Connect with us

Mysore

ಒಂದು ಲಕ್ಷ ರೈತ ಕುಟುಂಬಗಳಿಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 970 ಕೋಟಿ ಸಾಲ ನೀಡಲಾಗಿದೆ – ಹುಣಸೂರು ಶಾಸಕ ಜಿ. ಡಿ. ಹರೀಶ್ ಗೌಡ

Published

on

ಸಾಲಿಗ್ರಾಮ : ಲಕ್ಷ ರೈತ ಕುಟುಂಬಗಳಿಗೆ 970 ಕೋಟಿ ಸಾಲ ಕಳೆದ 5 ವರ್ಷಗಳ ಅವಧಿಯಲ್ಲಿ ಮೈಸೂರು – ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ಒಂದು ಲಕ್ಷ ರೈತ ಕುಟುಂಬಗಳಿಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 970 ಕೋಟಿ ಸಾಲ ನೀಡಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಹುಣಸೂರು ಶಾಸಕ ಜಿ. ಡಿ. ಹರೀಶ್ ಗೌಡ ಹೇಳಿದರು.
ತಾಲೂಕಿನ ಹೆಬ್ಬಾಳು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ಮಾಣ ಮಾಡಿರುವ ಆಡಳಿತ ಕಚೇರಿ ಮತ್ತು ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡಿದರು. ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕೆಲಸ ಮಾಡಿ ರೈತರಿಗೆ ಕೃಷಿ ಸಾಲ ನೀಡಿದ್ದೇನೆ ಎಂದರು.
ಈ ಬ್ಯಾಂಕ್‌ನಲ್ಲಿ ಸುಮಾರು ೨೭ ಕೋಟಿ ರೂ ಭ್ರಷ್ಟಾಚಾರ ನಡೆದು ಬ್ಯಾಂಕ್ ಮುಚ್ಚುವ ಸ್ಥಿತಿಗೆ ಬರುವ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದಂತವ ರ ಶಿಫಾರಸ್ಸಿನ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದ್ಯತೆ ಕೊಟ್ಟು ಬ್ಯಾಂಕ್‌ನ ವ್ಯವಹಾರಗಳ ಬಗ್ಗೆ ತನಿಖೆ ಮಾಡಲು ಆದೇಶ ಮಾಡಿದ್ದಾರೆ ಎಂದು ಆರೋಪಿಸಿದರು.
ಬ್ಯಾಂಕ್‌ನ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ಮಾಡಿದರೂ ಸಹ ಸರ್ಕಾರಕ್ಕೆ ಮತ್ತು ದೂರು ಕೊಟ್ಟವರಿಗೆ ಲಾಭವಾಗುವುದಿಲ್ಲ, ನಷ್ಟದಲ್ಲಿದ್ದ ಬ್ಯಾಂಕ್ ಅನ್ನು ಐದು ವರ್ಷದ ಅವಧಿಯಲ್ಲಿ ಲಾಭದತ್ತ ಕೊಂಡ್ಯೂಯಲ್ಲು ಶ್ರಮಿಸಿದ್ದೇನೆ, ಸುಮಾರು ೯೭೭ ಕೋಟಿಯಷ್ಟು ಹಣ ಠೇವಣಿ ಹಿಡಲು ನಮ್ಮ ಆಡಳಿತ ಮಂಡಳಿಯ ಶ್ರಮಯಿದೆ ಎಂದು ಹೇಳಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿರುವ ೨೩ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ನಿoದ ೯೩ ಕೋಟಿ ಸಾಲವನ್ನು ೨೦೯ ಕೋಟಿ ರೂಗೆ ಏರಿಸಲಾಗಿದೆ. ಇದರಿಂದ ರೈತ ಬಾಂಧವರಿಗೆ ಅನುಕೂಲವಾಗಿದ್ದು ಮುಚ್ಚುವ ಹಂತದಲ್ಲಿದ್ದ ಹೆಬ್ಬಾಳು ಸಂಘವನ್ನು ಪ್ರಗತಿಯತ್ತ ಕೊಂಡ್ಯೂಯಲು ಕಾರಣರಾದ ಇಲ್ಲಿನ ಸಿಇಒ ಡಿ.ಎಸ್.ಚಂದ್ರಶೇಖರ್‌ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದೇ ಸಂರ್ಧಭದಲ್ಲಿ ಸಂಘದ ವ್ಯಾಪ್ತಿಯ ಮಹಿಳಾ ಸ್ವ-ಸಹಾಯ ಸಂಘಗಳಿಗೆ ನೀಡಲಾದ ಸಾಲ ಸೌಲಭ್ಯದ ಚೆಕ್‌ಗಳನ್ನು ವಿತರಿಸಲಾಯಿತು.

