Connect with us

Hassan

ಕೂಡಲೇ ಗಣಿಗಾರಿಕೆ ನಿಲ್ಲಿಸದಿದ್ರೆ ಬೃಹತ್ ಪ್ರತಿಭಟನೆ ಕೆ.ಎ. ರವಿಚಂಗಪ್ಪ ಎಚ್ಚರಿಕೆ

Published

on

ಹಾಸನ : ಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಕೋಟೆ ಗ್ರಾಮದ ಆರಾಧನ ಎಸ್ಟೇಟ್‌ನಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಕೂಡಲೇ ನಿಷೇಧಿಸಬೇಕು ಇಲ್ಲವಾದರೇ ಬೃಹತ್ ಪ್ರತಿಭಟನೆ ಮಾಡುವುದಾಗಿ ಕಾವೇರಿ ಸೇನೆ ಕೊಡಗಿನ ಅಧ್ಯಕ್ಷ ಕೆ.ಎ. ರವಿಚಂಗಪ್ಪ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಈ ಹಿಂದೆ ಈ ಸ್ಥಳದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಯುತ್ತಿತ್ತು ಪಶ್ಚಿಮ ಘಟ್ಟಗಳಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದೆ. ಇದರಿಂದಾಗಿ ಪರಿಸರದ ಮೇಲೆ ಹಾನಿ ಉಂಟಾಗುತ್ತದೆ. ಸ್ಫೋಟಕಗಳನ್ನು ಬಳಸುವುದರಿಂದ ನೀರಿನ ಅಂತರ್‌ಜಲ ಮಟ್ಟ ಕುಸಿಯುತ್ತದೆ. ಬೆಟ್ಟಗುಡ್ಡಗಳು ಮರಗಿಡಗಳು, ಮಳೆ ಮಾರುತಗಳನ್ನು ತಡೆದು ಆಕರ್ಷಿಸಿ ಯಥೇಚ್ಛವಾಗಿ ಮಳೆ ಸುರಿಸುತ್ತವೆ. ಈ ನೀರು ಹರಿದು ಹೇಮಾವತಿ, ಕಾವೇರಿನದಿಗೆ ಸೇರುತ್ತದೆ ಲಕ್ಷಾಂತರ ರೈತರ ಜೀವನಾಡಿ ಆಗಿದೆ, ಕುಡಿಯುವ ನೀರು ಒದಗಿಸುತ್ತಿದೆ ಎಂದರು. ಈ ಪ್ರದೇಶದಲ್ಲಿ ಅಮೂಲ್ಯ ಗಿಡ ಮೂಲಿಕೆಗಳು, ಪ್ರಾಣಿ ಪಕ್ಷಿಗಳು, ಸಸ್ತನಿಗಳು, ಕೀಟಗಳು, ಕಂಡುಬರುತ್ತಿವೆ. ಈಗಾಗಲೇ ಕಾಡಾನೆ, ಕಾಡುಕೋಣ, ಚಿರತೆ, ನವಿಲು, ಕಾಡುಹಂದಿಗಳು, ಆಹಾರವಿಲ್ಲದೆ ರೈತರು ಬೆಳೆದ ಗೆಡ್ಡೆಗೆಣಸು, ಭತ್ತ ತರಕಾರಿ ನಾಶಮಾಡುತ್ತದೆ. ಇದರಿಂದಾಗಿ ರೈತರ ತೋಟಗದ್ದೆಗಳಿಗೆ ತೆರಲಿ ಕೆಲಸ ಮಾಡಲು ಭಯ ಪಡುತ್ತಿದ್ದಾರೆ. ಕಾಡುಪ್ರಾಣಿಗಳು ಜನನಿಬಿಡ ಪ್ರದೇಶಗಳಿಗೆ ಬರುತ್ತಿರುವುದು ಮರಗಿಡಗಳು, ಕಾಡುನಾಶವಾಗಿ ಆಹಾರದ ಕೊರತೆ ಮುಖ್ಯಕಾರಣವಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನೆಡೆಸಿ ಮನವಿ ಪತ್ರ ಸಲ್ಲಿಸಲಾಗಿತ್ತು. ರಾಜ್ಯಪಾಲರ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಭೇಟಿ ಮಾಡಿ ಮನವಿಸಲ್ಲಿಸಿ ಗಣಿಗಾರಿಕೆ ನಿಲ್ಲಿಸಲಾಗಿತ್ತು. ಈಗ ಪುನಃ ಅನುಮತಿ ಪಡೆದಿದ್ದೇವೆ ಎಂದು ಜೆಸಿಬಿ ಮೂಲಕ ಮರಗಿಡಗಳನ್ನು ನಾಶಮಾಡಿ ಸಮತಟ್ಟುಮಡುತ್ತಿದ್ದಾರೆ ಈಗಾಗಲೇ ಬರಪರಿಸ್ಥಿತಿ ಉಂಟಾಗಿದೆ ಬೆಳೆ ನಾಶವಾಗಿವೆ. ಆದ್ದರಿಂದ ಗಣಿಗಾರಿಕೆ ನಡೆಯದಂತೆ, ಬೆಟ್ಟಗುಡ್ಡಗಳು ಮರಗಿಡಗಳು ನಾಶವಾಗದಂತೆ ಕೂಡಲೇ ಕ್ರಮತೆದುಕೊಳ್ಳಬೇಕು. ನದಿ ಮೂಲಗಳ ಉಗಮಸ್ಥಾನ, ಪ್ರಾಣಿಪಕ್ಷಿಗಳು, ಕೀಟಗಳು, ಸಸ್ತಾನಿಗಳು, ರೈತರು ಇನ್ನಿತರ ಜೀವನಾಡಿಗಳನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು. ಇದರಿಂದ ಹಾಸನ ಹಾಗೂ ಕೊಡಗು ಜಿಲ್ಲೆಗೆ ಆಗುವ ತೊಂದರೆ ತಪ್ಪಿಸಬೇಕೆಂದು ಜನಸಾಮಾನ್ಯರ ಪರವಾಗಿ ಕಳಕಳಿಯಿಂದ ವಿನಂತಿಸುತೇವೆ. ಇಲ್ಲದಿದಲ್ಲಿ ಸಾವಿರಾರು ಜನ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಹೆಚ್.ಕೆ. ರಮೇಶ್, ಕಾವೇರಿ ಸೇನೆಯ ಕೊಡಗು ಉಪಾಧ್ಯಕ್ಷ ಶಶಿಧರ್, ಪುಟ್ಟಸ್ವಾಮಿಗೌಡ, ಹೆಚ್.ಟಿ. ಗಣೇಶ್, ಟಿ.ಎನ್. ಹರೀಶ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಧರ್ಮಸ್ಥಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಕಟ್ಟಕಡೆಯ ಘಟ್ಟದಲ್ಲಿದೆ: ಮಂಜುಳಾ ಎಚ್ಚರಿಕೆ

