾನೆಗಳು ಸಹ ಮಾಡುತ್ತಿವೆ.

ಹಾಗಾಗಿ 9.5 0 ಸಕ್ಕರೆ ಇಳುವರಿ ಆಧಾರದ ಮೇಲೆ ಪ್ರತಿ ಟನ್ ಗೆ ಕೇಂದ್ರ ಸರ್ಕಾರ 5,500 ರೂಪಾಯಿ ಬೆಲೆಯನ್ನ ನಿಗದಿಪಡಿಸಬೇಕು.
ಹರಿಯಾಣ,850 ಪಂಜಾಬ್, 860ಉತ್ತರ ಪ್ರದೇಶ,750 ತಮಿಳುನಾಡು 349.SAP ನೀಡುತ್ತಿದೆ. ಈ ರಾಜ್ಯಗಳ ಮಾದರಿಯಲ್ಲಿ ಪ್ರತಿ ಟನ್ ಕಬ್ಬಿಗೆ ರಾಜ್ಯ ಸರ್ಕಾರ 500 ಎಸ್ ಎ ಪಿ ನಿಗದಿಪಡಿಸಬೇಕು( ರಾಜ್ಯ ಸಲಹಾ ಬೆಲೆ )2022 ಮತ್ತು 23 ರಲ್ಲಿ ನಿಗದಿ ಮಾಡಿದ್ದ ಟನ್ ಗೆ 150 ರೂ.ಗಳ ಬಾಕಿಯನ್ನು ಶೀಘ್ರವಾಗಿ ನೀಡಬೇಕು. ಜೊತೆಗೆ 2023,24,25 ನೇ ಸಾಲಿಗೆ SAP. ನಿಗದಿಪಡಿಸಿ ತಕ್ಷಣ ರೈತರ ಖಾತೆಗೆ ಹಣ ಜಮಾ ಮಾಡಬೇಕು.
ದೇಶದ ವಿವಿಧಡೆ ಕಬ್ಬಿನ ಬೆಲೆಗಳು ವೆಚ್ಚಕ್ಕೆ ಅನುಗುಣವಾಗಿ ಹೆಚ್ಚಾಗುತ್ತಿದೆ. ಹರಿಯಾಣ, ಪಂಜಾಬ್ಬಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚಿದೆ. ಗುಜರಾತ್ ನಲ್ಲಿ ತಳಿಗಳ ಆಧಾರದ ಮೇಲೆ 4000 ದಿಂದ 6000 ವರೆಗೆ ಇದೆ. ಮಹಾರಾಷ್ಟ್ರದಲ್ಲಿ 3,650 ನಿಗದಿಯಾಗಿದೆ. ಆದರೆ ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣ ಕರ್ನಾಟಕ ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ಬಹಳ ಅನ್ಯಾಯವಾಗುತ್ತಿದೆ.
ಕಟಾವು ಮತ್ತು ಸಾಗಾಣಿಕೆ ವೆಚ್ಚ 900 ರಿಂದ1300 ರವರೆಗೆ ಖರ್ಚು ಬರುತ್ತಿದೆ. ಬೆಳಗಾಂ ಕಬ್ಬಿನ ದರಕ್ಕೂ ನಮಗೂ 1,000 ದಷ್ಟು ನಷ್ಟ ಆಗುತ್ತಿದೆ ಹಾಗಾಗಿ ಕಟಾವು ಮತ್ತು ಸಾಗಾಣಿಕ ವೆಚ್ಚವನ್ನು ಕಾರ್ಖಾನೆ ಮಾಲೀಕರೇ ಕೊಟ್ಟು ನಮಗೂ 3,300 ಗಳ ಬೆಲೆ ನೀಡಬೇಕೆಂದು ಆಗ್ರಹಿಸಿದರು.
