Chikmagalur
ವಿನಾಯಕ ಗೆಳೆಯರ ಬಳಗದಿಂದ ಪ್ರತಿಷ್ಟಾಪಿಸಿದ್ದ ಗಣಪತಿ ವಿಸರ್ಜನೆ –
ಚಿಕ್ಕಮಗಳೂರು : ಭಾವೈಕ್ಯತೆಯ ಸಂದೇಶವಾಗಿ ಚಿಕ್ಕದೇವನೂರು ಗ್ರಾಮದಲ್ಲಿ ವಿನಾಯಕ ಗೆಳೆಯರ ಬಳಗದಿಂದ ಪ್ರತಿಷ್ಟಾಪಿಸಿದ್ದ ಗಣಪತಿ ವಿಸರ್ಜನೆ ವೇಳೆ ಮುಸ್ಲಿಂ ಬಾಂಧವರು ಗಣೇಶ ಮೂರ್ತಿ ಮಸೀದಿ ಬಳಿ ಬರುತ್ತಿದ್ದಂತೆ ಬೃಹತ್ ಹೂಮಾಲೆ ಹಾಕಿ, ತಾವುಗಳೂ ಕೂಡಾ ಮೆರವಣಿಗೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ನೆರವೇರಿಸಿದರು ಈ ಸಂದರ್ಭದಲ್ಲಿ ಮುಸ್ಲಿಂ ಕಮಿಟಿಯ ಮುಖಂಡ, ಗೌಸ್ ಖಾನ್, ಅತಾವುಲ್ಲ, ಇಮ್ತಿಯಾಜ್ ಸಾಬ್, ಕಾಂಗ್ರೆಸ್ ಮೈನಾರಿಟಿ ಕಮಿಟಿ ಹೋಬಳಿ ಅಧ್ಯಕ್ಷ ನೂರಲ್ಲಾ ಖಾನ್, ಅಪ್ಸರ ಪಾಶ, ಪಟೇಲ್ ಬಸವರಾಜಪ್ಪ, ಗ್ರಾಮ ಪಂಚಾಯತಿ ಸದಸ್ಯ ಸಿ.ಪಿ ಅಶೋಕ್, ರವಿ, ಸಿ.ಪಿ ಅಶೋಕ್, ರಮೇಶ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

Chikmagalur
ಮನರೇಗಾ ಕಾಯ್ದೆ ಹೆಸರು ಬದಲಾವಣೆ ವಿರೋಧಿಸಿ ಪ್ರತಿಭಟನೆ
ಚಿಕ್ಕಮಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯ ಹೆಸರು ಬದಲಾವಣೆ ವಿರೋಧಿಸಿ ನಗರದ ಗಾಂಧಿ ಪ್ರತಿಮೆ ಎದುರು ಶನಿವಾರ ಜಿಲ್ಲಾ ಕಾಂಗ್ರೆಸ್ ಕಾ ರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವೆ ಮೋಟಮ್ಮ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಒಳಸಂಚು ನಡೆ ಸಿ ಕಾಂಗ್ರೆಸ್ ಆಡಳಿತದ ಕಾಯ್ದೆಗೆ ಮರುನಾಮಕರಣ ಮಾಡುತ್ತಿದೆ. ಕಾಯ್ದೆ ಹೆಸರು ಬದಲಾವಣೆ ಸಂಬಂಧ ಕಾಂಗ್ರೆಸ್ ಪ್ರಶ್ನೆಗೆ ಬಿಜೆಪಿ ನಾಯಕರಲ್ಲಿ ಸಮರ್ಪಕವಾದ ಉತ್ತರವೇ ಇಲ್ಲದಂತಾಗಿದೆ ಎಂದು ದೂರಿದರು.

ಮನರೇಗಾ ಕಾಯ್ದೆ ಬಡವರ ಸ್ವಾಭಿಮಾನ ಹೆಚ್ಚಳ, ಕೆಲಸ ಇಲ್ಲದವರಿಗೆ ಉದ್ಯೋಗ ನೀಡಿ ಕೂಲಿ ಕಾ ರ್ಮಿಕರ ಆಶಾದಾಯಕವಾಗಿತ್ತು. ಬಿಜೆಪಿಯಿಂದಲೇ ದೇಶದ ಅಭಿವೃದ್ದಿ ಎಂದು ಸುಳ್ಳು ಮಾತುಗಳಿಂದ ಜನ ತೆಯ ದಿಕ್ಕನ್ನು ತಪ್ಪಿಸುವ ಕೆಲಸ ಭಾಜಪ ಮಾಡುತ್ತಿದೆ. ಈ ಬಗ್ಗೆ ಸರಿಯಾದ ಮಾಹಿತಿ ನೀಡಲು ಗ್ರಾಮೀಣ ಮಟ್ಟದಿಂದ ಜಾಗೃತಿ ಮೂಡಿಸಬೇಕು ಎಂದರು.