Published

on

ಹಾಸನ: ಧರ್ಮಸ್ಥಳ ವಿಚಾರದಲ್ಲಿ ಯಾವ ಷಡ್ಯಂತ್ರದ ಮುಂದೆ ನಿಮ್ಮ ಸರಕಾರವನ್ನ ನಡು ಬಗ್ಗಿಸಿದೆ. ಅಂತರಾಷ್ಟ್ರೀಯ ಪಿತೂರಿ ಜೊತೆ ಇಂದು ನಮ್ಮ ಶ್ರದ್ಧಾ ಕೇಂದ್ರಗಳನ್ನು ಹಾಳು ಮಾಡುವ ದುಸಾಹಸಕ್ಕೆ ಕೈಹಾಕಿದ್ದೀರಿ. ಇದರ ದುಷ್ಪಾರಿಣಾಮವನ್ನು ಎದುರಿಸಲು ಕಡೆಯ ಘಟದಲ್ಲಿ ಇರುವುದಾಗಿ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸುವುದರ ಮೂಲಕ ಮೋದಿಜಿಯವರಿಗೆ ಸವಾಲನ್ನು ಹಾಕಿದೆ. ಎಲ್ಲಾ ದುಷ್ಟರನ್ನು ಬಗ್ಗಿ ಬಡೆಯಲು ದೇಶದಲ್ಲಿ ಆಪರೇಶನ್ ಸಿಂಧೂರು ಮಾಡಲಾಯಿತು. ಪ್ರತಿ ಮನೆಯಲ್ಲಿ ನಮ್ಮ ರಾಷ್ಟ್ರಧ್ವಜ ಹಾರಬೇಕು. ನಮ್ಮ ದೇಶದ ದೇಶಾಭೀಮಾನ ಪ್ರೀತಿ ಎಲ್ಲಾವು ನಮ್ಮ ಮನಸ್ಸಿನಲ್ಲಿ ಇದ್ದರೂ ಕೂಡ ಅದನ್ನ ಪ್ರಕಟಗೊಳಿಸಬೇಕು. ಜಗತ್ತಿನ ಅನೇಕ ದೇಶಗಳು ಭಾರತ ಬೆಳೆಯುವುದ ಸಹಿಸದೇ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಉದ್ದೇಶ ಇಟ್ಟುಕೊಂಡು ನಮ್ ದೇಶ ನಮ್ಮ ಹೆಮ್ಮೆ ಎಂದು ಪ್ರತಿ ಮನೆಯಲ್ಲಿ ತಿರಂಗವನ್ನು ಆಗಸ್ಟ್ 13, 14,15 ಈ ಮೂರು ದಿವಸದಂದು ಹಾರಿಸುವ ಉದ್ದೇಶದಲ್ಲಿ ಚಾಲನೆ ಕೊಡಲಾಗಿದೆ. ಸ್ವಾತಂತ್ರ ದಿನಾಚರಣೆಯಂದು ವೀರ ಯೋಧರಿಗೆ ಸಮರ್ಪಣೆ ಮಾಡಲಾಗುವುದು ಎಂದರು.