ಕಬ್ಬಿನ ಉಪ ಉತ್ಪನ್ನಗಳಾದ ಮೊಲಾಸಸ್ ಕಾಕಂಬಿ ಬಗಾಸ್, ಡಿಸ್ಟಿಲರಿಸ್, ಕೋಜೆನ್ ಇತರೆ ಉಪ ಉತ್ಪನ್ನಗಳ ಲಾಭಾಂಶದಲ್ಲಿ ಶೇ.50 ರಷ್ಟು ಪಾಲನ್ನು ನೀಡಬೇಕು. ಸಕ್ಕರೆ ಇಳುವರಿ ಘೋಷಣೆಯಲ್ಲಿ ಮತ್ತು ತೂಕದಲ್ಲಿ ಮೋಸ ನಡೆಯುತ್ತಿದ್ದು, ಇವುಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಪರಿಶಿಸಲು ಪ್ರತಿ ಕಾರ್ಖಾನೆಗಳಿಗೆ ಕನಿಷ್ಠ ಐದು ಮಂದಿ ಕಬ್ಬು ಬೆಳೆಗಾರರು ಮತ್ತು ತಜ್ಞರ ಸಮಿತಿ ರಚಿಸಬೇಕು.
ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಹಾಗೂ ಜವಾಬ್ದಾರಿಯನ್ನು ಸಕ್ಕರೆ ಕಾರ್ಖಾನೆ ಮಾಲೀಕರೇ ನಿರ್ವಹಿಸಬೇಕು. ರೈತ ವಿರೋಧಿ ಸಹಕಾರಿ ಹಾಗೂ ಸಾರ್ವಜನಿಕ ರಂಗದ ಸಕ್ಕರೆ ಕಾರ್ಖಾನೆಗಳ ವಿರೋಧಿಯಾದ ಡಾ. ರಂಗರಾಜನ್ ಸಮಿತಿ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಸ್ಥಾಪಿತವಾದ ಸಕ್ಕರೆ ರಂಗವನ್ನು ಅನಿಯಮಿತವಾಗಿ ರದ್ದತಿಗಾಗಿ ತಂದಿರುವ ಕರ್ನಾಟಕ ಕಬ್ಬು ಖರೀದಿ ಹಾಗೂ ಪೂರೈಕೆ ನಿಯಂತ್ರಣ ಕಾಯ್ದೆ 2013 ರದ್ದುಗೊಳಿಸಬೇಕು ಹಾಗೂ 2013 ಕ್ಕಿಂತ ಮೊದಲೇ ಇದ್ದ ರಾಜ್ಯ ಸಲಹಾ ಬೆಲೆ ಸ್ಥಾಪಿಸಬೇಕು.
ಕೇಂದ್ರದ ಸಕ್ಕರೆ ನಿಯಂತ್ರಣ ಮಂಡಳಿ ಹೊಸದಾಗಿ ಕಬ್ಬು ಬೆಳೆಯುವ ರೈತರಿಗೆ ಪ್ರೋತ್ಸಾಹ ಧನವಾಗಿ ಎಕರೆಗೆ 10,000 ನೀಡಬೇಕು ಎಂದು ಒತ್ತಾಯಿಸಿದರು.
ನೂತನ ಸಮಿತಿ ಆಯ್ಕೆ:
ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಮಹದೇವಪುರ ವಲಯದ ಪದಾಧಿಕಾರಿಗಳ ಆಯ್ಕೆಯಾಗಿದ್ದು, ಗೌರವ ಅಧ್ಯಕ್ಷರಾಗಿ ನಂಜೇಗೌಡ ಮತ್ತು ಚುಂಚೆಗೌಡ .