ಗಾಂಧಿಜೀ ತತ್ವವನ್ನು ಧಿಕ್ಕರಿಸಿ, ತಾತ್ಸರ ಮಾಡುವ ಬಿಜೆಪಿಗರು ಎಲ್ಲವು ತಿದ್ದುಪಡಿ ಮಾಡಲು ಹೊರಟಿ ದ್ದಾರೆ. ಇನ್ನೊಂದೆಡೆ ಪಂಚ ಗ್ಯಾರಂಟಿ ಯೋಜನೆ ಸರಿಯಲ್ಲವೆಂದು ಹೇಳಿಕೆ ನೀಡಿದೆ. ಆದರೆ ದೇಶದ ಬಹು ತೇಕ ರಾಜ್ಯಗಳಲ್ಲಿ ಕರ್ನಾಟಕ ಪಂಚ ಗ್ಯಾರಂಟಿ ಯೋಜನೆ ಬಳಸಿಕೊಂಡು, ಮೋಸದಿಂದ ಚುನಾವಣೆ ಗೆಲ್ಲುತ್ತಿದೆ ಎಂದು ಆರೋಪಿಸಿದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲಘಟ್ಟದಲ್ಲಿ ಜಾರಿಗೊಂಡ ಮನರೇಗಾ ಕಾಯ್ದೆ ಗ್ರಾಮೀಣ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ರೂಪಿ ಸಿರುವ ಯೋಜನೆ. ಬಡವರು, ದೀನದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸ್ವಾಭಿಮಾನದ ಬದುಕ ನ್ನು ರೂಪಿಸಲು ಗಾಂಧೀಜಿ ಹೆಸರಿನಲ್ಲಿ ಸ್ಥಾಪಿಸಿದ್ದು ಇದನ್ನು ಬದಲಿಸಲು ಹೊರಟಿರುವುದು ಸರಿಯಲ್ಲ ಎಂದರು.
ಮನರೇಗಾ ಕಾಯ್ದೆಯಲ್ಲಿ ದೇಶದ ಸುಮಾರು ೩೮ ಕೋಟಿ ಜನಸಂಖ್ಯೆ ಅರ್ಜಿ ಕಾರ್ಡ್ ಹೊಂದಿದ್ದು ಕೋಟ್ಯಾಂತರ ಜನ ಈ ಕಾಯ್ದೆಯಿಂದ ಉದ್ಯೋಗ ಪಡೆದುಕೊಂಡಿದ್ದಾರೆ. ಹಳ್ಳಿ ಜನರ ಬದುಕಾಗಿದ್ಧ ಮನ ರೇಗ ಯೋಜನೆ ಬದಲಿಸುವ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣರಿಗೆ ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಆರೋಪಿಸಿದರು.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿಪಡಿಸುವ ಉದ್ದೇಶದಿಂದ ತಂದಿದ್ದ ಮನರೇಗಾ ಕಾಯ್ದೆಯ ಬದಲಿಗೆ ಹೊಸ ಮಸೂದೆ ಜಾರಿಗೊಳಿಸಲು ಕೇಂದ್ರ ಬಿಜೆ ಪಿ ಸರ್ಕಾರ ಮುಂದಾಗಿದ್ದು ದುರಂತ. ಈ ಮಸೂದೆಯು ಮನರೇಗಾ ಕಾಯ್ದೆ ಮತ್ತು ಅದರಲ್ಲಿದ್ದ ಉದ್ಯೋ ಗದ ಶಾಸನಬದ್ಧ ಖಾತ್ರಿಯನ್ನು ತೆಗೆದು ಹಾಕುವುದು ಹಾಗೂ ಅದರ ಬದಲಿಗೆ ಗ್ರಾಮೀಣ ಬಡ ಕುಟುಂಬ ಗಳಿಗೆ ಉದ್ಯೋಗದ ಭರವಸೆ ಇಲ್ಲವಾಗಿಸುತ್ತದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ ಕೇಂದ್ರ ಸರ್ಕಾರ ಸದಾ ಉಳ್ಳವರ ಪರ ವೇ ಕೆಲಸ ಮಾಡುತ್ತದೆ. ಈ ಹಾದಿಯಲ್ಲೇ ಇದೀಗ ಮನರೇಗಾ ಯೋಜನೆಯನ್ನು ಬದಲಿಸುತ್ತಿದೆ. ವಿಬಿ- ಜಿ ರಾಮ್ ಜಿ ಎಂದು ಹೆಸರು ಬದಲಿಸಿ ಅದರಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಗಳು ಮನರೇಗಾ ಕೂಲಿಕಾರರ ಹೊಟ್ಟೆ ಮೇಲೆ ಬರೆ ಎಳೆದಂತಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಕೈಬಿಟ್ಟು ಹೊಸ ಕಾಯ್ದೆ ಜಾರಿಗೊಳಿಸಿರು ವುದು ಸರಿಯಲ್ಲ. ಶ್ರೀಮಂತರಿಗೆ ಅನುಕೂಲವಾಗುವಂಥ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿ ರುವುದು ಕಾರ್ಮಿಕರು, ಕೃಷಿ ಕಾರ್ಮಿಕರು ಹಾಗೂ ರೈತರ ಜೀವನಕ್ಕೆ ಮಾರಕವಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಶಾಸಕರಾದ ಹೆಚ್.ಡಿ.ತಮ್ಮಯ್ಯ, ಜಿ.ಹೆಚ್.ಶ್ರೀನಿವಾಸ್, ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್, ಕಾರ್ಯದರ್ಶಿ ಡಾ.ಡಿ.ಎಲ್.ವಿಜಯ್ ಕುಮಾರ್, ರೇಖಾಹುಲಿಯಪ್ಪಗೌಡ, ಸಿಡಿಎ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಎಂ.ಮಲ್ಲೇಶ್, ನಗರಸಭೆ ನಾಮಿನಿ ಸದಸ್ಯರಾದ ಕೀರ್ತಿಶೇಟ್, ಪ್ರಕಾಶ್ ರೈ, ಜಿ.ಪಂ. ಮಾಜಿ ಸದಸ್ಯ ಕೆ.ವಿ. ಮಂಜುನಾಥ್, ಮುಖಂಡರುಗಳಾದ ತನೋಜ್ ನಾಯ್ಡು, ಹಿರೇಮಗಳೂರು ರಾಮಚಂದ್ರ, ಲಕ್ಷ್ಮಣ್, ಲಾಕೇಶ್ ಮತ್ತಿತರರು ಹಾಜರಿದ್ದರು.
Chikmagalur
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಅಭಿವೃದ್ಧಿ ಸಾಧನೆ: ಹೆಚ್.ಡಿ.ತಮ್ಮಯ್ಯ
ಚಿಕ್ಕಮಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಆಸರೆಯಾಗುವುದರ ಜೊತೆಗೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳೂ ಸಹ ಅಡೆತಡೆಯಿಲ್ಲದೆ ನಡೆಯುತ್ತಿವೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಲ್ಲಂಪುರ ಹಾಗೂ ಬೀಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಮತ್ತು ಯುವನಿಧಿ ಯೋಜನೆಗಳಿಗಾಗಿ ಸರ್ಕಾರ ವರ್ಷಕ್ಕೆ ಸುಮಾರು 57,000 ಕೋಟಿ ರೂಪಾಯಿ ವ್ಯಯಿಸುತ್ತಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಜನಕಲ್ಯಾಣಕ್ಕೆ ಬಳಸುತ್ತಿದ್ದರೂ ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆಯಾಗಿಲ್ಲ. ಇಂದಿನ ಈ ರಸ್ತೆ ಅಭಿವೃದ್ಧಿ ಕಾಮಗಾರಿಗಳೇ ಅದಕ್ಕೆ ಸಾಕ್ಷಿ ಎಂದು ಪ್ರತಿಪಾದಿಸಿದರು.
ಉಳಿಯಾರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಾಗಿ 60 ಲಕ್ಷ ರೂ.ಗಳನ್ನು ಮೀಸಲಿಟ್ಟಿರುವುದಾಗಿ ತಿಳಿಸಿದರದಲ್ಲದೆ, ಕರ್ಕಿಪೇಟೆ, ಬಾಳೆಹಳ್ಳಿ ಮತ್ತು ಐನಳ್ಳಿ ಗ್ರಾಮಗಳ ಆಂತರಿಕ ರಸ್ತೆಗಳ ಸುಧಾರಣೆಗಾಗಿ ತಲಾ 25 ಲಕ್ಷ ರೂ.ಗಳ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು.
