Connect with us

Chamarajanagar

ಗಂಗಾಧರೇಶ್ವರ ಬ್ರಹ್ಮರಥೋತ್ಸವ

Published

on

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಉದ್ಭವಮೂರ್ತಿ ಗಂಗಾಧರೇಶ್ವರಸ್ವಾಮಿಯ ಮಹಾಶಿವರಾತ್ರಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ನಡೆಯಿತು.

ಬೆಳಿಗ್ಗೆಯಿಂದಲೆ ದೇವಾಲಯದಲ್ಲಿ ಉದ್ಭವಮೂರ್ತಿ ಗಂಗಾಧರೇಶ್ವರಸ್ವಾಮಿಗೆ ವಿಶೇಷ ಪೂಜೆ ಮತ್ತು ಅಭಿಷೇಕ,ಅರ್ಚನೆ ಸೇರಿದಂತೆ ದೇವತಾ ಕಾರ್ಯಗಳಗಳು ಜರುಗಿದವು. ಬೆಳಿಗ್ಗೆ 9.30 ರಿಂದ 9.40 ರ ಸಮಯದಲ್ಲಿ ಶುಭ ಮೀನ ಲಗ್ನದಲ್ಲಿ ಮೈಸೂರು ಮಹಾರಾಜರಾದ ಶೀ ಜಯಚಾಮರಾಜ ಒಡೆಯರ್ ಬಹೂದ್ದೂರು ರವರು ಸ್ವಾಮಿಗೆ ಅರ್ಪಿಸಿದ ಸ್ವರ್ಣ ಕೊಳಗಧಾರಣೆ ಮಾಡಲಾಯಿತು.


ನಂತರ ಮಧ್ಯಾಹ್ನ 12 26 ರಿಂದ 12:48 ಗಂಟೆ ಒಳಗೆ ಸಲ್ಲುವ ರ ಒಳಗೆ ಸಲ್ಲುವ ಶುಭ ಮಿಥುನ ಲಘ್ನದ ಶುಭ ನವಾಂಶದ ಶುಭ ಮೂಹೂರ್ತದಲ್ಲಿ ರಥಾರೋಹಣಕ್ಕೆ ದೇವಾಲಯದ ಪ್ರಧಾನ ಅರ್ಚಕರಾದ ರಂಗಣ್ಣ ಪೂಜೆ ಸಲ್ಲಿಸದ ಬಳಿಕ ಶಾಸಕ ಎ ಆರ್ ಕೃಷ್ಣಮೂರ್ತಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಹಣ್ಣು ಜವಾನ ಎಸೆದ ಭಕ್ತರು : ಸೋಲಿಗರ ಆರಾಧ್ಯ ದೈವ ಶ್ರೀ ಉದ್ಭವಮೂರ್ತಿ ಗಂಗಾಧರೇಶ್ವರ ಸ್ವಾಮಿ ರಥೋತ್ಸವಕ್ಕೆ ಸೋಲಿಗರು ಕಾಡು ಜಾತಿ ಹಣ್ಣು ಹೂವುಗಳನ್ನು ಎಸದು ತಮ್ಮ ಭಕ್ತಿಯ ಪರಿಕಾಷ್ಠೆ ಅರ್ಪಿಸಿದರು.
ದಾವಸ ಧಾನ್ಯ ಅರ್ಪಿಸಿದ ಜನರು : ಸಾವಿರಾರು ಭಕ್ತರು ಆಗಮಿಸಿ ಗಂಗಾಧರೇಶ್ವರನಿಗೆ ಬಾಳೆ,ಕಬ್ಬು, ರಾಗಿ,ಜೋಳ,ಬತ್ತ ಸೇರಿದಂತೆ ವಿವಿಧ ರೀತಿ ದವಾಸ ಧಾನ್ಯಗಳನ್ನು ತೇರಿಗೆ ಎಸದು ಉತ್ತಮ ಮಳೆ,ಬೆಳೆ ಬರಲಿ ಎಂದು ದೇವರಲ್ಲಿ ಪಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಜಯಪ್ರಕಾಶ್ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಕಾರ್ಯನಿರ್ವಾಕಾಧಿಕಾರಿ ಮೋಹನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜೆ.ಯೋಗೇಶ್ , ಕೇತಮ್ಮ , ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ , ಕಿನಕಹಳ್ಳಿ ಪ್ರಭುಸ್ವಾಮಿ,ರಾಘವೇಂದ್ರ, ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಯೋಗೇಂದ್ರ ಸಿ. ಡಿಸಿಸಿ ಮಾಧ್ಯಮ ಕಾರ್ಯದರ್ಶಿ ಗೌಡಹಳ್ಳಿ ರಾಜೇಶ್, ಶಾಸಕರ ಆಪ್ತ ಕಾರ್ಯದರ್ಶಿ ಚೇತನ್,ಅಂಬಳೆ ನವೀನ್,ವಿಶ್ವ, ಸಚಿನ್ ಹಾಗೂ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Chamarajanagar