ಅಲ್ಪ ಸಂಖ್ಯಾತ ಬುದ್ದಿ ಮಾಂಧ್ಯವಾಗಿರುವ ೧೪ ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಮನೆಗೆ ಭೇಟಿ ಕೊಡಲಾಗಿದ್ದು, ಎಸ್ಪಿ ಜೊತೆ ಮಾತನಾಡಲಾಗಿದೆ. ಅಲ್ಪಸಂಖ್ಯಾತ ಆಯೋಗ, ಮಹಿಳಾ ಆಯೋಗ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಿಗಳಿದ್ದು, ಗಮನಹರಿಸುತ್ತಿಲ್ಲ. ರಾಜ್ಯದಲ್ಲಿ 70ಕ್ಕೂ ಹೆಚ್ಚು ಬಾಣಾಂತಿಯರ ಸಾವಾಗಿದೆ. ಲಕ್ಷ್ಮೀ ಹೆಬ್ಬಾಳಕರ್ ಎಲ್ಲಾ ಕಡೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಇದು ಯಾವುದಕ್ಕೂ ಸಲಹೆ ನೀಡದ ರಾಜ್ಯ ಮಹಿಳಾ ಆಯೋಗ ಧರ್ಮಸ್ಥಳದಲ್ಲಿ ಎಸ್.ಐ.ಟಿ. ಮಾಡಿ ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ. ಇದರಿಂದಲೇ ಸಿಎಂ ಅವರು ಎಸ್.ಐ.ಟಿ. ರಚನೆ ಮಾಡಿದರಂತೆ ಎಂದು ವ್ಯಂಗ್ಯವಾಡಿದರು.