ಶಾಸಕ ಡಿ. ರವಿಶಂಕರ್ ಮಾತನಾಡಿ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಶಾಸಕನಾಗಿರುವ ನಾನು ನನ್ನ ಅಧಿಕಾರವಧಿಯಲ್ಲಿ ಜಾತಿ ಮತ್ತು ಪಕ್ಷ ರಾಜಕಾರಣ ಮಾಡದೆ ಉತ್ತಮ ಆಡಳಿತ ನೀಡುವ ಮೂಲಕ ಕ್ಷೇತ್ರದಲ್ಲಿ ಸರ್ವ ಜನಾಂಗದ ತೋಟ ನಿರ್ಮಾಣ ಮಾಡಲಿದ್ದೇನೆ.
ರೈತರಿಗೆ ಅನುಕೂಲ ಕಲ್ಪಿಸುತ್ತಿರುವ ಸಹಕಾರ ಸಂಘಗಳ ಏಳಿಗೆಗೆ ಮತ್ತು ಅವುಗಳ ಆರ್ಥಿಕ ಅಭಿವೃದ್ದಿಗೆ ಶ್ರಮಿಸಲು ಸದಾ ಬದ್ದನಾಗಿದ್ದು ಸರ್ಕಾರದಿಂದ ಬರುವ ಸವಲತ್ತು ಕೊಡಿಸಲಾಗುತ್ತದೆ ಎಂದರು.
ಶೇಕಡ ೭೦ ರಷ್ಟು ರೈತರಿರುವ ದೇಶ ಭಾರತ, ದೇಶದ ಬೆನ್ನೆಲು ರೈತರಾಗಿದ್ದು ಅವರುಗಳ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಆದ್ಯ ಕರ್ತವ್ಯ ಇದನ್ನು ಅರಿತಿರುವ ನಾನು ರೈತರ ಉದ್ದಾರಕ್ಕಾಗಿ ಇರುವ ಸಹಕಾರ ಸಂಘಗಳ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದ ಶಾಸಕರು ಸಂಘಗಳು ವಾಣಿಜ್ಯ ಮಳಿಗೆಗಳು ಸೇರಿದಂತೆ ಆಡಳಿತ ಕಛೇರಿ ನಿರ್ಮಾಣ ಮಾಡಲು ಅವಶ್ಯಕವಿರುವ ಅನುದಾನ ನೀಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಜನತೆಗೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅದಕ್ಕಾಗಿ ೬೦ ಸಾವಿರ ಕೋಟಿ ರೂಗಳನ್ನು ಮೀಸಲಿರಿಸಿದೆ. ಆದ್ದರಿಂದ ಇತರ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ನೀಡಲು ವಿಳಂಭವಾಗುತ್ತಿದ್ದು ಮುಂದಿನ ವರ್ಷದಿಂದ ಅನುದಾನಕ್ಕೆ ಕೊರತೆ ಇಲ್ಲ ಆನಂತರ ಅಭಿವೃದ್ದಿಗೆ ಕಾರ್ಯಗಳ ಪರ್ವ ಆರಂಭವಾಗಲಿದೆ ಎಂದು ತಿಳಿಸಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು ರೈತರು ಬೆಳೆ ನಷ್ಟ ಸೇರಿದಂತೆ ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಬರ ಎದುರಾದರೂ ರೈತ ಬಾಂಧವರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯ ಮತ್ತು ಸವಲತ್ತುಗಳು ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಮಿತ್.ವಿ.ದೇವರಹಟ್ಟಿ, ಹೆಚ್.ಸುಬ್ಬಯ್ಯ, ಸಂಘದ ಅಧ್ಯಕ್ಷ .ಬಾಲಕೃಷ್ಣ, ಉಪಾಧ್ಯಕ್ಷ ಸಿ.ಎಂ.ರಾಜೇಶ್, ನಿರ್ದೇಶಕರಾದ ಸಿ.ಆರ್.ಶಿವಪ್ರಕಾಶ್, ರಾಮಚಂದ್ರನಾಯಕ, ಎನ್.ಪಿ.ಪ್ರಸನ್ನ ಹೆಚ್.ಹೆಚ್.ನಾಗೇಂದ್ರ ಹೆಚ್.ಕೆ.ಧನಂಜಯ, ಮಂಜುನಾಥ್, ಕೇಬಲ್‌ರವಿ, ಶಶಿಕಲಾ, ರೂಪ, ರವಿಕುಮಾರ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಲಿಂಗರಾಜು, ಸಂಘದ ಸಿಇಒ ಡಿ.ಎಸ್.ಚಂದ್ರಶೇಖರ್, ಮುಂತಾದವರು ಹಾಜರಿದ್ದರು.

ವರದಿ :ಎಸ್ ಬಿ ಹರೀಶ್ 

Continue Reading
Click to comment

Leave a Reply

Your email address will not be published. Required fields are marked *

Mysore

ನಂಜನಗೂಡಿನಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಚಿಕ್ಕ ಜಾತ್ರಾ ಮಹೋತ್ಸವ ವಿಜೃಂಭಣೆ

Published

on

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿ
ಚಿಕ್ಕ ಜಾತ್ರೆ ಮಹೋತ್ಸವ ಮಂಗಳವಾರ ವೈಭವಯುತವಾಗಿ ನೆರವೇರಿತು.

ಬೆಳಿಗ್ಗೆ 10.45 ರಂದು ಸಲ್ಲುವ ಶುಭ ಮಕರ ಲಗ್ನದಲ್ಲಿ ದೇಗುಲದ ಪ್ರಧಾನ ಆಗಮಿಕ ಜೆ. ನಾಗ ಚಂದ್ರ ದೀಕ್ಷಿತ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕೈಂಕಯ೯ ನೆರವೇರಿಸಿ ರಥಗಳಿಗೆ ಪೂಜೆ ಸಲ್ಲಿಸಿದರು.

ಪೂಜೆ ಸಲ್ಲಿಸಿದ ಬಳಿಕ ನಂಜನಗೂಡು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಉತ್ಸವ ರಥಕ್ಕೆ ಚಾಲನೆ ನೀಡಿ ತೇರನ್ನು ಎಳೆದರು.

ಹೂವಿನ ಹಾರ ಅಲಂಕೃತಗೊಂಡ ರಥೋತ್ಸವ ನಂಜುಂಡೇಶ್ವರ ಸ್ವಾಮಿಯ ಹಾಗೂ ಪಾರ್ವತಿ ದೇವಿ ಸಮೇತ ಉತ್ಸವ ಮೂರ್ತಿ, ಗಣಪತಿ ಚಂಡಿಕೇಶ್ವರ, ಸೇರಿದಂತೆ ಮೂರು ರಥಗಳು ರಥ ಬೀದಿಯಲ್ಲಿ
ರಥಗಳನ್ನು ಸಾವಿರಾರು ಭಕ್ತಾದಿಗಳು ಹಗ್ಗ ಹಿಡಿದು ಜೈ ನಂಜುಂಡೇಶ್ವರ, ಜೈ ಶ್ರೀಕಂಠೇಶ್ವರ, ಜೈ ನಂಜುಂಡ, ಎಂಬ ಘೋಷಣೆಗಳನ್ನು ಕೂಗುತ್ತಾ ಎಳೆದರು.

ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ರಥಕ್ಕೆ ಹಣ್ಣು ದವನ ಎಸೆದು ಪುನೀತರಾದರು.

ರಥ ಬೀದಿಗಳಲ್ಲಿ ನಿಧಾನವಾಗಿ ಚಲಿಸಿ ಭಕ್ತಾದಿಗಳು ಭಕ್ತಿಯಿಂದ ನಮಿಸಿದರು.

ಪೋಲಿಸ್ ಇಲಾಖೆಯಿಂದ ಬಿಗಿ ಬಂದೋಬಸ್ತು ಇರುವುದರಿಂದ ರಥದಲ್ಲಿ ಯಾವುದೇ ಅಡೆ-ತಡೆಗಳಿಲ್ಲದೆ ಮೂರು ರಥಗಳು 12.50 ಗಂಟೆಗೆ ಸ್ವಸ್ಧಾನಕ್ಕೆ ಸೇರಿದವು.