ಕೊಳ್ಳೇಗಾಲ ಸಂಸ್ಥೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚನೆ

Published

on

ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮತ್ತು ಪಿಎಂಎಸ್ಆರ್, ಕೊಳ್ಳೇಗಾಲ ಸಂಸ್ಥೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚನೆ ಮಾಡುವ ಕುರಿತು ಹಾಗೂ ಬಾಲ್ಯ ವಿವಾಹಗಳನ್ನು ತಡೆಯುವ ಸಂಬಂಧ ಸಭೆಯನ್ನು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹೊನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪುಟ್ಟ ಬಸವಯ್ಯ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚನೆ ಮಾಡುವ ಜೊತೆಗೆ ಬಾಲ್ಯ ವಿವಾಹವನ್ನು ಮಾಡದಿರುವ ಬಗ್ಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಮರಳಿ ಸೇರಿಸುವ ಕುರಿತು ಚರ್ಚಿಸಿದರು. ಇದರ ಜೊತೆಗೆ ಮಕ್ಕಳು ಎದರಿಸುತ್ತಿರುವ ಲಿಂಗ ತಾರತಮ್ಯ ಮತ್ತು ಮಕ್ಕಳ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಗ್ರಾಮ ಪಂಚಾಯತಿ ಸದಸ್ಯರಾದ ಕುಮಾರ್, ನೇತ್ರಾವತಿ,ಪಿಡಿಒ ನಿರಂಜನ್ ಕುಮಾರ್,
ಎಂ ಎಲ್ ಎಚ್ ಪಿ ಮಹದೇವ ಶಂಕರ್, ಭೀಮರಾವ್ ರಾಮ್ ಜಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಮೋದ್ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ರವಿಕುಮಾರ್ ,ನಂಜುಂಡಸ್ವಾಮಿ, ಶಿಶು ಅಭಿವೃದ್ಧಿ ಇಲಾಖೆಯ ಸರಸ್ವತಿ ಪಿಎಂಎಸ್ಆರ್ ಸಂಸ್ಥೆಯ ಕಾರ್ಯದರ್ಶಿ ಅರ್ನಾಲ್ಡ್ ಸಂಯೋಜಕ ಸಿದ್ದರಾಜು ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Continue Reading

Chamarajanagar

ಹೊನ್ನೂರು ಗ್ರಾಮದಲ್ಲಿ ರಾತ್ರೋರಾತ್ರಿ ದೇವಾಲಯದ ಹುಂಡಿ ಕಳ್ಳತನ

Published

on

ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮದಲ್ಲಿ ತಡರಾತ್ರಿ ರಾಕಸಮ್ಮ ದೇವಾಲಯದಲ್ಲಿ ಗೋಲುಕ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ತಾಲೂಕಿನ ಹೊನ್ನೂರು ಗ್ರಾಮದ ಶ್ರೀ ರಾಕಸಮ್ಮ ದೇವಾಲಯದಲ್ಲಿ ತಡರಾತ್ರಿ ಕಳ್ಳತನ ನಡೆದಿದೆ. ದೇವಾಲಯ ಮುಂಬಾಗಿಲನ್ನು ಒಡೆದು ಕಳ್ಳರು ದೇವಾಲಯದ ಒಳನುಗ್ಗಿದ್ದು, ದೇವರ ಹುಂಡಿಯನ್ನೇ ಹೊತ್ತೊಯ್ದಿದ್ದಾರೆ.