ಮಹಿಳಾ ಆಯೋಗಕ್ಕೆ ಇಷ್ಟೊಂದು ಗೌರವ ಕೊಡುವವರು ರಾಜ್ಯದಲ್ಲಿ ಎಲ್ಲಾ ಸಮಸ್ಯೆಗಳಿಗೆ ನಡುಗುತ್ತಿರುವ ಮಹಿಳೆಯರ ವಿಷಯದಲ್ಲಿ ಏಕೆ ಏನನ್ನು ರೆಕ್ಮಂಡ್ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಶಾಲೆಗೆ ಹೋಗುವ ಹುಡುಗಿ ಬಸ್ ನೂಕಾಟದಲ್ಲಿ ಬಸ್ ಹತ್ತಲು ಸಾಧ್ಯವಾಗದೆ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ. ಹಾವೆರಿಲ್ಲಿ ಜಾರಿ ಬಿದ್ದು ಆಸ್ಪತ್ರೆಯಲ್ಲಿದ್ದಾರೆ. ನಾಗರೀಕರಾಗಿ 21ನೇ ಶತಮಾನದಲ್ಲಿ ಇರುವ ನಾವು ನ್ಯಾಯವಾಗಿ ಬಸ್ಸಿನಲ್ಲಿ ಓಡಾಡದ ಸ್ಥಿತಿ ರಾಜ್ಯದಲ್ಲಿ ಸಿದ್ದರಾಮಯ್ಯ ತಂದಿದ್ದಾರೆ. ವೈಜ್ಞಾನಿಕವಾಗಿ ಮಾಡದಿದ್ದರೇ ಬಿಜೆಪಿ ಮಹಿಳಾ ಮೋರ್ಚಾ ತೀವ್ರವಾಗಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಿದ್ದರಾಮಯ್ಯ ಸರ್ಕಾರ ಪೋಕ್ರಿಗಳಿಗೆ, ಪುಂಡರಿಗೆ ಅಡವಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು. ಹಾಸನದಂತಹ ಊರಿನಲ್ಲಿ ಪಡಾರಿಗಳು ರಸ್ತೆ ಮೇಲೆ ಲಾಂಗ್ ಮಚ್ಚು ಇಟ್ಟುಕೊಂಡು ತಲೆ ಎತ್ತಿ ಓಡಾಡುತ್ತಿದ್ದಾರೆ ಎಂದು ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಹುಡುಗರಲ್ಲಿ ಗಾಂಜಾ ಸಪ್ಲೆ ನಡೆಯುತ್ತಿದೆ. ಪುಂಡರು ಪೋಕ್ರಿ ಕೈಲಿ ಕಾನೂನು ಸುವ್ಯವಸ್ಥೆ ಕೊಡಲಾಗಿದೆ. ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಆದರೇ ಯಾವುದೊ ಹುಡುಗ ಮಾಡಿರುವುದಾಗಿ ಹೇಳಿದ್ದೀರಿ. ಇಂದು ಧರ್ಮಸ್ಥಳವೇ ಬ್ಲಾಸ್ಟ್ ಆಗುತ್ತಾ ಬಂದಿತು. ಅಲ್ಲಿ 16  ಗುಂಡಿಗಳ ತೆಗೆದರೂ ನಿಮಗೆ ಬೇಕಾಗಿರುವ ವಿಷಯ ಸಿಕ್ಕಿಲ್ಲ. ಅನಾಮಹದೇಹಿಯನ್ನು ಈಗಲೆ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡುವ ಧೈರ್ಯ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಯಾವ ಶಕ್ತಿಗಳ ಮುಂದೆ ಮಂಡಿ ಹೂರಿದ್ದೀರಾ ಎಂದು ಮುಖ್ಯಮಂತ್ರಿಗಳನ್ನ ತರಾಟೆಗೆ ತೆಗೆದುಕೊಂಡರು.

ಯಾವ ಷಢ್ಯಂತರ ಮುಂದೆ ನಿಮ್ಮ ಸರಕಾರ ನಡು ಬಗ್ಗಿಸಿದೆ. ಅಂತರಾಷ್ಟ್ರೀಯ ಪಿತೂರಿ ಜೊತೆ ಇಂದು ನಮ್ಮ ಶ್ರದ್ಧಾ ಕೇಂದ್ರಗಳನ್ನು ಹಾಳು ಮಾಡುವ ದುಸಾಹಸಕ್ಕೆ ಕೈಹಾಕಿದ್ದೀರಿ! ಇದರ ದುಷ್ಪಾರಿಣಾಮವನ್ನು ಎದುರಿಸಲು ಕಡೆಯ ಘಟದಲ್ಲಿ ಇರುವುದಾಗಿ ಭವಿಷ್ಯ ನುಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಸಮಾಜದ ಓಲೈಕೆಗೆ ನಿಂತಿರುವ ಕಾಂಗ್ರೆಸ್ ಸರಕಾರವಾಗಿದೆ ಎಂಬುದು ಎಲ್ಲಾರಿಗೂ ಸ್ಪಷ್ಟವಾಗಿದೆ. ಗುತ್ತಿಗೆ ಮಾಡುವುದಕ್ಕೂ ರಿಸರ್ವೆರೇಶನ್, ಅಲ್ಪಸಂಖ್ಯಾತರ ಮಕ್ಕಳು ಮಾತ್ರ ವಿದೇಶಿ ವಿದ್ಯಾಭ್ಯಾಸ ಮಾಡಬೇಕಾ? ಬೇರೆಯವರಿಗೆ ಅವಕಾಶ ಇಲ್ಲವೇ? ಒಂದು ಸಮಾಜದ ಓಲೈಕೆ ಈ ಸರಕಾರದಾಗಿದೆ. ಯಾವ ಅಭಿವೃದ್ಧಿ ಆಗುತ್ತಿಲ್ಲ. ಬಿಜೆಪಿ ಒಂದು ವರ್ಷದಲ್ಲಿ 52 ಬಾರಿ ಪ್ರತಿಭಟಿಸಿ ರಾಜ್ಯ ಸರಕಾರಕ್ಕೆ ಎಚ್ಚರಿಕೆ ಕೊಡಲಾಗಿದೆ ಎಂದು ರಾಜ್ಯ ಸರ್ಕಾರ ಹಗರಣದ ಬಗ್ಗೆ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರದ ಸತ್ಯವನ್ನು ಹೇಳಿದಕ್ಕೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ತಲೆದಂಢವಾಗಿದೆ ಎಂದು ರಾಜಣ್ಣನವರ ಪರ ಬ್ಯಾಟಿಂಗ್ ಮಾಡಿದರು.