ಜಾತ್ರಾಯಲ್ಲಿ: ಶಾಸಕರಾದ ದರ್ಶನ್ ಧ್ರುವನಾರಾಯಣ್, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್, ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಕಾರ್ಯನಿವ೯ಹಣಾಧಿಕಾರಿ ಎಂ. ಜಗದೀಶ್ ಕುಮಾರ್, ಪೌರಾಯುಕ್ತಧಿಕಾರಿ ನಂಜುಂಡಸ್ವಾಮಿ, ಡಿಎಸ್ಪಿ ಗೋವಿಂದ್ ರಾಜ್, ಇದ್ದರು.

Continue Reading

Mysore

ಗೃಹಲಕ್ಷ್ಮಿ : 1,18,000 ರೂಪಾಯಿ ಹಣ ನಾಡದೇವತೆ ತಾಯಿ ಚಾಮುಂಡೇಶ್ವ ದೇಗುಲಕ್ಕೆ ಅರ್ಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್.

Published

on

ಮೈಸೂರು : ರಾಜ್ಯದ ಮಹತ್ವದ ಯೋಜನೆ ಗೃಹಲಕ್ಷ್ಮಿ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಯೋಜನೆ ಪ್ರತಿ ತಿಂಗಳು ನಾಡದೇವತೆ ತಾಯಿ ಚಾಮುಂಡೇಶ್ವರಿಗೂ 2 ಸಾವಿರ ಅರ್ಪಣೆಯಾಗಿದೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ ಕೆ ಶಿವಕುಮಾರ್‌ಗೆ ಪತ್ರ ಬರೆದಿದ್ದರು.ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರಿಂದ ಪತ್ರಈ ಬಗ್ಗೆ ಕ್ರಮ ವಹಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸೂಚಿಸಿದ್ದ ಡಿ ಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದರು. ಇದೀಗ ಪ್ರತಿ ತಿಂಗಳು ಯೋಜನೆಯ ಹಣ ನಾಡದೇವತೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದ್ದು, ಅದರಂತೆ 59 ತಿಂಗಳ ಹಣವನ್ನು ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ ಅರ್ಪಣೆ ಮಾಡಲಾಗಿದೆ.

ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರಿಂದ ಹಣ ಸಂದಾಯವಾಗಿದೆ.1,18,000 ರೂಪಾಯಿ ಹಣ ದೇಗುಲಕ್ಕೆ ನೀಡಿಕೆಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ ಹಣ ಸಂದಾಯ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ಹಣ ಸಂದಾಯ ತಮ್ಮ ವೈಯಕ್ತಿಕ ಹಣವನ್ನು ತಾಯಿ ಚಾಮುಂಡೇಶ್ವರಿಗೆ ಅರ್ಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್.

Continue Reading

Mysore

ಪತ್ರಕರ್ತ ಪುನೀತ್ ಗೆ ಕನ್ನಡಾಂಬೆ ಸೇವಾ ರತ್ನ ಪ್ರಶಸ್ತಿ

Published

on

ಪಿರಿಯಾಪಟ್ಟಣ: ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಜನಮಿತ್ರ ವರದಿಗಾರ ಪತ್ರಕರ್ತ ಸಿ.ಜಿ ಪುನೀತ್ ಕನ್ನಡಾಂಬೆ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಪ್ರತಿ ವರ್ಷ ಸಾಧಕರನ್ನು ಗುರುತಿಸಿ ನೀಡಲಾಗುವ ಕನ್ನಡಾಂಬೆ ಸೇವಾ ರತ್ನ ಪ್ರಶಸ್ತಿಗೆ ಪ್ರಸ್ತಕ ಸಾಲಿನಲ್ಲಿ ಮಾಧ್ಯಮ ಕ್ಷೇತ್ರದ ಸೇವೆಗೆ ಸಿ.ಜಿ ಪುನೀತ್ ಆಯ್ಕೆಯಾಗಿದ್ದು, ನ.29ರ ಬುಧವಾರ ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿರುವ ಕನ್ನಡಾಂಬೆ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ರಾಜಶೇಖರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

Continue Reading

Trending