ಸೋಮವಾರ ಮುಂಜಾನೆ ದೇವರ ದರ್ಶನಕ್ಕೆ ಬಂದ ಭಕ್ತಾದಿಗಳು ಕಳ್ಳತನ ಆಗಿರುವುದನ್ನು ಗಮನಿಸಿ ಗ್ರಾಮಸ್ಥರಿಗೆ ಕಳ್ಳತನ ನಡೆದಿರುವ ಬಗ್ಗೆ ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ 112 ಹೊಯ್ಸಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ.
ಯಳಂದೂರು ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಈ ಬಗ್ಗೆ ದೇವಾಲಯದ ಹುಂಡಿಯನ್ನು ಗ್ರಾಮದ ಹೊರ ವಲಯದಲ್ಲಿ ಹಣದೋಚಿ ಬಿಸಾಕಿ ಹೋಗಿರುವ ಘಟನೆ ನಡೆದಿರುವ ಬಗ್ಗೆ ಮಾಹಿತಿ ನೀಡಿ ಗ್ರಾಮಸ್ಥರು ಠಾಣೆಗೆ ಬಂದು ದೂರು ನೀಡುವಂತೆ ಸೂಚನೆ ನೀಡಿದು ಗ್ರಾಮಸ್ಥರು ಠಾಣೆಗೆ ಬಂದು ದೂರು ನೀಡಿದ ಹಿನ್ನೆಲೆಯಲ್ಲಿ ಪಿಎಸ್ಐ ಹನುಮಂತ ಉಪ್ಪಾರ ರವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Chamarajanagar

ಇಂದು ಸುರಿದ ಮಳೆಯಿಂದ ಪಟ್ಟಣದಲ್ಲಿ ನಡೆಯುವ ಭಾನುವಾರದ ಸಂತೆಗೆ ತೊಂದರೆ

Published

on

ಯಳಂದೂರು ಜುಲೈ 14

ಪಟ್ಟಣ ಹಾಗೂ ತಾಲೂಕಿನಾದ್ಯಂತ ಭಾನುವಾರ ಉತ್ತಮವಾಗಿ ಮಳೆಯಾಗಿ ಪಟ್ಟಣದಲ್ಲಿ ನಡೆಯುವ ಭಾನುವಾರದ ಸಂತೆಗೆ ತೊಂದರೆ ಉಂಟು ಮಾಡಿತು.

ಭಾನುವಾರ ಬೆಳಿಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಪಟ್ಟಣದಲ್ಲಿ ಇತ್ತು, ಸುಮಾರು ಐದು ಬಾರಿ ಮಳೆ ಬಿಟ್ಟು ಬಿಟ್ಟು ಬಂದು ಸಾರ್ವಜನಿಕರು ಮತ್ತು ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ತೊಂದರೆಯನ್ನು ಉಂಟು ಮಾಡಿತು.

ಮಧ್ಯಾಹ್ನದ ವೇಳೆಗೆ ಮಳೆ ಹೆಚ್ಚಾಗಿ ಓಡಾಡಲು ಸಾರ್ವಜನಿಕರಿಗೆ ತೊಂದರೆಯಾಯಿತು. ಜೊತೆಗೆ ವ್ಯಾಪಾರಿಗಳು ತಾವು ಮಾರಾಟ ಮಾಡಲು ತಂದಿರುವ ತರಕಾರಿಗಳು ಮತ್ತು ಇತರ ಪದಾರ್ಥಗಳನ್ನು ಮುಚ್ಚಲು ಟಾರ್ಪಲ್ ಗಳ ಮೊರೆ ಹೋಗಿದ್ದು ಕಂಡು ಬಂತು. ಪಟ್ಟಣವಲ್ಲದೆ ಐತಿಹಾಸಿಕ ಪ್ರಸಿದ್ಧ ಸ್ಥಳ ಬಿಳಿಗಿರಂಗನ ಬೆಟ್ಟ, ಗುಂಬಳ್ಳಿ ,ಯರಗಂಬಳ್ಳಿ ಯರಿಯೂರು ಗ್ರಾಮಗಳು ಸೇರಿದಂತೆ ತಾಲೂಕಿನ ಅಕ್ಕಪಕ್ಕ ಇರುವ ಗ್ರಾಮಗಳಲ್ಲೂ ಸಹ ಉತ್ತಮವಾಗಿ ಮಳೆಯಾಯಿತು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ದ್ವಿಚಕ್ರ ವಾಹನ ಮತ್ತು ಇತರ ವಾಹನಗಳು ಓಡಲು ಸವಾರರು ಪರದಾಡಿದರು. ಕೆಲವು ಕಡೆ ರಸ್ತೆಯಲ್ಲೇ ಗುಂಡಿ ಬಿದ್ದು ಗೊತ್ತಾಗದೆ ಗುಂಡಿಯಲ್ಲೇ ದ್ವಿಚಕ್ರ ವಾಹನವನ್ನು ಓಡಿಸಿದರು.

Continue Reading

Trending

error: Content is protected !!