ಈ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಬಿಜೆಪಿ ಉಪಾಧ್ಯಕ್ಷ ಆಡುವಳ್ಳಿ ಪ್ರಕಾಶ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ನೇತ್ರಾವತಿ, ಸಚಿನ್ ನಾಗೆನಹಳ್ಳಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಹೆಚ್. ನಾರಾಯಣಗೌಡ, ಯೋಗೇಶ್, ರಾಜಕುಮಾರ್, ಯುವ ಮೋರ್ಚಾ ಉಪಾಧ್ಯಕ್ಷ ಹರ್ಷಿತ್ ಇತರರು ಉಪಸ್ಥಿತರಿದ್ದರು.

 

 

Continue Reading

Hassan

ಅರಸೀಕೆರೆ| ತಾಲೂಕಿನ ಎಸ್. ಡಿಗ್ಗೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ: ಮೋಹನ್‌ ಕುಮಾರಿ

Published

on

ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕು ಎಸ್. ಡಿಗ್ಗೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಸಾಕಷ್ಟು ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆಯುತ್ತಿದ್ದು ಅದನ್ನ ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಂಘದ ನಿರ್ದೇಶಕಿ ಮೋಹನ್ ಕುಮಾರಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ನಮ್ಮ ಮನೆಯಲ್ಲಿ ಕಳೆದ 20 ವರ್ಷಗಳಿಂದಲೂ ಕೂಡ ಹೈನುಗಾರಿಕೆಯನ್ನು ತೊಡಗಿಸಿಕೊಂಡು ಪ್ರತಿನಿತ್ಯ 25 ರಿಂದ 30 ಲೀಟರ್ ಹಾಲು ಹಾಕುತ್ತಾ ಬಂದಿದ್ದೇವೆ ಕಳೆದ ಎರಡು ಬಾರಿ ಚುನಾವಣೆಯಲ್ಲಿ ಹಾಲು ಉತ್ಪಾದಕರ ಸಂಘಕ್ಕೆ ಸ್ಪರ್ಧಿಸಿ ಚುನಾವಣೆಯಲ್ಲಿ ಗೆದ್ದು ಅಲ್ಲಿ ನಡೆಯುತ್ತಿದ್ದಂತಹ ವ್ಯವರವನ್ನ ಪ್ರಶ್ನೆ ಮಾಡಿದ್ದಕ್ಕಾಗಿ ನನ್ನ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.