ಬಸವಣ್ಣನವರ ತತ್ವಗಳನ್ನು ನೆನಪಿಸಿದ ಶಾಸಕರು, ‘ನಾನು’ ಎನ್ನುವ ಅಹಂಕಾರ ಬಿಟ್ಟು ‘ನಮ್ಮದು’ ಎಂಬ ಭಾವನೆಯಿಂದ ಕೆಲಸ ಮಾಡಿದಾಗ ಮಾತ್ರ ಗ್ರಾಮದ ಉದ್ಧಾರ ಸಾಧ್ಯ. ದೇವಸ್ಥಾನ, ಊರಿನ ಅಭಿವೃದ್ಧಿ ಕೆಲಸಗಳಲ್ಲಿ ಸರ್ಕಾರ ನೀಡುವ ಹಣಕ್ಕಿಂತಲೂ ಗ್ರಾಮಸ್ಥರು ಮತ್ತು ರೈತರು ತೋರುವ ಶ್ರಮ ಹಾಗೂ ಭಕ್ತಿ ದೊಡ್ಡದು ಎಂದು ಹೇಳಿದರಲ್ಲದೆ, ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಇದೇ ವೇಳೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಪಿ.ಮಂಜೇಗೌಡ ಮಾತನಾಡಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶಾಸಕ ಎಚ್.ಡಿ.ತಮ್ಮಯ್ಯ ಅವರು ಕ್ಷೇತ್ರದ ನಿಜವಾದ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ಹೇಳಿದರು.
ನಮ್ಮ ಶಾಸಕರು ಸದಾ ಜನಸಾಮಾನ್ಯರ ಸಂಪರ್ಕಕ್ಕೆ ಸಿಗುವ ಅಪರೂಪದ ವ್ಯಕ್ತಿ. ಬಸವಣ್ಣನವರ ತತ್ವದಂತೆ ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡುವ ತಮ್ಮಯ್ಯ ಅವರು ಕ್ಷೇತ್ರದ ಅಭಿವೃದ್ಧಿಯಲ್ಲಿ ಹೊಸ ಪರ್ವ ಆರಂಭಿಸಿದ್ದಾರೆ ಎಂದರು.

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸುವಲ್ಲಿ ಶಾಸಕರ ಪಾತ್ರ ದೊಡ್ಡದಿದೆ. ಈ ಭಾಗದ ಹಳ್ಳಿಗಳನ್ನು ಜಿಲ್ಲೆಯಲ್ಲೇ ಮಾದರಿ ಗ್ರಾಮಗಳನ್ನಾಗಿ ಮಾಡುವ ಸಂಕಲ್ಪ ಮಾಡಲಾಗಿದೆ. ಈ ಅಭಿವೃದ್ಧಿ ಕೆಲಸಗಳನ್ನು ಗಮನಿಸಿರುವ ಕ್ಷೇತ್ರದ ಮತದಾರರು, ಮುಂಬರುವ 2028ರ ಚುನಾವಣೆಯಲ್ಲಿ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ಈಗಲೇ ಪಣತೊಟ್ಟಿದ್ದಾರೆ ಎಂದು ತಿಳಿಸಿದರು.
ಬಾಳೆಹಳ್ಳಿಯಿಂದ ಕರಡಿಹಳ್ಳಿ ಕಾವಲ್ ಡಾಂಬರ್ ರಸ್ತೆ ನಿರ್ಮಾಣಕ್ಕೆ, ಬಾಳೆಹಳ್ಳಿ ಮುಖ್ಯರಸ್ತೆ ಡಾಂಬರೀಕರಣಕ್ಕೆ, ಐನಳ್ಳಿ ಬನದ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿಗೆ ಹಾಗೂ ಕರ್ಕಿಪೇಟೆ ಗ್ರಾಮದ ಮುಖ್ಯರಸ್ತೆ ಡಾಂಬರೀಕರಣಕ್ಕೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.

ನಗರಸಭಾ ಸದಸ್ಯರಾದ ಮಂಜುನಾಥ್, ಮುಖಂಡರಾದ ಜಯರಾಜ್ ಅರಸು, ಚಂದ್ರಣ್ಣ, ಓಂಕಾರಣ್ಣ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿದ್ದರು.