ಅಧ್ಯಕ್ಷರಾಗಿ. ಬಿ ರಾಮಚಂದ್ರ, ಉಪಾಧ್ಯಕ್ಷರಾಗಿ .ನಾಗೇಂದ್ರ. ಚನ್ನಹಳ್ಳಿ ನಿಂಗೇಗೌಡ . ಕಾರ್ಯದರ್ಶಿಯಾಗಿ. ರವಿಕುಮಾರ್ ಎಮ್.ಸಿ. ಸಹ ಕಾರ್ಯದರ್ಶಿ ರಾಜು ಶಿವಕುಮಾರ್. ಸಮಿತಿ ಸದಸ್ಯರಾಗಿ ಸತೀಶ್ .ಚಂದ್ರಶೇಖರ್, ಜಿ.ಮಾದೇಗೌಡ . ಜವನೇಗೌಡ., ಪ್ರಸನ್ನ ಅಬ್ದೂಲ್ ಸುಕೂರ್ . ಪುಟ್ಟಸ್ವಾಮಿ .ಕೇಬಲ್ ಜವನೇಗೌಡ, ರಾಮಕೃಷ್ಣಪ್ಪ. ಎಮ್.ಬಿ.ಪುಟ್ಟಸ್ವಾಮಿ . ಪಟೇಲ್ ಶಿವರಾಮೇಗೌಡ, ಎಸ್.ನಾಗರಾಜ್, ಎಮ್.ಜೆ.ಮಹೇಶ್ ಆಯ್ಕೆಯಾಗಿದ್ದಾರೆ. ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್ ರಾಜ್ ತಿಳಿಸಿದ್ದಾರೆ.
ವೇದಿಕೆಯಲ್ಲಿ ನಂಜೇಗೌಡ, ಚುಂಚೇಗೌಡ .ರಾಮಕೃಷ್ಣಪ್ಪ ಅಬ್ದುಲ್ ಸುಕೂರ್. ರಾಮಚಂದ್ರ ರವಿಕುಮಾರ್ ರಾಜು. ಶಿವಕುಮಾರ್ ನಿಂಗೇಗೌಡ ಉಪಸ್ಥಿತಿರಿದ್ದರು.
-
Mandya21 hours agoಡಿ.17ಕ್ಕೆ ಮಳವಳ್ಳಿಗೆ ರಾಷ್ಟ್ರಪತಿ ಆಗಮನ : ಜಿಲ್ಲಾಧಿಕಾರಿಗಳಿಂದ ಸ್ಧಳ ಪರಿಶೀಲನೆ
-
Mysore19 hours agoಮೈಸೂರು ದಸರಾ: ಮಹಿಳಾ ಉದ್ಯಮಿ ಉಪಸಮಿತಿಗೆ ಎಸ್. ರಂಗನಾಥ ಸಂಚಾಲಕರಾಗಿ ನೇಮಕ
-
Hassan24 hours agoಜಿಲ್ಲಾ ಮಟ್ಟದ ಅಂತರಶಾಲಾ ಚೆಸ್ ಸ್ಪರ್ಧೆ ಯಶಸ್ವಿ
-
Hassan23 hours agoಎಂಸಿಇ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸ್ಪೋರ್ಟ್ಸ್ ವಿಜೇತರಿಗೆ ಸನ್ಮಾನ
-
Mysore46 minutes agoಡೆವಿಲ್ ಚಿತ್ರದ ಯಶಸ್ಸಿಗಾಗಿ ಕುಂಬಳಕಾಯಿ ದೃಷ್ಟಿ ತೆಗೆದು ಪ್ರಾರ್ಥಿಸಿದ ಅಭಿಮಾನಿಗಳು
-
Kodagu23 hours agoಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರಿಗೆ ವಿಮೆ ಸೌಲಭ್ಯ
-
Mysore23 hours agoದೌರ್ಜನ್ಯ ತಡೆಗೆ ಕೆಪಿಎ- ಸಾವಿತ್ರಿಬಾ ಫುಲೆ ಸಂಸ್ಥೆ ನಡುವೆ ಒಡಂಬಡಿಕೆ
-
Kodagu23 hours agoಶನಿವಾರಸಂತೆ – ಡಿ.10ಕ್ಕೆ ವಿದ್ಯುತ್ ವ್ಯತ್ಯಯ