ಸಂಘದ ಲೆಕ್ಕಪತ್ರಗಳನ್ನು ಮತ್ತು ಉತ್ಪಾದಕರಿಗೆ ಸಿಗಬೇಕಾದಂತಹ ಲಾಭಾಂಶವನ್ನು ಕೇಳಿದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ಮಾಲಾ ಶಿವಕುಮಾರ್ ಕಾರ್ಯದರ್ಶಿ ಮಮತಾ ಹಾಗೂ ರವಿ ಎಂಬುವರು ಹಾಲಿಗೆ ಉಪ್ಪು ಮತ್ತು ಸಕ್ಕರೆ ಕಲಬೆರಿಕೆ ಮಾಡಿದ್ದಾರೆ ಎಂದು ಆರೋಪ ಹೊರೆಸಿದ್ದಾರೆ ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿದರು ಕೂಡ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಗ್ರಾಮದಲ್ಲಿ ನಮ್ಮ ಮಾನಹಾನಿ ಮಾಡಲಾಗಿದೆ ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ನಮ್ಮ ಡೈರಿಯಲ್ಲಿ 70 ರಿಂದ 80 ಜನ ಪ್ರತಿನಿತ್ಯ ಹಾಲು ಹಾಕುತ್ತಾರೆ ಆದರೆ ಯಾರನ್ನು ಕೂಡ ಪರೀಕ್ಷೆ ಮಾಡದೆ ಕೇವಲ ನಮ್ಮ ಕುಟುಂಬವನ್ನ ತೇಜೋದೆ ಮಾಡಲು ಮತ್ತು ಗ್ರಾಮದಲ್ಲಿ ನಮ್ಮ ಮಾನಹಾನಿ ಮಾಡುವ ಉದ್ದೇಶದಿಂದ ಈ ರೀತಿ ಪುನಹ ಮಾಡಿದ್ದಾರೆ ಅಲ್ಲದೆ ಸುಳ್ಳು ಮಾಡುತ್ತಿದ್ದಾರೆ ಇದಕ್ಕೆಲ್ಲ ಪ್ರಮುಖ ಕಾರಣ ಎಂದರೆ ನಾನು ಸಾಮಾನ್ಯ ಸಭೆಯಲ್ಲಿ ಸಂಘದ ಅಲ್ಲಿ ನಡೆಯುತ್ತಿರುವಂತಹ ಪ್ರತಿಯೊಂದು ಅವ್ಯವಹಾರದ ಅನ್ನ ಪ್ರಶ್ನೆ ಮಾಡಿದ್ದಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ದೂರಿದರು.

Continue Reading

Hassan

ನ್ಯಾ. ನಾಗಮೋಹನ್‌ ದಾಸ್‌ ವರದಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಪ.ಜಾತಿ ಮತ್ತು ಪ. ಪಂಗಡದಿಂದ ಪ್ರತಿಭಟನೆ

Published

on

ಹಾಸನ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಒಳಮೀಸಲಾತಿ ವಿಚಾರದಲ್ಲಿ ನಾಗಮೋಹನದಾಸ್ ಅವರು ಸರ್ಕಾರಕ್ಕೆ ನೀಡಿರುವ ವರದಿ ಅವೈಜ್ಞಾನಿಕವಾಗಿದೆ. ವರದಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಬಲಗೈ ಸಂಬಂಧಿತ ಜಾತಿಗಳ ಒಕ್ಕೂಟದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ದಲಿತ ಮುಖಂಡ ಎಚ್.ಕೆ. ಸಂದೇಶ್, ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ವರದಿ ಅವೈಜ್ಞಾನಿಕವಾಗಿದ್ದು, ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ನಾಗಮೋಹನ್ ದಾಸ್ ಅವರು ಹೊಲಯ ಸಮುದಾಯಕ್ಕೆ ಮರಣಶಾಸನ ವರದಿ ನೀಡಿದ್ದಾರೆ. ಹಾಗಾಗಿ ಈ ವರದಿಯನ್ನು ಯಥಾವತ್ತಾಗಿ ಜಾರಿ ಮಾಡದೇ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯ ಕಡಿಮೆ ಇದ್ದು ಎಡಗೈ ಸಮುದಾಯ ಹೆಚ್ಚಿದೆ ಎಂಬುದಾಗಿ ನೀಡಿದ್ದಾರೆ. ಬಲಗೈ ಸಮುದಾಯ ಹೊಲಯ ಎಂಬುದಾಗಿ ಜಾತಿ ನೋಂದಾಯಿಸಿದ್ದೇವೆ. ಅಲ್ಲದೇ, ಬಲಗೈ ಸಮುದಾಯದವರು ಹೊಲಯ ಎಂಬುವುದರ ಜತೆಗೆ ಛಲವಾದಿ, ಆದಿಕರ್ನಾಟಕ, ಆದಿದ್ರಾವಿಡ, ಏಕೆ ಎಂಬುದಾಗಿ ಉಪಜಾತಿ ನೋಂದಾಯಿಸಿದ್ದಾರೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಸಚಿವ ಸಂಪುಟ ಕರೆದು ನಾಗಮೋಹನ್ ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗವು ಸಲ್ಲಿಸಿರುವ ಸಮೀಕ್ಷೆ ವರದಿ ಪುನರ್ ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ದಲಿತ ಸಮುದಾಯ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್, ದಲಿತ ಮುಖಂಡರಾದ ಕುಮಾರ್ ಗೌರವ್, ವಕೀಲ ರಾಜೇಶ್ ಮತ್ತಿತರರು ಇದ್ದರು.

Continue Reading

Trending

error: Content is protected !!