Chikmagalur
ವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್‌ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
ವರದಿ : ಎಂ.ಪಿ.ಪ್ರದೀಪ್ ಹೆಬ್ಬಾರ್, ಜಯಪುರ
ಜಯಪುರ : ಸದಾ ಸಮಾಜಕ್ಕೆ ದೇಶದ ಒಳಿತಿನ ಮಾರ್ಗದರ್ಶನ ಮಾಡುವ ಬಸರೀಕಟ್ಟೆಯ ದಂಪತಿಗಳಾದ ಡಾ.ಅರುಣ್ ಕುಮಾರ್ ಮತ್ತು ಕ್ಷಮಾ ಅರುಣ್ ರವರು ತಮ್ಮ ಒಬ್ಬನೇ ಮಗ ಡಾ. ಸಾತ್ವಿಕ್ ರವರನ್ನು ವೈದ್ಯರಾಗಿ ಓದಿಸಿ ತಾಯಿ ಭಾರತಿಯ ಅತ್ಯುನ್ನತ ಸೇವೆಯಾದ ಸೇನೆಯಲ್ಲಿ ಸೇವೆ ಸಲ್ಲಿಸಲು ಕಳುಹಿಸಿರುವ ನಿರ್ಧಾರ ದೇಶವಾಸಿಗಳಿಗೆ ಪ್ರೇರಣಾದಾಯಕವಾಗಿದೆ . ನಮ್ಮ ಊರಿಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಅವರ ಈ ಹೃದಯ ವೈಶಾಲ್ಯಕ್ಕೆ ಹಾಗೂ ರಾಷ್ಟ್ರಭಕ್ತಿಗೆ ಹೃದಯಪೂರ್ವಕ ನಮನಗಳು ಎಂದು ಕೇಂದ್ರ ಸರ್ಕಾರದ ಜಿಲ್ಲಾ ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ ಹೇಳಿದರು .

ವೈದ್ಯಕೀಯ ವಿಭಾಗದಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಲು ಆಯ್ಕೆಯಾದ ಡಾ.ಸಾತ್ವಿಕ್ ರವರನ್ನು ಬಸರೀಕಟ್ಟೆ ಗ್ರಾಮಸ್ಥರ ಪರವಾಗಿ ಅಭಿನಂದಿಸಿದ ಸಂದರ್ಭದಲ್ಲಿ ಮಾತನಾಡುತ್ತಾ ವೈದ್ಯರಾಗಿ ಜೀವನದಲ್ಲಿ ಅನೇಕ ಐಷಾರಾಮಿ ಅವಕಾಶಗಳಿದ್ದರು ಕೂಡ ನಮ್ಮ ಊರಿನ ಹೆಮ್ಮೆಯ ಯುವ ವೈದ್ಯ, ಸೇನೆಯನ್ನು ಆಯ್ಕೆ ಮಾಡಿಕೊಂಡಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಸೇನೆಯಲ್ಲಿ ವೈದ್ಯಕೀಯ ವಿಭಾಗದಲ್ಲಿ ಕ್ಯಾಪ್ಟನ್ ಆಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಸ್ವಗ್ರಾಮ ಬಸರಿಕಟ್ಟೆಗೆ ಬಂದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್ ರವರನ್ನು ಗ್ರಾಮಸ್ಥರು ಅವರ ಮನೆಗೆ ತೆರಳಿ ಗೌರವಿಸಿದರು.

ಈ ಸಂದರ್ಭದಲ್ಲಿ ಡಾ ಸಾತ್ವಿಕ್ ಅರುಣ್ಅವರ ತಂಗಿ ಸಮ್ಯಕ, ಗ್ರಾಮಸ್ಥರಾದ ಸುಧೀಂದ್ರ, ಶೇಷಗಿರಿ, ಚೇತನ್, ಶರಣ್ ಡಿ ಕುನ಼, ಸಮರ್ಥ ರಾಯ್ಕರ್, ಅಶ್ವಿನಿ, ರೇಖಾ, ಅನ್ನಲಕ್ಷ್ಮಿ, ಉಮೇಶ್ ಶೆಟ್ಟಿ, ಕಂದಸ್ವಾಮಿ, ಪುಟ್ಟ, ರಾಕೇಶ್, ಪ್ರಮೋದ್, ಶರತ್, ಪ್ರಕಾಶ್ ಶೆಟ್ಟಿ, ರವಿ ಆಲ್ವಿನ್, ಮನೋಜ್, ಆದಿತ್ಯ ಹಾಗೂ ಗ್ರಾಮಸ್ಥರು ಇದ್ದರು.
-
Chikmagalur9 hours agoವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್‌ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
-
Hassan5 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Special16 hours agoಪಿ ಎಂ ಆವಾಸ್ ಯೋಜನೆಯಿಂದ ಮನೆಕಟ್ಟಲು ಸಬ್ಸಿಡಿ!
-
Hassan7 hours agoರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
-
Chamarajanagar12 hours agoಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ: ಹನೂರಿನ ಶಾಲೆಗಳಲ್ಲಿ ಅರಿವು ಮೂಡಿಸಿದ ರೈತ ದಂಪತಿ
-
Kodagu5 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
State9 hours agoಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
-
Hassan6 hours agoಮನೆಗಳ್ಳನ ಬಂಧನ : 140 ಗ್ರಾಂ.ಚಿನ್ನ ವಶ
